Monday, 13 November 2017

ಬಿಸ್ನೆಸ್ ಇಂಗ್ಲಿಷ್ ಕಲಿಯಿರಿ ಉದ್ಯೋಗ ಪಡೆಯಿರಿ

SHARE
ವಿವಿಧ ಕಾಪೆರ್Çರೇಟ್ ಆಫೀಸ್‍ಗಳಲ್ಲಿ, ಅಂತಾರಾಷ್ಟ್ರೀಯ ಕ್ಲಯೆಂಟ್‍ಗಳ ಜೊತೆ ಮಾತನಾಡಲು ಸಾಮಾನ್ಯ ಇಂಗ್ಲಿಷ್ ಸಾಕಾಗುವುದಿಲ್ಲ. ಅದಕ್ಕಾಗಿ ವ್ಯವಹಾರದ ಇಂಗ್ಲಿಷ್ ಅಥವಾ ಬಿಸ್ನೆಸ್ ಇಂಗ್ಲಿಷ್ ಕಲಿತಿರಬೇಕಾಗುತ್ತದೆ.


ಆಫೀಸ್ ಎನ್ನುವುದು ಒಂದು ಪುಟ್ಟ ಜಗತ್ತು. ಅಲ್ಲಿ ನಮ್ಮೂರಿನವರು, ಪರವೂರಿನವರು, ಪರ ರಾಜ್ಯದವರು, ಅಷ್ಟೇ ಯಾಕೆ ವಿದೇಶಿ ಸಹೋದ್ಯೋಗಿಗಳೂ ಇರುತ್ತಾರೆ. ಇವರೆಲ್ಲರೊಂದಿಗೆ ಮಾತನಾಡಲು ಅಲ್ಪಸ್ವಲ್ಪವಾದರೂ ಇಂಗ್ಲಿಷ್ ಗೊತ್ತಿರಬೇಕಾಗುತ್ತದೆ. ಕೆಲವೊಮ್ಮೆ ವಿದೇಶಿ ಕ್ಲಯೆಂಟ್‍ಗಳ ಜೊತೆಯೂ ವ್ಯವಹಾರ ಮಾಡಬೇಕಾಗುತ್ತದೆ. ಇದಕ್ಕೆಲ್ಲ ನಮ್ಮ ಸಾಮಾನ್ಯ ಇಂಗ್ಲಿಷ್ ಸಾಕಾಗುವುದಿಲ್ಲ. ಅದಕ್ಕಾಗಿ ವ್ಯವಹಾರದ ಇಂಗ್ಲಿಷ್ ಕಲಿತಿರಬೇಕಾಗುತ್ತದೆ. ಕೋಟಿ ಕೋಟಿ ರೂ.ಗಳ ವ್ಯವಹಾರವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸಲು ಬಿಸ್ನೆಸ್ ಇಂಗ್ಲಿಷ್ ಅತ್ಯಂತ ಅಗತ್ಯವೆಂದು ಉದ್ಯಮ ಪಂಡಿತರ ಅಭಿಮತ.

ವ್ಯವಹಾರಕ್ಕೆ ಇಂಗ್ಲಿಷ್
ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಇಂಗ್ಲಿಷ್ ಎನ್ನುವುದು ಪ್ರಮುಖ ಸಂವಹನ ಭಾಷೆ. ಇಂಗ್ಲಿಷ್ ಅನ್ನು ಭಾಷಾ ಮಾಧ್ಯಮವಾಗಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ನಡೆಸುವ ಜ್ಞಾನ ಹೊಂದುವುದನ್ನು ಬಿಸಿನೆಸ್ ಇಂಗ್ಲಿಷ್ ಎಂದು ವ್ಯಾಖ್ಯಾನಿಸಬಹುದು. ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಬಿಸಿನೆಸ್ ಇಂಗ್ಲಿಷ್ ಅನ್ನು ಬಳಸುವ ಅವಶ್ಯಕತೆ ಇರುವುದು ಇಂಗ್ಲಿಷ್ ಮಾತೃಭಾಷೆಯಲ್ಲದ ದೇಶಗಳ ಜನರಿಗೆ. ವಿವಿಧ ಸಂಸ್ಕøತಿಯ, ವಿವಿಧ ಭಾಷೆಗಳನ್ನು ಹೊಂದಿರುವ ಇಂತಹ ದೇಶಗಳ ಜನರು ಎಲ್ಲಾ ದೇಶದವರಿಗೂ ಅರ್ಥವಾಗುವಂತಹ ಬಿಸಿನೆಸ್ ಇಂಗ್ಲಿಷ್ ಕಲಿಯಬೇಕಾಗುತ್ತದೆ.
ಅಂತಾರಾಷ್ಟ್ರೀಯ ಬಿಸಿನೆಸ್‍ಗಳಿಗೆ ಇಂಗ್ಲಿಷ್ ಭಾಷೆ ಪ್ರಮುಖ ಮಾಧ್ಯಮ. ಇದೇ ಇಂಗ್ಲಿಷ್ ಭಾಷೆಯಲ್ಲಿ ಜಾಗತಿಕ ವ್ಯವಹಾರಗಳ ಸಂವಹನ ಟೂಲ್ ಆಗಿ ಬಳಸಿಕೊಳ್ಳುವ ಸ್ಕಿಲ್ ಅನ್ನು ಬಿಸಿನೆಸ್ ಇಂಗ್ಲಿಷ್ ಎಂದು ಕರೆಯಬಹುದು. ಬಿಸಿನೆಸ್ ಜನರು ಸಾಮಾನ್ಯ ಇಂಗ್ಲಿಷ್ ಕಲಿತರೆ ಅದು ಬಿಸಿನೆಸ್ ಇಂಗ್ಲಿಷ್ ಕಲಿಕೆ ಆಗುವುದಿಲ್ಲ. ಅದೇ ರೀತಿ, ಬಹಳಷ್ಟು ಬಿಸಿನೆಸ್ ಪದಭಂಡಾರವನ್ನು ಕಲಿಯುವುದು ಮಾತ್ರ ಬಿಸಿನೆಸ್ ಇಂಗ್ಲಿಷ್ ಅಲ್ಲ. ಆದರೆ, ಶಬ್ದಜ್ಞಾನ ಹೆಚ್ಚಿಸಿಕೊಳ್ಳುವುದು ಬಿಸಿನೆಸ್ ಇಂಗ್ಲಿಷ್‍ನಲ್ಲಿ ಒಳಗೊಂಡಿರುತ್ತದೆ ಅಷ್ಟೇ.

ಬಿಸ್ನೆಸ್ ಇಂಗ್ಲಿಷ್‍ನಲ್ಲಿ ಏನಿರುತ್ತೆ?
ಸ್ಪಷ್ಟವಾದ ವ್ಯಾಕರಣ, ಕಂಪನಿಯ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಯ ಸಂವಹನಕ್ಕೆ ಸಹಕರಿಸುವ ಇಂಗ್ಲಿಷ್ ಜ್ಞಾನ, ಇಮೇಲ್ ಮೂಲಕ ಹೇಗೆ ವ್ಯವಹರಿಸಬೇಕು? ಬಿಸ್ನೆಸ್ ಇಮೇಲ್ ಬರೆಯುವುದು ಹೇಗೆ? ವ್ಯವಹಾರದಲ್ಲಿ ಚೌಕಾಶಿ ಮಾಡುವುದು ಹೇಗೆ? ಪ್ರಸಂಟೇಷನ್‍ನಲ್ಲಿ ನಮ್ಮ ಇಂಗ್ಲಿಷ್ ಹೇಗಿರಬೇಕು? ಉದ್ಯೋಗ ಸಂದರ್ಶನಕ್ಕೆ ಅಥವಾ ಉದ್ಯೋಗಿಗಳ ಸಂದರ್ಶನದ ಸಮಯದಲ್ಲಿ ನಮ್ಮ ಇಂಗ್ಲಿಷ್ ಹೇಗಿರಬೇಕು? ದೂರವಾಣಿ ಮೂಲಕ ಗ್ರಾಹಕರ ಜೊತೆ ಇಂಗ್ಲಿಷ್‍ನಲ್ಲಿ ಹೇಗೆ ವ್ಯವಹರಿಸಬೇಕು ಇತ್ಯಾದಿಗಳನ್ನೆಲ್ಲ ವ್ಯವಹಾರ ಇಂಗ್ಲಿಷ್ ಕಲಿಕೆಯಲ್ಲಿ ಕಲಿಯಬಹುದಾಗಿದೆ.

ಆಧುನಿಕ ಜಗತ್ತಿನಲ್ಲಿ ಇಂಗ್ಲಿಷ್ ಅನ್ನು `ವ್ಯವಹಾರಗಳ ಭಾಷೆ' ಎಂದು ಹೇಳಲಾಗುತ್ತದೆ. ಕೇವಲ ಬಿಸಿನೆಸ್ ಉದ್ದೇಶಗಳಿಗಾಗಿ ಬಳಸುವ ಇಂಗ್ಲಿಷ್ ಅನ್ನು ಬಿಸಿನೆಸ್ ಇಂಗ್ಲಿಷ್ ಎನ್ನಲಾಗುತ್ತದೆ. ಮೊದಲ ನೋಟದಲ್ಲಿ ಬಿಸಿನೆಸ್ ಇಂಗ್ಲಿಷ್‍ಗೂ ಸಾಮಾನ್ಯ ಇಂಗ್ಲಿಷ್‍ಗೂ ಅಂತಹ ಪ್ರಮುಖ ವ್ಯತ್ಯಾಸ ಗೋಚರಿಸದು. ಆದರೆ, ಇವೆರಡರ ಶಬ್ದಕೋಶ ಅಥವಾ ವೊಕಬಲರಿ ಭಿನ್ನವಾಗಿರುತ್ತದೆ. ಸಾಮಾನ್ಯ ಇಂಗ್ಲಿಷ್ ಕೋರ್ಸ್‍ಗಳಿಗಿಂತ ಭಿನ್ನವಾಗಿ ಅಂದರೆ, ಸಿಮ್ಯುಲೇಷನ್, ಕೇಸ್ ಸ್ಟಡೀಸ್, ಟೀಮ್ ಬಿಲ್ಡಿಂಗ್, ಪ್ರಾಬ್ಲಂ ಸಾಲ್ವಿಂಗ್, ಕೋಚಿಂಗ್, ಮೆಂಟರಿಂಗ್ ಇತ್ಯಾದಿ ವಿಧಾನಗಳ ಮೂಲಕ ಕಲಿಸಲಾಗುತ್ತದೆ. ಬಿಸಿನೆಸ್ ಇಂಗ್ಲಿಷ್ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ವ್ಯವಹಾರ ಇಂಗ್ಲಿಷ್ ಮಾತುಗಾರಿಕೆ, ಇಂಗ್ಲಿಷ್‍ನಲ್ಲಿ ಆಲಿಸುವ, ಬರೆಯುವ ಕಲೆ ಕಲಿಯಬಹುದು.

ಯಾರೆಲ್ಲ ಕಲಿಯಬಹುದು?
ಇಂಗ್ಲಿಷ್‍ನಲ್ಲಿ ಪರಿಣತಿ ಪಡೆಯಲು ಆಸಕ್ತಿ ಇರುವವರೆಲ್ಲ ಬಿಸ್ನೆಸ್ ಇಂಗ್ಲಿಷ್ ಕಲಿಯಬಹುದು. ಮುಖ್ಯವಾಗಿ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುವವರು, ಎಂಜಿನಿಯರ್‍ಗಳು, ವಕೀಲರು, ವೈದ್ಯರು, ಮ್ಯಾನೇಜರ್‍ಗಳು, ಸಿಇಒಗಳು, ಸಿಒಒಗಳು, ವ್ಯವಹಾರ ಕ್ಷೇತ್ರದಲ್ಲಿ ಇರುವವರೆಲ್ಲ ಕಲಿಯಬಹುದು.



ಬಿಸ್ನೆಸ್ ಇಂಗ್ಲಿಷ್ ಕಲಿಕೆಗೆ ಮೊದಲುವ್ಯವಹಾರ ಇಂಗ್ಲಿಷ್‍ನಲ್ಲಿ ಪಂಟರಾಗುವ ಮೊದಲು ನೀವು ಸಾಮಾನ್ಯ ಇಂಗ್ಲಿಷ್‍ನಲ್ಲಿ ಪರಿಣತಿ ಪಡೆಯಬೇಕಾಗುತ್ತದೆ. ಪ್ರತಿದಿನ ಇಂಗ್ಲಿಷ್ ಪತ್ರಿಕೆಗಳನ್ನು ಓದಿ, ಇಂಗ್ಲಿಷ್ ಸಾಹಿತ್ಯ, ಪುಸ್ತಕಗಳನ್ನು ಓದಿ ಇಂಗ್ಲಿಷ್ ಪದಸಂಪತ್ತು ಹೆಚ್ಚಿಸಿಕೊಳ್ಳಿ. ಇಂಗ್ಲಿಷ್ ಪದಬಂಡಾರ ಎಷ್ಟೇ ಇದ್ದರೂ ಅದನ್ನು ಮಾತನಾಡಲು ತಿಳಿದಿರಬೇಕು. ಇದಕ್ಕಾಗಿ ನೀವು ಸ್ನೇಹಿತರ ಜೊತೆ ಸಂವಹನ ಮಾಡುತ್ತ ಕಲಿಯಬಹುದು. ಸ್ಪೋಕನ್ ಇಂಗ್ಲಿಷ್ ಕ್ಲಾಸ್‍ಗೆ ಸೇರಬಹುದು. ಸಾಮಾನ್ಯ ಇಂಗ್ಲಿಷ್‍ನಲ್ಲಿ ನೀವು ಪರಿಣತಿ ಪಡೆದಿದ್ದೀರಿ ಎಂದಾದರೆ ಬಿಸ್ನೆಸ್ ಇಂಗ್ಲಿಷ್ ಕಲಿಕೆ ಕಷ್ಟವಲ್ಲ. 

ಸ್ಫೋಕನ್ ಇಂಗ್ಲಿಷ್ ಆಪ್ 
* Hello English: Learn English
* Spoken English
* Spoken English Learning
* English Conversation Practice
* Learn English Speaking
* Learn English Listening ESL

ಇಂಗ್ಲಿಷ್ ವ್ಯಾಕರಣ ಕಲಿಕೆ ಕೆಲವು ಆಪ್ ಗಳು
*English Grammar Book
* English Grammar Test
* Practice English Grammar
* English Grammar in Use

ಬಿಸ್ನೆಸ್ ಇಂಗ್ಲಿಷ್ ಕಲಿಕೆಗೆ ಆಪ್ ಗಳು
ಬಿಸ್ನೆಸ್ ಇಂಗ್ಲಿಷ್ ಕಲಿಕೆಗೆ ಈ ಆಪ್ ಗಳನ್ನು ಹುಡುಕಿ ಇನ್‍ಸ್ಟಾಲ್ ಮಾಡಿಕೊಳ್ಳಿ.
* Business English Sentences
* Business English speaking
* Business English
* Speak Business English
* Business English Test
* Business English Words
* Business English Grammar and Vocabulary
* Real English Business


ಇಲ್ಲಿ ಕಲಿಯಿರಿ
* ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫಾರಿನ್ ಲ್ಯಾಂಗ್ವೆಜ್(ಐಐಎಫ್‍ಎಲ್‍ಎಸ್), ಬೆಂಗಳೂರು. ವೆಬ್‍ಸೈಟ್: www.iifls.com
* ಆಪ್ಟೆಕ್ ಇಂಗ್ಲಿಷ್ ಲರ್ನಿಂಗ್ ಸಂಸ್ಥೆ. ವೆಬ್ ವಿಳಾಸ: www.englishexpress.in
* ಬ್ರಿಟಿಷ್‍ಕೌನ್ಸಿಲ್ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕವೂ ಬಿಸಿನೆಸ್ ಇಂಗ್ಲಿಷ್ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ವೆಬ್ ವಿಳಾಸ: www.britishcouncil.in
* ಎಗ್ಸಾಂ ಇಂಗ್ಲಿಷ್: www.examenglish.com/BEC/, ಇಂಗ್ಲಿಷ್ ಕ್ಲಬ್: www.englishclub.com/business-english, ಲರ್ನ್ ಇಂಗ್ಲಿಷ್: www.learn-english-today.com


*Copyright: Published On Vijaya Karnataka Mini




SHARE

Author: verified_user

1 comment:

  1. This comment has been removed by a blog administrator.

    ReplyDelete