Friday, 30 September 2016

ವೆಬ್‍ ಡಿಸೈನರ್ ಆಗುವುದು ಹೇಗೆ?

SHARE
ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿ ಮುಂದೇನೂ ಎಂದು ಆಲೋಚಿಸುತ್ತಿರುವ ಕಂಪ್ಯೂಟರ್ ಆಸಕ್ತರು ವೆಬ್ ಡಿಸೈನಿಂಗ್‍ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು
Published in Vijaya Karnataka Mini

ಎಲ್ಲವೂ ಆನ್‍ಲೈನ್‍ಮಯವಾಗುತ್ತಿರುವ ಈ ಪರ್ವಕಾಲದಲ್ಲಿ ವೆಬ್‍ಸೈಟ್ ವಿನ್ಯಾಸಕರಿಗೂ ಭಾರೀ ಡಿಮ್ಯಾಂಡ್. ವೆಬ್‍ಸೈಟ್ ವಿನ್ಯಾಸ ಮಾಡಲು ಕಂಪ್ಯೂಟರ್ ಸೈನ್ಸೇ ಓದಬೇಕೆಂದಿಲ್ಲ. ದುಬಾರಿ ಅನಿಮೇಷನ್ ಕೋರ್ಸಿಗೂ ಸೇರಬೇಕೆಂದಿಲ್ಲ. ಅಲ್ಪಾವಧಿಯಲ್ಲಿ ಕೇವಲ ವೆಬ್ ವಿನ್ಯಾಸವನ್ನು ಮಾತ್ರ ಕಲಿಸುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದಾಗಿದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ಕೆಲವು ಕಂಪನಿಗಳು ನಿಮ್ಮನ್ನು ವೆಬ್ ಡೆವಲಪರ್, ವೆಬ್‍ಸೈಟ್ ಪೆÇ್ರಗ್ರಾಮರ್ ಆಗಿ ಕೆಲಸಕ್ಕೆ ತೆಗೆದುಕೊಳ್ಳಬಹುದು.
ಸರ್ಟಿಫಿಕೇಷನ್ ಬೇಕಿಲ್ಲವೆಂದರೆ ಇಂಟರ್‍ನೆಟ್‍ನಲ್ಲಿ ಉಚಿತವಾಗಿ ವೆಬ್ ವಿನ್ಯಾಸ ಕಲಿಸುವ ಟ್ಯುಟೋರಿಯಲ್‍ಗಳಿಗೆ ಸೇರಬಹುದು. ನೆಟ್‍ನಲ್ಲಿ ವೆಬ್ ಮಾಸ್ಟರ್ ಆಗಲು ತರಬೇತಿ ನೀಡುವ ಸಾಕಷ್ಟು ವಿಡಿಯೋಗಳು, ಪಠ್ಯಗಳೂ ದೊರಕುತ್ತವೆ. ಆನ್‍ಲೈನ್ ಅಥವಾ ಆಫ್‍ಲೈನ್ ಪುಸ್ತಕದಂಗಡಿಗೆ ಹೋಗಿ ವೆಬ್ ಡಿಸೈನ್ ಕುರಿತಾದ ಪುಸ್ತಕಗಳನ್ನೂ ಓದಿಯೂ ವೆಬ್ ವಿನ್ಯಾಸದಲ್ಲಿ ಪರಿಣತಿ ಪಡೆಯಬಹುದು.

ವೆಬ್ ಮಾಸ್ಟರ್‍ಗೆ ಬೇಡಿಕೆ
ಬಹುತೇಕ ಜನರಿಂದು ಇಂಟರ್‍ನೆಟ್ ಬಳಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ, ಜಿಮ್, ಶಿಕ್ಷಣ ಸಂಸ್ಥೆಗಳು, ಸುದ್ದಿತಾಣಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಸ್ವಂತ ವೆಬ್‍ಸೈಟ್ ಹೊಂದಲು ಆಸಕ್ತಿ ವಹಿಸುತ್ತಾರೆ. ಇ-ಕಾಮರ್ಸ್, ಇಂಟರ್‍ನೆಟ್ ಸುದ್ದಿ ವೆಬ್‍ಸೈಟ್ ಸೇರಿದಂತೆ ವೆಬ್‍ಸೈಟ್ ಅವಲಂಬಿತ ಕಂಪನಿಗಳಲ್ಲಿಯೂ ವೆಬ್‍ಸೈಟ್ ಡಿಸೈನರ್‍ಗಳಿಗೆ ಬೇಡಿಕೆಯಿದೆ. ಗೋಡ್ಯಾಡಿ.ಕಾಮ್‍ನಂತಹ ತಾಣಗಳಲ್ಲಿ ಅನುಭವ ಇಲ್ಲದವರೂ ವೆಬ್‍ಸೈಟ್ ರಚಿಸಬಹುದಾದರೂ ಪೆÇ್ರಫೆಷನಲ್ ವೆಬ್‍ಸೈಟ್ ವಿನ್ಯಾಸಕರಿಗೆ ಬೇಡಿಕೆ ಕಡಿಮೆಯಾಗಿಲ್ಲ. ನಿಮ್ಮಲ್ಲಿ ಅತ್ಯುತ್ತಮ ಕ್ರಿಯೇಟಿವಿಟಿ ಇದ್ದರಂತೂ ಗ್ರಾಹಕರನ್ನು ಪಡೆಯುವುದು ಕಷ್ಟವಲ್ಲ. ಪಾರ್ಟ್‍ಟೈಮ್ ಆಗಿಯೂ ಈ ಕ್ಷೇತ್ರದಲ್ಲಿ ದುಡಿಯಬಹುದು. ವೆಬ್‍ಡಿಸೈನ್ ಕಂಪನಿಯಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳಬಹುದು. ನಿಮ್ಮಲ್ಲಿ ಸ್ವ ಉದ್ಯೋಗ ಮಾಡುವ ಮನಸ್ಸು ಇದ್ದರೆ ನಿಮ್ಮ ಊರಿಗೆ ಸಮೀಪವಿರುವ ಪಟ್ಟಣ, ನಗರಗಳಲ್ಲಿ ವೆಬ್ ಡಿಸೈನ್ ಸಂಸ್ಥೆಯನ್ನೂ ತೆರೆಯಬಹುದು.

ಏನಿದು ವೆಬ್ ಡಿಸೈನ್ ಪೆÇ್ರೀಗ್ರಾಮ್?
ಇಂತಹ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ವೆಬ್‍ಸೈಟ್ ನಿರ್ಮಿಸುವುದು ಹೇಗೆಂಬುದನ್ನು ಕಲಿಸಿಕೊಡುತ್ತಾರೆ. ಹೈಪರ್‍ಟೆಕ್ಸ್ಟ್ ಪ್ರಿಪೆÇ್ರಸೆಸರ್(ಪಿಎಚ್‍ಪಿ), ಹೈಪರ್‍ಟೆಕ್ಸ್ಟ್ ಮಾರ್ಕ್- ಅಪ್ ಲ್ಯಾಂಗ್ವೇಜ್(ಎಚ್‍ಟಿಎಂಎಲ್) ಮತ್ತು ಕ್ಯಾಸ್‍ಕ್ಯಾಡಿಂಗ್ ಸ್ಟೈಲ್ ಶೀಟ್ಸ್(ಸಿಎಸ್‍ಎಸ್) ಇತ್ಯಾದಿಗಳನ್ನು ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ. ನೀವು ಎಷ್ಟು ತಿಂಗಳ ಅವಧಿಯ ಕೋರ್ಸ್ ಮಾಡುವಿರೋ ಎಂಬುದರ ಮೇಲೆ ವೆಬ್ ಡಿಸೈನ್ ಕಲಿಕೆಯ ಸಬ್ಜೆಕ್ಟ್‍ಗಳು ಇರುತ್ತವೆ. ಕೆಲವೊಮ್ಮೆ ಪ್ರತಿಯೊಂದು ವಿಷಯಗಳಿಗೂ ಪ್ರತ್ಯೇಕ ಪ್ರತ್ಯೇಕ ಸರ್ಟಿಫಿಕೇಷನ್‍ಗಳಿರುತ್ತವೆ. ಅಂದರೆ, ಫ್ರೀಲ್ಯಾನ್ಸ್ ವೆಬ್ ಡಿಸೈನರ್, ಗ್ರಾಫಿಕ್ ಡಿಸೈನರ್, ವೆಬ್ ಅನಿಮೇಷನ್ ಕ್ರೀಯೆಟರ್, ವೆಬ್ ಡೆವಲಪರ್, ಪಿಎಚ್‍ಪಿ ಆ್ಯಂಡ್ ಸಿಎಸ್‍ಎಸ್ ಡೆವಲಪರ್ ಇತ್ಯಾದಿ ಕೋರ್ಸ್‍ಗಳನ್ನು ಮಾಡಬಹುದು.

ಎಲ್ಲಿ ಕಲಿಯಬಹುದು?
ರಾಜ್ಯದಲ್ಲಿ ವೆಬ್ ಡಿಸೈನ್ ಕಲಿಸುವ ಹಲವು ಶಿಕ್ಷಣ ಸಂಸ್ಥೆಗಳಿವೆ. ಬೆಂಗಳೂರಿನಲ್ಲಿ ಹಲವು ಬ್ರಾಂಚ್‍ಗಳನ್ನು ಹೊಂದಿರುವ ಆಪ್ಟೆಕ್ ಕಂಪ್ಯೂಟರ್ ಎಜುಕೇಷನ್ ಸಹ ವೆಬ್ ಡಿಸೈನರ್/ಡೆವಲಪ್‍ಮೆಂಟ್ ವಿಷಯದಲ್ಲಿ `ಎಸಿಡಬ್ಲ್ಯುಡಿ ಪೆÇ್ರ' ಎಂಬ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್ ನಡೆಸುತ್ತದೆ. ಪಿಯುಸಿ, ಪದವಿ ವಿದ್ಯಾರ್ಥಿಗಳು ಈ ಸರ್ಟಿಫಿಕೇಷನ್ ಪಡೆಯಬಹುದು. ಎಚ್‍ಟಿಎಂಎಲ್5, ಜಾವಾ ಸ್ಕ್ರಿಪ್ಟ್, ಸಿಎಸ್‍ಎಸ್3 ಪಿಎಚ್‍ಪಿ ಆ್ಯಂಡ್ ಮೈಎಸ್‍ಕ್ಯೂಎಲ್ ಇತ್ಯಾದಿ ಪೆÇ್ರಗ್ರಾಮಿಂಗ್ ಭಾಷೆಗಳನ್ನು ಕಲಿಸಿ ವೆಬ್‍ಸೈಟ್ ನಿರ್ಮಿಸುವುದನ್ನು ಕಲಿಯಬಹುದು. ಇದು 7 ತಿಂಗಳ ಕೋರ್ಸ್. ವಾರಕ್ಕೆ ಮೂರು ದಿನಗಳಂತೆ ದಿನಕ್ಕೆ ಎರಡು ಗಂಟೆÉ ಈ ಕೋರ್ಸ್ ಇರುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್ ಲಿಂಕ್
ಬೆಂಗಳೂರಿನಲ್ಲಿ ಅರೆನಾ ಮಲ್ಟಿಮೀಡಿಯಾವೂ ಪಿಯುಸಿ/ಕಾಲೇಜು ವಿದ್ಯಾರ್ಥಿಗಳಿಗೆ ಅಥವಾ ಆಸಕ್ತರಿಗೆ 10 ತಿಂಗಳ ಶಾರ್ಟ್‍ಟರ್ಮ್ ವೆಬ್ ಡಿಸೈನ್ ಕೋರ್ಸ್ ನಡೆಸುತ್ತದೆ. ವಾರಕ್ಕೆ ಮೂರು ದಿನ, ದಿನಕ್ಕೆ ಎರಡು ಗಂಟೆಯಂತೆ ಈ ಕೋರ್ಸ್ ಇರುತ್ತದೆ. ಹೆಚ್ಚುವರಿ ಗಂಟೆಗಳ ಕ್ಲಾಸ್ ತೆಗೆದುಕೊಂಡು ಕೋರ್ಸ್ ಅನ್ನು ಬೇಗ ಮುಗಿಸಲೂ ಅವಕಾಶವಿದೆ. ಮಾಹಿತಿಗೆ ವೆಬ್‍ಲಿಂಕ್
ಬೆಂಗಳೂರಿನ ಇಂಟರ್‍ನೆಟ್ ಅಕಾಡೆಮಿಯೂ ವೆಬ್ ಡೆವಲಪ್‍ಮೆಂಟ್ ಕೋರ್ಸ್‍ಗಳನ್ನು ನಡೆಸಿಕೊಡುತ್ತದೆ. ಸುಮಾರು ಒಂದೂವರೆ ತಿಂಗಳ ಕೋರ್ಸ್ ಇದಾಗಿದೆ. ಮೊಬೈಲ್ ವೆಬ್‍ಸೈಟ್ ನಿರ್ಮಾಣ ಕಲಿಕೆಯನ್ನು ಒಳಗೊಂಡ `ರೆಸ್ಪಾನ್ಸಿವ್ ವೆಬ್ ಡೆವಲಪ್‍ಮೆಂಟ್' ಕೋರ್ಸ್ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ಲಿಂಕ್

ಮೈಸೂರಿನಲ್ಲಿರುವ ಟೂನ್2 ಮಲ್ಟಿಮೀಡಿಯಾ ಸ್ಕೂಲ್‍ನಲ್ಲಿ ವೆಬ್ ಡಿಸೈನ್‍ನಲ್ಲಿ ಶಾರ್ಟ್‍ಟರ್ಮ್ ಕೋರ್ಸ್‍ಗಳಿವೆ. ಮಾಸ್ಟರ್ ಇನ್ ವೆಬ್ ಡಿಸೈನ್ 7 ತಿಂಗಳ ಕೋರ್ಸ್. ಪೆÇ್ರಫೆಷನಲ್ ಇನ್ ವೆಬ್ ಡಿಸೈನ್ ಕೋರ್ಸ್ 4 ತಿಂಗಳಾದ್ದಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್

ಮೈಸೂರಿನ ಅನಿಫ್ರೇಮ್ಸ್ ಸಹ ಸರ್ಟಿಫಿಕೇಟ್ ಇನ್ ಗ್ರಾಫಿಕ್ ಆ್ಯಂಡ್ ವೆಬ್ ಡಿಸೈನ್ ಕೋರ್ಸ್ ನಡೆಸುತ್ತಿದೆ. ಎಸ್‍ಎಸ್‍ಎಲ್‍ಸಿ ಪಾಸ್/ಫೇಲ್ ಆದವರು ಈ ಕೋರ್ಸ್ ಮಾಡಬಹುದು. ಇದು 15 ತಿಂಗಳ ಕೋರ್ಸ್. ವೆಬ್‍ಲಿಂಕ್

ಪಕ್ಕದ ರಾಜ್ಯವಾಗಿರುವ ಚೆನ್ನೈನಲ್ಲಿರುವ ವಿಎಫ್‍ಎಕ್ಸ್ ಮೀಡಿಯಾ ಆ್ಯಂಡ್ ಡಿಸೈನ್ ಸಂಸ್ಥೆಯು ವೆಬ್ ಡಿಸೈನ್ ಕುರಿತಾದ 9 ತಿಂಗಳ ಶಾರ್ಟ್‍ಟರ್ಮ್ ಕೋರ್ಸ್ ನಡೆಸುತ್ತದೆ. ಇದು ಐಎಒ ಸರ್ಟಿಫಿಕೇಷನ್ ಅಂಗೀಕೃತ ಸರ್ಟಿಫಿಕೇಷನ್ ಆಗಿದೆ. ಎಸ್‍ಎಸ್‍ಎಲ್‍ಸಿ/ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಿ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಲಿಂಕ್
ಇವು ಕೆಲವು ವೆಬ್ ಡಿಸೈನ್ ಕಲಿಸುವ ಸಂಸ್ಥೆಗಳ ವಿವರವಾಗಿದೆ. ನಿಮ್ಮ ಊರಿಗೆ ಸಮೀಪದಲ್ಲಿ ಯಾವೆಲ್ಲ ಸಂಸ್ಥೆ ವೆಬ್ ಡಿಸೈನ್ ಕಲಿಸುತ್ತದೆ ಎಂದು ತಿಳಿದುಕೊಳ್ಳಿ. ಅಲ್ಲಿರುವ ಮೂಲಸೌಕರ್ಯಗಳನ್ನು ನೋಡಿ ಜಾಯಿನ್ ಆಗಬಹುದು.

ಆನ್‍ಲೈನ್‍ನಲ್ಲಿ ಕಲಿಯಿರಿ
ಆನ್‍ಲೈನ್‍ನಲ್ಲೇ ವೆಬ್ ಡಿಸೈನ್ ಕಲಿಸುವ ಹಲವು ತಾಣಗಳು ಇವೆ. ಡಾಲರ್ ರೂಪದಲ್ಲಿ ಹಣ ನೀಡಲು ಸಿದ್ಧವಿದ್ದರೆ ವಿದೇಶಿ ವೆಬ್‍ತಾಣಗಳಿಂದಲೂ ಸರ್ಟಿಫಿಕೇಷನ್ ಪಡೆದುಕೊಳ್ಳಬಹುದು. ದೇಶದ ಕೆಲವು ಸಂಸ್ಥೆಗಳೂ ಇಂತಹ ಆನ್‍ಲೈನ್ ಕೋರ್ಸ್ ನಡೆಸುತ್ತವೆ. ಉಚಿತವಾಗಿ ವೆಬ್ ಡಿಸೈನ್ ಕಲಿಯುವ ಅವಕಾಶವನ್ನೂ ಕೆಲವು ವೆಬ್ ತಾಣಗಳು ಒದಗಿಸುತ್ತವೆ. ಇಂತಹ ಬಹುವೈವಿಧ್ಯತೆಯ ಆನ್‍ಲೈನ್ ವೆಬ್ ಡಿಸೈನ್ ಕಲಿಕಾ ತಾಣಗಳ ಲಿಂಕ್‍ಗಳು ಇಲ್ಲಿವೆ. ಆರಂಭಿಕರು ಉಚಿತ ತಾಣಗಳಲ್ಲಿ ಕಲಿತು ಮುಂದುವರೆಯುವುದು ಒಳಿತು.

1

2

3

ವೆಬ್ ಡಿಸೈನ್ ಪುಸ್ತಕಗಳು
ಪುಸ್ತಕದಂಗಡಿಗೆ ಭೇಟಿ ನೀಡಿದರೆ ವೆಬ್ ಡಿಸೈನ್‍ಗೆ ಸಂಬಂಧಿಸಿದ ಹಲವು ಪುಸ್ತಕಗಳು ದೊರಕುತ್ತವೆ. ಮೊದಲಿಗೆ ಬೇಸಿಕ್ ಕಲಿಸುವ ಪುಸ್ತಕ ಓದಿರಿ. ನಂತರ ಪೂರ್ಣ ಪ್ರಮಾಣದ ವೆಬ್ ಡಿಸೈನ್ ಪುಸ್ತಕ ಓದಿ. ಇಂಟರ್‍ನೆಟ್‍ನಲ್ಲಿ ಕೆಲವು ಉಚಿತ ಇ-ಬುಕ್‍ಗಳು ಸಿಗುತ್ತವೆ.
ವೆಬ್ ಡಿಸೈನ್ ಕಲಿಕೆಗೆ 15 ಉಚಿತ ಪುಸ್ತಕಗಳು
50 ಉಚಿತ ಪುಸ್ತಕಗಳು:

ಆನ್‍ಲೈನ್ ಅಂಗಡಿಗಳಿಗೆ ಹೋಗಿ ಅಲ್ಲಿ ಪುಸ್ತಕ ಎಂಬ ಕೆಟಗರಿಗೆ ಹೋಗಿ ಸರ್ಚ್ ಆಯ್ಕೆ ಇರುವಲ್ಲಿ ವೆಬ್ ಡಿಸೈನ್ ಎಂದು ಸರ್ಚ್ ಕೊಟ್ಟರೆ ಹಲವು ಪುಸ್ತಕಗಳು ಬರುತ್ತವೆ. ನಿಮ್ಮ ಊರಿಗೆ ಈ ತಾಣಗಳ ಸೇವೆಗಳು ಲಭ್ಯ ಇವೆಯೇ ಎಂದು ತಿಳಿದುಕೊಂಡು ಖರೀದಿಸಿರಿ.
ಲಿಂಕ್‍ಗಳು:

1

2

3

CAD and CAM Certification read 
SHARE

Author: verified_user

0 ಪ್ರತಿಕ್ರಿಯೆಗಳು: