Tuesday, 21 November 2017

ವಿಲಾಸ್ ನಾಯಕ್ ಸಂದರ್ಶನ: ಕಲೆ ಎಂಬ ಕರಿಯರ್

ವಿಲಾಸ್ ನಾಯಕ್ ಸಂದರ್ಶನ: ಕಲೆ ಎಂಬ ಕರಿಯರ್

ಬಹುರಾಷ್ಟ್ರೀಯ ಕಂಪನಿಯ ಉದ್ಯೋಗ ಬಿಟ್ಟು ಕಲೆಯನ್ನೇ ಕರಿಯರ್ ಆಗಿ ಸ್ವೀಕರಿಸಿ ದೇಶ-ವಿದೇಶಗಳಲ್ಲಿ ಮಿಂಚುತ್ತಿದ್ದಾರೆ ಕರ್ನಾಟದ ಪ್ರತಿಭೆ ವಿಲಾಸ್ ನಾಯಕ್. ಕಲೆಯನ್ನು ಪೂರ್ಣಕಾಲಿಕ ಅಥವಾ ಅರೆಕಾಲಿಕ ಕರಿಯರ್ ಆಗಿ ಸ್ವೀಕರಿಸಲು ಬಯಸುವವರಿಗೆ ಸ್ಪೂರ್ತಿ ತುಂಬುವ ಟಿಪ್ಸ್‍ಗಳನ್ನು ವಿಕೆ ಮಿನಿ ವಿಶೇಷ ಸಂದರ್ಶನದಲ್ಲಿ ಅವರು ನೀಡಿದ್ದಾರೆ.

* ಪ್ರವೀಣ ಚಂದ್ರ ಪುತ್ತೂರು
ರಾಷ್ಟ್ರಮಟ್ಟದ ಅಥವಾ ಅಂತಾರಾಷ್ಟ್ರೀಯ ವೇದಿಕೆಯಲ್ಲಿ ನಿಂತು ಚಕಚಕನೆ ಕೆಲವೇ ನಿಮಿಷದಲ್ಲಿ ಪೇಂಟಿಂಗ್ ಬಿಡಿಸಿ ಬೆರಗುಗೊಳಿಸುವ ವಿಲಾಸ್ ನಾಯಕ್ ಬಗ್ಗೆ ನಿಮಗೆ ಗೊತ್ತಿರಬಹುದು. ಈಗ ಅವರು ಜಾಗತಿಕ ಮಟ್ಟದಲ್ಲಿ ಅತ್ಯಧಿಕ ಬೇಡಿಕೆ ಪಡೆದಿರುವ ಸ್ಪೀಡ್ ಪೇಂಟರ್.
ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ, ಸಿಂಗಾಪುರದ ಅಧ್ಯಕ್ಷರ ಚಾರಿಟಿ ಶೋನಲ್ಲಿ, ಏಷ್ಯಾ ಗಾಟ್ ಟಾಲೆಂಟ್‍ನಲ್ಲಿ, ಅಂತಾರಾಷ್ಟ್ರೀಯ ಸಿನಿಮೋತ್ಸವದಲ್ಲಿ ಸೇರಿದಂತೆ ನೂರಾರು ಕಡೆ ಸ್ಪೀಡ್ ಪೇಂಟಿಗೆ ನಡೆಸಿ ಜನರ ಮುಖದಲ್ಲಿ ಅಚ್ಚರಿ ಹುಟ್ಟಿಸಿದ್ದಾರೆ. ಅಬ್ದುಲ್ ಕಲಾಂ, ಸಚಿನ್ ತೆಂಡೂಲ್ಕರ್, ನರೇಂದ್ರ ಮೋದಿ, ಪ್ರಣಬ್ ಮುಖರ್ಜಿ , ಪುಟ್ಬಾಲ್ ದಂತಕತೆ ಪೀಲೆ ಮುಂತಾದವರ ಮುಂದೆ ತನ್ನ ಕಲೆಯನ್ನು ಪ್ರದರ್ಶಿಸಿ ಮೆಚ್ಚುಗೆ ಗಳಿಸಿದ್ದಾರೆ.
ಕೆಲವು ವರ್ಷದ ಹಿಂದೆ ಅವರು ಕಾಪೆರ್Çರೇಟ್ ಕಂಪನಿಯೊಂದರಲ್ಲಿ ಉದ್ಯೋಗಿಯಾಗಿದ್ದರು. ಐದು ವರ್ಷದ ಹಿಂದೆ ಎಚ್‍ಆರ್ ಹುದ್ದೆಯನ್ನು ಬಿಟ್ಟ ಇವರ ಈಗಿನ ಕಲಾ ಕರಿಯರ್‍ನ ಸಕ್ಸಸ್ ಸ್ಟೋರಿ ಅಚ್ಚರಿ ಹುಟ್ಟಿಸುವಂತದ್ದು. ವಿವಿಧ ಹವ್ಯಾಸ, ಪ್ರತಿಭೆಯನ್ನು ಹೊಂದಿದ್ದು, ಇಷ್ಟವಿಲ್ಲದ ಇಷ್ಟವಿಲ್ಲದ ವೃತ್ತಿಯಲ್ಲಿ ಜೀವನ ಸವೆಸುತ್ತಿರುವವರಿಗೆ, ಪ್ರತಿಭೆಯನ್ನು ವೃತ್ತಿಯಾಗಿ ಸ್ವೀಕರಿಸಲು ಬಯಸುವವರಿಗೆ ಅಮೂಲ್ಯ ಸಲಹೆಗಳನ್ನು ವಿಲಾಸ್ ಇಲ್ಲಿ ನೀಡಿದ್ದಾರೆ.
ಶಿಕ್ಷಣ ಮತ್ತು ಕೆಲಸ
ಉಜಿರೆಯಲ್ಲಿ ಬಿಎ ಪದವಿ (7ನೇ ರ್ಯಾಂಕ್), ಮೈಸೂರು ವಿವಿಯಲ್ಲಿ ಎಂಎಸ್‍ಡಬ್ಲ್ಯು ಪದವಿ(2ನೇ ರ್ಯಾಂಕ್) ಕನ್ನಡ ಮುಕ್ತ ವಿವಿಯಲ್ಲಿ ಪಿಜಿಡಿಎಚ್‍ಆರ್‍ಎಂ ಓದಿದ್ದೆ. ಶಿಕ್ಷಣ ಮುಗಿದ ನಂತರ ನಾನು ಶಾಹಿ ಎಕ್ಸ್‍ಪೆÇೀರ್ಟ್ ಕಂಪನಿಯಲ್ಲಿ 1 ವರ್ಷ, 2 ತಿಂಗಳು ಕೆಲಸ ಮಾಡಿದೆ. ನಂತರ ಐಬಿಎಂನ ಮಾನವ ಸಂಪನ್ಮೂಲ ವಿಭಾಗದಲ್ಲಿ ಸುಮಾರು ನಾಲ್ಕೂವರೆ ವರ್ಷ ಕೆಲಸ ಮಾಡಿದೆ. ಹೀಗೆ ಎಂಎನ್‍ಸಿ ಕಂಪನಿಯಲ್ಲಿ ಸುಮಾರು 6 ವರ್ಷ ಕೆಲಸ ಮಾಡಿದ್ದೆ.

ಕೆಲಸದಲ್ಲಿ ಕಲೆಯ ಗುಂಗು
ಆಫೀಸ್‍ನಲ್ಲಿ ಕೆಲಸ ಮಾಡುವಾಗ, ಮನೆಯಲ್ಲಿ ಒಬ್ಬನೇ ಇದ್ದಾಗ, ಚಿತ್ರ ಬಿಡಿಸಿಕೊಂಡಿರುವಾಗ, ಟ್ಯಾಲೆಂಟ್ ಮ್ಯಾನೇಜ್‍ಮೆಂಟ್ ಕುರಿತು ತಿಳುವಳಿಕೆ ಬಂದ ಸಂದರ್ಭದಲ್ಲಿ ನಾನು ನನ್ನ ಬಗ್ಗೆ ಹೆಚ್ಚು ಯೋಚಿಸಲು ಆರಂಭಿಸಿದ್ದೆ. ನಾನು ನನ್ನ ಪ್ರತಿಭೆಯನ್ನು ಏನು ಮಾಡುತ್ತಿದ್ದೇನೆ? ಯಾವ ರೀತಿ ಬಳಕೆ ಮಾಡುತ್ತಿದ್ದೇನೆ? ಯಾಕೆ ವ್ಯರ್ಥ ಮಾಡುತ್ತಿದ್ದೇನೆ? ಇತ್ಯಾದಿ ಚಿಂತನೆಗಳನ್ನು ಮಾಡುತ್ತಿದ್ದೆ. ಇರುವ ಒಂದು ಜೀವನದಲ್ಲಿ ದೇವರು ನಮಗೆ ನೀಡಿರುವ ಪ್ರತಿಭೆಯನ್ನು ಎಷ್ಟು ಸಾಧ್ಯವೋ ಅಷ್ಟು ಬಳಸಬೇಕು ಎಂದೆನಿಸಿತ್ತು. ನಾನು ನನ್ನ ಪ್ರತಿಭೆಯನ್ನಿಟ್ಟುಕೊಂಡು ಏನಾದರೂ ಸಾಧನೆ ಮಾಡಬೇಕು ಎಂದೆಲ್ಲ ಯೋಚಿಸುತ್ತಿದ್ದೆ. ಕೆಲಸ ಮುಗಿಸಿ ಮನೆಗೆ ಬಂದು ರಾತ್ರಿಯಿಡಿ ಚಿತ್ರ ಬಿಡಿಸುತ್ತ ಮುಂಜಾನೆ 3-4 ಗಂಟೆಯವರೆಗೆ ಇದೇ ಆಲೋಚನೆಯಲ್ಲಿ ಇರುತ್ತಿದ್ದೆ. ಕೆಲಸ ಮಾಡುವಾಗಲೂ ಮುಂದೆ ಏನಾಗಬೇಕು ಎಂಬ ಪರಿಕಲ್ಪನೆ ಮಾಡುತ್ತಿದ್ದೆ.
ಕೆಲಸ ಬಿಡುವ ರಿಸ್ಕ್
ಕೆಲಸ ಬಿಡಲು ತೆಗೆದುಕೊಳ್ಳುವ ನಿರ್ಧಾರ ಮತ್ತು ಕೆಲಸ ಬಿಟ್ಟ ನಂತರ ಕಲೆಯ ಕಡೆಗೆ ಪೂರ್ತಿ ತೊಡಗಿಸಿಕೊಳ್ಳುವುದು ಕೊಂಚ ಸವಾಲಿನ ಸಂಗತಿ. ಆ ಸಮಯದಲ್ಲಿ ಬಹಳಷ್ಟು ಜನರು ಉತ್ಸಾಹ ಕುಗ್ಗಿಸುವ ಮಾತುಗಳನ್ನಾಡುತ್ತಿದ್ದರು. ರಿಯಾಲಿಟಿ ಶೋನಲ್ಲಿ ಜನಪ್ರಿಯತೆ ಪಡೆದ ತಕ್ಷಣ ಕರಿಯರ್ ಹಾಳು ಮಾಡಿಕೊಳ್ಳಬೇಡಿ. ಇಂತಹ ರಿಸ್ಕ್ ತೆಗೆದುಕೊಳ್ಳಬೇಡಿ ಎಂದು ಬಹಳಷ್ಟು ಜನರು ಹೇಳುತ್ತಿದ್ದರು. ಆದರೆ, ನಾನೂ ಆದಾಗಲೇ ರಿಸ್ಕ್ ತೆಗೆದುಕೊಳ್ಳುವ ನಿರ್ಧಾರ ತೆಗೆದುಕೊಂಡಾಗಿತ್ತು.
 ಜೀವನದಲ್ಲಿ ನಾಳೆ ಏನಾಗುತ್ತದೆ ಎಂದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಯಾಕೆ, ಒಂದು ಖಾಯಂ ಉದ್ಯೋಗಕ್ಕೆ ಅಂಟಿಕೊಂಡು ನಮ್ಮ ಪ್ಯಾಷನ್ ಅನ್ನು ಬಿಡಬೇಕು? ಯಾಕೆ ನಮ್ಮ ಕನಸನ್ನು ಸಾಯಿಸಬೇಕು ಎಂದು ಅನಿಸಿದ್ದರಿಂದ ಎಂಎನ್‍ಸಿ ಜಾಬ್‍ಗೆ ರಿಸೈನ್ ಮಾಡಿದ್ದೆ.
ಸರಿಯಾದ ಪ್ಲಾನ್ ಅಗತ್ಯ
ನಾನು ಎಂಎನ್‍ಸಿ ಕಂಪನಿಗೆ ರಾಜೀನಾಮೆ ನೀಡಿ ಈ ತಿಂಗಳಿಗೆ ಐದು ವರ್ಷವಾಗುತ್ತದೆ. ಇಲ್ಲಿಯವರೆಗೆ ಯಾವುದೇ ಸಮಸ್ಯೆಯಾಗಿಲ್ಲ. ಯಾಕೆಂದರೆ, ಕೆಲಸ ಬಿಡುವ ಕುರಿತು ಮತ್ತು ಕಲೆಯನ್ನು ಕರಿಯರ್ ಆಗಿ ಸ್ವೀಕರಿಸುವ ಕುರಿತು ನಾನು ಸರಿಯಾದ ಪ್ಲಾನ್ ಮಾಡಿದ್ದೆ. ನಾನು ಮಾಡುವುದು ಎಕ್ಸ್‍ಕ್ಲೂಸಿವ್ ಆರ್ಟ್ ಆಗಿರುವ ಕಾರಣ ಅವಕಾಶಗಳು ಸಿಗುತ್ತದೆ ಎನ್ನುವ ಭರವಸೆ ಇತ್ತು. ಈಗ ನನಗೆ ಬರುತ್ತಿರುವ ಹೆಚ್ಚು ಅವಕಾಶವನ್ನು ಹೇಗೆ ನಿಭಾಯಿಸಬೇಕು ಎನ್ನುವುದೇ ನನ್ನ ಮುಂದಿರುವ ಅತ್ಯುತ್ತಮ ರೀತಿಯ ಸವಾಲಾಗಿದೆ.
ಹೊಸ ಬಗೆಯ ಉದ್ಯೋಗಾವಕಾಶ
ನೀನು ಡಾಕ್ಟರ್ ಆಗು, ಎಂಜಿನಿಯರ್ ಆಗು, ಆರ್ಟಿಸ್ಟ್ ಆಗಿ ಏನು ಮಾಡ್ತಿಯಾ? ಸ್ಟಾಂಡ್ ಅಪ್ ಕಮಿಡಿಯನ್ ಆಗಿ, ಡಿಜೆ ಆಗಿ ಏನು ಮಾಡ್ತಿಯಾ? ಎಂದು ಹೇಳುವವರಿದ್ದಾರೆ. ಆದರೆ, ಇದೆಲ್ಲ ಹೊಸ ಬಗೆಯ ಉದ್ಯೋಗ ಮತ್ತು ಹವ್ಯಾಸಗಳು. ಇಂತಹ ಕಲೆಗಳನ್ನು ವೃತ್ತಿಯಾಗಿ ಸ್ವೀಕರಿಸಿ ಉತ್ತಮ ದುಡಿಮೆ ಮಾಡಬಹುದು ಎನ್ನುವುದಕ್ಕೆ ನನ್ನ ಬದುಕೇ ಸಾಕ್ಷಿ. ನನಗೂ ಎಷ್ಟೋ ಸಾರಿ ಅನಿಸಿದೆ, ನಾನು ಈಗಲೂ ಎಂಎನ್‍ಸಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆ ನನ್ನ ಆರ್ಥಿಕ ಪರಿಸ್ಥಿತಿ ಹೀಗೆ ಇರುತ್ತಿತ್ತಾ ಎಂದು.

ಆರ್ಥಿಕತೆಯೂ ಉತ್ತಮ
ಪ್ರತಿಭೆ ಕೈ ಹಿಡಿದರೆ ಆರ್ಥಿಕವಾಗಿಯೂ ಉತ್ತಮಗೊಳ್ಳಬಹುದು. ನಾನು ಇನ್ನೂ ಎಂಎನ್‍ಸಿ ಕಂಪನಿಯಲ್ಲೇ ಇರುತ್ತಿದ್ದರೆ ಬೆಂಗಳೂರಿನಲ್ಲಿ ಸ್ವಂತ ಮನೆ ಮಾಡಲು ಸಾಧ್ಯವಿರಲಿಲ್ಲ. ಕಲೆಯನ್ನು ಕರಿಯರ್ ಆಗಿ ಸ್ವೀಕರಿಸಿದ ಎರಡೂವರೆ ವರ್ಷದಲ್ಲಿಯೇ ಬೆಂಗಳೂರಿನಲ್ಲಿ ನಾನು ಸ್ವಂತ ಮನೆ ಮಾಡಿದ್ದೇನೆ. (ಇವರ ಚಿತ್ರಕಲೆಯಿಂದ ಸಂಗ್ರಹಗೊಂಡಿರುವ 20 ಮಿಲಿಯನ್‍ಗೂ ಹೆಚ್ಚು ಡಾಲರ್‍ಗಳು ಸಮಾಜ ಸೇವೆಗೆ ಬಳಕೆಯಾಗಿದೆ) .
ಸ್ಪೀಡ್ ಪೇಂಟಿಂಗ್ ಮತ್ತು ಫೈನ್ ಆಟ್ರ್ಸ್: ಈಗ ನನಗೆ ಹೆಚ್ಚು ಪ್ರಮಾಣದಲ್ಲಿ ಸ್ಪೀಡ್ ಪೇಂಟಿಂಗ್ ಆಫರ್ ಬರುತ್ತಿದೆ. ಎಷ್ಟೇಂದರೆ, ನನ್ನ ಫೈನ್ ಆಟ್ರ್ಸ್ ಕುರಿತು ಗಮನಕೊಡಲಾಗದಷ್ಟು. ಈಗಾಗಲೇ 26 ದೇಶ ಸುತ್ತಿದ್ದೇನೆ. ಸ್ಟೇಜ್‍ನಲ್ಲಿ ನಿಂತು ವೇಗವಾಗಿ ಮಾಡುವ ಸ್ಪೀಡ್ ಪೇಂಟಿಂಗ್ ಮತ್ತು ಮನೆಯಲ್ಲಿ ಕುಳಿತು ಸಾವಧಾನವಾಗಿ ರಚಿಸುವ ಫೈನ್ ಆಟ್ರ್ಸ್ ಅನ್ನು ಬ್ಯಾಲೆನ್ಸ್ ಮಾಡುವುದು ನನ್ನ ಮುಂದಿರುವ ಸವಾಲಾಗಿದೆ. ಇದಕ್ಕಾಗಿ ಎಷ್ಟೋ ಸ್ಪೀಡ್ ಪೇಂಟಿಂಗ್ ಶೋಗಳಿಗೆ ಒಪ್ಪಿಗೆ ನೀಡದೆ ಸಮತೋಲನ ಕಾಯ್ದುಕೊಳ್ಳುತ್ತಿದ್ದೇನೆ.ವೃತ್ತಿ ಮತ್ತು ಪ್ರವೃತ್ತಿ ಜೊತೆಜೊತೆಗೆ
ಕರಿಯರ್ ಜೊತೆ ಹವ್ಯಾಸವನ್ನೂ ಜೊತೆಜೊತೆಯಾಗಿ ನಿಭಾಯಿಸುವವರು ಸಾಕಷ್ಟು ಜನರು ಇದ್ದಾರೆ. ನಾನು ಎಂಎನ್‍ಸಿಯಲ್ಲಿದ್ದಾಗ ಇವೆರಡನ್ನು ಜೊತೆಜೊತೆಯಾಗಿಯೇ ಮಾಡಿದ್ದೆ. ಆದರೆ, ಇದರ ಒಂದು ಅವಗುಣ ಎಂದರೆ ನಮಗೆ ಹವ್ಯಾಸಕ್ಕಾಗಿ ಸಿಗುವ ಸಮಯ ತೀರ ಅತ್ಯಲ್ಪ. ನಿಮ್ಮ ಹವ್ಯಾಸವೇ ಪೂರ್ತಿ ಕರಿಯರ್ ಆದರೆ ನಿಮಗೆ ವರ್ಷದ 345 ದಿನವೂ ದೊರಕುತ್ತದೆ. ನಿಮ್ಮ ಕನಸನ್ನು ಬೇಗ ಈಡೇರಿಸಿಕೊಳ್ಳಬಹುದು.


ಕನಸನ್ನು ಚೇಸ್ ಮಾಡಿ
ನೀವು ನಿಮ್ಮ ಕನಸನ್ನು ಫಾಲೊ ಮಾಡಿ. ನಿಮ್ಮ ಕನಸನ್ನು ಸರಿಯಾಗಿ ಹಿಂಬಾಲಿಸಿ. ಇದಕ್ಕೆ ಸರಿಯಾಗಿ ಪ್ಲಾನ್ ಮಾಡಿ, ಕಷ್ಟಪಟ್ಟು ದುಡಿದರೆ ನಂತರ ಹಣ, ಫೇಮ್ ಎಲ್ಲವೂ ನಿಮ್ಮನ್ನು ಫಾಲೊ ಮಾಡುತ್ತೆ.
ಎಂಎನ್‍ಸಿಯಿಂದ ಕಲಿತ ಪಾಠ
ಕಾಪೆರ್Çರೇಟ್ ಜಗತ್ತಿನಲ್ಲಿ ನಾನು ಕಲಿತ ಪಾಠಗಳು ನನ್ನ ಕಲಾ ಕರಿಯರ್‍ಗೆ ಸಾಕಷ್ಟು ನೆರವಾಗಿದೆ. ನನ್ನ ಹಳೆಯ ಸ್ನೇಹಿತರು ಟೀವಿ ಸಂದರ್ಶನಗಳಲ್ಲಿ ಮಾತನಾಡುವುದನ್ನು ನೋಡುವಾಗ `ನಾವು ನೋಡಿದ ಹಳೆಯ ವಿಲಾಸ್ ಇವನೇನಾ?' ಎಂದು ಅಚ್ಚರಿಗೊಳ್ಳುತ್ತಾರೆ. ಜನರೊಂದಿಗೆ ಹೇಗೆ ಸಂವಹನ ನಡೆಸಬೇಕೆಂದು, ಸ್ಟೇಜ್‍ನಲ್ಲಿ ಹೇಗೆ ಮಾತನಾಡಬೇಕೆಂಬ ಕೌಶಲ ನನ್ನಲ್ಲಿ ಬಹಳಷ್ಟು ಕಡಿಮೆ ಇತ್ತು. ಫೇಸ್ ಟು ಫೇಸ್ ಕಮ್ಯುನಿಕೇಷನ್, ಇಮೇಲ್ ಕಮ್ಯುನಿಕೇಷನ್, ಸ್ಟೇಜ್ ಪ್ರಸಂಟೇಷನ್ ಇತ್ಯಾದಿಗಳನ್ನು ಕಾಪೆರ್Çರೇಟ್ ಜಗತ್ತು ನನಗೆ ಕಲಿಸಿಕೊಟ್ಟಿದೆ. ಅಲ್ಲಿ ಕಲಿತ ಪಾಠಗಳು ನನಗೆ ದೇಶ ವಿದೇಶಗಳಿಂದ ಬೇರೆ ಬೇರೆ ಸಂಘಟಕರಿಂದ ಆಫರ್ ಬಂದಾಗ, ಕೋ ಆರ್ಡಿನೇಟ್ ಮಾಡಲು, ಚಾರಿಟಿ ಶೋಗಳಲ್ಲಿ ಚರ್ಚೆಗಳಲ್ಲಿ ಭಾಗವಹಿಸಲು, ಆಫರ್‍ಗಳ ಕುರಿತು ನೆಗೋಸಿಯೇಷನ್ ಮಾಡಲು ಸಾಕಷ್ಟು ನೆರವಾಗುತ್ತಿದೆ.
ಸ್ಪೀಡ್ ಪೇಂಟಿಂಗ್ ಹಿಂದಿನ ಪರಿಶ್ರಮ
ಕೆಲವೊಂದು ರಿಯಾಲಿಟಿ ಶೋನಲ್ಲಿ ನಾನು ಕೆಲವೇ ನಿಮಿಷದಲ್ಲಿ ಮಾಡುವ ಪೇಟಿಂಗ್ ಹಿಂದೆ ಸಾಕಷ್ಟು ಪ್ರ್ಯಾಕ್ಟೀಸ್ ಇರುತ್ತದೆ. ಸ್ಟೇಜಲ್ಲಿ ಎಷ್ಟು ದೊಡ್ಡ ಕ್ಯಾನ್ವಸ್‍ನಲ್ಲಿ ಪೇಂಟಿಂಗ್ ಮಾಡುತ್ತೇನೋ ಅದೇ ರೀತಿ ಮನೆಯಲ್ಲಿ ಕುಳಿತು 50-60 ಕ್ಯಾನ್ವಸ್‍ನಲ್ಲಿ ತಪ್ಪುಗಳನ್ನು ಕಂಡುಹುಡುಕುತ್ತ, ಮತ್ತೆ ಮತ್ತೆ ಪೇಂಟಿಂಗ್ ರಚಿಸಬೇಕಾಗುತ್ತದೆ. ಇಷ್ಟೆಲ್ಲ ಪ್ರಯತ್ನ ಪಟ್ಟರೂ ಸ್ಟೇಜ್‍ನಲ್ಲಿ ಅದೇ ರೀತಿ ಪೇಂಟಿಂಗ್ ಮೂಡಿ ಬರುತ್ತೇ ಎಂದು ಹೇಳಲಾಗುವುದಿಲ್ಲ.

ಸೋಷಿಯಲ್ ಮೀಡಿಯಾದ ಮಿತವಾದ ಬಳಕೆ
ಈಗ ಅವಶ್ಯಕತೆಗಿಂತ ಹೆಚ್ಚು ವಾಟ್ಸ್‍ಆ್ಯಪ್, ಫೇಸ್‍ಬುಕ್, ಟೀವಿ, ಯೂಟ್ಯೂಬ್ ಇತ್ಯಾದಿಗಳ ಲಭ್ಯತೆ ಇದೆ. ಇವುಗಳನ್ನು ಎಷ್ಟು ಬಳಕೆ ಮಾಡಬೇಕೆಂಬ ಅರಿವು ಎಲ್ಲರಲ್ಲಿಯೂ ಇರಬೇಕು. ಅವಶ್ಯಕತೆ ಇಲ್ಲದೆ ಇದ್ದಾಗ ಇವುಗಳನ್ನು ಸ್ವಿಚ್ ಆಫ್ ಮಾಡಿ. ಯಾವಾಗ ನಾವು ಇವುಗಳೊಂದಿಗೆ ಡಿಸ್‍ಕನೆಕ್ಟ್ ಆಗಿ ನಮ್ಮ ಜೊತೆ ಕನೆಕ್ಟ್ ಆಗ್ತಿವೋ ಆಗ ನಮಗೆ ನಮ್ಮಲ್ಲಿರುವ ಸ್ಟ್ರೆಂಥ್ ಏನು, ನಮ್ಮಲ್ಲಿರುವ ಸಕಾರಾತ್ಮಕ ಶಕ್ತಿಗಳೇನು, ನಮ್ಮ ದೌರ್ಬಲ್ಯ ಏನು ಎಂದು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ.

ಇಷ್ಟವಿಲ್ಲದ ಕ್ಷೇತ್ರದಲ್ಲಿಯೂ ಆಸಕ್ತಿ
ಕೆಲವರು ಅನಿವಾರ್ಯವಾಗಿ ಆಸಕ್ತಿ ಇಲ್ಲದ ಕ್ಷೇತ್ರದಲ್ಲಿ ಕೆಲಸ ಮಾಡಬೇಕಾಗುತ್ತದೆ. ಅಂತಹ ಸನ್ನಿವೇಶದಲ್ಲಿ ಎಷ್ಟು ಸಾಧ್ಯವೋ ಅಷ್ಟು ಆಸಕ್ತಿ ಬೆಳೆಸಿಕೊಳ್ಳಿ. ಇನ್ವಾಲ್ ಆಗಿ ಕೆಲಸ ಮಾಡಿ. ನಿಮ್ಮಲ್ಲಿ ಹಾಡುವುದು, ಕ್ರಿಕೆಟ್ ಆಡುವುದು, ನಾಟಕ, ಚಿತ್ರಕಲೆ, ಕರಕುಶಲತೆ ಇತ್ಯಾದಿ ವಿಶೇಷ ಪ್ರತಿಭೆ ಇದ್ದರೆ, ಸಮಯ ಸಿಕ್ಕಾಗಲೆಲ್ಲ ಇವುಗಳಲ್ಲಿ ತೊಡಗಿಸಿಕೊಳ್ಳಿ. ಸಂತೋಷ ಸಿಗುತ್ತೆ.
ಪ್ರತಿಭಾನ್ವಿತರಿಗೆ ಟಿಪ್ಸ್

 1.  ತುಂಬಾ ಜನರು ತಮ್ಮಲ್ಲಿರುವ ಪ್ರತಿಭೆ ಮತ್ತು ಆರ್ಥಿಕ ತೊಂದರೆಗಳ ಕುರಿತು ನನ್ನಲ್ಲಿ ಹೇಳುತ್ತಾರೆ. ಕೆಲಸ ಬಿಡುವುದಕ್ಕೆ ಆಗೋಲ್ಲ ಅಂತಾರೆ. ನನ್ನಲ್ಲೂ ಆರ್ಥಿಕ ತೊಂದರೆ ಇತ್ತು. ಅಪ್ಪನ ಪುಟ್ಟ ಅಂಗಡಿಯಲ್ಲಿ ಕೆಲಸ ಮಾಡುತ್ತ, ಚಿತ್ರಕಲೆ ಮಾಡುತ್ತ, ಓದುತ್ತ ಬೆಳೆದವನು ನಾನು. ನಿಮ್ಮಲ್ಲಿ ಎಷ್ಟು ಸಮಯವಿದೆ ಅಷ್ಟು ಸಮಯವನ್ನು ಪ್ರತಿಭೆಗಾಗಿ ಮೀಸಲಿರಿಸಿ, ನಿಮ್ಮ ಖುಷಿಗಾಗಿ ಪ್ರತಿಭೆಯನ್ನು ಕಂಟಿನ್ಯೂ ಮಾಡಿ.

 2.  ಯಾವಾಗಲೂ ರಿಸ್ಕ್ ತೆಗೆದುಕೊಳ್ಳಬೇಕು ಎಂಬ ಕಾರಣದಿಂದ ರಿಸ್ಕ್ ತೆಗೆದುಕೊಳ್ಳಬೇಡಿ. ಲೆಕ್ಕಚಾರದ ರಿಸ್ಕ್ ತೆಗೆದುಕೊಳ್ಳುವುದು ಅತ್ಯಂತ ಅಗತ್ಯ. ನಾನು ತುಂಬಾ ಯೋಚಿಸಿ, ಅಳೆದುತೂಗಿ ತೆಗೆದುಕೊಂಡಿರುವ ರಿಸ್ಕ್ ಇದಾಗಿದೆ.

 3.  ಪ್ಲಾನ್ ಎ ಮತ್ತು ಪ್ಲಾನ್ ಬಿ ಇರಲಿ. ಎಲ್ಲಾದರೂ ನಾನು ಚಿತ್ರಕಲೆಯಲ್ಲಿ ಯಶಸ್ವಿಯಾಗದೆ ಇದ್ದರೆ ಮತ್ತೆ ಕಾಪೆರ್Çರೇಟ್ ಜಗತ್ತಿಗೆ ಮರಳುವ ತೀರ್ಮಾನ ಮಾಡಿಯೇ ಕೆಲಸ ಬಿಟ್ಟಿದ್ದೆ. ಎಲ್ಲಾದರೂ ನಿಮ್ಮ ಮೊದಲ ಪ್ಲಾನ್ ಯಶಸ್ವಿಯಾಗದೆ ಇದ್ದರೆ ಮತ್ತೊಂದು ಪ್ಲಾನ್‍ಗೆ ಪ್ರವೇಶಿಸಿ.

 4.  ಕಲೆಗೆ ಖಚಿತ ವೇತನ ಇರುವುದಿಲ್ಲ. ಹೀಗಾಗಿ, ಕೆಲಸ ಬಿಡುವ ಮೊದಲು ಕನಿಷ್ಠ ಇಂತಿಷ್ಟು ದುಡಿಯಬಲ್ಲೆ ಎಂಬ ಭರವಸೆ ಹುಟ್ಟಿದ ನಂತರವೇ ತೀರ್ಮಾನ ಕೈಗೊಳ್ಳಿರಿ.

 5.  ಸರಿಯಾಗಿ ಹೋಂವರ್ಕ್ ಮಾಡಿ. ನಿಖರವಾದ ಪ್ಲಾನ್ ಮಾಡಿ. ತಕ್ಷಣಕ್ಕೆ ಯಾವುದೇ ನಿರ್ಧಾರ ತೆಗೆದುಕೊಳ್ಳಬೇಡಿ.

Published in Vijayakarnataka Mini

ವಿಲಾಸ್ ನಾಯಕ್ ವೆಬ್ ಲಿಂಕ್

All Image Copyrights: Villas Nayak

Thursday, 16 November 2017

ಮೌಸ್ ಇಲ್ಲದೆ ಕಂಪ್ಯೂಟರ್ ಬಳಕೆ ಮಾಡುವುದು ಹೇಗೆ ಗೊತ್ತೆ?

ಮೌಸ್ ಇಲ್ಲದೆ ಕಂಪ್ಯೂಟರ್ ಬಳಕೆ ಮಾಡುವುದು ಹೇಗೆ ಗೊತ್ತೆ?ಕಂಪ್ಯೂಟರ್ ಅನ್ನು ಮೌಸ್ ಇಲ್ಲದೆಯೂ ಬಳಕೆ ಮಾಡಲು ಬಯಸುವವರಿಗೆ ಇಲ್ಲೊಂದಿಷ್ಟು ಟಿಪ್ಸ್‍ಗಳಿವೆ.


 1. ಮೊದಲಿಗೆ ಸ್ಟಾರ್ಟ್‍ಗೆ ಹೋಗಿ. ಕಂಟ್ರೋಲ್ ಪ್ಯಾನೆಲ್ ತೆರೆಯಿರಿ. ಅಲ್ಲಿ `ಈಸಿ ಆಫ್ ಆ್ಯಕ್ಸೆಸ್' ಎಂಬ ಆಯ್ಕೆಯನ್ನು ಆ್ಯಕ್ಟಿವೇಟ್ ಮಾಡಿರಿ.
 2.  ಎಫ್1 ಅನ್ನು ಹೆಲ್ಪ್‍ಗೆ ಬಳಸಿ. 
 3. ಸ್ಟಾರ್ಟ್ ಮೆನು ತೆರೆಯಲು ವಿಂಡೋ ಬಟನ್ ಬಳಸಿ.
 4. ತೆರೆದಿರುವ ಪೆÇ್ರೀಗ್ರಾಂಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಲು ಆಲ್ಟ್ ಮತ್ತು ಟ್ಯಾಬ್‍ಗಳನ್ನು ಬಳಸಿ. 
 5. ಯಾವುದಾದರೂ ಪೆÇ್ರೀಗ್ರಾಂನಿಂದ ಹೊರಹೋಗಲು ಆಲ್ಟ್ ಮತ್ತು ಎಫ್4 ಬಳಕೆ ಮಾಡಿರಿ.
 6. ಡಿಲೀಟ್ ಮಾಡಲು ಶಿಫ್ಟ್ ಮತ್ತು ಡಿಲೀಟ್ ಜೊತೆಯಾಗಿ ಬಳಕೆ ಮಾಡಿ. 
 7. ವಿಂಡೋಸ್ ಕೀ ಮತ್ತು ಎಲ್ ಅನ್ನು ಪ್ರೆಸ್ ಮಾಡಿದರೆ ಕಂಪ್ಯೂಟರ್ ಲಾಕ್ ಆಗುತ್ತದೆ. 
 8. ಟೈಪ್ ಮಾಡುವಾಗ ಕಾಪಿ ಮಾಡಲು ಕಂಟ್ರೋಲ್ ಸಿ, ಕಟ್ ಮಾಡಲು ಕಂಟ್ರೋಲ್ ಸಿ, ಪೇಸ್ಟ್ ಮಾಡಲು ಕಂಟ್ರೋಲ್ ವಿ, ಅಂಡೂ ಮಾಡಲು ಕಂಟ್ರೋಲ್ ಝಡ್ ಬಳಸಿ.
 9. ಬೋಲ್ಡ್ ಮಾಡಲು ಕಂಟ್ರೋಲ್ ಬಿ, ಅಂಡರ್‍ಲೈನ್ ಹಾಕಲು ಕಂಟ್ರೋಲ್ ಯು, ಇಟಾಲಿಕ್ ಫಾಂಟ್ ಬಳಸಲು ಕಂಟ್ರೋಲ್ ಐ, ಕೆಲವು ವರ್ಡ್‍ಗಳನ್ನು ಸ್ಕಿಪ್ ಮಾಡಲು ಅಥವಾ ಮುಂದಕ್ಕೆ ಹೋಗಲು ಬಾಣದ ಗುರುತುಗಳನ್ನು ಬಳಸಿರಿ.
 10. ಹೆಸರು ಬದಲಾಯಿಸಲು(ರಿನೇಮ್) ಎಫ್2, ಎಲ್ಲಾ ಫೈಲ್‍ಗಳನ್ನು ಹುಡುಕಲು ಎಫ್3 ಬಳಸಿರಿ.
 11. ಆಯ್ಕೆ ಮಾಡಿರುವ ಆಬ್ಜೆಕ್ಟ್ ಅನ್ನು ತೆರೆಯಲು ಆಲ್ಟ್ ಹಿಡಿದು ಎಂಟರ್ ಪ್ರೆಸ್ ಮಾಡಿರಿ.
 12. ನೀವು ಯಾವುದಾದರೂ ವರ್ಡ್ ಫೈಲ್‍ಗಳನ್ನು ತೆರೆದಿದ್ದರೆ ಅದರ ಮೇಲ್ಬಾಗದಲ್ಲಿರುವ ಫೈಲ್ ಆಯ್ಕೆಗೆ ಮೌಸ್ ಇಲ್ಲದೆ ಹೋಗುವುದು ಹೇಗೆ ಎಂಬ ಸಂದೇಹ ನಿಮ್ಮಲ್ಲಿರಬಹುದು. ಎಫ್10 ಬಳಸಿದರೆ ಫೈಲ್ ಕ್ಲಿಕ್ ಆಗುತ್ತದೆ. ನಂತರ ಏರೋ ಮಾರ್ಕ್ ಬಳಸಿ ನಿಮಗೆ ಬೇಕಾದ ಆಯ್ಕೆಯನ್ನು ಕ್ಲಿಕ್ ಮಾಡಬಹುದಾಗಿದೆ. 
 13. ಶಿಫ್ಟ್ ಮತ್ತು ಎಫ್10 ಕ್ಲಿಕ್ ಮಾಡಿದರೆ ಶಾರ್ಟ್‍ಕಟ್ ಮೆನು ತೆರೆದುಕೊಳ್ಳುತ್ತದೆ. ಮೌಸ್‍ನಲ್ಲಿಯಾದರೆ ರೈಟ್ ಕ್ಲಿಕ್ ಮಾಡಬೇಕು.
 14.  ವಿಂಡೋಸ್ ಟಾಸ್ಕ್ ಮ್ಯಾನೇಜರ್ ತೆರೆದುಕೊಳ್ಳುತ್ತದೆ. 
 15.  ಆಲ್ಟ್ ಮತ್ತು ಎಫ್4 ಕ್ಲಿಕ್ ಮಾಡಿದರೆ ಈಗ ತೆರೆದಿರುವ ವಿಂಡೋ ಕ್ಲೋಸ್ ಆಗುತ್ತದೆ.
 16. ಕಂಟ್ರೋಲ್ ಮತ್ತು ಎಫ್4 ಕ್ಲಿಕ್ ಮಾಡಿದರೆ ಹಲವು ಡಾಕ್ಯುಮೆಂಟ್ ವಿಂಡೋಗಳು ಒಮ್ಮೆಲೇ ಕ್ಲೋಸ್ ಆಗುತ್ತದೆ. 
 17. ವಿಂಡೋಸ್ ಬಟನ್ ಕ್ಲಿಕ್ ಮಾಡಿದರೆ ಸ್ಟಾರ್ಟ್ ಮೆನು ತೆರೆದುಕೊಳ್ಳುತ್ತದೆ.
 18. ವಿಂಡೋಸ್ ಮತ್ತು ಆರ್: ಡೈಲಾಗ್ ಬಾಕ್ಸ್ ತೆರೆದುಕೊಳ್ಳುತ್ತದೆ.
 19. ವಿಂಡೋಸ್ ಮತ್ತು ಎಂ: ಎಲ್ಲವು ಮಿನಿಮೈಝ್ ಆಗುತ್ತದೆ.
 20. ಶಿಫ್ಟ್ ಮತ್ತು ವಿಂಡೋಸ್ ಮತ್ತು ಎಂ: ಮಿನಿಮೈಸ್ ಮಾಡಿರುವುದೆಲ್ಲ ಅಂಡೂ ಆಗುತ್ತದೆ.
 21. ವಿಂಡೋಸ್ ಮತ್ತು ಎಲ್: ವಿಂಡೋಸ್ ಲಾಗ್ ಆಫ್ ಆಗುತ್ತದೆ.
 22. ವಿಂಡೋಸ್ ಮತ್ತು ಪಿ: ಪ್ರಿಂಟ್ ಮ್ಯಾನೇಜರ್ ತೆರೆದುಕೊಳ್ಳುತ್ತದೆ.
 23. ವಿಂಡೋಸ್ ಮತ್ತು ಸಿ: ಕಂಟ್ರೋಲ್ ಪ್ಯಾನೇಲ್ ತೆರೆದುಕೊಳ್ಳುತ್ತದೆ. 
 24. ವಿಂಡೋಸ್ ಮತ್ತು ಎಸ್: ಕ್ಯಾಪ್ಸ್ ಲಾಕ್ ಅನ್ನು ಆನ್ ಅಥವಾ ಆಫ್ ಮಾಡಲು ಬಳಕೆ ಮಾಡಬಹುದು.


Monday, 13 November 2017

ಫ್ರಿಲ್ಯಾನ್ಸರ್ ಆಗುವುದು ಹೇಗೆ? ಬಿಡುವಿನ ವೇಳೆಯಲ್ಲಿ ಕೈತುಂಬಾ ಗಳಿಸಿ

ಫ್ರಿಲ್ಯಾನ್ಸರ್ ಆಗುವುದು ಹೇಗೆ? ಬಿಡುವಿನ ವೇಳೆಯಲ್ಲಿ ಕೈತುಂಬಾ ಗಳಿಸಿ

ಮನೆಯಲ್ಲಿದ್ದುಕೊಂಡು ಫ್ರಿಲ್ಯಾನ್ಸರ್ ಆಗಿ ಕೆಲಸ ಮಾಡುವವರಿಗೆ ಇಂದಿನ ಆನ್‍ಲೈನ್ ಜಗತ್ತು ಅಪಾರ ಅವಕಾಶ ನೀಡುತ್ತಿದೆ. ಫ್ರಿಲ್ಯಾನ್ಸರ್ ಆಗುವುದು ಹೇಗೆ? ಯಾವ ರೀತಿ ಸಿದ್ಧತೆ ನಡೆಸಬೇಕು? ಇತ್ಯಾದಿ ಪ್ರಶ್ನೆಗಳಿಗೆ ಉತ್ತರ ಸೇರಿದಂತೆ `ನಿಮಗೆ ನೀವೇ ಬಾಸ್ ಆಗಲು' ಸಂಪೂರ್ಣ ಮಾರ್ಗದರ್ಶನ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಆಫೀಸ್ ಕೆಲಸಕ್ಕಿಂತ ಮನೆಯಲ್ಲಿದ್ದುಕೊಂಡು ಫ್ರಿಲ್ಯಾನ್ಸರ್ ಆಗಲು ಹೆಚ್ಚಿನವರು ಇಷ್ಟಪಡುತ್ತಾರೆ. ವೈಯಕ್ತಿಕ ಕಾರಣಗಳಿಂದ ಆಫೀಸ್ ಕೆಲಸಕ್ಕೆ ಹೋಗದವರಿಗಂತೂ ಇದು ಉತ್ತಮ ಅವಕಾಶವಾಗಿದೆ. ಖಾಯಂ ಉದ್ಯೋಗಿಗಳು ಒಂದೇ ಕಂಪನಿಯಲ್ಲಿ ಕೆಲಸ ಮಾಡಬೇಕಾಗುತ್ತದೆ. ಫ್ರಿಲ್ಯಾನ್ಸರ್ ಆದವರು ಒಂದೇ ಸಮಯದಲ್ಲಿ ಹಲವು ಕಂಪನಿಗಳಿಗೆ ಕೆಲಸ ಮಾಡಿಕೊಡಬಹುದು. `ಕಡಿಮೆ ಅಥವಾ ಹೆಚ್ಚು' ಎಷ್ಟು ಕೆಲಸ ಬೇಕೋ ಅಷ್ಟು ಪಡೆದುಕೊಳ್ಳಬಹುದು. ಇದರಲ್ಲಿ ಉದ್ಯೋಗಕ್ಕೆ ತಕ್ಕಂತೆ ಆಫೀಸ್‍ಗಿಂತ ಹೆಚ್ಚು ಹಣಗಳಿಸುವ ಅವಕಾಶವೂ ಇರುತ್ತದೆ. flipkart

ಫ್ರಿಲ್ಯಾನ್ಸರ್ ಆಗಲು ತಯಾರಿ
ಏನು ಕೆಲಸ ಮಾಡುವಿರಿ?:  ಮೊದಲಿಗೆ ನಿಮ್ಮಲ್ಲಿರುವ ಕೌಶಲವನ್ನು ಹುಡುಕಿ. ನೀವು ಬರಹಗಾರರು, ಫೆÇೀಟೊಗ್ರಾಫರ್, ಆನ್‍ಲೈನ್ ಟ್ಯೂಟರ್, ಗಣಿತಶಾಸ್ತ್ರಜ್ಞ, ವೆಬ್ ವಿನ್ಯಾಸಕಾರರು, ಮಾರ್ಕೆಟಿಂಗ್ ಗುರು, ಇಲ್ಯುಸ್ಟ್ರೇಟರ್, ವಿಜ್ಞಾನಿ ಆಗಿರಬಹುದು. ನಿಮ್ಮ ಕೌಶಲಕ್ಕೆ ಸಂಬಂಧಪಟ್ಟ ಫ್ರಿಲ್ಯಾನ್ಸರ್ ಉದ್ಯೋಗಗಳು ಇಂದು ಸಿಗುತ್ತವೆ.
ಕೌಶಲದ ಬೇಡಿಕೆ ತಿಳಿದುಕೊಳ್ಳಿ: ನಿಮ್ಮ ಕೌಶಲ ಯಾರಿಗೆ ಬೇಕು ತಿಳಿದುಕೊಳ್ಳಿ. ಫ್ರಿಲ್ಯಾನ್ಸರ್‍ಗಳಿಗೆ ಉದ್ಯೋಗ ಕೊಡಿಸುವ ವೆಬ್‍ಸೈಟ್‍ಗಳ ಸದಸ್ಯರಾಗಿರಿ. ನಿಮ್ಮ ಕೌಶಲಕ್ಕೆ ಎಷ್ಟು ಬೇಡಿಕೆ ಇದೆ ತಿಳಿದುಕೊಳ್ಳಿ. ನೀವು ಉದ್ಯೋಗದಲ್ಲಿರುವಾಗಲೇ ಫ್ರಿಲ್ಯಾನ್ಸರ್ ಉದ್ಯೋಗಗಳಿಗೆ ಅರ್ಜಿ ಸಲ್ಲಿಸಿ. ಉತ್ತಮ ಬೇಡಿಕೆ ಬಂದರೆ ಮಾತ್ರ ಉದ್ಯೋಗ ಬಿಟ್ಟು ಫ್ರಿಲ್ಯಾನ್ಸರ್ ಆಗಿ ಮುಂದುವರೆಯಿರಿ.

ವಸ್ತುಗಳನ್ನು ಖರೀದಿಸಿ: ಫ್ರಿಲ್ಯಾನ್ಸರ್ ಆಗಲು ಬೇಕಾದ ಸರಕುಗಳನ್ನು ಖರೀದಿಸಿ. ನೀವು ಬರಹಗಾರರಾಗಿದ್ದರೆ ಕಂಪ್ಯೂಟರ್ ಮತ್ತು ಇಂಟರ್‍ನೆಟ್ ಕನೆಕ್ಷನ್ ಇರಬೇಕು. ಫೆÇೀಟೊಗ್ರಾಫರ್ ಆಗಿದ್ದರೆ ಕ್ಯಾಮೆರಾ ಇರಲೇಬೇಕು. ಫ್ರಿಲ್ಯಾನ್ಸರ್ ಸ್ಟಾಟಿಸ್ಟಿಸಿಯನ್ ಆಗಿದ್ದರೆ ಅದಕ್ಕೆ ಸಂಬಂಧಪಟ್ಟ ಸಾಫ್ಟ್‍ವೇರ್‍ಗಳನ್ನು ನೀವು ಹೊಂದಿರಬೇಕು. ಹಣ ಗಳಿಸಬೇಕಾದರೆ ನೀವು ಹಣ ಹೂಡಿಕೆ ಮಾಡಲೇ ಬೇಕು.

ಪ್ಲಾನ್ ಮಾಡಿ: ಒಂದು ಗಂಟೆ ಕೆಲಸಕ್ಕೆ ಎಷ್ಟು ದರ ನಿಗದಿಪಡಿಸಬೇಕು ಎಂದು ಪ್ಲಾನ್ ಮಾಡಿ. ನಿಮ್ಮ ಸ್ಪರ್ಧಿಗಳು ಎಷ್ಟು ಹಣ ಪಡೆಯುತ್ತಾರೆ ತಿಳಿದುಕೊಳ್ಳಿ. ನೀವು ಹೆಚ್ಚು ಅನುಭವ ಪಡೆದ ಮೇಲೆ ಗಂಟೆ ಅಥವಾ ಪ್ರಾಜೆಕ್ಟ್ ದರವನ್ನು ಹೆಚ್ಚಿಸಬಹುದಾಗಿದೆ.

ನಿಮ್ಮ ಕೌಶಲದ ಮಾರಾಟ
ಬ್ರಾಂಡ್ ಕ್ರಿಯೇಟ್ ಮಾಡಿ: ನಿಮ್ಮ ಪರ್ಸನಲ್ ಬ್ರಾಂಡ್ ಕ್ರಿಯೇಟ್ ಮಾಡಿ. ನೀವು ನಿಮ್ಮ ಕೌಶಲ ಇತರರಿಗಿಂತ ಹೇಗೆ ಭಿನ್ನವೆಂದು ತೋರ್ಪಡಿಸಿ. ನಿಮ್ಮ ಶೈಕ್ಷಣಿಕ ಹಿನ್ನೆಲೆ, ಪ್ರತಿಭೆಗಳು, ಈಗಾಗಲೇ ಮಾಡಿರುವ ಕೆಲಸಗಳ ಕುರಿತು ನಿಮ್ಮ ಸಿವಿ ಅಥವಾ ವೆಬ್‍ಪುಟದಲ್ಲಿ ತಿಳಿಸಿ. ಆನ್‍ಲೈನ್‍ನಲ್ಲಿ ನಿಮ್ಮ ಅಸ್ತಿತ್ವವನ್ನು ತೋರಿಸಲು ಉತ್ತಮ ರೆಸ್ಯೂಂ ರಚಿಸಿ. ಬಿಸ್ನೆಸ್ ಕಾರ್ಡ್ ನಿಮ್ಮಲ್ಲಿ ಇರಲಿ.

ಅವಕಾಶಗಳನ್ನು ಒಪ್ಪಿಕೊಳ್ಳಿ: ನಿಮಗೆ ಹೆಚ್ಚು ಕೆಲಸ ಬೇಕಿದ್ದರೆ ನೀವು ಹಿಂದೆ ಮಾಡಿರುವ ಕೆಲಸಗಳನ್ನು ರೆಸ್ಯೂಂನಲ್ಲಿ ತೋರಿಸಬೇಕಾಗುತ್ತದೆ. ಆರಂಭದಲ್ಲಿ ಸಿಕ್ಕ ಅವಕಾಶ ಬಳಸಿಕೊಳ್ಳಿ. ಕೆಲವೊಮ್ಮೆ ಈ ರೀತಿ ಒಪ್ಪಿಕೊಂಡರೆ ಪೇಮೆಂಟ್ ಸಿಗದೆ ಇರಬಹುದು. ಆರಂಭದಲ್ಲಿ ಫ್ರಿಲ್ಯಾನ್ಸರ್‍ಗಳು ಬಿಕ್ಷುಕರಂತೆ ವರ್ತಿಸಬೇಕಾಗುತ್ತದೆ ಎಂದು ಹೆಸರು ಹೇಳಲಿಚ್ಚಿಸದ ಹಿರಿಯ ಫ್ರಿಲ್ಯಾನ್ಸರ್ ಒಬ್ಬರು ಹೇಳುತ್ತಾರೆ.

ಆನ್‍ಲೈನ್‍ನಲ್ಲಿ ಪ್ರಚಾರ: ನಿಮ್ಮ ಸ್ವಂತ ವೆಬ್‍ಪುಟ, ಲಿಂಕ್ಡ್‍ಇನ್, ಟ್ವಿಟ್ಟರ್, ಬ್ಲಾಗ್, ಫೇಸ್‍ಬುಕ್ ಇತ್ಯಾದಿಗಳಲ್ಲಿ ನಿಮ್ಮ ಕೆಲಸದ ಕುರಿತು ಮಾಹಿತಿ ನೀಡಿರಿ. ಫ್ರಿಲ್ಯಾನ್ಸರ್ ವೆಬ್‍ಸೈಟ್‍ಗಳನ್ನು ಹುಡುಕಿ ಅಲ್ಲಿ ಅರ್ಜಿ ಸಲ್ಲಿಸಿ.
ಉದ್ಯೋಗಕ್ಕಾಗಿ ಹೋರಾಡಿ: ಫ್ರಿಲ್ಯಾನ್ಸರ್ ಜಗತ್ತಿನಲ್ಲಿ ಸಾಕಷ್ಟು ಸ್ಪರ್ಧೆ ಇರುತ್ತದೆ. ನಿಮ್ಮಲ್ಲಿ ಸ್ವಂತ ವೆಬ್‍ಸೈಟ್ ಇದ್ದರೆ ಅಥವಾ ವೈಯಕ್ತಿಕ ಬ್ರಾಂಡ್ ಇದ್ದರೆ ಸಾಲದು. ನೀವು ಲಭ್ಯವಿರುವ ಉದ್ಯೋಗಗಳಿಗೆ ಅರ್ಜಿ ಸಲ್ಲಿಸುತ್ತಲೇ ಇರಬೇಕಾಗುತ್ತದೆ.

ಕಠಿಣ ಪರಿಶ್ರಮದ ಅಗತ್ಯ

 1. ನಿಮ್ಮ ಮೊದಲ ಪ್ರಾಜೆಕ್ಟ್ ಅನ್ನು ಸ್ಥಳೀಯವಾಗಿ ಅಥವಾ ಆನ್‍ಲೈನ್‍ನಲ್ಲಿ ಹುಡುಕಿ. ಮೊದಲ ಪ್ರಾಜೆಕ್ಟ್‍ನಲ್ಲಿ ಹೆಚ್ಚು ಹಣ ಸಿಕ್ಕಿಲ್ಲ ಎಂದು ಚಿಂತಿಸಬೇಡಿ. ಅನುಭವ ಪಡೆದ ನಂತರ ಹೆಚ್ಚು ಹಣದ ಪ್ರಾಜೆಕ್ಟ್ ದೊರಕಬಹುದು.  ಸ್ಥಳೀಯ ಬಿಸ್ನೆಸ್‍ಗಳನ್ನು ಭೇಟಿಯಾಗಿ. ನಿಮ್ಮ ಸೇವೆ ಅವರಿಗೆ ಹೇಗೆ ಸಹಾಯವಾಗಬಲ್ಲದು ಎಂದು ಅವರಿಗೆ ಮನದಟ್ಟವಾಗುವಂತೆ ತಿಳಿಸಿ. 
 2. ನಿಮ್ಮ ಕೌಶಲಗಳಿಗೆ ಸಂಬಂಧಪಟ್ಟ ಫ್ರಿಲ್ಯಾನ್ಸರ್‍ಗಳನ್ನು ಹುಡುಕುತ್ತಿರುವ ಸಂಸ್ಥೆಗಳಿಗೆ ಆಗಾಗ ರೆಸ್ಯೂಂ ಕಳುಹಿಸುತ್ತ ಇರಿ. ಅಪ್‍ವರ್ಕ್, ಟಾಪ್‍ಟಾಲ್, ಎಲೆನ್ಸ್, ಐಫ್ರಿಲ್ಯಾನ್ಸ್, ಪ್ರಾಜೆಕ್ಟ್4ಹೈರ್, ಡಿಮಾಂಡ್ ಮೀಡಿಯಾ ಇತ್ಯಾದಿ ಹಲವು ವೆಬ್‍ಸೈಟ್‍ಗಳು ದಿನಪ್ರತಿ ಸಾಕಷ್ಟು ಫ್ರಿಲ್ಯಾನ್ಸರ್ ಉದ್ಯೋಗಗಳನ್ನು ಪೆÇೀಸ್ಟ್ ಮಾಡುತ್ತಿರುತ್ತವೆ. 
 3. ನೀವು ಫ್ರಿಲ್ಯಾನ್ಸರ್ ಆಗಿ ಕರಿಯರ್ ಆರಂಭಿಸುವ ಹಂತದಲ್ಲಿ ಸಣ್ಣ ಉದ್ಯೋಗದ ಮೌಲ್ಯವನ್ನು ತಿಳಿದುಕೊಳ್ಳಿ. ಸಣ್ಣಗಾತ್ರದ ಮತ್ತು ಕಡಿಮೆ ಪಾವತಿಸುವ ಪ್ರಾಜೆಕ್ಟ್‍ಗಳು ಸರಳವಾಗಿ ಇರಬಹುದು. ಈ ಸಣ್ಣ ಪ್ರಾಜೆಕ್ಟ್ ನಿಮ್ಮ ಕ್ಲಯೆಂಟ್‍ಗಳಿಗೆ ಇಷ್ಟವಾದರೆ ಮುಂದೆ ಅವರಿಂದ ದೊಡ್ಡ ಪ್ರಾಜೆಕ್ಟ್ ದೊರಕಬಹುದು. 
 4.  ಕೆಲವೊಮ್ಮೆ ನಿಮಗೆ ಉದ್ಯೋಗ ದೊರಕದೆ ಇರಬಹುದು. ಈ ಸಮಯವನ್ನು ಹಾಳುಗೆಡವಬೇಡಿ. ಈ ಸಮಯದಲ್ಲಿ ನಿಮ್ಮ ವೆಬ್‍ಸೈಟ್ ಅನ್ನು ಇನ್ನೂ ಉತ್ತಮಗೊಳಿಸಿ. ನೆಟ್‍ವರ್ಕಿಂಗ್ ಇವೆಂಟ್‍ಗಳಲ್ಲಿ ಭಾಗವಹಿಸುತ್ತ ಇರಿ. ಆನ್‍ಲೈನ್‍ನಲ್ಲಿ ಪ್ರಾಜೆಕ್ಟ್‍ಗಳಿಗೆ ಅರ್ಜಿ ಸಲ್ಲಿಸುತ್ತ ಇರಿ. ನಿಮ್ಮನ್ನು ನೀವು ಮಾರ್ಕೆಟಿಂಗ್ ಮಾಡುತ್ತ ಸಮಯವನ್ನು ಸದುಪಯೋಗಪಡಿಸಿಕೊಳ್ಳಿ. 


ಹೇಗೆ ಕೆಲಸ ಮಾಡಬೇಕು?
ಶೆಡ್ಯೂಲ್ ಇರಲಿ: ಫ್ರಿಲ್ಯಾನ್ಸರ್ ಎಂದು ಕಾಲಹರಣ ಮಾಡಬೇಡಿ. ಪ್ರತಿದಿನ ಇಂತಿಷ್ಟು ಸಮಯ ನಿಗದಿಪಡಿಸಿಕೊಂಡು ಕೆಲಸ ಮಾಡಿ. ಇಲ್ಲವಾದರೆ ಪ್ರಾಜೆಕ್ಟ್ ಸಲ್ಲಿಸಬೇಕಾದ ದಿನಾಂಕದಂದು ಒತ್ತಡ ಹೆಚ್ಚಾಗಬಲ್ಲದು. ಫ್ರಿಲ್ಯಾನ್ಸರ್ ಆಗಿದ್ದಾಗ ನಿಮಗೆ ಬೇಕಾದಗ ಬ್ರೇಕ್ ತೆಗೆದುಕೊಳ್ಳಬಹುದು. ಒಂದು ಗಂಟೆ ಕೆಲಸ ಮಾಡಿ ಅರ್ಧಗಂಟೆ ರೆಸ್ಟ್ ತೆಗೆದುಕೊಳ್ಳಬಹುದು.

ತಪ್ಪುಗಳು ಕಡಿಮೆ ಇರಲಿ: ನಿಮ್ಮ ಪ್ರಾಜೆಕ್ಟ್ ಅನ್ನು ಡೆಡ್‍ಲೈನ್‍ನಲ್ಲಿ ಮುಗಿಸಿದ ತಕ್ಷಣ ಮುಗಿಯುವುದಿಲ್ಲ. ನಿಮ್ಮ ಕ್ಲಯೆಂಟ್ ಅದನ್ನು ಪರಿಶೀಲಿಸಿ ಒಂದಿಷ್ಟು ಮಾರ್ಪಾಡುಗಳನ್ನು ಮಾಡಲು ಹೇಳಬಹುದು. ತಪ್ಪುಗಳಿದ್ದರೆ ತಿದ್ದಿ ವಾಪಸ್ ಕಳುಹಿಸಲು ಹೇಳಬಹುದು. ಪ್ರಾಜೆಕ್ಟ್ ಗುಣಮಟ್ಟ ಕಳಪೆಯಾಗಿದ್ದರೆ ಮುಂದೆ ನಿಮಗೆ ಯಾವುದೇ ಅವಕಾಶ ನೀಡದೆ ಇರಬಹುದು. ಹೀಗಾಗಿ ಪ್ರತಿಯೊಂದು ಕೆಲಸವನ್ನೂ ಅಚ್ಚುಕಟ್ಟಾಗಿ ಮಾಡಿ ಮುಗಿಸಲು ಆದ್ಯತೆ ನೀಡಿ.

ಒಟ್ಟಾರೆ ಫ್ರಿಲ್ಯಾನ್ಸರ್ ಆಗುವುದೆಂದರೆ ನಿಮಗೆ ನೀವೇ ಬಾಸ್ ಆದಂತೆ. ನಿಮಗೆ ದೊರಕುವ ಕೆಲಸದ ಪ್ರಮಾಣ ಹೆಚ್ಚಿದ್ದರೆ ನೀವು ಉದ್ಯೋಗಿಗಳನ್ನು ಇಟ್ಟುಕೊಳ್ಳಬಹುದು. ಫ್ರಿಲ್ಯಾನ್ಸರ್ ಆಗಲು ಬಯಸುವವರಿಗೆ ಕೆಲಸ ಕೊಡಬಹುದು. ನಿಮಗೆ ಗಂಟೆಗೆ 5 ಸಾವಿರ ರೂ. ವೇತನ ದೊರಕಿದರೆ ನಿಮ್ಮ ಜೊತೆ ಕೆಲಸ ಮಾಡುವ ಫ್ರಿಲ್ಯಾನ್ಸರ್‍ಗೆ ತುಸು ಕಡಿಮೆ ದರದಲ್ಲಿ ನೀಡಬಹುದು. ಈ ಮೂಲಕ ಒಂದು ಏಜೆನ್ಸಿಯಂತೆ ಕಾರ್ಯನಿರ್ವಹಿಸಿ ಹೆಚ್ಚು ಹಣ ಗಳಿಕೆ ಮಾಡಬಹುದು.

ಕೊನೆಯ ಮಾತು: ಕ್ಲಯೆಂಟ್‍ಗಳು ಹಣ ಪಾವತಿ ಮಾಡುವುದು ವಿಳಂಬವಾಗುತ್ತದೆ ಎನ್ನುವುದು ಬಹುತೇಕ ಫ್ರಿಲ್ಯಾನ್ಸರ್‍ಗಳ ಅಳಲು. ಕೆಲವೊಂದು ಸಂಸ್ಥೆಗಳು ತುಂಬಾ ಸಮಯದಿಂದ ಪೇಮೆಂಟ್ ಮಾಡದೆ ಇದ್ದರೆ ಅವುಗಳಿಗೆ ಆಗಾಗ ಇಮೇಲ್ ಕಳುಹಿಸಿ ನೆನಪಿಸುತ್ತ ಇರಿ. ಕೆಲವೊಂದು ಅಪರಿಚಿತ ಸಂಸ್ಥೆಗಳು ನಿಮಗೆ ಹಣ ಪಾವತಿ ಮಾಡದೆಯೂ ಇರಬಹುದು. ಕೆಲವೊಂದು ಕಂಪನಿಗಳು ಇನ್ವಾಯ್ಸ್ ತಲುಪಿಸಿದ ತಕ್ಷಣ ಪೇಮೆಂಟ್ ಮಾಡುತ್ತವೆ. ಒಟ್ಟಾರೆ ಫ್ರಿಲ್ಯಾನ್ಸ್ ಆಗಿ ಕೆಲಸ ಮಾಡುವಾಗ ಪೇಮೆಂಟ್ ಕುರಿತು ಎಚ್ಚರದಿಂದ ಇರಿ. 
(ಪೂರಕ ಮಾಹಿತಿ: ವಿಕಿಹೌ, ಫ್ರಿಲ್ಯಾನ್ಸರ್ ತಾಣಗಳು).

ಫ್ರಿಲ್ಯಾನ್ಸರ್‍ಗಳು ಕೆಲಸ ಹುಡುಕಬಹುದಾದ ವೆಬ್‍ಸೈಟ್‍ಗಳು

 • www.freelancer.com
 • www.upwork.com
 • www.craigslist.co.in
 •  www.guru.com
 •  https://99designs.com
 • www.peopleperhour.com
 •  http://freelancewritinggigs.com
 •  http://getacoder.com
 • http://ifreelance.com
 • http://project4hire.com, 
ಬಿಸ್ನೆಸ್ ಇಂಗ್ಲಿಷ್ ಕಲಿಯಿರಿ ಉದ್ಯೋಗ ಪಡೆಯಿರಿ

ಬಿಸ್ನೆಸ್ ಇಂಗ್ಲಿಷ್ ಕಲಿಯಿರಿ ಉದ್ಯೋಗ ಪಡೆಯಿರಿ

ವಿವಿಧ ಕಾಪೆರ್Çರೇಟ್ ಆಫೀಸ್‍ಗಳಲ್ಲಿ, ಅಂತಾರಾಷ್ಟ್ರೀಯ ಕ್ಲಯೆಂಟ್‍ಗಳ ಜೊತೆ ಮಾತನಾಡಲು ಸಾಮಾನ್ಯ ಇಂಗ್ಲಿಷ್ ಸಾಕಾಗುವುದಿಲ್ಲ. ಅದಕ್ಕಾಗಿ ವ್ಯವಹಾರದ ಇಂಗ್ಲಿಷ್ ಅಥವಾ ಬಿಸ್ನೆಸ್ ಇಂಗ್ಲಿಷ್ ಕಲಿತಿರಬೇಕಾಗುತ್ತದೆ.


ಆಫೀಸ್ ಎನ್ನುವುದು ಒಂದು ಪುಟ್ಟ ಜಗತ್ತು. ಅಲ್ಲಿ ನಮ್ಮೂರಿನವರು, ಪರವೂರಿನವರು, ಪರ ರಾಜ್ಯದವರು, ಅಷ್ಟೇ ಯಾಕೆ ವಿದೇಶಿ ಸಹೋದ್ಯೋಗಿಗಳೂ ಇರುತ್ತಾರೆ. ಇವರೆಲ್ಲರೊಂದಿಗೆ ಮಾತನಾಡಲು ಅಲ್ಪಸ್ವಲ್ಪವಾದರೂ ಇಂಗ್ಲಿಷ್ ಗೊತ್ತಿರಬೇಕಾಗುತ್ತದೆ. ಕೆಲವೊಮ್ಮೆ ವಿದೇಶಿ ಕ್ಲಯೆಂಟ್‍ಗಳ ಜೊತೆಯೂ ವ್ಯವಹಾರ ಮಾಡಬೇಕಾಗುತ್ತದೆ. ಇದಕ್ಕೆಲ್ಲ ನಮ್ಮ ಸಾಮಾನ್ಯ ಇಂಗ್ಲಿಷ್ ಸಾಕಾಗುವುದಿಲ್ಲ. ಅದಕ್ಕಾಗಿ ವ್ಯವಹಾರದ ಇಂಗ್ಲಿಷ್ ಕಲಿತಿರಬೇಕಾಗುತ್ತದೆ. ಕೋಟಿ ಕೋಟಿ ರೂ.ಗಳ ವ್ಯವಹಾರವನ್ನು ಅಚ್ಚುಕಟ್ಟಾಗಿ ಮಾಡಿಮುಗಿಸಲು ಬಿಸ್ನೆಸ್ ಇಂಗ್ಲಿಷ್ ಅತ್ಯಂತ ಅಗತ್ಯವೆಂದು ಉದ್ಯಮ ಪಂಡಿತರ ಅಭಿಮತ.

ವ್ಯವಹಾರಕ್ಕೆ ಇಂಗ್ಲಿಷ್
ಅಂತಾರಾಷ್ಟ್ರೀಯ ವ್ಯವಹಾರಕ್ಕೆ ಇಂಗ್ಲಿಷ್ ಎನ್ನುವುದು ಪ್ರಮುಖ ಸಂವಹನ ಭಾಷೆ. ಇಂಗ್ಲಿಷ್ ಅನ್ನು ಭಾಷಾ ಮಾಧ್ಯಮವಾಗಿಟ್ಟುಕೊಂಡು ಅಂತಾರಾಷ್ಟ್ರೀಯ ಮಟ್ಟದಲ್ಲಿ ವ್ಯವಹಾರ ನಡೆಸುವ ಜ್ಞಾನ ಹೊಂದುವುದನ್ನು ಬಿಸಿನೆಸ್ ಇಂಗ್ಲಿಷ್ ಎಂದು ವ್ಯಾಖ್ಯಾನಿಸಬಹುದು. ಜಾಗತಿಕ ಉದ್ಯೋಗ ಮಾರುಕಟ್ಟೆಯಲ್ಲಿ ಬಿಸಿನೆಸ್ ಇಂಗ್ಲಿಷ್ ಅನ್ನು ಬಳಸುವ ಅವಶ್ಯಕತೆ ಇರುವುದು ಇಂಗ್ಲಿಷ್ ಮಾತೃಭಾಷೆಯಲ್ಲದ ದೇಶಗಳ ಜನರಿಗೆ. ವಿವಿಧ ಸಂಸ್ಕøತಿಯ, ವಿವಿಧ ಭಾಷೆಗಳನ್ನು ಹೊಂದಿರುವ ಇಂತಹ ದೇಶಗಳ ಜನರು ಎಲ್ಲಾ ದೇಶದವರಿಗೂ ಅರ್ಥವಾಗುವಂತಹ ಬಿಸಿನೆಸ್ ಇಂಗ್ಲಿಷ್ ಕಲಿಯಬೇಕಾಗುತ್ತದೆ.
ಅಂತಾರಾಷ್ಟ್ರೀಯ ಬಿಸಿನೆಸ್‍ಗಳಿಗೆ ಇಂಗ್ಲಿಷ್ ಭಾಷೆ ಪ್ರಮುಖ ಮಾಧ್ಯಮ. ಇದೇ ಇಂಗ್ಲಿಷ್ ಭಾಷೆಯಲ್ಲಿ ಜಾಗತಿಕ ವ್ಯವಹಾರಗಳ ಸಂವಹನ ಟೂಲ್ ಆಗಿ ಬಳಸಿಕೊಳ್ಳುವ ಸ್ಕಿಲ್ ಅನ್ನು ಬಿಸಿನೆಸ್ ಇಂಗ್ಲಿಷ್ ಎಂದು ಕರೆಯಬಹುದು. ಬಿಸಿನೆಸ್ ಜನರು ಸಾಮಾನ್ಯ ಇಂಗ್ಲಿಷ್ ಕಲಿತರೆ ಅದು ಬಿಸಿನೆಸ್ ಇಂಗ್ಲಿಷ್ ಕಲಿಕೆ ಆಗುವುದಿಲ್ಲ. ಅದೇ ರೀತಿ, ಬಹಳಷ್ಟು ಬಿಸಿನೆಸ್ ಪದಭಂಡಾರವನ್ನು ಕಲಿಯುವುದು ಮಾತ್ರ ಬಿಸಿನೆಸ್ ಇಂಗ್ಲಿಷ್ ಅಲ್ಲ. ಆದರೆ, ಶಬ್ದಜ್ಞಾನ ಹೆಚ್ಚಿಸಿಕೊಳ್ಳುವುದು ಬಿಸಿನೆಸ್ ಇಂಗ್ಲಿಷ್‍ನಲ್ಲಿ ಒಳಗೊಂಡಿರುತ್ತದೆ ಅಷ್ಟೇ.

ಬಿಸ್ನೆಸ್ ಇಂಗ್ಲಿಷ್‍ನಲ್ಲಿ ಏನಿರುತ್ತೆ?
ಸ್ಪಷ್ಟವಾದ ವ್ಯಾಕರಣ, ಕಂಪನಿಯ ವಿಲೀನ ಮತ್ತು ಸ್ವಾಧೀನ ಪ್ರಕ್ರಿಯೆಯ ಸಂವಹನಕ್ಕೆ ಸಹಕರಿಸುವ ಇಂಗ್ಲಿಷ್ ಜ್ಞಾನ, ಇಮೇಲ್ ಮೂಲಕ ಹೇಗೆ ವ್ಯವಹರಿಸಬೇಕು? ಬಿಸ್ನೆಸ್ ಇಮೇಲ್ ಬರೆಯುವುದು ಹೇಗೆ? ವ್ಯವಹಾರದಲ್ಲಿ ಚೌಕಾಶಿ ಮಾಡುವುದು ಹೇಗೆ? ಪ್ರಸಂಟೇಷನ್‍ನಲ್ಲಿ ನಮ್ಮ ಇಂಗ್ಲಿಷ್ ಹೇಗಿರಬೇಕು? ಉದ್ಯೋಗ ಸಂದರ್ಶನಕ್ಕೆ ಅಥವಾ ಉದ್ಯೋಗಿಗಳ ಸಂದರ್ಶನದ ಸಮಯದಲ್ಲಿ ನಮ್ಮ ಇಂಗ್ಲಿಷ್ ಹೇಗಿರಬೇಕು? ದೂರವಾಣಿ ಮೂಲಕ ಗ್ರಾಹಕರ ಜೊತೆ ಇಂಗ್ಲಿಷ್‍ನಲ್ಲಿ ಹೇಗೆ ವ್ಯವಹರಿಸಬೇಕು ಇತ್ಯಾದಿಗಳನ್ನೆಲ್ಲ ವ್ಯವಹಾರ ಇಂಗ್ಲಿಷ್ ಕಲಿಕೆಯಲ್ಲಿ ಕಲಿಯಬಹುದಾಗಿದೆ.

ಆಧುನಿಕ ಜಗತ್ತಿನಲ್ಲಿ ಇಂಗ್ಲಿಷ್ ಅನ್ನು `ವ್ಯವಹಾರಗಳ ಭಾಷೆ' ಎಂದು ಹೇಳಲಾಗುತ್ತದೆ. ಕೇವಲ ಬಿಸಿನೆಸ್ ಉದ್ದೇಶಗಳಿಗಾಗಿ ಬಳಸುವ ಇಂಗ್ಲಿಷ್ ಅನ್ನು ಬಿಸಿನೆಸ್ ಇಂಗ್ಲಿಷ್ ಎನ್ನಲಾಗುತ್ತದೆ. ಮೊದಲ ನೋಟದಲ್ಲಿ ಬಿಸಿನೆಸ್ ಇಂಗ್ಲಿಷ್‍ಗೂ ಸಾಮಾನ್ಯ ಇಂಗ್ಲಿಷ್‍ಗೂ ಅಂತಹ ಪ್ರಮುಖ ವ್ಯತ್ಯಾಸ ಗೋಚರಿಸದು. ಆದರೆ, ಇವೆರಡರ ಶಬ್ದಕೋಶ ಅಥವಾ ವೊಕಬಲರಿ ಭಿನ್ನವಾಗಿರುತ್ತದೆ. ಸಾಮಾನ್ಯ ಇಂಗ್ಲಿಷ್ ಕೋರ್ಸ್‍ಗಳಿಗಿಂತ ಭಿನ್ನವಾಗಿ ಅಂದರೆ, ಸಿಮ್ಯುಲೇಷನ್, ಕೇಸ್ ಸ್ಟಡೀಸ್, ಟೀಮ್ ಬಿಲ್ಡಿಂಗ್, ಪ್ರಾಬ್ಲಂ ಸಾಲ್ವಿಂಗ್, ಕೋಚಿಂಗ್, ಮೆಂಟರಿಂಗ್ ಇತ್ಯಾದಿ ವಿಧಾನಗಳ ಮೂಲಕ ಕಲಿಸಲಾಗುತ್ತದೆ. ಬಿಸಿನೆಸ್ ಇಂಗ್ಲಿಷ್ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ವ್ಯವಹಾರ ಇಂಗ್ಲಿಷ್ ಮಾತುಗಾರಿಕೆ, ಇಂಗ್ಲಿಷ್‍ನಲ್ಲಿ ಆಲಿಸುವ, ಬರೆಯುವ ಕಲೆ ಕಲಿಯಬಹುದು.

ಯಾರೆಲ್ಲ ಕಲಿಯಬಹುದು?
ಇಂಗ್ಲಿಷ್‍ನಲ್ಲಿ ಪರಿಣತಿ ಪಡೆಯಲು ಆಸಕ್ತಿ ಇರುವವರೆಲ್ಲ ಬಿಸ್ನೆಸ್ ಇಂಗ್ಲಿಷ್ ಕಲಿಯಬಹುದು. ಮುಖ್ಯವಾಗಿ ಮಾರುಕಟ್ಟೆ ವಿಭಾಗದಲ್ಲಿ ಕೆಲಸ ಮಾಡುವವರು, ಎಂಜಿನಿಯರ್‍ಗಳು, ವಕೀಲರು, ವೈದ್ಯರು, ಮ್ಯಾನೇಜರ್‍ಗಳು, ಸಿಇಒಗಳು, ಸಿಒಒಗಳು, ವ್ಯವಹಾರ ಕ್ಷೇತ್ರದಲ್ಲಿ ಇರುವವರೆಲ್ಲ ಕಲಿಯಬಹುದು.ಬಿಸ್ನೆಸ್ ಇಂಗ್ಲಿಷ್ ಕಲಿಕೆಗೆ ಮೊದಲುವ್ಯವಹಾರ ಇಂಗ್ಲಿಷ್‍ನಲ್ಲಿ ಪಂಟರಾಗುವ ಮೊದಲು ನೀವು ಸಾಮಾನ್ಯ ಇಂಗ್ಲಿಷ್‍ನಲ್ಲಿ ಪರಿಣತಿ ಪಡೆಯಬೇಕಾಗುತ್ತದೆ. ಪ್ರತಿದಿನ ಇಂಗ್ಲಿಷ್ ಪತ್ರಿಕೆಗಳನ್ನು ಓದಿ, ಇಂಗ್ಲಿಷ್ ಸಾಹಿತ್ಯ, ಪುಸ್ತಕಗಳನ್ನು ಓದಿ ಇಂಗ್ಲಿಷ್ ಪದಸಂಪತ್ತು ಹೆಚ್ಚಿಸಿಕೊಳ್ಳಿ. ಇಂಗ್ಲಿಷ್ ಪದಬಂಡಾರ ಎಷ್ಟೇ ಇದ್ದರೂ ಅದನ್ನು ಮಾತನಾಡಲು ತಿಳಿದಿರಬೇಕು. ಇದಕ್ಕಾಗಿ ನೀವು ಸ್ನೇಹಿತರ ಜೊತೆ ಸಂವಹನ ಮಾಡುತ್ತ ಕಲಿಯಬಹುದು. ಸ್ಪೋಕನ್ ಇಂಗ್ಲಿಷ್ ಕ್ಲಾಸ್‍ಗೆ ಸೇರಬಹುದು. ಸಾಮಾನ್ಯ ಇಂಗ್ಲಿಷ್‍ನಲ್ಲಿ ನೀವು ಪರಿಣತಿ ಪಡೆದಿದ್ದೀರಿ ಎಂದಾದರೆ ಬಿಸ್ನೆಸ್ ಇಂಗ್ಲಿಷ್ ಕಲಿಕೆ ಕಷ್ಟವಲ್ಲ. 

ಸ್ಫೋಕನ್ ಇಂಗ್ಲಿಷ್ ಆಪ್ 
* Hello English: Learn English
* Spoken English
* Spoken English Learning
* English Conversation Practice
* Learn English Speaking
* Learn English Listening ESL

ಇಂಗ್ಲಿಷ್ ವ್ಯಾಕರಣ ಕಲಿಕೆ ಕೆಲವು ಆಪ್ ಗಳು
*English Grammar Book
* English Grammar Test
* Practice English Grammar
* English Grammar in Use

ಬಿಸ್ನೆಸ್ ಇಂಗ್ಲಿಷ್ ಕಲಿಕೆಗೆ ಆಪ್ ಗಳು
ಬಿಸ್ನೆಸ್ ಇಂಗ್ಲಿಷ್ ಕಲಿಕೆಗೆ ಈ ಆಪ್ ಗಳನ್ನು ಹುಡುಕಿ ಇನ್‍ಸ್ಟಾಲ್ ಮಾಡಿಕೊಳ್ಳಿ.
* Business English Sentences
* Business English speaking
* Business English
* Speak Business English
* Business English Test
* Business English Words
* Business English Grammar and Vocabulary
* Real English Business


ಇಲ್ಲಿ ಕಲಿಯಿರಿ
* ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫಾರಿನ್ ಲ್ಯಾಂಗ್ವೆಜ್(ಐಐಎಫ್‍ಎಲ್‍ಎಸ್), ಬೆಂಗಳೂರು. ವೆಬ್‍ಸೈಟ್: www.iifls.com
* ಆಪ್ಟೆಕ್ ಇಂಗ್ಲಿಷ್ ಲರ್ನಿಂಗ್ ಸಂಸ್ಥೆ. ವೆಬ್ ವಿಳಾಸ: www.englishexpress.in
* ಬ್ರಿಟಿಷ್‍ಕೌನ್ಸಿಲ್ ವೆಬ್‍ಸೈಟ್‍ನಲ್ಲಿ ಆನ್‍ಲೈನ್ ಮೂಲಕವೂ ಬಿಸಿನೆಸ್ ಇಂಗ್ಲಿಷ್ ಪರೀಕ್ಷೆಯನ್ನು ತೆಗೆದುಕೊಳ್ಳಬಹುದು. ವೆಬ್ ವಿಳಾಸ: www.britishcouncil.in
* ಎಗ್ಸಾಂ ಇಂಗ್ಲಿಷ್: www.examenglish.com/BEC/, ಇಂಗ್ಲಿಷ್ ಕ್ಲಬ್: www.englishclub.com/business-english, ಲರ್ನ್ ಇಂಗ್ಲಿಷ್: www.learn-english-today.com


*Copyright: Published On Vijaya Karnataka Mini
Thursday, 9 November 2017

ಷೇರುಪೇಟೆ ಉದ್ಯೋಗಕ್ಕೆ ಸರ್ಟಿಫಿಕೇಟ್ ಕೋರ್ಸ್

ಷೇರುಪೇಟೆ ಉದ್ಯೋಗಕ್ಕೆ ಸರ್ಟಿಫಿಕೇಟ್ ಕೋರ್ಸ್

ಬಿ.ಕಾಂ., ಎಂ.ಕಾಂ., ಎಂಬಿಇ ಇತ್ಯಾದಿ ಕಾಮರ್ಸ್ ಅಥವಾ ಮ್ಯಾನೇಜ್‍ಮೆಂಟ್ ಶಿಕ್ಷಣ ಪಡೆದ ನಂತರ ಷೇರು ಮಾರುಕಟ್ಟೆ ಸಂಬಂಧಿ ಉದ್ಯೋಗ ಪಡೆಯಲು ನೆರವು ನೀಡುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳ ವಿವರ ಇಲ್ಲಿದೆ.

 • ಪ್ರವೀಣ್ ಚಂದ್ರ ಪುತ್ತೂರು

ಕಾಮರ್ಸ್ ಸಂಬಂಧಿತ ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಜಾಬ್ ಆಯ್ಕೆಯ ಸಮಯದಲ್ಲಿ ಒಂದಿಷ್ಟು ಗೊಂದಲವಿರುತ್ತದೆ. ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಮುಂದುವರೆಯುವುದೇ? ಮಾರ್ಕೆಟಿಂಗ್ ಫೀಲ್ಡ್‍ಗೆ ಹೋಗಬಹುದೇ? ಅಕೌಂಟೆಟ್, ಸೇಲ್ಸ್, ಟ್ಯಾಕ್ಸ್ ಪ್ಲಾನಿಂಗ್... ಹೀಗೆ ಯಾವ ವಿಭಾಗದ ಜಾಬ್‍ಗೆ ಅಪ್ಲೈ ಮಾಡಲಿ ಎಂಬ ಸಂದಿಗ್ಧತೆ ಇರಬಹುದು. ಪಾಲಿಗೆ ಬಂದದ್ದು ಪಂಚಾಮೃತ ಎಂದು ಸಿಕ್ಕ ಜಾಬ್‍ಗೆ ಹೋಗಿ ಸೇರಿದರೆ ನಂತರ ಬೇರೆ ಫೀಲ್ಡ್‍ನಲ್ಲಿ ಅವಕಾಶ ಸಿಗದೆ ಪರಿತಪಿಸಬೇಕಾಗಬಹುದು. ಇದರ ಬದಲು ಇವುಗಳಲ್ಲಿ ಯಾವುದಾದರೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಕಡಿಮೆ ಅವಧಿಯ ಸರ್ಟಿಫಿಕೇಷನ್ ಕೋರ್ಸ್ ಪಡೆದರೆ ಹೋಗುವ ಹಾದಿಯು ನಿಶ್ಚಿತವಾಗಿರುತ್ತದೆ. ಅವಕಾಶಗಳೂ ಸುಲಭವಾಗಿ ದೊರಕುತ್ತದೆ. ಈ ಲೇಖನದಲ್ಲಿ ಷೇರುಪೇಟೆ ಸಂಬಂಧಿತ ಉದ್ಯೋಗ ಪಡೆದುಕೊಳ್ಳಲು ನೆರವಾಗುವ ಶಾರ್ಟ್ ಟರ್ಮ್ ಕೋರ್ಸ್‍ಗಳ ವಿವರ ಇಲ್ಲಿದೆ.
ಷೇರುಪೇಟೆ ಸಂಬಂಧಿತ ಜಾಬ್ ಹೆಚ್ಚಿನವರಿಗೆ ಅಚ್ಚುಮೆಚ್ಚು. ಸೆನ್ಸೆಕ್ಸ್ ಗೂಳಿ ಕರಡಿ ಕುಣಿತಕ್ಕೆ ತಕ್ಕಂತೆ ಗ್ರಾಹಕರನ್ನು ನಿರ್ವಹಿಸುವ ಪಾತ್ರವದು. ಷೇರು ವಹಿವಾಟಿಗೆ ಸಾಥ್ ನೀಡುವ ಬ್ರೋಕಿಂಗ್ ಹೌಸ್‍ಗಳು, ಸೆಕ್ಯುರಿಟೀಸ್ ಕಂಪನಿಗಳು ಷೇರುಪೇಟೆಯ ಜ್ಞಾನವಿರುವ ಚತುರರನ್ನು ನೇಮಿಸಿಕೊಳ್ಳುತ್ತವೆ. ಅಲ್ಲಿ ಈಕ್ವಿಟಿ ಡೀಲರ್, ಟ್ರೇಡ್ ಎಕ್ಸಿಕ್ಯೂಟಿವ್ಸ್, ವೆಬ್ ಅಸಿಸ್ಟ್ ಡೀಲರ್ಸ್, ಷೇರ್ ಕನ್ಸಲ್ಟೆಂಟ್ ಸೇರಿದಂತೆ ಹಲವು ಬಗೆಯ ಉದ್ಯೋಗಾವಕಾಶಗಳಿವೆ. ಇಲ್ಲಿ ಮಾತ್ರವಲ್ಲದೆ ಷೇರು ವಿನಿಮಯ ಕೇಂದ್ರಗಳಲ್ಲಿಯೂ ಅವಕಾಶ ಪಡೆಯಲು ಇಂತಹ ಕೋರ್ಸ್‍ಗಳು ನೆರವಾಗಬಹುದು.
ನಿಮ್ಮಲ್ಲಿ ಕಾಮರ್ಸ್ ಪದವಿ, ಸ್ನಾತಕೋತ್ತರ ಪದವಿ ಇದ್ದರೂ ಕೆಲವೊಮ್ಮೆ ಇಂತಹ ಷೇರು ಸಂಸ್ಥೆಗಳು ಕೆಲವೊಮ್ಮೆ ಕೆಲಸ ಕೊಡದಿರಬಹುದು. ಇಂತಹ ಸಂದರ್ಭದಲ್ಲಿ ಸ್ಟಾಕ್ ಮಾರ್ಕೆಟ್ ಸಂಬಂಧಿತ ಸರ್ಟಿಫಿಕೇಷನ್ ಕೋರ್ಸ್‍ಗಳ ನೆರವಿಗೆ ಬರಬಹುದು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್‍ಎಸ್‍ಇ ಮತ್ತು ಮುಂಬೈ ಷೇರುಪೇಟೆ ಬಿಎಸ್‍ಇ ಸಹ ಇತರ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾರ್ಟ್ ಟರ್ಮ್ ಕೋರ್ಸ್‍ಗಳನ್ನು ನಡೆಸಿ ಸರ್ಟಿಫಿಕೇಟ್‍ಗಳನ್ನು ಕೊಡುತ್ತವೆ. ಆನ್‍ಲೈನ್‍ನಲ್ಲೂ ಇಂತಹ ಕೋರ್ಸ್‍ಗಳನ್ನು ಕಲಿಯುವ ಅವಕಾಶವಿದೆ.

ಕ್ಲಾಸ್‍ರೂಂ ಕೋರ್ಸ್
ಎನ್‍ಎಸ್‍ಇ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು ಈ ನಿಟ್ಟಿನಲ್ಲಿ ಸರ್ಟಿಫೈಡ್ ಕ್ಯಾಪಿಟಲ್ ಮಾರ್ಕೆಟ್ ಪೆÇ್ರಫೆಷನಲ್(ಎನ್‍ಸಿಸಿಎಂಪಿ) ಎಂಬ ಕ್ಲಾಸ್ ರೂಂ ಕೋರ್ಸ್ ನಡೆಸುತ್ತದೆ. ಇದು 100 ಗಂಟೆ ಕೋರ್ಸ್. ಅಂದರೆ, 3-4 ತಿಂಗಳ ಅವಧಿಯದ್ದಾಗಿದೆ. ಈ ಅವಧಿಯಲ್ಲಿ ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿದ ಥಿಯರಿ ಮತ್ತು ಪ್ರಾಕ್ಟಿಕಲ್ ಕ್ಲಾಸ್‍ಗಳಿರುತ್ತವೆ. ಈ ಕೋರ್ಸ್‍ನಲ್ಲಿ ಪಾಸಾದವರಿಗೆ ಎನ್‍ಎಸ್‍ಇ ಮತ್ತು ಕೋರ್ಸ್ ನೀಡಿರುವ ಶಿಕ್ಷಣ ಸಂಸ್ಥೆ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ. ಈಕ್ವಿಟಿ ಮಾರುಕಟ್ಟೆ, ಡೆಪ್ಟ್ ಮಾರ್ಕೆಟ್, ಡಿರೈವಿಟಿವ್ಸ್, ಮ್ಯಾಕ್ರೊ ಎಕಾನಮಿಕ್ಸ್, ಟೆಕ್ನಿಕಲ್ ಅನಾಲಿಸಿಸ್, ಫಂಡಮೆಂಟಲ್ ಅನಾಲಿಸಿಸ್ ಸಬ್ಜೆಕ್ಟ್‍ಗಳ ಬಗ್ಗೆ ಈ ಕೋರ್ಸ್‍ನಲ್ಲಿ ತಿಳಿದುಕೊಳ್ಳಬಹುದು.
ಬಿಎಸ್‍ಇ: ಮುಂಬೈ ಷೇರು ವಿನಿಮಯ ಕೇಂದ್ರ ಬಿಎಸ್‍ಇ ತನ್ನದೇ ವಿದ್ಯಾಸಂಸ್ಥೆಯನ್ನು ಹೊಂದಿದೆ. ಬಿಎಸ್‍ಇ ಇನ್‍ಸ್ಟಿಟ್ಯೂಟ್ ಲಿಮಿಟೆಡ್‍ನಲ್ಲಿ ಷೇರುಪೇಟೆಗೆ ಸಂಬಂಧಿಸಿದ ಕಡಿಮೆ ಅವಧಿಯ ಮತ್ತು ದೀರ್ಘಾವಧಿಯ ಕೋರ್ಸ್‍ಗಳಿವೆ. ಅಲ್ಲಿ 3 ತಿಂಗಳ ಅವಧಿಯ ಷೇರುಪೇಟೆಯ ಬೇಸಿಕ್ ಕೋರ್ಸ್‍ಗೆ ಸರ್ವೀಸ್ ಟ್ಯಾಕ್ಸ್ ಸೇರಿಸದೆ 8,250 ರೂಪಾಯಿ ಶುಲ್ಕವಿದೆ. ಸರ್ಟಿಫಿಕೇಟ್ ಆನ್ ಕ್ಯಾಪಿಟಲ್ ಮಾರ್ಕೆಟ್ ಕೋರ್ಸ್‍ನಲ್ಲಿ ಷೇರುಪೇಟೆಯ ಬಗ್ಗೆ ವಿಸ್ತೃತವಾಗಿ ಕಲಿಯಬಹುದು. ಈ ಕೋರ್ಸ್‍ಗೆ ಫೈನಾನ್ಸಿಯಲ್ ಇನ್‍ಸ್ಟಿಟ್ಯೂಷನ್ಸ್ ಮತ್ತು ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಯುಜಿಸಿ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಅಂಕ ಪಡೆದವರು ಈ ಕೋರ್ಸ್ ಮಾಡಬಹುದು. ಸರ್ವೀಸ್ ಟ್ಯಾಕ್ಸ್ ಸೇರಿಸದೆ ಈ ಕೋರ್ಸ್ ಶುಲ್ಕ 18 ಸಾವಿರ ರೂ. ಇದೆ.

ಆನ್‍ಲೈನ್ ಕೋರ್ಸ್
ಆನ್‍ಲೈನ್‍ನಲ್ಲೂ ಷೇರುಪೇಟೆ ಸಂಬಂಧಿಸಿದ ಇಂತಹ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಮಾಡಬಹುದು.
ಇಲರ್ನ್‍ಮಾರ್ಕೆಟ್ಸ್: ಎನ್‍ಎಸ್‍ಇ ಅಂಗೀಕೃತ ಇಲರ್ನ್‍ಮಾರ್ಕೆಟ್ ವೆಬ್‍ಸೈಟ್‍ನಲ್ಲಿ ಇಂತಹ ಕೋರ್ಸ್‍ಗಳಿವೆ. ಇಲ್ಲಿ 83ಕ್ಕೂ ಹೆಚ್ಚು ಬೋಧನಾ ವಿಷಯಗಳು, 100ಕ್ಕೂ ಹೆಚ್ಚು ಬೋಧನಾ ವಿಡಿಯೋಗಳಿವೆ. ಷೇರುಪೇಟೆಯ ಬೇಸಿಕ್ಸ್ ವಿಷಯಗಳಿಂದ ಸಮಗ್ರ ಅಧ್ಯಯನದವರೆಗೆ ಕಲಿಯುವ ಅವಕಾಶವಿದೆ. ಆನ್‍ಲೈನ್ ಕೋರ್ಸ್‍ನಲ್ಲಿ ಎನ್‍ಎಸ್‍ಇ ಸರ್ಟಿಫಿಕೇಟ್ ಮಾತ್ರವಲ್ಲದೆ ಇತರ ಜಾಬ್ ಓರಿಯೆಂಟೆಡ್ ಸರ್ಟಿಫಿಕೇಟ್ ದೊರಕುತ್ತದೆ. ಪ್ರತಿಯೊಂದು ಚಾಪ್ಟರ್ ಮುಗಿದ ನಂತರ ಆನ್‍ಲೈನ್ ಪರೀಕ್ಷೆ ಸಹ ನಡೆಯುತ್ತದೆ. ಪಾಸಾದರೆ ಸರ್ಟಿಫಿಕೇಟ್ ನಿಮ್ಮದಾಗುತ್ತದೆ.
ಐಐಟ್ರೇಡ್: ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಐಐಟ್ರೇಡ್ ವೆಬ್‍ಸೈಟ್‍ನಲ್ಲಿ ಮೂರು ಹಂತದ ಕೋರ್ಸ್‍ಗಳಿವೆ. ಲೆವೆಲ್ 1ರಲ್ಲಿ ಫೈನಾನ್ಸಿಯಲ್ ಮಾರ್ಕೆಟ್ಸ್, ಮ್ಯೂಚುಯಲ್ ಫಂಡ್ಸ್ ಬಗ್ಗೆ ತಿಳಿದುಕೊಳ್ಳಬಹುದು. ಲೆವೆಲ್ 2ನಲ್ಲಿ ಬಂಡವಾಳ ಮಾರುಕಟ್ಟೆ, ಕರೆನ್ಸಿ ಮಾರುಕಟ್ಟೆ, ಕಮಾಡಿಟಿ ಮಾರುಕಟ್ಟೆ, ಡಿರೈಟಿವ್ ಮಾರ್ಕೆಟ್, ಫೈನಾನ್ಸಿಯಲ್ ಅಡ್ವೈಸರಿ ಸರ್ವೀಸಸ್ ಬಗ್ಗೆ ಕೋರ್ಸ್ ಮಾಡಬಹುದು. ಮೂರನೇ ಲೆವೆಲ್‍ನಲ್ಲಿ ಅನಾಲಿಸ್ಟ್ ಸಂಬಂಧಿಸಿದ ಕೋರ್ಸ್‍ಗಳಿವೆ. ಇದರಲ್ಲಿ ಸರ್ಟಿಫೈಡ್ ಈಕ್ವಿಟಿ ಅನಾಲಿಸ್ಟ್, ಸರ್ಟಿಫೈಡ್ ಟೆಕ್ನಿಕಲ್ ಅನಾಲಿಸ್ಟ್ ಕೋರ್ಸ್‍ಗಳಿವೆ. ಕೊನೆಗೆ ಐಐಟ್ರೇಡ್ ಮತ್ತು ಎನ್‍ಎಸ್‍ಇ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ.
ದಲಾಲ್‍ಸ್ಟ್ರೀಟ್ ಅಕಾಡೆಮಿ: ಈ ಸಂಸ್ಥೆಯೂ ಆನ್‍ಲೈನ್‍ನಲ್ಲಿ ಷೇರುಪೇಟೆ ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿದೆ. ಶುಲ್ಕ 5,500 ರೂಪಾಯಿ. ಕೋರ್ಸ್ ಹೆಸರು ಸರ್ಟಿಫಿಕೇಟ್ ಇನ್ ಸ್ಟಾರ್ಕ್ ಮಾರ್ಕೆಟ್ ಆ್ಯಂಡ್ ಈಕ್ವಿಟಿ ರಿಸರ್ಚ್. ಈ ಕೋರ್ಸ್‍ಗೆ ಈಗಾಗಲೇ ವೃತ್ತಿಯಲ್ಲಿರುವವರು, ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ಸೇರಬಹುದು. ಇಲ್ಲಿ ಒಟ್ಟು ನಾಲ್ಕು ಮಾಡ್ಯುಲ್‍ಗಳಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್ 1ರಲ್ಲಿ ಹೂಡಿಕೆಯ ಬೇಸಿಕ್ಸ್, ಈಕ್ವಿಟಿ ಷೇರುಗಳ ಬಗ್ಗೆ, ಐಪಿಒ, ಸೆಕೆಂಡರಿ ಮಾರ್ಕೆಟ್, ಟ್ರೇಡಿಂಗ್, ಕ್ಲೀಯರಿಂಗ್ ಮತ್ತು ಸಟ್ಲ್‍ಮೆಂಟ್ ಬಗ್ಗೆ ಕಲಿಯಬಹುದು. ಮಾಡ್ಯುಲ್ 2ರಲ್ಲಿ ಎಕಾನಮಿಕ, ಇಂಡಸ್ಟ್ರಿ, ಕಂಪನಿ, ಟೆಕ್ನಿಕಲ್ ಅನಾಲಿಸಿಸ್ ಬಗ್ಗೆ ಕಲಿಯಬಹುದು. ಮಾಡ್ಯುಲ್‍ನಲ್ಲಿ ಷೇರು ಹೂಡಿಕೆ, ಹೂಡಿಕೆದಾರರ ವರ್ತನೆಗಳು, ಆನ್‍ಲೈನ್ ವಹಿವಾಟು, ಶಾರ್ಟ್ ಟರ್ಮ್ ಟ್ರೇಡಿಂಗ್, ಪೆÇೀಟ್‍ಪೆÇೀಲಿಯೊ ಮ್ಯಾನೇಜ್‍ಮೆಂಟ್ ಬಗ್ಗೆ ತಿಳಿದುಕೊಳ್ಳಬಹುದು. ಮಾಡ್ಯುಲ್ 4ರಲ್ಲಿ ಮ್ಯೂಚುಯಲ್ ಫಂಡ್ಸ್, ಈಕ್ವಿಟಿ ಡಿರೈಟಿವ್ಸ್, ಕಮಾಡಿಟಿಸ್ ಮತ್ತು ಕಮಾಡಿಟಿಸ್ ಟ್ರೇಡಿಂಗ್ ಬಗ್ಗೆ ಕಲಿಯಬಹುದು. ಇವೆಲ್ಲದರ ನಂತರ ಲೈವ್ ಪ್ರಾಜೆಕ್ಟ್ ಮತ್ತು ಫೈನಲ್ ಎಗ್ಸಾಂ ಇರುತ್ತದೆ.
ಹೀಗೆ ಷೇರುಪೇಟೆ ಸಂಬಂಧಿಸಿದ ಶಾರ್ಟ್ ಟರ್ಮ್ ಕೋರ್ಸ್‍ಗಳನ್ನು ನೀಡುವ ಹಲವು ಸಂಸ್ಥೆಗಳಿವೆ. ಎನ್‍ಎಸ್‍ಇ ಅಥವಾ ಬಿಎಸ್‍ಇಯಿಂದ ಅಂಗೀಕೃತವಾದ ಸಂಸ್ಥೆಗಳಿಂದ ಸರ್ಟಿಫಿಕೇಟ್ ಪಡೆದರೆ ಒಳ್ಳೆಯದು.

Copyright: Published On Vijaya Karnataka Mini
ಟ್ಯಾಕ್ಸೇಷನ್ ಕೋರ್ಸ್ ಕಲಿತವರಿಗೆ ಬೇಡಿಕೆ ಹೆಚ್ಚು

ಟ್ಯಾಕ್ಸೇಷನ್ ಕೋರ್ಸ್ ಕಲಿತವರಿಗೆ ಬೇಡಿಕೆ ಹೆಚ್ಚು

ಕಾಮರ್ಸ್ ಪದವಿ ಪಡೆದ ನಂತರ ಟ್ಯಾಕ್ಸ್ ಸಂಬಂಧಿತ ವಿಭಾಗಗಳಲ್ಲಿ ಕೆಲಸ ಮಾಡಬಯಸುವವರು `ಟ್ಯಾಕ್ಸೇಷನ್'ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.


 • ಪ್ರವೀಣ್ ಚಂದ್ರ ಪುತ್ತೂರು

ಕಾಮರ್ಸ್ ಓದಿದವರಿಗೆ ಸಖತ್ ಡಿಮ್ಯಾಂಡ್ ಇದೆ ಎಂದು ಬಿ.ಕಾಂ., ಎಂ.ಕಾಂ. ಓದುವವರು ಹೆಚ್ಚಾಗಿದ್ದಾರೆ. ವಾಣಿಜ್ಯ ಪದವೀಧರರು ಹೆಚ್ಚಾಗುತ್ತಿರುವುದರಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಪೈಪೆÇೀಟಿ ಸಹಜ. ಕೆಲವೊಮ್ಮೆ ಕೆಲಸ ಪಡೆಯಲು ಕಾಲೇಜಿನಲ್ಲಿ ದೊರಕುವ ಸರ್ಟಿಫಿಕೇಟ್ ಮಾತ್ರ ಸಾಕಾಗದು. ಬಿ.ಕಾಂ., ಎಂ.ಕಾಂ., ಇತ್ಯಾದಿ ಪದವಿ ಪಡೆದವರು ತೆರಿಗೆ ಸಂಬಂಧಿತ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಲು ಇಷ್ಟಪಟ್ಟರೆ ಅಲ್ಪಾವಧಿಯ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ಮಾಡಬಹುದು. ಇದರಿಂದ ನಿಮ್ಮ ರೆಸ್ಯೂಂನ ತೂಕ ಹೆಚ್ಚಾಗುತ್ತದೆ. ಕೆಲಸ ದೊರಕುವ ಸಾಧ್ಯತೆ ಹೆಚ್ಚಾಗುತ್ತದೆ.

ತೆರಿಗೆ ತಜ್ಞರಿಗೆ ಉತ್ತಮ ಬೇಡಿಕೆ ಇರುವುದರಿಂದ ಟ್ಯಾಕ್ಸೇಷನ್‍ಗೆ ಸಂಬಂಧಿಸಿದ ಅಲ್ಪಾವಧಿ ಕೋರ್ಸ್ ನಡೆಸುವ ಶಿಕ್ಷಣ ಸಂಸ್ಥೆಗಳು ದೇಶದಲ್ಲಿ ಸಾಕಷ್ಟಿವೆ. ಆದರೆ, ರಾಜ್ಯದಲ್ಲಿ ಇಂತಹ ಸಂಸ್ಥೆಗಳು ಕಡಿಮೆ ಇವೆ. ದೂರಶಿಕ್ಷಣ ಅಥವಾ ಆನ್‍ಲೈನ್‍ನಿಂದಲೂ ಇಂತಹ ಸರ್ಟಿಫಿಕೇಷನ್ ಪಡೆಯಬಹುದು.

ಏನಿದು ಟ್ಯಾಕ್ಸೇಷನ್ ಕೋರ್ಸ್?
ತೆರಿಗೆ ನಿರ್ವಹಣೆ, ಮೌಲ್ಯಮಾಪನ, ವರದಿ, ಲೆಕ್ಕಪರಿಶೋಧನೆ, ಪರಿಶೀಲನೆ ಮತ್ತು ಅಂತಾರಾಷ್ಟ್ರೀಯ ತೆರಿಗೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ರೂಪಿಸಲಾಗಿರುತ್ತದೆ. ವಾಣಿಜ್ಯ ಪದವಿ, ಸಿಎ, ಮ್ಯಾನೇಜ್‍ಮೆಂಟ್ ವಿಷಯಗಳನ್ನು ಓದಿದವರು ಇಂತಹ ಕೋರ್ಸ್ ಮಾಡಿ ಸರ್ಟಿಫಿಕೇಟ್ ಪಡೆಯಬಹುದು. ಟ್ಯಾಕ್ಸೇಷನ್ ಸಂಬಂಧಿಸಿದ ಡಿಪೆÇ್ಲಮಾ ಮಾತ್ರವಲ್ಲದೆ ಅಲ್ಪಾವಧಿಯ ಕೋರ್ಸ್‍ಗಳೂ ಇರುತ್ತವೆ.

ಐಸಿಎಐನಿಂದ ಸರ್ಟಿಫಿಕೇಟ್
ಚಾರ್ಟೆಡ್ ಅಕೌಂಟೆಂಟ್ ಆ್ಯಕ್ಟ್, 1949ರ ಅನ್ವಯ ದೆಹಲಿಯಲ್ಲಿ ಸ್ಥಾಪನೆಗೊಂಡ `ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)'ದಲ್ಲಿ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಹಲವು ಕೋರ್ಸ್‍ಗಳಿವೆ. ಈ ಸಂಸ್ಥೆಯು ಸುಮಾರು 100 ಗಂಟೆಗಳ(16 ದಿನಗಳ) ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್ ಕೋರ್ಸ್ ನಡೆಸುತ್ತದೆ. ಸುಮಾರು ಶೇಕಡ 90ರಷ್ಟು ಪಾಠ ಪೂರ್ಣಗೊಂಡ ನಂತರ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ಪಾಸಾದವರಿಗೆ ಸರ್ಟಿಫಿಕೇಟ್ ದೊರೆಯುತ್ತದೆ. ಐಸಿಎಐನ ಸದಸ್ಯರು ಅಥವಾ ಸಿಎ ಅಂತಿಮ ಪರೀಕ್ಷೆ ಮುಗಿಸಿ ಐಸಿಎಐನ ಸದಸ್ಯತ್ವ ಸಂಖ್ಯೆ ಪಡೆದವರು ಈ ಸರ್ಟಿಫಿಕೇಷನ್ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ 16 ದಿನಗಳ ಕೋರ್ಸ್‍ಗೆ 25 ಸಾವಿರ ರೂ. ಶುಲ್ಕ ಇರುತ್ತದೆ. ಈ ಕೋರ್ಸ್‍ನ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ವೆಬ್‍ಸೈಟ್ ಲಿಂಕ್ ಪ್ರವೇಶಿಸಬಹುದು.

ರಾಜ್ಯದಲ್ಲಿ ಟ್ಯಾಕ್ಸೇಷನ್
ಕರ್ನಾಟಕದಲ್ಲಿ ಟ್ಯಾಕ್ಸೇಷನ್ ವಿಷಯದಲ್ಲಿ ಅಲ್ಪಾವಧಿ ಕೋರ್ಸ್‍ಗಳನ್ನು ನೀಡುವ ವಿದ್ಯಾಸಂಸ್ಥೆಗಳು ಅತ್ಯಲ್ಪ. ಟ್ಯಾಕ್ಸ್ ಆ್ಯಂಡ್ ರೆಗ್ಯುಲೇಟರಿ ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಬೆಂಗಳೂರಿನ ವೆಲ್ಲಿಂಗಕರ್ ಎಜುಕೇಷನ್ ಸಂಸ್ಥೆಯು 6 ತಿಂಗಳ ಅವಧಿಯ ಡಿಪೆÇ್ಲಮಾ ಕೋರ್ಸ್ ನೀಡುತ್ತಿದೆ. ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು. ಈ ಸಂಸ್ಥೆಯು ಆರು ತಿಂಗಳ ಕೋರ್ಸ್‍ಗೆ 50 ಸಾವಿರ ರೂ.(ವ್ಯಾಟ್ ಸೇರದೆ) ಶುಲ್ಕ ನಿಗದಿಪಡಿಸಿದೆ. ಕೆಲವು ಖಾಸಗಿ ಸಂಸ್ಥೆಗಳು ಸಹ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ನೀಡುತ್ತವೆ. ಬೆಂಗಳೂರಿನ ವಿಜಯನಗರದಲ್ಲಿರುವ ಐಜಿಎಸ್‍ಎಸ್‍ನಲ್ಲಿ 6 ತಿಂಗಳ ಟ್ಯಾಕ್ಸೇಷನ್ ಕೋರ್ಸ್ ಇದೆ. ಬಿಕಾಂ, ಬಿಬಿಎಂ, ಎಂಬಿಎ, ಎಂಕಾಂ ಇತ್ಯಾದಿ ಶಿಕ್ಷಣ ಪೂರೈಸಿದವರು ಈ ಕೋರ್ಸ್ ಮಾಡಬಹುದು. ರಾಜ್ಯದಲ್ಲಿ ಬೆರಳೆಣಿಕೆಯ ಖಾಸಗಿ ಸಂಸ್ಥೆಗಳು ಅಲ್ಪಾವಧಿ ಕೋರ್ಸ್‍ಗಳನ್ನು ನಡೆಸುತ್ತಿವೆ. ನಿಮ್ಮ ಊರಿಗೆ ಸಮೀಪದಲ್ಲಿ ಯಾವುದಾದರೂ ಸಂಸ್ಥೆಯು ಇಂತಹ ಕೋರ್ಸ್‍ಗಳನ್ನು ನಡೆಸುತ್ತಿದೆಯೇ ಎಂದು ತಿಳಿದುಕೊಳ್ಳಿ.

ಆನ್‍ಲೈನ್ ಕೋರ್ಸ್‍ಗಳು
* ಇನ್‍ಸ್ಟಿಟ್ಯೂಟ್ ಆಫ್ ಇಂಟರ್‍ನ್ಯಾಷನಲ್ ಟ್ರೇಡ್ ಆ್ಯಂಡ್ ಟ್ಯಾಕ್ಸ್ ಸ್ಟಡೀಸ್‍ನಲ್ಲಿ `ಕಸ್ಟಮ್ಸ್ ಆ್ಯಂಡ್ ಫಾರಿನ್ ಟ್ರೇಡ್ ಪಾಲಿಸಿ' ವಿಷಯದ ಕುರಿತು ಆನ್‍ಲೈನ್ ಕೋರ್ಸ್ ಮಾಡಬಹುದಾಗಿದೆ. 90 ದಿನಗಳ ಈ ಕೋರ್ಸ್‍ಗೆ 10 ಸಾವಿರ ರೂ. ನೀಡಬೇಕು. ಹೆಚ್ಚಿನ ಮಾಹಿತಿಗೆ ಲಿಂಕ್
* ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್‍ಮೆಂಟ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯೂ ಆನ್‍ಲೈನ್‍ನಲ್ಲಿ ಡೈರೆಕ್ಟ್ ಮತ್ತು ಇಂಡೈರೆಕ್ಟ್ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ನಡೆಸುತ್ತದೆ. ವೆಬ್‍ಲಿಂಕ್


ದೂರಶಿಕ್ಷಣದಿಂದ ಸರ್ಟಿಫಿಕೇಟ್
ಟ್ಯಾಕ್ಸೇಷನ್ ಡಿಪೆÇ್ಲಮಾ ಕೋರ್ಸ್‍ಗಳು ರಾಜ್ಯದಲ್ಲಿ ಕಡಿಮೆ ಇರಬಹುದು. ಇಂತಹ ಸಂದರ್ಭದಲ್ಲಿ ಡಿಸ್ಟೇನ್ಸ್ ಎಜುಕೇಷನ್ ಮೂಲಕ ತೆರಿಗೆ ಕಾನೂನು ಕಲಿಯಬಹುದು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫೈನಾನ್ಸ್‍ನಲ್ಲಿ ಟ್ಯಾಕ್ಸೇಷನ್ ಸಂಬಂಧಿಸಿದಂತೆ ಡಿಸ್ಟೆನ್ಸ್ ಎಜುಕೇಷನ್ ಮಾಡಬಹುದು.

ಚೆನ್ನೈನಲ್ಲಿರುವ ಯೂನಿವರ್ಸಿಟಿ ಆಫ್ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಡಿಸ್ಟೆನ್ಸ್ ಎಜುಕೇಷನ್ನಲ್ಲಿ ಅಥವಾ ಅಣ್ಣಾಮಲೈ ಯೂನಿವರ್ಸಿಟಿಯಲ್ಲಿ ಟ್ಯಾಕ್ಸೇಷನ್ ಡಿಪೆÇ್ಲಮಾ ಓದಬಹುದು.
ಡಿಸ್ಟೆನ್ಸ್ ಕೋರ್ಸ್ ಮಾಡುವವರಿಗೆ ಮುಂಬೈನಲ್ಲಿರುವ ಟಿವಿಸಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಟ್ಯಾಕ್ಸೇಷನ್ ಕುರಿತಾದ ಹಲವು ಕೋರ್ಸ್‍ಗಳಿವೆ. ಡಿಪೆÇ್ಲಮಾ ಇನ್ ಇನ್‍ಡೈರೆಕ್ಟ್ ಟ್ಯಾಕ್ಸೇಷನ್, ಡಿಪೆÇ್ಲಮಾ ಇನ್ ಡೈರೆಕ್ಟ್ ಟ್ಯಾಕ್ಸೇಷನ್ ಇತ್ಯಾದಿ ಕೋರ್ಸ್‍ಗಳಿವೆ. ಇವು ತಲಾ ನಾಲ್ಕು ತಿಂಗಳ ಕೋರ್ಸ್. ಹೆಚ್ಚಿನ ಮಾಹಿತಿge. ಮುಂಬೈನಲ್ಲಿರುವ ಇಂಡೋ ಜರ್ಮನ್ ಟೂಲ್ ರೂಂ ಎಂಬ ಸಂಸ್ಥೆಯೂ ಭಾರತೀಯ ದೂರ ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 6 ತಿಂಗಳ ಡಿಪೆÇ್ಲಮಾ ಇನ್ ಟ್ಯಾಕ್ಸ್ ಮ್ಯಾನೇಜ್‍ಮೆಂಟ್' ಕೋರ್ಸ್ ಇದೆ.
<strong>ಯಾರು ಮಾಡಬಹುದು?</strong>
ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು ಅಥವಾ ಈಗಾಗಲೇ ಅಕೌಂಟೆಂಟ್/ಟ್ಯಾಕ್ಸ್ ಪ್ರಿಪರೇಷನ್ ವಿಭಾಗಗಳಲ್ಲಿ ಉದ್ಯೋಗದಲ್ಲಿರುವವರು ಕಂದಾಯಕ್ಕೆ ಸಂಬಂಧಿಸಿದ
ಟ್ಯಾಕ್ಸೇಷನ್' ಅಥವಾ `ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್' ಕೋರ್ಸ್‍ಗಳನ್ನು ಮಾಡಬಹುದು. ಅಂದರೆ, ಬಿಕಾಂ, ಎಂಕಾಂ, ಸಿಎ ಮಾತ್ರವಲ್ಲದೆ ಮ್ಯಾನೇಜ್‍ಮೆಂಟ್ ವಿಷಯಗಳನ್ನೂ ಓದಿದದವರೂ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ಮಾಡಬಹುದು. ದೆಹಲಿಯ ಐಸಿಎಐನಲ್ಲಿ ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್ ಕೋರ್ಸ್ ಮಾಡಲು ಐಸಿಎಐ ಸದಸ್ಯತ್ವ ಅಥವಾ ಸದಸ್ಯತ್ವ ಸಂಖ್ಯೆ ಪಡೆಯಬೇಕಿರುವುದು ಕಡ್ಡಾಯ.

ಎಲ್ಲೆಲ್ಲಿ ಅವಕಾಶ ದೊರಕುತ್ತದೆ?
ಇಂತಹ ಸರ್ಟಿಫಿಕೇಷನ್ ಪಡೆದವರಿಗೆ ಕಾಪೆರ್Çರೇಟ್ ಆಫೀಸ್‍ಗಳಲ್ಲಿ, ಸರಕಾರಿ ಏಜೆನ್ಸಿಗಳಲ್ಲಿ, ಸಣ್ಣ ಉದ್ಯಮಗಳಲ್ಲಿ, ರಿಟೀಲ್ ಅಥವಾ ಸರ್ವೀಸ್ ಉದ್ಯಮಗಳಲ್ಲಿ ಸುಲಭವಾಗಿ ಕೆಲಸ ದೊರಕುತ್ತದೆ. ಟ್ಯಾಕ್ಸ್ ಪ್ಲಾನಿಂಗ್, ಪ್ರಾಪರ್ಟಿ ಟ್ಯಾಕ್ಸೇಷನ್, ತೆರಿಗೆ ಕಾನೂನು ಮತ್ತು ಕಾಪೆರ್Çರೇಟ್ ತೆರಿಗೆ ಇತ್ಯಾದಿ ವಿಷಯಗಳಲ್ಲಿ ತಜ್ಞರಾಗಬಹುದು.

ಕಾಲೇಜಿನಲ್ಲಿ ಬಿಕಾಂ ಇತ್ಯಾದಿ ಪದವಿ ಪಡೆzವರಿಗೆ ಪ್ರಾಕ್ಟಿಕಲ್ ಅನುಭವ ಇರುವುದಿಲ್ಲ. ಟ್ಯಾಕ್ಸೇಷನ್ ಸಂಬಂಧಿಸಿದ ಶಾರ್ಟ್ ಟರ್ಮ್ ಕೋರ್ಸ್ ಮಾಡಿದರೆ ಅವರಿಗೆ ಸ್ಪೆಸಿಫಿಕ್ ಆದ ನಾಲೆಡ್ಜ್ ದೊರಕುತ್ತದೆ. ಇಂತಹ ಕೋರ್ಸ್ ಮಾಡಿದ್ದರೆ ಫ್ರೆಷರ್ಸ್‍ಗಳಿಗೆ ಉದ್ಯೋಗಾವಕಾಶವೂ ಉತ್ತಮವಾಗಿರುತ್ತದೆ.
ಗಂಗಾಧರ್ ಹೆಗಡೆ | ಅಡಿಟರ್, ಬೆಂಗಳೂರುಕರ್ನಾಟಕದಲ್ಲಿ ಟ್ಯಾಕ್ಸೇಷನ್ ಸಂಬಂಧಪಟ್ಟಂತೆ ಹೆಚ್ಚು ಶಾರ್ಟ್‍ಟರ್ಮ್ ಕೋರ್ಸ್‍ಗಳಿಲ್ಲ. ಆದರೆ, ಬೇರೆ ರಾಜ್ಯಗಳಲ್ಲಿರುವ ಇನ್‍ಸ್ಟಿಟ್ಯೂಷನ್‍ಗಳಿಂದ ದೂರಶಿಕ್ಷಣ, ಆನ್‍ಲೈನ್ ಕೋರ್ಸ್ ಮಾಡಬಹುದು. ಇಂತಹ ಸರ್ಟಿಫಿಕೇಷನ್ ರೆಸ್ಯೂಂನ ವ್ಯಾಲ್ಯೂ ಹೆಚ್ಚಿಸಿ ಉದ್ಯೋಗ ದೊರಕಿಸಲು ನೆರವಾಗಬಹುದು.
ನರೇಂದ್ರ ಹಿರೆಕೈ | ಟ್ಯಾಕ್ಸ್ ಕನ್ಸಲ್ಟೆಂಟ್, ಬೆಂಗಳೂರು


Copyright: Published On Vijaya Karnataka Mini 
ಎಸ್‍ಇಒ ಸರ್ಟಿಫಿಕೇಷನ್‍ಗೆ ಬೇಡಿಕೆ

ಎಸ್‍ಇಒ ಸರ್ಟಿಫಿಕೇಷನ್‍ಗೆ ಬೇಡಿಕೆ

ಆನ್‍ಲೈನ್ ಮೂಲಕ ಹೆಚ್ಚು ಗ್ರಾಹಕರನ್ನು ತಲುಪಲು ಬಹುತೇಕ ಕಂಪನಿಗಳು ಪ್ರಯತ್ನಿಸುತ್ತಿರುವುದರಿಂದ ಸರ್ಚ್ ಎಂಜಿನ್ ಆಪ್ಟಿಮೈಜೇಷನ್‍ನಲ್ಲಿ ಪರಿಣತಿ ಪಡೆದವರಿಗೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಎಸ್‍ಇಒ ಸರ್ಟಿಫಿಕೇಷನ್ ಕೋರ್ಸ್‍ಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ನಿಮಗೆ ಯಾವುದೋ ವಿಷಯದ ಬಗ್ಗೆ ಮಾಹಿತಿ ಬೇಕು. ಉದಾಹರಣೆಗೆ ಆ ವಿಷಯ ಕಾರ್' ಎಂದಿರಲಿ. ಗೂಗಲ್‍ನ ಸರ್ಚ್ ಬಾಕ್ಸ್‍ಗೆ ಹೋಗಿ ಕಾರ್ ಎಂದು ಟೈಪ್ ಮಾಡಿ ಎಂಟರ್ ಹೊಡೆಯುವಿರಿ. ಆಗ ವೆಬ್‍ಫಲಿತಾಂಶಗಳ ರಾಶಿಯೇ ನಿಮ್ಮ ಮುಂದೆ ಬರುತ್ತದೆ. ಮೊದಲ ಪುಟದ ಟಾಪ್‍ನಲ್ಲಿ ಕಾರ್‍ವಾಲೆ, ಕಾರ್‍ಟ್ರೇಡ್, ಕಾರ್‍ದೇಕೊ ಮುಂತಾದ ವೆಬ್‍ಸೈಟ್‍ಗಳ ಮಾಹಿತಿಗಳು ಬರುತ್ತವೆ. ಕಾರುಗಳ ಮಾಹಿತಿ ನೀಡುವ ಸಾವಿರಾರು ವೆಬ್‍ಸೈಟ್‍ಗಳು ಭಾರತದಲ್ಲಿವೆ. ಯಾಕೆ, ಕೆಲವೇ ಕೆಲವು ವೆಬ್‍ಸೈಟ್‍ಗಳ ಹೆಸರು ಗೂಗಲ್ ಹುಡುಕಾಟದಲ್ಲಿ ಮೊದಲಿಗೆ ಬರುತ್ತವೆ? ಪವರ್‍ಫುಲ್ ವೆಬ್ ಮಾರ್ಕೆಟಿಂಗ್ ಟೆಕ್ನಿಕ್ ಆದಎಸ್‍ಇಒ' ಅನ್ನು ಸಮರ್ಥವಾಗಿ ಅಳವಡಿಸಿಕೊಂಡಿರುವುದೇ ಆ ವೆಬ್‍ಸೈಟ್‍ಗಳ ಲಿಂಕ್‍ಗಳು ಗೂಗಲ್, ಬಿಂಗ್, ಯಾಹೂ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಟಾಪ್‍ನಲ್ಲಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ.

ಏನಿದು ಎಸ್‍ಇಒ?
ಎಸ್‍ಇಒ ವಿಸ್ತೃತ ರೂಪ ಸರ್ಚ್ ಎಂಜಿನ್ ಆಪ್ಟಿಮೈಜೇಷನ್. ಸರ್ಚ್ ಎಂಜಿನ್‍ನಲ್ಲಿರುವ ಕೋಟಿ ಕೋಟಿ ವೆಬ್‍ಸೈಟ್‍ಗಳು, ಮಾಹಿತಿ ಕಣಜಗಳನ್ನು ಹಿಂದಿಕ್ಕಿ ನಿಮ್ಮ ವೆಬ್‍ಸೈಟ್‍ಗೆ ಅಗ್ರ ರ್ಯಾಂಕ್ ನೀಡಿ ಮಾಹಿತಿ ಹುಡುಕಾಡುವವರಿಗೆ ಮೊದಲ ಪುಟದಲ್ಲಿ ತೋರಿಸಲು ಸಹಕರಿಸುವ ವೆಬ್ ಟೆಕ್ನಿಕ್ ಅನ್ನು ಎಸ್‍ಇಒ ಎನ್ನಬಹುದು. ಸರ್ಚ್ ಫಲಿತಾಂಶಗಳಲ್ಲಿ ಮೊದಲ ಪುಟದಲ್ಲಿ ಕಾಣುವ ಲಿಂಕ್‍ಗಳನ್ನು ಅತ್ಯಧಿಕ ಜನರು ಕ್ಲಿಕ್ ಮಾಡುತ್ತಾರೆ. ನಿಮ್ಮ ವೆಬ್ ತಾಣಕ್ಕೆ ಹೆಚ್ಚು ಜನರು ಭೇಟಿ ನೀಡಬೇಕಾದರೆ ಉತ್ತಮ ಎಸ್‍ಇಒ ತಂತ್ರವನ್ನು ನೀವು ಅಳವಡಿಸಿಕೊಳ್ಳಲೇಬೇಕು.

ಎಸ್‍ಇಒಗೆ ಸಖತ್ ಬೇಡಿಕೆ
ಈಗ ಬಹುತೇಕ ವ್ಯವಹಾರಗಳು ಆನ್‍ಲೈನ್ ಅನ್ನು ಅವಲಂಬಿಸಿವೆ. ಆನ್‍ಲೈನ್ ವ್ಯವಹಾರಕ್ಕಾಗಿ ವೆಬ್‍ಸೈಟ್‍ಗಳು ಪ್ರಮುಖವಾಗಿರುತ್ತವೆ. ಇಂಟರ್‍ನೆಟ್‍ನಲ್ಲಿಂದು ಕೋಟಿ ಕೋಟಿ ವೆಬ್‍ಸೈಟ್‍ಗಳಿವೆ. ಆನ್‍ಲೈನ್ ಮಾರುಕಟ್ಟೆಯಲ್ಲಿ ಗ್ರಾಹಕರು ಅಜ್ಞಾತವಾಗಿರುತ್ತಾರೆ. ಅಜ್ಞಾತ ಗ್ರಾಹಕರನ್ನು ತಮ್ಮ ಕಂಪನಿಗೆ ಸೆಳೆಯಲು ಪರಿಣಿತರ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ಆನ್‍ಲೈನ್‍ನಲ್ಲಿ ನೀವು ಗಿಫ್ಟ್ ಸೆಂಟರ್ ತೆರೆದಿದ್ದೀರಿ ಎಂದಿರಲಿ. ಯಾರಾದರೂ ಗಿಫ್ಟ್ ಇನ್ ಬೆಂಗಳೂರು ಎಂದು ಹುಡುಕಿದಾಗ ಸುಲಭವಾಗಿ ನಿಮ್ಮ ವೆಬ್‍ಸೈಟ್ ಅವರಿಗೆ ಕಾಣಿಸಬೇಕು. ಯಾವುದೇ ಆನ್‍ಲೈನ್ ವ್ಯವಹಾರದ ಪ್ರಮುಖ ಉದ್ದೇಶ ಹೆಚ್ಚಿನ ಗ್ರಾಹಕರಿಗೆ ತಲುಪುವುದಾಗಿದೆ. ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಮಾರ್ಕೆಟ್ ಮಾಡಲು ಎಸ್‍ಇಒ ಪರಿಣತಿ ನೆರವಾಗುತ್ತದೆ. ಅದಕ್ಕಾಗಿ ಎಸ್‍ಇಒ ಪರಿಣಿತರನ್ನು ಕಂಪನಿಗಳು ನೇಮಿಸಿಕೊಳ್ಳುತ್ತವೆ. ಭವಿಷ್ಯದಲ್ಲಿ ಆನ್‍ಲೈನ್ ವ್ಯವಹಾರ ಇನ್ನಷ್ಟು ಅಧಿಕಗೊಳ್ಳುವುದರಿಂದ ಇದು ಮುಂದೆಯೂ ಬೇಡಿಕೆಯಲ್ಲಿರಲಿರುವ ಜಾಬ್ ಆಗಿದೆ.

ಎಸ್‍ಇಒ ಕೋರ್ಸ್
ಎಸ್‍ಇಒ ಕಲಿಸುವ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳಿಂದು ಲಭ್ಯ ಇವೆ. ಮಾರಾಟ ಮತ್ತು ಮಾರುಕಟ್ಟೆ ವೃತ್ತಿಪರರು, ಉದ್ಯಮಿಗಳು, ವೆಬ್ ವಿನ್ಯಾಸ ಮತ್ತು ಅಭಿವೃದ್ಧಿ ವೃತ್ತಿಪರರು, ಕಂಟೆಂಟ್ ಬರಹಗಾರರು, ಎಸ್‍ಇಒ ಬಗ್ಗೆ ಅಷ್ಟಾಗಿ ತಿಳಿದಿರದ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಎಸ್‍ಇಒ ಉದ್ಯಮದಲ್ಲಿ ತಮ್ಮ ಕರಿಯರ್ ರೂಪಿಸಿಕೊಳ್ಳಲು ಬಯಸುವ ಯಾರೂ ಬೇಕಾದರೂ ಈ ಕೋರ್ಸ್ ಮಾಡಬಹುದಾಗಿದೆ.

ಎಲ್ಲ ಕಲಿಯಬಹುದು?
ಎಸ್‍ಇಒ ಮೂಲಭೂತ ಅಂಶಗಳನ್ನು ನೀವು ಇಂಟರ್‍ನೆಟ್‍ನಲ್ಲಿ ಕಲಿಯಿರಿ. ಅಂದರೆ, ಎಸ್‍ಇಒ ಬಗ್ಗೆ ಪಾಠ ಮಾಡುವ ಸಾಕಷ್ಟು ಉಚಿತ ಕೋರ್ಸ್‍ಗಳು ಇವೆ. ಅದಕ್ಕಾಗಿ ಫ್ರೀ ಎಸ್‍ಇಒ ಕೋರ್ಸ್ ಎಂದು ಗೂಗಲ್ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಹುಡುಕಾಡಿ. ಇಲ್ಲಿ ನಿಮ್ಮ ಜ್ಞಾನ ಹೆಚ್ಚಿಸಿಕೊಂಡ ನಂತರ ಯಾವುದಾದರೂ ಕ್ಲಾಸ್‍ರೂಂ ಅಥವಾ ಆನ್‍ಲೈನ್ ಕೋರ್ಸ್‍ಗಳಿಗೆ ಸೇರಬಹುದು. ನೀವಿರುವ ಊರಿಗೆ ಸಮೀಪದಲ್ಲಿ ಎಲ್ಲೆಲ್ಲಿ ಎಸ್‍ಇಒ ಕಲಿಕಾ ಕೇಂದ್ರಗಳಿವೆ ಎಂದು ಗೂಗಲ್‍ನಲ್ಲಿ ಹುಡುಕಾಟ ನಡೆಸಬಹುದು. ಆನ್‍ಲೈನ್ ಮೂಲಕ ಕಲಿಯಲು www.seocertification.org,  www.simplilearn.com, www.digitalvidya.com, www.seotrainingpoint.com, www.inventateq.com  ಮುಂತಾದ ವೆಬ್‍ಸೈಟ್‍ಗಳಿಗೆ ಭೇಟಿ ನೀಡಬಹುದು. ದುಬಾರಿ ದರ ಕೇಳುವ ಕಲಿಕಾ ಕೇಂದ್ರಗಳಿಂದ ದೂರವಿರಿ. ಅಲ್ಲಿರುವ ಸೌಲಭ್ಯ, ಫ್ಯಾಕಲ್ಟಿ ಗಮನಿಸಿ ಮುಂದುವರೆಯಿರಿ.

ವೆಬ್‍ಸೈಟ್ ಎಸ್‍ಇಒ ಟಿಪ್ಸ್
* ವೆಬ್‍ಸೈಟ್‍ನಲ್ಲಿ ಬಳಸಿರುವ ವಿಷಯಕ್ಕೆ ಸಂಬಂಧಪಟ್ಟ ಸಮರ್ಪಕ ಕೀವರ್ಡ್‍ಗಳನ್ನು ಬರೆಯಿರಿ.
* ನಿಮ್ಮ ವೆಬ್‍ಸೈಟ್‍ಗೆ ಬೇರೆ ಆಂತರಿಕ ಲಿಂಕ್‍ಗಳನ್ನು ಸೇರಿಸಿ.
* ವೆಬ್‍ಸೈಟ್ ಅನ್ನು ಸ್ಲೋ ಮಾಡುವ ಪ್ರತಿಯೊಂದು ಅಂಶವನ್ನು ತೆಗೆದುಬಿಡಿ.
* ಇಮೇಜ್ ಟೈಟಲ್, ಡಿಸ್ಕ್ರಿಪ್ಷನ್ ಇತ್ಯಾದಿಗಳಲ್ಲಿಯೂ ಕೀವರ್ಡ್‍ಗಳನ್ನು ಬಳಕೆ ಮಾಡಿ.
* ಇತರ ಪ್ರಮುಖ ವೆಬ್‍ಸೈಟ್‍ಗಳ ಲಿಂಕ್‍ಗಳನ್ನೂ ಸಂದರ್ಭಕ್ಕೆ ತಕ್ಕಂತೆ ನೀಡಿ.
* ಸಮಯಕ್ಕೆ ಸರಿಯಾಗಿ ವೆಬ್‍ಸೈಟ್ ಅನ್ನು ಅಪ್‍ಗ್ರೇಡ್ ಮಾಡುತ್ತಿರಿ.
* ಸರ್ಚ್ ಎಂಜಿನ್‍ಗಳಿಗೆ ನಿಮ್ಮ ವೆಬ್‍ಸೈಟ್ ಅನ್ನು ಇಂಡಕ್ಸ್ ಮಾಡಿ.
* ಆಗಾಗ ನಿಮ್ಮ ವೆಬ್‍ಸೈಟ್‍ನ ಡೊಮೇನ್ ಹೆಸರನ್ನು ಬದಲಾಯಿಸಬೇಡಿ.
* ವೆಬ್‍ಸೈಟ್‍ನಲ್ಲಿ ಮನುಷ್ಯರು ಬರೆದಂತೆ ಬರೆಯಿರಿ. ಯಂತ್ರ ಬರೆದಂತೆ ಬರೆಯದಿರಿ.


Copyright: Published On Vijaya Karnataka Mini
ಸಾಫ್ಟ್ ಸ್ಕಿಲ್ ನಿಮ್ಮಲ್ಲಿದೆಯೇ?

ಸಾಫ್ಟ್ ಸ್ಕಿಲ್ ನಿಮ್ಮಲ್ಲಿದೆಯೇ?

ಕಾಪೆರ್Çರೇಟ್ ರಂಗದಲ್ಲಿ ಉದ್ಯೋಗ ಪಡೆಯಲು ಬಯಸುವವರು ಮತ್ತು ಈಗಾಗಲೇ ಉದ್ಯೋಗದಲ್ಲಿರುವವರು ಸಾಫ್ಟ್ ಸ್ಕಿಲ್ ಅಥವಾ ಬಿಸಿನೆಸ್ ಸ್ಕಿಲ್ ಸರ್ಟಿಫಿಕೇಷನ್ ಪಡೆದರೆ ಕರಿಯರ್‍ನಲ್ಲಿ ಇನ್ನಷ್ಟು ಸಾಧನೆ ಮಾಡಬಹುದು.

*

ನೀವು ಕಾಲೇಜಿನಲ್ಲಿ ಸಾಕಷ್ಟು ಜ್ಞಾನ ಸಂಪಾದಿಸಿರಬಹುದು. ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿರಬಹುದು. ಸಾಕಷ್ಟು ಪ್ರತಿಭೆ ನಿಮ್ಮಲ್ಲಿರಬಹುದು. ಆದರೆ, ಉದ್ಯೋಗ ಸಂದರ್ಶಕರಿಗೆ ನಿಮ್ಮನ್ನು ನೋಡಿದಾಗ ಹಾಗೆ ಅನಿಸದೆ ಇರಬಹುದು. ನೀವು ಉದ್ಯೋಗದಲ್ಲಿ ಉತ್ತಮ ತಾಂತ್ರಿಕ ಜ್ಞಾನ ಹೊಂದಿರಬಹುದು. ಆದರೆ, ಪ್ರಸಂಟೇಷನ್ ಮಾಡುವ ಕಲೆ ಗೊತ್ತಿಲ್ಲದೆ ಇರಬಹುದು. ನೀವು ತಂಡದ ಲೀಡರ್ ಆಗಿರಬಹುದು. ಆದರೆ, ಸಹೋದ್ಯೋಗಿಗಳನ್ನು ಪ್ರೇರೇಪಿಸಲು ತಿಳಿಯದವರಾಗಿರಬಹುದು. ನಿಮ್ಮಲ್ಲಿ ಸಾಕಷ್ಟು ಪದಸಂಪತ್ತು ಇರಬಹುದು. ಆದರೆ, ಸಂವಹನ ಕೌಶಲ ಇಲ್ಲದೆ ಇರಬಹುದು. ಇಂದಿನ ಕಾಪೆರ್Çರೇಟ್ ಜಗತ್ತಿಗೆ ಇವೆಲ್ಲ ಅತ್ಯಂತ ಅವಶ್ಯವಾದ ಕೌಶಲಗಳು. ಈಗ ಕೆಲವು ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ ಹೇಳಿಕೊಡುವ ಪ್ರಯತ್ನ ಮಾಡುತ್ತಿವೆ. ಇಂತಹ ಕೌಶಲಗಳನ್ನು ಕಲಿಸಿ ಸರ್ಟಿಫಿಕೇಷನ್ ನೀಡುವ ಸಾಕಷ್ಟು ಸಂಸ್ಥೆಗಳಿವೆ. ಇಂತಹ ತರಬೇತಿಯನ್ನು ಯಾರು, ಯಾವಾಗ ಬೇಕಾದರೂ ಪಡೆಯಬಹುದು. ಉದ್ಯೋಗ ಸಂದರ್ಶನದಲ್ಲಿ ಇಂತಹ ಸರ್ಟಿಫಿಕೇಷನ್ ನಿಮಗೆ ಪ್ಲಸ್ ಪಾಯಿಂಟ್ ಆಗಬಹುದು.

ಏನಿದು ಸಾಫ್ಟ್ ಸ್ಕಿಲ್?
ಕೆಲಸ ಮಾಡುವ ಸ್ಥಳದಲ್ಲಿ ಮತ್ತು ವ್ಯವಹಾರ ಸಂಬಂಧಿತ ಸಂವಹನದ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿಸಿ ಕೊಡುವುದೇ ಸಾಫ್ಟ್ ಸ್ಕಿಲ್. ಇದು ಸಂವಹನ ಕಲೆಯಾಗಿರಬಹುದು, ಯಾರಾದರೂ ಹೇಳುವುದನ್ನು ಗಮನವಿಟ್ಟು ಕೇಳುವ ಕಲೆಯಾಗಿರಬಹುದು, ವಿಷಯ ಮಂಡನೆ ಕಲೆಯಾಗಿರಬಹುದು, ಸಮಯ ನಿರ್ವಹಣೆ, ಆ್ಯಟಿಟ್ಯೂಡ್, ವರ್ತನಾ ವಿಧಾನ, ಸಮಸ್ಯೆ ಬಗೆಹರಿಸುವ ಕಲೆ, ತಂಡದ ಜೊತೆ ಸೇರಿ ಕೆಲಸ ಮಾಡುವುದು, ಗುರಿ ನಿಗದಿ ಪಡಿಸುವುದು ಇತ್ಯಾದಿಗಳ ತರಬೇತಿಯಾಗಿರಬಹುದು. ಕೆಲಸ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಅಥವಾ ಭಾವನೆಯನ್ನು ನಿಯಂತ್ರಿಸುವುದು ಸಹ ಸಾಫ್ಟ್ ಸ್ಕಿಲ್ ಕಲಿಕೆಯಲ್ಲಿ ಸೇರಿದೆ. ಸಾಫ್ಟ್ ಸ್ಕಿಲ್‍ಗಳು ವೃತ್ತಿಪರ ಮತ್ತು ವ್ಯವಹಾರದ ಯಶಸ್ಸಿಗೆ ಅತ್ಯಂತ ಅವಶ್ಯಕ. ಇದಕ್ಕಾಗಿಯೇ ಈಗ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಾಫ್ಟ್ ಸ್ಕಿಲ್ ತರಬೇತಿಗಳನ್ನು ನೀಡುತ್ತವೆ. ಸಾಫ್ಟ್ ಸ್ಕಿಲ್‍ನಲ್ಲಿ ಪರಿಣತಿ ಹೊಂದಿರದ ವ್ಯಕ್ತಿಯಿಂದ ಕಂಪನಿಯ ವ್ಯವಹಾರಕ್ಕೆ ಸಾಕಷ್ಟು ಹೊಡೆತ ಬೀಳಬಹುದು.

ಎಲ್ಲಿ ಕಲಿಯಬಹುದು ಸಾಫ್ಟ್‍ಸ್ಕಿಲ್?
ಸಾಫ್ಟ್ ಸ್ಕಿಲ್ ಕಲಿಸುವ ಸಂಪನ್ಮೂಲ ವ್ಯಕ್ತಿಗಳು ನಿಮ್ಮ ಆಸುಪಾಸಿನಲ್ಲೇ ಇರಬಹುದು. . ನೀವಿರುವ ಕಾಲೇಜಿಗೆ ಇಂತಹ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಬೇತಿ ನೀಡಬಹುದು. ಹಣ ಮಾಡುವುದೇ ಪ್ರಮುಖ ಉದ್ದೇಶವಾಗಿಟ್ಟುಕೊಂಡವರಿಂದ ದೂರವಿರುವುದು ಒಳ್ಳೆಯದು. ಆದರೆ, ಕೆಲವು ಸಂಸ್ಥೆಗಳು ಸಾಫ್ಟ್ ಸ್ಕಿಲ್ ತರಬೇತಿ ನೀಡುವಲ್ಲಿ ಜನಪ್ರಿಯತೆ ಪಡೆದಿರುತ್ತವೆ. ಸಾಫ್ಟ್ ಸ್ಕಿಲ್ ಪಡೆಯಲು ಅಂತಹ ಸಂಸ್ಥೆಗಳನ್ನು ಅವಲಂಬಿಸಿಕೊಳ್ಳಬಹುದು.
ಸಾಫ್ಟ್ ಸ್ಕಿಲ್ಸ್ ಅಥವಾ ಬಿಸಿನೆಸ್ ಸ್ಕಿಲ್ಸ್ ಕೆಲವು ವೆಬ್‍ಸೈಟ್ ಲಿಂಕ್‍ಗಳು:
*ಆರೆಂಜ್ ಅಕಾಡೆಮಿ 
* ಕಾರ್ಪೆಕ್ಸ್
ಬುಕ್‍ಮೈಟ್ರೈನಿಂಗ್ಸ್
* ಸ್ಕಿಲ್ ತರಬೇತಿದಾರರಾಗಲು ಲಿಂಕ್

* ಪ್ರಸಂಟೇಷನ್ ಸ್ಕಿಲ್ ತರಬೇತುದಾರರನ್ನು ಇಲ್ಲಿ ಹುಡುಕಬಹುದು

ಅಗತ್ಯ ಬಿಸಿನೆಸ್ ಕೌಶಲಗಳು
* ಪ್ರಸಂಟೇಷನ್ ಸ್ಕಿಲ್: ಕಂಪನಿಯಲ್ಲಿ ಉದ್ಯೋಗಿಗಳಿಗೆ ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ವಿವರ ನೀಡುವ ಅವಕಾಶ ಇರುತ್ತದೆ. ಕೆಲವೊಮ್ಮೆ ಎಲ್ಲದರಲ್ಲಿಯೂ ಚತುರನಾಗಿರುವ ವ್ಯಕ್ತಿಯು ಪ್ರಸಂಟೇಷನ್‍ನಲ್ಲಿ ಹಿಂದೆ ಬೀಳುತ್ತಾನೆ. ಈ ಮೂಲಕ ಗಮನ ಸೆಳೆಯಲು ವಿಫಲನಾಗುತ್ತಾನೆ. ಪ್ರಸಂಟೇಷನ್‍ನಲ್ಲಿ ಪಕ್ಕಾ ಆಗಲು ನೀವು ಸಾಕಷ್ಟು ಪ್ರಾಕ್ಟೀಸ್ ಮಾಡಬೇಕು. ಪಿಪಿಟಿ ಪ್ರಸಂಟೇಷನ್ ಇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನರ್ವಸ್ ಆಗಬೇಡಿ. ವೀಕ್ಷಕರ ಜೊತೆ ಮಾತುಕತೆಯಾಡುತ್ತ ಪ್ರಸಂಟೇಷನ್ ಮಾಡಿ. ಯೂಟ್ಯೂಬ್‍ನಲ್ಲಿರುವ ಪಿಪಿಟಿಗಳನ್ನು ನೋಡಿ. ನಿಮಗೆ ಪ್ರಸಂಟೇಷನ್ ಕುರಿತಾದ ಭಯ ಹೋಗಿಲ್ಲವೆಂದಾದರೆ ಪ್ರಸಂಟೇಷನ್ ಸ್ಕಿಲ್ ಕಲಿಸುವ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆಯಿರಿ.
ಸಂವಹನ ಕೌಶಲ: ಈಗ ಸಂವಹನ ಕೌಶಲ ಕಲಿಸುವ ಸಾಕಷ್ಟು ಸಂಸ್ಥೆಗಳು ನೀವಿರುವ ಪ್ರದೇಶದಲ್ಲೇ ದೊರಕಬಹುದು. ಆದಷ್ಟು, ಇತರರ ಜೊತೆ ಮಾತನಾಡಿ. ಕನ್ನಡಿಯ ಮುಂದೆ ಮಾತನಾಡುತ್ತ, ನಿಮ್ಮ ಹಾವಭಾವ ಗಮನಿಸಿ. ಕಮ್ಯುನಿಕೇಷನ್ ಕೌಶಲ ಕಲಿಸುವ ಅಲ್ಪಾವಧಿ ಕೋರ್ಸ್‍ಗಳನ್ನು ಮಾಡಿ. ಆದಷ್ಟು, ಚರ್ಚೆ, ಗೋಷ್ಠಿಗಳಲ್ಲಿ ಭಾಗವಹಿಸಿ.
ಆಲಿಸುವ ಕಲೆ: ನೀವು ಉತ್ತಮ ಮಾತುಗಾರನಾಗುವ ಜೊತೆಗೆ ಉತ್ತಮ ಕೇಳುಗನಾಗಬೇಕು. ನಿಮ್ಮ ಎದುರಿನಲ್ಲಿರುವ ವ್ಯಕ್ತಿ ಮಾತನಾಡುತ್ತಿರುವಾಗ ಸಂಯಮದಿಂದ ಆಲಿಸಿ. ಅವರು ಮಾತು ಮುಗಿಸಿದ ನಂತರ ಮಾತನಾಡಿ.
* ಭಾವನೆಯ ನಿರ್ವಹಣೆ: ಎಂತಹ ಪರಿಸ್ಥಿತಿಯಲ್ಲೂ ಕುಗ್ಗದೆ ಭಾವನಾತ್ಮಕವಾಗಿ ಸಕಾರಾತ್ಮಕವಾಗಿರುವಂತಹ ವ್ಯಕ್ತಿತ್ವ ಸಹ ಬಿಸಿನೆಸ್ ಕೌಶಲದಲ್ಲಿ ಅಗತ್ಯವಾಗಿದೆ.
ತೊಂದರೆ ನಿವಾರಣೆ: ಕೆಲಸ ಮಾಡುವಾಗ ಬಿಸಿನೆಸ್‍ಗೆ ಸಂಬಂಧಪಟ್ಟ ಹಲವು ತೊಂದರೆಗಳು ಎದುರಾಗಬಹುದು. ಅಂತಹ ತೊಂದರೆಗಳನ್ನು ಕೌಶಲದಿಂದ ಬಗೆಹರಿಸಲು ತಿಳಿದಿರಬೇಕಾಗುತ್ತದೆ.

*ಕ್ರಿಯಾತ್ಮಕವಾಗಿರುವುದು ಮತ್ತು ಅನ್ವೇಷಣಾ ಮನೋಭಾವ.

* ಸಹೋದ್ಯೋಗಿಗಳಿಗೆ ತರಬೇತಿ ನೀಡುವ ಸಾಮಥ್ರ್ಯ.

* ಕೆಲಸವನ್ನು ಹೊಸ ರೀತಿಯಿಂದ ಸುಲಭವಾಗಿ ಮಾಡಲು ಪ್ರಯತ್ನಿಸುವುದು.

ತಂಡದ ಜೊತೆ ಕಾರ್ಯನಿರ್ವಹಿಸುವ ಸಾಮಥ್ರ್ಯ.

ಪ್ರಾಜೆಕ್ಟ್ ನಿರ್ವಹಣೆ ಸಾಮಥ್ರ್ಯ.
ವೆಬ್‍ ಡಿಸೈನರ್ ಆಗುವುದು ಹೇಗೆ?

ವೆಬ್‍ ಡಿಸೈನರ್ ಆಗುವುದು ಹೇಗೆ?

ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿ ಮುಂದೇನೂ ಎಂದು ಆಲೋಚಿಸುತ್ತಿರುವ ಕಂಪ್ಯೂಟರ್ ಆಸಕ್ತರು ವೆಬ್ ಡಿಸೈನಿಂಗ್‍ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ. 
* ಪ್ರವೀಣ್ ಚಂದ್ರ ಪುತ್ತೂರು

ಎಲ್ಲವೂ ಆನ್‍ಲೈನ್‍ಮಯವಾಗುತ್ತಿರುವ ಈ ಪರ್ವಕಾಲದಲ್ಲಿ ವೆಬ್‍ಸೈಟ್ ವಿನ್ಯಾಸಕರಿಗೂ ಭಾರೀ ಡಿಮ್ಯಾಂಡ್. ವೆಬ್‍ಸೈಟ್ ವಿನ್ಯಾಸ ಮಾಡಲು ಕಂಪ್ಯೂಟರ್ ಸೈನ್ಸೇ ಓದಬೇಕೆಂದಿಲ್ಲ. ದುಬಾರಿ ಅನಿಮೇಷನ್ ಕೋರ್ಸಿಗೂ ಸೇರಬೇಕೆಂದಿಲ್ಲ. ಅಲ್ಪಾವಧಿಯಲ್ಲಿ ಕೇವಲ ವೆಬ್ ವಿನ್ಯಾಸವನ್ನು ಮಾತ್ರ ಕಲಿಸುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದಾಗಿದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ಕೆಲವು ಕಂಪನಿಗಳು ನಿಮ್ಮನ್ನು ವೆಬ್ ಡೆವಲಪರ್, ವೆಬ್‍ಸೈಟ್ ಪೆÇ್ರಗ್ರಾಮರ್ ಆಗಿ ಕೆಲಸಕ್ಕೆ ತೆಗೆದುಕೊಳ್ಳಬಹುದು.
ಸರ್ಟಿಫಿಕೇಷನ್ ಬೇಕಿಲ್ಲವೆಂದರೆ ಇಂಟರ್‍ನೆಟ್‍ನಲ್ಲಿ ಉಚಿತವಾಗಿ ವೆಬ್ ವಿನ್ಯಾಸ ಕಲಿಸುವ ಟ್ಯುಟೋರಿಯಲ್‍ಗಳಿಗೆ ಸೇರಬಹುದು. ನೆಟ್‍ನಲ್ಲಿ ವೆಬ್ ಮಾಸ್ಟರ್ ಆಗಲು ತರಬೇತಿ ನೀಡುವ ಸಾಕಷ್ಟು ವಿಡಿಯೋಗಳು, ಪಠ್ಯಗಳೂ ದೊರಕುತ್ತವೆ. ಆನ್‍ಲೈನ್ ಅಥವಾ ಆಫ್‍ಲೈನ್ ಪುಸ್ತಕದಂಗಡಿಗೆ ಹೋಗಿ ವೆಬ್ ಡಿಸೈನ್ ಕುರಿತಾದ ಪುಸ್ತಕಗಳನ್ನೂ ಓದಿಯೂ ವೆಬ್ ವಿನ್ಯಾಸದಲ್ಲಿ ಪರಿಣತಿ ಪಡೆಯಬಹುದು.

download bigbasket app and earn points :-) link 

ವೆಬ್ ಮಾಸ್ಟರ್‍ಗೆ ಬೇಡಿಕೆ
ಬಹುತೇಕ ಜನರಿಂದು ಇಂಟರ್‍ನೆಟ್ ಬಳಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ, ಜಿಮ್, ಶಿಕ್ಷಣ ಸಂಸ್ಥೆಗಳು, ಸುದ್ದಿತಾಣಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಸ್ವಂತ ವೆಬ್‍ಸೈಟ್ ಹೊಂದಲು ಆಸಕ್ತಿ ವಹಿಸುತ್ತಾರೆ. ಇ-ಕಾಮರ್ಸ್, ಇಂಟರ್‍ನೆಟ್ ಸುದ್ದಿ ವೆಬ್‍ಸೈಟ್ ಸೇರಿದಂತೆ ವೆಬ್‍ಸೈಟ್ ಅವಲಂಬಿತ ಕಂಪನಿಗಳಲ್ಲಿಯೂ ವೆಬ್‍ಸೈಟ್ ಡಿಸೈನರ್‍ಗಳಿಗೆ ಬೇಡಿಕೆಯಿದೆ. ಗೋಡ್ಯಾಡಿ.ಕಾಮ್‍ನಂತಹ ತಾಣಗಳಲ್ಲಿ ಅನುಭವ ಇಲ್ಲದವರೂ ವೆಬ್‍ಸೈಟ್ ರಚಿಸಬಹುದಾದರೂ ಪೆÇ್ರಫೆಷನಲ್ ವೆಬ್‍ಸೈಟ್ ವಿನ್ಯಾಸಕರಿಗೆ ಬೇಡಿಕೆ ಕಡಿಮೆಯಾಗಿಲ್ಲ. ನಿಮ್ಮಲ್ಲಿ ಅತ್ಯುತ್ತಮ ಕ್ರಿಯೇಟಿವಿಟಿ ಇದ್ದರಂತೂ ಗ್ರಾಹಕರನ್ನು ಪಡೆಯುವುದು ಕಷ್ಟವಲ್ಲ. ಪಾರ್ಟ್‍ಟೈಮ್ ಆಗಿಯೂ ಈ ಕ್ಷೇತ್ರದಲ್ಲಿ ದುಡಿಯಬಹುದು. ವೆಬ್‍ಡಿಸೈನ್ ಕಂಪನಿಯಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳಬಹುದು. ನಿಮ್ಮಲ್ಲಿ ಸ್ವ ಉದ್ಯೋಗ ಮಾಡುವ ಮನಸ್ಸು ಇದ್ದರೆ ನಿಮ್ಮ ಊರಿಗೆ ಸಮೀಪವಿರುವ ಪಟ್ಟಣ, ನಗರಗಳಲ್ಲಿ ವೆಬ್ ಡಿಸೈನ್ ಸಂಸ್ಥೆಯನ್ನೂ ತೆರೆಯಬಹುದು.

ಏನಿದು ವೆಬ್ ಡಿಸೈನ್ ಪೆÇ್ರೀಗ್ರಾಮ್?
ಇಂತಹ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ವೆಬ್‍ಸೈಟ್ ನಿರ್ಮಿಸುವುದು ಹೇಗೆಂಬುದನ್ನು ಕಲಿಸಿಕೊಡುತ್ತಾರೆ. ಹೈಪರ್‍ಟೆಕ್ಸ್ಟ್ ಪ್ರಿಪೆÇ್ರಸೆಸರ್(ಪಿಎಚ್‍ಪಿ), ಹೈಪರ್‍ಟೆಕ್ಸ್ಟ್ ಮಾರ್ಕ್- ಅಪ್ ಲ್ಯಾಂಗ್ವೇಜ್(ಎಚ್‍ಟಿಎಂಎಲ್) ಮತ್ತು ಕ್ಯಾಸ್‍ಕ್ಯಾಡಿಂಗ್ ಸ್ಟೈಲ್ ಶೀಟ್ಸ್(ಸಿಎಸ್‍ಎಸ್) ಇತ್ಯಾದಿಗಳನ್ನು ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ. ನೀವು ಎಷ್ಟು ತಿಂಗಳ ಅವಧಿಯ ಕೋರ್ಸ್ ಮಾಡುವಿರೋ ಎಂಬುದರ ಮೇಲೆ ವೆಬ್ ಡಿಸೈನ್ ಕಲಿಕೆಯ ಸಬ್ಜೆಕ್ಟ್‍ಗಳು ಇರುತ್ತವೆ. ಕೆಲವೊಮ್ಮೆ ಪ್ರತಿಯೊಂದು ವಿಷಯಗಳಿಗೂ ಪ್ರತ್ಯೇಕ ಪ್ರತ್ಯೇಕ ಸರ್ಟಿಫಿಕೇಷನ್‍ಗಳಿರುತ್ತವೆ. ಅಂದರೆ, ಫ್ರೀಲ್ಯಾನ್ಸ್ ವೆಬ್ ಡಿಸೈನರ್, ಗ್ರಾಫಿಕ್ ಡಿಸೈನರ್, ವೆಬ್ ಅನಿಮೇಷನ್ ಕ್ರೀಯೆಟರ್, ವೆಬ್ ಡೆವಲಪರ್, ಪಿಎಚ್‍ಪಿ ಆ್ಯಂಡ್ ಸಿಎಸ್‍ಎಸ್ ಡೆವಲಪರ್ ಇತ್ಯಾದಿ ಕೋರ್ಸ್‍ಗಳನ್ನು ಮಾಡಬಹುದು.

ಎಲ್ಲಿ ಕಲಿಯಬಹುದು?
ರಾಜ್ಯದಲ್ಲಿ ವೆಬ್ ಡಿಸೈನ್ ಕಲಿಸುವ ಹಲವು ಶಿಕ್ಷಣ ಸಂಸ್ಥೆಗಳಿವೆ. ಬೆಂಗಳೂರಿನಲ್ಲಿ ಹಲವು ಬ್ರಾಂಚ್‍ಗಳನ್ನು ಹೊಂದಿರುವ ಆಪ್ಟೆಕ್ ಕಂಪ್ಯೂಟರ್ ಎಜುಕೇಷನ್ ಸಹ ವೆಬ್ ಡಿಸೈನರ್/ಡೆವಲಪ್‍ಮೆಂಟ್ ವಿಷಯದಲ್ಲಿ `ಎಸಿಡಬ್ಲ್ಯುಡಿ ಪೆÇ್ರ' ಎಂಬ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್ ನಡೆಸುತ್ತದೆ. ಪಿಯುಸಿ, ಪದವಿ ವಿದ್ಯಾರ್ಥಿಗಳು ಈ ಸರ್ಟಿಫಿಕೇಷನ್ ಪಡೆಯಬಹುದು. ಎಚ್‍ಟಿಎಂಎಲ್5, ಜಾವಾ ಸ್ಕ್ರಿಪ್ಟ್, ಸಿಎಸ್‍ಎಸ್3 ಪಿಎಚ್‍ಪಿ ಆ್ಯಂಡ್ ಮೈಎಸ್‍ಕ್ಯೂಎಲ್ ಇತ್ಯಾದಿ ಪೆÇ್ರಗ್ರಾಮಿಂಗ್ ಭಾಷೆಗಳನ್ನು ಕಲಿಸಿ ವೆಬ್‍ಸೈಟ್ ನಿರ್ಮಿಸುವುದನ್ನು ಕಲಿಯಬಹುದು. ಇದು 7 ತಿಂಗಳ ಕೋರ್ಸ್. ವಾರಕ್ಕೆ ಮೂರು ದಿನಗಳಂತೆ ದಿನಕ್ಕೆ ಎರಡು ಗಂಟೆÉ ಈ ಕೋರ್ಸ್ ಇರುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್ ಲಿಂಕ್
ಬೆಂಗಳೂರಿನಲ್ಲಿ ಅರೆನಾ ಮಲ್ಟಿಮೀಡಿಯಾವೂ ಪಿಯುಸಿ/ಕಾಲೇಜು ವಿದ್ಯಾರ್ಥಿಗಳಿಗೆ ಅಥವಾ ಆಸಕ್ತರಿಗೆ 10 ತಿಂಗಳ ಶಾರ್ಟ್‍ಟರ್ಮ್ ವೆಬ್ ಡಿಸೈನ್ ಕೋರ್ಸ್ ನಡೆಸುತ್ತದೆ. ವಾರಕ್ಕೆ ಮೂರು ದಿನ, ದಿನಕ್ಕೆ ಎರಡು ಗಂಟೆಯಂತೆ ಈ ಕೋರ್ಸ್ ಇರುತ್ತದೆ. ಹೆಚ್ಚುವರಿ ಗಂಟೆಗಳ ಕ್ಲಾಸ್ ತೆಗೆದುಕೊಂಡು ಕೋರ್ಸ್ ಅನ್ನು ಬೇಗ ಮುಗಿಸಲೂ ಅವಕಾಶವಿದೆ. ಮಾಹಿತಿಗೆ ವೆಬ್‍ಲಿಂಕ್
ಬೆಂಗಳೂರಿನ ಇಂಟರ್‍ನೆಟ್ ಅಕಾಡೆಮಿಯೂ ವೆಬ್ ಡೆವಲಪ್‍ಮೆಂಟ್ ಕೋರ್ಸ್‍ಗಳನ್ನು ನಡೆಸಿಕೊಡುತ್ತದೆ. ಸುಮಾರು ಒಂದೂವರೆ ತಿಂಗಳ ಕೋರ್ಸ್ ಇದಾಗಿದೆ. ಮೊಬೈಲ್ ವೆಬ್‍ಸೈಟ್ ನಿರ್ಮಾಣ ಕಲಿಕೆಯನ್ನು ಒಳಗೊಂಡ `ರೆಸ್ಪಾನ್ಸಿವ್ ವೆಬ್ ಡೆವಲಪ್‍ಮೆಂಟ್' ಕೋರ್ಸ್ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ಲಿಂಕ್

ಮೈಸೂರಿನಲ್ಲಿರುವ ಟೂನ್2 ಮಲ್ಟಿಮೀಡಿಯಾ ಸ್ಕೂಲ್‍ನಲ್ಲಿ ವೆಬ್ ಡಿಸೈನ್‍ನಲ್ಲಿ ಶಾರ್ಟ್‍ಟರ್ಮ್ ಕೋರ್ಸ್‍ಗಳಿವೆ. ಮಾಸ್ಟರ್ ಇನ್ ವೆಬ್ ಡಿಸೈನ್ 7 ತಿಂಗಳ ಕೋರ್ಸ್. ಪೆÇ್ರಫೆಷನಲ್ ಇನ್ ವೆಬ್ ಡಿಸೈನ್ ಕೋರ್ಸ್ 4 ತಿಂಗಳಾದ್ದಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್

ಮೈಸೂರಿನ ಅನಿಫ್ರೇಮ್ಸ್ ಸಹ ಸರ್ಟಿಫಿಕೇಟ್ ಇನ್ ಗ್ರಾಫಿಕ್ ಆ್ಯಂಡ್ ವೆಬ್ ಡಿಸೈನ್ ಕೋರ್ಸ್ ನಡೆಸುತ್ತಿದೆ. ಎಸ್‍ಎಸ್‍ಎಲ್‍ಸಿ ಪಾಸ್/ಫೇಲ್ ಆದವರು ಈ ಕೋರ್ಸ್ ಮಾಡಬಹುದು. ಇದು 15 ತಿಂಗಳ ಕೋರ್ಸ್. ವೆಬ್‍ಲಿಂಕ್

ಪಕ್ಕದ ರಾಜ್ಯವಾಗಿರುವ ಚೆನ್ನೈನಲ್ಲಿರುವ ವಿಎಫ್‍ಎಕ್ಸ್ ಮೀಡಿಯಾ ಆ್ಯಂಡ್ ಡಿಸೈನ್ ಸಂಸ್ಥೆಯು ವೆಬ್ ಡಿಸೈನ್ ಕುರಿತಾದ 9 ತಿಂಗಳ ಶಾರ್ಟ್‍ಟರ್ಮ್ ಕೋರ್ಸ್ ನಡೆಸುತ್ತದೆ. ಇದು ಐಎಒ ಸರ್ಟಿಫಿಕೇಷನ್ ಅಂಗೀಕೃತ ಸರ್ಟಿಫಿಕೇಷನ್ ಆಗಿದೆ. ಎಸ್‍ಎಸ್‍ಎಲ್‍ಸಿ/ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಿ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಲಿಂಕ್
ಇವು ಕೆಲವು ವೆಬ್ ಡಿಸೈನ್ ಕಲಿಸುವ ಸಂಸ್ಥೆಗಳ ವಿವರವಾಗಿದೆ. ನಿಮ್ಮ ಊರಿಗೆ ಸಮೀಪದಲ್ಲಿ ಯಾವೆಲ್ಲ ಸಂಸ್ಥೆ ವೆಬ್ ಡಿಸೈನ್ ಕಲಿಸುತ್ತದೆ ಎಂದು ತಿಳಿದುಕೊಳ್ಳಿ. ಅಲ್ಲಿರುವ ಮೂಲಸೌಕರ್ಯಗಳನ್ನು ನೋಡಿ ಜಾಯಿನ್ ಆಗಬಹುದು.

ಆನ್‍ಲೈನ್‍ನಲ್ಲಿ ಕಲಿಯಿರಿ
ಆನ್‍ಲೈನ್‍ನಲ್ಲೇ ವೆಬ್ ಡಿಸೈನ್ ಕಲಿಸುವ ಹಲವು ತಾಣಗಳು ಇವೆ. ಡಾಲರ್ ರೂಪದಲ್ಲಿ ಹಣ ನೀಡಲು ಸಿದ್ಧವಿದ್ದರೆ ವಿದೇಶಿ ವೆಬ್‍ತಾಣಗಳಿಂದಲೂ ಸರ್ಟಿಫಿಕೇಷನ್ ಪಡೆದುಕೊಳ್ಳಬಹುದು. ದೇಶದ ಕೆಲವು ಸಂಸ್ಥೆಗಳೂ ಇಂತಹ ಆನ್‍ಲೈನ್ ಕೋರ್ಸ್ ನಡೆಸುತ್ತವೆ. ಉಚಿತವಾಗಿ ವೆಬ್ ಡಿಸೈನ್ ಕಲಿಯುವ ಅವಕಾಶವನ್ನೂ ಕೆಲವು ವೆಬ್ ತಾಣಗಳು ಒದಗಿಸುತ್ತವೆ. ಇಂತಹ ಬಹುವೈವಿಧ್ಯತೆಯ ಆನ್‍ಲೈನ್ ವೆಬ್ ಡಿಸೈನ್ ಕಲಿಕಾ ತಾಣಗಳ ಲಿಂಕ್‍ಗಳು ಇಲ್ಲಿವೆ. ಆರಂಭಿಕರು ಉಚಿತ ತಾಣಗಳಲ್ಲಿ ಕಲಿತು ಮುಂದುವರೆಯುವುದು ಒಳಿತು.

1

2

3

ವೆಬ್ ಡಿಸೈನ್ ಪುಸ್ತಕಗಳು
ಪುಸ್ತಕದಂಗಡಿಗೆ ಭೇಟಿ ನೀಡಿದರೆ ವೆಬ್ ಡಿಸೈನ್‍ಗೆ ಸಂಬಂಧಿಸಿದ ಹಲವು ಪುಸ್ತಕಗಳು ದೊರಕುತ್ತವೆ. ಮೊದಲಿಗೆ ಬೇಸಿಕ್ ಕಲಿಸುವ ಪುಸ್ತಕ ಓದಿರಿ. ನಂತರ ಪೂರ್ಣ ಪ್ರಮಾಣದ ವೆಬ್ ಡಿಸೈನ್ ಪುಸ್ತಕ ಓದಿ. ಇಂಟರ್‍ನೆಟ್‍ನಲ್ಲಿ ಕೆಲವು ಉಚಿತ ಇ-ಬುಕ್‍ಗಳು ಸಿಗುತ್ತವೆ.
ವೆಬ್ ಡಿಸೈನ್ ಕಲಿಕೆಗೆ 15 ಉಚಿತ ಪುಸ್ತಕಗಳು
50 ಉಚಿತ ಪುಸ್ತಕಗಳು:

ಆನ್‍ಲೈನ್ ಅಂಗಡಿಗಳಿಗೆ ಹೋಗಿ ಅಲ್ಲಿ ಪುಸ್ತಕ ಎಂಬ ಕೆಟಗರಿಗೆ ಹೋಗಿ ಸರ್ಚ್ ಆಯ್ಕೆ ಇರುವಲ್ಲಿ ವೆಬ್ ಡಿಸೈನ್ ಎಂದು ಸರ್ಚ್ ಕೊಟ್ಟರೆ ಹಲವು ಪುಸ್ತಕಗಳು ಬರುತ್ತವೆ. ನಿಮ್ಮ ಊರಿಗೆ ಈ ತಾಣಗಳ ಸೇವೆಗಳು ಲಭ್ಯ ಇವೆಯೇ ಎಂದು ತಿಳಿದುಕೊಂಡು ಖರೀದಿಸಿರಿ.
ಲಿಂಕ್‍ಗಳು:

1

2

3

CAD and CAM Certification read