Thursday, 29 September 2016

ನೈತಿಕ ಹ್ಯಾಕರ್ ಆಗುವುದು ಹೇಗೆ?

SHARE
ಹೊಸ ಬಗೆಯ ಉದ್ಯೋಗ ಮಾಡಲಿಚ್ಚಿಸುವವರು `ಸರ್ಟಿಫೈಡ್ ಎಥಿಕಲ್ ಹ್ಯಾಕರ್(ಸಿಇಎಚ್)' ಕೋರ್ಸ್ ಮಾಡಿ ನೈತಿಕ ಹ್ಯಾಕರ್ ಆಗಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

  • ಪ್ರವೀಣ್ ಚಂದ್ರ ಪುತ್ತೂರು


ಹ್ಯಾಕರ್‍ಗಳನ್ನು ಹಿಡಿಯಲು ನೀವು ಹ್ಯಾಕರ್ ಆಗಬೇಕು ಎನ್ನುವುದು ಟೆಕ್ ಜಗತ್ತಿನಲ್ಲಿ ಪ್ರಚಲಿತದಲ್ಲಿರುವ ಮಾತು. ಹ್ಯಾಕಿಂಗ್ ಎಂದಾಕ್ಷಣ ನಕಾರಾತ್ಮಕವಾಗಿ ಯೋಚಿಸಬೇಕಿಲ್ಲ. ಹ್ಯಾಕಿಂಗ್ ಮಾಡುವುದು ಗುರುತರ ಅಪರಾಧ. ಹ್ಯಾಕ್ ಮಾಡಿ ಸಿಕ್ಕಿಬಿದ್ದರೆ ಜೈಲೂಟ ಗ್ಯಾರಂಟಿ. ಇಂತಹ ಹ್ಯಾಕರ್‍ಗಳಿಂದ ತಮ್ಮ ಸಂಸ್ಥೆಯನ್ನು ಪಾರು ಮಾಡಲು ಕಂಪ್ಯೂಟರ್ ಮತ್ತು ನೆಟ್‍ವರ್ಕಿಂಗ್ ಬಳಸುವ ಕಂಪನಿಗಳು, ಬ್ಯಾಂಕ್‍ಗಳು ನೈತಿಕ ಹ್ಯಾಕರ್‍ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ.

ಯಾರು ನೈತಿಕ ಹ್ಯಾಕರ್?
ಕಂಪ್ಯೂಟರ್ ಜಗತ್ತನ್ನು ಬೆಚ್ಚಿಬೀಳಿಸುವ ಸಾವಿರಾರು ಹ್ಯಾಕರ್‍ಗಳು ಜಗತ್ತಿನಲ್ಲಿದ್ದಾರೆ. ಕೋಟಿ ಕೋಟಿ ವ್ಯವಹಾರ ನಡೆಸುವ ಕಂಪನಿಗಳು ಇಂತಹ ಹ್ಯಾಕರ್‍ಗಳಿಗೆ ಭಯಪಡುತ್ತಾರೆ. ಕಂಪನಿಯ ಆನ್‍ಲೈನ್ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಸಹ ಈ ಹ್ಯಾಕರ್‍ಗಳು ಕಾರಣವಾಗುತ್ತಾರೆ. ಕೆಲವೊಮ್ಮೆ ದುರುದ್ದೇಶಪೂರಿತ ಹ್ಯಾಕರ್‍ಗಳು ಕಂಪನಿಯೊಂದರ ಲಕ್ಷಾಂತರ ಬಳಕೆದಾರರ ಮಾಹಿತಿಯನ್ನೆಲ್ಲ ಕದಿಯುವುದುಂಟು. ಇಂತಹ ಅಪಾಯದಿಂದ ಪಾರಾಗಲು ಯಾವುದಾದರೂ ಕಂಪನಿ ಅಥವಾ ಸಂಸ್ಥೆಯು ತನ್ನ ಕಂಪ್ಯೂಟರ್ ವ್ಯವಸ್ಥೆ ಅಥವಾ ನೆಟ್‍ವರ್ಕ್ ವ್ಯವಸ್ಥೆಯನ್ನು ಬಲಪಡಿಸಲು ನಂಬಿಗಸ್ಥ ನೈತಿಕ ಹ್ಯಾಕರ್‍ಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಈ ವ್ಯಕ್ತಿಯು ಇತರ ಕಳ್ಳ ಹ್ಯಾಕರ್‍ಗಳು ಬಳಸುವ ಹಲವು ತಂತ್ರಗಳನ್ನೇ ಬಳಸುತ್ತಾರೆ. ಇದರ ಉದ್ದೇಶ ಆ ಸಂಸ್ಥೆ ಅಥವಾ ಕಂಪನಿಯ ಕಂಪ್ಯೂಟರ್/ನೆಟ್‍ವರ್ಕ್ ವ್ಯವಸ್ಥೆ ಎಷ್ಟು ಸುರಕ್ಷಿತವಾಗಿದೆ ಎಂದು ಕಂಡುಕೊಳ್ಳುವುದಾಗಿದೆ. ಇಂತಹ ನೈತಿಕ ಹ್ಯಾಕರ್‍ಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ.

ಎಥಿಕಲ್ ಹ್ಯಾಕರ್ ಆಗುವುದು ಹೇಗೆ?
ಹ್ಯಾಕಿಂಗ್ ಕಲಿಸಲು ಯಾವುದೇ ಮಂತ್ರವಿದ್ಯೆ ಇಲ್ಲ. ಒಂದು ರಾತ್ರಿಯಲ್ಲಿ ಹ್ಯಾಕರ್ ಆಗಲು ಸಾಧ್ಯವಿಲ್ಲ. ಇದು ಇತರ ಕೋರ್ಸ್‍ಗಳಂತೆ ಶ್ರದ್ಧೆಯಿಟ್ಟು ಕಲಿತು ಪಡೆದುಕೊಳ್ಳಬಹುದಾದ ಪರಿಣತಿಯಾಗಿದೆ. ನಿಮಗೆ ಅಪರೇಟಿಂಗ್ ಸಿಸ್ಟಮ್, ಅದರ ಕಾರ್ಯಚಟುವಟಿಕೆಗಳು, ಕಂಪ್ಯೂಟರ್ ನೆಟ್‍ವರ್ಕ್‍ಗಳು, ಕಂಪ್ಯೂಟರ್ ಭದ್ರತೆ ಇತ್ಯಾದಿಗಳ ಬಗ್ಗೆ ಉತ್ತಮ ಮಾಹಿತಿ, ಜ್ಞಾನವಿದ್ದರೆ ನೀವು ನೈತಿಕ ಹ್ಯಾಕಿಂಗ್ ಅನ್ನು ಕಲಿಯಬಹುದು. ಅಮೆರಿಕದ ಇಸಿ ಕೌನ್ಸಿಲ್‍ನಡಿ ನೈತಿಕವಾಗಿ ಹ್ಯಾಕಿಂಗ್ ಮಾಡಲು ಕಲಿಸಿಕೊಡುವ ಹಲವು ಶಿಕ್ಷಣ ಸಂಸ್ಥೆಗಳು ದೇಶದಲ್ಲಿವೆ.

ಹ್ಯಾಕಿಂಗ್ ಎಂದರೇನು?
ಕಂಪ್ಯೂಟರ್‍ನ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್ ಅನ್ನು ಅದನ್ನು ನಿರ್ಮಿಸಿದವರ ಪ್ರಮುಖ ಉದ್ದೇಶಕ್ಕೆ ಬದಲಾಗಿ ಅನ್ಯವ್ಯಕ್ತಿ ತನಗೆ ಬೇಕಾದಂತೆ ಬದಲಾಯಿಸುವುದನ್ನು ಕಂಪ್ಯೂಟರ್ ಹ್ಯಾಕಿಂಗ್ ಎನ್ನಬಹುದು. ಸಾಫ್ಟ್‍ವೇರ್/ಮಾಡ್ಯುಲ್‍ಗಳಲ್ಲಿರುವ ಕುಂದುಕೊರತೆಗಳನ್ನು ಕಂಡುಹಿಡಿಯಲು ಹ್ಯಾಕಿಂಗ್ ಎಂಬ ಕಲೆಯನ್ನು ಬಳಸಲಾಗುತ್ತದೆ. ತನ್ನ ವೃತ್ತಿಯಲ್ಲಿ ಅಪೂರ್ಣತೆ ಪಡೆದವನನ್ನು ಹೆಸರಿಸಲು `ಹ್ಯಾಕ್' ಎಂಬ ಪದ ಬಳಕೆ ಮಾಡಲಾಗುತ್ತದೆ. ಸಾಫ್ಟ್‍ವೇರ್ ಇತ್ಯಾದಿಗಳು ಅಪೂರ್ಣಗೊಂಡಿದ್ದರೆ ಹ್ಯಾಕರ್‍ಗಳ ದಾಳಿಗೆ ತುತ್ತಾಗುತ್ತವೆ. ಹ್ಯಾಕರ್‍ಗಳಿಗೆ ಸಾಧ್ಯವಾಗದಂತೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಇದರಿಂದ ಸಾಧ್ಯವಾಗುತ್ತದೆ.

ಉದ್ಯೋಗಾವಕಾಶ
ಕಂಪ್ಯೂಟರ್ ಮತ್ತು ನೆಟ್‍ವರ್ಕ್ ಬಳಸಿ ಬಹುಕೋಟಿ ವ್ಯವಹಾರ ನಡೆಸುವ ಬಹುತೇಕ ಕಂಪನಿಗಳು ಸುರಕ್ಷತೆಯ ದೃಷ್ಟಿಯಿಂದ `ನೈತಿಕ ಹ್ಯಾಕರ್'ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಎಥಿಕಲ್ ಹ್ಯಾಕರ್‍ಗಳಿಗೆ ಸೆಕ್ಯೂರಿಟಿ ಥ್ರೀಟ್ಸ್, ರಿಸ್ಕ್ ಮತ್ತು ಕೌಂಟರ್‍ಮೆಷರ್‍ಗಳ ಜ್ಞಾನ ಇರುವುದು ಅತ್ಯಂತ ಅಗತ್ಯ. ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಸೆಕ್ಯುರಿಟಿ ಅಡಿಟರ್, ಹ್ಯಾಕಿಂಗ್ ಟೂಲ್ ಅನಾಲಿಸ್ಟ್‍ಗಳಿಗಿಂತ ಹೆಚ್ಚು ಜ್ಞಾನ ಬಯಸುವ ಉದ್ಯೋಗವಿದು. ಹೆಚ್ಚಿನ ಕಂಪನಿಗಳು ಪ್ರತಿಭಾನ್ವಿತ ನೈತಿಕ ಹ್ಯಾಕರ್‍ಗಳಿಗೆ ತಮ್ಮ ಕಂಪನಿಯಲ್ಲಿ ಸ್ಥಾನ ನೀಡುತ್ತವೆ. ಹೀಗಾಗಿ ಉದ್ಯೋಗಾವಕಾಶ ಉತ್ತಮವಾಗಿದೆ. ನಿಮ್ಮಲ್ಲಿ ಡಿಗ್ರಿ ಅಥವಾ ಸರ್ಟಿಫಿಕೇಷನ್‍ಗಳಿದ್ದರೂ ಕೆಲವೊಮ್ಮೆ ಐಟಿ ಸೆಕ್ಯೂರಿಟಿ ಅನುಭವ ಇಲ್ಲದೆ ಎಥಿಕಲ್ ಹ್ಯಾಕರ್ ಆಗಿ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟವಾಗಬಹುದು.

ಸಿಇಎಚ್ ವಿ9 ಕೋರ್ಸ್
ಇದು ಎಥಿಕಲ್ ಹ್ಯಾಕಿಂಗ್‍ನಲ್ಲಿ ಜಗತ್ತಿನಲ್ಲೇ ಅಡ್ವಾನ್ಡಡ್ ಆಗಿರುವ ಕೋರ್ಸ್. ಸುಮಾರು 18 ಸೆಕ್ಯುರಿಟಿ ಡೊಮೈನ್‍ಗಳ ಭದ್ರತೆಯನ್ನು ಇದರಲ್ಲಿ ಕಲಿಯಬಹುದು. ಇದಕ್ಕಾಗಿ 18 ಮಾಡ್ಯುಲ್‍ಗಳು ಇವೆ. ಹ್ಯಾಕರ್‍ಗಳು ಸಾಮಾನ್ಯವಾಗಿ ಬಳಸುವ 270 ಹ್ಯಾಕಿಂಗ್, ಅಟ್ಯಾಕ್ ಟೆಕ್ನಾಲಜಿಗಳನ್ನು ಕಲಿಯಬಹುದು.

ಏನೆಲ್ಲ ಓದಬೇಕು?
ಸಿಇಎಚ್ ವಿ9ನಲ್ಲಿ ಸುಮಾರು 18 ಮಾಡ್ಯುಲ್‍ಗಳಿವೆ. ಇಂಟ್ರೊಡಕ್ಷನ್ ಟು ಎಥಿಕಲ್ ಹ್ಯಾಕಿಂಗ್, ಫೂಟ್ ಪ್ರಿಂಟಿಂಗ್ ಆ್ಯಂಡ್ ರೆಕೊನಸಿನ್ಸ್, ಸ್ಕ್ಯಾನಿಂಗ್ ನೆಟ್‍ವಕ್ಸ್, ಇನ್ಯುಮೆರೆಷನ್, ಸಿಸ್ಟಮ್ ಹ್ಯಾಕಿಂಗ್, ಟ್ರೊಜನ್ಸ್ ಆ್ಯಂಡ್ ಬ್ಯಾಕ್‍ಡೋರ್ಸ್, ವೈರಸಸ್ ಆ್ಯಂಡ್ ವಮ್ರ್ಸ್, ಸ್ನಿಫರ್ಸ್, ಸೋಷಿಯಲ್ ಎಂಜಿನಿಯರಿಂಗ್, ಡೆನಿಯಲ್ ಆಫ್ ಸರ್ವೀಸ್, ಸೆಸನ್ ಹೈಜಾಕಿಂಗ್, ಹೈಜಾಕಿಂಗ್ ವೆಬ್ ಸರ್ವರ್ಸ್, ಹ್ಯಾಕಿಂಗ್ ವೆಬ್ ಅಪ್ಲಿಕೇಷನ್ಸ್, ಎಸ್‍ಕ್ಯೂಎಲ್ ಇಂಜೆಕ್ಷನ್, ಹ್ಯಾಕಿಂಗ್ ವೈರ್‍ಲೆಸ್ ನೆಟ್‍ವಕ್ರ್ಸ್, ಇವಾಡಿಂಗ್ ಐಡಿಎಸ್, ಫೈರ್‍ವಾಲ್ಸ್ ಆ್ಯಂಡ್ ಹನಿ ಪಾಟ್ಸ್, ಬಫರ್ ಓವರ್‍ಫೆÇ್ಲೀ, ಕ್ರಿಪೆÇ್ಟಗ್ರಫಿ ಮತ್ತು ಪೆನೆಟ್ರೇಷನ್ ಟೆಸ್ಟಿಂಗ್.

ಬಾಕ್ಸ್
ಎಲ್ಲಿ ಕೋರ್ಸ್ ಮಾಡಬಹುದು?
* ಇಂಡಿಯನ್ ಸ್ಕೂಲ್ ಆಫ್ ಎಥಿಕಲ್ ಹ್ಯಾಕಿಂಗ್: ಡಿಡಿಡಿ.ಜಿoಟಛಿe.್ಚಟಞ
* ಬೆಂಗಳೂರಿನ ಜಯನಗರದಲ್ಲಿರುವ ಇಕಾನ್ ಟೆಕ್ನಾಲಜೀಸ್‍ನ `ಎಥಿಕಲ್ ಹ್ಯಾಕಿಂಗ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್'ನಲ್ಲಿ ನೈತಿಕ ಹ್ಯಾಕಿಂಗ್ ಕೋರ್ಸ್ ಕಲಿಯಬಹುದು. ಇಲ್ಲಿ ಇನ್‍ಫಾರ್ಮೆಷನ್ ಸೆಕ್ಯುರಿಟಿ ಆ್ಯಂಡ್ ಎಥಿಕಲ್ ಹ್ಯಾಕಿಂಗ್, ಎಂಬೆಡ್ಡೆಡ್ ಸಿಸ್ಟಮ್ಸ್ ಆ್ಯಂಡ್ ರೊಬೊಟಿಕ್ಸ್, ಡಾಟ್.ನೆಟ್ ಮತ್ತು ಜಾವಾ ಕೋರ್ಸ್‍ಗಳಿವೆ. ಅಮೆರಿಕದ ಇಸಿ ಕೌನ್ಸಿಲ್‍ನಡಿ ಈ ಕೋರ್ಸ್‍ಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗೆ: eಠಿಠಿm://ಛಿಜಿhಟ್ಞಠಿಛ್ಚಿe.್ಞಛಿಠಿ
* ಬೆಂಗಳೂರಿನ ಎಚ್‍ಎಸ್‍ಆರ್ ಬಡಾವಣೆಯಲ್ಲಿರುವ ಸಿಂಪ್ಲಿ ಲರ್ನ್‍ನಲ್ಲೂ ನೈತಿಕ ಹ್ಯಾಕಿಂಗ್ ವಿಷಯದಲ್ಲಿ ಸಿಇಎಚ್ ವಿ9 ಕೋರ್ಸ್ ಇದೆ. ಇಸಿ ಕೌನ್ಸಿಲ್‍ನಡಿಯಲ್ಲಿ ಈ ಕೋರ್ಸ್ ನೀಡಲಾಗುತ್ತದೆ. ಕೋರ್ಸ್ ಶುಲ್ಕ: 31,000 ರೂ. ಹೆಚ್ಚಿನ ಮಾಹಿತಿಗೆ: ಡಿಡಿಡಿ.oಜಿಞm್ಝಜ್ಝಿಛಿZ್ಟ್ಞ.್ಚಟಞ
* ಬೆಂಗಳೂರಿನ ಕ್ಯೂಸ್ಟ್ ಇನ್‍ಸ್ಟಿಟ್ಯೂಟ್ ಆಫ್ ನಾಲೆಡ್ಜ್(ಕ್ಯೂಯುಐಕೆ) ಸಂಸ್ಥೆಯಲ್ಲಿ ಇಸಿ ಕೌನ್ಸಿಲ್ ಸಿಇಎಚ್8 ಕೋರ್ಸ್ ಮಾಡಬಹುದಾಗಿದೆ. ಯಾವುದೇ ವಿಷಯದಲ್ಲಿ ಪದವಿ ಮತ್ತು, ನೆಟ್‍ವರ್ಕಿಂಗ್ ಜ್ಞಾನ, ಸಿಸಿಎನ್‍ಎ, ಎನ್‍ಪ್ಲಸ್ ತಿಳಿದಿರುವವರು ಈ ಕೋರ್ಸ್‍ಗೆ ಸೇರಬಹುದು. 40 ಗಂಟೆಗಳ ಫುಲ್ ಟೈಂ ಸರ್ಟಿಫಿಕೇಷನ್ ಕೋರ್ಸ್ ಇದಾಗಿದೆ. ಮಾಹಿತಿಗೆ ವೆಬ್‍ಸೈಟ್: ಡಿಡಿಡಿ.ಟ್ಠಿಜಿh್ಞಟಡ್ಝಿಛಿbಜಛಿ.್ಞಛಿಠಿ
* ಬೆಂಗಳೂರಿನಲ್ಲಿರುವ ಇನ್ನಷ್ಟು ಸಂಸ್ಥೆಗಳು: ಸಿಎಂಎಸ್ ಕಂಪ್ಯೂಟರ್ ಇನ್‍ಸ್ಟಿಟ್ಯೂಟ್(ಇಮೇಲ್: eಛ್ಝಿmbಛಿohಃ್ಚಞo.್ಚಟಞ), ಜೆಟ್‍ಕಿಂಗ್ ಇನ್ಫೋಟ್ರೈನ್ ಸಂಸ್ಥೆಯು ಜೆಟ್‍ಕಿಂಗ್ ಸರ್ಟಿಫೈಡ್ ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್ ಪೆÇ್ರಫೆಷನಲ್ ಕೋರ್ಸ್ ಅನ್ನು ನಡೆಸುತ್ತದೆ. ಮಾಹಿತಿಗೆ ಡಿಡಿಡಿ.್ಜಛಿಠಿhಜ್ಞಿಜ.್ಚಟಞ, ಹ್ಯಾಕರ್ಸ್ ಸ್ಕೂಲ್: ಡಿಡಿಡಿ.eZ್ಚhಛ್ಟಿo್ಚeಟಟ್ಝ.ಜ್ಞಿ, ಅಡೆಪ್ಟ್‍ಟೆಕ್ನೊ: eಠಿಠಿm://Zbಛಿmಠಿಛ್ಚಿe್ಞಟ.್ಚಟಞ/್ಚಟ್ಠ್ಟoಛಿ/ಚ್ಟಿಟಡಿoಛಿ/್ಚಛಿe
SHARE

Author: verified_user

0 ಪ್ರತಿಕ್ರಿಯೆಗಳು: