Friday 30 September 2016

ಕಾರು ಮಾಡಿಫಿಕೇಷನ್ ಮಾಡಿಸಿಕೊಳ್ಳುವಿರಾ?

SHARE
ವಾಹನ ಕಂಪನಿಗಳು ಒಂದು ಕಾರು ಮಾಡೆಲಿನ ವಿವಿಧ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುತ್ತವೆ. ಆ ಆವೃತ್ತಿಗಳಲ್ಲಿ ಎಂಟ್ರಿ ಲೆವೆಲ್ ಮತ್ತು ಹೈಎಂಡ್ ವರ್ಷನ್‍ಗಳಿರುತ್ತವೆ. ಹೈಎಂಡ್ ಆವೃತ್ತಿಯಲ್ಲಿರುವ ವಿವಿಧ ಫೀಚರುಗಳು ಎಂಟ್ರಿ ಲೆವೆಲ್ ಕಾರಿನಲ್ಲಿ ಇರುವುದೇ ಇಲ್ಲ. ಉದಾಹರಣೆಗೆ
ಸ್ವಿಫ್ಟ್ ವಿಡಿಐನಲ್ಲಿ ಸೆಂಟ್ರಲ್ ಲಾಕಿಂಗ್ ಇದೆ. ಆದರೆ ಎಲ್‍ಎಕ್ಸ್‍ಐ ಮತ್ತು ಎಲ್‍ಡಿಐ ಆವೃತ್ತಿಗಳಲ್ಲಿ ಈ ಫೀಚರ್ ಇಲ್ಲ. ಆಲ್ಟೊ 800 ಎಲ್‍ಎಕ್ಸ್ ಕಾರಿನಲ್ಲಿ ಪವರ್ ಸ್ಟಿಯರಿಂಗ್, ಲೊ ಲೆವೆಲ್ ಫ್ಯೂಯೆಲ್ ವಾರ್ನಿಂಗ್, ಏರ್‍ಬ್ಯಾಗ್ ಇಲ್ಲ. ಆದರೆ ಈ ಫೀಚರುಗಳು ಆಲ್ಟೊ 800 ಎಲ್‍ಎಕ್ಸ್‍ಐನಲ್ಲಿವೆ. ಟಾಟಾ ಸಫಾರಿ ಇಎಕ್ಸ್ ಡಿಕೊರ್‍ನಲ್ಲಿ ಇಂಟಿಗ್ರೇಟೆಡ್ ಮ್ಯೂಸಿಕ್ ಸಿಸ್ಟಮ್ ಇದೆ. ಆದರೆ ಎಲ್‍ಎಕ್ಸ್ ಡಿಕೊರ್‍ನಲ್ಲಿ ಈ ಫೀಚರ್ ಇಲ್ಲ. ಇಂಡಿಕಾ ವಿಸ್ಟಾ ಡಿ90 ವಿಎಕ್ಸ್ ಕಾರಿನಲ್ಲಿ ಟಚ್‍ಸ್ಕ್ರೀನ್ ಡಿಸ್‍ಪ್ಲೇ ಮತ್ತು ಜಿಪಿಎಸ್ ನ್ಯಾವಿಗೇಷನ್ ಇಲ್ಲ. ಆದರೆ ಈ ಫೀಚರುಗಳು ವಿಸ್ಟಾ ಡಿ90 ಝಡ್‍ಎಕ್ಸ್ ಪ್ಲಸ್ ಆವೃತ್ತಿಯಲ್ಲಿ ಇವೆ. ನಿಸ್ಸಾನ್ ಸನ್ನಿ ಎಕ್ಸ್‍ಇ ಆವೃತ್ತಿಯಲ್ಲಿ ಚೈಲ್ಡ್ ಸೇಫ್ಟಿ ಲಾಕ್, ರಿಯರ್ ಡಿಫಾಗರ್ ಇತ್ಯಾದಿ ಫೀಚರುಗಳು ಇಲ್ಲ. ಸನ್ನಿ ಎಕ್ಸ್‍ಎಲ್ ಡೀಸೆಲ್ ಆವೃತ್ತಿಯಲ್ಲಿ ಈ ಎಲ್ಲಾ ಫೀಚರುಗಳಿವೆ.

ಹೀಗೆ ಎಂಟ್ರಿ ಲೆವೆಲ್ ಮತ್ತು ಹೈಎಂಡ್ ಆವೃತ್ತಿಗಳ ಫೀಚರುಗಳು, ವಿಶೇಷತೆಗಳ ನಡುವೆ ಹಲವು ವ್ಯತ್ಯಾಸಗಳು ಇರುತ್ತವೆ. ಕಾರು ಖರೀದಿಸುವಾಗ ಹಣಕಾಸಿನ ಅಭಾವವೋ.. ಅಥವಾ ಇನ್ನಿತರ ಕಾರಣಗಳಿಂದ ಕಡಿಮೆ ಫೀಚರ್‍ಗಳಿರುವ ಕಾರನ್ನು ನೀವು ಖರೀದಿಸಿರಬಹುದು. ಆದರೆ ದಿನಕಳೆದಂತೆ ಬೇಕೆನಿಸಿದರೆ ಹೈಎಂಡ್ ಆವೃತ್ತಿಗಳಲ್ಲಿರುವ ಸೆನ್ಸಾರ್, ಜಿಪಿಎಸ್, ಅಲಾಯ್ ಇತ್ಯಾದಿ ಫೀಚರುಗಳನ್ನು ಅಳವಡಿಸಿಕೊಳ್ಳಬಹುದು.

ಅಲಾಯ್ ವೀಲ್
ಚಕ್ರಗಳಿಗೆ ಅಲಾಯ್ ವೀಲ್ ಅಳವಡಿಸಿದರೆ ಕಾರಿನ ಅಂದ ಹೆಚ್ಚಾಗುತ್ತದೆ. ಇವು ಹಗುರವಾಗಿರುವುದರಿಂದ ಕಾರಿನ ಹ್ಯಾಂಡ್ಲಿಂಗ್, ಪರ್ಫಾಮೆನ್ಸ್ ಸಹ ಹೆಚ್ಚಾಗುತ್ತದೆ. ರಿಮ್ ಬಾಳಿಕೆ ಹೆಚ್ಚಿಸುತ್ತದೆ ಮತ್ತು ರಿಮ್ ಬೆಂಡ್ ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒಂದು ಸೆಟ್ ಅಲಾಯ್ ವೀಲ್‍ಗೆ ಸುಮಾರು 15-20 ಸಾವಿರ ರೂಪಾಯಿ ವಿನಿಯೋಗಿಸಬೇಕಾಗಬಹುದು. ಇದಕ್ಕಿಂತ ದುಬಾರಿ ಅಲಾಯ್‍ಗಳೂ ದೊರಕುತ್ತವೆ.

ರಿವರ್ಸ್ ಪಾರ್ಕಿಂಗ್ ಸೆನ್ಸಾರ್
ಕಾರ್ ಪಾರ್ಕಿಂಗ್ ಮಾಡುವಾಗ ಕಾರಿನ ಹಿಂಬದಿಯ ಪ್ರದೇಶಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ದೊಡ್ಡ ಕಾರುಗಳಲ್ಲಿ ಈ ಸಮಸ್ಯೆ ಹೆಚ್ಚು. ಪಾರ್ಕಿಂಗ್ ಮಾಡುವಾಗ ಹಿಂಬದಿಯ ಗೋಡೆಗೆ, ಬೇರಾವುದೋ ವಾಹನಕ್ಕೆ ಗಾಡಿ ತಾಗಿಸಿದಾಗ `ಛೇ ಕಾರಿನಲ್ಲಿ ಪಾರ್ಕಿಂಗ್ ಸೆನ್ಸಾರ್ ಇದ್ದಿದ್ದರೆ' ಎಂದೆನಿಸಬಹುದು. ಆಫ್ಟರ್ ಮಾರ್ಕೇಟ್ಟಿನಲ್ಲಿ ಇಂತಹ ಪ್ಲಗ್ ಇನ್ ಪಾರ್ಕಿಂಗ್ ಸೆನ್ಸಾರ್‍ಗಳು ಸಿಗುತ್ತವೆ. ಇವನ್ನು ನಿಮ್ಮ ಕಾರಿನ ರಿವರ್ಸ್ ಲ್ಯಾಂಪಿನ ಹತ್ತಿರ ಜೋಡಿಸಿ ನಿರಾಳವಾಗಿ ಕಾರನ್ನು ಪಾರ್ಕಿಂಗ್ ಮಾಡಬಹುದು. ಇದನ್ನು ಅಳವಡಿಸಲು ನೀವು 3 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿ ಆಸುಪಾಸಿನಲ್ಲಿ ಖರ್ಚು ಮಾಡಬೇಕಾಗಬಹುದು.

ರಿಮೋಟ್ ಲಾಕಿಂಗ್
ಇಮೊಬಿಲೈಝರ್ ರಿಮೋಟ್ ಲಾಕಿಂಗ್  ವ್ಯವಸ್ಥೆ ಕಾರಿನಲ್ಲಿದ್ದರೆ ಉತ್ತಮ. ಇದನ್ನು ಕಾರಿಗೆ ಅಳವಡಿಸಲು ಹೆಚ್ಚು ಕಷ್ಟಪಡಬೇಕಿಲ್ಲ. ಇದರ ದರ 4ರಿಂದ 12 ಸಾವಿರ ರೂಪಾಯಿವರೆಗಿದೆ. ಆಟೊಕಾಪ್, ಮೈಕ್ರೊವಿಬಿಬಿ, ಪಿಯೊನಿಕ್ಸ್, ಸಿಲಿಕಾನ್, ನಿಪ್ಪಾನ್ ಇತ್ಯಾದಿ ಕಂಪನಿಗಳ ರಿಮೋಟ್ ಲಾಕಿಂಗ್ ಸಾಧನವನ್ನು ಅಳವಡಿಸಿಕೊಳ್ಳಬಹುದು.

ಲೆದರ್ ಅಪ್‍ಹೊಲೆಸ್ಟ್ರೆ

ಕಾರಿನ ಸೀಟು ಮತ್ತು ಇತರ ಪ್ರಮುಖ ಭಾಗಗಳಲ್ಲಿ ಮೆತ್ತನೆಯ ಚರ್ಮದ ಹೊದಿಕೆ ಇದ್ದರೆ ಚೆನ್ನಾಗಿತ್ತು ಎಂದು ನೀವು ಅಂದುಕೊಂಡಿರಬಹುದು. ಸಂಪೂರ್ಣ ಅಸಲಿ ಲೆದರ್ ಅಪ್‍ಹೊಲೆಸ್ಟ್ರೆ ಅಳವಡಿಸಿಕೊಳ್ಳುವುದು ದುಬಾರಿ. ಯಾಕೆಂದರೆ ಇವುಗಳ ವೆಚ್ಚ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿರುತ್ತವೆ. ಆದರೆ ಫಾಕ್ಸ್ ಲೆದರ್ ಹೊದಿಕೆಗಳು ಸುಮಾರು 15 ಸಾವಿರ ರೂಪಾಯಿಗೆ ದೊರಕುತ್ತವೆ. ವಿವಿಧ ಬಣ್ಣದ ಲೆದರ್ ಅಪ್‍ಹೊಲೆಸ್ಟ್ರೆ ಹಾಕಿಕೊಳ್ಳುವ ಮೂಲಕ ನಿಮ್ಮ ಕಾರಿನ ಅಂದ ಹೆಚ್ಚಿಸಿಕೊಳ್ಳಬಹುದು. ಸೆಖೆಗಾಲದಲ್ಲಿ ಇವು ಕೊಂಚ ಹೀಟ್ ಅನಿಸಬಹುದು.

ರಿಯರ್ ವ್ಯೂ ಕ್ಯಾಮರಾ
ನಿಮ್ಮ ಕಾರಿನಲ್ಲಿ ಡಿವಿಡಿ ಡಿಸ್‍ಪ್ಲೇ ಇದ್ದರೆ, ನೇರವಾಗಿ ಅದಕ್ಕ ರಿವರ್ಸ್ ಕ್ಯಾಮರಾವನ್ನು ಕನೆಕ್ಟ್ ಮಾಡಬಹುದು. ಆಕ್ಸೆಸರಿ ಮಾರುಕಟ್ಟೆಯಲ್ಲಿ ಡಿಸ್‍ಪ್ಲೇ ಜೊತೆಗೆ ರಿಯರ್ ವ್ಯೂ ಕ್ಯಾಮರಾಗಳ ಪೂರ್ತಿ ಸೆಟ್ ದೊರಕುತ್ತದೆ. ಕೆಲವೊಂದು ಕಂಪನಿಗಳು ಇಂತಹ ಕಿಟ್‍ನಲ್ಲಿ ಪಾರ್ಕಿಂಗ್ ಸೆನ್ಸಾರ್ ಸಹ ನೀಡುತ್ತವೆ. ಕ್ಯಾಮರಾ ಡಿಸ್‍ಪ್ಲೇಯನ್ನು ಕಾರಿನ ಡ್ಯಾಷ್‍ಬೋರ್ಡಿಗೆ ಜೋಡಿಸಬಹುದು. ಇದಕ್ಕೆ ಸುಮಾರು 3 ಸಾವಿರ ರೂಪಾಯಿಯಿಂದ 12 ಸಾವಿರ ರೂಪಾಯಿ ಖರ್ಚಾಗಬಹುದು.

ಬ್ಲೂಟೂಥ್ ಸಾಧನ
ಕಾರ್ ಡ್ರೈವ್ ಮಾಡುತ್ತ ಮೊಬೈಲ್ ಫೆÇೀನ್ ಬಳಕೆ ಮಾಡುವುದು ತಪ್ಪು. ಆದರೆ ಈಗಿನ ಹೈಎಂಡ್ ಕಾರುಗಳಲ್ಲಿರುವ ಬ್ಲೂಟೂಥ್ ಸಾಧನಗಳು ಆಟೋಮ್ಯಾಟಿಕ್ ಆಗಿ ಕರೆ ಸ್ವೀಕರಿಸಿ ಮಾತನಾಡಲು ಅನುವು ಮಾಡಿಕೊಡುತ್ತವೆ. ಜಾಬ್ರಾ, ಪ್ಲಾಂಟ್ರೊನ್ಕಿಸ್, ಮೊಟೊರೊಲಾ, ನೊಕಿಯಾ ಮುಂತಾದ ಕಂಪನಿಗಳ ಬ್ಲೂಟೂಥ್ ಸಾಧನ ಖರೀದಿಸಿ ಅದನ್ನು ಕಾರಿನ ಸನ್ ವಿಷರ್‍ಗೆ ಕ್ಲಿಪ್ ಮಾಡಿ ನಿಮ್ಮ ಮೊಬೈಲ್ ಫೆÇೀನಿಗೆ ಪೇರ್ ಮಾಡಬಹುದು. ಕೆಲವು ಮ್ಯೂಸಿಕ್ ಪ್ಲೇಯರ್‍ಗಳಲ್ಲಿ ಇಂತಹ ಬ್ಲೂಟೂಥ್ ಸಾಧನ ಇರುತ್ತದೆ.

ಪವರ್ ವಿಂಡೋಸ್
ನಿಮ್ಮ ಕಾರಿನಲ್ಲಿ ಪವರ್ ವಿಂಡೋ ಇಲ್ಲವೆಂದು ಚಿಂತೆ ಮಾಡುವ ಅಗತ್ಯವಿಲ್ಲ. ಕಾರ್ ಆಫ್ಟರ್ ಮಾರ್ಕೇಟ್‍ಗಳಲ್ಲಿ ಪವರ್ ವಿಂಡೋಸ್ ಸಿಸ್ಟಮ್ ಸಹ ದೊರಕುತ್ತವೆ. ಸುಮಾರು 3ರಿಂದ 8 ಸಾವಿರ ರೂಪಾಯಿಗೆ ನಿಮ್ಮ ಕಾರಿಗೆ ಪವರ್ ವಿಂಡೋಸ್‍ಗಳನ್ನು ಅಳವಡಿಸಿಕೊಳ್ಳಬಹುದು.

ಜಿಪಿಎಸ್ಅಪರಿಚಿತ ರಸ್ತೆಗಳಲ್ಲಿ ದಾರಿ ತೋರಿಸುವ ಜಿಪಿಎಸ್ ಸಾಧನಗಳನ್ನು ಸಹ ನಿಮ್ಮ ಕಾರಿಗೆ ಅಳವಡಿಸಿಕೊಳ್ಳಬಹುದು. ಈಗ ಹೆಚ್ಚಿನ ಸ್ಮಾರ್ಟ್‍ಫೆÇೀನ್‍ಗಳಲ್ಲೂ ಜಿಪಿಎಸ್ ಸಾಧನವಿದೆ. ಇವಿಷ್ಟು ಮಾತ್ರವಲ್ಲದೇ ನಿಮ್ಮ ಕಾರಿಗೆ ಫಾಗ್ ಲ್ಯಾಂಪ್, ಸನ್‍ರೂಫ್‍ಗಳನ್ನು ಅಳವಡಿಸಿಕೊಳ್ಳಬಹುದು. 4-8 ಸಾವಿರ ರೂಪಾಯಿ ವಿನಿಯೋಗಿಸಿದರೆ ಕಾರಿನ ಸ್ಟಿಯರಿಂಗ್ ವೀಲ್‍ಗೆ `ಸ್ಟಿಯರಿಂಗ್ ಆಡಿಯೋ ರಿಮೋಟ್' ಅಳವಡಿಸಿಕೊಳ್ಳಬಹುದು.

ಕಾರ್ ಮಾಡಿಫೈ ಅಂದರೆ ಇಷ್ಟೇ ಅಲ್ಲ. ನಿಮ್ಮಲ್ಲಿ ವೆಚ್ಚ ಮಾಡಲು ಸಾಕಷ್ಟು ಹಣವಿದ್ದರೆ ಟೈರ್, ಎಗ್ಸಾಸ್ಟ್, ಏರ್‍ಫಿಲ್ಟರ್, ಸ್ಪಾರ್ಕ್ ಪ್ಲಗ್ಸ್, ಎಂಜಿನ್ ಸೇರಿದಂತೆ ಕಾರಿನ ಪರ್ಫಾಮೆನ್ಸ್ ವಿಷಯಗಳನ್ನು ಸಹ ಅಪ್‍ಗ್ರೇಡ್ ಮಾಡಿಕೊಳ್ಳಬಹುದು.
SHARE

Author: verified_user

0 ಪ್ರತಿಕ್ರಿಯೆಗಳು: