ಮಳೆಗಾಲದಲ್ಲಿ ಕಾರಿನ ಕಾಳಜಿ ಹೇಗಿರಬೇಕು? ಡ್ರೈವಿಂಗ್ ಮಾಡುವಾಗ ಅನುಸರಿಸಬೇಕಾದ ಮುನ್ನೇಚರಿಕೆ ಕ್ರಮಗಳೇನು? ಮಾನ್ಸೂನ್‍ನಲ್ಲಿ ಡ್ರೈವಿಂಗ್ ಮಾಡುವ ಸಮಸ್ತ ವಾಹನ ಚಾಲಕರಿಗೆ ಅನುಕೂಲವಾಗುವಂತಹ ಸಲಹೆಗಳು ಇಲ್ಲಿವೆ.
ಮಾರ್ಗಶಿರ, ಪುಷ್ಯ, ಮಾಘ, ಪಾಲ್ಗುಣ, ಚೈತ್ರ, ವೈಶಾಖ, ಜೇಷ್ಠ.... ಹೀಗೆ ಒಂದೊಂದೇ ಮಾಸಗಳು ಮುಗಿದು ಮಳೆ ಶುರುವಾಗುತ್ತಿದೆ. ವರ್ಷ ಋತುವಿನಲ್ಲಿ ಹ್ಯಾಪಿಯಾಗಿ ಉಲ್ಲಾಸ, ಉತ್ಸಾಹದಿಂದ ಡ್ರೈವಿಂಗ್ ಮಾಡುವುದು ನಿಮಗೆ ಇಷ್ಟವಾಗಿರಬಹುದು. ಅಥವಾ ಮಳೆಯಲ್ಲಿ ಕಾರಿನ ಸಹವಾಸವೇ ಬೇಡವೆಂದು ತೀರ್ಮಾನಿಸಿರಬಹುದು. ಮಳೆಗಾಲದಲ್ಲಿ ವಾಹನಗಳ ಕುರಿತು ಹೆಚ್ಚುವರಿ ಕಾಳಜಿ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ನಿಮ್ಮಂತೆ ನಿಮ್ಮ ಕಾರಿಗೂ ಥಂಡಿಯಾಗಬಹುದು.
ಕಾರು ಏರುವ ಮುನ್ನ
- ಮೊದಲನೆಯದಾಗಿ ನಿಮ್ಮ ಕಾರಿನ ಕಂಡಿಷನ್ ಹೇಗಿದೆ ಎಂದು ಪರಿಶೀಲಿಸಿ. ಅಂದರೆ ಟೈರ್, ಬ್ರೇಕ್, ವೈಪರ್ ಇವೆಲ್ಲ ಸಮರ್ಪಕವಾಗಿ ಕೆಲಸ ಮಾಡುವುದೇ ಚೆಕ್ ಮಾಡಿ. ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದಾದರೆ ಬದಲಾಯಿಸಿ ಅಥವಾ ಸರಿಪಡಿಸಿ.
- ಟೈರ್ ಗುಣಮಟ್ಟ ಹೇಗಿದೆಯೆಂದು ತಿಳಿದುಕೊಳ್ಳಿ. ಟೈರ್ ಟ್ರೀಡ್ ಸವೆದಿರುವುದೇ? ಚಿಕ್ಕ ಮುಳ್ಳು ಚುಚ್ಚಿದರೂ ಠುಸ್ಸೆನ್ನಬಹುದೇ? ಪರಿಶೀಲಿಸಿ. ಮಳೆಗಾಲದಲ್ಲಿ ಟೈರ್ ಗುಣಮಟ್ಟ ಪರಿಶೀಲಿಸಿಯೇ ಕಾರು ಏರಿ.
- ಮಳೆಗಾಲದಲ್ಲಿ ಕಾರಿನ ಬೆಳಕಿನ ವ್ಯವಸ್ಥೆ ಹೆಚ್ಚು ಸಮರ್ಪಕವಾಗಿರಬೇಕು. ಹೆಡ್‍ಲೈಟ್ ಬೀಮ್‍ಗಳು ಸರಿಯಾಗಿ ಫೆÇೀಕಸ್ ಆಗುವುದೇ ಗಮನಿಸಿ. ಪಾರ್ಕಿಂಗ್ ಲೈಟ್, ಫಾಗ್ ಲ್ಯಾಂಪ್‍ಗಳನ್ನೂ ಪರಿಶೀಲಿಸಿ. ಉರಿಯದ ಬಲ್ಬ್‍ಗಳನ್ನು ಬದಲಾಯಿಸಿ.
- ಬ್ರೇಕ್, ಆಕ್ಸಿಲರೇಟರ್, ಕ್ಲಚ್ ಪೆಡಲ್‍ಗಳನ್ನು ಗಮನಿಸಿ. ಅವುಗಳ ಮೇಲಿರುವ ರಬ್ಬರ್ ಸವೆದಿದ್ದರೆ ಬದಲಾಯಿಸಿ. ಮಳೆಗಾಲದಲ್ಲಿ ಬ್ರೇಕ್ ಸರಿಯಾಗಿ ಹಿಡಿಯಲು ಪೆಡಲ್‍ಗಳು ಉತ್ತಮ ಕಂಡಿಷನ್‍ನಲ್ಲಿರುವುದು ಅಗತ್ಯ.
- ಕಾರಿನೊಳಗೆ ನೀರು ನುಗ್ಗುವ ಸಾ`್ಯತೆಗಳನ್ನು ಕಡಿಮೆ ಮಾಡಿ. ಡ್ರೈನ್ ಹೋಲ್ ಪ್ಲಗ್, ಕಾರಿನ ಕಿಟಕಿ ಮತ್ತು ಬಾಗಿಲಿನ ರಬ್ಬರ್ ಬೀಡಿಂಗ್‍ಗಳನ್ನು ಪರಿಶೀಲಿಸಿ. ಇವುಗಳನ್ನು ಸರಿಪಡಿಸುವುದರಿಂದ ಕೇವಲ ನೀರು ಒಳಬರುವುದನ್ನು ತಡೆಯುವುದು ಮಾತ್ರವಲ್ಲದೇ ಶಾರ್ಟ್‍ಸಕ್ರ್ಯೂಟ್ ಅಪಾಯಗಳು ಕಡಿಮೆಯಾಗುತ್ತವೆ.
- ಕಾರಿನ ವೈಪರ್ ಸಮರ್ಪಕವಾಗಿ ಕೆಲಸ ಮಾಡುವುದೇ ಪರಿಶೀಲಿಸಿರಿ, ಮುಂ`Áಗದ ವೈಂಡ್ ಶೀಲ್ಡ್ ಗಾಜು ಶು`್ರವಾಗಿರಲಿ.
- ಸುರಕ್ಷತೆಯ ಕಿಟ್‍ಗಳು: ಕಾರಿನೊಳಗೆ ಫಸ್ಟ್ ಏಯ್ಡ್ ಬಾಕ್ಸ್, ಟಾರ್ಚ್, ಕೊಡೆ ಇತ್ಯಾದಿಗಳಿರಲಿ.
ಕಾರು ಏರಿದ ನಂತರ
ಈಗಿನ ಹೆಚ್ಚಿನ ವಾಹನಗಳಿಗೆ, ಅವುಗಳ ಎಂಜಿನ್‍ಗಳಿಗೆ ನೀರು ಅಪಾಯಕಾರಿಯಲ್ಲ. ಆದರೆ ಮಳೆಗಾಲದಲ್ಲಿ ಕಲುಷಿತ ನೀರು ಎಂಜಿನ್ ಇತ್ಯಾದಿಗಳಿಗೆ ಹಾನಿ ಮಾಡಬಹುದು. ಜೊತೆಗೆ ಮಳೆಗಾಲದಲ್ಲಿ ಡ್ರೈವಿಂಗ್ ಮಾಡುವಾಗ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯೂ ಇದೆ.
-ಅನಿವಾರ್ಯತೆ ಇಲ್ಲದಿದ್ದರೆ ಜಲಾವೃತ ರಸ್ತೆಗಳಲ್ಲಿ ಸಂಚರಿಸಬೇಡಿ. ಪ್ರಯಾಣಿಸುವುದು ಅನಿವಾರ್ಯವೆಂದಾದರೆ ಆದಷ್ಟು ಎತ್ತರದ `Áಗಗಳಲ್ಲಿ ಚಲಾಯಿಸಿ. ನೀರು ಎಷ್ಟು ಆಳವಿದೆ ಎಂದು ಖಚಿತವಾಗಿ ತಿಳಿಯದಿದ್ದರೆ, ಆ ರಸ್ತೆಯ ಪರಿಚಯ ನಿಮಗಿಲ್ಲದಿದ್ದರೆ ನೀರು ಕಡಿಮೆಯಾಗುವರೆಗೆ ಕಾಯುವುದು ಶ್ರೇಯಸ್ಸು.
- ಎಂಜಿನ್ ಜಾಮ್ ಆಗುವುದನ್ನು ತಪ್ಪಿಸಲು ನಿ`Áನವಾಗಿ ಕಾರು ಚಲಾಯಿಸಿ. ಪ್ರವಾಹದ ವಿರುದ್ಧ ದಿಕ್ಕಿಗೆ ಡ್ರೈವಿಂಗ್ ಮಾಡಬೇಡಿ. ವೇಗದ ಪ್ರಯಾಣ ಬೇಡ. ಜಲಾವೃತ ರಸ್ತೆಯಲ್ಲಿ ಟಾಪ್‍ಗಿಯರ್‍ಗಳ ಬಳಕೆ ಬೇಡ. ಲೋ ಗಿಯರ್‍ನಲ್ಲಿ ಚಲಾಯಿಸಿ.
- ರೇಡಿಯೇಟರ್ ಫ್ಯಾನ್ ಕಾರ್ಯಕ್ಷಮತೆ ಪರೀಕ್ಷಿಸಿಕೊಳ್ಳಿ. ನೀರು ಒಳಹೋದರೆ ಎಂಜಿನ್ ಸ್ಥಗಿತಗೊಳ್ಳುವ ಅಪಾಯವಿದೆ.
- ನಡುನೀರಿನಲ್ಲಿ ಕಾರು ಮೂವ್ ಆಗದಿದ್ದರೆ ಒಂದೇ ಸಮನೆ ಆಕ್ಸಿಲರೇಟರ್ ತುಳಿಯಬೇಡಿ. ಕಾರಿನಿಂದ ಇಳಿದು ಕಾರನ್ನು ತಳ್ಳಿಕೊಂಡು ಬದಿಯಲ್ಲಿ ನಿಲ್ಲಿಸಿ. ಮೆಕಾನಿಕ್ ನೆರವು ಪಡೆಯಿರಿ.
- ಜಲಾವೃತ ರಸ್ತೆಯಲ್ಲಿ ಚಾಲನೆ ಮಾಡುತ್ತಿರುವಾಗ ಏರ್ ಕಂಡಿಷನ್ ಆನ್ ಮಾಡದಿರಿ. ಕಾರಿನ ಸೆಂಟ್ರಲ್ ಲಾಕಿಂಗ್ ಆನ್ ಮಾಡಬೇಡಿ. ಎಲ್ಲಾದರೂ ಶಾರ್ಟ್ ಸಕ್ರ್ಯೂಟ್ ಆದರೆ ಲಾಕಿಂಗ್ ಸಿಸ್ಟಮ್ ಕೆಲಸ ಮಾಡದೆ ನೀವು ಕಾರಿನೊಳಗೆ ಬಂಯಾಗುವ ಅಪಾಯವಿದೆ. ಕಾರಿನೊಳಗೆ ಹ್ಯಾಮರ್ ಅಥವಾ ಗಟ್ಟಿಯಾದ ವಸ್ತುಗಳಿರಲಿ. ಕಾರಿನೊಳಗೆ ಬಂಯಾದ ಸ್ಥಿತಿಯಲ್ಲಿ ಕಿಟಕಿ ಗಾಜು ಹೊಡೆಯಲು ಇದು ನೆರವಾಗಬಹುದು.
- ಕಾರಿನೊಳಗೆ ನೀರು ನುಗ್ಗಿದರೆ ಇಗ್ನಿಷನ್ ಆನ್ ಮಾಡಬೇಡಿ. ಶಾರ್ಟ್ ಸಕ್ರ್ಯೂಟ್ ಆಗುವ ಅಪಾಯವಿದೆ. ಮಳೆಗಾಲದಲ್ಲಿ ನೀರಿಗೆ ಸಿಲುಕಿ ಕಾರಿಗೆ ಹಾನಿಯಾದರೆ ಮೆಕಾನಿಕ್‍ಗಳ ನೆರವು ಪಡೆದು ರಿಪೇರಿ ಮಾಡಿ.
ಹೊಸ ಕಾರುಗಳು ಮಳೆಗಾಲದಲ್ಲಿ ಹೆಚ್ಚು ಕಿರಿಕ್ ನೀಡುವುದಿಲ್ಲ. ಆದರೆ ಹಳೆಕಾರುಗಳ ಆರೋಗ್ಯ ಮಳೆಗಾಲದಲ್ಲಿ ಬೇಗ ಕೆಡುತ್ತದೆ. ಕಾರಿನ ಬಾಡಿಯಲ್ಲಿ ಗೀರುಗಳಾಗಿದ್ದರೆ, ಪೇಂಟ್ ಹೋಗಿದ್ದರೆ ಪೇಂಟ್ ನೀಡಿ. ಮಳೆಗಾಲದಲ್ಲಿ ನೀರು ತಾಗಿ ಇವು ಇನ್ನಷ್ಟು ಅಂದಗೆಡಿಸುತ್ತದೆ. ಇದು ನಿಮ್ಮ ಕಾರಿನ ಮರುಮಾರಾಟ ಮೌಲ್ಯ ಕಡಿಮೆ ಮಾಡುತ್ತದೆ. ಕಾರಿನೊಳಗೆ ರಬ್ಬರ್ ಮ್ಯಾಟ್‍ಗಳನ್ನು ಬಳಸಿ. ಕಾರಿನೊಳಗೆ ಹೆಚ್ಚು ಒದ್ದೆಯಾಗಲು ಅವಕಾಶ ನೀಡಬೇಡಿ. ಹ್ಯಾಪಿ ಜರ್ನಿ.
- Praveen Chandra Puttur
0 ಪ್ರತಿಕ್ರಿಯೆಗಳು: