Showing posts with label tips. Show all posts
Showing posts with label tips. Show all posts

Thursday, 24 November 2016

ಯೋಗ ಶಿಕ್ಷಣದಿಂದ ಉದ್ಯೋಗಾವಕಾಶ

ಯೋಗ ಶಿಕ್ಷಣದಿಂದ ಉದ್ಯೋಗಾವಕಾಶ

ವಿಶ್ವಸಂಸ್ಥೆಯ ಸದಸ್ಯತ್ವ ಪಡೆದ 177 ದೇಶಗಳಲ್ಲಿ ಮಾತ್ರವಲ್ಲದೆ ಜಗತ್ತಿನ ಎಲ್ಲೆಡೆ `ಯೋಗ'ದ ಹವಾ ಆವರಿಸಿದೆ. ಯೋಗವನ್ನು ಕರಿಯರ್ ಆಯ್ಕೆ ಮಾಡಿಕೊಂಡವರಿಗೆ ಬೇಡಿಕೆಯೂ ಹೆಚ್ಚಾಗಿದೆ. ಯೋಗದಿಂದ ಯಾವೆಲ್ಲ ಉದ್ಯೋಗ ಪಡೆಯಬಹುದು? ಹೆಚ್ಚಿನ ಮಾಹಿತಿ ಇಲ್ಲಿದೆ.
ಹಣ, ಅಂತಸ್ತು, ಐಶ್ವರ್ಯವಿದ್ದರೂ ಮಾನಸಿಕ ನೆಮ್ಮದಿ ಇಲ್ಲವೆನ್ನುವುದು ಬಹುತೇಕರ ಅಳಲು. ಕೆಲಸದ ಒತ್ತಡ, ಸಂಸಾರದ ಜಂಜಾಟಗಳಿಂದ ಬೇಸೆತ್ತವರು ಸಾಕಷ್ಟಿದ್ದಾರೆ. ಮನಸ್ಸಿನ ಆರೋಗ್ಯ ಉತ್ತಮವಾಗಿದ್ದರೆ ಹ್ಯಾಪಿಯಾಗಿ ಇರಬಹುದು ಎಂಬುದು ಎಲ್ಲರಿಗೂ ಮನದಟ್ಟಾಗುತ್ತಿದೆ. ಈ ಒತ್ತಡ, ಜಂಜಡದ ಬದುಕಿನಲ್ಲಿ ರಿಲ್ಯಾಕ್ಸ್ ಆಗಲು ಎಲ್ಲರೂ ಯೋಗವನ್ನು ನೆನಪಿಸಿಕೊಳ್ಳುತ್ತಿದ್ದಾರೆ. ವಿಶ್ವಸಂಸ್ಥೆಯೇ ಜೂನ್ 21ನ್ನು ವಿಶ್ವ ಯೋಗ ದಿನವನ್ನಾಗಿ ಘೋಷಿಸಿದೆ. ಹೀಗಾಗಿ ಯೋಗಕ್ಕೆ ಎಲ್ಲಿಲ್ಲದ ಮಹತ್ವ ಬಂದುಬಿಟ್ಟಿದೆ.

ಯೋಗವೆಂಬ ಕರಿಯರ್
ಯೋಗವನ್ನೇ ಕರಿಯರ್ ಆಗಿ ಸ್ವೀಕರಿಸಿ ಬದುಕಿನಲ್ಲಿ ಯಶಸ್ವಿಯಾದ ಅದೇಷ್ಟೋ ಜನರು ನಮ್ಮ ನಿಮ್ಮ ನಡುವೆ ಇದ್ದಾರೆ. ಕೆಲವರು ಶಾಲಾ ಕಾಲೇಜುಗಳಲ್ಲಿ ಯೋಗ ಕಲಿಸುತ್ತಿದ್ದಾರೆ. ಇನ್ನು ಕೆಲವರು ಸ್ವಂತ ಯೋಗ ತರಗತಿಗಳನ್ನು ನಡೆಸಿ ಜನರಿಗೆ ಯೋಗದ ಅರಿವು ಮೂಡಿಸುತ್ತಿದ್ದಾರೆ. ಇನ್ನು ಕೆಲವರು ಯೋಗವನ್ನೇ ಬಿಸ್ನೆಸ್ ಆಗಿಸಿ ದುಡ್ಡು ಬಾಚಿಕೊಳ್ಳುತ್ತಿದ್ದಾರೆ. ಯೋಗ ಮತ್ತು ಆಧ್ಯಾತ್ಮವನ್ನು ಜೊತೆಯಾಗಿಸಿಕೊಂಡು ಸಾಕಷ್ಟು ಆಸ್ತಿ, ಅಂತಸ್ತು ಗಳಿಸಿದವರೂ ಸಿಗುತ್ತಾರೆ. ಹೀಗೆ ಯೋಗದಿಂದ ಸಾಕಷ್ಟು ಜನರಿಗೆ ಉದ್ಯೋಗಭಾಗ್ಯ ದೊರಕಿದೆ.

ಎಲ್ಲೆಲ್ಲಿ ಕೆಲಸ ಮಾಡಬಹುದು?
* ಸ್ವಂತ ಉದ್ಯೋಗ: ಬೆಂಗಳೂರಿನಂತಹ ನಗರಗಳಲ್ಲಿ ಯೋಗ ಟೀಚರ್/ಇನ್‍ಸ್ಟ್ರಕ್ಟರ್‍ಗಳಿಗೆ ಉತ್ತಮ ಬೇಡಿಕೆಯಿದೆ. ಸ್ವಂತ ಯೋಗ ಕ್ಲಾಸ್‍ಗಳನ್ನು ನಡೆಸಿದರೆ ಉತ್ತಮ ಆದಾಯ ಗಳಿಸಬಹುದು. ಇದಕ್ಕೆ ಹೆಚ್ಚು ಹೂಡಿಕೆ ಅಗತ್ಯವಿಲ್ಲ. ಜಿಮ್ ಇತ್ಯಾದಿಗಳಿಗೆ ಕನ್ನಡಿ, ಆಧುನಿಕ ಸಲಕರಣೆಗಳ ಅಗತ್ಯವಿದೆ. ಆದರೆ, ಯೋಗ ಕ್ಲಾಸ್ ನಡೆಸಲು ಹೆಚ್ಚು ಹೂಡಿಕೆ ಬೇಕಿಲ್ಲ. ನೆಲಕ್ಕೆ ಹಾಸಲು ಕಾರ್ಪೇಟ್ ಇದ್ದರೆ ಸಾಕು. ಮನೆಯ ಟೇರಸಿಯಲ್ಲೇ ಯೋಗ ಕ್ಲಾಸ್ ನಡೆಸಿಕೊಳ್ಳಬಹುದು.
* ಟೀಚಿಂಗ್: ಸ್ವಂತ ಕಲಿಕಾ ಕೇಂದ್ರಗಳನ್ನು ತೆರೆಯಲು ಸಾಧ್ಯವಾಗದೆ ಇರುವವರು ರೆಸಾರ್ಟ್, ಜಿಮ್, ಸ್ಕೂಲ್, ಆರೋಗ್ಯ ಕೇಂದ್ರ, ಹೌಸಿಂಗ್ ಸೊಸೈಟಿಗಳು ಮತ್ತು ದೊಡ್ಡ ಸಂಸ್ಥೆಗಳಲ್ಲಿ ಯೋಗ ತರಬೇತುದಾರರಾಗಿ ಕೆಲಸ ಪಡೆಯಬಹುದು. ಈಗ ಶಾಲೆಗಳಲ್ಲಿ ಯೋಗ ಇನ್‍ಸ್ಟ್ರಕ್ಟರ್‍ಗಳನ್ನು ನೇಮಿಸುವುದು ಕಡ್ಡಾಯವೆಂದು ಸರಕಾರ ಹೇಳಿದೆ. ಹೀಗಾಗಿ ಖಾಸಗಿ, ಸರಕಾರಿ ಶಾಲೆಗಳಲ್ಲಿಯೂ ಯೋಗ ತರಬೇತುದಾರರಾಗಿ ಕೆಲಸ ಪಡೆದುಕೊಳ್ಳಬಹುದು.
* ಯೋಗದ ಉತ್ತೇಜನಕ್ಕೆ ಹಲವು ಕೇಂದ್ರಗಳನ್ನು, ಕೌನ್ಸಿಲ್‍ಗಳನ್ನು, ಸಂಶೋಧನಾ ವಿಭಾಗಗಳನ್ನು ಸರಕಾರ ತೆರೆದಿದೆ. ಇಂತಹ ವಿಭಾಗಗಳಲ್ಲಿಯೂ ಕೆಲಸ ಪಡೆಯಲು ಪ್ರಯತ್ನಿಸಬಹುದು.
* ವಿವಿಧ ಸೆಲೆಬ್ರೆಟಿಗಳು, ರಾಜಕಾರಣಿಗಳು, ವಿವಿಐಪಿಗಳು ಪರ್ಸನಲ್ ಯೋಗ ತರಬೇತುದಾರರನ್ನು ನೇಮಿಸಿಕೊಳ್ಳುತ್ತಿದ್ದಾರೆ. ಹೀಗೆ ಪರ್ಸನಲ್ ಟ್ರೈನರ್ ಆಗಿಯೂ ಕೆಲಸ ಮಾಡಬಹುದಾಗಿದೆ.
* ವಿವಿಧ ಕಾಯಿಲೆಗಳಿಗೆ ನೀಡುವ ಯೋಗ ಥೆರಪಿಯೂ ಜನಪ್ರಿಯತೆ ಪಡೆದಿದೆ. ಇದು ಸಹ ಉದ್ಯೋಗಾವಕಾಶ ಹೆಚ್ಚಿಸಿದೆ.
ಹೊಸದಾಗಿ ಯೋಗ ತರಬೇತು ನೀಡುವವರಿಗೆ 10-15 ಸಾವಿರ ರೂ. ತಿಂಗಳ ವೇತನ ದೊರಕಬಹುದು. ಅನುಭವ ಹೆಚ್ಚಿದಂತೆಲ್ಲ ವೇತನ ಹೆಚ್ಚು ಸಿಗಬಹುದು. ಸ್ವಂತ ಯೋಗ ತರಗತಿ ಆರಂಭಿಸಿದವರು ವಿದ್ಯಾರ್ಥಿಗಳ ಸಂಖ್ಯೆಗೆ ತಕ್ಕಂತೆ ತಿಂಗಳಿಗೆ ಲಕ್ಷ ಲಕ್ಷ ಹಣ ಗಳಿಸುತ್ತಿದ್ದಾರೆ.

ಯೋಗ ಶಿಕ್ಷಣ
ಬೆಂಗಳೂರು ವಿವಿ, ಕರ್ನಾಟಕ ವಿವಿ, ಮಂಗಳೂರು ವಿವಿ ಸೇರಿದಂತೆ ಕರ್ನಾಟಕದ ವಿವಿಧ ವಿಶ್ವವಿದ್ಯಾಲಯಗಳಲ್ಲಿ ಅಥವಾ ವಿದ್ಯಾಸಂಸ್ಥೆಗಳಲ್ಲಿ ಯೋಗ ಕಲಿಸಲು ಪ್ರತ್ಯೇಕ ವಿಭಾಗ ಮೀಸಲಿಡಲಾಗಿದೆ. ಪಿಯುಸಿಯಲ್ಲಿ ಕನಿಷ್ಠ 50ಕ್ಕಿಂತ ಹೆಚ್ಚು ಅಂಕ ಪಡೆದವರು ಯೋಗ ಥೆರಪಿಯಲ್ಲಿ ಬಿಎ/ಬಿಎಸ್ಸಿ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಬಹುದು. ಈ ಪದವಿ ಪಡದವರು ನಂತರ ಯೋಗ ಥೆರಪಿಯಲ್ಲಿ ಎಂಎ/ಎಂಎಸ್ಸಿ ಪಡೆಯಬಹುದಾಗಿದೆ. ಉಜಿರೆಯ ಎಸ್‍ಡಿಎಂ ಕಾಲೇಜಿನಲ್ಲಿ ನ್ಯಾಚುರೊಪಿ ಮತ್ತು ಯೋಗಿಕ್ ಸೈನ್ಸಸ್, ಮೂಡಬಿದಿರೆಯ ಆಳ್ವಾಸ್ ಕಾಲೇಜಿನ ನ್ಯಾಚೊರೊಪತಿ ಮತ್ತು ಯೋಗಿಕ್ ಸೈನ್ಸಸ್, ಬೆಳಗಾವಿಯ ಕೆಎಲ್‍ಇಎಸ್ ಕಾಲೇಜ್ ಆಫ್ ನ್ಯಾಚೊರೊಪತಿ ಮತ್ತು ಯೋಗ, ಮೈಸೂರಿನ ನೇಚರ್ ಕ್ಯೂರ್ ಮತ್ತು ಯೋಗ ಕಾಲೇಜ್, ಪಿಕೆಟಿಆರ್ ಹಾಸ್ಪಿಟಲ್‍ನಲ್ಲೂ ಯೋಗ ಶಿಕ್ಷಣ ಪಡೆಯಬಹುದಾಗಿದೆ.

ಯಾವ ಕೆಲಸ ಸಿಗುತ್ತೆ?
* ರಿಸರ್ಚ್ ಆಫೀಸರ್-ಯೋಗ ಮತ್ತು ನ್ಯಾಚೊರೊಪಥಿ
* ಯೋಗ ಏರೋಬಿಕ್ ಇನ್‍ಸ್ಟ್ರಕ್ಟರ್
* ಅಸಿಸ್ಟೆಂಟ್ ಆಯುರ್ವೇದಿಕ್ ಡಾಕ್ಟರ್
* ಕ್ಲೀನಿಕಲ್ ಸೈಕೊಲಾಜಿಸ್ಟ್
* ಯೋಗ ಥೆರಪಿಸ್ಟ್
* ಯೋಗ ಇನ್‍ಸ್ಟ್ರಕ್ಟರ್
* ಯೋಗ ಟೀಚರ್
* ಥೆರಪಿಸ್ಟ್ಸ್ ಮತ್ತು ನ್ಯಾಚುರೊಪಥಿಸ್
* ಹೆಲ್ತ್ ಕ್ಲಬ್‍ಗಳಲ್ಲಿ ಟ್ರೈನರ್/ಇನ್‍ಸ್ಟ್ರಕ್ಟರ್

ನಿಮಗಿದು ತಿಳಿದಿರಲಿ
* ಕಿ.ಪೂ. 2ನೇ ಶತಮಾನದಲ್ಲಿ ಪತಂಜಲಿ ಮುನಿ ಬರೆದ `ಯೋಗ ಸೂತ್ರಗಳು' ಕೃತಿಯನ್ನು ಯೋಗಶಾಸ್ತ್ರದ ಮೂಲಗ್ರಂಥವೆಂದು ಪರಿಗಣಿಸಲಾಗಿದೆ.
* ಕಿ.ಶ. 15ನೇ ಶತಮಾನದಲ್ಲಿ ಸ್ವಾಮಿ ಗೋರಖನಾಥರು ಹಠ ಯೋಗ ಪ್ರದೀಪಿಕ ಎಂಬ ಕೃತಿ ಬರೆದಿದ್ದಾರೆ.

ಯೋಗದಿಂದ ಏನು ಪ್ರಯೋಜನ?
* ದೈಹಿಕ ಮತ್ತು ಮಾನಸಿಕ ಆರೋಗ್ಯ
* ಆಧುನಿಕ ವೈದ್ಯ ವಿಜ್ಞಾನಕ್ಕೆ ಸವಾಲಾಗಿರುವ ಅನೇಕ ಕಾಯಿಲೆಗಳು ಯೋಗದ ಮೂಲಕ ಪರಿಹಾರವಾಗುತ್ತವೆ.

Monday, 14 November 2016

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

Bigg Boss ನಿಂದ ಉದ್ಯೋಗಿಗಳು ಏನೇಲ್ಲ ಕಲಿಯಬಹುದು? ಏನು ಕಲಿಯಬಾರದು?

ಬಿಗ್‍ಬಾಸ್ ರಿಯಾಲಿಟಿ ಶೋನಿಂದ ಉದ್ಯೋಗಿಗಳು ಕಲಿಯಬೇಕಾದ ಮತ್ತು ಕಲಿಯಬಾರದ ಅಂಶಗಳೇನು? ಈ ಕಾರ್ಯಕ್ರಮ ನೀಡುವ ಪಾಠವನ್ನು ನಮ್ಮ ಕರಿಯರ್ ಪ್ರಗತಿಗೂ ಬಳಸಬಹುದೇ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಬಿಗ್‍ಬಾಸ್ ಕಾರ್ಯಕ್ರಮ ನೀವು ಇಷ್ಟಪಡಬಹುದು. ಇಷ್ಟ ಪಡದೆ ಇರಬಹುದು. ಆದರೆ, ಸಂಪೂರ್ಣವಾಗಿ ನಿರಾಕರಿಸುವುದು ಕಷ್ಟ. ಯಾಕೆಂದರೆ, ಕ್ಯಾಮೆರಾ ಇಲ್ಲವೆನ್ನುವುದನ್ನು ಬಿಟ್ಟರೆ ಪ್ರತಿಯೊಂದು ಮನೆಯಲ್ಲಿ, ಆಫೀಸ್‍ನಲ್ಲಿ ಇರುವ ವಾತಾವರಣದಂತೆಯೇ ಬಿಗ್‍ಬಾಸ್ ಮನೆ ಇರುತ್ತದೆ.
ನೀವು ಕೆಲಸ ಮಾಡುತ್ತಿರುವ ಆಫೀಸ್ ಅನ್ನೇ ನೋಡಿ. ಅದನ್ನೇ ಬಿಗ್‍ಬಾಸ್ ಮನೆಯೆಂಬ ದೃಷ್ಟಿಯಲ್ಲಿ ನೋಡಿ. ಅಲ್ಲಿ ಎಷ್ಟೊಂದು ಜನರಿದ್ದಾರೆ. ವಿವಿಧ ಜಾತಿ, ಧರ್ಮ, ಪ್ರತಿಭೆಯುಳ್ಳವರು ಅಲ್ಲಿರುತ್ತಾರೆ. ಎಲ್ಲರೂ ಒಂದೇ ಮನೆಯಲ್ಲಿ ಇರುವವರಂತೆ ಇರುತ್ತಾರೆ. ಅಲ್ಲೂ ಗುಂಪುಗಾರಿಕೆ ಇದೆ. ಜಗಳವಿದೆ. ದರ್ಪ, ಆಹಂ, ಮತ್ಸರ, ಕಾಲೆಳೆಯುವಿಕೆ ಇದೆ. ಅಷ್ಟೇ ಏಕೆ, ಯಾರ್ಯಾರೋ ಒಳಗೆ ಬರುತ್ತಾರೆ. ಯಾರ್ಯಾರೋ ಹೊರಗೆ ಬರುತ್ತಾರೆ. ಬಿಗ್‍ಬಾಸ್ ಕಾರ್ಯಕ್ರಮವು ಕರಿಯರ್‍ಗೆ ಅತ್ಯಂತ ಮಹತ್ವದ ಪಾಠ ಕಲಿಸುತ್ತದೆ. ನಾವು ಅನುಕರಿಸಬಹುದಾದ ಮತ್ತು ಅನುಕರಿಸಬಾರದ ಹಲವು ಸಂಗತಿಗಳು ಬಿಗ್‍ಬಾಸ್‍ನಲ್ಲಿದೆ.
ಉತ್ತಮ ನಾಯಕತ್ವ: ಕನ್ನಡ ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಸುದೀಪ್ ಸ್ಥಾನದಲ್ಲಿ ಇನ್ಯಾರೋ ಸಾಮಾನ್ಯ ನಟರನ್ನು ಕಲ್ಪಿಸಿಕೊಳ್ಳಿ. ಯಾಕೋ, ಸರಿಬರುತ್ತಿಲ್ಲ ತಾನೇ. ಕನ್ನಡದಲ್ಲಿ ಬಿಗ್‍ಬಾಸ್‍ಗೆ ಸುದೀಪ್ ಮಾತ್ರ ಸೂಕ್ತವೆಂಬ ಭಾವನೆ ಎಲ್ಲರ ಮನದಲ್ಲಿ ಮೂಡಿರುತ್ತದೆ. ಉತ್ತಮ ನಾಯಕತ್ವದ ಲಕ್ಷಣವೇ ಇದು. ನೀವು ಕೆಳಹಂತದ ಉದ್ಯೋಗದಲ್ಲಿದ್ದರೆ ನಿಮಗೆ ನಿಮ್ಮ ಟೀಮ್ ಲೀಡರೇ ನಾಯಕ ಆಗಬಹುದು. ಆ ಟೀಮ್ ಲೀಡರ್‍ಗೆ ಇನ್ಯಾರೋ ಮ್ಯಾನೇಜರ್ ನಾಯಕ ಆಗಿರಬಹುದು. ಮ್ಯಾನೇಜರ್‍ಗೆ ಚೀಫ್ ಮ್ಯಾನೇಜರ್, ಚೀಫ್ ಮ್ಯಾನೇಜರ್‍ಗೆ ಸಿಇಒ ಬಿಗ್‍ಬಾಸ್‍ನಂತೆ ಕಾಣಬಹುದು. ಈ ಎಲ್ಲಾ ಚೈನ್‍ಗಳು ಸಮರ್ಥವಾಗಿರುವುದು ಅತ್ಯಂತ ಮುಖ್ಯ. ಸಹೋದ್ಯೋಗಿಗಳು ಗೌರವಿಸುವಂತಹ ಉತ್ತಮ ವ್ಯಕ್ತಿತ್ವವನ್ನು ಲೀಡರ್ ಹೊಂದಿರಬೇಕು. ಇಲ್ಲಿ ಎಲ್ಲರನ್ನು ವಿಶ್ವಾಸಕ್ಕೆ ತೆಗೆದುಕೊಂಡು ಮುಂದೆ ಸಾಗುವವರು ಮಾತ್ರ ನಾಯಕರಾಗುತ್ತಾರೆ.
ಬೇಗ ಎದ್ದೇಳಿ: ತಡವಾಗಿ ಮಲಗಿ ತಡವಾಗಿ ಎದ್ದೇಳುವ ಗುಣವನ್ನು ಬಿಗ್‍ಬಾಸ್ ನೋಡಿ ಕಲಿಯಬೇಡಿ. ಬಿಗ್‍ಬಾಸ್ ಕಾರ್ಯಕ್ರಮದಲ್ಲಿ ಬಹುತೇಕರಿಗೆ ಬೆಳಗಾಗುವುದು ಒಂಬತ್ತರ ಮೇಲೆಯೇ. ಮತ್ತೆ ಬಹುತೇಕರು ಮಲಗುವುದು ತಡವಾಗಿಯೇ. ಥೇಟ್ ಕಾಪೆರ್Çರೇಟ್ ಕಲ್ಚರ್‍ನಂತೆಯೇ. ರಾತ್ರಿ ಯಾವುದೋ ಪಾರ್ಟಿಗೆ ಹೋಗುವುದು. ಬೆಳಗ್ಗೆ ಒಂಬತ್ತರ ನಂತರ ಎದ್ದೇಳುವುದನ್ನು ಬಹುತೇಕ ಉದ್ಯೋಗಿಗಳು ರೂಢಿಸಿಕೊಂಡಿದ್ದಾರೆ. ಬೆಳಗ್ಗೆ ಎದ್ದು ನಿದ್ದೆಗಣ್ಣಿನಲ್ಲೇ ಆಫೀಸ್‍ಗೆ ಬರುತ್ತಾರೆ. ಇದರ ಬದಲು, ರಾತ್ರಿ ಬೇಗ ಮಲಗಿ, ಬೆಳಗ್ಗೆ ಬೇಗ ಎದ್ದು, ವ್ಯಾಯಾಮ, ವಾಕಿಂಗ್ ಮಾಡಿ. ದಿನದ ಆರಂಭ ಉತ್ತಮವಾಗಿದ್ದರೆ ನೀವು ಆಫೀಸ್‍ನಲ್ಲಿಯೂ ಲವಲವಿಕೆಯಿಂದ ಇರುತ್ತೀರಿ. ನಿಮ್ಮ ಕರಿಯರ್ ಪ್ರಗತಿಗೆ ಈ ಲವಲವಿಕೆ ಅತ್ಯಂತ ಅಗತ್ಯ.
ಗಾಸಿಪ್ ಬೇಡ: ಬಿಗ್‍ಮನೆಯ ಅತ್ಯಂತ ಆಕರ್ಷಣೆ ಅಲ್ಲಿನ ಗಾಸಿಪ್ ಆಗಿದೆ. ಯಾರೋ ಅವರ ಬಗ್ಗೆ ಹೀಗಂದರು, ಹಾಗಂದರು, ಆತ ಹೀಗೆ, ಇವಳು ಹೀಗೆ ಎಂದೆಲ್ಲ ಗುಸುಗುಸಿಗೆ ಬಿಗ್‍ಬಾಸ್ ಕ್ಯಾಮೆರಾ ಕಣ್ಣಾಗುತ್ತದೆ ಮತ್ತು ಕಿವಿಯಾಗುತ್ತದೆ. ಬಿಗ್‍ಮನೆಯಲ್ಲಿ ನಡೆಯುವ ಈ ಗುಸುಗುಸು ಪೂರ್ತಿ ಮನೆಯ ವಾತಾವರಣವನ್ನೇ ಹಾಳು ಮಾಡುತ್ತದೆ. ಆಫೀಸ್‍ನಲ್ಲಿಯೂ ಇಂತಹ ಗಾಸಿಪ್‍ಗಳು ಸಾಮಾನ್ಯ. ನೀವು ಗಾಸಿಪ್ ಮಾಡುವವರಾಗಿದ್ದರೆ ನೀವು ನಾಮಿನೆಟ್ ಆಗುವವರ ಲಿಸ್ಟ್‍ನಲ್ಲಿದ್ದೀರಿ ಎಂದು ತಿಳಿಯಿರಿ.
ಗುಂಪುಗಾರಿಕೆ: ಬಿಗ್‍ಬಾಸ್ ಮನೆಯಲ್ಲಿ ಗುಂಪುಗಾರಿಕೆ ನೋಡಿರುತ್ತೀರಿ. ಇರುವ ಕೆಲವೇ ಮಂದಿಯಲ್ಲಿ ಹಲವು ಬಣಗಳು ಸೃಷ್ಟಿಯಾಗುತ್ತವೆ. ಆಫೀಸ್‍ನಲ್ಲಿಯೂ ಹಾಗೆಯೇ. ಒಂದಿಷ್ಟು ಗುಂಪುಗಾರಿಕೆ, ರಾಜಕೀಯ ಇರುತ್ತದೆ. ಇಂತಹ ಗುಂಪುಗಾರಿಕೆಯೂ ಕಂಪನಿಯ ಶತ್ರು.
ಆರೋಗ್ಯಕರ ಸ್ಪರ್ಧೆ: ಬಿಗ್‍ಬಾಸ್‍ನಲ್ಲಿ ಪ್ರತಿಯೊಬ್ಬರಿಗೂ ಪ್ರತಿಯೊಬ್ಬರೂ ಸ್ಫರ್ಧಿಯಾಗಿರುತ್ತಾರೆ. ಎಲ್ಲರೂ ಗೆಲ್ಲಬೇಕೆಂದು ಬಯಸುತ್ತಾರೆ. ಆದರೆ, ಆ ಗೆಲುವು ಪಡೆಯಲು ಅತ್ಯಂತ ಪ್ರಮುಖವಾಗಿ ಬೇಕಾದದ್ದು ಪ್ರಯತ್ನ, ಪ್ರಾಮಾಣಿಕತೆ ಮತ್ತು ಪ್ರತಿಭೆ. ನೀವಿರುವ ಕಂಪನಿಯಲ್ಲಿಯೂ ಉನ್ನತ್ತ ಸ್ಥಾನಕ್ಕೆ ಹೋಗಲು ಪ್ರತಿಯೊಬ್ಬರೂ ಬಯಸುತ್ತಿರುತ್ತಾರೆ. ಪ್ರಯತ್ನ, ಪ್ರತಿಭೆ, ಪ್ರಾಮಾಣಿಕತೆ ಇರುವವರು ಇಲ್ಲೂ ಪ್ರಗತಿ ಕಾಣುತ್ತಾರೆ.
ಪರ್ಫಾಮೆನ್ಸ್ ಮುಖ್ಯ: ಬಿಗ್‍ಬಾಸ್‍ನಲ್ಲಿ ವಿವಿಧ ರೀತಿಯ ಟಾಸ್ಕ್‍ಗಳು ಇರುತ್ತವೆ. ಪ್ರತಿದಿನ, ಕ್ಷಣವೂ ಟಾಸ್ಕ್‍ನಿಂದ ಕೂಡಿರುತ್ತದೆ. ಇಲ್ಲಿ ಉತ್ತಮ ಪರ್ಫಾಮೆನ್ಸ್ ತೋರಿದವರು ಮಾತ್ರ ಉಳಿಯುತ್ತಾರೆ. ಇದ್ದು ಇಲ್ಲದಂತೆ ಇರುವವರು, ಟಾಸ್ಕ್‍ಗಳಲ್ಲಿ ಸಮರ್ಪಕವಾಗಿ ತೊಡಗಿಸಿಕೊಳ್ಳದವರು ಬಿಗ್‍ಬಾಸ್ ಮನೆಯಿಂದ ಮನೆಗೆ ಹೋಗುತ್ತಾರೆ. ಕಂಪನಿಗಳು ಸಹ ಪರ್ಫಾಮೆನ್ಸ್ ತೋರುವವರಿಗೆ ಮಾತ್ರ ಮಣೆ ಹಾಕುತ್ತದೆ. ಇಲ್ಲವಾದರೆ ಮನೆಗೆ ಕಳುಹಿಸುತ್ತದೆ.
ಮಾತು ಮತ್ತು ಕೃತಿ: ಬಿಗ್‍ಬಾಸ್‍ನಲ್ಲಿ ಕೆಲವರು ದೊಡ್ಡ ದೊಡ್ಡ ಮಾತುಗಳನ್ನು ಆಡುತ್ತಾರೆ. ಆದರೆ, ಅವರ ಮಾತಿಗೂ ಕೃತಿಗೂ ತಾಳೆಯಾಗುವುದೇ ಇಲ್ಲ. ಆಫೀಸ್‍ನಲ್ಲಿಯೂ ಹಾಗೆಯೇ, ಕೆಲವರು ಮಾತು ಮಾತ್ರ ಆಡುತ್ತಾರೆ. ಅವರ ಮಾತು ಕೃತಿಯಾಗುವುದೇ ಇಲ್ಲ. ಹೇಳುವುದು ಒಂದು, ಮಾಡುವುದು ಇನ್ನೊಂದು ಎಂಬಂತೆ ಇರುವವರು ಒಂದಿಷ್ಟು ದಿನ ಕಂಪನಿಯನ್ನು ಯಾಮಾರಿಸಬಹುದಾದರೂ ಹೆಚ್ಚು ದಿನ ಉಳಿಯಲು ಸಾಧ್ಯವಿಲ್ಲ.
ಕೆಲಸ ಕಲಿಯಿರಿ: ಬಿಗ್‍ಬಾಸ್‍ನಲ್ಲಿ ವಿವಿಧ ವಿಐಪಿಗಳು ಇರುತ್ತಾರೆ. ಅವರೂ ಅಡುಗೆ ಕೆಲಸ ಮಾಡಬೇಕಾಗುತ್ತದೆ. ಬಾತ್‍ರೂಂ ಸ್ವಚ್ಛ ಮಾಡಬೇಕಾಗುತ್ತದೆ. ನೀವು ಕರಿಯರ್‍ನಲ್ಲಿ ಪ್ರಗತಿ ಕಾಣಬೇಕಾದರೆ ನಿಮ್ಮ ಕೆಲಸಕ್ಕೆ ಮಾತ್ರ ಸೀಮಿತರಾಗಬೇಡಿ. ಕಂಪನಿಯ ಎಲ್ಲಾ ಸಿಬ್ಬಂದಿಗಳು ಮಾಡುವ ಕೆಲಸದ ಬಗ್ಗೆಯೂ ಅರಿವಿರಲಿ.
ದುಂದು ವೆಚ್ಚ ಬೇಡ: ಬಿಗ್‍ಬಾಸ್‍ನ ಲಗ್ಷುರಿ ಟಾಸ್ಕ್‍ನಿಂದ ಎಲ್ಲರೂ ಕಲಿಯಬಹುದಾದ ಒಂದು ಅಂಶವಿದೆ. ನಿಮ್ಮ ಬಜೆಟ್ ಎಷ್ಟಿದೆಯೋ ಅಷ್ಟೇ ಖರ್ಚು ಮಾಡಿ ಎಂಬ ಅತ್ಯಂತ ಮಹತ್ವದ ಪಾಠವನ್ನು ಅದು ಹೇಳಿಕೊಡುತ್ತದೆ. ನಿಮ್ಮ ವೇತನಕ್ಕಿಂತ ಹೆಚ್ಚು ಖರ್ಚು ಮಾಡಬೇಡಿ. ಕಾರು ಸಾಲ, ಮನೆ ಸಾಲವೆಂದು ಹೆಚ್ಚು ಹೊರೆಯಲ್ಲಿ ಇರಬೇಡಿ.
ಬ್ಯಾಗ್ ಸಿದ್ಧವಾಗಿರಲಿ: ಕೊನೆಯ ಮತ್ತು ಅತ್ಯಂತ ಪ್ರಮುಖ ಪಾಠವೆಂದರೆ `ನಿಮ್ಮ ಬ್ಯಾಗ್ ಪ್ಯಾಕ್ ಮಾಡಿಟ್ಟುಕೊಳ್ಳಿ'. ನೀವು ಸದಾ ಯಾವಾಗ ಬೇಕಾದರೂ ಕಂಪನಿ ನಿಮ್ಮನ್ನು ಕೆಲಸದಿಂದ ತೆಗೆದು ಹಾಕಬಹುದು. ಕೆಲಸ ಹೋಗುವ ಭಯದಲ್ಲಿ ಇರಬೇಡಿ. ನಿಮಗೆ ಎಲ್ಲಿ ಹೋದರೂ ಅವಕಾಶ ಸಿಗುತ್ತದೆ ಎಂಬಂತಹ ವ್ಯಕ್ತಿತ್ವ, ಪ್ರತಿಭೆ ಬೆಳೆಸಿಕೊಳ್ಳಿ.

  • ಆರೋಗ್ಯ ಚೆನ್ನಾಗಿದ್ದರೆ ಮಾತ್ರ ಆಫೀಸ್‍ನಲ್ಲಿ ಮತ್ತು ಬಿಗ್‍ಬಾಸ್‍ನಲ್ಲಿ ಉಳಿಯಬಹುದು. ಇತ್ತೀಚೆಗೆ ಬಿಗ್‍ಬಾಸ್ ಮನೆಯಿಂದ ಹೊರಬಿದ್ದ ಅಭ್ಯರ್ಥಿಯೊಬ್ಬರು ಹೊರಹೋಗಲು ಆರೋಗ್ಯ ಸಮಸ್ಯೆಯೂ ಪ್ರಮುಖ ಕಾರಣವಾಗಿತ್ತು.

  •  ಬಿಗ್‍ಬಾಸ್‍ನಲ್ಲಿ ಅತ್ತರೆ ಅನುಕಂಪದ ಓಟ್ ಬರುತ್ತೆ ಎಂದು ಹೇಳುವವರು ಇದ್ದಾರೆ. ಆದರೆ ಆಫೀಸ್‍ನಲ್ಲಿ ಯಾವಾಗಲೂ ನಮ್ಮ ವೀಕ್‍ನೆಸ್ ಅನ್ನು ಪ್ರದರ್ಶಿಸಬಾರದು. ನೀವು ಸ್ಟ್ರಾಂಗ್ ಆಗಿದ್ದಷ್ಟು ಒಳ್ಳೆಯದು.

  •  ನಿಮಗೆ ಇಷ್ಟವಾಗದ ವಿಚಾರದ ಬಗ್ಗೆ ಸಾತ್ವಿಕವಾಗಿ ಪ್ರತಿಭಟನೆ ಮಾಡಿ. ಪ್ರತಿಯೊಂದಕ್ಕೂ ಪ್ರತಿಭಟನೆ ಮಾಡಬೇಡಿ. ಒಳ್ಳೆಯ ಕಾರಣದಿಂದ ಗಮನ ಸೆಳೆಯಿರಿ. ಗಿಮಿಕ್ ಮಾಡಿ ಗಮನ ಸೆಳೆಯಬೇಡಿ.

  •  ಇತರರನ್ನು ಗೌರವಿಸಿ. ನಿಮ್ಮಲ್ಲಿ ಇರುವ ಕೆಟ್ಟಗುಣಗಳನ್ನು ಬಿಟ್ಟುಬಿಡಿ. ನಿಮ್ಮಲ್ಲಿ ಇತರರಿಗೆ ಇಷ್ಟವಾಗದ ಸಂಗತಿಗಳು ಯಾವುದು ಎಂದು ತಿಳಿದುಕೊಳ್ಳಿ.ತಾನು ಮಾತ್ರ ಗೆಲ್ಲಬೇಕೆಂದು ಸ್ವಾರ್ಥಿಯಾದರೆ ಎಲ್ಲರೂ ದೂರ ಸರಿಯುತ್ತಾರೆ.

  •  ನಿಮಗೆ ಗೊತ್ತಿರುವ ಕೌಶಲವನ್ನು ಕಂಪನಿಯ ಇತರ ಸಹೋದ್ಯೋಗಿಗಳಿಗೂ ಹೇಳಿಕೊಡಿ. ಇತರರ ನೋವಿಗೆ ಸ್ಪಂದಿಸಿ. ಅಗತ್ಯಬಿದ್ದರೆ ಸಹಾಯ ಮಾಡಿ.

  •  ನಾವು ಆಡುವ ಮಾತುಗಳ ಕುರಿತೂ ಎಚ್ಚರದಿಂದ ಇರಬೇಕು. ನಿಮಗೆ ತಿಳಿಯದಂತೆ ಆಗುವ ತಪ್ಪುಗಳ ಕುರಿತೂ ಎಚ್ಚರದಿಂದ ಇರಬೇಕು.

  •  ಆಫೀಸ್ ಎಂದರೆ ಸದಾ ಕತ್ತೆಯಂತೆ ದುಡಿಯಬೇಕೆಂದಿಲ್ಲ. ಆಗಾಗ ಫನ್, ಮನರಂಜನೆ ಇರಬೇಕು. ನಗುಮುಖದಿಂದ ಇದ್ದರೆ ಮಾತ್ರ ನಿಮ್ಮ ಆರೋಗ್ಯ ಮತ್ತು ಕಂಪನಿಯ ಆರೋಗ್ಯ ಚೆನ್ನಾಗಿರುತ್ತದೆ.

  •  ನಿಮ್ಮ ಪ್ರತಿಭೆಗಳನ್ನು ಸರಿಯಾಗಿ ಪ್ರದರ್ಶಿಸಲು ಬಿಗ್‍ಬಾಸ್ ಅಥವಾ ಆಫೀಸ್ ಉತ್ತಮ ವೇದಿಕೆಯಾಗಿದೆ. ಇಲ್ಲಿ ಪ್ರತಿಭಾನ್ವಿತರು ಉಳಿಯುವ ಸಾಧ್ಯತೆ ಹೆಚ್ಚಿದೆ.


 

Published in VK Mini

Tuesday, 4 October 2016

ಸಿವಿ ಬರೆಯುವ ಶೈಲಿ ಹೇಗಿರಬೇಕು?

ಸಿವಿ ಬರೆಯುವ ಶೈಲಿ ಹೇಗಿರಬೇಕು?

ರೆಸ್ಯೂಂ ಅಥವಾ ಸಿವಿಯನ್ನು ಸಂಕ್ಷಿಪ್ತವಾಗಿ ಮತ್ತು ಸುಲಭವಾಗಿ ಓದಲು ಸಾಧ್ಯವಾಗುವಂತಹ ಶೈಲಿಯಲ್ಲಿ ಬರೆಯಬೇಕು. ಅದಕ್ಕಾಗಿ ಸೂಕ್ತವಾದ, ಪರಿಣಾಮಕಾರಿ ಪದಗಳ ಬಳಕೆ ಮಾಡಬೇಕು. ನೀವು ಈ ಹಿಂದಿನ ಉದ್ಯೋಗದಲ್ಲಿ ಏನು ಸಾಧನೆ ಮಾಡಿದ್ದೀರಿ ಇತ್ಯಾದಿ ವಿಷಯಗಳ ಬಗ್ಗೆ ಬರೆಯುವಾಗ ಆದಷ್ಟು ಆಕರ್ಷಕವಾಗಿ ಬರೆಯಲು ಪ್ರಯತ್ನಿಸಿ. ಎಲ್ಲಾ ಬರೆದ ನಂತರ ಯಾವುದಾದರೂ ಕಾಗುಣಿತ ಅಥವಾ ವ್ಯಾಕರಣ ತಪ್ಪುಗಳನ್ನು ಮಾಡಿದ್ದೀರಾ ಎಂದು ಪರಿಶೀಲಿಸಿ. ತಪ್ಪಿಲ್ಲದಂತೆ ಬರೆದು ಕಳುಹಿಸಿ.
ಸಿವಿಯಲ್ಲಿ ಎಷ್ಟು ವರ್ಷ ಹಳೆಯ ಮಾಹಿತಿಯನ್ನು ಬರೆಯಬೇಕು?

ಸಿವಿಯಲ್ಲಿ ಎಷ್ಟು ವರ್ಷ ಹಳೆಯ ಮಾಹಿತಿಯನ್ನು ಬರೆಯಬೇಕು?

ಗರಿಷ್ಠವೆಂದರೆ ಹತ್ತು ವರ್ಷ ಹಿಂದಿನ ಮಾಹಿತಿ ಬರೆದರೆ ಸಾಕು. ಇದು ಶಿಕ್ಷಣ ಮಾಹಿತಿಗೆ ಅಷ್ಟಾಗಿ ಅನ್ವಯವಾಗುವುದಿಲ್ಲ. 1ರಿಂದ 10ನೇ ತರಗತಿ ಇತ್ಯಾದಿ ಮಾಹಿತಿ ಅವಶ್ಯವಿದ್ದಲ್ಲಿ ಬರೆಯಬೇಕಾದೀತು. ಆದರೆ, ಉದ್ಯೋಗ ಅನುಭವ ಇತ್ಯಾದಿಗಳಲ್ಲಿ ಬಹಳಷ್ಟು ಹಳೆಯ ಮಾಹಿತಿಗಳು ಈಗಿನ ಕಾಲಕ್ಕೆ ಔಟ್‍ಡೇಟೆಡ್ ಆಗಿರುತ್ತದೆ. ಎಲ್ಲಾದರೂ ಒಂದೇ ವಾಕ್ಯದಲ್ಲಿ 25 ವರ್ಷಗಳ ಕೆಲಸದ ಅನುಭವ ಇದೆ ಎಂದು ಬರೆಯಬಹುದು.
ನನ್ನ ಸಿವಿಯನ್ನು ಉದ್ಯೋಗದಾತರು ಓದದೆ ಇದ್ದರೆ?

ನನ್ನ ಸಿವಿಯನ್ನು ಉದ್ಯೋಗದಾತರು ಓದದೆ ಇದ್ದರೆ?

ಬಹುತೇಕ ಕಂಪನಿಗಳು ನಿಮ್ಮ ಸಿವಿಯನ್ನು ಮೊದಲು ಓದುವುದಿಲ್ಲ. ಕಣ್ಣೋಟದಲ್ಲಿಯೇ ಜಸ್ಟ್ ಸ್ಕ್ಯಾನ್ ಮಾಡುತ್ತಾರೆ. ಇದಕ್ಕಾಗಿ ನೀವು ಸಣ್ಣ ಸಣ್ಣ ವಾಕ್ಯಗಳಲ್ಲಿ ಬರೆದಿರಬೇಕು. ಅನಗತ್ಯ ಮಾಹಿತಿ ಬರೆದಿರಬಾರದು. ಕೀವಡ್ರ್ಸ್ ಬರೆಯಲು ಮರೆತಿರಬಾರದು. ಮಾಹಿತಿಗಳನ್ನು ನೀಟಾಗಿ ಜೋಡಿಸಿರಬೇಕು. ನಿಮ್ಮ ಸ್ಕಿಲ್‍ಗಳ ಮಾಹಿತಿ ಹುಡುಕಲು ಕಂಪನಿಯ ವ್ಯಕ್ತಿ ಹೆಚ್ಚು ತ್ರಾಸ ಪಡುವಂತೆ ಇರಬಾರದು. ಕಣ್ಣಿಗೆ ಹಿತವಾಗಿರುವಂತಹ ಫಾಂಟ್ ಮತ್ತು ಟೆಕ್ಸ್ಟ್‍ಗಳನ್ನು ಬಳಸಿರಿ. ಸಕಾರಾತ್ಮಕ ಭಾಷೆಯಲ್ಲಿ ಬರೆಯಿರಿ. ಅನಗತ್ಯ ಮಾಹಿತಿಗಳಿಗೆಲ್ಲ ಕತ್ತರಿ ಹಾಕಿ. ಅಗತ್ಯವಾದ ವಿಷಯಗಳನ್ನು ಮಾತ್ರ ಸಿವಿ ಅಥವಾ ರೆಸ್ಯೂಂನಲ್ಲಿ ಬರೆಯಿರಿ.
ಹವ್ಯಾಸ, ವೈಯಕ್ತಿಕ ಆಸಕ್ತಿಗಳ ಕುರಿತು ಬರೆಯಬೇಕೆ?

ಹವ್ಯಾಸ, ವೈಯಕ್ತಿಕ ಆಸಕ್ತಿಗಳ ಕುರಿತು ಬರೆಯಬೇಕೆ?

ರೆಸ್ಯೂಂ ಅಥವಾ ಸಿವಿಯಲ್ಲಿ ನಿಮ್ಮ ಹವ್ಯಾಸ ಇತ್ಯಾದಿಗಳನ್ನು ಬರೆಯುವ ಅಗತ್ಯವಿಲ್ಲ. ನಿಮ್ಮ ರೆಸ್ಯೂಂ ಓಕೆ ಆದ ನಂತರ ನಿಮ್ಮ ವ್ಯಕ್ತಿತ್ವ ತಿಳಿದುಕೊಳ್ಳಲು ಸಂದರ್ಶನದಲ್ಲಿ ಈ ಕುರಿತು ಪ್ರಶ್ನೆಗಳನ್ನು ಸಂದರ್ಶಕರು ಕೇಳಬಹುದು. ಆ ಸಮಯದಲ್ಲಿ ಏನೇಲ್ಲ ಹೇಳಬೇಕೆಂದು ಸಿದ್ಧತೆ ನಡೆಸಿ.
ಸ್ವಚ್ಛವಾಗಿರಲಿ ಸೋಷಿಯಲ್ ಮೀಡಿಯಾ

ಸ್ವಚ್ಛವಾಗಿರಲಿ ಸೋಷಿಯಲ್ ಮೀಡಿಯಾ

ನಿಮ್ಮ ಫೇಸ್‍ಬುಕ್, ಲಿಂಕ್ಡ್‍ಇನ್, ಟ್ವಿಟ್ಟರ್ ಖಾತೆಗಳಿಗೆ ಉದ್ಯೋಗದಾತರು ಆಗಾಗ ಭೇಟಿ ನೀಡುತ್ತಿರುತ್ತಾರೆ. ಅದಕ್ಕಾಗಿ ಅವುಗಳನ್ನು ನೀಟಾಗಿಟ್ಟಿರಿ.

* ನಿಮ್ಮ ಪ್ರೊಫೈಲ್ ನಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರಕ್ಕೆ ಸಂಬಂಧಿಸಿದ ಮೌಲ್ಯಯುತವೆನಿಸುವ ಸ್ಟೇಟಸ್, ಅಪ್‍ಡೇಟ್‍ಗಳು ಮಾತ್ರ ಇರಲಿ.
* ಫೇಸ್‍ಬುಕ್‍ನಲ್ಲಿ ಸಿಕ್ಕಸಿಕ್ಕವುಗಳನ್ನೆಲ್ಲ ಶೇರ್ ಮಾಡಬೇಡಿ. ಶೇರ್ ಮಾಡಿದ್ದರೂ ಕೆಲವೇ ದಿನಗಳಲ್ಲಿ ಅವುಗಳನ್ನೆಲ್ಲ ಡಿಲೀಟ್ ಮಾಡಿಬಿಡಿ.
* ಅನವಶ್ಯಕವಾಗಿ ಯಾರಾದರೂ ಟ್ಯಾಗ್ ಮಾಡಿದ್ದರೆ ಅದನ್ನು ನಿಮ್ಮ ಟೈಮ್ ಲೈನ್‍ನಿಂದ ರಿಮೂವ್ ಮಾಡಿರಿ. ನೀವೂ ಇತರರಿಗೆ ಟ್ಯಾಗ್ ಮಾಡಬೇಡಿ.
* ಪ್ರೊಫೈಲ್ನಲ್ಲಿ ನೀವು ನೀಡುವ ಮಾಹಿತಿಗಳು ರೆಸ್ಯೂಂನಂತೆ ಇರಲಿ. ನಿಮ್ಮನ್ನು ನೀವು ಬ್ರಾಂಡ್ ಮಾಡಿಕೊಳ್ಳುವಂತೆ ಇರಲಿ.
* ಟ್ವಿಟ್ಟರ್‍ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಬರೆಯಲು ಸೀಮಿತ ಸ್ಥಳಾವಕಾಶ ಇರುತ್ತದೆ. ಅಲ್ಲಿ ನಿಮ್ಮ ವೃತ್ತಿ, ಹವ್ಯಾಸ, ಆಸಕ್ತಿಗಳ ಬಗ್ಗೆ ನಾಲ್ಕು ಲೈನ್ ಬರೆಯಿರಿ. ನಿಮ್ಮ ಬ್ಲಾಗ್ ಇತ್ಯಾದಿಗಳ ಲಿಂಕ್ ನೀಡಿರಿ.
* ಟ್ವಿಟರ್, ಫೇಸ್‍ಬುಕ್, ಲಿಂಕ್ಡ್‍ಇನ್‍ಗಳಲ್ಲಿ ಪೆÇ್ರಫೆಷನಲ್ ಆಗಿ ಕಾಣಿಸುವಂತಹ ಫೋಟೋ ಹಾಕಿ.
* ಲಿಂಕ್ಡ್‍ಇನ್‍ನಲ್ಲಿ ಎಲ್ಲಾ ಮಾಹಿತಿಗಳನ್ನು ಬರೆಯಿರಿ. ಅಲ್ಲಿ ನಿಮ್ಮ ಪೆÇ್ರಫೈಲ್ ಹೇಗೆ ಕಾಣಿಸುತ್ತದೆ ಎಂದು ನೋಡಿ. ಪ್ರೊಫೈಲ್ ಅಂದಗೆಡಿಸುವ ಅಂಶಗಳನ್ನೆಲ್ಲ ಡಿಲೀಟ್ ಮಾಡಿ.
* ನಿಮ್ಮ ಸೋಷಿಯಲ್ ನೆಟ್‍ವರ್ಕಿಂಗ್ ತಾಣಕ್ಕೆ ಯಾರಾದರೂ ಭೇಟಿ ನೀಡಿದಾಗ ಅವರ ಮನಸಿಗೆ ಮುದ ನೀಡುವಂತೆ ನಿಮ್ಮ ಪ್ರೊಫೈಲ್ ಇರಲಿ.
ಆನ್‍ಲೈನ್ ತಾಣಗಳಲ್ಲಿ ಕಾಗುಣಿತಕ್ಕೆ ಕೊಕ್

ಆನ್‍ಲೈನ್ ತಾಣಗಳಲ್ಲಿ ಕಾಗುಣಿತಕ್ಕೆ ಕೊಕ್

ಆನ್‍ಲೈನ್ ತಾಣಗಳಲ್ಲಿ ನೀವು ಬರೆಯುವಾಗ ಕಾಗುಣಿತ ತಪ್ಪು ಮಾಡಿದರೆ ಅದರಿಂದ ನಿಮ್ಮ ವ್ಯಕ್ತಿತ್ವಕ್ಕೆ ಅಥವಾ ಉದ್ಯೋಗಕ್ಕೆ ಕುತ್ತಾಗಬಹುದು.
* ಫೇಸ್‍ಬುಕ್, ಟ್ವಿಟ್ಟರ್, ವಾಟ್ಸ್‍ಆ್ಯಪ್‍ಗಳಲ್ಲಿ ಉದ್ಯೋಗ ಅಥವಾ ವ್ಯವಹಾರ ಕುರಿತು ಸಂವಹನ ನಡೆಸುವಾಗ ಕಾಗುಣಿತ ತಪ್ಪು ಮಾಡಬೇಡಿ. ಇದರಿಂದ ನಿಮ್ಮ ಬಗ್ಗೆ ಇತರರು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆಯಿದೆ.
* ಉದ್ಯೋಗ ಅಥವಾ ವ್ಯವಹಾರ ಸಂಬಂಧಿತವಾಗಿ ನೀವು ಯಾರಿಗಾದಾರೂ ಇಮೇಲ್ ಮಾಡಬೇಕು ಎಂದಿರಲಿ. ಡಿಯರ್ ಸರ್ ಅಥವಾ ಮೇಡಂ ಎಂದು ಬರೆದು ಅವರ ಹೆಸರು ಬರೆಯುತ್ತೀರಿ. ಆದರೆ, ಆ ವ್ಯಕ್ತಿಯ ಹೆಸರನ್ನು ಸರಿಯಾಗಿ ಬರೆಯುವಿರಾ? ಸ್ಪೆಲ್ಲಿಂಗ್ ಚೆಕ್ ಮಾಡಿಕೊಳ್ಳುತ್ತೀರಾ? ನೀವು ಯಾರಾದರೂ ವ್ಯಕ್ತಿಯ ಹೆಸರನ್ನು ತಪ್ಪು ಬರೆದರೆ ಅದು ಖಂಡಿತವಾಗಿಯೂ ಕ್ಷಮಿಸಲಾಗದ ಅಪರಾಧ!
* ಹೆಸರಿನ ಸ್ಪೆಲ್ಲಿಂಗ್ ತಪ್ಪು ಮಾಡುವುದರಿಂದ ಕೆಲವೊಮ್ಮೆ ಭಿನ್ನ ಅರ್ಥ ಉಂಟಾಗಬಹುದು. ತನ್ನ ಹೆಸರನ್ನು ವಿಚಿತ್ರವಾಗಿ ಬರೆದ ವ್ಯಕ್ತಿಯ ಬಗೆಗೆ ಇಮೇಲ್ ಸ್ವೀಕೃತರಿಗೆ ಕೆಟ್ಟ ಅಭಿಪ್ರಾಯ ಮೂಡಬಹುದು. ಹೆಸರನ್ನು ತಪ್ಪಾಗಿ ಬರೆದರೆ `ಇದು ನನಗಾದ ಅವಮಾನ' ಎಂದು ತಿಳಿದುಕೊಳ್ಳಬಹುದು. ಇದರಿಂದ ನಿಮಗೆ ಸಿಗುವ ಉದ್ಯೋಗ ಅಥವಾ ವ್ಯವಹಾರದ ಡೀಲ್‍ಗಳಿಗೆ ತೊಂದರೆ ಉಂಟಾಗಬಹುದು.
* ಇಮೇಲ್ ಬರೆದು ಸೆಂಡ್ ಬಟನ್ ಒತ್ತುವ ಮೊದಲು ಸ್ಪೆಲ್ಲಿಂಗ್ ಚೆಕ್ ಮಾಡಲು ಒಂದೆರಡು ಸೆಕೆಂಡ್ ವಿನಿಯೋಗಿಸಿ. ಎಲ್ಲಾದರೂ ನೀವು ಯಾರಿಗೆ ಇಮೇಲ್ ಮಾಡುತ್ತೀರೋ ಅವರ ಹೆಸರು ಸರಿಯಾಗಿ ತಿಳಿಯದೆ ಇದ್ದರೆ ಕೇವಲ `ಸರ್/ಮೇಡಂ' ಎಂದು ಸಂಬೋಧಿಸಿದರೆ ಸಾಕು. ಒಟ್ಟಾರೆ ತಪ್ಪಿಲ್ಲದಂತೆ ಬರೆಯಲು ಕಲಿಯಿರಿ.
* ಇಮೇಲ್‍ನಲ್ಲಿ ತಪ್ಪಾಗಿ ಹೆಸರು ಬರೆಯಲು ಹಲವು ಕಾರಣಗಳಿವೆ. ಮೊದಲನೆಯ ಕಾರಣ ಅವಸರ. ಅರ್ಜೆಂಟಾಗಿ ಇಮೇಲ್ ಬರೆದು ಸೆಂಡ್ ಮಾಡುವ ಅಭ್ಯಾಸ ಒಳ್ಳೆಯದಲ್ಲ. ಮತ್ತೆ ಕೆಲವರು ತಮ್ಮ ಹೆಸರನ್ನು ಫೆÇೀನ್‍ನಲ್ಲಿ ಹೇಳಿರುತ್ತಾರೆ. ಕೆಲವು ಹೆಸರುಗಳ ಪೆÇ್ರನೌನ್ಸ್ ಒಂದು ತರಹ ಇರುತ್ತದೆ. ಸ್ಪೆಲ್ಲಿಂಗ್ ಇನ್ನೊಂದು ತರಹ ಇರುತ್ತದೆ. ಹೆಸರಿನ ಸ್ಪೆಲ್ಲಿಂಗ್ ಅನ್ನು ಸರಿಯಾಗಿ ತಿಳಿದುಕೊಂಡು ಇಮೇಲ್ ಬರೆಯಿರಿ.

* ಈಗ ವಾಟ್ಸ್‍ಆ್ಯಪ್‍ನಲ್ಲೂ ಆಫೀಸ್‍ಗೆ ಸಂಬಂಧಪಟ್ಟ ಸಂವಹನ ನಡೆಸಲಾಗುತ್ತದೆ. ಇಲ್ಲೂ ತಪ್ಪಿಲ್ಲದಂತೆ ಬರೆಯಿರಿ. ವ್ಯಾಕರಣ ಮತ್ತು ಕಾಗುಣಿತ ತಪ್ಪಿದ್ದಲ್ಲಿ ಇತರರು ನಿಮ್ಮ ಬಗ್ಗೆ ತಪ್ಪಾಗಿ ಅಂದಾಜಿಸಬಹುದು.
ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸ್ಟೇಟಸ್ ಬೇಡ

ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸ್ಟೇಟಸ್ ಬೇಡ

ಸೋಷಿಯಲ್ ಮೀಡಿಯಾದಲ್ಲಿ ನೀವಿರುವ ಕಂಪನಿಯ ಬಗ್ಗೆ ಅಥವಾ ಬಾಸ್ ಬಗ್ಗೆ ಈ ಕೆಳಗಿನಂತೆ ಸ್ಟೇಟಸ್‍ಗಳನ್ನು ಹಾಕಬೇಡಿ.

* ನನ್ನ ಬಾಸ್ ಇವತ್ತು ಬೆಳಗ್ಗೆ ಬೆಳಗ್ಗೆನೆ ನನ್ನ ಮೂಡ್ ಹಾಳ್ ಮಾಡಿಬಿಟ್ಟ-ಫೀಲಿಂಗ್ ಆ್ಯಂಗ್ರಿ
* ವಾರದ ರಜೆ ಮುಗೀತು. ಮತ್ತೆ ಸೋಮವಾರ ಬಂತು. ಫೀಲಿಂಗ್ ಬೋರ್.
* ಯಾರಿಗೆ ಬೇಕು ಪ್ರಾಜೆಕ್ಟ್. ಎಲ್ಲಾದರೂ ಹಾಳಾಗಿ ಹೋಗೋಣ ಅನಿಸುತ್ತೆ
* ಸರಿಯಾದ ಸಮಯಕ್ಕೆ ಸ್ಯಾಲರಿ ಕೊಡದ ಕಂಪನಿಯಲ್ಲಿ ಅನಿವಾರ್ಯವಾಗಿ ಕೆಲಸ ಮಾಡುವ ಕರ್ಮ ನನ್ನದು.
* ಸೋಷಿಯಲ್ ಮೀಡಿಯಾದಲ್ಲಿ ನೀವಿರುವ ಕಂಪನಿಯ ಬಗ್ಗೆ ಸಕಾರಾತ್ಮಕವಾಗಿ ಬರೆಯಿರಿ. ಯಾವಾಗಲೂ ನಕಾರಾತ್ಮಕವಾಗಿ ಬರೆಯಬೇಡಿ.
* ಯಾವುದೇ ವ್ಯಕ್ತಿಯನ್ನು ನಿಂದಿಸುವ ಬರಹಗಳು ಬೇಡ.
* ಇಂತಹ ಕಮೆಂಟ್‍ಗಳನ್ನು ಮಾಡುವುದರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆಯೇ ಇತರರು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆ ಇದೆ.
* ಸೋಷಿಯಲ್ ಮೀಡಿಯಾದಲ್ಲಿ professional ಆಗಿ ವರ್ತಿಸಿ.
* ನಿಮ್ಮ ಕಮೆಂಟ್‍ಗಳನ್ನು ನಿಮ್ಮ ಕಂಪನಿಗೆ ಸಂಬಂಧಪಟ್ಟ ವ್ಯಕ್ತಿಗಳು ಅವಲೋಕಿಸುತ್ತಿರಬಹುದು. ಎಚ್ಚರಿಕೆಯಿಂದ ಇರಿ.
ಸೋಷಿಯಲ್ ಮೀಡಿಯಾ ಯಾಕೆ ಬೇಕು?

ಸೋಷಿಯಲ್ ಮೀಡಿಯಾ ಯಾಕೆ ಬೇಕು?

ಹೊಸ ಉದ್ಯೋಗದ ಹುಡುಕಾಟದಲ್ಲಿ ಇರುವವರು ಮತ್ತು ಈಗಾಗಲೇ ಉದ್ಯೋಗದಲ್ಲಿ ಇರುವವರು ಸೋಷಿಯಲ್ ಮೀಡಿಯಾವನ್ನು ಸಮರ್ಥವಾಗಿ ಬಳಸುವುದು ಇಂದಿನ ಅವಶ್ಯಕತೆ.
* ನೀವು ಈಗಿನ ತಂತ್ರಜ್ಞಾನಗಳ ಬಗ್ಗೆ ಎಷ್ಟು ಅಪ್‍ಡೇಟ್ ಆಗಿದ್ದೀರಿ ಎಂದು ಕಂಪನಿಗಳು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.
* ಆನ್‍ಲೈನ್‍ನಲ್ಲಿ ನಿಮ್ಮ ಉದ್ಯೋಗ ಕ್ಷೇತ್ರಕ್ಕೆ ಸಂಬಂಧಿಸಿದ ಸಾಕಷ್ಟು ವ್ಯಕ್ತಿಗಳನ್ನು ಭೇಟಿಯಾಗಬಹುದು.
* ನೀವು ಇಂಟರ್‍ನೆಟ್ ಮತ್ತು ಸೋಷಿಯಲ್ ಮೀಡಿಯಾವನ್ನು ಯಾವ ರೀತಿ ಬಳಸಿಕೊಳ್ಳುತ್ತೀರಿ ಎಂದು ಕಂಪನಿಗಳು ತಿಳಿದುಕೊಳ್ಳುತ್ತವೆ.
* ಆನ್‍ಲೈನ್‍ನಲ್ಲಿ ನಿಮ್ಮನ್ನು ನೀವು ಬ್ರಾಂಡ್ ಮಾಡಿಕೊಳ್ಳಬಹುದು.
* ಸೋಷಿಯಲ್ ಮೀಡಿಯಾದಲ್ಲಿ ಹೊಸ ಉದ್ಯೋಗಾವಕಾಶಗಳ ಕುರಿತು ಅಪ್‍ಡೇಟ್ ಸಿಗುತ್ತದೆ.
* ಕೈಗಾರಿಕೆಗಳು, ಕಂಪನಿಗಳು ಮತ್ತು ನಿಮ್ಮ ಆಸಕ್ತಿಯ ಕ್ಷೇತ್ರಗಳ ಕುರಿತು ಅಧ್ಯಯನ ಮಾಡಬಹುದು.
* ಸೂಕ್ತ ಅಭ್ಯರ್ಥಿಗಳ ಹುಡುಕಾಟದಲ್ಲಿರುವ ಎಚ್‍ಆರ್‍ಗಳು, ನೇಮಕಾತಿ ಸಂಸ್ಥೆಗಳು ಅಥವಾ ಕಂಪನಿಯ ಮುಖ್ಯಸ್ಥರ ಗಮನವನ್ನು ಸೋಷಿಯಲ್ ಮೀಡಿಯಾದಲ್ಲಿ ಸೆಳೆಯಬಹುದು.
ಫೇಸ್‍ಬುಕ್‍ನಲ್ಲಿ ನಿಮ್ಮ ಸ್ಟೇಟಸ್ ಹೇಗಿದೆ?

ಫೇಸ್‍ಬುಕ್‍ನಲ್ಲಿ ನಿಮ್ಮ ಸ್ಟೇಟಸ್ ಹೇಗಿದೆ?

ಉದ್ಯೋಗ ಹುಡುಕುವವರು ಮತ್ತು ಈಗಾಗಲೇ ಉದ್ಯೋಗದಲ್ಲಿರುವವರು ಫೇಸ್‍ಬುಕ್‍ನಲ್ಲಿ ತಮ್ಮ ಘನತೆ, ಗೌರವಗಳನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಸ್ಟೇಟಸ್ ಹೆಚ್ಚಿಸುವ ಮತ್ತು ಕಡಿಮೆಗೊಳಿಸುವ ಶಕ್ತಿ ಫೇಸ್‍ಬುಕ್ ಸ್ಟೇಟಸ್‍ಗೆ ಇದೆ.

* ಫೇಸ್‍ಬುಕ್ ಅನ್ನು ನಿಮ್ಮ ಕರಿಯರ್ ಪ್ರಗತಿಗೆ ಬಳಸಿ.
* ಫೇಸ್‍ಬುಕ್‍ನಲ್ಲಿ ನೀವು ಉದ್ಯೋಗ ಮಾಡುತ್ತಿರುವ ಕಂಪನಿಯ ಬಗ್ಗೆ ಕೆಟ್ಟದ್ದಾಗಿ ಬರೆಯಬೇಡಿ.
* ನಿಮ್ಮ ಪ್ರತಿಸ್ಪರ್ಧಿ ಕಂಪನಿಯ ಬಗ್ಗೆಯೂ ಕೆಟ್ಟದ್ದಾಗಿ ಬರೆಯಬೇಡಿ. ಯಾರಿಗೊತ್ತು ಆ ಕಂಪನಿಯಲ್ಲೂ ಭವಿಷ್ಯದಲ್ಲಿ ನೀವು ಕೆಲಸ ಮಾಡಬೇಕಾಗಬಹುದು.
* ನೀವಿನ್ನೂ ಉದ್ಯೋಗ ಹುಡುಕುವ ಹಂತದಲ್ಲಿದ್ದಾರೆ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖರನ್ನು ಫ್ರೆಂಡ್ ಮಾಡಿಕೊಳ್ಳಿ. ಅವರಲ್ಲಿ ಆಗಾಗ ಸಲಹೆ ಸೂಚನೆಗಳನ್ನು ಕೇಳುತ್ತ ಇರಿ.
* ನಿಮ್ಮ ಆಸಕ್ತಿಯ ಕ್ಷೇತ್ರಗಳಿಗೆ ಸಂಬಂಧಿಸಿದ ಇತರರ ಪೆÇೀಸ್ಟ್‍ಗಳಿಗೆ ಉತ್ತಮವಾಗಿ ಕಮೆಂಟ್ ಮಾಡಿ. ಒಳ್ಳೆಯ ಭಾಷೆಯಲ್ಲಿ ಕಮೆಂಟ್ ಬರೆಯಿರಿ. ಅಕ್ಷರ ತಪ್ಪು ಮಾಡಬೇಡಿ.
* ಧರ್ಮ, ರಾಜಕೀಯದ ವಿಷಯಗಳ ಕುರಿತು ಫೇಸ್‍ಬುಕ್‍ನಲ್ಲಿ ಕೆಸರೆರಚಾಟ ಬೇಡ.
* ಅಶ್ಲೀಲವೆನಿಸುವ ಪೆÇೀಸ್ಟ್‍ಗಳನ್ನು ಲೈಕ್ ಮಾಡಬೇಡಿ.
* ನಿಮ್ಮ ಈಗಿನ ಅಥವಾ ಭವಿಷ್ಯದ ಉದ್ಯೋಗದಾತರು ಫೇಸ್‍ಬುಕ್‍ನಲ್ಲಿ ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದುಕೊಂಡು ಸ್ಟೇಟಸ್ ಬರೆಯಿರಿ.
* ಫೇಸ್‍ಬುಕ್ ನಿಮ್ಮ ಸ್ಟೇಟಸ್ ಹೆಚ್ಚಿಸಲಿ. ನಿಮ್ಮ ಸ್ಟೇಟಸ್‍ಗೆ ಕುಂದು ಉಂಟುಮಾಡದೆ ಇರಲಿ.

 
ಫೇಸ್‍ಬುಕ್‍ನಲ್ಲಿ ಏನು ಪೋಸ್ಟ್ ಮಾಡುವಿರಿ?

ಫೇಸ್‍ಬುಕ್‍ನಲ್ಲಿ ಏನು ಪೋಸ್ಟ್ ಮಾಡುವಿರಿ?

ನಾನು ತುಂಬಾ ಖುಷಿಯಾಗಿದ್ದೇನೆ ಇವತ್ತು',ಫೀಲಿಂಗ್ ಅಲೊನ್',ನಾನು ಯಾರನ್ನೂ ಕೇರ್ ಮಾಡೋಲ್ಲ',ಹಾಳಾಗಿ ಹೋಗು' ಇದೆಲ್ಲ ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಕೆಲವರು ಹಾಕುವ ಸ್ಟೇಟಸ್‍ನ ಸ್ಯಾಂಪಲ್ ಅಷ್ಟೇ. ವೃತ್ತಿಪರ ಜೀವನಕ್ಕೆ ಪ್ರವೇಶಿಸುವವರು ಅಥವಾ ಈಗಾಗಲೇ ಜಾಬ್‍ನಲ್ಲಿರುವವರು ಫೇಸ್‍ಬುಕ್‍ನಲ್ಲಿ ಹೀಗೆಲ್ಲ ಹುಚ್ಚುಚ್ಚಾಗಿ ಸ್ಟೇಟ್‍ಮೆಂಟ್ ಕೊಡುತ್ತಿರಬಾರದು.

ನೀವು ಹಾಕುವ ಯಾವುದೇ ಸ್ಟೇಟ್‍ಮೆಂಟ್ ಅನ್ನು ನಿಮ್ಮ ಬಾಸ್ ಅಥವಾ ನಿಮ್ಮ ಕ್ಲಯೆಂಟ್ ಓದಿದರೆ ಹೇಗಿರುತ್ತೆ? ಅವರು ಓದಿದರೆ ನಿಮ್ಮ ಬಗ್ಗೆ ಕೆಟ್ಟದ್ದಾಗಿ ತಿಳಿದುಕೊಳ್ಳುವ ಸಾಧ್ಯತೆ ಇದೆಯೇ? ಇದರ ಬದಲು ಅವರಿಗೂ "ಇವನು ನನ್ನ ಉದ್ಯೋಗಿ' ಎಂದು ಹೆಮ್ಮೆ ಮೂಡಿಸುವಂತಹ ಸ್ಟೇಟಸ್‍ಗಳನ್ನು ಹಾಕಿ. ಸಾಧ್ಯವಾದರೆ ಕಂಪನಿಯ ಕುರಿತು ಸಕಾರಾತ್ಮಕ ವರದಿಗಳನ್ನು ಹಂಚಿಕೊಳ್ಳುತ್ತ ಇರಿ.
ಯಾವತ್ತೂ ಸೋಷಿಯಲ್ ಮೀಡಿಯದಲ್ಲಿ ಕೆಟ್ಟ ಭಾಷೆ ಬಳಸಿ ಬರೆಯಬೇಡಿ. ಅದು ನಿಮ್ಮ ಪ್ರತಿಷ್ಠೆಯನ್ನು ಮಣ್ಣು ಪಾಲು ಮಾಡಿಬಿಡಬಹುದು. ನೀವು ಹಾಕುವ ಸ್ಟೇಟಸ್ ಮತ್ತು ಮಾಡುವ ಕಮೆಂಟ್ ಅನ್ನು ಹಲವು ಬಾರಿ ಓದಿ ಸಹ್ಯವಾಗಿದೆ ಎಂದು ಖಾತ್ರಿ ಪಡಿಸಿಕೊಂಡು ಶೇರ್ ಮಾಡಿ. ಧರ್ಮ, ಜಾತಿ, ಮಹಿಳೆಯರು, ದೇಹದ ಬಣ್ಣ, ರಾಜಕೀಯ ಇತ್ಯಾದಿಗಳ ಕುರಿತು ಮಾಹಿತಿ ಹಂಚಿಕೊಳ್ಳುವಾಗ ವಿಶೇಷ ಎಚ್ಚರಿಕೆ ವಹಿಸಿ.

ಇಲ್ಲವಾದರೆ ನೀವು ಪೆÇಲೀಸ್ ಸ್ಟೇಷನ್ ಮುಖ ನೋಡಬೇಕಾಗಬಹುದು. ಕುಟುಂಬ ಅಥವಾ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಹೆಚ್ಚು ಭಾವನಾತ್ಮಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ಆಫೀಸ್‍ನಲ್ಲಿ ಕೆಲಸ ಮಾಡುವ ಸಮಯದಲ್ಲಿ ಯಾವುದೇ ಸ್ಟೇಟಸ್ ಹಂಚಿಕೊಳ್ಳಬೇಡಿ. ಈ ರೀತಿ ಮಾಡಿದರೆ ನೀವು ಆಫೀಸ್‍ನಲ್ಲಿ ಕಾಲಹರಣ ಮಾಡುತ್ತಿರುವಿರಿ ಎಂದು ಇತರರು ತಿಳಿದುಕೊಳ್ಳಬಹುದು.
ಸೋಷಿಯಲ್ ಮೀಡಿಯಾದ ಸದ್ಭಳಕೆ

ಸೋಷಿಯಲ್ ಮೀಡಿಯಾದ ಸದ್ಭಳಕೆ

ಒಂದಾನೊಂದು ಕಾಲದಲ್ಲಿ ಕೆಲಸ ಪಡೆಯಲು ನಿಮ್ಮ ರೆಸ್ಯೂಂ ಮತ್ತು ಸಂದರ್ಶನ ಸಾಕಿತ್ತು. ಆದರೆ, ಈಗಿನ ಫೇಸ್‍ಬುಕ್, ಟ್ವಿಟ್ಟರ್ ಮತ್ತು ಲಿಂಕ್ಡ್‍ಇನ್ ಕಾಲದಲ್ಲಿ ರೆಸ್ಯೂಂ ಮತ್ತು ಸಂದರ್ಶನ ಮಾತ್ರ ನಿಮಗೆ ಕೆಲಸ ಕೊಡಿಸುವುದಿಲ್ಲ. ಈಗ ಅಂದವಾಗಿ ಉಡುಗೆತೊಡುಗೆ ತೊಟ್ಟ ಉದ್ಯೋಗಿಯು ಸೋಷಿಯಲ್ ಮೀಡಿಯಾದಲ್ಲಿ ಹೇಗಿರುತ್ತಾನೆ, ಆತನ ನಿಜವಾದ ಬಣ್ಣವೇನು ಎಂದು ಕಂಪನಿಗಳು ತಿಳಿದುಕೊಳ್ಳುತ್ತವೆ. ನೀವು ಹಾಲು ಕುಡಿಯುವ ಹುಡುಗನಂತೆ ಇಂಟರ್‍ವ್ಯೂನಲ್ಲಿ ಪೆÇೀಸ್ ನೀಡಿರಬಹುದು. ಆದರೆ, ಫೇಸ್‍ಬುಕ್‍ನಲ್ಲಿ ಆಲ್ಕೊಹಾಲ್ ಕುಡಿದು ಪೆÇೀಸ್ ನೀಡಿರಬಹುದು. ಅದು ಉದ್ಯೋಗಾದಾತರ ಕಣ್ಣಿಗೆ ಬಿದ್ದರೆ ನಿಮಗೆ ಉದ್ಯೋಗ ಸಿಗುವುದು ಕಷ್ಟವಾಗಬಹುದು. ಅದು ನನ್ನ ಪರ್ಸನಲ್ ಲೈಫ್ ಎಂದುಕೊಂಡರೆ ನಿಮಗೇ ನಷ್ಟ.
ಇದರೊಂದಿಗೆ ನೀವು ಸೋಷಿಯಲ್ ಮೀಡಿಯಾಗಳಲ್ಲಿ ಯಾವ ರೀತಿ ವರ್ತಿಸುತ್ತೀರಿ, ನಿಮ್ಮ ಆಸಕ್ತಿಯ ಕ್ಷೇತ್ರಗಳೇನು? ಯಾವ ರೀತಿ ಕಾಮೆಂಟ್ ಮಾಡುವಿರಿ ಎಂದೆಲ್ಲ ತಿಳಿದುಕೊಳ್ಳುತ್ತಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪೆÇ್ರಫೆಷನಲ್ ಆಗಿ ವರ್ತಿಸಿರಿ. ಅಲ್ಲಿ ನಿಮ್ಮನ್ನು ನೀವು ಬ್ರಾಂಡ್ ಮಾಡಿಕೊಳ್ಳಿ. ನಿಮ್ಮನ್ನು ಇಷ್ಟಪಡುವ ಗುಂಪನ್ನು ಸೃಷ್ಟಿಸಿಕೊಳ್ಳಿ. ಒಂದಿಷ್ಟು ಜನಪ್ರಿಯತೆ ಪಡೆಯಿರಿ. ಹಾಗಂತ, ಧರ್ಮ, ರಾಜಕೀಯ ಇತ್ಯಾದಿ ಗುಂಪುಗಳಲ್ಲಿ ಕಾಲ ಕಳೆಯಬೇಡಿ. ನಿಮ್ಮ ಬ್ಲಾಗ್, ಆಸಕ್ತಿಯ ಕ್ಷೇತ್ರಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತ ಆನ್‍ಲೈನ್‍ನಲ್ಲಿ ಒಳ್ಳೆಯ ಇಮೇಜ್ ಕ್ರಿಯೇಟ್ ಮಾಡಿರಿ.
ಇಮೇಲ್‍ನಲ್ಲಿ ಕಾಗುಣಿತ ತಪ್ಪು ಮಾಡದಿರಿ

ಇಮೇಲ್‍ನಲ್ಲಿ ಕಾಗುಣಿತ ತಪ್ಪು ಮಾಡದಿರಿ

ಉದ್ಯೋಗ ಅಥವಾ ವ್ಯವಹಾರ ಸಂಬಂಧಿತವಾಗಿ ನೀವು ಯಾರಿಗಾದಾರೂ ಇಮೇಲ್ ಮಾಡಬೇಕು ಎಂದಿರಲಿ. ಡಿಯರ್ ಸರ್ ಅಥವಾ ಮೇಡಂ ಎಂದು ಬರೆದು ಅವರ ಹೆಸರು ಬರೆಯುತ್ತೀರಿ. ಆದರೆ, ಆ ವ್ಯಕ್ತಿಯ ಹೆಸರನ್ನು ಸರಿಯಾಗಿ ಬರೆಯುವಿರಾ? ಸ್ಪೆಲ್ಲಿಂಗ್ ಚೆಕ್ ಮಾಡಿಕೊಳ್ಳುತ್ತೀರಾ? ನೀವು ಯಾರಾದರೂ ವ್ಯಕ್ತಿಯ ಹೆಸರನ್ನು ತಪ್ಪು ಬರೆದರೆ ಅದು ಖಂಡಿತವಾಗಿಯೂ ಕ್ಷಮಿಸಲಾಗದ ಅಪರಾಧ!
ಇಮೇಲ್‍ನಲ್ಲಿ ತಪ್ಪಾಗಿ ಹೆಸರು ಬರೆಯಲು ಹಲವು ಕಾರಣಗಳಿವೆ. ಮೊದಲನೆಯ ಕಾರಣ ಅವಸರ. ಅರ್ಜೆಂಟಾಗಿ ಇಮೇಲ್ ಬರೆದು ಸೆಂಡ್ ಮಾಡುವ ಅಭ್ಯಾಸ ಒಳ್ಳೆಯದಲ್ಲ. ಮತ್ತೆ ಕೆಲವರು ತಮ್ಮ ಹೆಸರನ್ನು ಫೆÇೀನ್‍ನಲ್ಲಿ ಹೇಳಿರುತ್ತಾರೆ. ಕೆಲವು ಹೆಸರುಗಳ ಪೆÇ್ರನೌನ್ಸ್ ಒಂದು ತರಹ ಇರುತ್ತದೆ. ಸ್ಪೆಲ್ಲಿಂಗ್ ಇನ್ನೊಂದು ತರಹ ಇರುತ್ತದೆ. ಹೆಸರಿನ ಸ್ಪೆಲ್ಲಿಂಗ್ ಅನ್ನು ಸರಿಯಾಗಿ ತಿಳಿದುಕೊಂಡು ಇಮೇಲ್ ಬರೆಯಿರಿ.
ಹೆಸರಿನ ಸ್ಪೆಲ್ಲಿಂಗ್ ತಪ್ಪು ಮಾಡುವುದರಿಂದ ಕೆಲವೊಮ್ಮೆ ಭಿನ್ನ ಅರ್ಥ ಉಂಟಾಗಬಹುದು. ತನ್ನ ಹೆಸರನ್ನು ವಿಚಿತ್ರವಾಗಿ ಬರೆದ ವ್ಯಕ್ತಿಯ ಬಗೆಗೆ ಇಮೇಲ್ ಸ್ವೀಕೃತರಿಗೆ ಕೆಟ್ಟ ಅಭಿಪ್ರಾಯ ಮೂಡಬಹುದು. ಹೆಸರನ್ನು ತಪ್ಪಾಗಿ ಬರೆದರೆ `ಇದು ನನಗಾದ ಅವಮಾನ' ಎಂದು ತಿಳಿದುಕೊಳ್ಳಬಹುದು. ಇದರಿಂದ ನಿಮಗೆ ಸಿಗುವ ಉದ್ಯೋಗ ಅಥವಾ ವ್ಯವಹಾರದ ಡೀಲ್‍ಗಳಿಗೆ ತೊಂದರೆ ಉಂಟಾಗಬಹುದು.
ಇಮೇಲ್ ಬರೆದು ಸೆಂಡ್ ಬಟನ್ ಒತ್ತುವ ಮೊದಲು ಸ್ಪೆಲ್ಲಿಂಗ್ ಚೆಕ್ ಮಾಡಲು ಒಂದೆರಡು ಸೆಕೆಂಡ್ ವಿನಿಯೋಗಿಸಿ. ಎಲ್ಲಾದರೂ ನೀವು ಯಾರಿಗೆ ಇಮೇಲ್ ಮಾಡುತ್ತೀರೋ ಅವರ ಹೆಸರು ಸರಿಯಾಗಿ ತಿಳಿಯದೆ ಇದ್ದರೆ ಕೇವಲ `ಸರ್/ಮೇಡಂ' ಎಂದು ಸಂಬೋಧಿಸಿದರೆ ಸಾಕು. ಒಟ್ಟಾರೆ ತಪ್ಪಿಲ್ಲದಂತೆ ಬರೆಯಲು ಕಲಿಯಿರಿ.
ಇಮೇಲ್‍ನಲ್ಲಿ ಇದೇನಿದು ಸಿಸಿ ಮತ್ತು ಬಿಸಿಸಿ

ಇಮೇಲ್‍ನಲ್ಲಿ ಇದೇನಿದು ಸಿಸಿ ಮತ್ತು ಬಿಸಿಸಿ

ಬಹುತೇಕರು ಇಮೇಲ್ ಮಾಡುವಾಗ ಸಿಸಿ ಮತ್ತು ಬಿಸಿಸಿಯನ್ನು ಸಮರ್ಪಕವಾಗಿ ಬಳಕೆ ಮಾಡಲು ಮರೆಯುತ್ತಾರೆ. ಈ ರೀತಿ ಮಾಡುವುದರಿಂದ ಈತ `ವೃತ್ತಿಪರ ಅಲ್ಲ' ಅಥವಾ `ತಂತ್ರಜ್ಞಾನದಲ್ಲಿ ಅನಕ್ಷರಸ್ಥ' ಎಂಬ ಭಾವವನ್ನು ಮೇಲಾಧಿಕಾರಿಗಳಿಗೆ ಅಥವಾ ಸಹೋದ್ಯೋಗಿಗಳಿಗೆ ಮೂಡಿಸಬಹುದು.
ಇಮೇಲ್‍ನಲ್ಲಿ ಸಿಸಿರುವ ಸಿಸಿ ಮತ್ತು ಬಿಸಿಸಿ ಎಂದರೇನು ಎಂದು ಹೆಚ್ಚಿನವರು ತಲೆ ಕೆಡಿಸಿಕೊಳ್ಳುವುದಿಲ್ಲ. ಸಿಸಿ ಎಂದರೆ ಕಾರ್ಬನ್ ಕಾಪಿ. ಬಿಸಿಸಿ ಎಂದರೆ ಬ್ಲೈಂಡ್ ಕಾರ್ಬನ್ ಕಾಪಿ. ನೀವು ಯಾರಿಗೆ ಇಮೇಲ್ ಮಾಡುತ್ತೀರೋ ಅವರಿಗೆ ಮಾತ್ರವಲ್ಲದೆ ಇನ್ನೊಬ್ಬರಿಗೂ ಆ ಇಮೇಲ್ ಪ್ರತಿಯನ್ನು ಕಳುಹಿಸುವಾಗ ಬಳಸಬೇಕಾದದ್ದು ಸಿಸಿ. ನೀವು ಒಂದು ಇಮೇಲ್ ವಿಳಾಸದ ಗುಂಪಿಗೆ ಸಂದೇಶ ಕಳುಹಿಸುವಾಗ ಬಿಸಿಸಿ ಬಳಸಬೇಕು. ಬಿಸಿಸಿಯಲ್ಲಿ ಕಳುಹಿಸುವಾಗ ಗ್ರೂಪ್‍ನಲ್ಲಿರುವ ಉಳಿದವರ ಇಮೇಲ್ ವಿಳಾಸ ನೀವು ಕಳುಹಿಸಿದವರಿಗೆ ಕಾಣಿಸುವುದಿಲ್ಲ. ಸಿಸಿಯಲ್ಲಿ ಎಲ್ಲರಿಗೂ ಎಲ್ಲಾ ಇಮೇಲ್ ವಿಳಾಸ ಕಾಣಿಸುತ್ತದೆ. ಬಿಸಿಸಿಯಲ್ಲಿ ಇತರರಿಗೆ ಬೇರೆ ಇಮೇಲ್ ವಿಳಾಸ ಕಾಣಿಸುವುದಿಲ್ಲ. ಅಷ್ಟರ ಮಟ್ಟಿಗೆ ಇಮೇಲ್ ವಿಳಾಸ ಗುಪ್ತವಾಗಿರುತ್ತದೆ.
ಆಫೀಸ್‍ನಲ್ಲಿ ಕಚೇರಿಯಲ್ಲಿರುವ ಎಲ್ಲರಿಗೂ ನೀವು ಯಾವುದಾದರೂ ಸಂದೇಶ ಕಳುಹಿಸುವಾಗ ಬಿಸಿಸಿ ಬಳಸಿ. ನೀವು ರಜಾ ಅರ್ಜಿಯನ್ನು ಮೇಲಾಧಿಕಾರಿಗೆ ಕಳುಹಿಸುವಾಗ ನಿಮ್ಮ ಟೀಂನ ಇತರರಿಗೆ ಸಿಸಿ ಮಾಡಿ. ನೀವು ಹಂಚಿಕೊಳ್ಳುವ ವಿಷಯ ತುಂಬಾ ಗೌಪ್ಯವಾಗಿದ್ದರೆ ಸಿಸಿ, ಬಿಸಿಸಿ ಬಳಸದೆ ನೇರವಾಗಿ ಒಂದೇ ವ್ಯಕ್ತಿಗೆ ಇಮೇಲ್ ಮಾಡಿ. ಇಮೇಲ್‍ನಲ್ಲಿ `ಟು' ಎಂದಿರುವಲ್ಲಿ ನೀವು ಕೇವಲ ಒಂದೇ ವ್ಯಕ್ತಿಯ ಇಮೇಲ್ ವಿಳಾಸ ಬರೆಯುವುದು ಒಳ್ಳೆಯದು. ಉಳಿದವರ ಇಮೇಲ್ ಅನ್ನು ಸಿಸಿಯಲ್ಲಿ ಬರೆಯಿರಿ.
ಇಮೇಲ್ ಅಟ್ಯಾಚ್‍ಮೆಂಟ್ ಮರೆಯದಿರಿ

ಇಮೇಲ್ ಅಟ್ಯಾಚ್‍ಮೆಂಟ್ ಮರೆಯದಿರಿ

ವೃತ್ತಿಪರ ಜೀವನದಲ್ಲಿ ಇಮೇಲ್, ಸಾಮಾಜಿಕ ಮಾಧ್ಯಮ ಇತ್ಯಾದಿ ತಂತ್ರಜ್ಞಾನಗಳನ್ನು ಬಳಕೆ ಮಾಡುವಾಗ ನಾವು ಮಾಡುವ ಸಣ್ಣ ತಪ್ಪುಗಳು ದೊಡ್ಡ ಪರಿಣಾಮವನ್ನೇ ಉಂಟು ಮಾಡಬಲ್ಲದು.

ಪರಿಚಿತರೊಬ್ಬರ ರೆಫರೆನ್ಸ್ ಮೂಲಕ ನರೇಶ್ ಎಂಬ ಅಭ್ಯರ್ಥಿಗೆ ದೇಶದ ಪ್ರಮುಖ ಐಟಿ ಕಂಪನಿಯೊಂದರಿಂದ ಕೆಲಸದ ಕೆಲಸದ ಆಹ್ವಾನ ಬಂತು. ಕಂಪನಿ ಕಳುಹಿಸಿದ ಇಮೇಲ್‍ನಲ್ಲಿ ನಿಮ್ಮ ರೆಸ್ಯೂಂ ಕಳುಹಿಸಿ ಎಂದಿತ್ತು. ಕಷ್ಟಪಟ್ಟು ರೆಸ್ಯೂಂ ಸಿದ್ಧಪಡಿಸಿದ ನರೇಶ್ ಅದನ್ನು ಡೆಸ್ಕ್‍ಟಾಪ್‍ನಲ್ಲಿ ಸೇವ್ ಮಾಡಿಟ್ಟುಕೊಂಡ. ಇಮೇಲ್‍ನಲ್ಲಿ ತಾನು ಈಗ ಪಡೆಯುತ್ತಿರುವ ವೇತನ, ಬಯಸುವ ವೇತನ ಎಲ್ಲವನ್ನು ಬರೆದ. ಕೊನೆಗೆ `ಪ್ಲೀಸ್ ಫೈಂಡ್ ಅಟ್ಯಾಚ್ಡ್ ಫೈಲ್' ಎಂದು ಬರೆದು ಇಮೇಲ್ ಸೆಂಡ್ ಮಾಡಿದ. ಇಮೇಲ್ ಮಾಡಿ ದಿನಗಳು ಉರುಳಿದರೂ ಆತನಿಗೆ ಯಾವುದೇ ಕೆಲಸದ ಆಹ್ವಾನವೇ ಬರಲಿಲ್ಲ. ತನ್ನ ಪರಿಚಿತರನ್ನು ಈ ಕುರಿತು ಕೇಳಿದಾಗ `ವಿಚಾರಿಸಿ ಹೇಳುವೆ' ಎಂದರು. ಕೆಲವು ದಿನಗಳ ನಂತರ ಪರಿಚಿತ ವ್ಯಕ್ತಿ ಕರೆ ಮಾಡಿ ನಿನಗೆ ಆ ಜಾಬ್ ಮಿಸ್ಸಾಯಿತು ಎಂದರು. ಅದಕ್ಕೆ ಅವರು ನೀಡಿದ ಕಾರಣ `ಇಮೇಲ್‍ನಲ್ಲಿ ನೀನು ರೆಸ್ಯೂಂ ಅಟ್ಯಾಚ್‍ಮೆಂಟ್ ಮಾಡುವುದನ್ನೇ ಮರೆತ್ತಿದ್ದೆ. ಈ ರೀತಿ ಮಾಡುವ ಅಭ್ಯರ್ಥಿಗಳನ್ನು ಆ ಕಂಪನಿಯು ಇಷ್ಟಪಡುವುದಿಲ್ಲ'.
* ನರೇಶ್ ಮಾಡಿದ್ದು ಸಣ್ಣ ತಪ್ಪು. ಅದಕ್ಕೆ ಆತ ತೆತ್ತ ಬೆಲೆ ಪ್ರಮುಖ ಕಂಪನಿಯೊಂದರಲ್ಲಿ ಉತ್ತಮ ಉದ್ಯೋಗಾವಕಾಶ ಕಳೆದುಕೊಂಡ.
* ಈತನನ್ನು ಕ್ಷಮಿಸಿ ಇನ್ನೊಮ್ಮೆ ರೆಸ್ಯೂಂ ಕಳುಹಿಸುವಂತೆ ಕಂಪನಿ ಹೇಳಬಹುದಿತ್ತಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆತ ಕಂಪನಿಗೆ ಫಸ್ಟ್ ಇಂಪ್ರೆಷನ್ ಮೂಡುವಲ್ಲಿ ವಿಫಲನಾದ. ಆ ಕಂಪನಿಯು ಇಮೇಲ್ ಮೂಲಕವೇ ಸಾಕಷ್ಟು ವ್ಯವಹಾರ ನಡೆಸುತ್ತದೆ. ಮುಂದೆಯೂ ಈತ ಇಂತಹ ತಪ್ಪು ಮಾಡಬಹುದು ಎಂಬ ಭಾವನೆ ಕಂಪನಿಗೆ ಈತನ ಮೊದಲ ತಪ್ಪಲ್ಲೇ ಮೂಡಿತ್ತು.
* ನೀವು ಕೂಡ ಉದ್ಯೋಗ, ಶಿಕ್ಷಣ ಅಥವಾ ಇನ್ಯಾವುದೇ ಪ್ರಮುಖ ವಿಷಯಗಳಿಗೆ ಸಂಬಂಧಪಟ್ಟಂತೆ ಇಮೇಲ್ ಮಾಡುವಾಗ ಅವಶ್ಯಕತೆ ಇದ್ದಲ್ಲಿ ಅಟ್ಯಾಚ್‍ಮೆಂಟ್ ಕಳುಹಿಸಲು ಮರೆಯದಿರಿ.

Thursday, 29 September 2016

ಕಾರಿನ ಎಂಜಿನ್ ಹೇಗೆ ಕೆಲಸ ಮಾಡುತ್ತದೆ?

ಕಾರಿನ ಎಂಜಿನ್ ಹೇಗೆ ಕೆಲಸ ಮಾಡುತ್ತದೆ?

ಕಾರಿನ ಎಂಜಿನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲವೊಂದು ನಿಮ್ಮ ಮನದ ಮೂಲೆಯಲ್ಲಿ ಇರಬಹುದು. ಇಂಧನವನ್ನು ಚಲನೆಯಾಗಿ ಪರಿವರ್ತಿಸುವುದು ಎಂಜಿನ್ ಕೆಲಸ. ಅದಕ್ಕಾಗಿ ಎಂಜಿನ್ ಒಳಗೆ ಇಂಧನ ಉರಿಯುವ ಇಂಟರ್ನಲ್ ಕಂಬಶ್ಟನ್ ಸಿಸ್ಟಮ್ ಬಳಸಲಾಗುತ್ತದೆ.ಈ ಎಂಜಿನ್‍ಗಳಿಗೆ ಕಡಿಮೆ ಇಂಧನ ಸಾಕು.  ಹಳೆಕಾಲದ ಉಗಿರೈಲುಗಳಲ್ಲಿ ಎಂಜಿನ್ ಹೊರಗಡೆ ಕಲ್ಲಿದ್ದಲ್ಲಿನಂತಹ ಇಂಧನ ಉರಿಸಲಾಗುತ್ತಿತ್ತು.
ಎಂಜಿನ್ ಒಳಗೆ ಬೆಂಕಿ!
ಇಂಟರ್ನಲ್ ಕಂಬಶ್ಟನ್ ಎಂಜಿನ್‍ನ ಒಳಭಾಗದ ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಅತಿಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್‍ನಂತಹ ಇಂಧನದ ಹನಿ ಹಾಕಿ ಬೆಂಕಿಯ ಕಿಡಿ ಹಚ್ಚಿದರೆ ನಂಬಲು ಅಸಾಧ್ಯವಾದಷ್ಟು ಪ್ರಮಾಣದಲ್ಲಿ ಶಕ್ತಿಯು ಬಿಡುಗಡೆಯಾಗುತ್ತದೆ. ಕಾರಿನ ಚಕ್ರಗಳು ತಿರುಗಲು ಇವೇ ಅಶ್ವಶಕ್ತಿ. ಹೆಚ್ಚಿನ ಕಾರುಗಳಲ್ಲಿ ನಾಲ್ಕು ಸ್ಟ್ರೋಕ್(ಕಿಡಿ)ನ ಕಂಬಶ್ಟನ್ ಸೈಕಲ್ ಸಿಸ್ಟಮ್ ಬಳಸಲಾಗುತ್ತದೆ. ಇದಕ್ಕೆ ಒಟ್ಟೊ ಸೈಕಲ್ ಎಂಬ ಹೆಸರು ಸಹ ಇದೆ. 1967ರಲ್ಲಿ ನಿಕೊಲಾಸ್ ಒಟ್ಟೊ ಈ ಟೆಕ್ನಾಲಜಿ ಕಂಡುಹಿಡಿದಿದ್ದರು.

ಎಂಜಿನ್ ಒಳಗೆ ಏನಿದೆ?
ಇಂಟೆಕ್(ಇಂಧನ ಒಳಬರುವುದು), ಕಂಪ್ರೆಷನ್ (ಸಂಕೋಚನ), ಕಂಬಸ್ಟನ್(ದಹನ) ಮತ್ತು ಎಗ್ಸಾಸ್ಟ್ ಸ್ಟ್ರೋಕ್(ಹೊಗೆ ಹೊರಕ್ಕೆ) ಎಂಬ ನಾಲ್ಕು ಸ್ಟ್ರೋಕ್‍ಗಳು ಎಂಜಿನ್ ಒಳಗೆ ಕಾರ್ಯನಿರ್ವಹಿಸುತ್ತವೆ. ಎಂಜಿನ್ ಒಳಗೆ ನೂರಾರು ಬಿಡಿಭಾಗಗಳಿವೆ. ಕ್ಯಾಮ್‍ಶಾಫ್ಟ್, ವಾಲ್ವ್ ಕವರ್, ಇಂಟೆಕ್ ವಾಲ್ವ್, ಇಂಟೆಕ್ ಪೆÇೀರ್ಟ್, ಹೆಡ್, ಕೂಲೆಂಟ್, ಎಂಜಿನ್ ಬ್ಲಾಕ್, ಆಯಿಲ್ ಪಾನ್, ಆಯಿಲ್ ಸುಂಪ್, ಸ್ಪಾರ್ಕ್ ಪ್ಲಗ್, ಎಗ್ಸಾಟ್ ವಾಲ್ವ್, ಎಗ್ಸಾಟ್ ಪೆÇೀರ್ಟ್, ಪಿಸ್ಟನ್, ಕನೆಕ್ಟಿಂಗ್ ರಾಡ್ಸ್, ಕ್ರಾಂಕ್‍ಶಾಫ್ಟ್ ಇತ್ಯಾದಿಗಳಿವೆ.

ಹೇಗೆ ಕೆಲಸ ಮಾಡುತ್ತದೆ?
ಎಂಜಿನ್‍ನಲ್ಲಿರುವ ಪಿಸ್ಟನನ್ನು ಕನೆಕ್ಟಿಂಗ್ ರಾಡ್ ಮೂಲಕ ಕ್ರಾಂಕ್‍ಶಾಫ್ಟ್‍ಗೆ ಸಂಪರ್ಕ ಮಾಡಲಾಗಿರುತ್ತದೆ. ಕ್ರಾಂಕ್‍ಶಾಫ್ಟ್ ಸುತ್ತುತ್ತಿರುವಾಗ ಕ್ಯಾನನ್ ಮರುಹೊಂದಿಕೊಳ್ಳುತ್ತದೆ. ಎಂಜಿನ್ ಸಿಲಿಂಡರ್ ಒಳಗಿರುವ ಪಿಸ್ಟನ್ ಮೇಲಿನಿಂದ ಕೆಳಗೆ ಬರಲು ಆರಂಭವಾದಗ ಇಂಟೆಕ್ ಕವಾಟ ತೆರೆದುಕೊಳ್ಳುತ್ತದೆ. ಅದರಿಂದ ಅಲ್ಪ ಪ್ರಮಾಣದ ಇಂಧನ ಮತ್ತು ಗಾಳಿಯ ಮಿಶ್ರಣ ಸಿಲಿಂಡರ್ ಒಳಗೆ ಬಂದಾಗ ಪಿಸ್ಟನ್ ಕೆಳಗೆ ಬರುತ್ತದೆ. ಮತ್ತೆ ಪಿಸ್ಟನ್ ಮೇಲೆ ಬಂದಾಗ ಸ್ಪಾರ್ಕ್ ಪ್ಲಗ್ ಉಂಟು ಮಾಡಿದ ಕಿಡಿಯು ಇಂಧನ/ಗಾಳಿ ಮಿಶ್ರಣವನ್ನು ಸ್ಪೋಟಿಸಿದಾಗ ಬಿಡುಗಡೆಯಾಗುವ ಶಕ್ತಿಗೆ ಪಿಸ್ಟನ್ ಕೆಳಗೆ ಬರುತ್ತದೆ. ಮತ್ತೆ ಪಿಸ್ಟನ್ ಮೇಲಕ್ಕೆ ಹೋದಾಗ ಇಂಟೆಂಕ್ ಕವಾಟದ ಮೂಲಕ ಹೊಗೆ ಹೊರಕ್ಕೆ ಹೋಗುತ್ತದೆ. ಕ್ಯಾಮ್‍ಶಾಫ್ಟ್ ಸಮರ್ಪಕವಾಗಿ ತಿರುಗಿದಾಗ ಇಂಟೆಕ್ ಮತ್ತು ಎಗ್ಸಾಸ್ಟ್ ಕವಾಟಗಳು ತೆರೆಯುವುದು ಮತ್ತು ಮುಚ್ಚುವುದು ನಡೆಯುತ್ತಿರುತ್ತವೆ. ಪಿಸ್ಟನ್ ಮೇಲೆ ಕೆಳಗೆ ಬರುತ್ತಿರುವಾಗ ಅದಕ್ಕೆ ಕನೆಕ್ಟ್ ಮಾಡಿದ ಕ್ರಾಂಕ್‍ಶಾಫ್ಟ್ ತಿರುಗುತ್ತದೆ(ಸೈಕಲ್ ತುಳಿದಾಗ ಆಗುವಂತೆ).
ನಾವೀಗ ಕೇವಲ ಒಂದು ಪಿಸ್ಟನ್ ಸಿಲಿಂಡರ್ ತಿರುಗುವ ಬಗ್ಗೆ ತಿಳಿದುಕೊಂಡೆವು. ಆದರೆ ಹೆಚ್ಚಿನ ಕಾರುಗಳು ಒಂದಕ್ಕಿಂತ ಹೆಚ್ಚು ಸಿಲಿಂಡರ್ ಹೊಂದಿರುತ್ತವೆ. ನಾಲ್ಕು, ಆರು, ಎಂಟು ಸಿಲಿಂಡರ್‍ನ ಎಂಜಿನ್‍ಗಳು ಇರುತ್ತವೆ. ಹೀಗೆ ಹಲವು ಸಿಲಿಂಡರ್‍ಗಳು ಇರುವಾಗ ಸಿಲಿಂಡರ್‍ಗಳನ್ನು ಹೆಚ್ಚಾಗಿ ಮೂರು ರೀತಿಯಾಗಿ(ಇನ್‍ಲೈನ್, ವಿ ಅಥವಾ ಫ್ಲಾಟ್) ಜೋಡಿಸಲಾಗಿರುತ್ತದೆ.

ಯಾವುದಕ್ಕೆ ಏನು ಕೆಲಸ?
ಸ್ಪಾರ್ಕ್ ಪ್ಲಗ್: ಇಂಧನ/ಗಾಳಿ ಮಿಶ್ರಣಕ್ಕೆ ಬೆಂಕಿ ಹಾಕುವುದು ಸ್ಪಾರ್ಕ್ ಪ್ಲಗ್ ಕಾರ್ಯ. ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಸ್ಪಾರ್ಕ್ ಆದರೆ ಮಾತ್ರ ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ವಾಲ್ವ್: ಇಂಟೆಕ್ ಮತ್ತು ಎಗ್ಸಾಟ್ ವಾಲ್ವ್(ಕವಾಟ)ಗಳು ಸರಿಯಾದ ಸಮಯಕ್ಕೆ ತೆರೆದುಕೊಂಡರೆ ಮಾತ್ರ ಸರಿಯಾದ ಸಮಯಕ್ಕೆ ಗಾಳಿ ಮತ್ತು ಇಂಧನ ಮಿಶ್ರಣ ಒಳಬರುತ್ತದೆ. ಸಂಕೋಚನ ಮತ್ತು ದಹನ ಸಮಯದಲ್ಲಿ ಎರಡೂ ಕವಾಟಗಳು ಮುಚ್ಚಿರುತ್ತವೆ.
ಪಿಸ್ಟನ್: ಸಿಲಿಂಡರ್ ಒಳಭಾಗದಲ್ಲಿ ಮೇಲೆ ಕೆಳಗೆ ಹೋಗುವ ಸಿಲಿಂಡರ್ ತುಂಡು.
ಪಿಸ್ಟನ್ ರಿಂಗ್‍ಗಳು: ಸಿಲಿಂಡರ್ ಒಳಭಾಗದಿಂದ ಯಾವುದೇ ಲೀಕ್ ಆಗದಂತೆ, ದಕ್ಷತೆಯಿಂದ ಇಂಧನ/ಗಾಳಿ ದಹನವಾಗುವಂತೆ ನೋಡಿಕೊಳ್ಳುತ್ತದೆ.
ಕನೆಕ್ಟಿಂಗ್ ರಾಡ್: ಪಿಸ್ಟನನ್ನು ಕ್ರಾಂಕ್‍ಶಾಫ್ಟ್‍ಗೆ ಕನೆಕ್ಟ್ ಮಾಡೋ ಕೆಲಸವನ್ನು ಕನೆಕ್ಟಿಂಗ್ ರಾಡ್ ಮಾಡುತ್ತದೆ. ಕ್ರಾಂಕ್‍ಶಾಫ್ಟ್: ಪಿಸ್ಟನ್ ಮೇಲೆ ಕೆಳಗೆ ಚಲಿಸಿದಾಗ ಕ್ರಾಂಕ್‍ಶಾಫ್ಟ್ ತಿರುಗುತ್ತದೆ.
ಎಂಜಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಇತರೆ ಅಂಶಗಳು.
ವಾಲ್ವ್ ಟ್ರೈನ್: ಕವಾಟಗಳು ಮತ್ತು ಇತರ ಮೆಕಾನಿಸಂ ಇರುವ ವಾಲ್ವ್ ಟ್ರೈನ್‍ಗಳು ಕಾಮ್‍ಶಾಫ್ಟ್‍ನ್ನು ತೆರಯಲು ಮತ್ತು ಮುಚ್ಚಲು ನೆರವಾಗುತ್ತದೆ. ಹೆಚ್ಚಿನ ಆಧುನಿಕ ಎಂಜಿನ್‍ಗಳು ಓವರ್‍ಹೆಡ್ ಕ್ಯಾಮ್‍ಗಳನ್ನು ಹೊಂದಿರುತ್ತವೆ.
ರಾಡ್: ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸಲು ಕ್ಯಾಮ್‍ನ ಕೆಳಗೆ ಇರುವ ರಾಡ್‍ಗಳು ಸಹ ಸಮರ್ಪಕವಾಗಿ ಕೆಲಸ ಮಾಡಬೇಕು.
ಟೈಮಿಂಗ್ ಬೆಲ್ಟ್: ಟೈಮಿಂಗ್ ಚೈನ್ ಲಿಂಕ್ ಸಹ ಎಂಜಿನ್‍ನಲ್ಲಿ ಅತ್ಯಂತ ಅಗತ್ಯದ ಭಾಗ. ಈ ಚೈನ್ ಕ್ರಾಂಕ್‍ಶಾಫ್ಟ್‍ನಿಂದ ಕ್ಯಾಮ್‍ಶಾಫ್ಟ್‍ಗೆ ಲಿಂಕ್ ಮಾಡುತ್ತದೆ.
ಕ್ಯಾಮ್‍ಶಾಫ್ಟ್: ಹೆಚ್ಚಿನ ಆಧುನಿಕ ಎಂಜಿನ್‍ಗಳು ಪ್ರತಿಸಿಲಿಂಡರ್‍ಗೆ ನಾಲ್ಕು ವಾಲ್ವ್‍ಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಎರಡು ಇಂಟೆಕ್‍ಗೆ ಮತ್ತು ಎರಡು ಎಗ್ಸಾಸ್ಟ್‍ಗೆ ಇರುತ್ತದೆ. ಇದರಿಂದಾಗಿ ಒಂದು ಸಿಲಿಂಡರ್‍ಗೆ ಎರಡು ಕ್ಯಾಮ್‍ಶಾಫ್ಟ್‍ಗಳು ಬೇಕಿರುತ್ತದೆ. ಇದಕ್ಕಾಗಿ ಡ್ಯೂಯಲ್ ಓವರ್‍ಹೆಡ್ ಕ್ಯಾಮ್ಸ್ ಬಳಕೆ ಮಾಡಲಾಗುತ್ತದೆ.

ಅಯ್ಯೋ ಎಂಜಿನ್ ಸ್ಟಾರ್ಟ್ ಆಗ್ತಿಲ್ಲ!
ಮುಂಜಾನೆ ಇಗ್ನಿಷನ್ ಕೀಲಿಕೈ ತಿರುಗಿಸಿದಾಗ ಕಾರು ಸ್ಟಾರ್ಟ್ ಆಗದ ಅನುಭವ ನಿಮಗೆ ಆಗಿರಬಹುದು. ಎಂಜಿನ್ ಸ್ಟಾರ್ಟ್ ಆಗದಿರಲು ನೂರಾರು ಕಾರಣಗಳು ಇರಬಹುದು. ಆದರೆ ಮುಖ್ಯವಾಗಿ ಮೂರು ಕಾರಣಗಳಿವೆ.
ಅಸಮರ್ಪಕ ಇಂಧನ ಮಿಶ್ರಣ: ಇಂಧನ ಖಾಲಿಯಾದಗ ಎಂಜಿನ್‍ನೊಳಗೆ ಗಾಳಿ ಮಾತ್ರ ಪ್ರವೇಶಿಸುತ್ತದೆ. ಇಂಧನ ಪ್ರವೇಶಿಸುವುದಿಲ್ಲ. ಕೆಲವೊಮ್ಮೆ ಏರ್ ಇಂಟೆಕ್ ಮುಚ್ಚಿದ್ದರೆ ಇಂಧನ ಪೂರೈಕೆ ಆಗುತ್ತದೆ, ಗಾಳಿ ಪೂರೈಕೆ ಆಗುವುದಿಲ್ಲ. ಒಮ್ಮೊಮ್ಮೆ ಹೆಚ್ಚು ಇಂಧನ, ಕಡಿಮೆ ಗಾಳಿ ಪೂರೈಕೆಯಾಗಬಹುದು. ಇಂಧನ ಟ್ಯಾಂಕ್‍ನಲ್ಲಿ ನೀರು ಪ್ರವೇಶಿಸಿದರೂ ಇಂಧನದ ಗುಣಮಟ್ಟ ಹಾಳಾಗಿ ಸ್ಟಾರ್ಟಿಂಗ್ ಟ್ರಬಲ್ ನೀಡಬಹುದು.
ಕಂಪ್ರೆಷನ್ ಪ್ರಾಬ್ಲಂ: ಗಾಳಿ ಮತ್ತು ಇಂಧನ ಸಮರ್ಪಕವಾಗಿ ಸಂಕೋಚನ ಆಗದೆ ಇದ್ದರೆ ಕಂಬಶ್ಟನ್ ಅಥವಾ ದಹನ ಪ್ರಕ್ರಿಯೆ ಸಮರ್ಪಕವಾಗಿ ನಡೆಯದು. ಕಂಪ್ರೆಷನ್‍ನಲ್ಲಿ ತೊಂದರೆ ಉಂಟಾಗಲು ಪಿಸ್ಟನ್ ರಿಂಗ್ ಸವೆದಿರುವುದೂ ಕಾರಣವಾಗಿರಬಹುದು. ಇಂಟೆಕ್ ಅಥವಾ ಎಗ್ಸಾಸ್ಟ್ ಕವಾಟಗಳು ಸರಿಯಾಗಿ ಸೀಲ್ ಆಗದಿದ್ದರೆ ಕಂಪ್ರೆಷನ್ ಸಮಯದಲ್ಲಿ ಲೀಕ್ ಉಂಟಾಗುತ್ತದೆ.
ಸ್ಪಾರ್ಕ್ ಆಗದಿರುವುದು: ಸ್ಪಾರ್ಕ್ ಪ್ಲಗ್‍ನ ವೈರ್‍ನಲ್ಲಿ ಉಂಟಾಗುವ ತೊಂದರೆಯಿಂದ ಕಿಡಿ ಹತ್ತಿಕೊಳ್ಳದಿದ್ದರೆ ಎಂಜಿನ್ ಸ್ಟಾರ್ಟ್ ಆಗದು. ಕೆಲವೊಮ್ಮೆ ಕಿಡಿ ಬೇಗ ಅಥವಾ ಲೇಟಾಗಿ ಹತ್ತಿಕೊಂಡರೂ ಎಂಜಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದು.
ಇನ್ನಿತರ ಕಾರಣಗಳು: ಎಂಜಿನ್ ಸ್ಟಾರ್ಟ್ ಆಗದಿರಲು ಬ್ಯಾಟರಿ ಹಾಳಾಗಿರುವುದು, ಎಂಜಿನ್ ಕವಾಟಗಳು ಸರಿಯಾದ ಸಮಯಕ್ಕೆ ತೆರೆಯದೆ ಅಥವಾ ಮುಚ್ಚದೆ ಇರುವುದು ಇತ್ಯಾದಿ ಕಾರಣಗಳು ಇವೆ. ಆಯಿಲ್ ಇಲ್ಲದೆ ಪಿಸ್ಟನ್‍ಗೆ ಸರಾಗವಾಗಿ ಮೂವ್ ಆಗಲು ಸಾಧ್ಯವಾಗದೆ ಇದ್ದರೆ ಎಂಜಿನ್ ಸೀಝ್ ಆಗಬಹುದು.

ಕೂಲಾಗಿರಲಿ ಎಂಜಿನ್
ಎಂಜಿನ್ ಕೂಲಿಂಗ್: ಹೆಚ್ಚಿನ ಕಾರುಗಳಲ್ಲಿ ರೇಡಿಯೇಟರ್ ಮತ್ತು ವಾಟರ್ ಪಂಪ್ ಒಳಗೊಂಡಿರುವ ಕೂಲಿಂಗ್ ಸಿಸ್ಟಮ್ ಇರುತ್ತದೆ. ಸಿಲಿಂಡರ್ ಸುತ್ತಮುತ್ತ ನಾಳಗಳಲ್ಲಿ ನೀರು ಹರಿಯುತ್ತದೆ ಮತ್ತು ಮತ್ತೆ ರೇಡಿಯೇಟರ್ ಪ್ರವೇಶಿಸಿ ನಾಳಗಳಲ್ಲಿ ಹೊರಬರುತ್ತದೆ. ಏರ್‍ಕೂಲಿಂಗ್‍ನಿಂದ ಎಂಜಿನ್‍ಗೆ ತಂಪಾಗಿ ಹಾಯೆನಿಸುತ್ತದೆ. ಆದರೆ ಇದು ಎಂಜಿನ್ ಬಾಳ್ವಿಕೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು ತಗ್ಗಿಸುತ್ತದೆ.

ಏರ್ ಇಂಟೆಕ್: ಹೆಚ್ಚಿನ ಕಾರುಗಳಲ್ಲಿ ಏರ್ ಫಿಲ್ಟರ್‍ನಿಂದ ನೇರವಾಗಿ ಸಿಲಿಂಡರ್‍ಗೆ ಗಾಳಿಯನ್ನು ಕಳುಹಿಸಿಕೊಡಲಾಗುತ್ತದೆ. ಟರ್ಬೊ ಜಾರ್ಜ್‍ಡ್ ಅಥವಾ ಸೂಪರ್ ಚಾರ್ಜ್‍ಡ್ ಎಂಜಿನ್‍ಗಳಲ್ಲಿ ಎಂಜಿನ್‍ಗೆ ಮೊದಲು ಏರ್ ಬರುತ್ತದೆ. ಇದರಿಂದ ಕಾರ್ಯಕ್ಷಮತೆ ಹೆಚ್ಚಿರುತ್ತದೆ.



ಎಂಜಿನ್ ಲ್ಯುಬ್ರಿಕೇಷನ್: ಎಂಜಿನ್‍ನಲ್ಲಿ ಆಯಿಲ್ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಲುಬ್ರಿಕೇಷನ್ ವ್ಯವಸ್ಥೆಯು ಎಂಜಿನ್‍ನ ಎಲ್ಲಾ ಚಲಿಸುವ ಬಿಡಿಭಾಗಗಳಿಗೆ ಸಮರ್ಪಕವಾಗಿ ಆಯಿಲ್ ದೊರಕುವಂತೆ ಮಾಡುತ್ತದೆ. ಇದರಿಂದ ಎಂಜಿನ್‍ನ ಬಿಡಿಭಾಗಗಳು ಸಮರ್ಪಕವಾಗಿ ಚಲಿಸುತ್ತವೆ.- Praveen Chandra Puttur

(ಪೂರಕ ಮಾಹಿತಿ: ಹೌಸ್ಟಫ್ಸ್‍ವಕ್ರ್ಸ್‍ಡಾಟ್‍ಕಾಂ).



More information in web





How A Car Engine Works (animated infographic) - Jacob O'Neal





Wikipedia:

Internal combustion engine - Wikipedia, the free encyclopedia