Showing posts with label car. Show all posts
Showing posts with label car. Show all posts

Friday, 30 September 2016

ಕಾರು ಮಾಡಿಫಿಕೇಷನ್ ಮಾಡಿಸಿಕೊಳ್ಳುವಿರಾ?

ಕಾರು ಮಾಡಿಫಿಕೇಷನ್ ಮಾಡಿಸಿಕೊಳ್ಳುವಿರಾ?

ವಾಹನ ಕಂಪನಿಗಳು ಒಂದು ಕಾರು ಮಾಡೆಲಿನ ವಿವಿಧ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುತ್ತವೆ. ಆ ಆವೃತ್ತಿಗಳಲ್ಲಿ ಎಂಟ್ರಿ ಲೆವೆಲ್ ಮತ್ತು ಹೈಎಂಡ್ ವರ್ಷನ್‍ಗಳಿರುತ್ತವೆ. ಹೈಎಂಡ್ ಆವೃತ್ತಿಯಲ್ಲಿರುವ ವಿವಿಧ ಫೀಚರುಗಳು ಎಂಟ್ರಿ ಲೆವೆಲ್ ಕಾರಿನಲ್ಲಿ ಇರುವುದೇ ಇಲ್ಲ. ಉದಾಹರಣೆಗೆ
ಸ್ವಿಫ್ಟ್ ವಿಡಿಐನಲ್ಲಿ ಸೆಂಟ್ರಲ್ ಲಾಕಿಂಗ್ ಇದೆ. ಆದರೆ ಎಲ್‍ಎಕ್ಸ್‍ಐ ಮತ್ತು ಎಲ್‍ಡಿಐ ಆವೃತ್ತಿಗಳಲ್ಲಿ ಈ ಫೀಚರ್ ಇಲ್ಲ. ಆಲ್ಟೊ 800 ಎಲ್‍ಎಕ್ಸ್ ಕಾರಿನಲ್ಲಿ ಪವರ್ ಸ್ಟಿಯರಿಂಗ್, ಲೊ ಲೆವೆಲ್ ಫ್ಯೂಯೆಲ್ ವಾರ್ನಿಂಗ್, ಏರ್‍ಬ್ಯಾಗ್ ಇಲ್ಲ. ಆದರೆ ಈ ಫೀಚರುಗಳು ಆಲ್ಟೊ 800 ಎಲ್‍ಎಕ್ಸ್‍ಐನಲ್ಲಿವೆ. ಟಾಟಾ ಸಫಾರಿ ಇಎಕ್ಸ್ ಡಿಕೊರ್‍ನಲ್ಲಿ ಇಂಟಿಗ್ರೇಟೆಡ್ ಮ್ಯೂಸಿಕ್ ಸಿಸ್ಟಮ್ ಇದೆ. ಆದರೆ ಎಲ್‍ಎಕ್ಸ್ ಡಿಕೊರ್‍ನಲ್ಲಿ ಈ ಫೀಚರ್ ಇಲ್ಲ. ಇಂಡಿಕಾ ವಿಸ್ಟಾ ಡಿ90 ವಿಎಕ್ಸ್ ಕಾರಿನಲ್ಲಿ ಟಚ್‍ಸ್ಕ್ರೀನ್ ಡಿಸ್‍ಪ್ಲೇ ಮತ್ತು ಜಿಪಿಎಸ್ ನ್ಯಾವಿಗೇಷನ್ ಇಲ್ಲ. ಆದರೆ ಈ ಫೀಚರುಗಳು ವಿಸ್ಟಾ ಡಿ90 ಝಡ್‍ಎಕ್ಸ್ ಪ್ಲಸ್ ಆವೃತ್ತಿಯಲ್ಲಿ ಇವೆ. ನಿಸ್ಸಾನ್ ಸನ್ನಿ ಎಕ್ಸ್‍ಇ ಆವೃತ್ತಿಯಲ್ಲಿ ಚೈಲ್ಡ್ ಸೇಫ್ಟಿ ಲಾಕ್, ರಿಯರ್ ಡಿಫಾಗರ್ ಇತ್ಯಾದಿ ಫೀಚರುಗಳು ಇಲ್ಲ. ಸನ್ನಿ ಎಕ್ಸ್‍ಎಲ್ ಡೀಸೆಲ್ ಆವೃತ್ತಿಯಲ್ಲಿ ಈ ಎಲ್ಲಾ ಫೀಚರುಗಳಿವೆ.

ಹೀಗೆ ಎಂಟ್ರಿ ಲೆವೆಲ್ ಮತ್ತು ಹೈಎಂಡ್ ಆವೃತ್ತಿಗಳ ಫೀಚರುಗಳು, ವಿಶೇಷತೆಗಳ ನಡುವೆ ಹಲವು ವ್ಯತ್ಯಾಸಗಳು ಇರುತ್ತವೆ. ಕಾರು ಖರೀದಿಸುವಾಗ ಹಣಕಾಸಿನ ಅಭಾವವೋ.. ಅಥವಾ ಇನ್ನಿತರ ಕಾರಣಗಳಿಂದ ಕಡಿಮೆ ಫೀಚರ್‍ಗಳಿರುವ ಕಾರನ್ನು ನೀವು ಖರೀದಿಸಿರಬಹುದು. ಆದರೆ ದಿನಕಳೆದಂತೆ ಬೇಕೆನಿಸಿದರೆ ಹೈಎಂಡ್ ಆವೃತ್ತಿಗಳಲ್ಲಿರುವ ಸೆನ್ಸಾರ್, ಜಿಪಿಎಸ್, ಅಲಾಯ್ ಇತ್ಯಾದಿ ಫೀಚರುಗಳನ್ನು ಅಳವಡಿಸಿಕೊಳ್ಳಬಹುದು.

ಅಲಾಯ್ ವೀಲ್
ಚಕ್ರಗಳಿಗೆ ಅಲಾಯ್ ವೀಲ್ ಅಳವಡಿಸಿದರೆ ಕಾರಿನ ಅಂದ ಹೆಚ್ಚಾಗುತ್ತದೆ. ಇವು ಹಗುರವಾಗಿರುವುದರಿಂದ ಕಾರಿನ ಹ್ಯಾಂಡ್ಲಿಂಗ್, ಪರ್ಫಾಮೆನ್ಸ್ ಸಹ ಹೆಚ್ಚಾಗುತ್ತದೆ. ರಿಮ್ ಬಾಳಿಕೆ ಹೆಚ್ಚಿಸುತ್ತದೆ ಮತ್ತು ರಿಮ್ ಬೆಂಡ್ ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒಂದು ಸೆಟ್ ಅಲಾಯ್ ವೀಲ್‍ಗೆ ಸುಮಾರು 15-20 ಸಾವಿರ ರೂಪಾಯಿ ವಿನಿಯೋಗಿಸಬೇಕಾಗಬಹುದು. ಇದಕ್ಕಿಂತ ದುಬಾರಿ ಅಲಾಯ್‍ಗಳೂ ದೊರಕುತ್ತವೆ.

ರಿವರ್ಸ್ ಪಾರ್ಕಿಂಗ್ ಸೆನ್ಸಾರ್
ಕಾರ್ ಪಾರ್ಕಿಂಗ್ ಮಾಡುವಾಗ ಕಾರಿನ ಹಿಂಬದಿಯ ಪ್ರದೇಶಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ದೊಡ್ಡ ಕಾರುಗಳಲ್ಲಿ ಈ ಸಮಸ್ಯೆ ಹೆಚ್ಚು. ಪಾರ್ಕಿಂಗ್ ಮಾಡುವಾಗ ಹಿಂಬದಿಯ ಗೋಡೆಗೆ, ಬೇರಾವುದೋ ವಾಹನಕ್ಕೆ ಗಾಡಿ ತಾಗಿಸಿದಾಗ `ಛೇ ಕಾರಿನಲ್ಲಿ ಪಾರ್ಕಿಂಗ್ ಸೆನ್ಸಾರ್ ಇದ್ದಿದ್ದರೆ' ಎಂದೆನಿಸಬಹುದು. ಆಫ್ಟರ್ ಮಾರ್ಕೇಟ್ಟಿನಲ್ಲಿ ಇಂತಹ ಪ್ಲಗ್ ಇನ್ ಪಾರ್ಕಿಂಗ್ ಸೆನ್ಸಾರ್‍ಗಳು ಸಿಗುತ್ತವೆ. ಇವನ್ನು ನಿಮ್ಮ ಕಾರಿನ ರಿವರ್ಸ್ ಲ್ಯಾಂಪಿನ ಹತ್ತಿರ ಜೋಡಿಸಿ ನಿರಾಳವಾಗಿ ಕಾರನ್ನು ಪಾರ್ಕಿಂಗ್ ಮಾಡಬಹುದು. ಇದನ್ನು ಅಳವಡಿಸಲು ನೀವು 3 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿ ಆಸುಪಾಸಿನಲ್ಲಿ ಖರ್ಚು ಮಾಡಬೇಕಾಗಬಹುದು.

ರಿಮೋಟ್ ಲಾಕಿಂಗ್
ಇಮೊಬಿಲೈಝರ್ ರಿಮೋಟ್ ಲಾಕಿಂಗ್  ವ್ಯವಸ್ಥೆ ಕಾರಿನಲ್ಲಿದ್ದರೆ ಉತ್ತಮ. ಇದನ್ನು ಕಾರಿಗೆ ಅಳವಡಿಸಲು ಹೆಚ್ಚು ಕಷ್ಟಪಡಬೇಕಿಲ್ಲ. ಇದರ ದರ 4ರಿಂದ 12 ಸಾವಿರ ರೂಪಾಯಿವರೆಗಿದೆ. ಆಟೊಕಾಪ್, ಮೈಕ್ರೊವಿಬಿಬಿ, ಪಿಯೊನಿಕ್ಸ್, ಸಿಲಿಕಾನ್, ನಿಪ್ಪಾನ್ ಇತ್ಯಾದಿ ಕಂಪನಿಗಳ ರಿಮೋಟ್ ಲಾಕಿಂಗ್ ಸಾಧನವನ್ನು ಅಳವಡಿಸಿಕೊಳ್ಳಬಹುದು.

ಲೆದರ್ ಅಪ್‍ಹೊಲೆಸ್ಟ್ರೆ

ಕಾರಿನ ಸೀಟು ಮತ್ತು ಇತರ ಪ್ರಮುಖ ಭಾಗಗಳಲ್ಲಿ ಮೆತ್ತನೆಯ ಚರ್ಮದ ಹೊದಿಕೆ ಇದ್ದರೆ ಚೆನ್ನಾಗಿತ್ತು ಎಂದು ನೀವು ಅಂದುಕೊಂಡಿರಬಹುದು. ಸಂಪೂರ್ಣ ಅಸಲಿ ಲೆದರ್ ಅಪ್‍ಹೊಲೆಸ್ಟ್ರೆ ಅಳವಡಿಸಿಕೊಳ್ಳುವುದು ದುಬಾರಿ. ಯಾಕೆಂದರೆ ಇವುಗಳ ವೆಚ್ಚ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿರುತ್ತವೆ. ಆದರೆ ಫಾಕ್ಸ್ ಲೆದರ್ ಹೊದಿಕೆಗಳು ಸುಮಾರು 15 ಸಾವಿರ ರೂಪಾಯಿಗೆ ದೊರಕುತ್ತವೆ. ವಿವಿಧ ಬಣ್ಣದ ಲೆದರ್ ಅಪ್‍ಹೊಲೆಸ್ಟ್ರೆ ಹಾಕಿಕೊಳ್ಳುವ ಮೂಲಕ ನಿಮ್ಮ ಕಾರಿನ ಅಂದ ಹೆಚ್ಚಿಸಿಕೊಳ್ಳಬಹುದು. ಸೆಖೆಗಾಲದಲ್ಲಿ ಇವು ಕೊಂಚ ಹೀಟ್ ಅನಿಸಬಹುದು.

ರಿಯರ್ ವ್ಯೂ ಕ್ಯಾಮರಾ
ನಿಮ್ಮ ಕಾರಿನಲ್ಲಿ ಡಿವಿಡಿ ಡಿಸ್‍ಪ್ಲೇ ಇದ್ದರೆ, ನೇರವಾಗಿ ಅದಕ್ಕ ರಿವರ್ಸ್ ಕ್ಯಾಮರಾವನ್ನು ಕನೆಕ್ಟ್ ಮಾಡಬಹುದು. ಆಕ್ಸೆಸರಿ ಮಾರುಕಟ್ಟೆಯಲ್ಲಿ ಡಿಸ್‍ಪ್ಲೇ ಜೊತೆಗೆ ರಿಯರ್ ವ್ಯೂ ಕ್ಯಾಮರಾಗಳ ಪೂರ್ತಿ ಸೆಟ್ ದೊರಕುತ್ತದೆ. ಕೆಲವೊಂದು ಕಂಪನಿಗಳು ಇಂತಹ ಕಿಟ್‍ನಲ್ಲಿ ಪಾರ್ಕಿಂಗ್ ಸೆನ್ಸಾರ್ ಸಹ ನೀಡುತ್ತವೆ. ಕ್ಯಾಮರಾ ಡಿಸ್‍ಪ್ಲೇಯನ್ನು ಕಾರಿನ ಡ್ಯಾಷ್‍ಬೋರ್ಡಿಗೆ ಜೋಡಿಸಬಹುದು. ಇದಕ್ಕೆ ಸುಮಾರು 3 ಸಾವಿರ ರೂಪಾಯಿಯಿಂದ 12 ಸಾವಿರ ರೂಪಾಯಿ ಖರ್ಚಾಗಬಹುದು.

ಬ್ಲೂಟೂಥ್ ಸಾಧನ
ಕಾರ್ ಡ್ರೈವ್ ಮಾಡುತ್ತ ಮೊಬೈಲ್ ಫೆÇೀನ್ ಬಳಕೆ ಮಾಡುವುದು ತಪ್ಪು. ಆದರೆ ಈಗಿನ ಹೈಎಂಡ್ ಕಾರುಗಳಲ್ಲಿರುವ ಬ್ಲೂಟೂಥ್ ಸಾಧನಗಳು ಆಟೋಮ್ಯಾಟಿಕ್ ಆಗಿ ಕರೆ ಸ್ವೀಕರಿಸಿ ಮಾತನಾಡಲು ಅನುವು ಮಾಡಿಕೊಡುತ್ತವೆ. ಜಾಬ್ರಾ, ಪ್ಲಾಂಟ್ರೊನ್ಕಿಸ್, ಮೊಟೊರೊಲಾ, ನೊಕಿಯಾ ಮುಂತಾದ ಕಂಪನಿಗಳ ಬ್ಲೂಟೂಥ್ ಸಾಧನ ಖರೀದಿಸಿ ಅದನ್ನು ಕಾರಿನ ಸನ್ ವಿಷರ್‍ಗೆ ಕ್ಲಿಪ್ ಮಾಡಿ ನಿಮ್ಮ ಮೊಬೈಲ್ ಫೆÇೀನಿಗೆ ಪೇರ್ ಮಾಡಬಹುದು. ಕೆಲವು ಮ್ಯೂಸಿಕ್ ಪ್ಲೇಯರ್‍ಗಳಲ್ಲಿ ಇಂತಹ ಬ್ಲೂಟೂಥ್ ಸಾಧನ ಇರುತ್ತದೆ.

ಪವರ್ ವಿಂಡೋಸ್
ನಿಮ್ಮ ಕಾರಿನಲ್ಲಿ ಪವರ್ ವಿಂಡೋ ಇಲ್ಲವೆಂದು ಚಿಂತೆ ಮಾಡುವ ಅಗತ್ಯವಿಲ್ಲ. ಕಾರ್ ಆಫ್ಟರ್ ಮಾರ್ಕೇಟ್‍ಗಳಲ್ಲಿ ಪವರ್ ವಿಂಡೋಸ್ ಸಿಸ್ಟಮ್ ಸಹ ದೊರಕುತ್ತವೆ. ಸುಮಾರು 3ರಿಂದ 8 ಸಾವಿರ ರೂಪಾಯಿಗೆ ನಿಮ್ಮ ಕಾರಿಗೆ ಪವರ್ ವಿಂಡೋಸ್‍ಗಳನ್ನು ಅಳವಡಿಸಿಕೊಳ್ಳಬಹುದು.

ಜಿಪಿಎಸ್ಅಪರಿಚಿತ ರಸ್ತೆಗಳಲ್ಲಿ ದಾರಿ ತೋರಿಸುವ ಜಿಪಿಎಸ್ ಸಾಧನಗಳನ್ನು ಸಹ ನಿಮ್ಮ ಕಾರಿಗೆ ಅಳವಡಿಸಿಕೊಳ್ಳಬಹುದು. ಈಗ ಹೆಚ್ಚಿನ ಸ್ಮಾರ್ಟ್‍ಫೆÇೀನ್‍ಗಳಲ್ಲೂ ಜಿಪಿಎಸ್ ಸಾಧನವಿದೆ. ಇವಿಷ್ಟು ಮಾತ್ರವಲ್ಲದೇ ನಿಮ್ಮ ಕಾರಿಗೆ ಫಾಗ್ ಲ್ಯಾಂಪ್, ಸನ್‍ರೂಫ್‍ಗಳನ್ನು ಅಳವಡಿಸಿಕೊಳ್ಳಬಹುದು. 4-8 ಸಾವಿರ ರೂಪಾಯಿ ವಿನಿಯೋಗಿಸಿದರೆ ಕಾರಿನ ಸ್ಟಿಯರಿಂಗ್ ವೀಲ್‍ಗೆ `ಸ್ಟಿಯರಿಂಗ್ ಆಡಿಯೋ ರಿಮೋಟ್' ಅಳವಡಿಸಿಕೊಳ್ಳಬಹುದು.

ಕಾರ್ ಮಾಡಿಫೈ ಅಂದರೆ ಇಷ್ಟೇ ಅಲ್ಲ. ನಿಮ್ಮಲ್ಲಿ ವೆಚ್ಚ ಮಾಡಲು ಸಾಕಷ್ಟು ಹಣವಿದ್ದರೆ ಟೈರ್, ಎಗ್ಸಾಸ್ಟ್, ಏರ್‍ಫಿಲ್ಟರ್, ಸ್ಪಾರ್ಕ್ ಪ್ಲಗ್ಸ್, ಎಂಜಿನ್ ಸೇರಿದಂತೆ ಕಾರಿನ ಪರ್ಫಾಮೆನ್ಸ್ ವಿಷಯಗಳನ್ನು ಸಹ ಅಪ್‍ಗ್ರೇಡ್ ಮಾಡಿಕೊಳ್ಳಬಹುದು.

Thursday, 29 September 2016

ಕಾರಿನ ಎಂಜಿನ್ ಹೇಗೆ ಕೆಲಸ ಮಾಡುತ್ತದೆ?

ಕಾರಿನ ಎಂಜಿನ್ ಹೇಗೆ ಕೆಲಸ ಮಾಡುತ್ತದೆ?

ಕಾರಿನ ಎಂಜಿನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲವೊಂದು ನಿಮ್ಮ ಮನದ ಮೂಲೆಯಲ್ಲಿ ಇರಬಹುದು. ಇಂಧನವನ್ನು ಚಲನೆಯಾಗಿ ಪರಿವರ್ತಿಸುವುದು ಎಂಜಿನ್ ಕೆಲಸ. ಅದಕ್ಕಾಗಿ ಎಂಜಿನ್ ಒಳಗೆ ಇಂಧನ ಉರಿಯುವ ಇಂಟರ್ನಲ್ ಕಂಬಶ್ಟನ್ ಸಿಸ್ಟಮ್ ಬಳಸಲಾಗುತ್ತದೆ.ಈ ಎಂಜಿನ್‍ಗಳಿಗೆ ಕಡಿಮೆ ಇಂಧನ ಸಾಕು.  ಹಳೆಕಾಲದ ಉಗಿರೈಲುಗಳಲ್ಲಿ ಎಂಜಿನ್ ಹೊರಗಡೆ ಕಲ್ಲಿದ್ದಲ್ಲಿನಂತಹ ಇಂಧನ ಉರಿಸಲಾಗುತ್ತಿತ್ತು.
ಎಂಜಿನ್ ಒಳಗೆ ಬೆಂಕಿ!
ಇಂಟರ್ನಲ್ ಕಂಬಶ್ಟನ್ ಎಂಜಿನ್‍ನ ಒಳಭಾಗದ ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಅತಿಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್‍ನಂತಹ ಇಂಧನದ ಹನಿ ಹಾಕಿ ಬೆಂಕಿಯ ಕಿಡಿ ಹಚ್ಚಿದರೆ ನಂಬಲು ಅಸಾಧ್ಯವಾದಷ್ಟು ಪ್ರಮಾಣದಲ್ಲಿ ಶಕ್ತಿಯು ಬಿಡುಗಡೆಯಾಗುತ್ತದೆ. ಕಾರಿನ ಚಕ್ರಗಳು ತಿರುಗಲು ಇವೇ ಅಶ್ವಶಕ್ತಿ. ಹೆಚ್ಚಿನ ಕಾರುಗಳಲ್ಲಿ ನಾಲ್ಕು ಸ್ಟ್ರೋಕ್(ಕಿಡಿ)ನ ಕಂಬಶ್ಟನ್ ಸೈಕಲ್ ಸಿಸ್ಟಮ್ ಬಳಸಲಾಗುತ್ತದೆ. ಇದಕ್ಕೆ ಒಟ್ಟೊ ಸೈಕಲ್ ಎಂಬ ಹೆಸರು ಸಹ ಇದೆ. 1967ರಲ್ಲಿ ನಿಕೊಲಾಸ್ ಒಟ್ಟೊ ಈ ಟೆಕ್ನಾಲಜಿ ಕಂಡುಹಿಡಿದಿದ್ದರು.

ಎಂಜಿನ್ ಒಳಗೆ ಏನಿದೆ?
ಇಂಟೆಕ್(ಇಂಧನ ಒಳಬರುವುದು), ಕಂಪ್ರೆಷನ್ (ಸಂಕೋಚನ), ಕಂಬಸ್ಟನ್(ದಹನ) ಮತ್ತು ಎಗ್ಸಾಸ್ಟ್ ಸ್ಟ್ರೋಕ್(ಹೊಗೆ ಹೊರಕ್ಕೆ) ಎಂಬ ನಾಲ್ಕು ಸ್ಟ್ರೋಕ್‍ಗಳು ಎಂಜಿನ್ ಒಳಗೆ ಕಾರ್ಯನಿರ್ವಹಿಸುತ್ತವೆ. ಎಂಜಿನ್ ಒಳಗೆ ನೂರಾರು ಬಿಡಿಭಾಗಗಳಿವೆ. ಕ್ಯಾಮ್‍ಶಾಫ್ಟ್, ವಾಲ್ವ್ ಕವರ್, ಇಂಟೆಕ್ ವಾಲ್ವ್, ಇಂಟೆಕ್ ಪೆÇೀರ್ಟ್, ಹೆಡ್, ಕೂಲೆಂಟ್, ಎಂಜಿನ್ ಬ್ಲಾಕ್, ಆಯಿಲ್ ಪಾನ್, ಆಯಿಲ್ ಸುಂಪ್, ಸ್ಪಾರ್ಕ್ ಪ್ಲಗ್, ಎಗ್ಸಾಟ್ ವಾಲ್ವ್, ಎಗ್ಸಾಟ್ ಪೆÇೀರ್ಟ್, ಪಿಸ್ಟನ್, ಕನೆಕ್ಟಿಂಗ್ ರಾಡ್ಸ್, ಕ್ರಾಂಕ್‍ಶಾಫ್ಟ್ ಇತ್ಯಾದಿಗಳಿವೆ.

ಹೇಗೆ ಕೆಲಸ ಮಾಡುತ್ತದೆ?
ಎಂಜಿನ್‍ನಲ್ಲಿರುವ ಪಿಸ್ಟನನ್ನು ಕನೆಕ್ಟಿಂಗ್ ರಾಡ್ ಮೂಲಕ ಕ್ರಾಂಕ್‍ಶಾಫ್ಟ್‍ಗೆ ಸಂಪರ್ಕ ಮಾಡಲಾಗಿರುತ್ತದೆ. ಕ್ರಾಂಕ್‍ಶಾಫ್ಟ್ ಸುತ್ತುತ್ತಿರುವಾಗ ಕ್ಯಾನನ್ ಮರುಹೊಂದಿಕೊಳ್ಳುತ್ತದೆ. ಎಂಜಿನ್ ಸಿಲಿಂಡರ್ ಒಳಗಿರುವ ಪಿಸ್ಟನ್ ಮೇಲಿನಿಂದ ಕೆಳಗೆ ಬರಲು ಆರಂಭವಾದಗ ಇಂಟೆಕ್ ಕವಾಟ ತೆರೆದುಕೊಳ್ಳುತ್ತದೆ. ಅದರಿಂದ ಅಲ್ಪ ಪ್ರಮಾಣದ ಇಂಧನ ಮತ್ತು ಗಾಳಿಯ ಮಿಶ್ರಣ ಸಿಲಿಂಡರ್ ಒಳಗೆ ಬಂದಾಗ ಪಿಸ್ಟನ್ ಕೆಳಗೆ ಬರುತ್ತದೆ. ಮತ್ತೆ ಪಿಸ್ಟನ್ ಮೇಲೆ ಬಂದಾಗ ಸ್ಪಾರ್ಕ್ ಪ್ಲಗ್ ಉಂಟು ಮಾಡಿದ ಕಿಡಿಯು ಇಂಧನ/ಗಾಳಿ ಮಿಶ್ರಣವನ್ನು ಸ್ಪೋಟಿಸಿದಾಗ ಬಿಡುಗಡೆಯಾಗುವ ಶಕ್ತಿಗೆ ಪಿಸ್ಟನ್ ಕೆಳಗೆ ಬರುತ್ತದೆ. ಮತ್ತೆ ಪಿಸ್ಟನ್ ಮೇಲಕ್ಕೆ ಹೋದಾಗ ಇಂಟೆಂಕ್ ಕವಾಟದ ಮೂಲಕ ಹೊಗೆ ಹೊರಕ್ಕೆ ಹೋಗುತ್ತದೆ. ಕ್ಯಾಮ್‍ಶಾಫ್ಟ್ ಸಮರ್ಪಕವಾಗಿ ತಿರುಗಿದಾಗ ಇಂಟೆಕ್ ಮತ್ತು ಎಗ್ಸಾಸ್ಟ್ ಕವಾಟಗಳು ತೆರೆಯುವುದು ಮತ್ತು ಮುಚ್ಚುವುದು ನಡೆಯುತ್ತಿರುತ್ತವೆ. ಪಿಸ್ಟನ್ ಮೇಲೆ ಕೆಳಗೆ ಬರುತ್ತಿರುವಾಗ ಅದಕ್ಕೆ ಕನೆಕ್ಟ್ ಮಾಡಿದ ಕ್ರಾಂಕ್‍ಶಾಫ್ಟ್ ತಿರುಗುತ್ತದೆ(ಸೈಕಲ್ ತುಳಿದಾಗ ಆಗುವಂತೆ).
ನಾವೀಗ ಕೇವಲ ಒಂದು ಪಿಸ್ಟನ್ ಸಿಲಿಂಡರ್ ತಿರುಗುವ ಬಗ್ಗೆ ತಿಳಿದುಕೊಂಡೆವು. ಆದರೆ ಹೆಚ್ಚಿನ ಕಾರುಗಳು ಒಂದಕ್ಕಿಂತ ಹೆಚ್ಚು ಸಿಲಿಂಡರ್ ಹೊಂದಿರುತ್ತವೆ. ನಾಲ್ಕು, ಆರು, ಎಂಟು ಸಿಲಿಂಡರ್‍ನ ಎಂಜಿನ್‍ಗಳು ಇರುತ್ತವೆ. ಹೀಗೆ ಹಲವು ಸಿಲಿಂಡರ್‍ಗಳು ಇರುವಾಗ ಸಿಲಿಂಡರ್‍ಗಳನ್ನು ಹೆಚ್ಚಾಗಿ ಮೂರು ರೀತಿಯಾಗಿ(ಇನ್‍ಲೈನ್, ವಿ ಅಥವಾ ಫ್ಲಾಟ್) ಜೋಡಿಸಲಾಗಿರುತ್ತದೆ.

ಯಾವುದಕ್ಕೆ ಏನು ಕೆಲಸ?
ಸ್ಪಾರ್ಕ್ ಪ್ಲಗ್: ಇಂಧನ/ಗಾಳಿ ಮಿಶ್ರಣಕ್ಕೆ ಬೆಂಕಿ ಹಾಕುವುದು ಸ್ಪಾರ್ಕ್ ಪ್ಲಗ್ ಕಾರ್ಯ. ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಸ್ಪಾರ್ಕ್ ಆದರೆ ಮಾತ್ರ ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ವಾಲ್ವ್: ಇಂಟೆಕ್ ಮತ್ತು ಎಗ್ಸಾಟ್ ವಾಲ್ವ್(ಕವಾಟ)ಗಳು ಸರಿಯಾದ ಸಮಯಕ್ಕೆ ತೆರೆದುಕೊಂಡರೆ ಮಾತ್ರ ಸರಿಯಾದ ಸಮಯಕ್ಕೆ ಗಾಳಿ ಮತ್ತು ಇಂಧನ ಮಿಶ್ರಣ ಒಳಬರುತ್ತದೆ. ಸಂಕೋಚನ ಮತ್ತು ದಹನ ಸಮಯದಲ್ಲಿ ಎರಡೂ ಕವಾಟಗಳು ಮುಚ್ಚಿರುತ್ತವೆ.
ಪಿಸ್ಟನ್: ಸಿಲಿಂಡರ್ ಒಳಭಾಗದಲ್ಲಿ ಮೇಲೆ ಕೆಳಗೆ ಹೋಗುವ ಸಿಲಿಂಡರ್ ತುಂಡು.
ಪಿಸ್ಟನ್ ರಿಂಗ್‍ಗಳು: ಸಿಲಿಂಡರ್ ಒಳಭಾಗದಿಂದ ಯಾವುದೇ ಲೀಕ್ ಆಗದಂತೆ, ದಕ್ಷತೆಯಿಂದ ಇಂಧನ/ಗಾಳಿ ದಹನವಾಗುವಂತೆ ನೋಡಿಕೊಳ್ಳುತ್ತದೆ.
ಕನೆಕ್ಟಿಂಗ್ ರಾಡ್: ಪಿಸ್ಟನನ್ನು ಕ್ರಾಂಕ್‍ಶಾಫ್ಟ್‍ಗೆ ಕನೆಕ್ಟ್ ಮಾಡೋ ಕೆಲಸವನ್ನು ಕನೆಕ್ಟಿಂಗ್ ರಾಡ್ ಮಾಡುತ್ತದೆ. ಕ್ರಾಂಕ್‍ಶಾಫ್ಟ್: ಪಿಸ್ಟನ್ ಮೇಲೆ ಕೆಳಗೆ ಚಲಿಸಿದಾಗ ಕ್ರಾಂಕ್‍ಶಾಫ್ಟ್ ತಿರುಗುತ್ತದೆ.
ಎಂಜಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಇತರೆ ಅಂಶಗಳು.
ವಾಲ್ವ್ ಟ್ರೈನ್: ಕವಾಟಗಳು ಮತ್ತು ಇತರ ಮೆಕಾನಿಸಂ ಇರುವ ವಾಲ್ವ್ ಟ್ರೈನ್‍ಗಳು ಕಾಮ್‍ಶಾಫ್ಟ್‍ನ್ನು ತೆರಯಲು ಮತ್ತು ಮುಚ್ಚಲು ನೆರವಾಗುತ್ತದೆ. ಹೆಚ್ಚಿನ ಆಧುನಿಕ ಎಂಜಿನ್‍ಗಳು ಓವರ್‍ಹೆಡ್ ಕ್ಯಾಮ್‍ಗಳನ್ನು ಹೊಂದಿರುತ್ತವೆ.
ರಾಡ್: ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸಲು ಕ್ಯಾಮ್‍ನ ಕೆಳಗೆ ಇರುವ ರಾಡ್‍ಗಳು ಸಹ ಸಮರ್ಪಕವಾಗಿ ಕೆಲಸ ಮಾಡಬೇಕು.
ಟೈಮಿಂಗ್ ಬೆಲ್ಟ್: ಟೈಮಿಂಗ್ ಚೈನ್ ಲಿಂಕ್ ಸಹ ಎಂಜಿನ್‍ನಲ್ಲಿ ಅತ್ಯಂತ ಅಗತ್ಯದ ಭಾಗ. ಈ ಚೈನ್ ಕ್ರಾಂಕ್‍ಶಾಫ್ಟ್‍ನಿಂದ ಕ್ಯಾಮ್‍ಶಾಫ್ಟ್‍ಗೆ ಲಿಂಕ್ ಮಾಡುತ್ತದೆ.
ಕ್ಯಾಮ್‍ಶಾಫ್ಟ್: ಹೆಚ್ಚಿನ ಆಧುನಿಕ ಎಂಜಿನ್‍ಗಳು ಪ್ರತಿಸಿಲಿಂಡರ್‍ಗೆ ನಾಲ್ಕು ವಾಲ್ವ್‍ಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಎರಡು ಇಂಟೆಕ್‍ಗೆ ಮತ್ತು ಎರಡು ಎಗ್ಸಾಸ್ಟ್‍ಗೆ ಇರುತ್ತದೆ. ಇದರಿಂದಾಗಿ ಒಂದು ಸಿಲಿಂಡರ್‍ಗೆ ಎರಡು ಕ್ಯಾಮ್‍ಶಾಫ್ಟ್‍ಗಳು ಬೇಕಿರುತ್ತದೆ. ಇದಕ್ಕಾಗಿ ಡ್ಯೂಯಲ್ ಓವರ್‍ಹೆಡ್ ಕ್ಯಾಮ್ಸ್ ಬಳಕೆ ಮಾಡಲಾಗುತ್ತದೆ.

ಅಯ್ಯೋ ಎಂಜಿನ್ ಸ್ಟಾರ್ಟ್ ಆಗ್ತಿಲ್ಲ!
ಮುಂಜಾನೆ ಇಗ್ನಿಷನ್ ಕೀಲಿಕೈ ತಿರುಗಿಸಿದಾಗ ಕಾರು ಸ್ಟಾರ್ಟ್ ಆಗದ ಅನುಭವ ನಿಮಗೆ ಆಗಿರಬಹುದು. ಎಂಜಿನ್ ಸ್ಟಾರ್ಟ್ ಆಗದಿರಲು ನೂರಾರು ಕಾರಣಗಳು ಇರಬಹುದು. ಆದರೆ ಮುಖ್ಯವಾಗಿ ಮೂರು ಕಾರಣಗಳಿವೆ.
ಅಸಮರ್ಪಕ ಇಂಧನ ಮಿಶ್ರಣ: ಇಂಧನ ಖಾಲಿಯಾದಗ ಎಂಜಿನ್‍ನೊಳಗೆ ಗಾಳಿ ಮಾತ್ರ ಪ್ರವೇಶಿಸುತ್ತದೆ. ಇಂಧನ ಪ್ರವೇಶಿಸುವುದಿಲ್ಲ. ಕೆಲವೊಮ್ಮೆ ಏರ್ ಇಂಟೆಕ್ ಮುಚ್ಚಿದ್ದರೆ ಇಂಧನ ಪೂರೈಕೆ ಆಗುತ್ತದೆ, ಗಾಳಿ ಪೂರೈಕೆ ಆಗುವುದಿಲ್ಲ. ಒಮ್ಮೊಮ್ಮೆ ಹೆಚ್ಚು ಇಂಧನ, ಕಡಿಮೆ ಗಾಳಿ ಪೂರೈಕೆಯಾಗಬಹುದು. ಇಂಧನ ಟ್ಯಾಂಕ್‍ನಲ್ಲಿ ನೀರು ಪ್ರವೇಶಿಸಿದರೂ ಇಂಧನದ ಗುಣಮಟ್ಟ ಹಾಳಾಗಿ ಸ್ಟಾರ್ಟಿಂಗ್ ಟ್ರಬಲ್ ನೀಡಬಹುದು.
ಕಂಪ್ರೆಷನ್ ಪ್ರಾಬ್ಲಂ: ಗಾಳಿ ಮತ್ತು ಇಂಧನ ಸಮರ್ಪಕವಾಗಿ ಸಂಕೋಚನ ಆಗದೆ ಇದ್ದರೆ ಕಂಬಶ್ಟನ್ ಅಥವಾ ದಹನ ಪ್ರಕ್ರಿಯೆ ಸಮರ್ಪಕವಾಗಿ ನಡೆಯದು. ಕಂಪ್ರೆಷನ್‍ನಲ್ಲಿ ತೊಂದರೆ ಉಂಟಾಗಲು ಪಿಸ್ಟನ್ ರಿಂಗ್ ಸವೆದಿರುವುದೂ ಕಾರಣವಾಗಿರಬಹುದು. ಇಂಟೆಕ್ ಅಥವಾ ಎಗ್ಸಾಸ್ಟ್ ಕವಾಟಗಳು ಸರಿಯಾಗಿ ಸೀಲ್ ಆಗದಿದ್ದರೆ ಕಂಪ್ರೆಷನ್ ಸಮಯದಲ್ಲಿ ಲೀಕ್ ಉಂಟಾಗುತ್ತದೆ.
ಸ್ಪಾರ್ಕ್ ಆಗದಿರುವುದು: ಸ್ಪಾರ್ಕ್ ಪ್ಲಗ್‍ನ ವೈರ್‍ನಲ್ಲಿ ಉಂಟಾಗುವ ತೊಂದರೆಯಿಂದ ಕಿಡಿ ಹತ್ತಿಕೊಳ್ಳದಿದ್ದರೆ ಎಂಜಿನ್ ಸ್ಟಾರ್ಟ್ ಆಗದು. ಕೆಲವೊಮ್ಮೆ ಕಿಡಿ ಬೇಗ ಅಥವಾ ಲೇಟಾಗಿ ಹತ್ತಿಕೊಂಡರೂ ಎಂಜಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದು.
ಇನ್ನಿತರ ಕಾರಣಗಳು: ಎಂಜಿನ್ ಸ್ಟಾರ್ಟ್ ಆಗದಿರಲು ಬ್ಯಾಟರಿ ಹಾಳಾಗಿರುವುದು, ಎಂಜಿನ್ ಕವಾಟಗಳು ಸರಿಯಾದ ಸಮಯಕ್ಕೆ ತೆರೆಯದೆ ಅಥವಾ ಮುಚ್ಚದೆ ಇರುವುದು ಇತ್ಯಾದಿ ಕಾರಣಗಳು ಇವೆ. ಆಯಿಲ್ ಇಲ್ಲದೆ ಪಿಸ್ಟನ್‍ಗೆ ಸರಾಗವಾಗಿ ಮೂವ್ ಆಗಲು ಸಾಧ್ಯವಾಗದೆ ಇದ್ದರೆ ಎಂಜಿನ್ ಸೀಝ್ ಆಗಬಹುದು.

ಕೂಲಾಗಿರಲಿ ಎಂಜಿನ್
ಎಂಜಿನ್ ಕೂಲಿಂಗ್: ಹೆಚ್ಚಿನ ಕಾರುಗಳಲ್ಲಿ ರೇಡಿಯೇಟರ್ ಮತ್ತು ವಾಟರ್ ಪಂಪ್ ಒಳಗೊಂಡಿರುವ ಕೂಲಿಂಗ್ ಸಿಸ್ಟಮ್ ಇರುತ್ತದೆ. ಸಿಲಿಂಡರ್ ಸುತ್ತಮುತ್ತ ನಾಳಗಳಲ್ಲಿ ನೀರು ಹರಿಯುತ್ತದೆ ಮತ್ತು ಮತ್ತೆ ರೇಡಿಯೇಟರ್ ಪ್ರವೇಶಿಸಿ ನಾಳಗಳಲ್ಲಿ ಹೊರಬರುತ್ತದೆ. ಏರ್‍ಕೂಲಿಂಗ್‍ನಿಂದ ಎಂಜಿನ್‍ಗೆ ತಂಪಾಗಿ ಹಾಯೆನಿಸುತ್ತದೆ. ಆದರೆ ಇದು ಎಂಜಿನ್ ಬಾಳ್ವಿಕೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು ತಗ್ಗಿಸುತ್ತದೆ.

ಏರ್ ಇಂಟೆಕ್: ಹೆಚ್ಚಿನ ಕಾರುಗಳಲ್ಲಿ ಏರ್ ಫಿಲ್ಟರ್‍ನಿಂದ ನೇರವಾಗಿ ಸಿಲಿಂಡರ್‍ಗೆ ಗಾಳಿಯನ್ನು ಕಳುಹಿಸಿಕೊಡಲಾಗುತ್ತದೆ. ಟರ್ಬೊ ಜಾರ್ಜ್‍ಡ್ ಅಥವಾ ಸೂಪರ್ ಚಾರ್ಜ್‍ಡ್ ಎಂಜಿನ್‍ಗಳಲ್ಲಿ ಎಂಜಿನ್‍ಗೆ ಮೊದಲು ಏರ್ ಬರುತ್ತದೆ. ಇದರಿಂದ ಕಾರ್ಯಕ್ಷಮತೆ ಹೆಚ್ಚಿರುತ್ತದೆ.



ಎಂಜಿನ್ ಲ್ಯುಬ್ರಿಕೇಷನ್: ಎಂಜಿನ್‍ನಲ್ಲಿ ಆಯಿಲ್ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಲುಬ್ರಿಕೇಷನ್ ವ್ಯವಸ್ಥೆಯು ಎಂಜಿನ್‍ನ ಎಲ್ಲಾ ಚಲಿಸುವ ಬಿಡಿಭಾಗಗಳಿಗೆ ಸಮರ್ಪಕವಾಗಿ ಆಯಿಲ್ ದೊರಕುವಂತೆ ಮಾಡುತ್ತದೆ. ಇದರಿಂದ ಎಂಜಿನ್‍ನ ಬಿಡಿಭಾಗಗಳು ಸಮರ್ಪಕವಾಗಿ ಚಲಿಸುತ್ತವೆ.- Praveen Chandra Puttur

(ಪೂರಕ ಮಾಹಿತಿ: ಹೌಸ್ಟಫ್ಸ್‍ವಕ್ರ್ಸ್‍ಡಾಟ್‍ಕಾಂ).



More information in web





How A Car Engine Works (animated infographic) - Jacob O'Neal





Wikipedia:

Internal combustion engine - Wikipedia, the free encyclopedia