Showing posts with label commerce corner. Show all posts
Showing posts with label commerce corner. Show all posts

Thursday, 9 November 2017

ಷೇರುಪೇಟೆ ಉದ್ಯೋಗಕ್ಕೆ ಸರ್ಟಿಫಿಕೇಟ್ ಕೋರ್ಸ್

ಷೇರುಪೇಟೆ ಉದ್ಯೋಗಕ್ಕೆ ಸರ್ಟಿಫಿಕೇಟ್ ಕೋರ್ಸ್

ಬಿ.ಕಾಂ., ಎಂ.ಕಾಂ., ಎಂಬಿಇ ಇತ್ಯಾದಿ ಕಾಮರ್ಸ್ ಅಥವಾ ಮ್ಯಾನೇಜ್‍ಮೆಂಟ್ ಶಿಕ್ಷಣ ಪಡೆದ ನಂತರ ಷೇರು ಮಾರುಕಟ್ಟೆ ಸಂಬಂಧಿ ಉದ್ಯೋಗ ಪಡೆಯಲು ನೆರವು ನೀಡುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳ ವಿವರ ಇಲ್ಲಿದೆ.

  • ಪ್ರವೀಣ್ ಚಂದ್ರ ಪುತ್ತೂರು

ಕಾಮರ್ಸ್ ಸಂಬಂಧಿತ ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಜಾಬ್ ಆಯ್ಕೆಯ ಸಮಯದಲ್ಲಿ ಒಂದಿಷ್ಟು ಗೊಂದಲವಿರುತ್ತದೆ. ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಮುಂದುವರೆಯುವುದೇ? ಮಾರ್ಕೆಟಿಂಗ್ ಫೀಲ್ಡ್‍ಗೆ ಹೋಗಬಹುದೇ? ಅಕೌಂಟೆಟ್, ಸೇಲ್ಸ್, ಟ್ಯಾಕ್ಸ್ ಪ್ಲಾನಿಂಗ್... ಹೀಗೆ ಯಾವ ವಿಭಾಗದ ಜಾಬ್‍ಗೆ ಅಪ್ಲೈ ಮಾಡಲಿ ಎಂಬ ಸಂದಿಗ್ಧತೆ ಇರಬಹುದು. ಪಾಲಿಗೆ ಬಂದದ್ದು ಪಂಚಾಮೃತ ಎಂದು ಸಿಕ್ಕ ಜಾಬ್‍ಗೆ ಹೋಗಿ ಸೇರಿದರೆ ನಂತರ ಬೇರೆ ಫೀಲ್ಡ್‍ನಲ್ಲಿ ಅವಕಾಶ ಸಿಗದೆ ಪರಿತಪಿಸಬೇಕಾಗಬಹುದು. ಇದರ ಬದಲು ಇವುಗಳಲ್ಲಿ ಯಾವುದಾದರೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಕಡಿಮೆ ಅವಧಿಯ ಸರ್ಟಿಫಿಕೇಷನ್ ಕೋರ್ಸ್ ಪಡೆದರೆ ಹೋಗುವ ಹಾದಿಯು ನಿಶ್ಚಿತವಾಗಿರುತ್ತದೆ. ಅವಕಾಶಗಳೂ ಸುಲಭವಾಗಿ ದೊರಕುತ್ತದೆ. ಈ ಲೇಖನದಲ್ಲಿ ಷೇರುಪೇಟೆ ಸಂಬಂಧಿತ ಉದ್ಯೋಗ ಪಡೆದುಕೊಳ್ಳಲು ನೆರವಾಗುವ ಶಾರ್ಟ್ ಟರ್ಮ್ ಕೋರ್ಸ್‍ಗಳ ವಿವರ ಇಲ್ಲಿದೆ.
ಷೇರುಪೇಟೆ ಸಂಬಂಧಿತ ಜಾಬ್ ಹೆಚ್ಚಿನವರಿಗೆ ಅಚ್ಚುಮೆಚ್ಚು. ಸೆನ್ಸೆಕ್ಸ್ ಗೂಳಿ ಕರಡಿ ಕುಣಿತಕ್ಕೆ ತಕ್ಕಂತೆ ಗ್ರಾಹಕರನ್ನು ನಿರ್ವಹಿಸುವ ಪಾತ್ರವದು. ಷೇರು ವಹಿವಾಟಿಗೆ ಸಾಥ್ ನೀಡುವ ಬ್ರೋಕಿಂಗ್ ಹೌಸ್‍ಗಳು, ಸೆಕ್ಯುರಿಟೀಸ್ ಕಂಪನಿಗಳು ಷೇರುಪೇಟೆಯ ಜ್ಞಾನವಿರುವ ಚತುರರನ್ನು ನೇಮಿಸಿಕೊಳ್ಳುತ್ತವೆ. ಅಲ್ಲಿ ಈಕ್ವಿಟಿ ಡೀಲರ್, ಟ್ರೇಡ್ ಎಕ್ಸಿಕ್ಯೂಟಿವ್ಸ್, ವೆಬ್ ಅಸಿಸ್ಟ್ ಡೀಲರ್ಸ್, ಷೇರ್ ಕನ್ಸಲ್ಟೆಂಟ್ ಸೇರಿದಂತೆ ಹಲವು ಬಗೆಯ ಉದ್ಯೋಗಾವಕಾಶಗಳಿವೆ. ಇಲ್ಲಿ ಮಾತ್ರವಲ್ಲದೆ ಷೇರು ವಿನಿಮಯ ಕೇಂದ್ರಗಳಲ್ಲಿಯೂ ಅವಕಾಶ ಪಡೆಯಲು ಇಂತಹ ಕೋರ್ಸ್‍ಗಳು ನೆರವಾಗಬಹುದು.
ನಿಮ್ಮಲ್ಲಿ ಕಾಮರ್ಸ್ ಪದವಿ, ಸ್ನಾತಕೋತ್ತರ ಪದವಿ ಇದ್ದರೂ ಕೆಲವೊಮ್ಮೆ ಇಂತಹ ಷೇರು ಸಂಸ್ಥೆಗಳು ಕೆಲವೊಮ್ಮೆ ಕೆಲಸ ಕೊಡದಿರಬಹುದು. ಇಂತಹ ಸಂದರ್ಭದಲ್ಲಿ ಸ್ಟಾಕ್ ಮಾರ್ಕೆಟ್ ಸಂಬಂಧಿತ ಸರ್ಟಿಫಿಕೇಷನ್ ಕೋರ್ಸ್‍ಗಳ ನೆರವಿಗೆ ಬರಬಹುದು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್‍ಎಸ್‍ಇ ಮತ್ತು ಮುಂಬೈ ಷೇರುಪೇಟೆ ಬಿಎಸ್‍ಇ ಸಹ ಇತರ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾರ್ಟ್ ಟರ್ಮ್ ಕೋರ್ಸ್‍ಗಳನ್ನು ನಡೆಸಿ ಸರ್ಟಿಫಿಕೇಟ್‍ಗಳನ್ನು ಕೊಡುತ್ತವೆ. ಆನ್‍ಲೈನ್‍ನಲ್ಲೂ ಇಂತಹ ಕೋರ್ಸ್‍ಗಳನ್ನು ಕಲಿಯುವ ಅವಕಾಶವಿದೆ.

ಕ್ಲಾಸ್‍ರೂಂ ಕೋರ್ಸ್
ಎನ್‍ಎಸ್‍ಇ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು ಈ ನಿಟ್ಟಿನಲ್ಲಿ ಸರ್ಟಿಫೈಡ್ ಕ್ಯಾಪಿಟಲ್ ಮಾರ್ಕೆಟ್ ಪೆÇ್ರಫೆಷನಲ್(ಎನ್‍ಸಿಸಿಎಂಪಿ) ಎಂಬ ಕ್ಲಾಸ್ ರೂಂ ಕೋರ್ಸ್ ನಡೆಸುತ್ತದೆ. ಇದು 100 ಗಂಟೆ ಕೋರ್ಸ್. ಅಂದರೆ, 3-4 ತಿಂಗಳ ಅವಧಿಯದ್ದಾಗಿದೆ. ಈ ಅವಧಿಯಲ್ಲಿ ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿದ ಥಿಯರಿ ಮತ್ತು ಪ್ರಾಕ್ಟಿಕಲ್ ಕ್ಲಾಸ್‍ಗಳಿರುತ್ತವೆ. ಈ ಕೋರ್ಸ್‍ನಲ್ಲಿ ಪಾಸಾದವರಿಗೆ ಎನ್‍ಎಸ್‍ಇ ಮತ್ತು ಕೋರ್ಸ್ ನೀಡಿರುವ ಶಿಕ್ಷಣ ಸಂಸ್ಥೆ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ. ಈಕ್ವಿಟಿ ಮಾರುಕಟ್ಟೆ, ಡೆಪ್ಟ್ ಮಾರ್ಕೆಟ್, ಡಿರೈವಿಟಿವ್ಸ್, ಮ್ಯಾಕ್ರೊ ಎಕಾನಮಿಕ್ಸ್, ಟೆಕ್ನಿಕಲ್ ಅನಾಲಿಸಿಸ್, ಫಂಡಮೆಂಟಲ್ ಅನಾಲಿಸಿಸ್ ಸಬ್ಜೆಕ್ಟ್‍ಗಳ ಬಗ್ಗೆ ಈ ಕೋರ್ಸ್‍ನಲ್ಲಿ ತಿಳಿದುಕೊಳ್ಳಬಹುದು.
ಬಿಎಸ್‍ಇ: ಮುಂಬೈ ಷೇರು ವಿನಿಮಯ ಕೇಂದ್ರ ಬಿಎಸ್‍ಇ ತನ್ನದೇ ವಿದ್ಯಾಸಂಸ್ಥೆಯನ್ನು ಹೊಂದಿದೆ. ಬಿಎಸ್‍ಇ ಇನ್‍ಸ್ಟಿಟ್ಯೂಟ್ ಲಿಮಿಟೆಡ್‍ನಲ್ಲಿ ಷೇರುಪೇಟೆಗೆ ಸಂಬಂಧಿಸಿದ ಕಡಿಮೆ ಅವಧಿಯ ಮತ್ತು ದೀರ್ಘಾವಧಿಯ ಕೋರ್ಸ್‍ಗಳಿವೆ. ಅಲ್ಲಿ 3 ತಿಂಗಳ ಅವಧಿಯ ಷೇರುಪೇಟೆಯ ಬೇಸಿಕ್ ಕೋರ್ಸ್‍ಗೆ ಸರ್ವೀಸ್ ಟ್ಯಾಕ್ಸ್ ಸೇರಿಸದೆ 8,250 ರೂಪಾಯಿ ಶುಲ್ಕವಿದೆ. ಸರ್ಟಿಫಿಕೇಟ್ ಆನ್ ಕ್ಯಾಪಿಟಲ್ ಮಾರ್ಕೆಟ್ ಕೋರ್ಸ್‍ನಲ್ಲಿ ಷೇರುಪೇಟೆಯ ಬಗ್ಗೆ ವಿಸ್ತೃತವಾಗಿ ಕಲಿಯಬಹುದು. ಈ ಕೋರ್ಸ್‍ಗೆ ಫೈನಾನ್ಸಿಯಲ್ ಇನ್‍ಸ್ಟಿಟ್ಯೂಷನ್ಸ್ ಮತ್ತು ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಯುಜಿಸಿ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಅಂಕ ಪಡೆದವರು ಈ ಕೋರ್ಸ್ ಮಾಡಬಹುದು. ಸರ್ವೀಸ್ ಟ್ಯಾಕ್ಸ್ ಸೇರಿಸದೆ ಈ ಕೋರ್ಸ್ ಶುಲ್ಕ 18 ಸಾವಿರ ರೂ. ಇದೆ.

ಆನ್‍ಲೈನ್ ಕೋರ್ಸ್
ಆನ್‍ಲೈನ್‍ನಲ್ಲೂ ಷೇರುಪೇಟೆ ಸಂಬಂಧಿಸಿದ ಇಂತಹ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಮಾಡಬಹುದು.
ಇಲರ್ನ್‍ಮಾರ್ಕೆಟ್ಸ್: ಎನ್‍ಎಸ್‍ಇ ಅಂಗೀಕೃತ ಇಲರ್ನ್‍ಮಾರ್ಕೆಟ್ ವೆಬ್‍ಸೈಟ್‍ನಲ್ಲಿ ಇಂತಹ ಕೋರ್ಸ್‍ಗಳಿವೆ. ಇಲ್ಲಿ 83ಕ್ಕೂ ಹೆಚ್ಚು ಬೋಧನಾ ವಿಷಯಗಳು, 100ಕ್ಕೂ ಹೆಚ್ಚು ಬೋಧನಾ ವಿಡಿಯೋಗಳಿವೆ. ಷೇರುಪೇಟೆಯ ಬೇಸಿಕ್ಸ್ ವಿಷಯಗಳಿಂದ ಸಮಗ್ರ ಅಧ್ಯಯನದವರೆಗೆ ಕಲಿಯುವ ಅವಕಾಶವಿದೆ. ಆನ್‍ಲೈನ್ ಕೋರ್ಸ್‍ನಲ್ಲಿ ಎನ್‍ಎಸ್‍ಇ ಸರ್ಟಿಫಿಕೇಟ್ ಮಾತ್ರವಲ್ಲದೆ ಇತರ ಜಾಬ್ ಓರಿಯೆಂಟೆಡ್ ಸರ್ಟಿಫಿಕೇಟ್ ದೊರಕುತ್ತದೆ. ಪ್ರತಿಯೊಂದು ಚಾಪ್ಟರ್ ಮುಗಿದ ನಂತರ ಆನ್‍ಲೈನ್ ಪರೀಕ್ಷೆ ಸಹ ನಡೆಯುತ್ತದೆ. ಪಾಸಾದರೆ ಸರ್ಟಿಫಿಕೇಟ್ ನಿಮ್ಮದಾಗುತ್ತದೆ.
ಐಐಟ್ರೇಡ್: ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಐಐಟ್ರೇಡ್ ವೆಬ್‍ಸೈಟ್‍ನಲ್ಲಿ ಮೂರು ಹಂತದ ಕೋರ್ಸ್‍ಗಳಿವೆ. ಲೆವೆಲ್ 1ರಲ್ಲಿ ಫೈನಾನ್ಸಿಯಲ್ ಮಾರ್ಕೆಟ್ಸ್, ಮ್ಯೂಚುಯಲ್ ಫಂಡ್ಸ್ ಬಗ್ಗೆ ತಿಳಿದುಕೊಳ್ಳಬಹುದು. ಲೆವೆಲ್ 2ನಲ್ಲಿ ಬಂಡವಾಳ ಮಾರುಕಟ್ಟೆ, ಕರೆನ್ಸಿ ಮಾರುಕಟ್ಟೆ, ಕಮಾಡಿಟಿ ಮಾರುಕಟ್ಟೆ, ಡಿರೈಟಿವ್ ಮಾರ್ಕೆಟ್, ಫೈನಾನ್ಸಿಯಲ್ ಅಡ್ವೈಸರಿ ಸರ್ವೀಸಸ್ ಬಗ್ಗೆ ಕೋರ್ಸ್ ಮಾಡಬಹುದು. ಮೂರನೇ ಲೆವೆಲ್‍ನಲ್ಲಿ ಅನಾಲಿಸ್ಟ್ ಸಂಬಂಧಿಸಿದ ಕೋರ್ಸ್‍ಗಳಿವೆ. ಇದರಲ್ಲಿ ಸರ್ಟಿಫೈಡ್ ಈಕ್ವಿಟಿ ಅನಾಲಿಸ್ಟ್, ಸರ್ಟಿಫೈಡ್ ಟೆಕ್ನಿಕಲ್ ಅನಾಲಿಸ್ಟ್ ಕೋರ್ಸ್‍ಗಳಿವೆ. ಕೊನೆಗೆ ಐಐಟ್ರೇಡ್ ಮತ್ತು ಎನ್‍ಎಸ್‍ಇ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ.
ದಲಾಲ್‍ಸ್ಟ್ರೀಟ್ ಅಕಾಡೆಮಿ: ಈ ಸಂಸ್ಥೆಯೂ ಆನ್‍ಲೈನ್‍ನಲ್ಲಿ ಷೇರುಪೇಟೆ ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿದೆ. ಶುಲ್ಕ 5,500 ರೂಪಾಯಿ. ಕೋರ್ಸ್ ಹೆಸರು ಸರ್ಟಿಫಿಕೇಟ್ ಇನ್ ಸ್ಟಾರ್ಕ್ ಮಾರ್ಕೆಟ್ ಆ್ಯಂಡ್ ಈಕ್ವಿಟಿ ರಿಸರ್ಚ್. ಈ ಕೋರ್ಸ್‍ಗೆ ಈಗಾಗಲೇ ವೃತ್ತಿಯಲ್ಲಿರುವವರು, ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ಸೇರಬಹುದು. ಇಲ್ಲಿ ಒಟ್ಟು ನಾಲ್ಕು ಮಾಡ್ಯುಲ್‍ಗಳಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್ 1ರಲ್ಲಿ ಹೂಡಿಕೆಯ ಬೇಸಿಕ್ಸ್, ಈಕ್ವಿಟಿ ಷೇರುಗಳ ಬಗ್ಗೆ, ಐಪಿಒ, ಸೆಕೆಂಡರಿ ಮಾರ್ಕೆಟ್, ಟ್ರೇಡಿಂಗ್, ಕ್ಲೀಯರಿಂಗ್ ಮತ್ತು ಸಟ್ಲ್‍ಮೆಂಟ್ ಬಗ್ಗೆ ಕಲಿಯಬಹುದು. ಮಾಡ್ಯುಲ್ 2ರಲ್ಲಿ ಎಕಾನಮಿಕ, ಇಂಡಸ್ಟ್ರಿ, ಕಂಪನಿ, ಟೆಕ್ನಿಕಲ್ ಅನಾಲಿಸಿಸ್ ಬಗ್ಗೆ ಕಲಿಯಬಹುದು. ಮಾಡ್ಯುಲ್‍ನಲ್ಲಿ ಷೇರು ಹೂಡಿಕೆ, ಹೂಡಿಕೆದಾರರ ವರ್ತನೆಗಳು, ಆನ್‍ಲೈನ್ ವಹಿವಾಟು, ಶಾರ್ಟ್ ಟರ್ಮ್ ಟ್ರೇಡಿಂಗ್, ಪೆÇೀಟ್‍ಪೆÇೀಲಿಯೊ ಮ್ಯಾನೇಜ್‍ಮೆಂಟ್ ಬಗ್ಗೆ ತಿಳಿದುಕೊಳ್ಳಬಹುದು. ಮಾಡ್ಯುಲ್ 4ರಲ್ಲಿ ಮ್ಯೂಚುಯಲ್ ಫಂಡ್ಸ್, ಈಕ್ವಿಟಿ ಡಿರೈಟಿವ್ಸ್, ಕಮಾಡಿಟಿಸ್ ಮತ್ತು ಕಮಾಡಿಟಿಸ್ ಟ್ರೇಡಿಂಗ್ ಬಗ್ಗೆ ಕಲಿಯಬಹುದು. ಇವೆಲ್ಲದರ ನಂತರ ಲೈವ್ ಪ್ರಾಜೆಕ್ಟ್ ಮತ್ತು ಫೈನಲ್ ಎಗ್ಸಾಂ ಇರುತ್ತದೆ.
ಹೀಗೆ ಷೇರುಪೇಟೆ ಸಂಬಂಧಿಸಿದ ಶಾರ್ಟ್ ಟರ್ಮ್ ಕೋರ್ಸ್‍ಗಳನ್ನು ನೀಡುವ ಹಲವು ಸಂಸ್ಥೆಗಳಿವೆ. ಎನ್‍ಎಸ್‍ಇ ಅಥವಾ ಬಿಎಸ್‍ಇಯಿಂದ ಅಂಗೀಕೃತವಾದ ಸಂಸ್ಥೆಗಳಿಂದ ಸರ್ಟಿಫಿಕೇಟ್ ಪಡೆದರೆ ಒಳ್ಳೆಯದು.

Copyright: Published On Vijaya Karnataka Mini
ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಕೋರ್ಸ್ ಬಗ್ಗೆ

ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಕೋರ್ಸ್ ಬಗ್ಗೆ

ದೇಶದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಐಎಂಎ) ನೀಡುವ ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಸಿಎಂಎ) ಸರ್ಟಿಫಿಕೇಷನ್ ಕೋರ್ಸ್‍ಗೆ ಜಾಗತಿಕವಾಗಿ ಮನ್ನಣೆಯಿದೆ. ಸಿಎಂಎ ಸರ್ಟಿಫಿಕೇಷನ್ ಕೋರ್ಸ್ ಕುರಿತು ಹೆಚ್ಚಿನ 
ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಕಾಮರ್ಸ್ ಓದಿ ಅಕೌಂಟೆಂಟ್ ಆದವರಿಗೆ ವೃತ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲು ವಿವಿಧ ಸರ್ಟಿಫಿಕೇಷನ್ ಕೋರ್ಸ್‍ಗಳು ಸಾಥ್ ನೀಡುತ್ತವೆ. ಅವುಗಳಲ್ಲಿ ಎಸ್‍ಎಂಎ ಸರ್ಟಿಫಿಕೇಷನ್ ಸಹ ಪ್ರಮುಖವಾದದ್ದು. ಅಮೆರಿಕದ ಐಎಂಎ ಜೊತೆ ದೇಶದ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಸಿಎಂಎಯು ಎಂಒಯು ಒಪ್ಪಂದ ಮಾಡಿಕೊಂಡು ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ ಸರ್ಟಿಫಿಕೇಷನ್ ನೀಡುತ್ತಿದೆ. ಕಂಪನಿಯೊಳಗಿನ ಹಣಕಾಸು ಕಾರ್ಯಗಳನ್ನು ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂ ನೆರವಾಗುತ್ತದೆ. ಈಗಿನ ಸಂಕೀರ್ಣ ವಾಣಿಜ್ಯ ವ್ಯವಹಾರಗಳನ್ನು ಸುಲಲಿತವಾಗಿ ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂನಿಂದ ಸಾಧ್ಯವಾಗುತ್ತದೆ.

ಯಾಕೆ ಸಿಎಂಎ ಕಲಿಯಬೇಕು?
ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಮತ್ತು ಫೈನಾನ್ಸಿಯಲ್ ಅಕೌಂಟೆಂಟ್ ಕುರಿತು ಉತ್ತಮ ಜ್ಞಾನ ಲಭಿಸುತ್ತದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ರೆಸ್ಯೂಂ ತೂಕ ಹೆಚ್ಚಾಗುತ್ತದೆ. ಉದ್ಯೋಗಾವಕಾಶವೂ ಹೆಚ್ಚುತ್ತದೆ. ಹೆಚ್ಚು ವೇತನದ ಆಫರ್ ಸಹ ದೊರಕುತ್ತದೆ. ನಾಯಕತ್ವ ಕೌಶಲ, ವ್ಯವಹಾರದ ಅಂತಾರಾಷ್ಟ್ರೀಯ ಮಜಲುಗಳ ಬಗ್ಗೆಯೂ ತಿಳಿದುಕೊಳ್ಳಬಹುದು.

ಯಾರು ಕಲಿಯಬಹುದು?
ಈ ಕೋರ್ಸ್ ಅನ್ನು ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಈಗಾಗಲೇ ವೃತ್ತಿಯಲ್ಲಿ ಇರುವವರೂ ಮಾಡಬಹುದಾಗಿದೆ. ಅಂಗೀಕೃತ ವಿವಿ ಅಥವಾ ಶೈಕ್ಷಣಿಕ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಅರ್ಥಶಾಸ್ತ್ರ, ಬೇಸಿಕ್ ಸ್ಟಟಿಸ್ಟಿಕ್ಸ್ ಮತ್ತು ಫೈನಾನ್ಸಿಯಲ್ ಅಕೌಂಟಿಂಗ್‍ನ ಮೂಲಭೂತ ಜ್ಞಾನ ಇರಬೇಕು. ಎರಡು ವರ್ಷದ ವೃತ್ತಿಪರ ಅನುಭವ ಜೊತೆಗಿರಬೇಕು.
ಬಿಕಾಂ, ಬಿಬಿಎ, ಎಂಬಿಎ ಇತ್ಯಾದಿ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು, ಚಾರ್ಟೆಡ್ ಅಕೌಂಟೆಂಟ್ಸ್ ಮತ್ತು ಕಾಸ್ಟ್ ಅಕೌಂಟೆಂಟ್ಸ್ ಪಡೆದವರು ಸಿಎಂಎ ಸರ್ಟಿಫಿಕೇಷನ್ ಪಡೆಯಬಹುದು. ಮ್ಯಾನೇಜ್‍ಮೆಂಟ್ ಹಂತದಲ್ಲಿ ವೃತ್ತಿಗೆ ಪ್ರವೇಶಿಸಬಯಸುವವರು ಸಹ ಈ ಕೋರ್ಸ್ ಪಡೆಯಬಹುದು. ಕೇವಲ ಆರೆಂಟು ತಿಂಗಳಲ್ಲಿ ಈ ಎಗ್ಸಾಂ ಅನ್ನು ಪಾಸ್ ಮಾಡಬಹುದಾಗಿದೆ. ಕೇವಲ 2 ಪೇಪರ್‍ಗಳಿದ್ದು, 6 ತಿಂಗಳಲ್ಲಿ ಈ ಕೋರ್ಸ್ ಅನ್ನು ಪೂರ್ಣಗೊಳಿಸಬಹುದಾಗಿದೆ. 12 ತಿಂಗಳು ಅಥವಾ 3 ವರ್ಷದ ಅವಧಿಯ ಕೋರ್ಸ್‍ಗಳನ್ನೂ ಮಾಡಬಹುದಾಗಿದೆ.

ಪರೀಕ್ಷೆಗೆ ಏನು ಓದಬೇಕು?
ಸಿಎಂಎ ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿವೆ. ಭಾಗ 1 ಪ್ರಶ್ನೆಪತ್ರಿಕೆಯಲ್ಲಿ ಹಣಕಾಸು ಯೋಜನೆ, ಕಾರ್ಯಕ್ಷಮತೆ ಮತ್ತು ನಿಯಂತ್ರಣ- ಪ್ಲಾನಿಂಗ್ ಬಜೆಟಿಂಗ್ ಫಾರ್‍ಕಾಸ್ಟಿಂಗ್, ಫರ್ಫಾಮೆನ್ಸ್ ಮ್ಯಾನೇಜ್‍ಮೆಂಟ್, ಕಾಸ್ಟ್ ಮ್ಯಾನೇಜ್‍ಮೆಂಟ್, ಇಂಟರ್ನಲ್ ಕಂಟ್ರೋಲ್ಸ್ ಮತ್ತು ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಮೇಲೆ ಪ್ರಶ್ನೆಗಳಿರುತ್ತವೆ. ಪಾರ್ಟ್ 2 ಪ್ರಶ್ನೆಪತ್ರಿಕೆಯಲ್ಲಿ ಫೈನಾನ್ಶಿಯಲ್ ಡಿಸಿಷನ್ ಮೇಕಿಂಗ್- ಫೈನಾನ್ಶಿಯಲ್ ಸ್ಟೇಟ್‍ಮೆಂಟ್ ಅನಾಲಿಸಿಸ್, ಕಾಪೆರ್Çರೇಟ್ ಫೈನಾನ್ಸ್, ಡಿಸಿಷನ್ ಅನಾಲಿಸಿಸ್ ಮತ್ತು ರಿಸ್ಕ್ ಮ್ಯಾನೇಜ್‍ಮೆಂಟ್, ಇನ್ವೆಸ್ಟ್‍ಮೆಂಟ್ ಡಿಸಿಷನ್, ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಕುರಿತು ಪ್ರಶ್ನೆಗಳಿರುತ್ತವೆ. ಒಟ್ಟು 4 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತದೆ. ಶೇಕಡ 75ರಷ್ಟು ಬಹುಆಯ್ಕೆ ಪ್ರಶ್ನೆಗಳು ಮತ್ತು ಶೇಕಡ 25ರಷ್ಟು ಪ್ರಬಂಧ ಬರೆಯುವ ಪ್ರಶ್ನೆಗಳಿರುತ್ತವೆ. ಜನವರಿ/ಫೆಬ್ರವರಿ, ಮೇ/ಜೂನ್ ಮತ್ತು ಸೆಪ್ಟೆಂಬರ್/ಅಕ್ಟೋಬರ್‍ನಲ್ಲಿ ಕಂಪ್ಯೂಟರೀಕೃತ ಆನ್‍ಲೈನ್ ಪರೀಕ್ಷೆ ನಡೆಯುತ್ತದೆ. ಪಾಸ್ ಆಗಲು ಶೇಕಡ 72ರಷ್ಟು ಅಂಕ ಪಡೆಯಬೇಕು.

ಉದ್ಯೋಗಾವಕಾಶ ಹೇಗಿದೆ?
ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಎಂಎ ಸರ್ಟಿಫಿಕೇಷನ್ ಇದ್ದವರಿಗೆ ಬಹುಬೇಡಿಕೆಯಿದೆ. ಫೈನಾನ್ಶಿಯಲ್ ಅನಾಲಿಸ್ಟ್, ಇಂಟರ್ನಲ್ ಅಡಿಟರ್, ಸೀನಿಯರ್ ಎಕ್ಸಿಕ್ಯುಟಿವ್, ಫೈನಾನ್ಸ್ ಮ್ಯಾನೇಜರ್, ಬಿಸಿನೆಸ್ ಅನಾಲಿಸ್ಟ್, ಪ್ರೈಸಿಂಗ್ ಅನಾಲಿಸ್ಟ್, ಡೈರೆಕ್ಟರ್-ಫೈನಾನ್ಸ್, ಚೀಫ್ ಫೈನಾನ್ಸಿಯಲ್ ಆಫೀಸರ್ ಇತ್ಯಾದಿ ಹುದ್ದೆಗಳನ್ನು ಪಡೆಯಲು ಸಿಎಂಎ ಸರ್ಟಿಫಿಕೇಷನ್ ನೆರವಾಗುತ್ತದೆ. ಈ ಕೋರ್ಸ್ ಕಲಿಯಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ದಿ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ವೆಬ್ ಸೈಟ್‍ಗೆ ಭೇಟಿ ನೀಡಬಹುದು.
ಜನಪ್ರಿಯ ಫೈನಾನ್ಸ್ ಕೋರ್ಸ್‍ಗಳು
ಎಂಬಿಎ: ಎಂಬಿಎ ಇನ್ ಫೈನಾನ್ಸ್ ಓದಿದವರಿಗೆ ಉತ್ತಮ ಉದ್ಯೋಗಾವಕಾಶ ದೊರಕುತ್ತದೆ. ಅಕೌಂಟಿಂಗ್, ಕಾಸ್ಟ್ ಅಕೌಂಟಿಂಗ್, ಫೈನಾನ್ಶಿಯಲ್ ಮಾಡೆಲಿಂಗ್, ಸ್ಟಟಿಸ್ಟಿಕ್ಸ್ ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡಬಹುದಾಗಿದೆ. ದೇಶದಲ್ಲಿ ಎಂಬಿಎ ಪದವೀಧರರು ಹೆಚ್ಚಾಗುತ್ತಿದ್ದು, ಹೆಚ್ಚು ಕೌಶಲ ಇರುವವರಿಗೆ ಬೇಡಿಕೆ ಇದ್ದೇ ಇದೆ.

ಚಾರ್ಟೆಡ್ ಅಕೌಂಟೆಂಟ್: 1949ರ ಚಾರ್ಟೆಡ್ ಅಕೌಂಟೆಂಟ್ ಕಾಯಿದೆ ಅನ್ವಯ ಸ್ಥಾಪನೆಯಾದ ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್‍ಗೆ ದೇಶದಲ್ಲಿಂದು ಹೆಚ್ಚು ಬೇಡಿಕೆಯಿದೆ. ಕನ್ಸಲ್ಟೆನ್ಸಿ, ಅಡಿಟ್ ಪ್ರಾಕ್ಟೀಸ್, ಇನ್ವೆಸ್ಟ್‍ಮೆಂಟ್ ಬ್ಯಾಂಕಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಇದು ನಿಮಗೆ ಉತ್ತಮ ಉದ್ಯೋಗವಕಾಶ ದೊರಕಿಸಿಕೊಡುತ್ತದೆ. ಭಾರತದಲ್ಲಿ ಚಾರ್ಟೆಡ್ ಅಕೌಂಟೆಂಟ್ ಓದಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉದ್ಯೋಗ ಪಡೆಯಬಹುದು. ಅಂದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಉದ್ಯೋಗ ಪಡೆಯಲು ದೇಶದ ಸಿಎ ಕೋರ್ಸ್ ನೆರವಾಗುತ್ತದೆ.

ಕಾಸ್ಟ್ ಅಕೌಂಟೆಂಟ್: ಕಾಸ್ಟ್ ಆ್ಯಂಡ್ ವಕ್ರ್ಸ್ ಅಕೌಂಟೆಂಟ್ಸ್ ಕಾಯಿದೆ, 1959ತ ಅನ್ವಯ ಸ್ಥಾಪನೆಯಾದ ಕಾಸ್ಟ್ ಅಕೌಂಟೆಂಟ್ ಕೋರ್ಸ್ ಸಹ ಉತ್ತಮ ಉದ್ಯೋಗಾವಕಾಶ ದೊರಕಿಸಿಕೊಡುತ್ತದೆ.

ಕಂಪನಿ ಸೆಕ್ರೆಟರಿ: ಕಂಪನಿ ಸೆಕ್ರೆಟರಿ ಕಾಯಿದೆ, 1980ರ ಅನ್ವಯ ಸ್ಥಾಪನೆಯಾದ ಈ ಕೋರ್ಸ್ ಅನ್ನು ಕಲಿತವರು ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಗ್ ಕಂಪನಿಗಳಲ್ಲಿ, ಬ್ಯಾಂಕ್‍ಗಳಲ್ಲಿ, ಕಾಪೆರ್Çರೇಟ್ ಆಫೀಸ್‍ಗಳಲ್ಲಿ ಉದ್ಯೋಗ ಪಡೆಯಬಹುದು.
ಸಿಎಗೆ ಪರ್ಯಾಯ ಎಸಿಸಿಎ

ಸಿಎಗೆ ಪರ್ಯಾಯ ಎಸಿಸಿಎ

ದೇಶದಲ್ಲಿ ಬಹುತೇಕರು ಚಾರ್ಟೆಡ್ ಅಕೌಂಟೆಂಟ್(ಸಿಎ) ಮಾಡುತ್ತಿದ್ದಾರೆ. ಭಾರತೀಯ ಸಿಎಗೆ ಪರ್ಯಾಯವಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಮನ್ನಣೆ ಪಡೆದಿರುವ ಎಸಿಸಿಎಯನ್ನೂ ಮಾಡಿದರೆ ಇನ್ನಷ್ಟು ಉತ್ತಮ ಉದ್ಯೋಗಾವಕಾಶ ಪಡೆಯಬಹುದು ಎನ್ನುತ್ತಾರೆ ತಜ್ಞರು. ಎಸಿಸಿಎ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.


* ಪ್ರವೀಣ್ ಚಂದ್ರ ಪುತ್ತೂರು

ಚಾರ್ಟೆಡ್ ಅಕೌಂಟೆಂಟ್, ಫೈನಾನ್ಶಿಯಲ್ ಅಕೌಂಟೆಂಟ್, ಅಡಿಟರ್, ಮ್ಯಾನೆಜ್‍ಮೆಂಟ್ ಕನ್ಸಲ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಪಡೆಯಲು ಹೆಚ್ಚಿನವರು `ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ' (ಡಿಡಿಡಿ.ಜ್ಚಿZಜಿ.ಟ್ಟಜ) ನೀಡುವ `ಸಿಎ' ಅಥವಾ `ಚಾರ್ಟೆಡ್ ಅಕೌಂಟೆಂಟ್' ಕೋರ್ಸ್ ಮಾಡುತ್ತಾರೆ. ಸಿಎಗೆ ಪರ್ಯಾಯವಾಗಿ ಯಾವ ಕೋರ್ಸ್ ಮಾಡಬಹುದು? ಎಂಬ ಪ್ರಶ್ನೆ ಎದುರಾದರೆ ನಮ್ಮ ಗಮನ ಸೆಳೆಯುವುದು `ದಿ ಅಸೋಸಿಯೇಷನ್ ಆಫ್ ಚಾರ್ಟೆಡ್ ಸರ್ಟಿಫೈಡ್ ಅಕೌಂಟೆಂಟ್ಸ್(ಎಸಿಸಿಎ)'. ಈ ಕುರಿತು ಒಂದು ವಿಶ್ಲೇಷಣೆ ಇಲ್ಲಿದೆ.

ಜಾಗತಿಕವಾಗಿ ಫೇಮಸ್ಸು
ಖಂಡಿತವಾಗಿಯೂ ಭಾರತದ ಸಿಎ ಜಾಗತಿಕ ಗುಣಮಟ್ಟ ಹೊಂದಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ತನ್ನ ಸಿಲೇಬಸ್ ಅನ್ನು ಬದಲಾಯಿಸುವ ಇಂಗಿತವನ್ನೂ ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ಸಂಸ್ಥೆಯು ವ್ಯಕ್ತಪಡಿಸಿದೆ. ಈಗಾಗಲೇ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಅಪ್‍ಡೇಟ್ ಆಗಿರುವ ಎಸಿಸಿಎ ಹೆಚ್ಚು ಫೇಮಸ್ ಎನ್ನುವುದು ಕೆಲವು ಶಿಕ್ಷಣ ಪರಿಣತರ ಅಭಿಪ್ರಾಯ. ಎಸಿಸಿಎಯು ಜಗತ್ತಿನ 181 ದೇಶಗಳಲ್ಲಿ ಸುಮಾರು 1,88,000 ಸದಸ್ಯರನ್ನು ಮತ್ತು 4,80,000 ವಿದ್ಯಾರ್ಥಿಗಳನ್ನು ಹೊಂದಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ 91ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಎಸಿಸಿಎಯು ಇಂಗ್ಲೆಂಡ್‍ನ ಜಿಎಎಪಿ, ಲಾ, ಐಎಫ್‍ಆರ್‍ಎಸ್‍ನ ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ. ಇದು ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚುವರಿ ಜ್ಞಾನವನ್ನು ಒದಗಿಸಿದಂತಾಗುತ್ತದೆ.

ಯಾರು ಅರ್ಜಿ ಸಲ್ಲಿಸಬಹುದು?
* ಎಸಿಸಿಎಗೆ ಸೇರಲು ಯಾವುದೇ ಔಪಚಾರಿಕ ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ. ಆಸಕ್ತರು ನೇರವಾಗಿ ಫೌಂಡೇಷನ್ ಲೆವೆಲ್‍ಗೆ ಸೇರಬಹುದು.. ಅಕೌಂಟೆನ್ಸಿಗೆ ಹೊಸದಾಗಿ ಸೇರಬಯಸುವ ವಿದ್ಯಾರ್ಥಿಗಳು, ಯಾವುದೇ ಅಕೌಂಟೆನ್ಸಿ ವಿದ್ಯಾರ್ಹತೆ ಇಲ್ಲದೆ ಇದ್ದರೂ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು, ಈಗಾಗಲೇ ಡಿಪೆÇ್ಲಮಾ ಅಥವಾ ಬೇರೆ ಸರ್ಟಿಫಿಕೇಟ್ ಕೋರ್ಸ್ ಪಡೆಯುತ್ತಿರುವಾಗಲೇ ಎಸಿಸಿಎ ಶಿಕ್ಷಣವನ್ನು ಪಡೆಯಬಹುದಾಗಿದೆ.
* ಪದವಿ/ಸ್ನಾತಕೋತ್ತರ ಪದವಿ ಅಥವಾ ಇತರ ಶೈಕ್ಷಣಿಕ ಅರ್ಹತೆ ಇರುವ ಅಭ್ಯರ್ಥಿಗಳು ಎಸಿಸಿಎ ಸದಸ್ಯರಾಗಬಹುದು. ಭಾರತೀಯ ಸಿಎಯಲ್ಲಿ ಕೆಲವು ಪೇಪರ್‍ಗಳನ್ನು ಬರೆದು ಪೂರ್ಣಗೊಳಿಸಿದವರಿಗೆ ಎಸಿಸಿಎಯಲ್ಲಿ ಕೆಲವು ಪೇಪರ್‍ಗಳನ್ನು ಬರೆಯುವುದರಿಂದ ವಿನಾಯಿತಿಯನ್ನೂ ನೀಡಲಾಗುತ್ತದೆ. ಅಂದರೆ, ಭಾರತೀಯ ಸಿಎಯಲ್ಲಿ ಕೆಲವು ಪೇಪರ್ ಪೂರ್ಣಗೊಳಿಸಿದವರು ನೇರವಾಗಿ ಎಸಿಸಿಎಯ ಪೆÇ್ರಫೆಷನಲ್ ಲೆವೆಲ್‍ಗೆ ಸೇರಬಹುದು. ಈ ಕುರಿತು ಪೂರ್ಣ ಮಾಹಿತಿಯನ್ನು ಎಸಿಸಿಎ ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು.

ಯಾವಾಗ ಪರೀಕ್ಷೆ ನಡೆಯುತ್ತದೆ?
ಎಸಿಸಿಎ ಶಿಕ್ಷಣವು ಒಟ್ಟು 14 ಪೇಪರ್‍ಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಬರೆಯಬಹುದು. ಪ್ರತಿ ಅವಧಿಯಲ್ಲಿಯೂ 4 ಎಗ್ಸಾಂವರೆಗೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವಿದೆ. ಈ ರೀತಿ ಮಾಡಿದರೆ ಕನಿಷ್ಠ 2 ವರ್ಷದಲ್ಲಿಯೇ ಎಸಿಸಿಎ ಕೋರ್ಸ್ ಪೂರ್ಣಗೊಳಿಸಬಹುದು. ಭಾರತೀಯ ಸಿಎ ಮಾಡಿದವರಿಗೆ ಕೆಲವು ಪೇಪರ್‍ಗಳ ವಿನಾಯಿತಿಯೂ ಲಭ್ಯ ಇರುವುದರಿಂದ ಇದಕ್ಕಿಂತಲೂ ಕಡಿಮೆ ಅವಧಿಯಲ್ಲಿಯೂ ಕೋರ್ಸ್ ಪೂರ್ಣಗೊಳಿಸಬಹುದು. ಎಸಿಸಿಎ ಮೆಂಬರ್‍ಷಿಪ್ ಪಡೆಯಲು ವಿದ್ಯಾರ್ಥಿಗಳಿಗೆ 3 ವರ್ಷ ಅಥವಾ 36 ತಿಂಗಳ ಪ್ರಾಕ್ಟಿಕಲ್ ವರ್ಕ್ ಅನುಭವ ಇರಬೇಕು. ಈ ಕೆಲಸದ ಅನುಭವವನ್ನು ಎಸಿಸಿಎಗೆ ಸೇರುವ ಮುನ್ನ ಅಥವಾ ಎಸಿಸಿಎ ಅಧ್ಯಯನ ಸಮಯದಲ್ಲಿ ಅಥವಾ ಅಧ್ಯಯನ ಪೂರ್ಣಗೊಳಿಸಿದ ನಂತರವೂ ಪಡೆಯಬಹುದು.

ಪರೀಕ್ಷೆ ಯಾವಾಗ ನಡೆಯುತ್ತದೆ
ವರ್ಷಕ್ಕೆ ಎರಡು ಬಾರಿ ಎಸಿಸಿಎ ಪರೀಕ್ಷೆ ನಡೆಸಲಾಗುತ್ತದೆ. ಜೂನ್ ಮತ್ತು ಡಿಸೆಂಬರ್ ಅವಧಿಯ ಪರೀಕ್ಷೆಯನ್ನು `ಅರ್ಲಿ', `ಸ್ಟಾಂಡರ್ಡ್' ಮತ್ತು `ಲೇಟ್' ಎಂಬ ಮೂರು ಸಮಯಗಳಲ್ಲಿ ಬರೆಯಲು ಅವಕಾಶವಿದೆ. ಅರ್ಲಿ(ಬೇಗ) ಎಗ್ಸಾಂ ಮಾರ್ಚ್ 8 ಮತ್ತು ಸೆಪ್ಟೆಂಬರ್ 8ರಂದು ನಡೆಯುತ್ತದೆ. ಈ ಎಗ್ಸಾಂ ಅನ್ನು ಆನ್‍ಲೈನ್‍ನಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಸ್ಟಾಂಡರ್ಡ್ ಎಗ್ಸಾಂ ಮಾರ್ಚ್ 9-ಏಪ್ರಿಲ್ 8ರಂದು ಮತ್ತು ಸೆಪ್ಟೆಂಬರ್ 9 -ಅಕ್ಟೋಬರ್ 8ರಂದು ನಡೆಯುತ್ತದೆ. ಈ ಎಗ್ಸಾಂ ಅನ್ನು ಆನ್‍ಲೈನ್ ಅಥವಾ ಪೇಪರ್ ಮೂಲಕ ಬರೆಯಲು ಅವಕಾಶ ನೀಡಲಾಗುತ್ತದೆ. ಲೇಟ್ ಎಗ್ಸಾಂ 9 ಏಪ್ರಿಲ್-ಮೇ 8ರಂದು ಮತ್ತು ಅಕ್ಟೋಬರ್ 9-ನವೆಂಬರ್ 8ರಂದು ಬರೆಯಲು ಅವಕಾಶವಿದೆ. ಈ ಪರೀಕ್ಷೆಯನ್ನು ಆನ್‍ಲೈನ್ ಮೂಲಕ ಮಾತ್ರ ನಡೆಸಲಾಗುತ್ತದೆ.

ಫೀಸ್ ಎಷ್ಟು?
ಎಸಿಸಿಎ ಪರೀಕ್ಷೆಗೆ ದಾಖಲಾತಿ ಮತ್ತು ಚಂದಾದಾರಿಕೆ (ಸಬ್‍ಸ್ಕ್ರಿಪ್ಷನ್) ಶುಲ್ಕ ಇಂತಿದೆ. ಆರಂಭಿಕ ದಾಖಲಾತಿಗೆ 79 ಪೌಂಡ್. ಅಂದರೆ, ಸುಮಾರು 6,690 ರೂಪಾಯಿ ಆಗಿದೆ. ಮರು ದಾಖಲಾತಿಗೂ ಇಷ್ಟೇ ಶುಲ್ಕ ವಿಧಿಸಲಾಗುತ್ತದೆ. ವಾರ್ಷಿಕ ಸಬ್‍ಸ್ಕ್ರಿಪ್ಷನ್‍ಗೆ 85 ಪೌಂಡ್ ಅಂದರೆ, ಸುಮಾರು 8 ಸಾವಿರ ರೂಪಾಯಿ. ವಿನಾಯಿತಿ(ಎಗ್ಸೆಂಪ್ಷನ್ ಫೀ) ಶುಲ್ಕ: ಜ್ಞಾನದ ಪರೀಕ್ಷೆಗೆ 72 ಪೌಂಡ್(6,097 ರೂ.) ಮತ್ತು ಕೌಶಲ ಪರೀಕ್ಷೆಗೆ 97 ಪೌಂಡ್(8,214) ರೂಪಾಯಿ. ಪರೀಕ್ಷಾ ಪ್ರವೇಶ ಶುಲ್ಕವನ್ನು ಪ್ರತಿವರ್ಷ ಪಾವತಿಸಬೇಕು. ಇಲ್ಲಿ ಒಂದು ಪೌಂಡ್‍ಗೆ 84.68 ರೂಪಾಯಿ ಎಂದು ಲೆಕ್ಕಹಾಕಲಾಗಿದೆ.

 ಸಿಎ ಬೆಸ್ಟಾ? ಎಸಿಸಿಎ ಬೆಸ್ಟಾ?
ಈ ಪ್ರಶ್ನೆಗೆ ಇದಮಿತ್ತಂ ಉತ್ತರ ಕಷ್ಟ. ಈಗಾಗಲೇ ಹೇಳಿದಂತೆ ಭಾರತದ ಸಿಎ ಪೂರ್ಣಗೊಳಿಸಲು 5 ವರ್ಷ ಬೇಕು. ನಿಮಗೆ 6 ತಿಂಗಳಿಗೆ ನಾಲ್ಕು ಪೇಪರ್ ಬರೆಯುವ ಸಾಮಥ್ರ್ಯ ಇದ್ದರೆ ಎಸಿಸಿಎ ಪೂರ್ಣಗೊಳಿಸಲು 2 ವರ್ಷ ಸಾಕು. ಎಸಿಸಿಎ ಎಗ್ಸಾಂ ಜೂನ್ ಮತ್ತು ಡಿಸೆಂಬರ್‍ನಲ್ಲಿ ನಡೆಯುತ್ತದೆ. ಸಿಎ ಪರೀಕ್ಷೆಯು ಜನವರಿ, ಫೆಬ್ರವರಿ, ಏಪ್ರಿಲ್, ಮೇ, ಜುಲೈ, ಆಗಸ್ಟ್, ಅಕ್ಟೋಬರ್, ನವೆಂಬರ್‍ನಲ್ಲಿ ನಡೆಯುತ್ತದೆ.
ಭಾರತದ ಸಿಎ ಶಿಕ್ಷಣದಂತೆ ಇಂಗ್ಲೆಂಡ್‍ನ ಎಸಿಸಿಎ ಇದೆ. ಭಾರತದ ಸಿಎಗಿಂತ ಎಸಿಸಿಎ ಕಲಿಕೆಯು ಹೆಚ್ಚುವರಿಯಾಗಿ ಇಂಗ್ಲೆಂಡ್ ಜಿಎಎಪಿ(ಇಂಗ್ಲೆಂಡ್‍ನ ಅಕೌಂಟಿಂಗ್ ಪ್ರಾಕ್ಟೀಸ್ ಜ್ಞಾನ), ಕಾನೂನು ಮತ್ತು ಅಂತಾರಾಷ್ಟ್ರೀಯ ಹಣಕಾಸು ರಿಪೆÇೀರ್ಟಿಂಗ್ ಸ್ಟಾಂಡರ್ಡ್(ಐಎಫ್‍ಆರ್‍ಎಸ್) ಜ್ಞಾನವನ್ನು ನೀಡುತ್ತದೆ. ಇದರಿಂದ ನಿಮಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅಥವಾ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸಲು ಅನುಕೂಲವುಂಟು ಮಾಡುತ್ತದೆ. ಎಸಿಸಿಎ ಸರ್ಟಿಫಿಕೇಟ್ ಜೊತೆ ಎಂಬಿಎ ಪದವಿಯನ್ನು ಪಡೆದರೆ ಹೆಚ್ಚು ಉದ್ಯೋಗಾವಕಾಶ ದೊರಕುತ್ತದೆ.
ಎಸಿಸಿಎಯ ಶಿಕ್ಷಣ ಗುಣಮಟ್ಟವು ಜಗತ್ತಿನಾದ್ಯಂತ ಇರುವ ಉದ್ಯೋಗದಾತರ ಅವಶ್ಯಕತೆಗೆ ತಕ್ಕಂತೆ ಇದೆ. ಭಾರತದ ಸಿಎಯು ಶೀಘ್ರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ತನ್ನ ಪಠ್ಯಕ್ರಮವನ್ನು ಬದಲಾಯಿಸಿಕೊಳ್ಳಲು ಉದ್ದೇಶಿಸಿದೆ.
ಭಾರತೀಯ ಸಿಎ ಮಾಡುತ್ತಿರುವಾಗ ಬೇರೆ ಕೋರ್ಸ್ ಮಾಡುವುದು ಬಹಳಷ್ಟು ಕಷ್ಟಕಾರಿ ಎನ್ನುತ್ತಾರೆ ಬಹುತೇಕ ಸಿಎ ವಿದ್ಯಾರ್ಥಿಗಳು. ಆದರೆ, ಬೇರೆ ಕೋರ್ಸ್ ಮಾಡುತ್ತಿರುವಾಗಲೇ ಎಸಿಸಿಎ ಕ್ವಾಲಿಫಿಕೇಷನ್ ಪಡೆಯಬಹುದಾಗಿದೆ. ಭಾರತೀಯ ಸಿಎಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಸಿಸಿಎಗೆ ಸಂಬಂಧಪಟ್ಟ ಆನ್‍ಲೈನ್ ತರಬೇತಿಗಳು ಲಭ್ಯ ಇವೆ.

Copyright: Published On Vijaya Karnataka Mini