Showing posts with label ಸರ್ಟಿಫಿಕೇಷನ್ ಕೋರ್ಸ್‍. Show all posts
Showing posts with label ಸರ್ಟಿಫಿಕೇಷನ್ ಕೋರ್ಸ್‍. Show all posts

Tuesday, 27 December 2016

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್

ಎಲ್ಲವೂ ಇಂಟರ್‍ನೆಟ್‍ಮಯವಾಗುತ್ತಿರುವ ಈ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಲ್ಲವರಿಗೆ ಉತ್ತಮ ಬೇಡಿಕೆಯಿದೆ. ಸರ್ಚ್ ಎಂಜಿನ್ ಆಪ್ಟಿಮಿಜೇಷನ್, ಸೋಷಿಯಲ್ ಮೀಡಿಯಾ ಆಪ್ಟಿಮಿಜೇಷನ್ ಸೇರಿದಂತೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಕಲಿಯಲು ಸೂಕ್ತವಾದ ಸರ್ಟಿಫಿಕೇಷನ್ ಕೋರ್ಸ್‍ಗಳು ಯಾವುವು? ಇಲ್ಲಿದೆ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಇದು ಇಂಟರ್‍ನೆಟ್ ಯುಗ. ಮಾರಾಟ ಮತ್ತು ಖರೀದಿಗೆ ಇ-ಕಾಮರ್ಸ್ ಪ್ರಮುಖ ವೇದಿಕೆ. ಯಾವುದೇ ಕಂಪನಿಗೂ ವಹಿವಾಟು ನಡೆಸಲು ಇಂಟರ್‍ನೆಟ್ ಬಳಸುವುದು ಅನಿವಾರ್ಯವಾಗಿಬಿಟ್ಟಿದೆ. ಇಂತಹ ಸಮಯದಲ್ಲಿ ಆನ್‍ಲೈನ್‍ನಲ್ಲಿ ಮಾರುಕಟ್ಟೆ ಮಾಡುವ ಪರಿಣತರಿಗೂ ಉತ್ತಮ ಬೇಡಿಕೆಯಿದೆ. ಇದಕ್ಕೆ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳು ಲಭ್ಯ ಇವೆ. ವಿಶೇಷವೆಂದರೆ ಆನ್‍ಲೈನ್‍ನಲ್ಲಿ ಹಲವು ಉಚಿತ ಕೋರ್ಸ್‍ಗಳು ಲಭ್ಯ. ಕೆಲವು ಸರ್ಟಿಫಿಕೇಷನ್ ಕೋರ್ಸ್‍ಗಳು 10ರಿಂದ 50 ಸಾವಿರ ರೂ. ತನಕ ದುಬಾರಿಯಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ಎಂದರೇನು?
ಸರಳವಾಗಿ ಹೇಳುವುದಾದರೆ ಯಾವುದಾದರೂ ಉತ್ಪನ್ನ ಅಥವಾ ಬ್ರಾಂಡ್ ಅನ್ನು ವಿವಿಧ ರೀತಿಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಪಡಿಸುವುದನ್ನು ಡಿಜಿಟಲ್ ಮಾರ್ಕೆಟಿಂಗ್ ಎನ್ನಬಹುದು. ಈಗ ಗೂಗಲ್, ಫೇಸ್‍ಬುಕ್, ಇಮೇಲ್, ಮೊಬೈಲ್, ಸ್ಮಾರ್ಟ್‍ಫೆÇೀನ್ ಇತ್ಯಾದಿ ಮಾಧ್ಯಮಗಳ ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ವಿಧಾನವನ್ನು ಅನುಸರಿಸುತ್ತದೆ. ಇಂತಹ ನವ ಮಾಧ್ಯಮದಲ್ಲಿ ಉತ್ಪನ್ನ ಅಥವಾ ಬ್ರಾಂಡ್ ಪ್ರಚಾರ ಪಡಿಸಲು ವಿಶೇಷ ಸ್ಕಿಲ್ ಬೇಕಾಗುತ್ತದೆ. ಇಂತಹ ಕೌಶಲಗಳನ್ನು ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಕೋರ್ಸ್‍ಗಳು ಕಲಿಸಿ ಕೊಡುತ್ತವೆ.
ಡಿಜಿಟಲ್ ಮಾರುಕಟ್ಟೆಯ ಬೇಸಿಕ್ಸ್, ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಡಿಜಿಟಲ್ ಮಾರುಕಟ್ಟೆ ಕಾರ್ಯತಂತ್ರ ರೂಪಿಸುವುವುದು, ಮೊಬೈಲ್, ಸರ್ಚ್ ಮತ್ತು ಸೋಷಿಯಲ್ ನೆಟ್‍ವರ್ಕಿಂಗ್ ಇತ್ಯಾದಿ ನವಮಾಧ್ಯಮಗಳನ್ನು ಬಳಸಿ ಮಾರುಕಟ್ಟೆ ವಿಸ್ತರಿಸುವುದು, ಡಿಜಿಟಲ್ ಮಾರುಕಟ್ಟೆಗೆ ಸಂಬಂಧಪಟ್ಟ ಕಾನೂನುಗಳನ್ನು ತಿಳಿದುಕೊಳ್ಳುವುದು ಸಹ ಈ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ಒಳಗೊಂಡಿರುತ್ತದೆ.

ಉಚಿತವಾಗಿ ಕಲಿಯಿರಿ
ಇಂದು ಜಗತ್ತಿನ ವಿವಿಧ ಸಂಸ್ಥೆಗಳು ಆನ್‍ಲೈನ್‍ನಲ್ಲೇ ಉಚಿತವಾಗಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಅವಕಾಶ ಮಾಡಿಕೊಡುತ್ತಿವೆ. ಈ ಕೆಳಗೆ ನೀಡಿರುವ ಲಿಂಕ್‍ಗಳ ಮೂಲಕ ನೀವೂ ಉಚಿತವಾಗಿ ಕಲಿಯಬಹುದು.
* ಗೂಗಲ್‍ನ ಆನ್‍ಲೈನ್ ಮಾರ್ಕೆಟಿಂಗ್ ಚಾಲೆಂಜಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಬಹುದು. ಇಲ್ಲಿ ವಿಡಿಯೋ ಟ್ಯುಟೋರಿಯಲ್ ಸಹ ಇದ್ದು, ಎಸ್‍ಇಎಂ, ಆ್ಯಡ್‍ವಡ್ರ್ಸ್, ಸೋಷಿಯಲ್ ನೆಟ್‍ವಕ್ರ್ಸ್, ಮೊಬೈಲ್ ಸ್ಟ್ರಾಟರ್ಜಿ ಸೇರಿದಂತೆ ಹಲವು ವಿಷಯಗಳನ್ನು ಕಲಿಯಬಹುದು. ಕೆಲವೊಂದು ವಿಷಯಗಳಲ್ಲಿ ಸರ್ಟಿಫಿಕೇಷನ್ ಸಹ ದೊರಕುತ್ತದೆ.
ಮಾಹಿತಿಗೆ ಲಿಂಕ್: 
* ವಲ್ರ್ಡ್‍ಸ್ಟ್ರೀಮ್ ಎಂಬ ವೆಬ್‍ಸೈಟ್‍ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕುರಿತು ತುಂಬಾ ಬೇಸಿಕ್ಸ್‍ನಿಂದ ಹಿಡಿದು ಹಲವು ಹಂತಗಳ ಕೋರ್ಸ್‍ಗಳಿವೆ. ಹಂತಹಂತವಾಗಿ ಕಲಿಯುವುದು ಇಲ್ಲಿ ಸುಲಭ. ಲಿಂಕ್:
* ಕಾಪಿಬ್ಲಾಗರ್ ಎಂಬ ವೆಬ್‍ಸೈಟ್ ನಿಮಗೆ ಇಮೇಲ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‍ಗಳನ್ನು ಕಳುಹಿಸಿಕೊಡುತ್ತದೆ. ಇದರಿಂದ ನೀವು ಕಂಟೆಂಟ್ ಮಾರ್ಕೆಟಿಂಗ್, ಕಾಪಿರೈಟಿಂಗ್, ಎಸ್‍ಇಒ, ಕೀವರ್ಡ್ ರಿಸರ್ಚ್ ಇತ್ಯಾದಿಗಳನ್ನು ಕಲಿಯಬಹುದು. ಲಿಂಕ್
* ಕೊರ್ಸ್‍ರಾ ಎಂಬ ವೆಬ್‍ಸೈಟ್‍ನಲ್ಲಿ ವಾರದಲ್ಲಿ ನಾಲ್ಕೈದು ಗಂಟೆಯಂತೆ 5 ವಾರದ ಡಿಜಿಟಲ್ ಮಾರ್ಕೆಟಿಂಗ್ ಕ್ಲಾಸ್ ಅನ್ನು ನಡೆಸಲಾಗುತ್ತದೆ. ಮುಂದಿನ ಕೋರ್ಸ್ ಫೆಬ್ರವರಿ 22ರಿಂದ ಏಪ್ರಿಲ್ 1ರ ತನಕ ಇದೆ. ಆದಷ್ಟು ಬೇಗ ಭೇಟಿ ನೀಡಿ. ಲಿಂಕ್
* ಹಬ್‍ಸ್ಪಾಟ್‍ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಪಡೆಯಲು 18 ಉಚಿತ ತರಗತಿಗಳಿವೆ. ಉಚಿತವೆಂದಿರುವ ಕೋರ್ಸ್ ಅನ್ನು ಈ ಲಿಂಕ್‍ನಲ್ಲಿ ಹುಡುಕಿರಿ. ಲಿಂಕ್

ಇವು ಉಚಿತವಲ್ಲ
ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿ ಎಸ್‍ಇಒ, ಎಸ್‍ಇಎಂ, ಎಸ್‍ಎಂಒ, ಪಿಪಿಸಿ ಇತ್ಯಾದಿ ಸರ್ಟಿಫಿಕೇಷನ್‍ಗಳನ್ನು ಪಡೆಯಬಹುದು. ವಾರಾಂತ್ಯ ಕ್ಲಾಸ್‍ಗಳು ಮಾತ್ರವಲ್ಲದೆ ವಾರದ ಎಲ್ಲಾ ದಿನದ ಕ್ಲಾಸ್‍ಗಳೂ ಇವೆ. ಒಟ್ಟು 40 ದಿನಗಳ, 100 ಗಂಟೆಯ ಈ ಕೋರ್ಸ್‍ಗೆ 25ಸಾವಿರ ಶುಲ್ಕ ನೀಡಬೇಕು. ಆನ್‍ಲೈನ್ ಕೋರ್ಸ್‍ಗಳೂ ಲಭ್ಯ. ಹೆಚ್ಚಿನ ಮಾಹಿತಿಗೆ ಲಿಂಕ್
ಮನಿಪಾಲ್ ಗ್ಲೋಬಲ್ ಶಿಕ್ಷಣ ಸಂಸ್ಥೆಯ ಪೆÇ್ರಲರ್ನ್ ಆನ್‍ಲೈನ್ ಕಲಿಕಾ ತಾಣದಲ್ಲಿ ಕಲಿಯಬಹುದು. ಗೂಗಲ್ ಜೊತೆ ಸೇರಿ ನೀಡುವ ಈ ಡಿಜಿಟಲ್ ಕೋರ್ಸ್‍ನ ಅವಧಿ 90 ಗಂಟೆ. ಬೆಂಗಳೂರಿನಲ್ಲಿ ಮುಂದಿನ ಎನ್‍ರೋಲ್‍ಮೆಂಟ್ ಫೆಬ್ರವರಿ 14. ಮ್ಯಾನೇಜ್‍ಮೆಂಟ್ ಅಥವಾ ಎಂಜಿನಿಯರಿಂಗ್ ಹಿನ್ನೆಲೆ ಇರುವ ವಿದ್ಯಾರ್ಥಿಗಳು ಈ ಕೋರ್ಸ್‍ಗೆ ಸೇರಬಹುದು. ಮಾಹಿತಿಗೆ ಲಿಂಕ್
ಬೆಂಗಳೂರಿನ ಇನ್‍ವೆಂಟಾಟೆಕ್‍ನಲ್ಲಿಯೂ ಡಿಜಿಟಲ್ ಮಾರ್ಕೆಟಿಂಗ್ ಕುರಿತಾದ ಹಲವು ಕೋರ್ಸ್‍ಗಳು ಲಭ್ಯ ಇವೆ. ಲಿಂಕ್
ಎಎಂಪಿ ಡಿಜಿಟಲ್‍ನಲ್ಲಿ 14 ವಾರದ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಕೊಂಚ ದುಬಾರಿ ಎಂದೇ ಹೇಳಬೇಕು. ಇಲ್ಲಿ 48 ಸಾವಿರ ರೂ. ಶುಲ್ಕ ನೀಡಬೇಕು. ಇದು ಇಂಟರ್ನ್‍ಷಿಪ್ ಅವಕಾಶವನ್ನೂ ನೀಡುತ್ತದೆ. ಇದೇ ಸಂಸ್ಥೆಯು 14 ಸಾವಿರ ರೂ.ಗೆ ಸೋಷಿಯಲ್ ಮೀಡಿಯಾ ಕೋರ್ಸ್ ಸಹ ನೀಡುತ್ತಿದೆ.
ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿರುವ ಸ್ಕೈಡ್ರೀಮ್‍ಕನ್ಸಲ್ಟ್ ಸಂಸ್ಥೆಯು 100 ಗಂಟೆಗಳ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಕೋರ್ಸ್ ನೀಡುತ್ತದೆ. ತೆರಿಗೆ ಸೇರಿ 25 ಸಾವಿರ ರೂ. ಶುಲ್ಕ ಇದೆ. ಮಾಹಿತಿಗೆ ಲಿಂಕ್

Published in Vijayakarnataka Mini

Tuesday, 29 November 2016

ಏರ್ ಟ್ರಾಫಿಕ್ ಕಂಟ್ರೋಲರ್ ಉದ್ಯೋಗ ಪಡೆಯುವುದು ಹೇಗೆ?

ಏರ್ ಟ್ರಾಫಿಕ್ ಕಂಟ್ರೋಲರ್ ಉದ್ಯೋಗ ಪಡೆಯುವುದು ಹೇಗೆ?

ವಿಮಾನ ನಿಲ್ದಾಣಗಳಲ್ಲಿ ವಿಮಾನಗಳ ಲ್ಯಾಂಡಿಂಗ್ ಮತ್ತು ಟೇಕಾಫ್ ಸಮರ್ಥವಾಗಿ ಆಗುವಂತೆ ನೋಡಿಕೊಳ್ಳುವ `ಏರ್ ಟ್ರಾಫಿಕ್ ಕಂಟ್ರೋಲರ್' ಉದ್ಯೋಗ ಪಡೆಯುವುದು ಹೇಗೆ? ಇಲ್ಲಿದೆ ಹೆಚ್ಚಿನ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ನಮ್ಮ ರಾಜ್ಯದಲ್ಲಿ ಬಹುತೇಕ ಪ್ರತಿಭಾವಂತರು ಯಾವೆಲ್ಲ ಉದ್ಯೋಗಗಳ ಲಭ್ಯತೆಯಿದೆ? ಏನು ಓದಿದರೆ ಯಾವ ಹುದ್ದೆ ಪಡೆಯಬಹುದು ಎಂಬ ಸಮರ್ಪಕ ಮಾಹಿತಿಯಿಲ್ಲದ ಕಾರಣದಿಂದಲೇ ಹಲವು ಉದ್ಯೋಗಾವಕಾಶಗಳಿಂದ ವಂಚಿತರಾಗುತ್ತಿದ್ದಾರೆ. ಇಂತಹ ಗೊತ್ತಿರದ ಅಥವಾ ಸಮರ್ಪಕ ಮಾಹಿತಿ ಇಲ್ಲದ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್' ಸಹ ಒಂದು. ಬನ್ನಿ, ಈ ಕುರಿತು ಹೆಚ್ಚಿನ ಮಾಹಿತಿ ತಿಳಿದುಕೊಳ್ಳೋಣ.
ರಸ್ತೆಯಲ್ಲಿ ವಾಹನಗಳನ್ನು ನಿಯಂತ್ರಿಸುವ ಟ್ರಾಫಿಕ್ ಪೆÇಲೀಸರನ್ನು ನೀವು ನೋಡಿದ್ದೀರಿ. ಸುಗಮ ವಾಹನ ಸಂಚಾರಕ್ಕೆ ಇವರ ಕೊಡುಗೆ ಅಪಾರವಾದದ್ದು. ಹಾಗೆಯೇ, ಆಕಾಶಕ್ಕೆ ರೊಂಯ್ಯನೆ ನೆಗೆಯುವ, ಭೂಮಿಗೆ ಇಳಿಯುವ ಅಷ್ಟೊಂದು ವಿಮಾನಗಳನ್ನು ವಿಮಾನ ನಿಲ್ದಾಣಗಳಲ್ಲಿ ನಿಯಂತ್ರಿಸಲು ಟ್ರಾಫಿಕ್ ಪೆÇಲೀಸರು ಇದ್ದಾರೆ. ಅವರ ಉದ್ಯೋಗದ ಹೆಸರು `ಏರ್ ಟ್ರಾಫಿಕ್ ಕಂಟ್ರೋಲರ್'. ಇವರ ಕೆಲಸ ಟ್ರಾಫಿಕ್ ಪೆÇಲೀಸರಂತೆಯೇ ಆದರೂ, ಕೆಲಸದ ರೀತಿ ರಿವಾಜುಗಳು ಟ್ರಾಫಿಕ್ ಪೆÇಲೀಸರಿಗಿಂತ ಸಂಪೂರ್ಣ ಭಿನ್ನ. ಅತ್ಯಧಿಕ ವೇಗದಲ್ಲಿ ಆಕಾಶದಲ್ಲಿ ಹಾರುವ ಇವುಗಳ ಆಗಮನ ಮತ್ತು ನಿರ್ಗಮನದ ಸಮಯದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್‍ಗಳೂ ಕೊಂಚ ಮೈಮರೆತರೂ ಭಾರೀ ಅನಾಹುತ ಸಂಭವಿಸಬಹುದು. ವಿಮಾನ ನಿಲ್ದಾಣಗಳಲ್ಲಿ ಇರುವ ಆಕರ್ಷಕ ಮತ್ತು ಅತ್ಯಗತ್ಯ ಉದ್ಯೋಗಗಳಲ್ಲಿ `ಏರ್ ಟ್ರಾಫಿಕ್ ಕಂಟ್ರೋಲರ್' ಸಹ ಪ್ರಮುಖವಾದದ್ದು. ಈಗಾಗಲೇ ಆಕಾಶದಲ್ಲಿ ವಿಮಾನಗಳ ದಟ್ಟಣೆ ಹೆಚ್ಚಿದ್ದು, ಮುಂದಿನ ದಿನಗಳಲ್ಲಿ ವಿಮಾನಗಳ ಸಂಖ್ಯೆ ಇನ್ನಷ್ಟು ಹೆಚ್ಚಲಿದೆ. ಹೀಗಾಗಿ ಈ ಉದ್ಯೋಗಕ್ಕೆ ಉತ್ತಮ ಬೇಡಿಕೆಯಿದೆ.

* ಏರ್ ಟ್ರಾಫಿಕ್ ಕಂಟ್ರೋಲರ್ ಆಗಬೇಕಿದ್ದರೆ ಯಾವ ಎಗ್ಸಾಂ ಪಾಸ್ ಆಗಬೇಕು?
ಸಿವಿಲ್ ಎಟಿಸಿ ಎಂಟ್ರೆನ್ಸ್ ಎಗ್ಸಾಂ ಪಾಸ್ ಆಗಬೇಕು.

* ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಉತ್ತೀರ್ಣರಾಗಲು ಇರಬೇಕಾದ ಸಾಮಾನ್ಯ ವಿದ್ಯಾರ್ಹತೆ ಏನು?
ಎಲೆಕ್ಟ್ರಾನಿಕ್ಸ್/ ಟೆಲಿ ಕಮ್ಯುನಿಕೇಷನ್/ರೇಡಿಯೊ ಎಂಜಿನಿಯರಿಂಗ್/ಎಲೆಕ್ಟ್ರಾನಿಕ್ಸ್ ಸ್ಪೆಷಲೈಜೇಷನ್‍ನಲ್ಲಿ ಎಲೆಕ್ಟ್ರಿಕಲ್‍ನಲ್ಲಿ ಎಂಜಿನಿಯರಿಂಗ್ ಪದವಿ ಪಡೆದವರು ಎಟಿಸಿ ಎಂಟೆನ್ಸ್ ಎಗ್ಸಾಂಗೆ ಅರ್ಜಿ ಸಲ್ಲಿಸಬಹುದು. ವೈರ್‍ಲೆಸ್ ಕಮ್ಯುನಿಕೇಷನ್, ಎಲೆಕ್ಟ್ರಾನಿಕ್ಸ್, ರೇಡಿಯೋ ಫಿಸಿಕ್ಸ್ ಅಥವಾ ರೇಡಿಯೊ ಎಂಜಿನಿಯರಿಂಗ್ ಅನ್ನು ವಿಶೇಷ ವಿಷಯವಾಗಿ ಆಯ್ಕೆ ಮಾಡಿಕೊಂಡು ಎಂಎಸ್ಸಿ ಪದವಿ ಪಡೆದವರೂ ಅರ್ಜಿ ಸಲ್ಲಿಸಬಹುದು. ಇವುಗಳಲ್ಲಿ ಶೇಕಡ 60ಕ್ಕಿಂತ ಹೆಚ್ಚು ಅಂಕ ಪಡೆದವರು ಮಾತ್ರ ಪರೀಕ್ಷೆ ಬರೆಯಬಹುದಾಗಿದೆ.

* ಸಿವಿಲ್ ಎಟಿಸಿ ಪ್ರವೇಶ ಪರೀಕ್ಷೆ ಬರೆಯಲು ವಯೋಮಿತಿ ಎಷ್ಟು?
ಕನಿಷ್ಠ 21 ವರ್ಷ. ಗರಿಷ್ಠ 27 ವರ್ಷ.

* ಆಯ್ಕೆ ಪ್ರಕ್ರಿಯೆ ಹೇಗಿರುತ್ತದೆ?
ಲಿಖಿತ ಪರೀಕ್ಷೆ, ಧ್ವನಿ ಪರೀಕ್ಷೆ ಮತ್ತು ಸಂದರ್ಶನದ ಮೂಲಕ ಅರ್ಹ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಲಿಖಿತ ಪರೀಕ್ಷೆಯಲ್ಲಿ ಶೈಕ್ಷಣಿಕ ಅರ್ಹತೆಗೆ ಪೂರಕವಾದ ಶೇಕಡ 50ರಷ್ಟು ಪ್ರಶ್ನೆಗಳಿರುತ್ತವೆ. ಉಳಿದ ಶೇಕಡ 50ರಷ್ಟು ಪ್ರಶ್ನೆಗಳು ಸಾಮಾನ್ಯ ಜ್ಞಾನ, ಸಾಮಾನ್ಯ ಬುದ್ಧಿಮತ್ತೆ(ಇಂಟಲಿಜೆನ್ಸ್), ಜನರಲ್ ಆ್ಯಪ್ಟಿಟ್ಯೂಡ್, ಇಂಗ್ಲಿಷ್ ಇತ್ಯಾದಿಗಳನ್ನು ಒಳಗೊಂಡಿರುತ್ತದೆ. ಈ ಪರೀಕ್ಷೆ ಪಾಸ್ ಆದ ನಂತರ ಧ್ವನಿ ಪರೀಕ್ಷೆ ಮತ್ತು ಸಂದರ್ಶನ ಇರುತ್ತದೆ.

* ಎಟಿಸಿ ಎಂಟ್ರೆನ್ಸ್ ಎಗ್ಸಾಂನಲ್ಲಿ ಒಮ್ಮೆ ಅಭ್ಯರ್ಥಿಗಳು ಆಯ್ಕೆಯಾದ ನಂತರ ಮುಂದಿನ ತರಬೇತಿಗೆ ಎಲ್ಲಿಗೆ ಕಳುಹಿಸಲಾಗುತ್ತದೆ?
ಅಲಹಾಬಾದ್ ಅಥವಾ ಹೈದರಾಬಾದ್‍ನಲ್ಲಿರುವ ಸಿವಿಲ್ ಏವಿಯೇಷನ್ ಟ್ರೈನಿಂಗ್ ಕಾಲೇಜುಗಳಿಗೆ ಕಳುಹಿಸಲಾಗುತ್ತದೆ.

* ತರಬೇತಿ ಅವಧಿ ಎಷ್ಟು? ಯಾವೆಲ್ಲ ಮಾಡ್ಯುಲ್‍ಗಳನ್ನು ಓದಬೇಕಾಗುತ್ತದೆ ಮತ್ತು ಪ್ರಾಕ್ಟಿಕಲ್‍ನಲ್ಲಿ ಏನೆಲ್ಲ ಇರುತ್ತದೆ?
ಈಗ ತರಬೇತಿ ಅವಧಿಯು ಸುಮಾರು 1 ವರ್ಷದ್ದಾಗಿದೆ. ಅಂದರೆ 6 ತಿಂಗಳ ಎರಡು ವಿಭಾಗದಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್‍ಗಳು: ಏರ್ ಟ್ರಾಫಿಕ್ ಸರ್ವೀಸಸ್, ಏರೊಡ್ರೊಮ್ಸ್ ಆ್ಯಂಡ್ ಗ್ರೌಂಡ್ ಏಯ್ಡ್‍ಸ್, ಏರ್ ಲಿಜಿಸ್ಲೆಷನ್, ಮೆಟಿಯೊರೊಲಾಜಿ, ಕಮ್ಯುನಿಕೇಷನ್ ಪೆÇ್ರಸಿಜರ್, ಟೆಕ್ನಿಕಲ್, ಸರ್ಚ್ ಆ್ಯಂಡ್ ರಿಸ್ಕ್ಯೂ, ಏರ್ ನ್ಯಾವಿಗೇಷನ್ ಇತ್ಯಾದಿ ಮಾಡ್ಯುಲ್‍ಗಳಿರುತ್ತವೆ.

* ತರಬೇತಿ ಖರ್ಚು ಎಷ್ಟು?
ವೆಚ್ಚವನ್ನು ದೇಶದ ವಿಮಾನಯಾನ ಪ್ರಾಧಿಕಾರ ನೋಡಿಕೊಳ್ಳುತ್ತದೆ.

* ತರಬೇತಿಯಲ್ಲಿ ಅನರ್ಹತೆ ಪಡೆಯುವ ಸಾಧ್ಯತೆ ಇದೆಯೇ?
ಹೌದು, ಅಭ್ಯರ್ಥಿಯು ಎರಡು ಬಾರಿ ಪರೀಕ್ಷೆ ಬರೆದರೂ ಶೇಕಡ 70ಕ್ಕಿಂತ ಹೆಚ್ಚು ಅಂಕ ಪಡೆಯದಿದ್ದಲ್ಲಿ ಏರ್ ಟ್ರಾಫಿಕ್ ಕಂಟ್ರೋಲರ್ ಆಗುವ ಅರ್ಹತೆ ಕಳೆದುಕೊಳ್ಳುತ್ತಾರೆ.

* ತರಬೇತಿ ಮುಗಿದ ನಂತರ ಅಭ್ಯರ್ಥಿಗಳಿಗೆ ಮೊದಲು ದೊರಕುವ ಉದ್ಯೋಗ ಯಾವುದು?
ಜೂನಿಯರ್ ಎಕ್ಸಿಕ್ಯೂಟಿವ್(ಎಟಿಸಿ).

* ಯಾರು ಕೆಲಸ ಕೊಡುತ್ತಾರೆ?
ಭಾರತದಲ್ಲಿ ಏರ್ ಪೆÇೀರ್ಟ್ ಅಥಾರಿಟಿ ಆಫ್ ಇಂಡಿಯಾ(ಎಎಐ) ಮಾತ್ರ ಪ್ರಮುಖ ಉದ್ಯೋಗದಾತ. ಎಚ್‍ಎಎಲ್ ಇತ್ಯಾದಿ ಸಂಸ್ಥೆಗಳಲ್ಲಿಯೂ ಇಂತಹ ಉದ್ಯೋಗಗಳು ಇರುತ್ತವೆ. ತರಬೇತಿಯನ್ನು ಯಶಸ್ವಿಯಾಗಿ ಪೂರೈಸಿದವರಿಗೆ ಎಎಐ ಜಾಬ್ ನೀಡುತ್ತದೆ. ಒಂಥರಾ ಇದು ಜಾಬ್ ಗ್ಯಾರಂಟಿ ಕೋರ್ಸ್ .

* ವೇತನ ಎಷ್ಟಿರುತ್ತದೆ?
ತರಬೇತಿ ಅವಧಿಯಲ್ಲಿ ಟ್ರೈನಿಗಳಿಗೆ ಉಚಿತ ವಸತಿಯೊಂದಿಗೆ 7,500 ರೂ. ನೀಡಲಾಗುತ್ತದೆ. ಜೂನಿಯರ್ ಎಕ್ಸಿಕ್ಯೂಟಿವ್(ಎಟಿಸಿ)-ಗೆ 16,400ರಿಂದ 40 ಸಾವಿರ ರೂ. ಇರುತ್ತದೆ. ಮ್ಯಾನೇಜರ್(ಎಟಿಸಿ)ಗೆ 24,900ರೂ.ನಿಂದ 50,500 ರೂ.ವರೆಗೆ ಇರುತ್ತದೆ. ಸೀನಿಯರ್ ಅಸಿಸ್ಟೆಂಟ್ (ಎಲೆಕ್ಟ್ರಾನಿಕ್ಸ್)(ನಾನ್ ಎಕ್ಸಿಕ್ಯೂಟಿವ್ ಕೇಡರ್)ಗೆ 14, 500 ರೂ.ನಿಂದ 33, 500 ರೂ.ವರೆಗೆ ಇರುತ್ತದೆ.

* ಉದ್ಯೋಗದ ನೆಗೆಟಿವ್ ಮತ್ತು ಪಾಸಿಟೀವ್ ಗುಣಗಳೇನು?
ಪಾಸಿಟೀವ್: ಚಾಲೆಂಜಿಂಗ್ ಎನ್ವಾಯರ್ನ್‍ಮೆಂಟ್, ಕೆಲವೇ ಸೆಕೆಂಡಿನಲ್ಲಿ ತೀರ್ಮಾನ ತೆಗೆದುಕೊಳ್ಳುವ ಅವಶ್ಯಕತೆ, ಸ್ವತಂತ್ರ ತೀರ್ಮಾನ ತೆಗೆದುಕೊಳ್ಳುವ ಅವಕಾಶ ಇದೆ.
ನೆಗೆಟಿವ್: ಅತ್ಯಧಿಕ ಒತ್ತಡವಿರುತ್ತದೆ. ಶಿಫ್ಟ್ ಡ್ಯೂಟಿ ಇರುತ್ತದೆ. ಹೆಚ್ಚುವರಿ ಕೆಲಸದ ಒತ್ತಡ ಇರುತ್ತದೆ. ರಜೆಯ ಕೊರತೆ ಇರುತ್ತದೆ. ಹಬ್ಬ ಹರಿದಿನಗಳಲ್ಲಿ ರಜೆ ಸಿಗುವುದು ಅಪರೂಪ, ಅತ್ಯಧಿಕ ವೃತ್ತಿಪರ ರಿಸ್ಕ್ ಇರುವ ಕೆಲಸ ಇದಾಗಿದೆ.

* ಎಟಿಸಿ ಅಧಿಕಾರಿಗೆ ಯಾವೆಲ್ಲ ರ್ಯಾಂಕ್ ಅಥವಾ ಭಡ್ತಿ ದೊರಕುತ್ತದೆ?
ಜೂನಿಯರ್ ಎಕ್ಸಿಕ್ಯೂಟಿವ್, ಅಸಿಸ್ಟೆಂಟ್ ಮ್ಯಾನೇಜರ್, ಮ್ಯಾನೇಜರ್, ಸೀನಿಯರ್ ಮ್ಯಾನೇಜರ್, ಅಸಿಸ್ಟೆಂಟ್ ಜನರಲ್ ಮ್ಯಾನೇಜರ್, ಡೆಪ್ಯೂಟಿ ಜನರಲ್ ಮ್ಯಾನೇಜರ್, ಜಾಯಿಂಟ್ ಜನರಲ್ ಮ್ಯಾನೇಜರ್, ಜನರಲ್ ಮ್ಯಾನೇಜರ್, ಎಕ್ಸಿಕ್ಯೂಟಿವ್ ಡೈರೆಕ್ಟರ್(ಎಟಿಎಂ), ಎಎಐ ಆಡಳಿತ ಮಂಡಳಿಯ ಸದಸ್ಯ(ಎಟಿಎಂ).

* ತರಬೇತಿ ಮತ್ತು ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ವಿಳಾಸಗಳ ಲಿಂಕ್

www.aai.aero

www.atcguild.com

www.aviationmagic.com

www.aaians.org

www.iata.org


Published in Vijayakarnataka Mini
Cabin Crew ಉದ್ಯೋಗ ಪಡೆಯುವುದು ಹೇಗೆ?

Cabin Crew ಉದ್ಯೋಗ ಪಡೆಯುವುದು ಹೇಗೆ?

ವಿಮಾನದಲ್ಲಿ ಕ್ಯಾಬಿನ್ ಸಿಬ್ಬಂದಿಯಾಗಿ ಉದ್ಯೋಗ ಪಡೆಯುವುದು ಹೇಗೆಂಬ ಪ್ರಶ್ನೆ ಹಲವರಲ್ಲಿ ಇರಬಹುದು. ಇದಕ್ಕಾಗಿ ಯಾವ ಕೋರ್ಸ್ ಕಲಿಯಬೇಕು? ಎಲ್ಲಿ ತರಬೇತಿ ಪಡೆಯಬೇಕು? ಸೇರಿದಂತೆ ಹಲವು ಪ್ರಶ್ನೆಗಳಿಗೆ ಉತ್ತರ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು

ವಿಮಾನ ಸಿಬ್ಬಂದಿಯನ್ನು ಎರಡು ವಿಭಾಗಗಳಾಗಿ ವಿಂಗಡಿಸಬಹುದು. 1. ಫ್ಲೈಟ್ ಕ್ರ್ಯೂ. ಇವರು ವಿಮಾನದ ಹಾರಾಟ ನಡೆಸುವವರು. 2. ಕ್ಯಾಬಿನ್ ಕ್ರ್ಯೂ. ವಿಮಾನದ ಪ್ರಯಾಣಿಕರ ಸೇವೆ ಇತ್ಯಾದಿಗಳನ್ನು ಮಾಡುವವರು ಕ್ಯಾಬಿನ್ ಸಿಬ್ಬಂದಿ. ಕ್ಯಾಬಿನ್ ಕ್ರ್ಯೂ ವಿಭಾಗದಲ್ಲಿ ಫ್ಲೈಟ್ ಅಟೆಡೆಂಟ್, ಸ್ಟಿವಡ್ರ್ಸ್, ಸ್ಟಿವಡ್ರ್ಸ್‍ಸೆಸ್, ಗಗನ ಸಖರು ಅಥವಾ ಗಗನ ಸಖಿಯರು. ವಿಮಾನದಲ್ಲಿ ಪ್ರಯಾಣ ಕೈಗೊಳ್ಳುವ ಪ್ರಯಾಣಿಕರಿಗೆ ಆರಾಮದಾಯಕತೆ, ಸುರಕ್ಷತೆ ಒದಗಿಸುವ ಕಾರ್ಯ ಕ್ಯಾಬಿನ್ ಸಿಬ್ಬಂದಿಗಳದ್ದು.

ಫ್ಲೈಟ್ ಅಟೆಡೆಂಟ್ ಕಾರ್ಯಗಳು
ನೋಡುಗರಿಗೆ ಫ್ಲೈಟ್ ಅಟೆಡೆಂಟ್ ಅಥವಾ ಗಗನ ಸಖಿಯರು ಗ್ಲಾಮರಸ್ ಆಗಿ ಕಾಣಿಸಬಹುದು. ಇವರ ಕೆಲಸ ಸುಲಭ ಎಂದು ಕೊಳ್ಳಬಹುದು. ಫ್ಲೈಟ್ ಅಟೆಡೆಂಟ್‍ಗಳಿಗೆ ಅವರದ್ದೇ ಆದ ಹಲವು ಜವಾಬ್ದಾರಿಗಳಿವೆ.
* ಪ್ರಯಾಣಿಕರು ವಿಮಾನ ಏರುವಾಗ ಸ್ವಾಗತಿಸುವುದು ಅಥವಾ ವಿಮಾನ ಇಳಿಯುವಾಗ ಧನ್ಯವಾದ ಸಮರ್ಪಿಸುವುದು.
* ಪ್ರಯಾಣಿಕರಿಗೆ ತಮ್ಮ ತಮ್ಮ ಸೀಟುಗಳನ್ನು ತೋರಿಸಿಕೊಡುವುದು, ಮಕ್ಕಳಿಗೆ ಅಥವಾ ಹಿರಿಯರ ಕುರಿತು ವಿಶೇಷ ಕಾಳಜಿ ವಹಿಸುವುದು. ವಿಶೇಷ ಚೇತನ ಪ್ರಯಾಣಿಕರ ಕುರಿತು ವಿಶೇಷ ಅಸ್ಥೆ ತೋರುವುದು.
* ಪ್ರಯಾಣಿಕರಿಗೆ ಆಹಾರ ಅಥವಾ ಪಾನೀಯಗಳನ್ನು ಸರ್ವ್ ಮಾಡುವುದು.
* ಪ್ರಯಾಣಿಕರಿಗೆ ಲಭ್ಯವಿರುವ ತುರ್ತು ಸಲಕರಣೆಗಳು ಮತ್ತು ಸುರಕ್ಷತಾ ಪ್ರಕ್ರಿಯೆಗಳ ಮಾಹಿತಿ ನೀಡುವುದು.
* ಅಗತ್ಯವಿದ್ದರೆ ಪ್ರಥಮ ಚಿಕಿತ್ಸೆ ನೀಡುವುದು.
* ತುರ್ತು ಸಂದರ್ಭವನ್ನು ಸಮರ್ಥವಾಗಿ ಎದುರಿಸುವುದು.
* ಪ್ರಯಾಣಿಕರಿಗೆ ಸುದ್ದಿ ಪತ್ರಿಕೆಗಳನ್ನು, ಮ್ಯಾಗಜಿನ್‍ಗಳನ್ನು ಅಥವಾ ವಿಮಾನದಲ್ಲಿ ಲಭ್ಯವಿರುವ ಮನರಂಜನಾ ಅಥವಾ ಸುದ್ದಿ ಪತ್ರಿಕೆಗಳನ್ನು ಒದಗಿಸುವುದು.
* ಕೆಲವೊಂದು ವಾಣಿಜ್ಯ ಉತ್ಪನ್ನಗಳ ಮಾರಾಟ ಮಾಡುವ ಕೆಲಸವನ್ನೂ ವಿಮಾನದಲ್ಲಿ ಫ್ಲೈಟ್ ಅಟೆಡೆಂಟ್ ಮಾಡಬೇಕಾಗುತ್ತದೆ. ಪದಾರ್ಥಗಳ ಮಾರಾಟ ಮಾಡುವುದು.
ಇವರು ಈ ಕೆಲಸವನ್ನು ದೈಹಿಕವಾಗಿ ಮಾತ್ರವಲ್ಲದೆ ಭಾವನಾತ್ಮಕವಾಗಿಯೂ ಮಾಡಬೇಕಾಗುತ್ತದೆ. ವಿಭಿನ್ನ ವರ್ತನೆಯ ಹಲವು ಪ್ರಯಾಣಿಕರ ಜೊತೆ ವ್ಯವಹರಿಸಬೇಕಾಗುತ್ತದೆ. ಕೆಲವು ಪ್ರಯಾಣಿಕರಿಗೆ ವಿವಿಧ ಟೈಮ್ ಝೋನ್‍ನಲ್ಲಿ ಪ್ರಯಾಣ ಮಾಡುವಾಗ ಅಥವಾ ಹೆಚ್ಚು ದೂರ ಪ್ರಯಾಣ ಮಾಡುವಾಗ ವಿಶೇಷ ಕಾಳಜಿ ಬೇಕಾಗುತ್ತದೆ. ಹಲವು ಸಂದರ್ಭದಲ್ಲಿ ಪ್ರಯಾಣಿಕರು ಸಿಡಿಮಿಡಿಗೊಂಡರೂ ಫ್ಲೈಟ್ ಅಟೆಡೆಂಟ್ ಸಾವಧಾನವಾಗಿ ವ್ಯವಹರಿಸಬೇಕಾಗುತ್ತದೆ.

ಶೈಕ್ಷಣಿಕ ಅರ್ಹತೆಗಳೇನು?
ಅಂಗೀಕೃತ ವಿಶ್ವವಿದ್ಯಾಲಯದಿಂದ ಯಾವುದಾದರೂ ಪದವಿ ಅಥವಾ ಹೋಟೇಲ್ ಮ್ಯಾನೇಜ್‍ಮೆಂಟ್ ಆ್ಯಂಡ್ ಕೆಟರಿಂಗ್‍ನಲ್ಲಿ 3 ವರ್ಷದ ಡಿಪೆÇ್ಲಮಾ, ರಾಷ್ಟ್ರೀಯ ಭಾಷೆಗಳ ಜ್ಞಾನ ಮತ್ತು ಒಂದಾದರೂ ಅಂತಾರಾಷ್ಟ್ರೀಯ (ಇಂಗ್ಲಿಷ್)ಭಾಷಾ ಜ್ಞಾನ ಸಾಮಾನ್ಯವಾಗಿ ಇರಬೇಕಾಗುತ್ತದೆ. ದೈಹಿಕ ಆರೋಗ್ಯ ಉತ್ತಮವಾಗಿರಬೇಕಾಗುತ್ತದೆ. ವಯಸ್ಸು: 25 ವರ್ಷಕ್ಕಿಂತ ಕಡಿಮೆ ಇರಬೇಕು. ಎತ್ತರ: ಕನಿಷ್ಠ 170 ಸೆಂ.ಮಿ. ಇರಬೇಕಾಗುತ್ತದೆ. ಎತ್ತರಕ್ಕೆ ಹೊಂದಾಣಿಕೆಯಾಗುವಷ್ಟು ತೂಕ ಇರಬೇಕು. ಹೆಚ್ಚಾಗಿ ಅವಿವಾಹಿತರನ್ನೇ ಈ ಹುದ್ದೆಗೆ ನೇಮಿಸಿಕೊಳ್ಳಲಾಗುತ್ತದೆ. ಗೋಚರವಾಗುವಂತಹ ಟ್ಯಾಟೂ ಇತ್ಯಾದಿಗಳು ಇರಬಾರದು.
ಏರ್ ಕ್ಯಾಬಿನ್ ಸಿಬ್ಬಂದಿಗಳಿಗೆ ಉದ್ಯೋಗದಲ್ಲಿ ವಿವಿಧ ಆಯ್ಕೆಗಳು ಇರುತ್ತವೆ. ಇವರು ಸಾರ್ವಜನಿಕ ಸ್ವಾಮ್ಯದ ಏರ್ ಇಂಡಿಯಾದಂತಹ ಸಂಸ್ಥೆಗಳಲ್ಲಿ ಕಾರ್ಯನಿರ್ವಹಿಸಬಹುದು. ಬಹುತೇಕರು ದೇಶ ಮತ್ತು ವಿದೇಶದಲ್ಲಿ ಸಂಚರಿಸುವ ಖಾಸಗಿ ವಿಮಾನ ಕಂಪನಿಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ.
ಸ್ಪೈಸ್ ಜೆಟ್, ಜೆಟ್ ಏರ್‍ವೇಸ್, ಇಂಡಿಗೊನಂತಹ ಕಂಪನಿಗಳು ಗಗನಸಖಿಯರಿಗೆ ನೆಚ್ಚಿನ ಸಂಸ್ಥೆಗಳಾಗಿ ಹೊರಹೊಮ್ಮಿದೆ. ಉದ್ಯೋಗದಲ್ಲಿ ಅನುಭವ ಪಡೆದ ನಂತರ ಇವರೆಲ್ಲರು ಸೂಪರ್‍ವೈಸರ್‍ಗಳಾಗಿ ಜೂನಿಯರ್ ಕ್ಯಾಬಿನ್ ಸಿಬ್ಬಂದಿಗಳಿಗೆ ಕೆಲಸ ವಹಿಸುವುದು ಅಥವಾ ತರಬೇತಿ ನೀಡುವ ಕಾರ್ಯವನ್ನೂ ಮಾಡಬಹುದಾಗಿದೆ. ಕೆಲವು ವಿಮಾನ ಕಂಪನಿಗಳು ಅನುಭವ ಪಡೆದವರನ್ನು ತಮ್ಮ ಸಂಸ್ಥೆಯಲ್ಲಿಯೇ ಉಳಿಸಿಕೊಂಡು ವಿವಿಧ ಆಡಳಿತ ಕೆಲಸಗಳಲ್ಲಿ ತೊಡಗಿಸಿಕೊಳ್ಳುತ್ತದೆ.

ದೇಶದ ಪ್ರಮುಖ ತರಬೇತಿ ಸಂಸ್ಥೆಗಳು
ಕ್ಯಾಬಿನ್ ಕ್ರ್ಯೂ ಉದ್ಯೋಗಕ್ಕೆ ಬೇಡಿಕೆ ಹೆಚ್ಚಾಗುತ್ತಿರುವುದರಿಂದ ತರಬೇತಿ ನೀಡುವ ಸಂಸ್ಥೆಗಳೂ ದೇಶದಲ್ಲಿ ಹೆಚ್ಚಾಗುತ್ತಿವೆ. ಬಹುತೇಕ ಸಂಸ್ಥೆಗಳು ವಿದ್ಯಾರ್ಥಿಗಳಿಂದ ಹಣ ಪೀಕುವ ಉದ್ದೇಶದಿಂದ ಹುಟ್ಟಿಕೊಂಡಿವೆ. ದೇಶದಲ್ಲಿ ಇರುವ ನಂಬಿಕಸ್ಥ ತರಬೇತಿ ಸಂಸ್ಥೆಗಳ ಮಾಹಿತಿ ಇಲ್ಲಿದೆ.
* ಇಂಡಿಯನ್ ಏರ್‍ಲೈನ್ಸ್ ಲಿಮಿಟೆಡ್, ಸೆಂಟ್ರಲ್ ಟ್ರೈನಿಂಗ್ ಎಸ್ಟಾಬ್ಲಿಷ್‍ಮೆಂಟ್, ಹೈದರಾಬಾದ್
* ಐಎಟಿಎ
* ಸ್ಕೈಲೈನ್ ಎಜುಕೇಷನಲ್ ಇನ್‍ಸ್ಟಿಟ್ಯೂಟ್, ನವದೆಹಲಿ
* ಇಂಡಿಯನ್ ಏವಿಯೇಷನ್ ಅಕಾಡೆಮಿ, ಮುಂಬೈ
* ಕ್ಯೂನಿ ಅಕಾಡೆಮಿ ಆಫ್ ಟ್ರಾವೆಲ್, ದೆಹಲಿ
* ಏರ್ ಹೋಸ್ಟ್ರೇಸ್ ಅಕಾಡೆಮಿ(ಎಎಚ್‍ಎ), ದೆಹಲಿ, ಚಂಡೀಗಢ, ಮುಂಬೈ
* ಫ್ರಾಂಕ್ ಫಿನ್ ಇನ್‍ಸ್ಟಿಟ್ಯೂಟ್ ಆಫ್ ಏರ್ ಹೋಸ್ಟ್ರೇಸ್ ಟ್ರೈನಿಂಗ್, ದೆಹಲಿ

ರಾಜ್ಯದಲ್ಲಿರುವ ಕೆಲವು ತರಬೇತಿ ಸಂಸ್ಥೆಗಳು
ರಾಜ್ಯದಲ್ಲಿ ಹಲವು ಖಾಸಗಿ ತರಬೇತಿ ಸಂಸ್ಥೆಗಳು ಕ್ಯಾಬಿನ್ ಕ್ರ್ಯೂ ತರಬೇತಿ ನೀಡುತ್ತಿವೆ.
ಆಪ್ಟೆಕ್ ಏವಿಯೇಷನ್ ಆ್ಯಂಡ್ ಹಾಸ್ಪಿಟಲಿಟಿ ಅಕಾಡೆಮಿ: ಬೆಳಗಾವಿ, ಮಂಗಳೂರು, ಬೆಂಗಳೂರು ಸೇರಿದಂತೆ ವಿವಿಧೆಡೆ ಆಪ್ಟೆಕ್ ಏವಿಯೇಷನ್ ಕೇಂದ್ರಗಳಿವೆ. ಇಲ್ಲಿ ಕ್ಯಾಬಿನ್ ಕ್ರ್ಯೂ ಮತ್ತು ಏರ್ ಹೋಸ್ಟ್ರಸ್ ಇತ್ಯಾದಿ ತರಬೇತಿಗಳನ್ನು ನೀಡಲಾಗುತ್ತದೆ.
ಎಸ್ಸೆನ್ಸ್ ಲರ್ನಿಂಗ್: ಬೆಂಗಳೂರಿನಲ್ಲಿರುವ ಎಸ್ಸೆನ್ಸ್ ಲರ್ನಿಂಗ್ ಸಹ ಏರ್ ಕ್ರ್ಯೂ ತರಬೇತಿ ನೀಡುತ್ತಿದೆ.
ಅವಲೊನ್ ಅಕಾಡೆಮಿ: ಇದು ರಾಜ್ಯದ ಹುಬ್ಬಳ್ಳಿ, ಬೆಂಗಳೂರಿನಲ್ಲಿ ಹಲವು ಕೇಂದ್ರಗಳನ್ನು ಹೊಂದಿದೆ.
ಕೈರಾಳಿ ಏವಿಯೇಷನ್: ಇದು ಬೆಂಗಳೂರಿನ ಕಮ್ಮನಹಳ್ಳಿಯಲ್ಲಿ ತರಬೇತಿ ಕೇಂದ್ರ ಹೊಂದಿದೆ.
* ಬೆಂಗಳೂರಿನಲ್ಲಿರುವ ವಾಸವಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಆ್ಯಂಡ್ ಅಡ್ವಾನ್ಸಡ್ ಸ್ಟಡೀಸ್‍ನಲ್ಲಿ ಡಿಪೆÇ್ಲಮಾ ಇನ್ ಪೆÇ್ರಫೆಷನಲ್ ಕ್ಯಾಬಿನ್ ಕ್ರ್ಯೂ ಸರ್ವೀಸ್ ಎಂಬ ಕೋರ್ಸ್ ಲಭ್ಯವಿದೆ.
* ಬೆಂಗಳೂರಿನ ಏಜೆ ಏವಿಯೇಷನ್ ಅಕಾಡೆಮಿಯಲ್ಲಿ ಡಿಪೆÇ್ಲಮಾ ಇನ್ ಪೆÇ್ರಫೆಷನಲ್ ಕ್ಯಾಬಿನ್ ಕ್ರ್ಯೂ ಸರ್ವೀಸಸ್ ಕಲಿಯಬಹುದಾಗಿದೆ.

Published in Vijayakarnataka Mini

Sunday, 27 November 2016

ಇಂಟರ್‍ನೆಟ್ ಗುರು: ಆನ್‍ಲೈನ್ ಟ್ಯೂಟರ್ ಆಗುವಿರಾ?

ಇಂಟರ್‍ನೆಟ್ ಗುರು: ಆನ್‍ಲೈನ್ ಟ್ಯೂಟರ್ ಆಗುವಿರಾ?

ಈಗಿನ ಇಂಟರ್‍ನೆಟ್ ಜಗತ್ತು ಹಲವು ವಿಭಿನ್ನ ಉದ್ಯೋಗಾವಕಾಶಗಳನ್ನು ಮನೆ ಬಾಗಿಲಿಗೆ ತಂದಿರಿಸಿದೆ. ಅಂತಹ ಹುದ್ದೆಗಳಲ್ಲಿ ಆನ್‍ಲೈನ್ ಟೀಚಿಂಗ್ ಸಹ ಪ್ರಮುಖವಾದದ್ದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಬಹುತೇಕ ವಿದ್ಯಾರ್ಥಿಗಳಿಂದು ಶಾಲೆ, ಕಾಲೇಜು ಮುಗಿಸಿ ಟ್ಯೂಷನ್‍ಗೆಂದು ಹೊರಗಡೆ ಹೋಗುವುದಿಲ್ಲ. ತಮ್ಮ ಮನೆಯಲ್ಲಿಯೇ ವೆಬ್ ಕ್ಯಾಮ್ ಆನ್ ಮಾಡಿ ಕಂಪ್ಯೂಟರ್ ಮುಂದೆ ಕುಳಿತುಕೊಳ್ಳುತ್ತಾರೆ. ಅವರಿಗೆ ಆನ್‍ಲೈನ್ ಟೀಚರ್ ಪಾಠ ಮಾಡುತ್ತಾರೆ. ಈ ರೀತಿಯ ಶಿಕ್ಷಣ ಟ್ರೆಂಡ್ ಈಗ ಹೆಚ್ಚಾಗಿದೆ. ಇದರಿಂದ ಉದ್ಯೋಗಾವಕಾಶವೂ ಹೆಚ್ಚಾಗಿದೆ. ಆನ್‍ಲೈನ್ ಟ್ಯೂಟರ್ ಎಂದು ಜಾಬ್ ವೆಬ್‍ಸೈಟ್‍ಗಳಲ್ಲಿ ಹುಡುಕಿದರೆ ಸಾಕಷ್ಟು ಜಾಬ್ ಆಫರ್‍ಗಳು ಕಾಣಸಿಗುತ್ತವೆ. ಮನೆಯಲ್ಲಿಯೇ ಕುಳಿತು ಪಾಠ ಮಾಡುವುದರಿಂದ ಇದು ಗ್ರಹಿಣಿಯರಿಗೆ, ನಿವೃತ್ತರಿಗೆ ಮತ್ತು ಉನ್ನತ್ತ ಶಿಕ್ಷಣ ಪಡೆಯುತ್ತಿರುವ ವಿದ್ಯಾರ್ಥಿಗಳಿಗೆ ಪಾರ್ಟ್‍ಟೈಂ ಉದ್ಯೋಗವಾಗುತ್ತದೆ. ಈಗ ಆನ್‍ಲೈನ್‍ನಲ್ಲಿ ಹೊಸ ಹೊಸ ಕೋರ್ಸ್‍ಗಳನ್ನು ಕಲಿಯುವವರ ಸಂಖ್ಯೆಯೂ ಹೆಚ್ಚಾಗುತ್ತಿದ್ದು, ಆನ್‍ಲೈನ್ ಟ್ಯೂಟರ್‍ಗಳಿಗೆ ಉದ್ಯೋಗಾವಕಾಶ ಹೆಚ್ಚಾಗುತ್ತಿದೆ.

ಅರ್ಹತೆ ಏನಿರಬೇಕು?
ಆನ್‍ಲೈನ್ ಟ್ಯೂಟರ್ ಆಗಲು ಉಳಿದ ಟೀಚಿಂಗ್ ಪೆÇೀಸ್ಟ್‍ಗಳಿಗೆ ಇರುವಂತೆ ಟೀಚಿಂಗ್ ಶಿಕ್ಷಣ, ಸ್ನಾತಕೋತ್ತರ ಇತ್ಯಾದಿ ವಿದ್ಯಾರ್ಹತೆ ಇರಬೇಕು. ತಂತ್ರಜ್ಞಾನದ ಸಮರ್ಪಕ ಬಳಕೆ ತಿಳಿದರಬೇಕಾಗುತ್ತದೆ. ಹೆಚ್ಚಿನ ಟ್ಯೂಟರ್ ಸಂಸ್ಥೆಗಳು ಉತ್ತಮ ಸಂವಹನ ಕೌಶಲ ಇರುವವರಿಗೆ ಆದ್ಯತೆ ನೀಡುತ್ತವೆ.
ಹೇಗೆ ಟೀಚಿಂಗ್ ಮಾಡಬೇಕು?: ಆನ್‍ಲೈನ್ ಟ್ಯೂಟರ್‍ಗಳು ಕ್ಲಾಸ್ ರೂಂನಲ್ಲಿ ಪಾಠ ಮಾಡುವ ಕೆಲಸವನ್ನೇ ಮಾಡುತ್ತಾರೆ. ಆದರೆ, ಆನ್‍ಲೈನ್‍ನಲ್ಲಿ ಕೇವಲ ಬೋಧನೆ ಮಾಡುತ್ತ ಇದ್ದರೆ ಸಾಲದು. ಇಂಟರ್‍ನೆಟ್ ತಂತ್ರಜ್ಞಾನದ ವೆಬ್ ಕ್ಯಾಮೆರಾ, ಫೆÇೀರಮ್‍ಗಳು, ಸೋಷಿಯಲ್ ಮೀಡಿಯಾ, ಬ್ಲಾಗಿಂಗ್ ತಾಣಗಳು, ಚಾಟ್ ರೂಂ ಇತ್ಯಾದಿಗಳನ್ನು ಬಳಸಿ ಪಾಠ ಮಾಡಬೇಕಾಗುತ್ತದೆ. ಇಮೇಲ್, ಚಾಟ್ ರೂಂ ಅಥವಾ ಮೆಸೆಜ್ ಬೋರ್ಡ್ ಮೂಲಕ ವಿದ್ಯಾರ್ಥಿಯೊಂದಿಗೆ ಮುಖಾಮುಖಿಯಾಗಬೇಕಾಗುತ್ತದೆ.

ಟ್ಯೂಟರ್‍ಗೆ ಟಿಪ್ಸ್
ನಿಮ್ಮ ಆನ್‍ಲೈನ್ ಟೀಚಿಂಗ್ ಹೆಚ್ಚು ಪರಿಣಾಮಕಾರಿಯಾಗಲು ಸಹಕರಿಸುವ ಒಂದಿಷ್ಟು ಟಿಪ್ಸ್‍ಗಳು ಇಲ್ಲಿವೆ.
* ಆನ್‍ಲೈನ್‍ನಲ್ಲಿ ಏನು ಪಾಠ ಮಾಡಬೇಕೆಂದು ಮೊದಲೇ ರೂಪುರೇಷೆ ಸಿದ್ಧವಾಗಿರುತ್ತದೆ. ಅದನ್ನು ಸಮರ್ಪಕವಾಗಿ ಪ್ರಸಂಟೇಷನ್ ಮಾಡುವ ಕಲೆ ನಿಮಗಿರಬೇಕು. ವಿದ್ಯಾರ್ಥಿಗಳು ತಕ್ಷಣ ಏನಾದರೂ ಪ್ರಶ್ನೆ ಕೇಳಿದರೆ ಉತ್ತರಿಸುವ ಜ್ಞಾನ ನಿಮ್ಮಲ್ಲಿ ಇರಬೇಕು. ಇದಕ್ಕಾಗಿ ಆನ್‍ಲೈನ್‍ನಲ್ಲಿ ವಿದ್ಯಾರ್ಥಿಗಳಿಗೆ ಇಂಪ್ರೆಷನ್ ಮಾಡುವಂತಹ ಗುಣ ಬೆಳೆಸಿಕೊಳ್ಳಿ.
* ವಿದ್ಯಾರ್ಥಿಗಳು ಆನ್‍ಲೈನ್‍ನಲ್ಲಿ ಇರುವವರು ಎಂದು ಕಡೆಗಣಿಸಬೇಡಿ. ಕಾಲಕಾಲಕ್ಕೆ ಎಲ್ಲಾ ಅಸೈನ್‍ಮೆಂಟ್‍ಗಳನ್ನು ಕೇಳಿರಿ. ಅವರಿಗೆ ಹೋಂವರ್ಕ್ ಕುರಿತು ನೆನಪಿಸುತ್ತ ಇರಿ. ವಿದ್ಯಾರ್ಥಿಗಳಿಗೆ ಓದುವ ಆಸಕ್ತಿ ಮೂಡಿಸಿ. ಆನ್‍ಲೈನ್ ಎನ್ನುವುದು ಮಾಧ್ಯಮವಷ್ಟೇ, ಕ್ಲಾಸ್‍ರೂಂನಲ್ಲಿ ಪಾಠ ಮಾಡುವಷ್ಟು ಸೀರಿಯಸ್‍ನೆಸ್ ಇಲ್ಲೂ ಇರಲಿ.
* ನಿಗದಿತ ಸಮಯದಲ್ಲಿ ಇಂತಿಷ್ಟು ವಿಷಯಗಳನ್ನು ಬೋಧಿಸುವ ಅನಿವಾರ್ಯತೆ ಇರುತ್ತದೆ. ಈ ಸಮಯದಲ್ಲಿ ವಿದ್ಯಾರ್ಥಿಗಳಿಗೆ ಅರ್ಥವಾಗಿದೆಯೇ ಎಂದು ತಿಳಿದುಕೊಂಡೇ ಮುಂದುವರೆಯಿರಿ.
* ಪ್ಲಾನಿಂಗ್ ಇರಲಿ: ಸಿದ್ಧತೆ ನಡೆಸದೆ ಆನ್‍ಲೈನ್ ಟೀಚಿಂಗ್ ಮಾಡಬೇಡಿ. ಪ್ರತಿದಿನ ಹೆಚ್ಚು ಕಲಿಯಿರಿ. ಪರಿಣಾಮಕಾರಿಯಾಗಿ ಬೋಧನೆ ಮಾಡಿ.
* ಸಮರ್ಪಕ ಫೀಡ್‍ಬ್ಯಾಕ್ ನೀಡಿ. ವಿದ್ಯಾರ್ಥಿಗಳು ಕೇಳಿದ ಪ್ರಶ್ನೆಗಳಿಗೆ ಸಮರ್ಪಕವಾದ ಉತ್ತರ ನೀಡಿ. ಜೊತೆಗೆ, ಅವರಲ್ಲಿ ಹೆಚ್ಚು ಹೆಚ್ಚು ಪ್ರಶ್ನೆ ಕೇಳುವಂತೆ ಮಾಡಿ. ವಿದ್ಯಾರ್ಥಿಗಳು ಕೇಳಿದ ಕಲಿಕಾ ಸಾಮಾಗ್ರಿಗಳನ್ನು ಶೀಘ್ರದಲ್ಲಿ ಸಲ್ಲಿಸಲು ಪ್ರಯತ್ನ ಮಾಡಿ. ಸಾಧ್ಯವಾದರೆ ಒಂದೇ ದಿನದಲ್ಲಿ ವಿದ್ಯಾರ್ಥಿಗಳಿಗೆ ತಲುಪಿಸಿ.
* ವಿದ್ಯಾರ್ಥಿಗಳೊಂದಿಗೆ ಪಠ್ಯದ ವಿಷಯ ಹೊರತುಪಡಿಸಿ ಬೇರೆ ಯಾವುದೇ ವಿಷಯಗಳನ್ನು ಮಾತನಾಡಬೇಡಿ.
* ಗುಣಮಟ್ಟ ಕಾಯ್ದುಕೊಳ್ಳಿ. ಆನ್‍ಲೈನ್ ಕಲಿಕಾ ಅನುಭವವನ್ನು ಉತ್ತಮ ಪಡಿಸಲು ಯತ್ನಿಸಿ. ಗುಣಮಟ್ಟದಲ್ಲಿ ಎಂದಿಗೂ ರಾಜಿಯಾಗಬೇಡಿ.

ಉದ್ಯೋಗ ಹುಡುಕಾಟ ಹೇಗೆ?
ಇಂಟರ್‍ನೆಟ್: ಆನ್‍ಲೈನ್ ಟೀಚಿಂಗ್ ಉದ್ಯೋಗ ಹುಡುಕಾಟಕ್ಕೆ ಇಂಟರ್‍ನೆಟ್ ಪ್ರಮುಖ ಮಾಧ್ಯಮ. ಜಾಬ್ ಪೆÇೀರ್ಟಲ್‍ಗಳಲ್ಲಿ ನಿಮ್ಮ ರೆಸ್ಯೂಂ ಅಪ್‍ಲೋಡ್ ಮಾಡಿ. ಅಲ್ಲಿ ಸ್ಪಷ್ಟವಾಗಿ ಆನ್‍ಲೈನ್ ಟ್ಯೂಟರ್ ಆಗಲು ಬಯಸಿರುವುದನ್ನು ಉಲ್ಲೇಖಿಸಿ. ರೆಸ್ಯೂಂನಲ್ಲಿ ಇಮೇಲ್ ಐಡಿ ಮತ್ತು ಫೆÇೀನ್ ನಂಬರ್ ಬರೆಯಲು ಮರೆಯಬೇಡಿ.
ವೆಬ್‍ಸೈಟ್‍ಗಳು: ನೀವು ಯಾವುದಾದರೂ ಪ್ರಮುಖ ಆನ್‍ಲೈನ್ ಟ್ಯೂಷನ್ ಸಂಸ್ಥೆಗಳಲ್ಲಿ ಕೆಲಸ ಮಾಡಬೇಕೆಂದು ಬಯಸಿದ್ದಾರ? ನೇರವಾಗಿ ಆ ಸಂಸ್ಥೆಯ ವೆಬ್‍ಸೈಟ್‍ಗೆ ಪ್ರವೇಶಿಸಿ. ಅಲ್ಲಿ ಉದ್ಯೋಗಾವಕಾಶ ಇದೆಯೇ ಎಂದು ಕರಿಯರ್ ವಿಭಾಗದಲ್ಲಿ ಹುಡುಕಿ. ಅಲ್ಲಿ ಇದ್ದರೆ ಅರ್ಜಿ ಸಲ್ಲಿಸಿ. ಇಲ್ಲದಿದ್ದರೂ ಒಂದು ಇಮೇಲ್‍ನಲ್ಲಿ ರೆಸ್ಯೂಂ ಫಾವರ್ಡ್ ಮಾಡಿಬಿಡಿ.
ಆನ್‍ಲೈನ್ ನೇಮಕಾತಿ ಸಂಸ್ಥೆಗಳು: ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಆನ್‍ಲೈನ್ ಟೀಚಿಂಗ್ ಹುದ್ದೆಗಳಿಗೆ ಅಭ್ಯರ್ಥಿಗಳನ್ನು ಹುಡುಕಲು ನೇಮಕಾತಿ ಸಂಸ್ಥೆಗಳು ಅಥವಾ ಏಜೆನ್ಸಿಗಳು ಇರುತ್ತವೆ. ಇಂತಹ ಸಂಸ್ಥೆಗಳನ್ನೂ ಸಂಪರ್ಕಿಸಬಹುದು. ಆದರೆ, ಈ ವಿಭಾಗದಲ್ಲಿ ವಂಚಕರು ಹೆಚ್ಚಿರುತ್ತಾರೆ. ಅತ್ಯಧಿಕ ಶುಲ್ಕ ಕೇಳುವ ಏಜೆನ್ಸಿ ಅಥವಾ ಕನ್ಸಲ್ಟೆಂಟ್‍ಗಳಿಂದ ದೂರವಿರಿ.
ನ್ಯೂಸ್‍ಪೇಪರ್ಸ್-ಆನ್‍ಲೈನ್: ಸುದ್ದಿಪತ್ರಿಕೆಗಳ ಉದ್ಯೋಗ ಮಾಹಿತಿ ವಿಭಾಗದಲ್ಲಿಯೂ ಆನ್‍ಲೈನ್ ಟ್ಯೂಟರ್ ಓಪನಿಂಗ್ಸ್ ಕುರಿತು ಮಾಹಿತಿ ಇರುತ್ತದೆ. ಹೀಗಾಗಿ ಪತ್ರಿಕೆಗಳನ್ನು ಓದುತ್ತಿರಿ. ಆನ್‍ಲೈನ್ ನ್ಯೂಸ್ ಪೆÇೀರ್ಟಲ್‍ಗಳಲ್ಲಿಯೂ ಉದ್ಯೋಗ ಸುದ್ದಿಗಳಿವೆಯೇ ನೋಡಿಕೊಳ್ಳಿ.
ಪರ್ಸನಲ್ ರೆಫರೆನ್ಸ್: ಈಗಾಗಲೇ ಆನ್‍ಲೈನ್ ಟೀಚಿಂಗ್ ಮಾಡುತ್ತಿರುವ ಸ್ನೇಹಿತರು ಇದ್ದರೆ ಅವರಿಂದಲೂ ಉದ್ಯೋಗ ಮಾಹಿತಿ ಪಡೆದುಕೊಳ್ಳಿ. ಸೋಷಿಯಲ್ ನೆಟ್‍ವರ್ಕಿಂಗ್ ಸೈಟ್‍ಗಳಲ್ಲಿಯೂ ಇಂತಹ ಕರಿಯರ್ ಮಾಡುತ್ತಿರುವವರನ್ನು ಸ್ನೇಹಿತರನ್ನಾಗಿ ಮಾಡಿಕೊಳ್ಳಬಹುದು. ಅವರಿಂದ ಮಾಹಿತಿ ಪಡೆದುಕೊಳ್ಳಬಹುದು.
ಆನ್‍ಲೈನ್ ಟ್ಯೂಟರ್ ಕೋರ್ಸ್
ನೀವು ಎಂಎ ಇತ್ಯಾದಿ ಶಿಕ್ಷಣ ಪಡೆದಿದ್ದರೂ ಆನ್‍ಲೈನ್‍ನಲ್ಲಿ ಟೀಚಿಂಗ್ ಮಾಡಲು ವಿಶೇಷ ಕೌಶಲ ಬೇಕಾಗುತ್ತದೆ. ಇದಕ್ಕೆ ಸಂಬಂಧಪಟ್ಟ ವಿವಿಧ ಕೋರ್ಸ್‍ಗಳನ್ನು ಕಲಿತರೆ ಉಪಯೋಗವಾಗಬಹುದು. ಆನ್‍ಲೈನ್‍ನಲ್ಲಿ ಇದಕ್ಕೆ ಸಂಬಂಧಪಟ್ಟ ಸರ್ಟಿಫಿಕೇಷನ್‍ಗಳು, ಕೋರ್ಸ್‍ಗಳು ಲಭ್ಯ ಇವೆ. ಇವುಗಳನ್ನು ಬಳಸಿಕೊಳ್ಳಬಹುದು. ಕೆಲವು ಲಿಂಕ್‍ಗಳನ್ನು ಇಲ್ಲಿ ನೀಡಲಾಗಿದೆ.
ಟೀಚರ್ ಫೌಂಡೇಷನ್
ಟಿಇಎಫ್‍ಎಲ್ ಟೆಸೊಲ್:
ಟ್ಯೂಟರ್ ಇಂಡಿಯಾ
ಟೀಚರ್ ಡಿಪೆÇ್ಲಮಾ ಕೋರ್ಸ್

Monday, 14 November 2016

Healthcareನಲ್ಲಿ ಯಾವ್ಯಾವ ಉದ್ಯೋಗಗಳು ಇವೆ? ಏನು ಓದಿರಬೇಕು?

Healthcareನಲ್ಲಿ ಯಾವ್ಯಾವ ಉದ್ಯೋಗಗಳು ಇವೆ? ಏನು ಓದಿರಬೇಕು?

ಆರೋಗ್ಯವಲಯದಲ್ಲಿ ಈಗ ಬೇಡಿಕೆಯಲ್ಲಿರುವ ಮತ್ತು ಮುಂದೆ ಬೇಡಿಕೆ ಪಡೆಯಲಿರುವ ವಿವಿಧ ಉದ್ಯೋಗಾವಕಾಶಗಳ ಮಾಹಿತಿ ಇಲ್ಲಿದೆ.

ಹೆಲ್ತ್‍ಕೇರ್ ಎಂದರೆ ಔಷಧ ಮತ್ತು ಚಿಕಿತ್ಸಾ ವಿಭಾಗ ಮಾತ್ರವಲ್ಲದೆ ಇವೆರಡಕ್ಕೂ ಬೆಂಬಲ ನೀಡುವ ವಿಭಾಗವೂ ಸೇರಿದೆ. ಡಾಕ್ಟರ್, ನರ್ಸ್ ಮಾತ್ರವಲ್ಲದೆ ಆರೋಗ್ಯ ಸೇವೆಗೆ ಸಂಬಂಧಪಟ್ಟ ಇತರ ಉದ್ಯೋಗಗಳೂ ಬೇಡಿಕೆ ಪಡೆಯುತ್ತಿವೆ. ಆರೋಗ್ಯ ಸೇವಾ ವಿಭಾಗಕ್ಕೆ ಪ್ರವೇಶ ಪಡೆಯಲು ಆಯಾ ವಿಭಾಗದ ವಿಶೇಷ ಕೌಶಲಗಳು ಬೇಕಾಗುತ್ತದೆ. ಮುಂದಿನ ದಿನಗಳಲ್ಲಿ ಆರೋಗ್ಯ ಸೇವಾ ವಿಭಾಗಗಳಲ್ಲಿ ಬೇಡಿಕೆ ಪಡೆಯುವ ನಿರೀಕ್ಷೆಯಲ್ಲಿರುವ ಕೆಲವು ಹುದ್ದೆಗಳ ವಿವರ ಇಲ್ಲಿದೆ.

ಫಾರ್ಮಾಸಿಸ್ಟ್
ಔಷಧ ವಿಭಾಗದಲ್ಲಿ ಕೆಲಸ ಮಾಡುವ ಫಾರ್ಮಾಸಿಸ್ಟ್‍ಗಳಿಗೆ ಈಗಲೂ ಉತ್ತಮ ಬೇಡಿಕೆಯಿದೆ. ಮುಂದೆಯೂ ಬೇಡಿಕೆ ಇರುವ ನಿರೀಕ್ಷೆ ಇದೆ. ಔಷಧ ತಯಾರಿಕೆ ಮಾತ್ರವಲ್ಲದೆ ರೋಗಿಯೂ ಎಷ್ಟು ಪ್ರಮಾಣದಲ್ಲಿ ಔಷಧ ಸೇವಿಸಬೇಕೆಂಬ ಸಂಶೋಧನೆಯೂ ಫಾರ್ಮಾಸಿಸ್ಟ್ ಮಾಡಬೇಕಾಗುತ್ತದೆ. ಇದು ಹೊಸ ಬಗೆಯ ಉದ್ಯೋಗವಲ್ಲದೆ ಇದ್ದರೂ ಈಗ ಔಷಧೀಯ ಲೋಕದಲ್ಲಿ ಹೊಸ ಹೊಸ ಅನ್ವೇಷಣೆಗಳು, ಬದಲಾವಣೆಗಳು ಉಂಟಾಗುತ್ತಿರುವುದರಿಂದ ಫಾರ್ಮಾಸಿಸ್ಟ್ ಉದ್ಯೋಗವು ಹೊಸ ಆಯಾಮದತ್ತ ತೆರೆದುಕೊಳ್ಳುತ್ತಿದೆ. ಫಾರ್ಮಾಸಿಸ್ಟ್‍ಗಳು ಡಾಕ್ಟರ್‍ಗಳಿಗೆ ಔಷಧ ತಯಾರಿಸಿ ವಿತರಿಸುವ ಕೆಲಸಕ್ಕೆ ಮಾತ್ರ ಇರುವವರಲ್ಲ. ವೈದ್ಯಕೀಯ ಸಿಬ್ಬಂದಿಗಳಿಗೆ ಔಷಧ ಕುರಿತಾದ ಸಂದೇಹಗಳಿದ್ದರೆ ಪರಿಹರಿಸುವುದು, ಸಂಶೋಧನೆಗಳನ್ನು ಕೈಗೊಳ್ಳುವುದು, ಆಸ್ಪತ್ರೆಗಳಿಗೆ ಆಗಾಗ ಭೇಟಿ ನೀಡಿ ಔಷಧಗಳ ಪರಿಣಾಮಗಳ ಕುರಿತು ನಿಗಾ ವಹಿಸುವುದೂ ಇವರ ಕೆಲಸವಾಗಿದೆ.
ಈ ಕ್ಷೇತ್ರದಲ್ಲಿ ಆರಂಭಿಕರಿಗೆ ಅಥವಾ ಫ್ರೆಷರ್ಸ್‍ಗಳಿಗೆ ಉತ್ತಮ ಬೇಡಿಕೆಯಿದೆ. ಈಗ ಶೇಕಡ 60ರಷ್ಟು ಫಾರ್ಮಾಸಿಸ್ಟ್ ಉದ್ಯೋಗವು ಎಂಟ್ರಿ ಲೆವೆಲ್ ಹಂತದಲ್ಲಿದೆ. ಉಳಿದ ಹುದ್ದೆಗಳು ಅನುಭವಿಗಳಿಗೆ ಮೀಸಲಾಗಿದೆ. ಈ ಕ್ಷೇತ್ರದಲ್ಲಿ ಫ್ರೆಷರ್ಸ್‍ಗಳು ವರ್ಷಕ್ಕೆ 1.5-3.5 ಲಕ್ಷ ರೂಪಾಯಿ ವೇತನ ಪಡೆಯುತ್ತಿದ್ದಾರೆ.

ಐಟಿ ಎಕ್ಸಿಕ್ಯೂಟಿವ್ಸ್
ಆರೋಗ್ಯ ಸೇವಾ ವಲಯದಲ್ಲಿ ಐಟಿ ಎಕ್ಸಿಕ್ಯೂಟಿವ್ಸ್‍ಗಳಿಗೂ ಬೇಡಿಕೆ ಹೆಚ್ಚಾಗುತ್ತಿದೆ. ಡೇಟಾ ಬೇಸ್, ಅಭಿವೃದ್ಧಿ, ಟೆಕ್ ಸಪೆÇೀರ್ಟ್ ಮತ್ತು ಸೊಲ್ಯುಷನ್ಸ್ ವಿಭಾಗಗಳಲ್ಲಿ ಕೆಲಸ ಮಾಡುವ ವೃತ್ತಿಪರರಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಹೆಲ್ತ್‍ಕೇರ್ ವ್ಯವಸ್ಥೆಯಲ್ಲಿ ತಂತ್ರಜ್ಞಾನವು ಅಂತರ್ಗತ ಭಾಗವಾಗುತ್ತಿರುವುದರಿಂದ ಸಾಫ್ಟ್‍ವೇರ್ ಮತ್ತು ಐಟಿ ಅಡ್ಮಿನಿಸ್ಟ್ರೇಷನ್ ಮತ್ತು ಸಪೆÇೀರ್ಟ್ ವಿಭಾಗದಲ್ಲಿ ಸಿಬ್ಬಂದಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ.

ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷಗಳ ಅನುಭವ ಇರುವ ಅಭ್ಯರ್ಥಿಗಳಿಗೆ ಬೇಡಿಕೆ ಹೆಚ್ಚಾಗುತ್ತಿದೆ. ಶೇಕಡ 55ರಷ್ಟು ಥಟಿ/ಟೆಕ್ ಉದ್ಯೋಗಗಳು ಮಧ್ಯಮ ಹಂತದಲ್ಲಿ ನೇಮಕವಾಗುತ್ತಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2-4 ಲಕ್ಷ ರೂಪಾಯಿ.

ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್
ಆರೋಗ್ಯ ಸೇವಾ ವಿಜ್ಞಾನದಲ್ಲಿ ಕ್ಲಿನಿಕಲ್ ರಿಸರ್ಚ್ ಎನ್ನುವ ಶಾಖೆಯು ಔಷಧಿಗಳ ಪರಿಣಾಮಕಾರಿ ಮತ್ತು ಸುರಕ್ಷತೆಯನ್ನು ಪರಿಶೀಲಿಸಲು, ಆರೋಗ್ಯ ಸಾಧನಗಳು, ರೋಗನಿರ್ಣಯದ ಉತ್ಪನ್ನಗಳನ್ನು ಮತ್ತು ಚಿಕಿತ್ಸಾ ಕಟ್ಟುಪಾಡುಗಳನ್ನು ಪರಿಶೀಲಿಸಲು ಮತ್ತು ಸಂಶೋಧಿಸುವ ಕಾರ್ಯವನ್ನು ಮಾಡುತ್ತದೆ. ಈ ವಿಭಾಗದಲ್ಲಿ ಅಸೋಸಿಯೇಟ್‍ಗಳು ಕ್ಲಿನಿಕಲ್ ಟ್ರಯಲ್‍ಗಳನ್ನು ನಡೆಸುವ ಕಾರ್ಯವನ್ನು ಮಾಡುತ್ತಾರೆ. ಇವರು ಗುಡ್ ಕ್ಲಿನಿಕಲ್ ಪ್ರಾಕ್ಟೀಸ್(ಜಿಎಸ್‍ಪಿ) ಮತ್ತು ಇಂಟರ್‍ನ್ಯಾಷನಲ್ ಕಾನ್ಫರೆನ್ಸ್ ಆನ್ ಹಾಮೊನಿಸೇಷನ್ (ಐಸಿಎಚ್)ನ ಅಂತಾರಾಷ್ಟ್ರೀಯ ನಿಯಂತ್ರಣ ಮತ್ತು ನೈತಿಕ ಮಾರ್ಗದರ್ಶನದಡಿ ಕ್ಲಿನಿಕಲ್ ಟ್ರಯಲ್‍ಗಳನ್ನು ನಡೆಸುತ್ತಾರೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ ಸುಮಾರು 2 ವರ್ಷದವರೆಗೆ ಅನುಭವ ಇದ್ದವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 67ರಷ್ಟು ಕ್ಲಿನಿಕಲ್ ರಿಸರ್ಚ್ ಅಸೋಸಿಯೇಟ್ಸ್ ಉದ್ಯೋಗಗಳು ಎಂಟ್ರಿ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2.5-5 ಲಕ್ಷ ರೂಪಾಯಿ.

ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಟರ್ಸ್
ರೋಗಿಯ ಕಾಳಜಿಗೆ ಸಂಬಂಧಪಟ್ಟಂತೆ ವಿವಿಧ ಅಂಶಗಳನ್ನು ನಿರ್ವಹಿಸುವ ಕೆಲಸನವನ್ನು ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಟರ್ಸ್‍ಗಳು ಮಾಡುತ್ತಾರೆ. ಸಮಸ್ಯೆ ಕಂಡುಹಿಡಿಯುವಿಕೆ, ಪರಿಹಾರ ಇತ್ಯಾದಿಗಳು ಇವರ ಕಾರ್ಯ. ಇವರು ಹೆಲ್ತ್‍ಕೇರ್ ವಲಯದ ಎಲ್ಲಾ ಯೂನಿಟ್‍ಗಳಲ್ಲಿಯೂ ಕಾರ್ಯನಿರ್ವಹಿಸಬೇಕಾಗುತ್ತದೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷ ಅನುಭವ ಇರುವವರಿಗೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಹೆಚ್ಚು ಬೇಡಿಕೆಯಿದೆ. ಶೇಕಡ 70ರಷ್ಟು ಹೆಲ್ತ್‍ಕೇರ್ ಅಡ್ಮಿನಿಸ್ಟ್ರೇಷನ್ ಉದ್ಯೋಗಗಳು ಮಿಡ್ ಲೆವೆಲ್‍ನಲ್ಲಿ ಇವೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 1.5-3 ಲಕ್ಷ ರೂಪಾಯಿ.

ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್
ವೈದ್ಯಕೀಯ ದಾಖಲೆಗಳನ್ನು ಬರೆಯುವುದು ಮತ್ತು ನಿರ್ವಹಣೆ ಮಾಡುವುದು ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಕೆಲಸ. ಈ ರೀತಿ ಬರೆದಿಟ್ಟರೆ ಮತ್ತು ನಿರ್ವಹಣೆ ಮಾಡಿದರೆ ವೈದ್ಯಕೀಯ ಉದ್ಯೋಗಿಗಳಿಗೆ ಭವಿಷ್ಯದಲ್ಲಿ ನೆರವಾಗುತ್ತದೆ. ರೋಗಿಯ ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಅನ್ನು ಅಂತಿಮ ಹಂತದಲ್ಲಿ ಪ್ರೂಫ್‍ರೀಡಿಂಗ್ ಮತ್ತು ಎಡಿಟಿಂಗ್ ಕೆಲಸವನ್ನೂ ಇವರು ಮಾಡಬೇಕಾಗುತ್ತದೆ. ಈ ಉದ್ಯೋಗಕ್ಕೆ ಬರುವವರು ಉತ್ತಮ ಕೇಳುಗರಾಗಿರಬೇಕು ಮತ್ತು ಟೈಪಿಸ್ಟ್‍ಗಳಾಗಿರಬೇಕು. ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಉದ್ಯೋಗವನ್ನು ಮನೆಯಲ್ಲಿ ಕುಳಿತು ಮಾಡಲೂ ಅವಕಾಶವಿದೆ.
ಬೇಡಿಕೆ ಹೇಗಿದೆ?: ಸುಮಾರು 2 ವರ್ಷದವರೆಗೆ ಅನುಭವ ಇರುವವರಿಗೆ ಹೆಚ್ಚ ಬೇಡಿಕೆಯಿದೆ. ಶೇಕಡ 80ರಷ್ಟು ಮೆಡಿಕಲ್ ಟ್ರ್ಯಾನ್ಸ್‍ಕ್ರಿಪ್ಷನಿಸ್ಟ್ ಹುದ್ದೆಗಳು ಎಂಟ್ರಿ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 1.5-2.5 ಲಕ್ಷ ರೂಪಾಯಿ.

ಅರಿವಳಿಕೆ ತಜ್ಞರು
ಮೆಡಿಕಲ್ ಅಪರೇಷನ್, ಸರ್ಜರಿ ನಡೆಸುವ ಮೊದಲು ಅಥವಾ ಶಸ್ತ್ರಚಿಕಿತ್ಸೆ ನಡೆಸುವ ಸಂದರ್ಭದಲ್ಲಿ ರೋಗಿಗಳಿಗೆ ಅರಿವಳಿಕೆ ಕೊಡುವ ಕಾರ್ಯವನ್ನು ಅರಿವಳಿಕೆ ತಜ್ಞರು ಮಾಡುತ್ತಾರೆ. ಅರಿವಳಿಕೆಯು ಆರೋಗ್ಯ ಸೇವಾ ವಿಭಾಗದಲ್ಲಿ ಅತ್ಯಂತ ನಿರ್ಣಾಯಕ ವಿಭಾಗವಾಗಿರುವುದರಿಂದ ಉದ್ಯೋಗಾವಕಾಶ ಹೆಚ್ಚಿದೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ 2ರಿಂದ 5 ವರ್ಷಗಳ ಅನುಭವ ಇರುವವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 70ರಷ್ಟು ಈ ಕ್ಷೇತ್ರದ ಉದ್ಯೋಗಗಳು ಮಿಡ್ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2.5-5 ಲಕ್ಷ ರೂಪಾಯಿ.

ರೇಡಿಯೋಗ್ರಾಫರ್ಸ್
ಎಕ್ಸ್‍ರೇ ಪರೀಕ್ಷೆ, ಮ್ಯಾಗ್ನೆಟಿಕ್ ರಿಸೊನೊನೆನ್ಸ್ ಇಮೇಜಿಂಗ್(ಎಂಆರ್‍ಐ) ಮತ್ತು ಕಂಪ್ಯೂಟೆಡ್ ಟೊಮೊಗ್ರಾಫಿ(ಸಿಟಿ) ಸ್ಕ್ಯಾನ್ ಇತ್ಯಾದಿ ಕಾರ್ಯವನ್ನು ರೇಡಿಯೋಲಾಜಿಕ್ ಟೆಕ್ನೊಲಾಜಿಸ್ಟ್‍ಗಳು ಮಾಡುತ್ತಾರೆ.
ಬೇಡಿಕೆ ಹೇಗಿದೆ?: ಈ ಕ್ಷೇತ್ರದಲ್ಲಿ ಸುಮಾರು 5 ವರ್ಷದ ಅನುಭವ ಇರುವವರಿಗೆ ಬೇಡಿಕೆ ಹೆಚ್ಚಾಗಿದೆ. ಶೇಕಡ 60ರಷ್ಟು ರೇಡಿಯೋಗ್ರಾಫಿ ಉದ್ಯೋಗಗಳು ಎಂಟ್ರಿ ಲೆವೆಲ್ ಮತ್ತು ಮಿಡ್ ಲೆವೆಲ್‍ನಲ್ಲಿದೆ.
ಆರಂಭಿಕರಿಗೆ ಅಂದಾಜು ವೇತನ: ವಾರ್ಷಿಕ 2-4ಲಕ್ಷ ರೂಪಾಯಿ.

Friday, 30 September 2016

ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಕೋರ್ಸ್ ಬಗ್ಗೆ

ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಕೋರ್ಸ್ ಬಗ್ಗೆ

ದೇಶದ ಇನ್ಸಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಐಎಂಎ) ನೀಡುವ ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ (ಸಿಎಂಎ) ಸರ್ಟಿಫಿಕೇಷನ್ ಕೋರ್ಸ್‍ಗೆ ಜಾಗತಿಕವಾಗಿ ಮನ್ನಣೆಯಿದೆ. ಸಿಎಂಎ ಸರ್ಟಿಫಿಕೇಷನ್ ಕೋರ್ಸ್ ಕುರಿತು ಹೆಚ್ಚಿನ
ಮಾಹಿತಿ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಕಾಮರ್ಸ್ ಓದಿ ಅಕೌಂಟೆಂಟ್ ಆದವರಿಗೆ ವೃತ್ತಿಯಲ್ಲಿ ಇನ್ನಷ್ಟು ಅಭಿವೃದ್ಧಿಯಾಗಲು ವಿವಿಧ ಸರ್ಟಿಫಿಕೇಷನ್ ಕೋರ್ಸ್‍ಗಳು ಸಾಥ್ ನೀಡುತ್ತವೆ. ಅವುಗಳಲ್ಲಿ ಎಸ್‍ಎಂಎ ಸರ್ಟಿಫಿಕೇಷನ್ ಸಹ ಪ್ರಮುಖವಾದದ್ದು. ಅಮೆರಿಕದ ಐಎಂಎ ಜೊತೆ ದೇಶದ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಸಿಎಂಎಯು ಎಂಒಯು ಒಪ್ಪಂದ ಮಾಡಿಕೊಂಡು ಸರ್ಟಿಫೈಡ್ ಮ್ಯಾನೇಜ್‍ಮೆಂಟ್ ಅಕೌಂಟೆಂಟ್ಸ್ ಸರ್ಟಿಫಿಕೇಷನ್ ನೀಡುತ್ತಿದೆ. ಕಂಪನಿಯೊಳಗಿನ ಹಣಕಾಸು ಕಾರ್ಯಗಳನ್ನು ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂ ನೆರವಾಗುತ್ತದೆ. ಈಗಿನ ಸಂಕೀರ್ಣ ವಾಣಿಜ್ಯ ವ್ಯವಹಾರಗಳನ್ನು ಸುಲಲಿತವಾಗಿ ನಿರ್ವಹಿಸಲು ಸಿಎಂಎ ಪೆÇ್ರೀಗ್ರಾಂನಿಂದ ಸಾಧ್ಯವಾಗುತ್ತದೆ.
ವಿಜಯ ಕರ್ನಾಟಕ ಕಾಂಪಿಟೇಷನ್ ವಿಕೆಯ ಪ್ರೊ ಲರ್ನಿಂಗ್ ಅಂಕಣದಲ್ಲಿ ಪ್ರಕಟಿ

ಯಾಕೆ ಸಿಎಂಎ ಕಲಿಯಬೇಕು?
ಮ್ಯಾನೇಜ್‍ಮೆಂಟ್ ಅಕೌಂಟೆಂಟ್ ಮತ್ತು ಫೈನಾನ್ಸಿಯಲ್ ಅಕೌಂಟೆಂಟ್ ಕುರಿತು ಉತ್ತಮ ಜ್ಞಾನ ಲಭಿಸುತ್ತದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ರೆಸ್ಯೂಂ ತೂಕ ಹೆಚ್ಚಾಗುತ್ತದೆ. ಉದ್ಯೋಗಾವಕಾಶವೂ ಹೆಚ್ಚುತ್ತದೆ. ಹೆಚ್ಚು ವೇತನದ ಆಫರ್ ಸಹ ದೊರಕುತ್ತದೆ. ನಾಯಕತ್ವ ಕೌಶಲ, ವ್ಯವಹಾರದ ಅಂತಾರಾಷ್ಟ್ರೀಯ ಮಜಲುಗಳ ಬಗ್ಗೆಯೂ ತಿಳಿದುಕೊಳ್ಳಬಹುದು.

ಯಾರು ಕಲಿಯಬಹುದು?
ಈ ಕೋರ್ಸ್ ಅನ್ನು ಕೇವಲ ವಿದ್ಯಾರ್ಥಿಗಳು ಮಾತ್ರವಲ್ಲದೆ ಈಗಾಗಲೇ ವೃತ್ತಿಯಲ್ಲಿ ಇರುವವರೂ ಮಾಡಬಹುದಾಗಿದೆ. ಅಂಗೀಕೃತ ವಿವಿ ಅಥವಾ ಶೈಕ್ಷಣಿಕ ಸಂಸ್ಥೆಯಿಂದ ಪದವಿ ಪಡೆದಿರಬೇಕು. ಅರ್ಥಶಾಸ್ತ್ರ, ಬೇಸಿಕ್ ಸ್ಟಟಿಸ್ಟಿಕ್ಸ್ ಮತ್ತು ಫೈನಾನ್ಸಿಯಲ್ ಅಕೌಂಟಿಂಗ್‍ನ ಮೂಲಭೂತ ಜ್ಞಾನ ಇರಬೇಕು. ಎರಡು ವರ್ಷದ ವೃತ್ತಿಪರ ಅನುಭವ ಜೊತೆಗಿರಬೇಕು.
ಬಿಕಾಂ, ಬಿಬಿಎ, ಎಂಬಿಎ ಇತ್ಯಾದಿ ಯಾವುದೇ ಪದವಿ ಪಡೆದ ಅಭ್ಯರ್ಥಿಗಳು, ಚಾರ್ಟೆಡ್ ಅಕೌಂಟೆಂಟ್ಸ್ ಮತ್ತು ಕಾಸ್ಟ್ ಅಕೌಂಟೆಂಟ್ಸ್ ಪಡೆದವರು ಸಿಎಂಎ ಸರ್ಟಿಫಿಕೇಷನ್ ಪಡೆಯಬಹುದು. ಮ್ಯಾನೇಜ್‍ಮೆಂಟ್ ಹಂತದಲ್ಲಿ ವೃತ್ತಿಗೆ ಪ್ರವೇಶಿಸಬಯಸುವವರು ಸಹ ಈ ಕೋರ್ಸ್ ಪಡೆಯಬಹುದು. ಕೇವಲ ಆರೆಂಟು ತಿಂಗಳಲ್ಲಿ ಈ ಎಗ್ಸಾಂ ಅನ್ನು ಪಾಸ್ ಮಾಡಬಹುದಾಗಿದೆ. ಕೇವಲ 2 ಪೇಪರ್‍ಗಳಿದ್ದು, 6 ತಿಂಗಳಲ್ಲಿ ಈ ಕೋರ್ಸ್ ಅನ್ನು ಪೂರ್ಣಗೊಳಿಸಬಹುದಾಗಿದೆ. 12 ತಿಂಗಳು ಅಥವಾ 3 ವರ್ಷದ ಅವಧಿಯ ಕೋರ್ಸ್‍ಗಳನ್ನೂ ಮಾಡಬಹುದಾಗಿದೆ.

ಪರೀಕ್ಷೆಗೆ ಏನು ಓದಬೇಕು?
ಸಿಎಂಎ ಪರೀಕ್ಷೆಯಲ್ಲಿ ಎರಡು ಪ್ರಶ್ನೆಪತ್ರಿಕೆಗಳಿವೆ. ಭಾಗ 1 ಪ್ರಶ್ನೆಪತ್ರಿಕೆಯಲ್ಲಿ ಹಣಕಾಸು ಯೋಜನೆ, ಕಾರ್ಯಕ್ಷಮತೆ ಮತ್ತು ನಿಯಂತ್ರಣ- ಪ್ಲಾನಿಂಗ್ ಬಜೆಟಿಂಗ್ ಫಾರ್‍ಕಾಸ್ಟಿಂಗ್, ಫರ್ಫಾಮೆನ್ಸ್ ಮ್ಯಾನೇಜ್‍ಮೆಂಟ್, ಕಾಸ್ಟ್ ಮ್ಯಾನೇಜ್‍ಮೆಂಟ್, ಇಂಟರ್ನಲ್ ಕಂಟ್ರೋಲ್ಸ್ ಮತ್ತು ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಮೇಲೆ ಪ್ರಶ್ನೆಗಳಿರುತ್ತವೆ. ಪಾರ್ಟ್ 2 ಪ್ರಶ್ನೆಪತ್ರಿಕೆಯಲ್ಲಿ ಫೈನಾನ್ಶಿಯಲ್ ಡಿಸಿಷನ್ ಮೇಕಿಂಗ್- ಫೈನಾನ್ಶಿಯಲ್ ಸ್ಟೇಟ್‍ಮೆಂಟ್ ಅನಾಲಿಸಿಸ್, ಕಾಪೆರ್Çರೇಟ್ ಫೈನಾನ್ಸ್, ಡಿಸಿಷನ್ ಅನಾಲಿಸಿಸ್ ಮತ್ತು ರಿಸ್ಕ್ ಮ್ಯಾನೇಜ್‍ಮೆಂಟ್, ಇನ್ವೆಸ್ಟ್‍ಮೆಂಟ್ ಡಿಸಿಷನ್, ಪೆÇ್ರಫೆಷನಲ್ ಎಥಿಕ್ಸ್ ವಿಷಯದ ಕುರಿತು ಪ್ರಶ್ನೆಗಳಿರುತ್ತವೆ. ಒಟ್ಟು 4 ಗಂಟೆಗಳ ಕಾಲ ಪರೀಕ್ಷೆ ನಡೆಯುತ್ತದೆ. ಶೇಕಡ 75ರಷ್ಟು ಬಹುಆಯ್ಕೆ ಪ್ರಶ್ನೆಗಳು ಮತ್ತು ಶೇಕಡ 25ರಷ್ಟು ಪ್ರಬಂಧ ಬರೆಯುವ ಪ್ರಶ್ನೆಗಳಿರುತ್ತವೆ. ಜನವರಿ/ಫೆಬ್ರವರಿ, ಮೇ/ಜೂನ್ ಮತ್ತು ಸೆಪ್ಟೆಂಬರ್/ಅಕ್ಟೋಬರ್‍ನಲ್ಲಿ ಕಂಪ್ಯೂಟರೀಕೃತ ಆನ್‍ಲೈನ್ ಪರೀಕ್ಷೆ ನಡೆಯುತ್ತದೆ. ಪಾಸ್ ಆಗಲು ಶೇಕಡ 72ರಷ್ಟು ಅಂಕ ಪಡೆಯಬೇಕು.

ಉದ್ಯೋಗಾವಕಾಶ ಹೇಗಿದೆ?
ದೇಶದಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಹೆಚ್ಚಾಗುತ್ತಿವೆ. ಹೀಗಾಗಿ ಸಿಎಂಎ ಸರ್ಟಿಫಿಕೇಷನ್ ಇದ್ದವರಿಗೆ ಬಹುಬೇಡಿಕೆಯಿದೆ. ಫೈನಾನ್ಶಿಯಲ್ ಅನಾಲಿಸ್ಟ್, ಇಂಟರ್ನಲ್ ಅಡಿಟರ್, ಸೀನಿಯರ್ ಎಕ್ಸಿಕ್ಯುಟಿವ್, ಫೈನಾನ್ಸ್ ಮ್ಯಾನೇಜರ್, ಬಿಸಿನೆಸ್ ಅನಾಲಿಸ್ಟ್, ಪ್ರೈಸಿಂಗ್ ಅನಾಲಿಸ್ಟ್, ಡೈರೆಕ್ಟರ್-ಫೈನಾನ್ಸ್, ಚೀಫ್ ಫೈನಾನ್ಸಿಯಲ್ ಆಫೀಸರ್ ಇತ್ಯಾದಿ ಹುದ್ದೆಗಳನ್ನು ಪಡೆಯಲು ಸಿಎಂಎ ಸರ್ಟಿಫಿಕೇಷನ್ ನೆರವಾಗುತ್ತದೆ. ಈ ಕೋರ್ಸ್ ಕಲಿಯಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ದಿ ಇನ್ಸಿಟ್ಯೂಟ್ ಆಫ್ ಕಾಸ್ಟ್ ಅಕೌಂಟೆಂಟ್ಸ್ ಆಫ್ ಇಂಡಿಯಾದ ವೆಬ್ ಸೈಟ್‍ಗೆ ಭೇಟಿ ನೀಡಬಹುದು.

ಜನಪ್ರಿಯ ಫೈನಾನ್ಸ್ ಕೋರ್ಸ್‍ಗಳು
ಎಂಬಿಎ: ಎಂಬಿಎ ಇನ್ ಫೈನಾನ್ಸ್ ಓದಿದವರಿಗೆ ಉತ್ತಮ ಉದ್ಯೋಗಾವಕಾಶ ದೊರಕುತ್ತದೆ. ಅಕೌಂಟಿಂಗ್, ಕಾಸ್ಟ್ ಅಕೌಂಟಿಂಗ್, ಫೈನಾನ್ಶಿಯಲ್ ಮಾಡೆಲಿಂಗ್, ಸ್ಟಟಿಸ್ಟಿಕ್ಸ್ ಇತ್ಯಾದಿ ವಿಭಾಗಗಳಲ್ಲಿ ಕೆಲಸ ಮಾಡಬಹುದಾಗಿದೆ. ದೇಶದಲ್ಲಿ ಎಂಬಿಎ ಪದವೀಧರರು ಹೆಚ್ಚಾಗುತ್ತಿದ್ದು, ಹೆಚ್ಚು ಕೌಶಲ ಇರುವವರಿಗೆ ಬೇಡಿಕೆ ಇದ್ದೇ ಇದೆ.


ಚಾರ್ಟೆಡ್ ಅಕೌಂಟೆಂಟ್: 1949ರ ಚಾರ್ಟೆಡ್ ಅಕೌಂಟೆಂಟ್ ಕಾಯಿದೆ ಅನ್ವಯ ಸ್ಥಾಪನೆಯಾದ ಚಾರ್ಟೆಡ್ ಅಕೌಂಟೆಂಟ್ (ಸಿಎ) ಕೋರ್ಸ್‍ಗೆ ದೇಶದಲ್ಲಿಂದು ಹೆಚ್ಚು ಬೇಡಿಕೆಯಿದೆ. ಕನ್ಸಲ್ಟೆನ್ಸಿ, ಅಡಿಟ್ ಪ್ರಾಕ್ಟೀಸ್, ಇನ್ವೆಸ್ಟ್‍ಮೆಂಟ್ ಬ್ಯಾಂಕಿಂಗ್ ಮತ್ತು ಐಟಿ ಕ್ಷೇತ್ರಗಳಲ್ಲಿ ಇದು ನಿಮಗೆ ಉತ್ತಮ ಉದ್ಯೋಗವಕಾಶ ದೊರಕಿಸಿಕೊಡುತ್ತದೆ. ಭಾರತದಲ್ಲಿ ಚಾರ್ಟೆಡ್ ಅಕೌಂಟೆಂಟ್ ಓದಿದರೆ ಅಂತಾರಾಷ್ಟ್ರೀಯ ಮಟ್ಟದಲ್ಲೂ ಉದ್ಯೋಗ ಪಡೆಯಬಹುದು. ಅಂದರೆ, ಇಂಗ್ಲೆಂಡ್ ಮತ್ತು ಆಸ್ಟ್ರೇಲಿಯಾದಲ್ಲಿ ಉದ್ಯೋಗ ಪಡೆಯಲು ದೇಶದ ಸಿಎ ಕೋರ್ಸ್ ನೆರವಾಗುತ್ತದೆ.


ಕಾಸ್ಟ್ ಅಕೌಂಟೆಂಟ್: ಕಾಸ್ಟ್ ಆ್ಯಂಡ್ ವಕ್ರ್ಸ್ ಅಕೌಂಟೆಂಟ್ಸ್ ಕಾಯಿದೆ, 1959ತ ಅನ್ವಯ ಸ್ಥಾಪನೆಯಾದ ಕಾಸ್ಟ್ ಅಕೌಂಟೆಂಟ್ ಕೋರ್ಸ್ ಸಹ ಉತ್ತಮ ಉದ್ಯೋಗಾವಕಾಶ ದೊರಕಿಸಿಕೊಡುತ್ತದೆ.


ಕಂಪನಿ ಸೆಕ್ರೆಟರಿ: ಕಂಪನಿ ಸೆಕ್ರೆಟರಿ ಕಾಯಿದೆ, 1980ರ ಅನ್ವಯ ಸ್ಥಾಪನೆಯಾದ ಈ ಕೋರ್ಸ್ ಅನ್ನು ಕಲಿತವರು ಮ್ಯಾನೇಜ್‍ಮೆಂಟ್ ಕನ್ಸಲ್ಟೆಂಗ್ ಕಂಪನಿಗಳಲ್ಲಿ, ಬ್ಯಾಂಕ್‍ಗಳಲ್ಲಿ, ಕಾಪೆರ್Çರೇಟ್ ಆಫೀಸ್‍ಗಳಲ್ಲಿ ಉದ್ಯೋಗ ಪಡೆಯಬಹುದು.



ವೆಬ್‍ ಡಿಸೈನರ್ ಆಗುವುದು ಹೇಗೆ?

ವೆಬ್‍ ಡಿಸೈನರ್ ಆಗುವುದು ಹೇಗೆ?

ಎಸ್‍ಎಸ್‍ಎಲ್‍ಸಿ, ಪಿಯುಸಿ, ಪದವಿ ಮುಗಿಸಿ ಮುಂದೇನೂ ಎಂದು ಆಲೋಚಿಸುತ್ತಿರುವ ಕಂಪ್ಯೂಟರ್ ಆಸಕ್ತರು ವೆಬ್ ಡಿಸೈನಿಂಗ್‍ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು
Published in Vijaya Karnataka Mini

ಎಲ್ಲವೂ ಆನ್‍ಲೈನ್‍ಮಯವಾಗುತ್ತಿರುವ ಈ ಪರ್ವಕಾಲದಲ್ಲಿ ವೆಬ್‍ಸೈಟ್ ವಿನ್ಯಾಸಕರಿಗೂ ಭಾರೀ ಡಿಮ್ಯಾಂಡ್. ವೆಬ್‍ಸೈಟ್ ವಿನ್ಯಾಸ ಮಾಡಲು ಕಂಪ್ಯೂಟರ್ ಸೈನ್ಸೇ ಓದಬೇಕೆಂದಿಲ್ಲ. ದುಬಾರಿ ಅನಿಮೇಷನ್ ಕೋರ್ಸಿಗೂ ಸೇರಬೇಕೆಂದಿಲ್ಲ. ಅಲ್ಪಾವಧಿಯಲ್ಲಿ ಕೇವಲ ವೆಬ್ ವಿನ್ಯಾಸವನ್ನು ಮಾತ್ರ ಕಲಿಸುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದಾಗಿದೆ. ಇಂತಹ ಸರ್ಟಿಫಿಕೇಷನ್ ಇದ್ದರೆ ಕೆಲವು ಕಂಪನಿಗಳು ನಿಮ್ಮನ್ನು ವೆಬ್ ಡೆವಲಪರ್, ವೆಬ್‍ಸೈಟ್ ಪೆÇ್ರಗ್ರಾಮರ್ ಆಗಿ ಕೆಲಸಕ್ಕೆ ತೆಗೆದುಕೊಳ್ಳಬಹುದು.
ಸರ್ಟಿಫಿಕೇಷನ್ ಬೇಕಿಲ್ಲವೆಂದರೆ ಇಂಟರ್‍ನೆಟ್‍ನಲ್ಲಿ ಉಚಿತವಾಗಿ ವೆಬ್ ವಿನ್ಯಾಸ ಕಲಿಸುವ ಟ್ಯುಟೋರಿಯಲ್‍ಗಳಿಗೆ ಸೇರಬಹುದು. ನೆಟ್‍ನಲ್ಲಿ ವೆಬ್ ಮಾಸ್ಟರ್ ಆಗಲು ತರಬೇತಿ ನೀಡುವ ಸಾಕಷ್ಟು ವಿಡಿಯೋಗಳು, ಪಠ್ಯಗಳೂ ದೊರಕುತ್ತವೆ. ಆನ್‍ಲೈನ್ ಅಥವಾ ಆಫ್‍ಲೈನ್ ಪುಸ್ತಕದಂಗಡಿಗೆ ಹೋಗಿ ವೆಬ್ ಡಿಸೈನ್ ಕುರಿತಾದ ಪುಸ್ತಕಗಳನ್ನೂ ಓದಿಯೂ ವೆಬ್ ವಿನ್ಯಾಸದಲ್ಲಿ ಪರಿಣತಿ ಪಡೆಯಬಹುದು.

ವೆಬ್ ಮಾಸ್ಟರ್‍ಗೆ ಬೇಡಿಕೆ
ಬಹುತೇಕ ಜನರಿಂದು ಇಂಟರ್‍ನೆಟ್ ಬಳಸುತ್ತಿದ್ದಾರೆ. ಹೀಗಾಗಿ ಆಸ್ಪತ್ರೆ, ಜಿಮ್, ಶಿಕ್ಷಣ ಸಂಸ್ಥೆಗಳು, ಸುದ್ದಿತಾಣಗಳು ಮಾತ್ರವಲ್ಲದೆ ಪ್ರತಿಯೊಬ್ಬರೂ ಸ್ವಂತ ವೆಬ್‍ಸೈಟ್ ಹೊಂದಲು ಆಸಕ್ತಿ ವಹಿಸುತ್ತಾರೆ. ಇ-ಕಾಮರ್ಸ್, ಇಂಟರ್‍ನೆಟ್ ಸುದ್ದಿ ವೆಬ್‍ಸೈಟ್ ಸೇರಿದಂತೆ ವೆಬ್‍ಸೈಟ್ ಅವಲಂಬಿತ ಕಂಪನಿಗಳಲ್ಲಿಯೂ ವೆಬ್‍ಸೈಟ್ ಡಿಸೈನರ್‍ಗಳಿಗೆ ಬೇಡಿಕೆಯಿದೆ. ಗೋಡ್ಯಾಡಿ.ಕಾಮ್‍ನಂತಹ ತಾಣಗಳಲ್ಲಿ ಅನುಭವ ಇಲ್ಲದವರೂ ವೆಬ್‍ಸೈಟ್ ರಚಿಸಬಹುದಾದರೂ ಪೆÇ್ರಫೆಷನಲ್ ವೆಬ್‍ಸೈಟ್ ವಿನ್ಯಾಸಕರಿಗೆ ಬೇಡಿಕೆ ಕಡಿಮೆಯಾಗಿಲ್ಲ. ನಿಮ್ಮಲ್ಲಿ ಅತ್ಯುತ್ತಮ ಕ್ರಿಯೇಟಿವಿಟಿ ಇದ್ದರಂತೂ ಗ್ರಾಹಕರನ್ನು ಪಡೆಯುವುದು ಕಷ್ಟವಲ್ಲ. ಪಾರ್ಟ್‍ಟೈಮ್ ಆಗಿಯೂ ಈ ಕ್ಷೇತ್ರದಲ್ಲಿ ದುಡಿಯಬಹುದು. ವೆಬ್‍ಡಿಸೈನ್ ಕಂಪನಿಯಲ್ಲಿಯೂ ಕೆಲಸ ಗಿಟ್ಟಿಸಿಕೊಳ್ಳಬಹುದು. ನಿಮ್ಮಲ್ಲಿ ಸ್ವ ಉದ್ಯೋಗ ಮಾಡುವ ಮನಸ್ಸು ಇದ್ದರೆ ನಿಮ್ಮ ಊರಿಗೆ ಸಮೀಪವಿರುವ ಪಟ್ಟಣ, ನಗರಗಳಲ್ಲಿ ವೆಬ್ ಡಿಸೈನ್ ಸಂಸ್ಥೆಯನ್ನೂ ತೆರೆಯಬಹುದು.

ಏನಿದು ವೆಬ್ ಡಿಸೈನ್ ಪೆÇ್ರೀಗ್ರಾಮ್?
ಇಂತಹ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ವೆಬ್‍ಸೈಟ್ ನಿರ್ಮಿಸುವುದು ಹೇಗೆಂಬುದನ್ನು ಕಲಿಸಿಕೊಡುತ್ತಾರೆ. ಹೈಪರ್‍ಟೆಕ್ಸ್ಟ್ ಪ್ರಿಪೆÇ್ರಸೆಸರ್(ಪಿಎಚ್‍ಪಿ), ಹೈಪರ್‍ಟೆಕ್ಸ್ಟ್ ಮಾರ್ಕ್- ಅಪ್ ಲ್ಯಾಂಗ್ವೇಜ್(ಎಚ್‍ಟಿಎಂಎಲ್) ಮತ್ತು ಕ್ಯಾಸ್‍ಕ್ಯಾಡಿಂಗ್ ಸ್ಟೈಲ್ ಶೀಟ್ಸ್(ಸಿಎಸ್‍ಎಸ್) ಇತ್ಯಾದಿಗಳನ್ನು ವಿದ್ಯಾರ್ಥಿಗಳು ಕಲಿಯಬೇಕಾಗುತ್ತದೆ. ನೀವು ಎಷ್ಟು ತಿಂಗಳ ಅವಧಿಯ ಕೋರ್ಸ್ ಮಾಡುವಿರೋ ಎಂಬುದರ ಮೇಲೆ ವೆಬ್ ಡಿಸೈನ್ ಕಲಿಕೆಯ ಸಬ್ಜೆಕ್ಟ್‍ಗಳು ಇರುತ್ತವೆ. ಕೆಲವೊಮ್ಮೆ ಪ್ರತಿಯೊಂದು ವಿಷಯಗಳಿಗೂ ಪ್ರತ್ಯೇಕ ಪ್ರತ್ಯೇಕ ಸರ್ಟಿಫಿಕೇಷನ್‍ಗಳಿರುತ್ತವೆ. ಅಂದರೆ, ಫ್ರೀಲ್ಯಾನ್ಸ್ ವೆಬ್ ಡಿಸೈನರ್, ಗ್ರಾಫಿಕ್ ಡಿಸೈನರ್, ವೆಬ್ ಅನಿಮೇಷನ್ ಕ್ರೀಯೆಟರ್, ವೆಬ್ ಡೆವಲಪರ್, ಪಿಎಚ್‍ಪಿ ಆ್ಯಂಡ್ ಸಿಎಸ್‍ಎಸ್ ಡೆವಲಪರ್ ಇತ್ಯಾದಿ ಕೋರ್ಸ್‍ಗಳನ್ನು ಮಾಡಬಹುದು.

ಎಲ್ಲಿ ಕಲಿಯಬಹುದು?
ರಾಜ್ಯದಲ್ಲಿ ವೆಬ್ ಡಿಸೈನ್ ಕಲಿಸುವ ಹಲವು ಶಿಕ್ಷಣ ಸಂಸ್ಥೆಗಳಿವೆ. ಬೆಂಗಳೂರಿನಲ್ಲಿ ಹಲವು ಬ್ರಾಂಚ್‍ಗಳನ್ನು ಹೊಂದಿರುವ ಆಪ್ಟೆಕ್ ಕಂಪ್ಯೂಟರ್ ಎಜುಕೇಷನ್ ಸಹ ವೆಬ್ ಡಿಸೈನರ್/ಡೆವಲಪ್‍ಮೆಂಟ್ ವಿಷಯದಲ್ಲಿ `ಎಸಿಡಬ್ಲ್ಯುಡಿ ಪೆÇ್ರ' ಎಂಬ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್ ನಡೆಸುತ್ತದೆ. ಪಿಯುಸಿ, ಪದವಿ ವಿದ್ಯಾರ್ಥಿಗಳು ಈ ಸರ್ಟಿಫಿಕೇಷನ್ ಪಡೆಯಬಹುದು. ಎಚ್‍ಟಿಎಂಎಲ್5, ಜಾವಾ ಸ್ಕ್ರಿಪ್ಟ್, ಸಿಎಸ್‍ಎಸ್3 ಪಿಎಚ್‍ಪಿ ಆ್ಯಂಡ್ ಮೈಎಸ್‍ಕ್ಯೂಎಲ್ ಇತ್ಯಾದಿ ಪೆÇ್ರಗ್ರಾಮಿಂಗ್ ಭಾಷೆಗಳನ್ನು ಕಲಿಸಿ ವೆಬ್‍ಸೈಟ್ ನಿರ್ಮಿಸುವುದನ್ನು ಕಲಿಯಬಹುದು. ಇದು 7 ತಿಂಗಳ ಕೋರ್ಸ್. ವಾರಕ್ಕೆ ಮೂರು ದಿನಗಳಂತೆ ದಿನಕ್ಕೆ ಎರಡು ಗಂಟೆÉ ಈ ಕೋರ್ಸ್ ಇರುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್ ಲಿಂಕ್
ಬೆಂಗಳೂರಿನಲ್ಲಿ ಅರೆನಾ ಮಲ್ಟಿಮೀಡಿಯಾವೂ ಪಿಯುಸಿ/ಕಾಲೇಜು ವಿದ್ಯಾರ್ಥಿಗಳಿಗೆ ಅಥವಾ ಆಸಕ್ತರಿಗೆ 10 ತಿಂಗಳ ಶಾರ್ಟ್‍ಟರ್ಮ್ ವೆಬ್ ಡಿಸೈನ್ ಕೋರ್ಸ್ ನಡೆಸುತ್ತದೆ. ವಾರಕ್ಕೆ ಮೂರು ದಿನ, ದಿನಕ್ಕೆ ಎರಡು ಗಂಟೆಯಂತೆ ಈ ಕೋರ್ಸ್ ಇರುತ್ತದೆ. ಹೆಚ್ಚುವರಿ ಗಂಟೆಗಳ ಕ್ಲಾಸ್ ತೆಗೆದುಕೊಂಡು ಕೋರ್ಸ್ ಅನ್ನು ಬೇಗ ಮುಗಿಸಲೂ ಅವಕಾಶವಿದೆ. ಮಾಹಿತಿಗೆ ವೆಬ್‍ಲಿಂಕ್
ಬೆಂಗಳೂರಿನ ಇಂಟರ್‍ನೆಟ್ ಅಕಾಡೆಮಿಯೂ ವೆಬ್ ಡೆವಲಪ್‍ಮೆಂಟ್ ಕೋರ್ಸ್‍ಗಳನ್ನು ನಡೆಸಿಕೊಡುತ್ತದೆ. ಸುಮಾರು ಒಂದೂವರೆ ತಿಂಗಳ ಕೋರ್ಸ್ ಇದಾಗಿದೆ. ಮೊಬೈಲ್ ವೆಬ್‍ಸೈಟ್ ನಿರ್ಮಾಣ ಕಲಿಕೆಯನ್ನು ಒಳಗೊಂಡ `ರೆಸ್ಪಾನ್ಸಿವ್ ವೆಬ್ ಡೆವಲಪ್‍ಮೆಂಟ್' ಕೋರ್ಸ್ ಇಲ್ಲಿದೆ. ಹೆಚ್ಚಿನ ಮಾಹಿತಿಗೆ ಲಿಂಕ್

ಮೈಸೂರಿನಲ್ಲಿರುವ ಟೂನ್2 ಮಲ್ಟಿಮೀಡಿಯಾ ಸ್ಕೂಲ್‍ನಲ್ಲಿ ವೆಬ್ ಡಿಸೈನ್‍ನಲ್ಲಿ ಶಾರ್ಟ್‍ಟರ್ಮ್ ಕೋರ್ಸ್‍ಗಳಿವೆ. ಮಾಸ್ಟರ್ ಇನ್ ವೆಬ್ ಡಿಸೈನ್ 7 ತಿಂಗಳ ಕೋರ್ಸ್. ಪೆÇ್ರಫೆಷನಲ್ ಇನ್ ವೆಬ್ ಡಿಸೈನ್ ಕೋರ್ಸ್ 4 ತಿಂಗಳಾದ್ದಾಗಿದೆ. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್

ಮೈಸೂರಿನ ಅನಿಫ್ರೇಮ್ಸ್ ಸಹ ಸರ್ಟಿಫಿಕೇಟ್ ಇನ್ ಗ್ರಾಫಿಕ್ ಆ್ಯಂಡ್ ವೆಬ್ ಡಿಸೈನ್ ಕೋರ್ಸ್ ನಡೆಸುತ್ತಿದೆ. ಎಸ್‍ಎಸ್‍ಎಲ್‍ಸಿ ಪಾಸ್/ಫೇಲ್ ಆದವರು ಈ ಕೋರ್ಸ್ ಮಾಡಬಹುದು. ಇದು 15 ತಿಂಗಳ ಕೋರ್ಸ್. ವೆಬ್‍ಲಿಂಕ್

ಪಕ್ಕದ ರಾಜ್ಯವಾಗಿರುವ ಚೆನ್ನೈನಲ್ಲಿರುವ ವಿಎಫ್‍ಎಕ್ಸ್ ಮೀಡಿಯಾ ಆ್ಯಂಡ್ ಡಿಸೈನ್ ಸಂಸ್ಥೆಯು ವೆಬ್ ಡಿಸೈನ್ ಕುರಿತಾದ 9 ತಿಂಗಳ ಶಾರ್ಟ್‍ಟರ್ಮ್ ಕೋರ್ಸ್ ನಡೆಸುತ್ತದೆ. ಇದು ಐಎಒ ಸರ್ಟಿಫಿಕೇಷನ್ ಅಂಗೀಕೃತ ಸರ್ಟಿಫಿಕೇಷನ್ ಆಗಿದೆ. ಎಸ್‍ಎಸ್‍ಎಲ್‍ಸಿ/ಪಿಯುಸಿ ಪಾಸ್/ಫೇಲ್ ಆದ ವಿದ್ಯಾರ್ಥಿಗಳು ಈ ಕೋರ್ಸ್ ಮಾಡಿ ಭವಿಷ್ಯ ರೂಪಿಸಿಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಲಿಂಕ್
ಇವು ಕೆಲವು ವೆಬ್ ಡಿಸೈನ್ ಕಲಿಸುವ ಸಂಸ್ಥೆಗಳ ವಿವರವಾಗಿದೆ. ನಿಮ್ಮ ಊರಿಗೆ ಸಮೀಪದಲ್ಲಿ ಯಾವೆಲ್ಲ ಸಂಸ್ಥೆ ವೆಬ್ ಡಿಸೈನ್ ಕಲಿಸುತ್ತದೆ ಎಂದು ತಿಳಿದುಕೊಳ್ಳಿ. ಅಲ್ಲಿರುವ ಮೂಲಸೌಕರ್ಯಗಳನ್ನು ನೋಡಿ ಜಾಯಿನ್ ಆಗಬಹುದು.

ಆನ್‍ಲೈನ್‍ನಲ್ಲಿ ಕಲಿಯಿರಿ
ಆನ್‍ಲೈನ್‍ನಲ್ಲೇ ವೆಬ್ ಡಿಸೈನ್ ಕಲಿಸುವ ಹಲವು ತಾಣಗಳು ಇವೆ. ಡಾಲರ್ ರೂಪದಲ್ಲಿ ಹಣ ನೀಡಲು ಸಿದ್ಧವಿದ್ದರೆ ವಿದೇಶಿ ವೆಬ್‍ತಾಣಗಳಿಂದಲೂ ಸರ್ಟಿಫಿಕೇಷನ್ ಪಡೆದುಕೊಳ್ಳಬಹುದು. ದೇಶದ ಕೆಲವು ಸಂಸ್ಥೆಗಳೂ ಇಂತಹ ಆನ್‍ಲೈನ್ ಕೋರ್ಸ್ ನಡೆಸುತ್ತವೆ. ಉಚಿತವಾಗಿ ವೆಬ್ ಡಿಸೈನ್ ಕಲಿಯುವ ಅವಕಾಶವನ್ನೂ ಕೆಲವು ವೆಬ್ ತಾಣಗಳು ಒದಗಿಸುತ್ತವೆ. ಇಂತಹ ಬಹುವೈವಿಧ್ಯತೆಯ ಆನ್‍ಲೈನ್ ವೆಬ್ ಡಿಸೈನ್ ಕಲಿಕಾ ತಾಣಗಳ ಲಿಂಕ್‍ಗಳು ಇಲ್ಲಿವೆ. ಆರಂಭಿಕರು ಉಚಿತ ತಾಣಗಳಲ್ಲಿ ಕಲಿತು ಮುಂದುವರೆಯುವುದು ಒಳಿತು.

1

2

3

ವೆಬ್ ಡಿಸೈನ್ ಪುಸ್ತಕಗಳು
ಪುಸ್ತಕದಂಗಡಿಗೆ ಭೇಟಿ ನೀಡಿದರೆ ವೆಬ್ ಡಿಸೈನ್‍ಗೆ ಸಂಬಂಧಿಸಿದ ಹಲವು ಪುಸ್ತಕಗಳು ದೊರಕುತ್ತವೆ. ಮೊದಲಿಗೆ ಬೇಸಿಕ್ ಕಲಿಸುವ ಪುಸ್ತಕ ಓದಿರಿ. ನಂತರ ಪೂರ್ಣ ಪ್ರಮಾಣದ ವೆಬ್ ಡಿಸೈನ್ ಪುಸ್ತಕ ಓದಿ. ಇಂಟರ್‍ನೆಟ್‍ನಲ್ಲಿ ಕೆಲವು ಉಚಿತ ಇ-ಬುಕ್‍ಗಳು ಸಿಗುತ್ತವೆ.
ವೆಬ್ ಡಿಸೈನ್ ಕಲಿಕೆಗೆ 15 ಉಚಿತ ಪುಸ್ತಕಗಳು
50 ಉಚಿತ ಪುಸ್ತಕಗಳು:

ಆನ್‍ಲೈನ್ ಅಂಗಡಿಗಳಿಗೆ ಹೋಗಿ ಅಲ್ಲಿ ಪುಸ್ತಕ ಎಂಬ ಕೆಟಗರಿಗೆ ಹೋಗಿ ಸರ್ಚ್ ಆಯ್ಕೆ ಇರುವಲ್ಲಿ ವೆಬ್ ಡಿಸೈನ್ ಎಂದು ಸರ್ಚ್ ಕೊಟ್ಟರೆ ಹಲವು ಪುಸ್ತಕಗಳು ಬರುತ್ತವೆ. ನಿಮ್ಮ ಊರಿಗೆ ಈ ತಾಣಗಳ ಸೇವೆಗಳು ಲಭ್ಯ ಇವೆಯೇ ಎಂದು ತಿಳಿದುಕೊಂಡು ಖರೀದಿಸಿರಿ.
ಲಿಂಕ್‍ಗಳು:

1

2

3

CAD and CAM Certification read 
ಸಾಫ್ಟ್ ಸ್ಕಿಲ್ ನಿಮ್ಮಲ್ಲಿದೆಯೇ?

ಸಾಫ್ಟ್ ಸ್ಕಿಲ್ ನಿಮ್ಮಲ್ಲಿದೆಯೇ?

ಕಾಪೆರ್Çರೇಟ್ ರಂಗದಲ್ಲಿ ಉದ್ಯೋಗ ಪಡೆಯಲು ಬಯಸುವವರು ಮತ್ತು ಈಗಾಗಲೇ ಉದ್ಯೋಗದಲ್ಲಿರುವವರು ಸಾಫ್ಟ್ ಸ್ಕಿಲ್ ಅಥವಾ ಬಿಸಿನೆಸ್ ಸ್ಕಿಲ್ ಸರ್ಟಿಫಿಕೇಷನ್ ಪಡೆದರೆ ಕರಿಯರ್‍ನಲ್ಲಿ ಇನ್ನಷ್ಟು ಸಾಧನೆ ಮಾಡಬಹುದು.

*
ನೀವು ಕಾಲೇಜಿನಲ್ಲಿ ಸಾಕಷ್ಟು ಜ್ಞಾನ ಸಂಪಾದಿಸಿರಬಹುದು. ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿರಬಹುದು. ಸಾಕಷ್ಟು ಪ್ರತಿಭೆ ನಿಮ್ಮಲ್ಲಿರಬಹುದು. ಆದರೆ, ಉದ್ಯೋಗ ಸಂದರ್ಶಕರಿಗೆ ನಿಮ್ಮನ್ನು ನೋಡಿದಾಗ ಹಾಗೆ ಅನಿಸದೆ ಇರಬಹುದು. ನೀವು ಉದ್ಯೋಗದಲ್ಲಿ ಉತ್ತಮ ತಾಂತ್ರಿಕ ಜ್ಞಾನ ಹೊಂದಿರಬಹುದು. ಆದರೆ, ಪ್ರಸಂಟೇಷನ್ ಮಾಡುವ ಕಲೆ ಗೊತ್ತಿಲ್ಲದೆ ಇರಬಹುದು. ನೀವು ತಂಡದ ಲೀಡರ್ ಆಗಿರಬಹುದು. ಆದರೆ, ಸಹೋದ್ಯೋಗಿಗಳನ್ನು ಪ್ರೇರೇಪಿಸಲು ತಿಳಿಯದವರಾಗಿರಬಹುದು. ನಿಮ್ಮಲ್ಲಿ ಸಾಕಷ್ಟು ಪದಸಂಪತ್ತು ಇರಬಹುದು. ಆದರೆ, ಸಂವಹನ ಕೌಶಲ ಇಲ್ಲದೆ ಇರಬಹುದು. ಇಂದಿನ ಕಾಪೆರ್Çರೇಟ್ ಜಗತ್ತಿಗೆ ಇವೆಲ್ಲ ಅತ್ಯಂತ ಅವಶ್ಯವಾದ ಕೌಶಲಗಳು. ಈಗ ಕೆಲವು ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ ಹೇಳಿಕೊಡುವ ಪ್ರಯತ್ನ ಮಾಡುತ್ತಿವೆ. ಇಂತಹ ಕೌಶಲಗಳನ್ನು ಕಲಿಸಿ ಸರ್ಟಿಫಿಕೇಷನ್ ನೀಡುವ ಸಾಕಷ್ಟು ಸಂಸ್ಥೆಗಳಿವೆ. ಇಂತಹ ತರಬೇತಿಯನ್ನು ಯಾರು, ಯಾವಾಗ ಬೇಕಾದರೂ ಪಡೆಯಬಹುದು. ಉದ್ಯೋಗ ಸಂದರ್ಶನದಲ್ಲಿ ಇಂತಹ ಸರ್ಟಿಫಿಕೇಷನ್ ನಿಮಗೆ ಪ್ಲಸ್ ಪಾಯಿಂಟ್ ಆಗಬಹುದು.

ಏನಿದು ಸಾಫ್ಟ್ ಸ್ಕಿಲ್?
ಕೆಲಸ ಮಾಡುವ ಸ್ಥಳದಲ್ಲಿ ಮತ್ತು ವ್ಯವಹಾರ ಸಂಬಂಧಿತ ಸಂವಹನದ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿಸಿ ಕೊಡುವುದೇ ಸಾಫ್ಟ್ ಸ್ಕಿಲ್. ಇದು ಸಂವಹನ ಕಲೆಯಾಗಿರಬಹುದು, ಯಾರಾದರೂ ಹೇಳುವುದನ್ನು ಗಮನವಿಟ್ಟು ಕೇಳುವ ಕಲೆಯಾಗಿರಬಹುದು, ವಿಷಯ ಮಂಡನೆ ಕಲೆಯಾಗಿರಬಹುದು, ಸಮಯ ನಿರ್ವಹಣೆ, ಆ್ಯಟಿಟ್ಯೂಡ್, ವರ್ತನಾ ವಿಧಾನ, ಸಮಸ್ಯೆ ಬಗೆಹರಿಸುವ ಕಲೆ, ತಂಡದ ಜೊತೆ ಸೇರಿ ಕೆಲಸ ಮಾಡುವುದು, ಗುರಿ ನಿಗದಿ ಪಡಿಸುವುದು ಇತ್ಯಾದಿಗಳ ತರಬೇತಿಯಾಗಿರಬಹುದು. ಕೆಲಸ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಅಥವಾ ಭಾವನೆಯನ್ನು ನಿಯಂತ್ರಿಸುವುದು ಸಹ ಸಾಫ್ಟ್ ಸ್ಕಿಲ್ ಕಲಿಕೆಯಲ್ಲಿ ಸೇರಿದೆ. ಸಾಫ್ಟ್ ಸ್ಕಿಲ್‍ಗಳು ವೃತ್ತಿಪರ ಮತ್ತು ವ್ಯವಹಾರದ ಯಶಸ್ಸಿಗೆ ಅತ್ಯಂತ ಅವಶ್ಯಕ. ಇದಕ್ಕಾಗಿಯೇ ಈಗ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಾಫ್ಟ್ ಸ್ಕಿಲ್ ತರಬೇತಿಗಳನ್ನು ನೀಡುತ್ತವೆ. ಸಾಫ್ಟ್ ಸ್ಕಿಲ್‍ನಲ್ಲಿ ಪರಿಣತಿ ಹೊಂದಿರದ ವ್ಯಕ್ತಿಯಿಂದ ಕಂಪನಿಯ ವ್ಯವಹಾರಕ್ಕೆ ಸಾಕಷ್ಟು ಹೊಡೆತ ಬೀಳಬಹುದು.

ಎಲ್ಲಿ ಕಲಿಯಬಹುದು ಸಾಫ್ಟ್‍ಸ್ಕಿಲ್?
ಸಾಫ್ಟ್ ಸ್ಕಿಲ್ ಕಲಿಸುವ ಸಂಪನ್ಮೂಲ ವ್ಯಕ್ತಿಗಳು ನಿಮ್ಮ ಆಸುಪಾಸಿನಲ್ಲೇ ಇರಬಹುದು. . ನೀವಿರುವ ಕಾಲೇಜಿಗೆ ಇಂತಹ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಬೇತಿ ನೀಡಬಹುದು. ಹಣ ಮಾಡುವುದೇ ಪ್ರಮುಖ ಉದ್ದೇಶವಾಗಿಟ್ಟುಕೊಂಡವರಿಂದ ದೂರವಿರುವುದು ಒಳ್ಳೆಯದು. ಆದರೆ, ಕೆಲವು ಸಂಸ್ಥೆಗಳು ಸಾಫ್ಟ್ ಸ್ಕಿಲ್ ತರಬೇತಿ ನೀಡುವಲ್ಲಿ ಜನಪ್ರಿಯತೆ ಪಡೆದಿರುತ್ತವೆ. ಸಾಫ್ಟ್ ಸ್ಕಿಲ್ ಪಡೆಯಲು ಅಂತಹ ಸಂಸ್ಥೆಗಳನ್ನು ಅವಲಂಬಿಸಿಕೊಳ್ಳಬಹುದು.
ಸಾಫ್ಟ್ ಸ್ಕಿಲ್ಸ್ ಅಥವಾ ಬಿಸಿನೆಸ್ ಸ್ಕಿಲ್ಸ್ ಕೆಲವು ವೆಬ್‍ಸೈಟ್ ಲಿಂಕ್‍ಗಳು:
*ಆರೆಂಜ್ ಅಕಾಡೆಮಿ 
* ಕಾರ್ಪೆಕ್ಸ್
* ಬುಕ್‍ಮೈಟ್ರೈನಿಂಗ್ಸ್
* ಸ್ಕಿಲ್ ತರಬೇತಿದಾರರಾಗಲು ಲಿಂಕ್

* ಪ್ರಸಂಟೇಷನ್ ಸ್ಕಿಲ್ ತರಬೇತುದಾರರನ್ನು ಇಲ್ಲಿ ಹುಡುಕಬಹುದು

ಅಗತ್ಯ ಬಿಸಿನೆಸ್ ಕೌಶಲಗಳು
* ಪ್ರಸಂಟೇಷನ್ ಸ್ಕಿಲ್: ಕಂಪನಿಯಲ್ಲಿ ಉದ್ಯೋಗಿಗಳಿಗೆ ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ವಿವರ ನೀಡುವ ಅವಕಾಶ ಇರುತ್ತದೆ. ಕೆಲವೊಮ್ಮೆ ಎಲ್ಲದರಲ್ಲಿಯೂ ಚತುರನಾಗಿರುವ ವ್ಯಕ್ತಿಯು ಪ್ರಸಂಟೇಷನ್‍ನಲ್ಲಿ ಹಿಂದೆ ಬೀಳುತ್ತಾನೆ. ಈ ಮೂಲಕ ಗಮನ ಸೆಳೆಯಲು ವಿಫಲನಾಗುತ್ತಾನೆ. ಪ್ರಸಂಟೇಷನ್‍ನಲ್ಲಿ ಪಕ್ಕಾ ಆಗಲು ನೀವು ಸಾಕಷ್ಟು ಪ್ರಾಕ್ಟೀಸ್ ಮಾಡಬೇಕು. ಪಿಪಿಟಿ ಪ್ರಸಂಟೇಷನ್ ಇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನರ್ವಸ್ ಆಗಬೇಡಿ. ವೀಕ್ಷಕರ ಜೊತೆ ಮಾತುಕತೆಯಾಡುತ್ತ ಪ್ರಸಂಟೇಷನ್ ಮಾಡಿ. ಯೂಟ್ಯೂಬ್‍ನಲ್ಲಿರುವ ಪಿಪಿಟಿಗಳನ್ನು ನೋಡಿ. ನಿಮಗೆ ಪ್ರಸಂಟೇಷನ್ ಕುರಿತಾದ ಭಯ ಹೋಗಿಲ್ಲವೆಂದಾದರೆ ಪ್ರಸಂಟೇಷನ್ ಸ್ಕಿಲ್ ಕಲಿಸುವ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆಯಿರಿ.
* ಸಂವಹನ ಕೌಶಲ: ಈಗ ಸಂವಹನ ಕೌಶಲ ಕಲಿಸುವ ಸಾಕಷ್ಟು ಸಂಸ್ಥೆಗಳು ನೀವಿರುವ ಪ್ರದೇಶದಲ್ಲೇ ದೊರಕಬಹುದು. ಆದಷ್ಟು, ಇತರರ ಜೊತೆ ಮಾತನಾಡಿ. ಕನ್ನಡಿಯ ಮುಂದೆ ಮಾತನಾಡುತ್ತ, ನಿಮ್ಮ ಹಾವಭಾವ ಗಮನಿಸಿ. ಕಮ್ಯುನಿಕೇಷನ್ ಕೌಶಲ ಕಲಿಸುವ ಅಲ್ಪಾವಧಿ ಕೋರ್ಸ್‍ಗಳನ್ನು ಮಾಡಿ. ಆದಷ್ಟು, ಚರ್ಚೆ, ಗೋಷ್ಠಿಗಳಲ್ಲಿ ಭಾಗವಹಿಸಿ.
* ಆಲಿಸುವ ಕಲೆ: ನೀವು ಉತ್ತಮ ಮಾತುಗಾರನಾಗುವ ಜೊತೆಗೆ ಉತ್ತಮ ಕೇಳುಗನಾಗಬೇಕು. ನಿಮ್ಮ ಎದುರಿನಲ್ಲಿರುವ ವ್ಯಕ್ತಿ ಮಾತನಾಡುತ್ತಿರುವಾಗ ಸಂಯಮದಿಂದ ಆಲಿಸಿ. ಅವರು ಮಾತು ಮುಗಿಸಿದ ನಂತರ ಮಾತನಾಡಿ.
* ಭಾವನೆಯ ನಿರ್ವಹಣೆ: ಎಂತಹ ಪರಿಸ್ಥಿತಿಯಲ್ಲೂ ಕುಗ್ಗದೆ ಭಾವನಾತ್ಮಕವಾಗಿ ಸಕಾರಾತ್ಮಕವಾಗಿರುವಂತಹ ವ್ಯಕ್ತಿತ್ವ ಸಹ ಬಿಸಿನೆಸ್ ಕೌಶಲದಲ್ಲಿ ಅಗತ್ಯವಾಗಿದೆ.
* ತೊಂದರೆ ನಿವಾರಣೆ: ಕೆಲಸ ಮಾಡುವಾಗ ಬಿಸಿನೆಸ್‍ಗೆ ಸಂಬಂಧಪಟ್ಟ ಹಲವು ತೊಂದರೆಗಳು ಎದುರಾಗಬಹುದು. ಅಂತಹ ತೊಂದರೆಗಳನ್ನು ಕೌಶಲದಿಂದ ಬಗೆಹರಿಸಲು ತಿಳಿದಿರಬೇಕಾಗುತ್ತದೆ.

*ಕ್ರಿಯಾತ್ಮಕವಾಗಿರುವುದು ಮತ್ತು ಅನ್ವೇಷಣಾ ಮನೋಭಾವ.

* ಸಹೋದ್ಯೋಗಿಗಳಿಗೆ ತರಬೇತಿ ನೀಡುವ ಸಾಮಥ್ರ್ಯ.

* ಕೆಲಸವನ್ನು ಹೊಸ ರೀತಿಯಿಂದ ಸುಲಭವಾಗಿ ಮಾಡಲು ಪ್ರಯತ್ನಿಸುವುದು.

* ತಂಡದ ಜೊತೆ ಕಾರ್ಯನಿರ್ವಹಿಸುವ ಸಾಮಥ್ರ್ಯ.

* ಪ್ರಾಜೆಕ್ಟ್ ನಿರ್ವಹಣೆ ಸಾಮಥ್ರ್ಯ.
ಎಸ್‍ಇಒ ಸರ್ಟಿಫಿಕೇಷನ್‍ಗೆ ಬೇಡಿಕೆ

ಎಸ್‍ಇಒ ಸರ್ಟಿಫಿಕೇಷನ್‍ಗೆ ಬೇಡಿಕೆ

ಆನ್‍ಲೈನ್ ಮೂಲಕ ಹೆಚ್ಚು ಗ್ರಾಹಕರನ್ನು ತಲುಪಲು ಬಹುತೇಕ ಕಂಪನಿಗಳು ಪ್ರಯತ್ನಿಸುತ್ತಿರುವುದರಿಂದ ಸರ್ಚ್ ಎಂಜಿನ್ ಆಪ್ಟಿಮೈಜೇಷನ್‍ನಲ್ಲಿ ಪರಿಣತಿ ಪಡೆದವರಿಗೆ ಈಗ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ. ಎಸ್‍ಇಒ ಸರ್ಟಿಫಿಕೇಷನ್ ಕೋರ್ಸ್‍ಗಳ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು

ನಿಮಗೆ ಯಾವುದೋ ವಿಷಯದ ಬಗ್ಗೆ ಮಾಹಿತಿ ಬೇಕು. ಉದಾಹರಣೆಗೆ ಆ ವಿಷಯ ಕಾರ್' ಎಂದಿರಲಿ. ಗೂಗಲ್‍ನ ಸರ್ಚ್ ಬಾಕ್ಸ್‍ಗೆ ಹೋಗಿ ಕಾರ್ ಎಂದು ಟೈಪ್ ಮಾಡಿ ಎಂಟರ್ ಹೊಡೆಯುವಿರಿ. ಆಗ ವೆಬ್‍ಫಲಿತಾಂಶಗಳ ರಾಶಿಯೇ ನಿಮ್ಮ ಮುಂದೆ ಬರುತ್ತದೆ. ಮೊದಲ ಪುಟದ ಟಾಪ್‍ನಲ್ಲಿ ಕಾರ್‍ವಾಲೆ, ಕಾರ್‍ಟ್ರೇಡ್, ಕಾರ್‍ದೇಕೊ ಮುಂತಾದ ವೆಬ್‍ಸೈಟ್‍ಗಳ ಮಾಹಿತಿಗಳು ಬರುತ್ತವೆ. ಕಾರುಗಳ ಮಾಹಿತಿ ನೀಡುವ ಸಾವಿರಾರು ವೆಬ್‍ಸೈಟ್‍ಗಳು ಭಾರತದಲ್ಲಿವೆ. ಯಾಕೆ, ಕೆಲವೇ ಕೆಲವು ವೆಬ್‍ಸೈಟ್‍ಗಳ ಹೆಸರು ಗೂಗಲ್ ಹುಡುಕಾಟದಲ್ಲಿ ಮೊದಲಿಗೆ ಬರುತ್ತವೆ? ಪವರ್‍ಫುಲ್ ವೆಬ್ ಮಾರ್ಕೆಟಿಂಗ್ ಟೆಕ್ನಿಕ್ ಆದಎಸ್‍ಇಒ' ಅನ್ನು ಸಮರ್ಥವಾಗಿ ಅಳವಡಿಸಿಕೊಂಡಿರುವುದೇ ಆ ವೆಬ್‍ಸೈಟ್‍ಗಳ ಲಿಂಕ್‍ಗಳು ಗೂಗಲ್, ಬಿಂಗ್, ಯಾಹೂ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಟಾಪ್‍ನಲ್ಲಿ ಕಾಣಿಸಿಕೊಳ್ಳಲು ಪ್ರಮುಖ ಕಾರಣವಾಗಿದೆ.

ಏನಿದು ಎಸ್‍ಇಒ?
ಎಸ್‍ಇಒ ವಿಸ್ತೃತ ರೂಪ ಸರ್ಚ್ ಎಂಜಿನ್ ಆಪ್ಟಿಮೈಜೇಷನ್. ಸರ್ಚ್ ಎಂಜಿನ್‍ನಲ್ಲಿರುವ ಕೋಟಿ ಕೋಟಿ ವೆಬ್‍ಸೈಟ್‍ಗಳು, ಮಾಹಿತಿ ಕಣಜಗಳನ್ನು ಹಿಂದಿಕ್ಕಿ ನಿಮ್ಮ ವೆಬ್‍ಸೈಟ್‍ಗೆ ಅಗ್ರ ರ್ಯಾಂಕ್ ನೀಡಿ ಮಾಹಿತಿ ಹುಡುಕಾಡುವವರಿಗೆ ಮೊದಲ ಪುಟದಲ್ಲಿ ತೋರಿಸಲು ಸಹಕರಿಸುವ ವೆಬ್ ಟೆಕ್ನಿಕ್ ಅನ್ನು ಎಸ್‍ಇಒ ಎನ್ನಬಹುದು. ಸರ್ಚ್ ಫಲಿತಾಂಶಗಳಲ್ಲಿ ಮೊದಲ ಪುಟದಲ್ಲಿ ಕಾಣುವ ಲಿಂಕ್‍ಗಳನ್ನು ಅತ್ಯಧಿಕ ಜನರು ಕ್ಲಿಕ್ ಮಾಡುತ್ತಾರೆ. ನಿಮ್ಮ ವೆಬ್ ತಾಣಕ್ಕೆ ಹೆಚ್ಚು ಜನರು ಭೇಟಿ ನೀಡಬೇಕಾದರೆ ಉತ್ತಮ ಎಸ್‍ಇಒ ತಂತ್ರವನ್ನು ನೀವು ಅಳವಡಿಸಿಕೊಳ್ಳಲೇಬೇಕು.

ಎಸ್‍ಇಒಗೆ ಸಖತ್ ಬೇಡಿಕೆ
ಈಗ ಬಹುತೇಕ ವ್ಯವಹಾರಗಳು ಆನ್‍ಲೈನ್ ಅನ್ನು ಅವಲಂಬಿಸಿವೆ. ಆನ್‍ಲೈನ್ ವ್ಯವಹಾರಕ್ಕಾಗಿ ವೆಬ್‍ಸೈಟ್‍ಗಳು ಪ್ರಮುಖವಾಗಿರುತ್ತವೆ. ಇಂಟರ್‍ನೆಟ್‍ನಲ್ಲಿಂದು ಕೋಟಿ ಕೋಟಿ ವೆಬ್‍ಸೈಟ್‍ಗಳಿವೆ. ಆನ್‍ಲೈನ್ ಮಾರುಕಟ್ಟೆಯಲ್ಲಿ ಗ್ರಾಹಕರು ಅಜ್ಞಾತವಾಗಿರುತ್ತಾರೆ. ಅಜ್ಞಾತ ಗ್ರಾಹಕರನ್ನು ತಮ್ಮ ಕಂಪನಿಗೆ ಸೆಳೆಯಲು ಪರಿಣಿತರ ಅವಶ್ಯಕತೆ ಇರುತ್ತದೆ. ಉದಾಹರಣೆಗೆ ಆನ್‍ಲೈನ್‍ನಲ್ಲಿ ನೀವು ಗಿಫ್ಟ್ ಸೆಂಟರ್ ತೆರೆದಿದ್ದೀರಿ ಎಂದಿರಲಿ. ಯಾರಾದರೂ ಗಿಫ್ಟ್ ಇನ್ ಬೆಂಗಳೂರು ಎಂದು ಹುಡುಕಿದಾಗ ಸುಲಭವಾಗಿ ನಿಮ್ಮ ವೆಬ್‍ಸೈಟ್ ಅವರಿಗೆ ಕಾಣಿಸಬೇಕು. ಯಾವುದೇ ಆನ್‍ಲೈನ್ ವ್ಯವಹಾರದ ಪ್ರಮುಖ ಉದ್ದೇಶ ಹೆಚ್ಚಿನ ಗ್ರಾಹಕರಿಗೆ ತಲುಪುವುದಾಗಿದೆ. ಗ್ರಾಹಕರಿಗೆ ಸುಲಭವಾಗಿ ಸಿಗುವಂತೆ ಮಾರ್ಕೆಟ್ ಮಾಡಲು ಎಸ್‍ಇಒ ಪರಿಣತಿ ನೆರವಾಗುತ್ತದೆ. ಅದಕ್ಕಾಗಿ ಎಸ್‍ಇಒ ಪರಿಣಿತರನ್ನು ಕಂಪನಿಗಳು ನೇಮಿಸಿಕೊಳ್ಳುತ್ತವೆ. ಭವಿಷ್ಯದಲ್ಲಿ ಆನ್‍ಲೈನ್ ವ್ಯವಹಾರ ಇನ್ನಷ್ಟು ಅಧಿಕಗೊಳ್ಳುವುದರಿಂದ ಇದು ಮುಂದೆಯೂ ಬೇಡಿಕೆಯಲ್ಲಿರಲಿರುವ ಜಾಬ್ ಆಗಿದೆ.

ಎಸ್‍ಇಒ ಕೋರ್ಸ್
ಎಸ್‍ಇಒ ಕಲಿಸುವ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳಿಂದು ಲಭ್ಯ ಇವೆ. ಮಾರಾಟ ಮತ್ತು ಮಾರುಕಟ್ಟೆ ವೃತ್ತಿಪರರು, ಉದ್ಯಮಿಗಳು, ವೆಬ್ ವಿನ್ಯಾಸ ಮತ್ತು ಅಭಿವೃದ್ಧಿ ವೃತ್ತಿಪರರು, ಕಂಟೆಂಟ್ ಬರಹಗಾರರು, ಎಸ್‍ಇಒ ಬಗ್ಗೆ ಅಷ್ಟಾಗಿ ತಿಳಿದಿರದ ಡಿಜಿಟಲ್ ಮಾರ್ಕೆಟಿಂಗ್ ವೃತ್ತಿಪರರು, ವಿದ್ಯಾರ್ಥಿಗಳು ಮತ್ತು ಎಸ್‍ಇಒ ಉದ್ಯಮದಲ್ಲಿ ತಮ್ಮ ಕರಿಯರ್ ರೂಪಿಸಿಕೊಳ್ಳಲು ಬಯಸುವ ಯಾರೂ ಬೇಕಾದರೂ ಈ ಕೋರ್ಸ್ ಮಾಡಬಹುದಾಗಿದೆ.

ಎಲ್ಲ ಕಲಿಯಬಹುದು?
ಎಸ್‍ಇಒ ಮೂಲಭೂತ ಅಂಶಗಳನ್ನು ನೀವು ಇಂಟರ್‍ನೆಟ್‍ನಲ್ಲಿ ಕಲಿಯಿರಿ. ಅಂದರೆ, ಎಸ್‍ಇಒ ಬಗ್ಗೆ ಪಾಠ ಮಾಡುವ ಸಾಕಷ್ಟು ಉಚಿತ ಕೋರ್ಸ್‍ಗಳು ಇವೆ. ಅದಕ್ಕಾಗಿ ಫ್ರೀ ಎಸ್‍ಇಒ ಕೋರ್ಸ್ ಎಂದು ಗೂಗಲ್ ಇತ್ಯಾದಿ ಸರ್ಚ್ ಎಂಜಿನ್‍ಗಳಲ್ಲಿ ಹುಡುಕಾಡಿ. ಇಲ್ಲಿ ನಿಮ್ಮ ಜ್ಞಾನ ಹೆಚ್ಚಿಸಿಕೊಂಡ ನಂತರ ಯಾವುದಾದರೂ ಕ್ಲಾಸ್‍ರೂಂ ಅಥವಾ ಆನ್‍ಲೈನ್ ಕೋರ್ಸ್‍ಗಳಿಗೆ ಸೇರಬಹುದು. ನೀವಿರುವ ಊರಿಗೆ ಸಮೀಪದಲ್ಲಿ ಎಲ್ಲೆಲ್ಲಿ ಎಸ್‍ಇಒ ಕಲಿಕಾ ಕೇಂದ್ರಗಳಿವೆ ಎಂದು ಗೂಗಲ್‍ನಲ್ಲಿ ಹುಡುಕಾಟ ನಡೆಸಬಹುದು. ಆನ್‍ಲೈನ್ ಮೂಲಕ ಕಲಿಯಲು www.seocertification.org,  www.simplilearn.com, www.digitalvidya.com, www.seotrainingpoint.com, www.inventateq.com  ಮುಂತಾದ ವೆಬ್‍ಸೈಟ್‍ಗಳಿಗೆ ಭೇಟಿ ನೀಡಬಹುದು. ದುಬಾರಿ ದರ ಕೇಳುವ ಕಲಿಕಾ ಕೇಂದ್ರಗಳಿಂದ ದೂರವಿರಿ. ಅಲ್ಲಿರುವ ಸೌಲಭ್ಯ, ಫ್ಯಾಕಲ್ಟಿ ಗಮನಿಸಿ ಮುಂದುವರೆಯಿರಿ.

ವೆಬ್‍ಸೈಟ್ ಎಸ್‍ಇಒ ಟಿಪ್ಸ್
* ವೆಬ್‍ಸೈಟ್‍ನಲ್ಲಿ ಬಳಸಿರುವ ವಿಷಯಕ್ಕೆ ಸಂಬಂಧಪಟ್ಟ ಸಮರ್ಪಕ ಕೀವರ್ಡ್‍ಗಳನ್ನು ಬರೆಯಿರಿ.
* ನಿಮ್ಮ ವೆಬ್‍ಸೈಟ್‍ಗೆ ಬೇರೆ ಆಂತರಿಕ ಲಿಂಕ್‍ಗಳನ್ನು ಸೇರಿಸಿ.
* ವೆಬ್‍ಸೈಟ್ ಅನ್ನು ಸ್ಲೋ ಮಾಡುವ ಪ್ರತಿಯೊಂದು ಅಂಶವನ್ನು ತೆಗೆದುಬಿಡಿ.
* ಇಮೇಜ್ ಟೈಟಲ್, ಡಿಸ್ಕ್ರಿಪ್ಷನ್ ಇತ್ಯಾದಿಗಳಲ್ಲಿಯೂ ಕೀವರ್ಡ್‍ಗಳನ್ನು ಬಳಕೆ ಮಾಡಿ.
* ಇತರ ಪ್ರಮುಖ ವೆಬ್‍ಸೈಟ್‍ಗಳ ಲಿಂಕ್‍ಗಳನ್ನೂ ಸಂದರ್ಭಕ್ಕೆ ತಕ್ಕಂತೆ ನೀಡಿ.
* ಸಮಯಕ್ಕೆ ಸರಿಯಾಗಿ ವೆಬ್‍ಸೈಟ್ ಅನ್ನು ಅಪ್‍ಗ್ರೇಡ್ ಮಾಡುತ್ತಿರಿ.
* ಸರ್ಚ್ ಎಂಜಿನ್‍ಗಳಿಗೆ ನಿಮ್ಮ ವೆಬ್‍ಸೈಟ್ ಅನ್ನು ಇಂಡಕ್ಸ್ ಮಾಡಿ.
* ಆಗಾಗ ನಿಮ್ಮ ವೆಬ್‍ಸೈಟ್‍ನ ಡೊಮೇನ್ ಹೆಸರನ್ನು ಬದಲಾಯಿಸಬೇಡಿ.
* ವೆಬ್‍ಸೈಟ್‍ನಲ್ಲಿ ಮನುಷ್ಯರು ಬರೆದಂತೆ ಬರೆಯಿರಿ. ಯಂತ್ರ ಬರೆದಂತೆ ಬರೆಯದಿರಿ.
ಟ್ಯಾಕ್ಸೇಷನ್ ಕೋರ್ಸ್ ಕಲಿತವರಿಗೆ ಬೇಡಿಕೆ ಹೆಚ್ಚು

ಟ್ಯಾಕ್ಸೇಷನ್ ಕೋರ್ಸ್ ಕಲಿತವರಿಗೆ ಬೇಡಿಕೆ ಹೆಚ್ಚು

ಕಾಮರ್ಸ್ ಪದವಿ ಪಡೆದ ನಂತರ ಟ್ಯಾಕ್ಸ್ ಸಂಬಂಧಿತ ವಿಭಾಗಗಳಲ್ಲಿ ಕೆಲಸ ಮಾಡಬಯಸುವವರು `ಟ್ಯಾಕ್ಸೇಷನ್'ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.
Published in Vijaya Karnataka Mini


  • ಪ್ರವೀಣ್ ಚಂದ್ರ ಪುತ್ತೂರು


ಕಾಮರ್ಸ್ ಓದಿದವರಿಗೆ ಸಖತ್ ಡಿಮ್ಯಾಂಡ್ ಇದೆ ಎಂದು ಬಿ.ಕಾಂ., ಎಂ.ಕಾಂ. ಓದುವವರು ಹೆಚ್ಚಾಗಿದ್ದಾರೆ. ವಾಣಿಜ್ಯ ಪದವೀಧರರು ಹೆಚ್ಚಾಗುತ್ತಿರುವುದರಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಪೈಪೆÇೀಟಿ ಸಹಜ. ಕೆಲವೊಮ್ಮೆ ಕೆಲಸ ಪಡೆಯಲು ಕಾಲೇಜಿನಲ್ಲಿ ದೊರಕುವ ಸರ್ಟಿಫಿಕೇಟ್ ಮಾತ್ರ ಸಾಕಾಗದು. ಬಿ.ಕಾಂ., ಎಂ.ಕಾಂ., ಇತ್ಯಾದಿ ಪದವಿ ಪಡೆದವರು ತೆರಿಗೆ ಸಂಬಂಧಿತ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಲು ಇಷ್ಟಪಟ್ಟರೆ ಅಲ್ಪಾವಧಿಯ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ಮಾಡಬಹುದು. ಇದರಿಂದ ನಿಮ್ಮ ರೆಸ್ಯೂಂನ ತೂಕ ಹೆಚ್ಚಾಗುತ್ತದೆ. ಕೆಲಸ ದೊರಕುವ ಸಾಧ್ಯತೆ ಹೆಚ್ಚಾಗುತ್ತದೆ.

ತೆರಿಗೆ ತಜ್ಞರಿಗೆ ಉತ್ತಮ ಬೇಡಿಕೆ ಇರುವುದರಿಂದ ಟ್ಯಾಕ್ಸೇಷನ್‍ಗೆ ಸಂಬಂಧಿಸಿದ ಅಲ್ಪಾವಧಿ ಕೋರ್ಸ್ ನಡೆಸುವ ಶಿಕ್ಷಣ ಸಂಸ್ಥೆಗಳು ದೇಶದಲ್ಲಿ ಸಾಕಷ್ಟಿವೆ. ಆದರೆ, ರಾಜ್ಯದಲ್ಲಿ ಇಂತಹ ಸಂಸ್ಥೆಗಳು ಕಡಿಮೆ ಇವೆ. ದೂರಶಿಕ್ಷಣ ಅಥವಾ ಆನ್‍ಲೈನ್‍ನಿಂದಲೂ ಇಂತಹ ಸರ್ಟಿಫಿಕೇಷನ್ ಪಡೆಯಬಹುದು.

ಏನಿದು ಟ್ಯಾಕ್ಸೇಷನ್ ಕೋರ್ಸ್?
ತೆರಿಗೆ ನಿರ್ವಹಣೆ, ಮೌಲ್ಯಮಾಪನ, ವರದಿ, ಲೆಕ್ಕಪರಿಶೋಧನೆ, ಪರಿಶೀಲನೆ ಮತ್ತು ಅಂತಾರಾಷ್ಟ್ರೀಯ ತೆರಿಗೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ರೂಪಿಸಲಾಗಿರುತ್ತದೆ. ವಾಣಿಜ್ಯ ಪದವಿ, ಸಿಎ, ಮ್ಯಾನೇಜ್‍ಮೆಂಟ್ ವಿಷಯಗಳನ್ನು ಓದಿದವರು ಇಂತಹ ಕೋರ್ಸ್ ಮಾಡಿ ಸರ್ಟಿಫಿಕೇಟ್ ಪಡೆಯಬಹುದು. ಟ್ಯಾಕ್ಸೇಷನ್ ಸಂಬಂಧಿಸಿದ ಡಿಪೆÇ್ಲಮಾ ಮಾತ್ರವಲ್ಲದೆ ಅಲ್ಪಾವಧಿಯ ಕೋರ್ಸ್‍ಗಳೂ ಇರುತ್ತವೆ.

ಐಸಿಎಐನಿಂದ ಸರ್ಟಿಫಿಕೇಟ್
ಚಾರ್ಟೆಡ್ ಅಕೌಂಟೆಂಟ್ ಆ್ಯಕ್ಟ್, 1949ರ ಅನ್ವಯ ದೆಹಲಿಯಲ್ಲಿ ಸ್ಥಾಪನೆಗೊಂಡ `ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)'ದಲ್ಲಿ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಹಲವು ಕೋರ್ಸ್‍ಗಳಿವೆ. ಈ ಸಂಸ್ಥೆಯು ಸುಮಾರು 100 ಗಂಟೆಗಳ(16 ದಿನಗಳ) ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್ ಕೋರ್ಸ್ ನಡೆಸುತ್ತದೆ. ಸುಮಾರು ಶೇಕಡ 90ರಷ್ಟು ಪಾಠ ಪೂರ್ಣಗೊಂಡ ನಂತರ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ಪಾಸಾದವರಿಗೆ ಸರ್ಟಿಫಿಕೇಟ್ ದೊರೆಯುತ್ತದೆ. ಐಸಿಎಐನ ಸದಸ್ಯರು ಅಥವಾ ಸಿಎ ಅಂತಿಮ ಪರೀಕ್ಷೆ ಮುಗಿಸಿ ಐಸಿಎಐನ ಸದಸ್ಯತ್ವ ಸಂಖ್ಯೆ ಪಡೆದವರು ಈ ಸರ್ಟಿಫಿಕೇಷನ್ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ 16 ದಿನಗಳ ಕೋರ್ಸ್‍ಗೆ 25 ಸಾವಿರ ರೂ. ಶುಲ್ಕ ಇರುತ್ತದೆ. ಈ ಕೋರ್ಸ್‍ನ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ವೆಬ್‍ಸೈಟ್ ಲಿಂಕ್ ಪ್ರವೇಶಿಸಬಹುದು.

ರಾಜ್ಯದಲ್ಲಿ ಟ್ಯಾಕ್ಸೇಷನ್
ಕರ್ನಾಟಕದಲ್ಲಿ ಟ್ಯಾಕ್ಸೇಷನ್ ವಿಷಯದಲ್ಲಿ ಅಲ್ಪಾವಧಿ ಕೋರ್ಸ್‍ಗಳನ್ನು ನೀಡುವ ವಿದ್ಯಾಸಂಸ್ಥೆಗಳು ಅತ್ಯಲ್ಪ. ಟ್ಯಾಕ್ಸ್ ಆ್ಯಂಡ್ ರೆಗ್ಯುಲೇಟರಿ ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಬೆಂಗಳೂರಿನ ವೆಲ್ಲಿಂಗಕರ್ ಎಜುಕೇಷನ್ ಸಂಸ್ಥೆಯು 6 ತಿಂಗಳ ಅವಧಿಯ ಡಿಪೆÇ್ಲಮಾ ಕೋರ್ಸ್ ನೀಡುತ್ತಿದೆ. ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು. ಈ ಸಂಸ್ಥೆಯು ಆರು ತಿಂಗಳ ಕೋರ್ಸ್‍ಗೆ 50 ಸಾವಿರ ರೂ.(ವ್ಯಾಟ್ ಸೇರದೆ) ಶುಲ್ಕ ನಿಗದಿಪಡಿಸಿದೆ. ಕೆಲವು ಖಾಸಗಿ ಸಂಸ್ಥೆಗಳು ಸಹ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ನೀಡುತ್ತವೆ. ಬೆಂಗಳೂರಿನ ವಿಜಯನಗರದಲ್ಲಿರುವ ಐಜಿಎಸ್‍ಎಸ್‍ನಲ್ಲಿ 6 ತಿಂಗಳ ಟ್ಯಾಕ್ಸೇಷನ್ ಕೋರ್ಸ್ ಇದೆ. ಬಿಕಾಂ, ಬಿಬಿಎಂ, ಎಂಬಿಎ, ಎಂಕಾಂ ಇತ್ಯಾದಿ ಶಿಕ್ಷಣ ಪೂರೈಸಿದವರು ಈ ಕೋರ್ಸ್ ಮಾಡಬಹುದು. ರಾಜ್ಯದಲ್ಲಿ ಬೆರಳೆಣಿಕೆಯ ಖಾಸಗಿ ಸಂಸ್ಥೆಗಳು ಅಲ್ಪಾವಧಿ ಕೋರ್ಸ್‍ಗಳನ್ನು ನಡೆಸುತ್ತಿವೆ. ನಿಮ್ಮ ಊರಿಗೆ ಸಮೀಪದಲ್ಲಿ ಯಾವುದಾದರೂ ಸಂಸ್ಥೆಯು ಇಂತಹ ಕೋರ್ಸ್‍ಗಳನ್ನು ನಡೆಸುತ್ತಿದೆಯೇ ಎಂದು ತಿಳಿದುಕೊಳ್ಳಿ.

ಆನ್‍ಲೈನ್ ಕೋರ್ಸ್‍ಗಳು
* ಇನ್‍ಸ್ಟಿಟ್ಯೂಟ್ ಆಫ್ ಇಂಟರ್‍ನ್ಯಾಷನಲ್ ಟ್ರೇಡ್ ಆ್ಯಂಡ್ ಟ್ಯಾಕ್ಸ್ ಸ್ಟಡೀಸ್‍ನಲ್ಲಿ `ಕಸ್ಟಮ್ಸ್ ಆ್ಯಂಡ್ ಫಾರಿನ್ ಟ್ರೇಡ್ ಪಾಲಿಸಿ' ವಿಷಯದ ಕುರಿತು ಆನ್‍ಲೈನ್ ಕೋರ್ಸ್ ಮಾಡಬಹುದಾಗಿದೆ. 90 ದಿನಗಳ ಈ ಕೋರ್ಸ್‍ಗೆ 10 ಸಾವಿರ ರೂ. ನೀಡಬೇಕು. ಹೆಚ್ಚಿನ ಮಾಹಿತಿಗೆ ಲಿಂಕ್
* ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್‍ಮೆಂಟ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯೂ ಆನ್‍ಲೈನ್‍ನಲ್ಲಿ ಡೈರೆಕ್ಟ್ ಮತ್ತು ಇಂಡೈರೆಕ್ಟ್ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ನಡೆಸುತ್ತದೆ. ವೆಬ್‍ಲಿಂಕ್

ದೂರಶಿಕ್ಷಣದಿಂದ ಸರ್ಟಿಫಿಕೇಟ್
ಟ್ಯಾಕ್ಸೇಷನ್ ಡಿಪೆÇ್ಲಮಾ ಕೋರ್ಸ್‍ಗಳು ರಾಜ್ಯದಲ್ಲಿ ಕಡಿಮೆ ಇರಬಹುದು. ಇಂತಹ ಸಂದರ್ಭದಲ್ಲಿ ಡಿಸ್ಟೇನ್ಸ್ ಎಜುಕೇಷನ್ ಮೂಲಕ ತೆರಿಗೆ ಕಾನೂನು ಕಲಿಯಬಹುದು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫೈನಾನ್ಸ್‍ನಲ್ಲಿ ಟ್ಯಾಕ್ಸೇಷನ್ ಸಂಬಂಧಿಸಿದಂತೆ ಡಿಸ್ಟೆನ್ಸ್ ಎಜುಕೇಷನ್ ಮಾಡಬಹುದು.

ಚೆನ್ನೈನಲ್ಲಿರುವ ಯೂನಿವರ್ಸಿಟಿ ಆಫ್ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಡಿಸ್ಟೆನ್ಸ್ ಎಜುಕೇಷನ್ನಲ್ಲಿ ಅಥವಾ ಅಣ್ಣಾಮಲೈ ಯೂನಿವರ್ಸಿಟಿಯಲ್ಲಿ ಟ್ಯಾಕ್ಸೇಷನ್ ಡಿಪೆÇ್ಲಮಾ ಓದಬಹುದು.
ಡಿಸ್ಟೆನ್ಸ್ ಕೋರ್ಸ್ ಮಾಡುವವರಿಗೆ ಮುಂಬೈನಲ್ಲಿರುವ ಟಿವಿಸಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಟ್ಯಾಕ್ಸೇಷನ್ ಕುರಿತಾದ ಹಲವು ಕೋರ್ಸ್‍ಗಳಿವೆ. ಡಿಪೆÇ್ಲಮಾ ಇನ್ ಇನ್‍ಡೈರೆಕ್ಟ್ ಟ್ಯಾಕ್ಸೇಷನ್, ಡಿಪೆÇ್ಲಮಾ ಇನ್ ಡೈರೆಕ್ಟ್ ಟ್ಯಾಕ್ಸೇಷನ್ ಇತ್ಯಾದಿ ಕೋರ್ಸ್‍ಗಳಿವೆ. ಇವು ತಲಾ ನಾಲ್ಕು ತಿಂಗಳ ಕೋರ್ಸ್. ಹೆಚ್ಚಿನ ಮಾಹಿತಿge. ಮುಂಬೈನಲ್ಲಿರುವ ಇಂಡೋ ಜರ್ಮನ್ ಟೂಲ್ ರೂಂ ಎಂಬ ಸಂಸ್ಥೆಯೂ ಭಾರತೀಯ ದೂರ ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 6 ತಿಂಗಳ ಡಿಪೆÇ್ಲಮಾ ಇನ್ ಟ್ಯಾಕ್ಸ್ ಮ್ಯಾನೇಜ್‍ಮೆಂಟ್' ಕೋರ್ಸ್ ಇದೆ.
<strong>ಯಾರು ಮಾಡಬಹುದು?</strong>
ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು ಅಥವಾ ಈಗಾಗಲೇ ಅಕೌಂಟೆಂಟ್/ಟ್ಯಾಕ್ಸ್ ಪ್ರಿಪರೇಷನ್ ವಿಭಾಗಗಳಲ್ಲಿ ಉದ್ಯೋಗದಲ್ಲಿರುವವರು ಕಂದಾಯಕ್ಕೆ ಸಂಬಂಧಿಸಿದ
ಟ್ಯಾಕ್ಸೇಷನ್' ಅಥವಾ `ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್' ಕೋರ್ಸ್‍ಗಳನ್ನು ಮಾಡಬಹುದು. ಅಂದರೆ, ಬಿಕಾಂ, ಎಂಕಾಂ, ಸಿಎ ಮಾತ್ರವಲ್ಲದೆ ಮ್ಯಾನೇಜ್‍ಮೆಂಟ್ ವಿಷಯಗಳನ್ನೂ ಓದಿದದವರೂ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ಮಾಡಬಹುದು. ದೆಹಲಿಯ ಐಸಿಎಐನಲ್ಲಿ ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್ ಕೋರ್ಸ್ ಮಾಡಲು ಐಸಿಎಐ ಸದಸ್ಯತ್ವ ಅಥವಾ ಸದಸ್ಯತ್ವ ಸಂಖ್ಯೆ ಪಡೆಯಬೇಕಿರುವುದು ಕಡ್ಡಾಯ.

ಎಲ್ಲೆಲ್ಲಿ ಅವಕಾಶ ದೊರಕುತ್ತದೆ?
ಇಂತಹ ಸರ್ಟಿಫಿಕೇಷನ್ ಪಡೆದವರಿಗೆ ಕಾಪೆರ್Çರೇಟ್ ಆಫೀಸ್‍ಗಳಲ್ಲಿ, ಸರಕಾರಿ ಏಜೆನ್ಸಿಗಳಲ್ಲಿ, ಸಣ್ಣ ಉದ್ಯಮಗಳಲ್ಲಿ, ರಿಟೀಲ್ ಅಥವಾ ಸರ್ವೀಸ್ ಉದ್ಯಮಗಳಲ್ಲಿ ಸುಲಭವಾಗಿ ಕೆಲಸ ದೊರಕುತ್ತದೆ. ಟ್ಯಾಕ್ಸ್ ಪ್ಲಾನಿಂಗ್, ಪ್ರಾಪರ್ಟಿ ಟ್ಯಾಕ್ಸೇಷನ್, ತೆರಿಗೆ ಕಾನೂನು ಮತ್ತು ಕಾಪೆರ್Çರೇಟ್ ತೆರಿಗೆ ಇತ್ಯಾದಿ ವಿಷಯಗಳಲ್ಲಿ ತಜ್ಞರಾಗಬಹುದು.
ಕಾಲೇಜಿನಲ್ಲಿ ಬಿಕಾಂ ಇತ್ಯಾದಿ ಪದವಿ ಪಡೆzವರಿಗೆ ಪ್ರಾಕ್ಟಿಕಲ್ ಅನುಭವ ಇರುವುದಿಲ್ಲ. ಟ್ಯಾಕ್ಸೇಷನ್ ಸಂಬಂಧಿಸಿದ ಶಾರ್ಟ್ ಟರ್ಮ್ ಕೋರ್ಸ್ ಮಾಡಿದರೆ ಅವರಿಗೆ ಸ್ಪೆಸಿಫಿಕ್ ಆದ ನಾಲೆಡ್ಜ್ ದೊರಕುತ್ತದೆ. ಇಂತಹ ಕೋರ್ಸ್ ಮಾಡಿದ್ದರೆ ಫ್ರೆಷರ್ಸ್‍ಗಳಿಗೆ ಉದ್ಯೋಗಾವಕಾಶವೂ ಉತ್ತಮವಾಗಿರುತ್ತದೆ.
ಗಂಗಾಧರ್ ಹೆಗಡೆ | ಅಡಿಟರ್, ಬೆಂಗಳೂರು


ಕರ್ನಾಟಕದಲ್ಲಿ ಟ್ಯಾಕ್ಸೇಷನ್ ಸಂಬಂಧಪಟ್ಟಂತೆ ಹೆಚ್ಚು ಶಾರ್ಟ್‍ಟರ್ಮ್ ಕೋರ್ಸ್‍ಗಳಿಲ್ಲ. ಆದರೆ, ಬೇರೆ ರಾಜ್ಯಗಳಲ್ಲಿರುವ ಇನ್‍ಸ್ಟಿಟ್ಯೂಷನ್‍ಗಳಿಂದ ದೂರಶಿಕ್ಷಣ, ಆನ್‍ಲೈನ್ ಕೋರ್ಸ್ ಮಾಡಬಹುದು. ಇಂತಹ ಸರ್ಟಿಫಿಕೇಷನ್ ರೆಸ್ಯೂಂನ ವ್ಯಾಲ್ಯೂ ಹೆಚ್ಚಿಸಿ ಉದ್ಯೋಗ ದೊರಕಿಸಲು ನೆರವಾಗಬಹುದು.
ನರೇಂದ್ರ ಹಿರೆಕೈ | ಟ್ಯಾಕ್ಸ್ ಕನ್ಸಲ್ಟೆಂಟ್, ಬೆಂಗಳೂರು


ಷೇರುಪೇಟೆ ಉದ್ಯೋಗಕ್ಕೆ ಸರ್ಟಿಫಿಕೇಟ್ ಕೋರ್ಸ್

ಷೇರುಪೇಟೆ ಉದ್ಯೋಗಕ್ಕೆ ಸರ್ಟಿಫಿಕೇಟ್ ಕೋರ್ಸ್

ಬಿ.ಕಾಂ., ಎಂ.ಕಾಂ., ಎಂಬಿಇ ಇತ್ಯಾದಿ ಕಾಮರ್ಸ್ ಅಥವಾ ಮ್ಯಾನೇಜ್‍ಮೆಂಟ್ ಶಿಕ್ಷಣ ಪಡೆದ ನಂತರ ಷೇರು ಮಾರುಕಟ್ಟೆ ಸಂಬಂಧಿ ಉದ್ಯೋಗ ಪಡೆಯಲು ನೆರವು ನೀಡುವ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳ ವಿವರ ಇಲ್ಲಿದೆ.

  • ಪ್ರವೀಣ್ ಚಂದ್ರ ಪುತ್ತೂರು


ಕಾಮರ್ಸ್ ಸಂಬಂಧಿತ ಪದವಿ, ಸ್ನಾತಕೋತ್ತರ ಪದವಿ ಮುಗಿಸಿದ ನಂತರ ಜಾಬ್ ಆಯ್ಕೆಯ ಸಮಯದಲ್ಲಿ ಒಂದಿಷ್ಟು ಗೊಂದಲವಿರುತ್ತದೆ. ಮ್ಯಾನೇಜ್‍ಮೆಂಟ್ ಕ್ಷೇತ್ರದಲ್ಲಿ ಮುಂದುವರೆಯುವುದೇ? ಮಾರ್ಕೆಟಿಂಗ್ ಫೀಲ್ಡ್‍ಗೆ ಹೋಗಬಹುದೇ? ಅಕೌಂಟೆಟ್, ಸೇಲ್ಸ್, ಟ್ಯಾಕ್ಸ್ ಪ್ಲಾನಿಂಗ್... ಹೀಗೆ ಯಾವ ವಿಭಾಗದ ಜಾಬ್‍ಗೆ ಅಪ್ಲೈ ಮಾಡಲಿ ಎಂಬ ಸಂದಿಗ್ಧತೆ ಇರಬಹುದು. ಪಾಲಿಗೆ ಬಂದದ್ದು ಪಂಚಾಮೃತ ಎಂದು ಸಿಕ್ಕ ಜಾಬ್‍ಗೆ ಹೋಗಿ ಸೇರಿದರೆ ನಂತರ ಬೇರೆ ಫೀಲ್ಡ್‍ನಲ್ಲಿ ಅವಕಾಶ ಸಿಗದೆ ಪರಿತಪಿಸಬೇಕಾಗಬಹುದು. ಇದರ ಬದಲು ಇವುಗಳಲ್ಲಿ ಯಾವುದಾದರೊಂದು ಕ್ಷೇತ್ರಕ್ಕೆ ಸಂಬಂಧಿಸಿದ ಕಡಿಮೆ ಅವಧಿಯ ಸರ್ಟಿಫಿಕೇಷನ್ ಕೋರ್ಸ್ ಪಡೆದರೆ ಹೋಗುವ ಹಾದಿಯು ನಿಶ್ಚಿತವಾಗಿರುತ್ತದೆ. ಅವಕಾಶಗಳೂ ಸುಲಭವಾಗಿ ದೊರಕುತ್ತದೆ. ಈ ಲೇಖನದಲ್ಲಿ ಷೇರುಪೇಟೆ ಸಂಬಂಧಿತ ಉದ್ಯೋಗ ಪಡೆದುಕೊಳ್ಳಲು ನೆರವಾಗುವ ಶಾರ್ಟ್ ಟರ್ಮ್ ಕೋರ್ಸ್‍ಗಳ ವಿವರ ಇಲ್ಲಿದೆ.
ಷೇರುಪೇಟೆ ಸಂಬಂಧಿತ ಜಾಬ್ ಹೆಚ್ಚಿನವರಿಗೆ ಅಚ್ಚುಮೆಚ್ಚು. ಸೆನ್ಸೆಕ್ಸ್ ಗೂಳಿ ಕರಡಿ ಕುಣಿತಕ್ಕೆ ತಕ್ಕಂತೆ ಗ್ರಾಹಕರನ್ನು ನಿರ್ವಹಿಸುವ ಪಾತ್ರವದು. ಷೇರು ವಹಿವಾಟಿಗೆ ಸಾಥ್ ನೀಡುವ ಬ್ರೋಕಿಂಗ್ ಹೌಸ್‍ಗಳು, ಸೆಕ್ಯುರಿಟೀಸ್ ಕಂಪನಿಗಳು ಷೇರುಪೇಟೆಯ ಜ್ಞಾನವಿರುವ ಚತುರರನ್ನು ನೇಮಿಸಿಕೊಳ್ಳುತ್ತವೆ. ಅಲ್ಲಿ ಈಕ್ವಿಟಿ ಡೀಲರ್, ಟ್ರೇಡ್ ಎಕ್ಸಿಕ್ಯೂಟಿವ್ಸ್, ವೆಬ್ ಅಸಿಸ್ಟ್ ಡೀಲರ್ಸ್, ಷೇರ್ ಕನ್ಸಲ್ಟೆಂಟ್ ಸೇರಿದಂತೆ ಹಲವು ಬಗೆಯ ಉದ್ಯೋಗಾವಕಾಶಗಳಿವೆ. ಇಲ್ಲಿ ಮಾತ್ರವಲ್ಲದೆ ಷೇರು ವಿನಿಮಯ ಕೇಂದ್ರಗಳಲ್ಲಿಯೂ ಅವಕಾಶ ಪಡೆಯಲು ಇಂತಹ ಕೋರ್ಸ್‍ಗಳು ನೆರವಾಗಬಹುದು.
ನಿಮ್ಮಲ್ಲಿ ಕಾಮರ್ಸ್ ಪದವಿ, ಸ್ನಾತಕೋತ್ತರ ಪದವಿ ಇದ್ದರೂ ಕೆಲವೊಮ್ಮೆ ಇಂತಹ ಷೇರು ಸಂಸ್ಥೆಗಳು ಕೆಲವೊಮ್ಮೆ ಕೆಲಸ ಕೊಡದಿರಬಹುದು. ಇಂತಹ ಸಂದರ್ಭದಲ್ಲಿ ಸ್ಟಾಕ್ ಮಾರ್ಕೆಟ್ ಸಂಬಂಧಿತ ಸರ್ಟಿಫಿಕೇಷನ್ ಕೋರ್ಸ್‍ಗಳ ನೆರವಿಗೆ ಬರಬಹುದು. ರಾಷ್ಟ್ರೀಯ ಷೇರು ವಿನಿಮಯ ಕೇಂದ್ರ ಎನ್‍ಎಸ್‍ಇ ಮತ್ತು ಮುಂಬೈ ಷೇರುಪೇಟೆ ಬಿಎಸ್‍ಇ ಸಹ ಇತರ ಶಿಕ್ಷಣ ಸಂಸ್ಥೆಗಳ ಸಹಭಾಗಿತ್ವದಲ್ಲಿ ಶಾರ್ಟ್ ಟರ್ಮ್ ಕೋರ್ಸ್‍ಗಳನ್ನು ನಡೆಸಿ ಸರ್ಟಿಫಿಕೇಟ್‍ಗಳನ್ನು ಕೊಡುತ್ತವೆ. ಆನ್‍ಲೈನ್‍ನಲ್ಲೂ ಇಂತಹ ಕೋರ್ಸ್‍ಗಳನ್ನು ಕಲಿಯುವ ಅವಕಾಶವಿದೆ.

ಕ್ಲಾಸ್‍ರೂಂ ಕೋರ್ಸ್
ಎನ್‍ಎಸ್‍ಇ: ರಾಷ್ಟ್ರೀಯ ಷೇರು ವಿನಿಮಯ ಕೇಂದ್ರವು ಈ ನಿಟ್ಟಿನಲ್ಲಿ ಸರ್ಟಿಫೈಡ್ ಕ್ಯಾಪಿಟಲ್ ಮಾರ್ಕೆಟ್ ಪೆÇ್ರಫೆಷನಲ್(ಎನ್‍ಸಿಸಿಎಂಪಿ) ಎಂಬ ಕ್ಲಾಸ್ ರೂಂ ಕೋರ್ಸ್ ನಡೆಸುತ್ತದೆ. ಇದು 100 ಗಂಟೆ ಕೋರ್ಸ್. ಅಂದರೆ, 3-4 ತಿಂಗಳ ಅವಧಿಯದ್ದಾಗಿದೆ. ಈ ಅವಧಿಯಲ್ಲಿ ಬಂಡವಾಳ ಮಾರುಕಟ್ಟೆಗೆ ಸಂಬಂಧಿಸಿದ ಥಿಯರಿ ಮತ್ತು ಪ್ರಾಕ್ಟಿಕಲ್ ಕ್ಲಾಸ್‍ಗಳಿರುತ್ತವೆ. ಈ ಕೋರ್ಸ್‍ನಲ್ಲಿ ಪಾಸಾದವರಿಗೆ ಎನ್‍ಎಸ್‍ಇ ಮತ್ತು ಕೋರ್ಸ್ ನೀಡಿರುವ ಶಿಕ್ಷಣ ಸಂಸ್ಥೆ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ. ಈಕ್ವಿಟಿ ಮಾರುಕಟ್ಟೆ, ಡೆಪ್ಟ್ ಮಾರ್ಕೆಟ್, ಡಿರೈವಿಟಿವ್ಸ್, ಮ್ಯಾಕ್ರೊ ಎಕಾನಮಿಕ್ಸ್, ಟೆಕ್ನಿಕಲ್ ಅನಾಲಿಸಿಸ್, ಫಂಡಮೆಂಟಲ್ ಅನಾಲಿಸಿಸ್ ಸಬ್ಜೆಕ್ಟ್‍ಗಳ ಬಗ್ಗೆ ಈ ಕೋರ್ಸ್‍ನಲ್ಲಿ ತಿಳಿದುಕೊಳ್ಳಬಹುದು.
ಬಿಎಸ್‍ಇ: ಮುಂಬೈ ಷೇರು ವಿನಿಮಯ ಕೇಂದ್ರ ಬಿಎಸ್‍ಇ ತನ್ನದೇ ವಿದ್ಯಾಸಂಸ್ಥೆಯನ್ನು ಹೊಂದಿದೆ. ಬಿಎಸ್‍ಇ ಇನ್‍ಸ್ಟಿಟ್ಯೂಟ್ ಲಿಮಿಟೆಡ್‍ನಲ್ಲಿ ಷೇರುಪೇಟೆಗೆ ಸಂಬಂಧಿಸಿದ ಕಡಿಮೆ ಅವಧಿಯ ಮತ್ತು ದೀರ್ಘಾವಧಿಯ ಕೋರ್ಸ್‍ಗಳಿವೆ. ಅಲ್ಲಿ 3 ತಿಂಗಳ ಅವಧಿಯ ಷೇರುಪೇಟೆಯ ಬೇಸಿಕ್ ಕೋರ್ಸ್‍ಗೆ ಸರ್ವೀಸ್ ಟ್ಯಾಕ್ಸ್ ಸೇರಿಸದೆ 8,250 ರೂಪಾಯಿ ಶುಲ್ಕವಿದೆ. ಸರ್ಟಿಫಿಕೇಟ್ ಆನ್ ಕ್ಯಾಪಿಟಲ್ ಮಾರ್ಕೆಟ್ ಕೋರ್ಸ್‍ನಲ್ಲಿ ಷೇರುಪೇಟೆಯ ಬಗ್ಗೆ ವಿಸ್ತೃತವಾಗಿ ಕಲಿಯಬಹುದು. ಈ ಕೋರ್ಸ್‍ಗೆ ಫೈನಾನ್ಸಿಯಲ್ ಇನ್‍ಸ್ಟಿಟ್ಯೂಷನ್ಸ್ ಮತ್ತು ಮ್ಯಾನೇಜ್‍ಮೆಂಟ್ ವಿದ್ಯಾರ್ಥಿಗಳು ಅರ್ಜಿ ಸಲ್ಲಿಸಬಹುದು. ಯುಜಿಸಿ ಅಂಗೀಕೃತ ವಿಶ್ವವಿದ್ಯಾಲಯದಲ್ಲಿ ಪದವಿಯಲ್ಲಿ ಶೇಕಡ 50ಕ್ಕಿಂತ ಹೆಚ್ಚು ಅಂಕ ಪಡೆದವರು ಈ ಕೋರ್ಸ್ ಮಾಡಬಹುದು. ಸರ್ವೀಸ್ ಟ್ಯಾಕ್ಸ್ ಸೇರಿಸದೆ ಈ ಕೋರ್ಸ್ ಶುಲ್ಕ 18 ಸಾವಿರ ರೂ. ಇದೆ.

ಆನ್‍ಲೈನ್ ಕೋರ್ಸ್
ಆನ್‍ಲೈನ್‍ನಲ್ಲೂ ಷೇರುಪೇಟೆ ಸಂಬಂಧಿಸಿದ ಇಂತಹ ಸರ್ಟಿಫಿಕೇಟ್ ಕೋರ್ಸ್‍ಗಳನ್ನು ಮಾಡಬಹುದು.
ಇಲರ್ನ್‍ಮಾರ್ಕೆಟ್ಸ್: ಎನ್‍ಎಸ್‍ಇ ಅಂಗೀಕೃತ ಇಲರ್ನ್‍ಮಾರ್ಕೆಟ್ ವೆಬ್‍ಸೈಟ್‍ನಲ್ಲಿ ಇಂತಹ ಕೋರ್ಸ್‍ಗಳಿವೆ. ಇಲ್ಲಿ 83ಕ್ಕೂ ಹೆಚ್ಚು ಬೋಧನಾ ವಿಷಯಗಳು, 100ಕ್ಕೂ ಹೆಚ್ಚು ಬೋಧನಾ ವಿಡಿಯೋಗಳಿವೆ. ಷೇರುಪೇಟೆಯ ಬೇಸಿಕ್ಸ್ ವಿಷಯಗಳಿಂದ ಸಮಗ್ರ ಅಧ್ಯಯನದವರೆಗೆ ಕಲಿಯುವ ಅವಕಾಶವಿದೆ. ಆನ್‍ಲೈನ್ ಕೋರ್ಸ್‍ನಲ್ಲಿ ಎನ್‍ಎಸ್‍ಇ ಸರ್ಟಿಫಿಕೇಟ್ ಮಾತ್ರವಲ್ಲದೆ ಇತರ ಜಾಬ್ ಓರಿಯೆಂಟೆಡ್ ಸರ್ಟಿಫಿಕೇಟ್ ದೊರಕುತ್ತದೆ. ಪ್ರತಿಯೊಂದು ಚಾಪ್ಟರ್ ಮುಗಿದ ನಂತರ ಆನ್‍ಲೈನ್ ಪರೀಕ್ಷೆ ಸಹ ನಡೆಯುತ್ತದೆ. ಪಾಸಾದರೆ ಸರ್ಟಿಫಿಕೇಟ್ ನಿಮ್ಮದಾಗುತ್ತದೆ.
ಐಐಟ್ರೇಡ್: ಪದವಿ ಅಥವಾ ಸ್ನಾತಕೋತ್ತರ ಪದವಿ ಪಡೆದವರು ಐಐಟ್ರೇಡ್ ವೆಬ್‍ಸೈಟ್‍ನಲ್ಲಿ ಮೂರು ಹಂತದ ಕೋರ್ಸ್‍ಗಳಿವೆ. ಲೆವೆಲ್ 1ರಲ್ಲಿ ಫೈನಾನ್ಸಿಯಲ್ ಮಾರ್ಕೆಟ್ಸ್, ಮ್ಯೂಚುಯಲ್ ಫಂಡ್ಸ್ ಬಗ್ಗೆ ತಿಳಿದುಕೊಳ್ಳಬಹುದು. ಲೆವೆಲ್ 2ನಲ್ಲಿ ಬಂಡವಾಳ ಮಾರುಕಟ್ಟೆ, ಕರೆನ್ಸಿ ಮಾರುಕಟ್ಟೆ, ಕಮಾಡಿಟಿ ಮಾರುಕಟ್ಟೆ, ಡಿರೈಟಿವ್ ಮಾರ್ಕೆಟ್, ಫೈನಾನ್ಸಿಯಲ್ ಅಡ್ವೈಸರಿ ಸರ್ವೀಸಸ್ ಬಗ್ಗೆ ಕೋರ್ಸ್ ಮಾಡಬಹುದು. ಮೂರನೇ ಲೆವೆಲ್‍ನಲ್ಲಿ ಅನಾಲಿಸ್ಟ್ ಸಂಬಂಧಿಸಿದ ಕೋರ್ಸ್‍ಗಳಿವೆ. ಇದರಲ್ಲಿ ಸರ್ಟಿಫೈಡ್ ಈಕ್ವಿಟಿ ಅನಾಲಿಸ್ಟ್, ಸರ್ಟಿಫೈಡ್ ಟೆಕ್ನಿಕಲ್ ಅನಾಲಿಸ್ಟ್ ಕೋರ್ಸ್‍ಗಳಿವೆ. ಕೊನೆಗೆ ಐಐಟ್ರೇಡ್ ಮತ್ತು ಎನ್‍ಎಸ್‍ಇ ಜೊತೆಯಾಗಿ ಸರ್ಟಿಫಿಕೇಟ್ ನೀಡುತ್ತವೆ.
ದಲಾಲ್‍ಸ್ಟ್ರೀಟ್ ಅಕಾಡೆಮಿ: ಈ ಸಂಸ್ಥೆಯೂ ಆನ್‍ಲೈನ್‍ನಲ್ಲಿ ಷೇರುಪೇಟೆ ಸರ್ಟಿಫಿಕೇಟ್ ಕೋರ್ಸ್ ನಡೆಸುತ್ತಿದೆ. ಶುಲ್ಕ 5,500 ರೂಪಾಯಿ. ಕೋರ್ಸ್ ಹೆಸರು ಸರ್ಟಿಫಿಕೇಟ್ ಇನ್ ಸ್ಟಾರ್ಕ್ ಮಾರ್ಕೆಟ್ ಆ್ಯಂಡ್ ಈಕ್ವಿಟಿ ರಿಸರ್ಚ್. ಈ ಕೋರ್ಸ್‍ಗೆ ಈಗಾಗಲೇ ವೃತ್ತಿಯಲ್ಲಿರುವವರು, ಪದವಿಪೂರ್ವ, ಪದವಿ ಮತ್ತು ಸ್ನಾತಕೋತ್ತರ ಪದವಿ ವಿದ್ಯಾರ್ಥಿಗಳು ಸೇರಿದಂತೆ ಆಸಕ್ತರು ಸೇರಬಹುದು. ಇಲ್ಲಿ ಒಟ್ಟು ನಾಲ್ಕು ಮಾಡ್ಯುಲ್‍ಗಳಲ್ಲಿ ಕಲಿಸಲಾಗುತ್ತದೆ. ಮಾಡ್ಯುಲ್ 1ರಲ್ಲಿ ಹೂಡಿಕೆಯ ಬೇಸಿಕ್ಸ್, ಈಕ್ವಿಟಿ ಷೇರುಗಳ ಬಗ್ಗೆ, ಐಪಿಒ, ಸೆಕೆಂಡರಿ ಮಾರ್ಕೆಟ್, ಟ್ರೇಡಿಂಗ್, ಕ್ಲೀಯರಿಂಗ್ ಮತ್ತು ಸಟ್ಲ್‍ಮೆಂಟ್ ಬಗ್ಗೆ ಕಲಿಯಬಹುದು. ಮಾಡ್ಯುಲ್ 2ರಲ್ಲಿ ಎಕಾನಮಿಕ, ಇಂಡಸ್ಟ್ರಿ, ಕಂಪನಿ, ಟೆಕ್ನಿಕಲ್ ಅನಾಲಿಸಿಸ್ ಬಗ್ಗೆ ಕಲಿಯಬಹುದು. ಮಾಡ್ಯುಲ್‍ನಲ್ಲಿ ಷೇರು ಹೂಡಿಕೆ, ಹೂಡಿಕೆದಾರರ ವರ್ತನೆಗಳು, ಆನ್‍ಲೈನ್ ವಹಿವಾಟು, ಶಾರ್ಟ್ ಟರ್ಮ್ ಟ್ರೇಡಿಂಗ್, ಪೆÇೀಟ್‍ಪೆÇೀಲಿಯೊ ಮ್ಯಾನೇಜ್‍ಮೆಂಟ್ ಬಗ್ಗೆ ತಿಳಿದುಕೊಳ್ಳಬಹುದು. ಮಾಡ್ಯುಲ್ 4ರಲ್ಲಿ ಮ್ಯೂಚುಯಲ್ ಫಂಡ್ಸ್, ಈಕ್ವಿಟಿ ಡಿರೈಟಿವ್ಸ್, ಕಮಾಡಿಟಿಸ್ ಮತ್ತು ಕಮಾಡಿಟಿಸ್ ಟ್ರೇಡಿಂಗ್ ಬಗ್ಗೆ ಕಲಿಯಬಹುದು. ಇವೆಲ್ಲದರ ನಂತರ ಲೈವ್ ಪ್ರಾಜೆಕ್ಟ್ ಮತ್ತು ಫೈನಲ್ ಎಗ್ಸಾಂ ಇರುತ್ತದೆ.
ಹೀಗೆ ಷೇರುಪೇಟೆ ಸಂಬಂಧಿಸಿದ ಶಾರ್ಟ್ ಟರ್ಮ್ ಕೋರ್ಸ್‍ಗಳನ್ನು ನೀಡುವ ಹಲವು ಸಂಸ್ಥೆಗಳಿವೆ. ಎನ್‍ಎಸ್‍ಇ ಅಥವಾ ಬಿಎಸ್‍ಇಯಿಂದ ಅಂಗೀಕೃತವಾದ ಸಂಸ್ಥೆಗಳಿಂದ ಸರ್ಟಿಫಿಕೇಟ್ ಪಡೆದರೆ ಒಳ್ಳೆಯದು.

Thursday, 29 September 2016

ನೈತಿಕ ಹ್ಯಾಕರ್ ಆಗುವುದು ಹೇಗೆ?

ನೈತಿಕ ಹ್ಯಾಕರ್ ಆಗುವುದು ಹೇಗೆ?

ಹೊಸ ಬಗೆಯ ಉದ್ಯೋಗ ಮಾಡಲಿಚ್ಚಿಸುವವರು `ಸರ್ಟಿಫೈಡ್ ಎಥಿಕಲ್ ಹ್ಯಾಕರ್(ಸಿಇಎಚ್)' ಕೋರ್ಸ್ ಮಾಡಿ ನೈತಿಕ ಹ್ಯಾಕರ್ ಆಗಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.

  • ಪ್ರವೀಣ್ ಚಂದ್ರ ಪುತ್ತೂರು


ಹ್ಯಾಕರ್‍ಗಳನ್ನು ಹಿಡಿಯಲು ನೀವು ಹ್ಯಾಕರ್ ಆಗಬೇಕು ಎನ್ನುವುದು ಟೆಕ್ ಜಗತ್ತಿನಲ್ಲಿ ಪ್ರಚಲಿತದಲ್ಲಿರುವ ಮಾತು. ಹ್ಯಾಕಿಂಗ್ ಎಂದಾಕ್ಷಣ ನಕಾರಾತ್ಮಕವಾಗಿ ಯೋಚಿಸಬೇಕಿಲ್ಲ. ಹ್ಯಾಕಿಂಗ್ ಮಾಡುವುದು ಗುರುತರ ಅಪರಾಧ. ಹ್ಯಾಕ್ ಮಾಡಿ ಸಿಕ್ಕಿಬಿದ್ದರೆ ಜೈಲೂಟ ಗ್ಯಾರಂಟಿ. ಇಂತಹ ಹ್ಯಾಕರ್‍ಗಳಿಂದ ತಮ್ಮ ಸಂಸ್ಥೆಯನ್ನು ಪಾರು ಮಾಡಲು ಕಂಪ್ಯೂಟರ್ ಮತ್ತು ನೆಟ್‍ವರ್ಕಿಂಗ್ ಬಳಸುವ ಕಂಪನಿಗಳು, ಬ್ಯಾಂಕ್‍ಗಳು ನೈತಿಕ ಹ್ಯಾಕರ್‍ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ.

ಯಾರು ನೈತಿಕ ಹ್ಯಾಕರ್?
ಕಂಪ್ಯೂಟರ್ ಜಗತ್ತನ್ನು ಬೆಚ್ಚಿಬೀಳಿಸುವ ಸಾವಿರಾರು ಹ್ಯಾಕರ್‍ಗಳು ಜಗತ್ತಿನಲ್ಲಿದ್ದಾರೆ. ಕೋಟಿ ಕೋಟಿ ವ್ಯವಹಾರ ನಡೆಸುವ ಕಂಪನಿಗಳು ಇಂತಹ ಹ್ಯಾಕರ್‍ಗಳಿಗೆ ಭಯಪಡುತ್ತಾರೆ. ಕಂಪನಿಯ ಆನ್‍ಲೈನ್ ಭದ್ರತೆಯನ್ನು ಹೆಚ್ಚಿಸಿಕೊಳ್ಳಲು ಸಹ ಈ ಹ್ಯಾಕರ್‍ಗಳು ಕಾರಣವಾಗುತ್ತಾರೆ. ಕೆಲವೊಮ್ಮೆ ದುರುದ್ದೇಶಪೂರಿತ ಹ್ಯಾಕರ್‍ಗಳು ಕಂಪನಿಯೊಂದರ ಲಕ್ಷಾಂತರ ಬಳಕೆದಾರರ ಮಾಹಿತಿಯನ್ನೆಲ್ಲ ಕದಿಯುವುದುಂಟು. ಇಂತಹ ಅಪಾಯದಿಂದ ಪಾರಾಗಲು ಯಾವುದಾದರೂ ಕಂಪನಿ ಅಥವಾ ಸಂಸ್ಥೆಯು ತನ್ನ ಕಂಪ್ಯೂಟರ್ ವ್ಯವಸ್ಥೆ ಅಥವಾ ನೆಟ್‍ವರ್ಕ್ ವ್ಯವಸ್ಥೆಯನ್ನು ಬಲಪಡಿಸಲು ನಂಬಿಗಸ್ಥ ನೈತಿಕ ಹ್ಯಾಕರ್‍ಗಳನ್ನು ನೇಮಕ ಮಾಡಿಕೊಳ್ಳುತ್ತವೆ. ಈ ವ್ಯಕ್ತಿಯು ಇತರ ಕಳ್ಳ ಹ್ಯಾಕರ್‍ಗಳು ಬಳಸುವ ಹಲವು ತಂತ್ರಗಳನ್ನೇ ಬಳಸುತ್ತಾರೆ. ಇದರ ಉದ್ದೇಶ ಆ ಸಂಸ್ಥೆ ಅಥವಾ ಕಂಪನಿಯ ಕಂಪ್ಯೂಟರ್/ನೆಟ್‍ವರ್ಕ್ ವ್ಯವಸ್ಥೆ ಎಷ್ಟು ಸುರಕ್ಷಿತವಾಗಿದೆ ಎಂದು ಕಂಡುಕೊಳ್ಳುವುದಾಗಿದೆ. ಇಂತಹ ನೈತಿಕ ಹ್ಯಾಕರ್‍ಗಳಿಗೆ ಉದ್ಯೋಗ ಮಾರುಕಟ್ಟೆಯಲ್ಲಿ ಉತ್ತಮ ಬೇಡಿಕೆಯಿದೆ.

ಎಥಿಕಲ್ ಹ್ಯಾಕರ್ ಆಗುವುದು ಹೇಗೆ?
ಹ್ಯಾಕಿಂಗ್ ಕಲಿಸಲು ಯಾವುದೇ ಮಂತ್ರವಿದ್ಯೆ ಇಲ್ಲ. ಒಂದು ರಾತ್ರಿಯಲ್ಲಿ ಹ್ಯಾಕರ್ ಆಗಲು ಸಾಧ್ಯವಿಲ್ಲ. ಇದು ಇತರ ಕೋರ್ಸ್‍ಗಳಂತೆ ಶ್ರದ್ಧೆಯಿಟ್ಟು ಕಲಿತು ಪಡೆದುಕೊಳ್ಳಬಹುದಾದ ಪರಿಣತಿಯಾಗಿದೆ. ನಿಮಗೆ ಅಪರೇಟಿಂಗ್ ಸಿಸ್ಟಮ್, ಅದರ ಕಾರ್ಯಚಟುವಟಿಕೆಗಳು, ಕಂಪ್ಯೂಟರ್ ನೆಟ್‍ವರ್ಕ್‍ಗಳು, ಕಂಪ್ಯೂಟರ್ ಭದ್ರತೆ ಇತ್ಯಾದಿಗಳ ಬಗ್ಗೆ ಉತ್ತಮ ಮಾಹಿತಿ, ಜ್ಞಾನವಿದ್ದರೆ ನೀವು ನೈತಿಕ ಹ್ಯಾಕಿಂಗ್ ಅನ್ನು ಕಲಿಯಬಹುದು. ಅಮೆರಿಕದ ಇಸಿ ಕೌನ್ಸಿಲ್‍ನಡಿ ನೈತಿಕವಾಗಿ ಹ್ಯಾಕಿಂಗ್ ಮಾಡಲು ಕಲಿಸಿಕೊಡುವ ಹಲವು ಶಿಕ್ಷಣ ಸಂಸ್ಥೆಗಳು ದೇಶದಲ್ಲಿವೆ.

ಹ್ಯಾಕಿಂಗ್ ಎಂದರೇನು?
ಕಂಪ್ಯೂಟರ್‍ನ ಹಾರ್ಡ್‍ವೇರ್ ಮತ್ತು ಸಾಫ್ಟ್‍ವೇರ್ ಅನ್ನು ಅದನ್ನು ನಿರ್ಮಿಸಿದವರ ಪ್ರಮುಖ ಉದ್ದೇಶಕ್ಕೆ ಬದಲಾಗಿ ಅನ್ಯವ್ಯಕ್ತಿ ತನಗೆ ಬೇಕಾದಂತೆ ಬದಲಾಯಿಸುವುದನ್ನು ಕಂಪ್ಯೂಟರ್ ಹ್ಯಾಕಿಂಗ್ ಎನ್ನಬಹುದು. ಸಾಫ್ಟ್‍ವೇರ್/ಮಾಡ್ಯುಲ್‍ಗಳಲ್ಲಿರುವ ಕುಂದುಕೊರತೆಗಳನ್ನು ಕಂಡುಹಿಡಿಯಲು ಹ್ಯಾಕಿಂಗ್ ಎಂಬ ಕಲೆಯನ್ನು ಬಳಸಲಾಗುತ್ತದೆ. ತನ್ನ ವೃತ್ತಿಯಲ್ಲಿ ಅಪೂರ್ಣತೆ ಪಡೆದವನನ್ನು ಹೆಸರಿಸಲು `ಹ್ಯಾಕ್' ಎಂಬ ಪದ ಬಳಕೆ ಮಾಡಲಾಗುತ್ತದೆ. ಸಾಫ್ಟ್‍ವೇರ್ ಇತ್ಯಾದಿಗಳು ಅಪೂರ್ಣಗೊಂಡಿದ್ದರೆ ಹ್ಯಾಕರ್‍ಗಳ ದಾಳಿಗೆ ತುತ್ತಾಗುತ್ತವೆ. ಹ್ಯಾಕರ್‍ಗಳಿಗೆ ಸಾಧ್ಯವಾಗದಂತೆ ತಂತ್ರಜ್ಞಾನಗಳನ್ನು ಅಭಿವೃದ್ಧಿಪಡಿಸಲು ಇದರಿಂದ ಸಾಧ್ಯವಾಗುತ್ತದೆ.

ಉದ್ಯೋಗಾವಕಾಶ
ಕಂಪ್ಯೂಟರ್ ಮತ್ತು ನೆಟ್‍ವರ್ಕ್ ಬಳಸಿ ಬಹುಕೋಟಿ ವ್ಯವಹಾರ ನಡೆಸುವ ಬಹುತೇಕ ಕಂಪನಿಗಳು ಸುರಕ್ಷತೆಯ ದೃಷ್ಟಿಯಿಂದ `ನೈತಿಕ ಹ್ಯಾಕರ್'ಗಳನ್ನು ನೇಮಕ ಮಾಡಿಕೊಳ್ಳುತ್ತಿವೆ. ಎಥಿಕಲ್ ಹ್ಯಾಕರ್‍ಗಳಿಗೆ ಸೆಕ್ಯೂರಿಟಿ ಥ್ರೀಟ್ಸ್, ರಿಸ್ಕ್ ಮತ್ತು ಕೌಂಟರ್‍ಮೆಷರ್‍ಗಳ ಜ್ಞಾನ ಇರುವುದು ಅತ್ಯಂತ ಅಗತ್ಯ. ಸಿಸ್ಟಮ್ ಅಡ್ಮಿನಿಸ್ಟ್ರೇಟರ್, ಸೆಕ್ಯುರಿಟಿ ಅಡಿಟರ್, ಹ್ಯಾಕಿಂಗ್ ಟೂಲ್ ಅನಾಲಿಸ್ಟ್‍ಗಳಿಗಿಂತ ಹೆಚ್ಚು ಜ್ಞಾನ ಬಯಸುವ ಉದ್ಯೋಗವಿದು. ಹೆಚ್ಚಿನ ಕಂಪನಿಗಳು ಪ್ರತಿಭಾನ್ವಿತ ನೈತಿಕ ಹ್ಯಾಕರ್‍ಗಳಿಗೆ ತಮ್ಮ ಕಂಪನಿಯಲ್ಲಿ ಸ್ಥಾನ ನೀಡುತ್ತವೆ. ಹೀಗಾಗಿ ಉದ್ಯೋಗಾವಕಾಶ ಉತ್ತಮವಾಗಿದೆ. ನಿಮ್ಮಲ್ಲಿ ಡಿಗ್ರಿ ಅಥವಾ ಸರ್ಟಿಫಿಕೇಷನ್‍ಗಳಿದ್ದರೂ ಕೆಲವೊಮ್ಮೆ ಐಟಿ ಸೆಕ್ಯೂರಿಟಿ ಅನುಭವ ಇಲ್ಲದೆ ಎಥಿಕಲ್ ಹ್ಯಾಕರ್ ಆಗಿ ಕೆಲಸ ಗಿಟ್ಟಿಸಿಕೊಳ್ಳುವುದು ಕಷ್ಟವಾಗಬಹುದು.

ಸಿಇಎಚ್ ವಿ9 ಕೋರ್ಸ್
ಇದು ಎಥಿಕಲ್ ಹ್ಯಾಕಿಂಗ್‍ನಲ್ಲಿ ಜಗತ್ತಿನಲ್ಲೇ ಅಡ್ವಾನ್ಡಡ್ ಆಗಿರುವ ಕೋರ್ಸ್. ಸುಮಾರು 18 ಸೆಕ್ಯುರಿಟಿ ಡೊಮೈನ್‍ಗಳ ಭದ್ರತೆಯನ್ನು ಇದರಲ್ಲಿ ಕಲಿಯಬಹುದು. ಇದಕ್ಕಾಗಿ 18 ಮಾಡ್ಯುಲ್‍ಗಳು ಇವೆ. ಹ್ಯಾಕರ್‍ಗಳು ಸಾಮಾನ್ಯವಾಗಿ ಬಳಸುವ 270 ಹ್ಯಾಕಿಂಗ್, ಅಟ್ಯಾಕ್ ಟೆಕ್ನಾಲಜಿಗಳನ್ನು ಕಲಿಯಬಹುದು.

ಏನೆಲ್ಲ ಓದಬೇಕು?
ಸಿಇಎಚ್ ವಿ9ನಲ್ಲಿ ಸುಮಾರು 18 ಮಾಡ್ಯುಲ್‍ಗಳಿವೆ. ಇಂಟ್ರೊಡಕ್ಷನ್ ಟು ಎಥಿಕಲ್ ಹ್ಯಾಕಿಂಗ್, ಫೂಟ್ ಪ್ರಿಂಟಿಂಗ್ ಆ್ಯಂಡ್ ರೆಕೊನಸಿನ್ಸ್, ಸ್ಕ್ಯಾನಿಂಗ್ ನೆಟ್‍ವಕ್ಸ್, ಇನ್ಯುಮೆರೆಷನ್, ಸಿಸ್ಟಮ್ ಹ್ಯಾಕಿಂಗ್, ಟ್ರೊಜನ್ಸ್ ಆ್ಯಂಡ್ ಬ್ಯಾಕ್‍ಡೋರ್ಸ್, ವೈರಸಸ್ ಆ್ಯಂಡ್ ವಮ್ರ್ಸ್, ಸ್ನಿಫರ್ಸ್, ಸೋಷಿಯಲ್ ಎಂಜಿನಿಯರಿಂಗ್, ಡೆನಿಯಲ್ ಆಫ್ ಸರ್ವೀಸ್, ಸೆಸನ್ ಹೈಜಾಕಿಂಗ್, ಹೈಜಾಕಿಂಗ್ ವೆಬ್ ಸರ್ವರ್ಸ್, ಹ್ಯಾಕಿಂಗ್ ವೆಬ್ ಅಪ್ಲಿಕೇಷನ್ಸ್, ಎಸ್‍ಕ್ಯೂಎಲ್ ಇಂಜೆಕ್ಷನ್, ಹ್ಯಾಕಿಂಗ್ ವೈರ್‍ಲೆಸ್ ನೆಟ್‍ವಕ್ರ್ಸ್, ಇವಾಡಿಂಗ್ ಐಡಿಎಸ್, ಫೈರ್‍ವಾಲ್ಸ್ ಆ್ಯಂಡ್ ಹನಿ ಪಾಟ್ಸ್, ಬಫರ್ ಓವರ್‍ಫೆÇ್ಲೀ, ಕ್ರಿಪೆÇ್ಟಗ್ರಫಿ ಮತ್ತು ಪೆನೆಟ್ರೇಷನ್ ಟೆಸ್ಟಿಂಗ್.

ಬಾಕ್ಸ್
ಎಲ್ಲಿ ಕೋರ್ಸ್ ಮಾಡಬಹುದು?
* ಇಂಡಿಯನ್ ಸ್ಕೂಲ್ ಆಫ್ ಎಥಿಕಲ್ ಹ್ಯಾಕಿಂಗ್: ಡಿಡಿಡಿ.ಜಿoಟಛಿe.್ಚಟಞ
* ಬೆಂಗಳೂರಿನ ಜಯನಗರದಲ್ಲಿರುವ ಇಕಾನ್ ಟೆಕ್ನಾಲಜೀಸ್‍ನ `ಎಥಿಕಲ್ ಹ್ಯಾಕಿಂಗ್ ಟ್ರೈನಿಂಗ್ ಇನ್‍ಸ್ಟಿಟ್ಯೂಟ್'ನಲ್ಲಿ ನೈತಿಕ ಹ್ಯಾಕಿಂಗ್ ಕೋರ್ಸ್ ಕಲಿಯಬಹುದು. ಇಲ್ಲಿ ಇನ್‍ಫಾರ್ಮೆಷನ್ ಸೆಕ್ಯುರಿಟಿ ಆ್ಯಂಡ್ ಎಥಿಕಲ್ ಹ್ಯಾಕಿಂಗ್, ಎಂಬೆಡ್ಡೆಡ್ ಸಿಸ್ಟಮ್ಸ್ ಆ್ಯಂಡ್ ರೊಬೊಟಿಕ್ಸ್, ಡಾಟ್.ನೆಟ್ ಮತ್ತು ಜಾವಾ ಕೋರ್ಸ್‍ಗಳಿವೆ. ಅಮೆರಿಕದ ಇಸಿ ಕೌನ್ಸಿಲ್‍ನಡಿ ಈ ಕೋರ್ಸ್‍ಗಳನ್ನು ನೀಡುತ್ತದೆ. ಹೆಚ್ಚಿನ ಮಾಹಿತಿಗೆ: eಠಿಠಿm://ಛಿಜಿhಟ್ಞಠಿಛ್ಚಿe.್ಞಛಿಠಿ
* ಬೆಂಗಳೂರಿನ ಎಚ್‍ಎಸ್‍ಆರ್ ಬಡಾವಣೆಯಲ್ಲಿರುವ ಸಿಂಪ್ಲಿ ಲರ್ನ್‍ನಲ್ಲೂ ನೈತಿಕ ಹ್ಯಾಕಿಂಗ್ ವಿಷಯದಲ್ಲಿ ಸಿಇಎಚ್ ವಿ9 ಕೋರ್ಸ್ ಇದೆ. ಇಸಿ ಕೌನ್ಸಿಲ್‍ನಡಿಯಲ್ಲಿ ಈ ಕೋರ್ಸ್ ನೀಡಲಾಗುತ್ತದೆ. ಕೋರ್ಸ್ ಶುಲ್ಕ: 31,000 ರೂ. ಹೆಚ್ಚಿನ ಮಾಹಿತಿಗೆ: ಡಿಡಿಡಿ.oಜಿಞm್ಝಜ್ಝಿಛಿZ್ಟ್ಞ.್ಚಟಞ
* ಬೆಂಗಳೂರಿನ ಕ್ಯೂಸ್ಟ್ ಇನ್‍ಸ್ಟಿಟ್ಯೂಟ್ ಆಫ್ ನಾಲೆಡ್ಜ್(ಕ್ಯೂಯುಐಕೆ) ಸಂಸ್ಥೆಯಲ್ಲಿ ಇಸಿ ಕೌನ್ಸಿಲ್ ಸಿಇಎಚ್8 ಕೋರ್ಸ್ ಮಾಡಬಹುದಾಗಿದೆ. ಯಾವುದೇ ವಿಷಯದಲ್ಲಿ ಪದವಿ ಮತ್ತು, ನೆಟ್‍ವರ್ಕಿಂಗ್ ಜ್ಞಾನ, ಸಿಸಿಎನ್‍ಎ, ಎನ್‍ಪ್ಲಸ್ ತಿಳಿದಿರುವವರು ಈ ಕೋರ್ಸ್‍ಗೆ ಸೇರಬಹುದು. 40 ಗಂಟೆಗಳ ಫುಲ್ ಟೈಂ ಸರ್ಟಿಫಿಕೇಷನ್ ಕೋರ್ಸ್ ಇದಾಗಿದೆ. ಮಾಹಿತಿಗೆ ವೆಬ್‍ಸೈಟ್: ಡಿಡಿಡಿ.ಟ್ಠಿಜಿh್ಞಟಡ್ಝಿಛಿbಜಛಿ.್ಞಛಿಠಿ
* ಬೆಂಗಳೂರಿನಲ್ಲಿರುವ ಇನ್ನಷ್ಟು ಸಂಸ್ಥೆಗಳು: ಸಿಎಂಎಸ್ ಕಂಪ್ಯೂಟರ್ ಇನ್‍ಸ್ಟಿಟ್ಯೂಟ್(ಇಮೇಲ್: eಛ್ಝಿmbಛಿohಃ್ಚಞo.್ಚಟಞ), ಜೆಟ್‍ಕಿಂಗ್ ಇನ್ಫೋಟ್ರೈನ್ ಸಂಸ್ಥೆಯು ಜೆಟ್‍ಕಿಂಗ್ ಸರ್ಟಿಫೈಡ್ ಹಾರ್ಡ್‍ವೇರ್ ಮತ್ತು ನೆಟ್‍ವರ್ಕಿಂಗ್ ಪೆÇ್ರಫೆಷನಲ್ ಕೋರ್ಸ್ ಅನ್ನು ನಡೆಸುತ್ತದೆ. ಮಾಹಿತಿಗೆ ಡಿಡಿಡಿ.್ಜಛಿಠಿhಜ್ಞಿಜ.್ಚಟಞ, ಹ್ಯಾಕರ್ಸ್ ಸ್ಕೂಲ್: ಡಿಡಿಡಿ.eZ್ಚhಛ್ಟಿo್ಚeಟಟ್ಝ.ಜ್ಞಿ, ಅಡೆಪ್ಟ್‍ಟೆಕ್ನೊ: eಠಿಠಿm://Zbಛಿmಠಿಛ್ಚಿe್ಞಟ.್ಚಟಞ/್ಚಟ್ಠ್ಟoಛಿ/ಚ್ಟಿಟಡಿoಛಿ/್ಚಛಿe
ಡೇಟಾ ಅನಾಲಿಸ್ಟ್ ಆಗುವುದು ಹೇಗೆ?

ಡೇಟಾ ಅನಾಲಿಸ್ಟ್ ಆಗುವುದು ಹೇಗೆ?

ಐಟಿ ಕ್ಷೇತ್ರದಲ್ಲೀಗ ಡೇಟಾ ಅನಾಲಿಸ್ಟ್‍ಗಳಿಗೆ ಸಖತ್ ಡಿಮ್ಯಾಂಡ್. ಡೇಟಾ ವಿಶ್ಲೇಷಕರಾಗುವುದು ಹೇಗೆ? ಯಾವ ಸರ್ಟಿಫಿಕೇಷನ್ ಕೋರ್ಸ್ ಮಾಡಬೇಕು? ಯಾವೆಲ್ಲ ವಿಷಯದಲ್ಲಿ ಪರಿಣತಿ ಪಡೆಯಬೇಕು? ಇಲ್ಲಿದೆ ಮಾಹಿತಿ.

* ಪ್ರವೀಣ್ ಚಂದ್ರ ಪುತ್ತೂರು

ಈ ವರ್ಷ ಅತ್ಯಧಿಕ ಬೇಡಿಕೆ ಇರುವ ಉದ್ಯೋಗಗಳಲ್ಲಿ `ಡೇಟಾ ಅನಾಲಿಸ್ಟ್' ರೈಸಿಂಗ್ ಸ್ಟಾರ್ ಆಗಿ ಮಿಂಚುತ್ತಿದೆ. ಸಣ್ಣ ಕಂಪನಿಗಳಿಂದ ಇನ್ಫೋಸಿಸ್‍ನಂತಹ ಬೃಹತ್ ಕಂಪನಿಗಳು ಕೂಡ ಡೇಟಾ ಅನಾಲಿಸ್ಟ್ ನೇಮಕವನ್ನು ಹಲವು ಪಟ್ಟು ಹೆಚ್ಚಿಸಿಕೊಳ್ಳುವುದಾಗಿ ಹೇಳಿವೆ. ದೇಶದಲ್ಲಿ ಆನ್‍ಲೈನ್ ವಹಿವಾಟು, ಮೊಬೈಲ್ ಇಂಟರ್‍ನೆಟ್ ಬಳಕೆ ಇತ್ಯಾದಿಗಳು ಹೆಚ್ಚಾಗುತ್ತಿರುವುದು ಕೂಡ ಡೇಟಾ ವಿಜ್ಞಾನಿಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣ. ಮ್ಯಾಥಮ್ಯಾಟಿಕಲ್ ಮತ್ತು ಅನಾಲಿಟಿಕಲ್ ಸ್ಕಿಲ್ ಇರುವವರು ಡೇಟಾ ಅನಾಲಿಸ್ಟ್ ಆಗಿ ಭವಿಷ್ಯ ರೂಪಿಸಿಕೊಳ್ಳಬಹುದು. ಡೇಟಾ ಅನಾಲಿಸ್ಟ್‍ನ ಕ್ಷೇತ್ರದಲ್ಲಿ ಆರಂಭಿಕ ಉದ್ಯೋಗಿಗಳು ವಾರ್ಷಿಕ 2-10 ಲಕ್ಷ ರೂ. ವೇತನ ಪಡೆಯಬಹುದು. ಹಿರಿಯ ಹುದ್ದೆಯಲ್ಲಿರುವವರಿಗೆ 70-1 ಕೋಟಿ ರೂ.ವರೆಗೆ ವಾರ್ಷಿಕ ವೇತನದ ಆಫರ್ ಇರಬಹುದು.

ಏನಿದು ಉದ್ಯೋಗ?
ಹಲವು ವರ್ಷಗಳ ಹಿಂದೆ ಡೇಟಾ ಅನಾಲಿಸ್ಟ್ ಹೆಚ್ಚು ಪ್ರಚಲಿತದಲ್ಲಿಲ್ಲದ ಹುದ್ದೆ. ಈಗ ಎಲ್ಲವೂ ವೆಬ್‍ಮಯವಾಗುತ್ತಿರುವುದರಿಂದ ಮಾಹಿತಿಗಳ ರಾಶಿ `ಬಿಗ್ ಡೇಟಾ'ವನ್ನು ಪ್ರತಿಯೊಂದು ಕಂಪನಿಗಳು ನಿರ್ವಹಿಸಬೇಕಾಗುತ್ತದೆ. ಸರಳವಾಗಿ ಹೇಳಬೇಕಾದರೆ ಇದು ಡೇಟಾಬೇಸ್ ನಿರ್ವಹಣೆ ಸಂಬಂಧಿಸಿದ ಉದ್ಯೋಗ. ಸ್ಟಟಿಸ್ಟಿಕಲ್, ಕಂಪ್ಯೂಟರ್ ಸೈನ್ಸ್, ವ್ಯವಹಾರ ಆಡಳಿತ ಇತ್ಯಾದಿಗಳಲ್ಲಿ ಪದವಿ ಪಡೆದವರಿಗೆ ಡೇಟಾ ಅನಾಲಿಸ್ಟ್ ಕೋರ್ಸ್ ಕಲಿಕೆ ಸುಲಭವಾಗಬಹುದು. ಡೇಟಾ ಅನಾಲಿಸ್ಟ್ ಆಗಲು ಬಯಸುವವರಿಗೆ ಅನಾಲಿಟಿಕಲ್(ಗಣಿತ/ಅಂಕಿಅಂಶ ಮತ್ತು ಪೆÇ್ರೀಗ್ರಾಮಿಂಗ್), ಸಂವಹನ( ಪ್ರಸಂಟೇಷನ್/ಡೇಟಾ ವಿಷುಯಲೈಜೇಷನ್) ಪರಿಣತಿ, ವೆಬ್ ಡೇಟಾ ಸಂಬಂಧಿ ಉಂಟಾಗುವ ತೊಂದರೆಗಳನ್ನು ವ್ಯವಸ್ಥಿತವಾಗಿ ಸರಿಪಡಿಸುವ ಛಾತಿ ಇರಬೇಕಾಗುತ್ತದೆ.

ಯಾವ ಸ್ಕಿಲ್ ಇರಬೇಕು?
ಡೇಟಾ ವಿಜ್ಞಾನಿ ಅಥವಾ ಡೇಟಾ ಅನಾಲಿಸ್ಟ್ ಆಗಬಯಸುವುದಾದರೆ ನಿಮ್ಮಲ್ಲಿ ಈ ಕೆಳಗಿನ ಸ್ಕಿಲ್‍ಗಳು ಇರಬೇಕು.
ಪೆÇ್ರೀಗ್ರಾಮಿಂಗ್: ಡೇಟಾ ಅನಾಲಿಸ್ಟ್‍ಗೆ ಪೆÇ್ರೀಗ್ರಾಮಿಂಗ್ ಸ್ಕಿಲ್‍ಗಳಿರುವುದು ಅತ್ಯಂತ ಅವಶ್ಯ. ಪೆÇ್ರೀಗ್ರಾಮೇತರ ಎಕ್ಸೆಲ್‍ನಂತಹ ಟೂಲ್ಸ್ ಮಾತ್ರವಲ್ಲದೆ ಪಾಂಡಾಸ್(PZ್ಞbZo), ನುಂಪಿ(ಘ್ಠೆಞmqs) ಮತ್ತು ಇತರೆ ಪೆÇ್ರೀಗ್ರಾಮಿಂಗ್‍ನ ಟೂಲ್‍ಗಳನ್ನು ಬಳಸುವುದನ್ನು ತಿಳಿದಿರಬೇಕಾಗುತ್ತದೆ. ಇಂತಹ ಟೂಲ್‍ಗಳಿಂದ ಹೆಚ್ಚು ಕ್ಷಮತೆಯಿಂದ ಡೇಟಾಗಳ ಆಳವಾದ ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ. ಪೈಥಾನ್(Pqsಠಿeಟ್ಞ) ಮತ್ತು ಆರ್‍ಗಳು ಈಗ ಹೆಚ್ಚು ಜನಪ್ರಿಯತೆ ಪಡೆದಿರುವ ಪೆÇ್ರೀಗ್ರಾಮಿಂಗ್ ಭಾಷೆಗಳಾಗಿವೆ.
ಸ್ಟಾಟಿಸ್ಟಿಕ್ಸ್: ಕಡಿಮೆಯೆಂದರೂ ನಿಮಗೆ ವಿವರಣಾತ್ಮಕ ಮತ್ತು ತಾರ್ಕಿಕ ಸಂಖ್ಯಾಶಾಸ್ತ್ರದ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ತಿಳಿದಿರಬೇಕಾಗುತ್ತದೆ. ವಿವಿಧ ಬಗೆಯ ವಿತರಣೆಗಳು, ಯಾವ ಸ್ಟಾಟಿಸ್ಟಿಕಲ್ ಟೆಸ್ಟ್ ಯಾವ ಕಾಂಟೆಸ್ಟ್‍ಗೆ ಅನ್ವಯವಾಗುತ್ತದೆ ಇತ್ಯಾದಿಗಳನ್ನು ತಿಳಿದುಕೊಳ್ಳಲು ಗೊತ್ತಿರಬೇಕಾಗುತ್ತದೆ.
ಮೆಷಿನ್ ಲರ್ನಿಂಗ್: ನಿಮ್ಮಲ್ಲಿ ಬೃಹತ್ ಪ್ರಮಾಣದ ಡೇಟಾಗಳಿದ್ದಾಗ ಮೆಷಿನ್ ಲರ್ನಿಂಗ್ ತಂತ್ರವು ಹೆಚ್ಚು ಪರಿಣಾಮಕಾರಿಯಾಗಿ ನೆರವಾಗುತ್ತದೆ. ಇದಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ಅಲ್ಗೊರಿದಂ(ಕ್ರಮಾವಳಿ)ಗಳನ್ನು ಅರ್ಥಮಾಡಿಕೊಳ್ಳಬೇಕು. ಯಾವಾಗ ಅಲ್ಗೊರಿದಂ ಅನ್ನು ಬಳಕೆ ಮಾಡಬೇಕು ಎಂಬ ಜ್ಞಾನವೂ ಅತ್ಯಂತ ಅಗತ್ಯ.
ಕಮ್ಯುನಿಕೇಷನ್ಸ್ ಮತ್ತು ಡೇಟಾ ವಿಷುಯಲೈಜೇಷನ್: ಡೇಟಾ ಅನಾಲಿಸ್ಟ್ ಕೆಲಸ ಕೇವಲ ಡೇಟಾಗಳ ಅರ್ಥವಿವರಣೆ ನೀಡುವುದು ಮಾತ್ರವಲ್ಲ. ನೀವು ಏನು ಕಂಡುಕೊಂಡಿದ್ದೀರೋ ಅದನ್ನು ಇತರ ಪಾಲುದಾರರ ಜೊತೆ ಪರಿಣಾಮಕಾರಿಯಾಗಿ ಸಂವಹನ ಮಾಡುವುದು ಸಹ ಅಗತ್ಯವಿದೆ. ಇದರಿಂದ ಡೇಟಾ ಮಾಹಿತಿ ಕುರಿತು ಸಮರ್ಪಕ ತೀರ್ಮಾಣ ಕೈಗೊಳ್ಳಲು ಸಾಧ್ಯವಾಗುತ್ತದೆ.

ಗೊತ್ತಿರಬೇಕಾದ ಟೂಲ್ಸ್
ಕೆಲವು ಜನಪ್ರಿಯ ಪೆÇ್ರೀಗ್ರಾಮಿಂಗ್ ಭಾಷೆ ಮತ್ತು ಟೂಲ್ಸ್‍ಗಳ ಮಾಹಿತಿ ಇಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪೈಥಾನ್ ಟೂಲ್ಸ್‍ನಲ್ಲಿ ಪಂಟರಾಗುವುದು ಅತ್ಯಂತ ಮುಖ್ಯ.
ಪೈಥಾನ್ ಅಥವಾ ಆರ್: `ಸಿ'ಗೆ ಹೋಲಿಸಿದರೆ ಇವೆರಡು ಪೆÇ್ರೀಗ್ರಾಮಿಂಗ್ ಭಾಷೆಗಳು ಕಲಿಯಲು ಸರಳವೆನ್ನುವುದು ಮಾತ್ರವಲ್ಲದೆ ಡೇಟಾ ಅನಾಲಿಸಿಸ್‍ನಿಂದ ಡೇಟಾ ವಿಷುಯಲೈಜೇಷನ್ ತನಕ ಹಲವು ಜನಪ್ರಿಯ ಡೇಟಾ ಸೈನ್ಸ್ ಲೈಬ್ರೆರಿಗಳನ್ನು ಈ ಎರಡು ಭಾಷೆಗಳ ನೆರವಿನಿಂದಲೇ ನಿರ್ಮಿಸಲಾಗಿದೆ.
ಪಾಂಡಾಸ್/ನುಂಪಿ/ಶಿಪಿ: ಪೈಥಾನ್ ಡೇಟಾ ಸೈನ್ಸ್ ಲೈಬ್ರೆರಿಯ ಈ ಮೂರು ಪೆÇ್ರೀಗ್ರಾಮ್‍ಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಲ್ಲಿ ಸಂಖ್ಯಾತ್ಮಕ ರಚನೆ ಅಥವಾ ಸಮಯದ ಸರಣಿ ಡೇಟಾಗಳನ್ನು ವಿಶ್ಲೇಷಿಸಲು ಮತ್ತು ನಿರ್ವಹಿಸಲು ಪಾಂಡಾಸ್ ಬಳಕೆಯಾಗುತ್ತದೆ. ಸಾಮಾನ್ಯವಾಗಿ ಬಳಸುವ ಸೈಂಟಿಫಿಕ್ ಮತ್ತು ಮ್ಯಾಥಮೆಟಿಕಲ್ ಕಾರ್ಯಗತಗೊಳಿಸಲು ಘ್ಠೆಞmqs ಟೂಲ್ ನೆರವಾಗುತ್ತದೆ. ನುಂಪಿಯ ವಿಸ್ತರಿತ ಟೂಲ್ ಖ್ಚಜಿmqs ಆಗಿದ್ದು, ಇದರಲ್ಲಿ ಮ್ಯಾಥಮೆಟಿಕಲ್ ಅಪರೇಷನ್‍ಗೆ ಬೇಕಾದ ಸಂಪೂರ್ಣ ಫೀಚರ್‍ಗಳಿರುತ್ತದೆ.
ಖ್ಚಜಿhಜಿಠಿಔಛಿZ್ಟ್ಞ : ಮೆಷಿನ್ ಲರ್ನಿಂಗ್ ಅಲ್ಗರಿದಂ ಅನ್ನು ದಕ್ಷವಾಗಿ ಮತ್ತು ಸರಿಯಾಗಿ ಅನ್ವಯಗೊಳಿಸುವುದು ಕಠಿಣ. ಇದಕ್ಕಾಗಿ ಸೈಕಿಟ್ ಲರ್ನ್ ಟೂಲ್ ಬಳಸುವುದನ್ನು ಕಲಿತರೆ ತೊಂದರೆ ನಿವಾರಣೆಯಾಗುತ್ತದೆ. ಇವು ಮಾತ್ರವಲ್ಲದೆ IZಠಿಠಿm್ಝಟಠಿಜಿಚಿ, ಎಜm್ಝಟಠಿ2, ಈ3.್ಜo, ಏSIಔ, ಇಖಖ, ಒZqZಖ್ಚ್ಟಜಿmಠಿ ಇತ್ಯಾದಿಗಳ ಬಗ್ಗೆಯೂ ನಿಮಗೆ ತಿಳಿದಿರಬೇಕಾಗುತ್ತದೆ.
ಒಟ್ಟಾರೆ ಅತ್ಯಧಿಕ ಬೇಡಿಕೆಯಿರುವ ಡೇಟಾ ಅನಾಲಿಸ್ಟ್ ಕೋರ್ಸ್‍ಗಳಿಗೆ ಶಿಕ್ಷಣ ಸಂಸ್ಥೆಗಳೂ ಅತ್ಯಧಿಕ ಶುಲ್ಕ ಕೇಳಬಹುದು. ಕೆಲವೊಂದು ಶಿಕ್ಷಣ ಸಂಸ್ಥೆಗಳು ಅಲ್ಪಾವಧಿಯ ಆರಂಭಿಕ ಕೋರ್ಸ್‍ಗಳಿ ಹತ್ತು ಸಾವಿರ ರೂ. ಆಸುಪಾಸಿನ ಶುಲ್ಕ ಕೇಳುತ್ತವೆ. ಯಾವುದೇ ಶಿಕ್ಷಣ ಸಂಸ್ಥೆಗೆ ಜಾಯಿನ್ ಆಗುವ ಮೊದಲು ಅಲ್ಲಿರುವ ಪರಿಣತರು, ಕಲಿಕಾ ರೀತಿ ಇತ್ಯಾದಿಗಳನ್ನು ತಿಳಿದುಕೊಳ್ಳಿ. ಸಾಧ್ಯವಾದರೆ, ಈಗಾಗಲೇ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ನಿಮ್ಮ ಪರಿಚಿತರ ಅಭಿಪ್ರಾಯ ಕೇಳಿ ಮುಂದುವರೆಯಿರಿ.

ಬಾಕ್ಸ್
ಎಲ್ಲಿ ಕಲಿಯಬಹುದು?
ಕ್ಲಾಸ್ ರೂಂ ಕಲಿಕೆ
ಎನ್‍ಐ ಅನಾಲಿಟಿಕ್ಸ್: ಬೆಂಗಳೂರಿನಲ್ಲಿರುವ ಸೆಂಟರ್ ಫಾರ್ ಎಸ್‍ಎಎಸ್ ಟ್ರೈನಿಂಗ್‍ನಲ್ಲಿ ಡೇಟಾ ಅನಾಲಿಸ್ಟ್ ಸರ್ಟಿಫಿಕೇಷನ್ ನೀಡುತ್ತದೆ. ಇಲ್ಲಿ ಕ್ಲಾಸ್‍ರೂಂ ಅಧ್ಯಯನ ಮಾತ್ರವಲ್ಲದೆ, ಆನ್‍ಲೈನ್ ಮತ್ತು ದೂರಶಿಕ್ಷಣದ ಮೂಲಕವೂ ಕಲಿಯುವ ಅವಕಾಶವಿದೆ. ಆನ್‍ಲೈನ್ ಮತ್ತು ದೂರಶಿಕ್ಷಣದ ಮೂಲಕ ಕಲಿಯುವವರಿಗೆ ನೇರ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಹೇಳಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ: ಡಿಡಿಡಿ.್ಞಜಿZ್ಞZ್ಝqsಠಿಜ್ಚಿoಜ್ಞಿbಜಿZ.್ಚಟಞ
ಬೆಂಗಳೂರಿನ ಕೋರಮಂಗಲದಲ್ಲಿರುವ ಸ್ಟಡಿಅನಾಲಿಟಿಕ್ಸ್‍ನಲ್ಲೂ ಡೇಟಾ ಅನಾಲಿಸ್ಟ್ ಕೋರ್ಸ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ವೆಬ್‍ವಿಳಾಸ: eಠಿಠಿm://oಠ್ಠಿbqsZ್ಞZ್ಝqsಠಿಜ್ಚಿo.ಜ್ಞಿ
ಕೊಯಿಂಗ್ ಇಂಡಿಯಾದಲ್ಲೂ ಕ್ಲಾಸ್‍ರೂಂ ಮತ್ತು ಆನ್‍ಲೈನ್ ಮೂಲಕ ಡೇಟಾ ಅನಾಲಿಟಿಕ್ಸ್ ಕೋರ್ಸ್ ಮಾಡಬಹುದು. ಹೆಚ್ಚಿನ ಮಾಹಿತಿಗೆ: eಠಿಠಿm://ಚಿಜಿಠಿ.್ಝqs/1Pಡಿಘೆಏ್ಕಘ

ಆನ್‍ಲೈನ್ ಕಲಿಕೆ
ಡೇಟಾ ಅನಾಲಿಸ್ಟ್ ಸರ್ಟಿಫಿಕೇಷನ್ ಅನ್ನು ಆನ್‍ಲೈನ್‍ನಲ್ಲೂ ಪಡೆಯಬಹುದು.
ಜಿಗ್‍ಸಾಅಕಾಡೆಮಿ: ಡಿಡಿಡಿ.್ಜಜಿಜoZಡಿZ್ಚZbಛಿಞqs.್ಚಟಞ ನಲ್ಲಿ ವಿವಿಧ ಬಗೆಯ ಡೇಟಾ ಅನಾಲಿಸ್ಟ್ ಕೋರ್ಸ್‍ಗಳು ಲಭ್ಯ ಇವೆ. ಆರಂಭಿಕ ಕೋರ್ಸಿಗೆ 7 ಸಾವಿರ ರೂ. ಇದೆ.
ಅನಾಲಿಟಿಕ್ಸ್ ಲ್ಯಾಬ್ಸ್: ಡಿಡಿಡಿ.Z್ಞZ್ಝqsಠಿಜ್ಡ್ಝಿZಚಿo.್ಚಟ.ಜ್ಞಿ ನಲ್ಲಿ ಡೇಟಾ ವಿಷುಯಲೈಜೇಷನ್ ಆ್ಯಂಡ್ ಅನಾಲಿಸ್ಟ್ ಕೋರ್ಸ್‍ಗೆ 20 ಸಾವಿರ ರೂ. ಶುಲ್ಕವಿದೆ.
ನೀವಿರುವ ನಗರ, ಊರಿಗೆ ಸಮೀಪವಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಡೇಟಾ ಅನಾಲಿಸಿಸ್, ಎಸ್‍ಎಎಸ್ ಕೋರ್ಸ್‍ಗಳಿವೆಯೇ ಎಂದು ವಿಚಾರಿಸಿ. ಗೂಗಲ್‍ನಲ್ಲಿಯೂ ನಿಮ್ಮ ಸಮೀಪದಲ್ಲಿರುವ ಶಿಕ್ಷಣ ಸಂಸ್ಥೆಗಳ ಮಾಹಿತಿ ಪಡೆಯಬಹುದು.
ಕ್ಲೌಡ್ ಕಂಪ್ಯೂಟಿಂಗ್ ಕಲಿತರೆ ಜಾಬ್ ಗ್ಯಾರಂಟಿ!

ಕ್ಲೌಡ್ ಕಂಪ್ಯೂಟಿಂಗ್ ಕಲಿತರೆ ಜಾಬ್ ಗ್ಯಾರಂಟಿ!

ಕ್ಲೌಡ್ ಕಂಪ್ಯೂಟಿಂಗ್ ಪರಿಣತಿ ಪಡೆದವರಿಗಿಂದು ಉದ್ಯೋಗ ಮಾರುಕಟ್ಟೆಯಲ್ಲಿ ಬೇಡಿಕೆ ಹೆಚ್ಚಿದೆ. ಇಂತಹ ಅವಕಾಶಗಳನ್ನು ನಿಮ್ಮದಾಗಿಸಿಕೊಳ್ಳಲು ನೆರವಾಗುವ ಕ್ಲೌಡ್ ಕಂಪ್ಯೂಟಿಂಗ್ ಸರ್ಟಿಫಿಕೇಷನ್ ಕೋರ್ಸ್‍ಗಳ ವಿವರ ಇಲ್ಲಿದೆ.

* ಪ್ರವೀಣ್ ಚಂದ್ರ ಪುತ್ತೂರು

ಈಗ ಬಹುತೇಕ ವಾಣಿಜ್ಯ ವ್ಯವಹಾರಗಳು ಕ್ಲೌಡ್ ಕಂಪ್ಯೂಟಿಂಗ್ ಮೂಲಕವೇ ನಡೆಯುತ್ತಿದೆ. ಕ್ಲೌಡ್ ಬಳಕೆಯಿಂದ ಕಂಪನಿಗಳಿಗೆ ಗಣಕೀಕರಣದ ವೆಚ್ಚ ಕಡಿಮೆಯಾಗುತ್ತದೆ. ಐಟಿ ಕಂಪನಿಗಳಿಗೆ ಕೋಟ್ಯಂತರ ರೂಪಾಯಿ ನಿರ್ವಹಣೆ ವೆಚ್ಚ ಉಳಿತಾಯವಾಗುತ್ತದೆ. ಈಗ ಆನ್‍ಲೈನ್ ಮಾರುಕಟ್ಟೆಯೂ ಪ್ರಗತಿ ಕಂಡಿರುವುದರಿಂದ ಕ್ಲೌಡ್ ಕಂಪ್ಯೂಟಿಂಗ್‍ಗೆ ಬೇಡಿಕೆ ಇನ್ನಷ್ಟು ಹೆಚ್ಚಿದೆ. ಒಟ್ಟಾರೆ ಸರ್ವವೂ ಕ್ಲೌಡ್‍ಮಯವಾಗುತ್ತಿರುವ ಈ ಸಂದರ್ಭದಲ್ಲಿ ಕ್ಲೌಡ್ ಕಂಪ್ಯೂಟಿಂಗ್ ಪರಿಣತರಿಗೆ ಉತ್ತಮ ಬೇಡಿಕೆಯಿದೆ. ಐಟಿ ಕ್ಷೇತ್ರದಲ್ಲಿ ನೀವು ಕೆಲಸ ಹುಡುಕುತ್ತಿದ್ದರೆ, ಪ್ರಮೋಷನ್ ಬಯಸುತ್ತಿದ್ದರೆ ಕ್ಲೌಡ್ ಕಂಪ್ಯೂಟಿಂಗ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು.

ಕ್ಲೌಡ್ ಭದ್ರತೆಗೆ ಸಿಸಿಎಸ್‍ಕೆ
ಸಿಸಿಎಸ್‍ಕೆ ವಿಸ್ತೃತ ರೂಪ `ಸರ್ಟಿಫಿಕೇಟ್ ಆಫ್ ಕ್ಲೌಡ್ ಸೆಕ್ಯುರಿಟಿ ನಾಲೆಜ್'. ಸಿಸಿಎಸ್‍ಕೆಯನ್ನು ಕ್ಲೌಡ್ ಕಂಪ್ಯೂಟರ್‍ನ ಎಲ್ಲಾ ಭದ್ರತಾ ಸರ್ಟಿಫಿಕೇಷನ್‍ಗಳ ಅಮ್ಮ ಎನ್ನಬಹುದು. ಸಿಸಿಎಸ್‍ಕೆ ಪೂರಕ ಮಾಹಿತಿ ಪಡೆಯಲು ಈ ಲಿಂಕ್‍ಗೆ ಭೇಟಿ ನೀಡಿ. ವೆಬ್ ಸೈಟ್ ವಿಳಾಸ: eಠಿಠಿmo://್ಚ್ಝಟ್ಠboಛ್ಚ್ಠ್ಟಿಜಿಠಿqsZ್ಝ್ಝಜಿZ್ಞ್ಚಛಿ.ಟ್ಟಜ/ಜ್ಠಜಿbZ್ಞ್ಚಛಿ/್ಚoZಜ್ಠಜಿbಛಿ.q3.0.mb್ಛ

ಕ್ಲೌಡ್ ಯು
ಐಟಿ ವೃತ್ತಿಪರರಿಗಾಗಿ ಮತ್ತು ಬಿಸಿನೆಸ್ ಲೀಡರ್‍ಗಳನ್ನು ಗಮನದಲ್ಲಿಟ್ಟುಕೊಂಡು ಕ್ಲೌಡ್ ಯು ವಿನ್ಯಾಸ ಮಾಡಿರುವುದಾಗಿ ರಾಕ್‍ಸ್ಪೇಸ್ ಸಂಸ್ಥೆ ಹೇಳಿಕೊಂಡಿದೆ. ಅಮೆರಿಕದ ರಾಕ್‍ಸ್ಪೇಸ್‍ನ ಕ್ಲೌಡ್‍ಯು ಬಗ್ಗೆ ಹೆಚ್ಚಿನ ಮಾಹಿತಿ ಪಡೆಯಲು ಮತ್ತು ಆ ಕಮ್ಯುನಿಟಿಗೆ ಸೇರಿ ಅಧ್ಯಯನ ನಡೆಸಲು eಠಿಠಿm://್ಚ್ಝಟ್ಠb್ಠ.್ಟZ್ಚhomZ್ಚಛಿ.್ಚಟಞ ಲಿಂಕ್‍ಗೆ ಭೇಟಿ ನೀಡಬಹುದು.

ಕಾಂಪ್‍ಟಿಐಎ ಕ್ಲೌಡ್ ಎಸೆನ್ಶಿಯಲ್
ಕಾಂಪ್‍ಟಿಐಎ ಪ್ರಕಾರ ಕ್ಲೌಡ್ ಎಸೆನ್ಶಿಯಲ್ ಸರ್ಟಿಫಿಕೇಷನ್‍ನಲ್ಲಿ ಕ್ಲೌಡ್ ಕಂಪ್ಯೂಟಿಂಗ್‍ನ ಸಾಮಾನ್ಯ ಮೂಲಭೂತ ಅಂಶಗಳನ್ನು ಕಲಿಯಬಹುದು. ಐಟಿ ಕ್ಷೇತ್ರದಲ್ಲಿ ಕಡಿಮೆಯೆಂದರೂ ಆರು ತಿಂಗಳ ಅನುಭವ ಇರುವವರು ಈ ಸರ್ಟಿಫಿಕೇಷನ್ ಕೋರ್ಸ್ ಅನ್ನು ಮಾಡಬಹುದು ಎಂದು ಕಾಂಪ್‍ಟಿಐಎ ಹೇಳಿದೆ. ಇದಕ್ಕೆ ಬೇಕಾದ ತರಬೇತಿ ಸರಕು ಮತ್ತು ಅಧ್ಯಯನ ಪಠ್ಯಗಳನ್ನು ಕಾಂಪ್‍ಟಿಐಎ ಒದಗಿಸುತ್ತದೆ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‍ವಿಳಾಸ: eಠಿಠಿm://್ಚಛ್ಟಿಠಿಜ್ಛಿಜ್ಚಿZಠಿಜಿಟ್ಞ.್ಚಟಞmಠಿಜಿZ.ಟ್ಟಜ/್ಚಛ್ಟಿಠಿಜ್ಛಿಜ್ಚಿZಠಿಜಿಟ್ಞo/್ಚ್ಝಟ್ಠb

ಕ್ಲೌಡ್ ಸರ್ಟಿಫೈಡ್ ಪೆÇ್ರಫೆಷನಲ್
ವಿವಿಧ ಕ್ಲೌಡ್ ಸರ್ಟಿಫಿಕೇಷನ್‍ಗಳನ್ನು ಕ್ಲೌಡ್‍ಸ್ಕೂಲ್‍ಡಾಟ್‍ಕಾಂ ನೀಡುತ್ತಿದೆ. ಇಲ್ಲಿ ಸರ್ಟಿಫಿಕೇಷನ್ ಹೇಗೆ ಪಡೆಯಬಹುದೆಂಬ ಮಾಹಿತಿ ಪಡೆಯಲು ಭೇಟಿ ನೀಡಬೇಕಾದ ವೆಬ್‍ಸೈಟ್ ವಿಳಾಸ: eಠಿಠಿm://್ಚ್ಝಟ್ಠbo್ಚeಟಟ್ಝ.್ಚಟಞ

ಐಬಿಎಂ ಸರ್ಟಿಫಿಕೇಷನ್
ಐಬಿಎಂ ಕಂಪನಿಯು ಕ್ಲೌಡ್ ಸಂಬಂಧಿಸಿದ ಎರಡು ಬಗೆಯ ಸರ್ಟಿಫಿಕೇಷನ್ ಕಾರ್ಯಕ್ರಮಗಳನ್ನು ಹೊಂದಿದೆ. ಐಬಿಎಂ ಸರ್ಟಿಫೈಡ್ ಸೊಲ್ಯುಷನ್ ಆರ್ಕಿಟೆಕ್ಟ್ ವಿ1 ಮತ್ತು ವಿ3 ಎಂಬ ಈ ಎರಡು ಸರ್ಟಿಫಿಕೇಷನ್‍ಗಳನ್ನು ಮಾಡಬಹುದು. ನಿಮ್ಮಲ್ಲಿ ಕ್ಲೌಡ್‍ನ ಮೂಲಭೂತ ಮಾಹಿತಿ ಮತ್ತು ಐಬಿಎಂ ಕ್ಲೌಡ್ ಕಂಪ್ಯೂಟಿಂಗ್ ಎಸೆನ್ಶಿಯಲ್‍ನ ಸಾಮಾನ್ಯ ಜ್ಞಾನ ಇದ್ದರೆ ಈ ಕೋರ್ಸ್ ಮಾಡಬಹುದಾಗಿದೆ. ಹೆಚ್ಚಿನ ಮಾಹಿತಿಗೆ ಭೇಟಿ ನೀಡಬೇಕಾದ ವೆಬ್‍ವಿಳಾಸ: eಠಿಠಿm://ಡಿಡಿಡಿ03.ಜಿಚಿಞ.್ಚಟಞ/್ಚಛ್ಟಿಠಿಜ್ಛಿqs/ಜ್ಞಿbಛ್ಡಿ.oeಠಿಞ್ಝ
ಬಾಕ್ಸ್‍ಗಳು

ಏನಿದು ಕ್ಲೌಡ್ ಕಂಪ್ಯೂಟಿಂಗ್?
ಮೊದಲಿಗೆ ಕ್ಲೌಡ್ ಕಂಪ್ಯೂಟಿಂಗ್ ಬಗ್ಗೆ ತಿಳಿದುಕೊಳ್ಳೋಣ. ನಮ್ಮ ಮೊಬೈಲ್ ಫೆÇೀನ್‍ನಲ್ಲಿ ಅಥವಾ ಸಿಮ್‍ನಲ್ಲಿ ಕಾಂಟ್ಯಾಕ್ಟ್ ನಂಬರ್‍ಗಳನ್ನು ಸೇವ್ ಮಾಡದೆ ಗೂಗಲ್, ಐಟ್‍ಲುಕ್ ಇತ್ಯಾದಿಗಳಲ್ಲಿ ಸೇವ್ ಮಾಡಿದರೆ ಅದು ಕ್ಲೌಡ್ ಕಂಪ್ಯೂಟಿಂಗ್. ಫೆÇೀನ್‍ನಲ್ಲಿರುವ ಮೆಮೊರಿ ಕಾರ್ಡ್‍ನಲ್ಲಿ ಫೆÇೀಟೊ, ವಿಡಿಯೋಗಳನ್ನು ಸೇವ್ ಮಾಡದೆ ಗೂಗಲ್ ಡ್ರೈವ್‍ಗೆ ಸಿಂಕ್ ಮಾಡುವುದು ಸಹ ಕ್ಲೌಡ್ ಕಂಪ್ಯೂಟಿಂಗ್‍ಗೆ ಇನ್ನೊಂದು ಉದಾಹರಣೆ. ಅಂದರೆ, ನಮ್ಮ ಪರ್ಸನಲ್ ಕಂಪ್ಯೂಟರ್‍ನಲ್ಲಿ ಮಾಹಿತಿಗಳನ್ನು ಸಂಗ್ರಹಿಸಿಟ್ಟುಕೊಳ್ಳದೆ ಇಂಟರ್‍ನೆಟ್‍ನಲ್ಲಿ ಸಂಗ್ರಹಿಸಿಟ್ಟರೆ ಅದು ಕ್ಲೌಡ್ ಕಂಪ್ಯೂಟಿಂಗ್. ಕಂಪನಿಯೊಂದು ತನ್ನ ಕಂಪ್ಯೂಟರ್ ಮಾಹಿತಿ ನಿರ್ವಹಣೆಗೆ ಸ್ವಂತ ಸರ್ವರ್ ಬದಲು ಆನ್‍ಲೈನ್ ಸೇವೆಗಳನ್ನು ಬಳಸಿಕೊಳ್ಳುವುದು ಹೆಚ್ಚಾಗುತ್ತಿದೆ. ಈ ರೀತಿ ಅಂತರ್‍ಜಾಲದಲ್ಲಿ ಸಂಗ್ರಹಿಸಿಟ್ಟರೆ ಹಲವು ಲಾಭವಿದೆ. ಇಂಟರ್‍ನೆಟ್ ಇರುವ ಕಡೆ ಯಾವಾಗ ಬೇಕಾದರೂ ಎಲ್ಲಿ ಬೇಕಾದರೂ ಆ ಫೈಲ್‍ಗಳನ್ನು ತೆರೆಯಬಹುದು. ಇಮೇಲ್ ವ್ಯವಸ್ಥೆಯಿಂದ ಹಿಡಿದು ದತ್ತ ಸಂಚಯ, ಇಆರ್‍ಪಿ, ಗ್ರಾಹಕ ಸೇವೆಗಳ ನಿರ್ವಹಣೆ ಸೇರಿದಂತೆ ಹಲವು ಬಗೆಯ ಸೇವೆಗಳು ಕ್ಲೌಡ್ ಕಂಪ್ಯೂಟಿಂಗ್‍ನಲ್ಲಿ ದೊರಕುತ್ತವೆ. ಮಾಹಿತಿ ಸಂಗ್ರಹಕ್ಕೆ ದೊಡ್ಡ ಪ್ರಮಾಣದ ಸ್ಥಳವನ್ನು ಇಂಟರ್‍ನೆಟ್ ಒದಗಿಸುತ್ತದೆ ಎನ್ನುವುದೇ ಕ್ಲೌಡ್ ಕಂಪ್ಯೂಟಿಂಗ್‍ನ ಪ್ರಮುಖ ಸಾಧ್ಯತೆ.

****
ಆನ್‍ಲೈನ್‍ನಲ್ಲಿ ಸರ್ಟಿಫಿಕೇಷನ್
ಮಣಿಪಾಲ್ ಪೆÇ್ರಲರ್ನ್: ಚಿಜಿಠಿ.್ಝqs/1P್ಞಞಈಊ9 ವೆಬ್‍ಸೈಟ್ ಪ್ರವೇಶಿಸಿ ಕ್ಲೌಡ್ ಕಂಪ್ಯೂಟರ್ ಆನ್‍ಲೈನ್ ಕೋರ್ಸ್‍ಗೆ ಹೆಸರು ನೋಂದಾಯಿಸಿಕೊಳ್ಳಬಹುದು. ಇದು 90 ಅಥವಾ 120 ಗಂಟೆ ಅಂದರೆ 3 ತಿಂಗಳ ಆನ್‍ಲೈನ್ ಕೋರ್ಸ್ ಆಗಿದೆ. ಈ ಕೋರ್ಸ್ ಅನ್ನು ಕ್ಲೌಡ್ ಕಂಪ್ಯೂಟರ್ ಕ್ಷೇತ್ರದಲ್ಲಿ ಜಾಬ್ ಮಾಡಬಯಸುವ ವಿದ್ಯಾರ್ಥಿಗಳು ಮಾತ್ರವಲ್ಲದೆ ಈಗಾಗಲೇ ಐಟಿ ಕ್ಷೇತ್ರದಲ್ಲಿರುವ ವೃತ್ತಿಪರರೂ ಮಾಡಬಹುದಾಗಿದೆ. ಮೂರು ತಿಂಗಳ ಕೋರ್ಸಿಗೆ ಸುಮಾರು 10 ಸಾವಿರ ರೂ. ಶುಲ್ಕ ನೀಡಬೇಕು.
****
ಎಲ್ಲಿ ಕಲಿಯಬಹುದು?
ಸಿಎಂಎಸ್: ಬೆಂಗಳೂರಿನಲ್ಲಿರುವ ಸಿಎಂಎಸ್ ಕಂಪ್ಯೂಟರ್ ಇನ್‍ಸ್ಟಿಟ್ಯೂಟ್‍ನಲ್ಲೂ ಕ್ಲೌಡ್ ಕಂಪ್ಯೂಟರ್ ಕೋರ್ಸ್‍ಗಳಿವೆ. 40 ಗಂಟೆಗಳ ಈ ಕೋರ್ಸ್‍ಗೆ ಪಿಯುಸಿ ಅಥವಾ ಪದವಿ ಮುಗಿಸಿದವರು ಸೇರಬಹುದು. ಹೆಚ್ಚಿನ ಮಾಹಿತಿ ಪಡೆಯಲು ಇಮೇಲ್ ವಿಳಾಸ: eಛ್ಝಿmbಛಿohಃ್ಚಞo.್ಚಟಞ
ಬ್ಲೂಓಸಿನ್: ಬೆಂಗಳೂರಿನ ಬ್ಲೂಓಸಿನ್ ಸಂಸ್ಥೆ ಸಹ ಕ್ಲೌಡ್ ಕಂಪ್ಯೂಟರ್ ಸರ್ಟಿಫಿಕೇಷನ್ ಕೋರ್ಸ್ ನಡೆಸುತ್ತದೆ. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್: eಠಿಠಿm://ಡಿಡಿಡಿ.ಚ್ಝ್ಠಿಛಿಟ್ಚಛಿZ್ಞ್ಝಛಿZ್ಟ್ಞಜ್ಞಿಜ.್ಚಟಞ/
ಆಪ್ಟೆಕ್ ಕಂಪ್ಯೂಟರ್: ಮೈಸೂರು, ಮಂಗಳೂರು ಸೇರಿದಂತೆ ರಾಜ್ಯದ ವಿವಿಧೆಡೆ ಶಾಖೆಗಳನ್ನು ಹೊಂದಿರುವ ಆಪ್ಟೆಕ್ ಕಂಪ್ಯೂಟರ್ ಎಜುಕೇಷನ್‍ನಲ್ಲಿ ಕ್ಲೌಡ್ ಕಂಪ್ಯೂಟರ್ ಸರ್ಟಿಫಿಕೇಷನ್ ಪಡೆಯಬಹುದಾಗಿದೆ. ಕಂಪ್ಯೂಟರ್ ಮತ್ತು ಇಂಟರ್‍ನೆಟ್‍ನ ಸಾಮಾನ್ಯ ಜ್ಞಾನ ಇರುವವರು ಕ್ಲೌಡ್ ಕಂಪ್ಯೂಟರ್‍ನ ಮೊದಲ ಮಾಡ್ಯುಲ್ ವಿಷಯವನ್ನು ಕಲಿಯಬಹುದು. ಡಾಟ್‍ನೆಟ್ ಅಥವಾ ಜೆ2ಇಇ ಪೆÇ್ರೀಗ್ರಾಮಿಂಗ್ ಸ್ಕಿಲ್ ಇರುವವರು ಕ್ಲೌಡ್ ಕಂಪ್ಯೂಟರ್‍ನ ಎರಡನೇ ಮತ್ತು ಮೂರನೇ ಮಾಡ್ಯುಲ್ ಅನ್ನು ಇಲ್ಲಿ ಕಲಿಯಬಹುದು. ಮಾಹಿತಿಗೆ ವೆಬ್: eಠಿಠಿm://ಡಿಡಿಡಿ.Zmಠಿಛ್ಚಿeಛಿb್ಠ್ಚZಠಿಜಿಟ್ಞ.್ಚಟಞ/
ರಾಜ್ಯದಲ್ಲಿ ಸೇರಿದಂತೆ ಜಗತ್ತಿನಾದ್ಯಂತ ಕ್ಲೌಡ್ ಕಂಪ್ಯೂಟಿಂಗ್ ಕಲಿಸುವ ಹಲವು ಸಂಸ್ಥೆಗಳಿವೆ. ನೀವು ನಿಮ್ಮ ಮನೆಗೆ ಸಮೀಪವಿರುವ ಕಂಪ್ಯೂಟರ್ ಶಿಕ್ಷಣ ಸಂಸ್ಥೆಗಳಲ್ಲೂ ಈ ಕುರಿತು ವಿಚಾರಿಸಬಹುದು. ಗೂಗಲ್ ಸರ್ಚ್‍ಗೆ ಹೋಗಿ ಸಮೀಪವಿರುವ ಕ್ಲೌಡ್ ಕಂಪ್ಯೂಟಿಂಗ್ ಕೋರ್ಸ್ ಕಲಿಸುವ ಸಂಸ್ಥೆಗಳ ಮಾಹಿತಿಯನ್ನು ಪಡೆಯಬಹುದು.
CAD/CAM ಸರ್ಟಿಫಿಕೇಷನ್ ನಿಮ್ಮಲ್ಲಿದೆಯಾ?

CAD/CAM ಸರ್ಟಿಫಿಕೇಷನ್ ನಿಮ್ಮಲ್ಲಿದೆಯಾ?

ಈಗ ಕ್ಯಾಡ್, ಕ್ಯಾಮ್ ಇತ್ಯಾದಿ ಕಂಪ್ಯೂಟರ್ ಆಧರಿತ ತಂತ್ರಜ್ಞಾನಗಳಿಗೆ ಸಖತ್ ಡಿಮ್ಯಾಂಡ್. ಇವುಗಳಿಗೆ ಸಂಬಂಧಿಸಿದ ಅಲ್ಪಾವಧಿ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಪಡೆದರೆ ರೆಸ್ಯೂಂನ ವ್ಯಾಲ್ಯೂ ಹೆಚ್ಚಾಗಿ ಕೆಲಸ ಸಿಗುವ ಚಾನ್ಸ್ ಅಧಿಕವಾಗುತ್ತದೆ.

* ಪ್ರವೀಣ್ ಚಂದ್ರ ಪುತ್ತೂರು

 

ಮನೆಯಲ್ಲಿ ಗ್ಯಾಸ್‍ನಿಂದ ಅಡುಗೆ ತಯಾರಿಸುತ್ತಿದ್ದರೆ ಒಮ್ಮೆ ಅದರ ಬರ್ನರ್ ಗಮನಿಸಿ. ಆ ಬರ್ನರ್ ತಯಾರಿಸಿದ್ದು ಹೇಗೆ ಗೊತ್ತೆ? ಮೊದಲು ಕಂಪ್ಯೂಟರ್‍ನಲ್ಲಿ ಅದರ 3ಡಿ ಅಥವಾ 2ಡಿ ವಿನ್ಯಾಸ ಮಾಡಿಕೊಳ್ಳಬೇಕು. ನಂತರ ಯಂತ್ರಕ್ಕೆ ಇದನ್ನು ಉತ್ಪಾದಿಸಲು ಕಂಪ್ಯೂಟರ್ ಮೂಲಕ ನಿರ್ದೇಶಿಸಬೇಕು. ಬರ್ನರ್ ವಿನ್ಯಾಸ ಮತ್ತು ನಿರ್ಮಾಣಕ್ಕೆ ಕ್ಯಾಡ್ ಮತ್ತು ಕ್ಯಾಮ್ ತಂತ್ರಜ್ಞಾನವೆರಡೂ ಬೇಕು. ಇದು ಕೇವಲ ಬರ್ನರ್‍ಗೆ ಮಾತ್ರ ಸೀಮಿತವಲ್ಲ. ವಿಮಾನದ ಎಂಜಿನ್, ಕಾರು, ಬೈಕಿನ ಬಿಡಿಭಾಗಗಳು, ಯಾವುದಾದರೂ ಪ್ಲಾಸ್ಟಿಕ್ ಅಥವಾ ಲೋಹದ ಉತ್ಪನ್ನಗಳನ್ನು ವಿನ್ಯಾಸ ಮಾಡಲೂ ಕಂಪ್ಯೂಟರ್ ಏಯ್ಡೆಡ್ ಟೆಕ್ನಾಲಜೀಸ್ ಬೇಕೇಬೇಕು. ಕಂಪ್ಯೂಟರ್ ಆಧರಿತ ತಂತ್ರಜ್ಞಾನದಲ್ಲಿ ಸಿಎಎಡ್, ಸಿಎಇ, ಸಿಎಐಡಿ, ಸಿಎಎಂ, ಸಿಎಆರ್, ಸಿಎಆರ್‍ಡಿ, ಸಿಎಎಸ್‍ಇ, ಸಿಎಎಸ್, ಸಿಎಎಸ್‍ಎಸ್, ಸಿಎಫ್‍ಡಿ, ಸಿಐಎಸ್, ಸಿಐಎಂ, ಸಿಎನ್‍ಸಿ, ಇಡಿಎ, ಇಆರ್‍ಪಿ, ಎಫ್‍ಇಎ, ಕೆಬಿಇ, ಎಂಪಿಎಂ, ಎಂಪಿಪಿ, ಎಂಆರ್‍ಪಿ, ಪಿಡಿಎಂ, ಪಿಎಲ್‍ಎಂ ಹಲವು ವಿಭಾಗಗಳಿವೆ. ಕ್ಯಾಡ್, ಕ್ಯಾಮ್‍ನಂತಹ ತಂತ್ರಜ್ಞಾನ ಇಂದು ಸರ್ವವ್ಯಾಪಿ. ಹೀಗಾಗಿ ಇವುಗಳಿಗೆ ಸಂಬಂಧಿಸಿದ ಸರ್ಟಿಫಿಕೇಷನ್ ಕೋರ್ಸ್‍ಗಳಿಗೆ ಸಖತ್ ಸ್ಕೂಪ್.

 

ಕ್ಯಾಡ್/ಕ್ಯಾಮ್ ಎಂದರೇನು?

ವಸ್ತುವೊಂದರ ಡ್ರಾಯಿಂಗ್ ಮಾಡುವುದು ಕ್ಯಾಡ್‍ಗೆ ಸಂಬಂಧಿಸಿದ್ದಾದರೆ, ವಸ್ತುವನ್ನು ತಯಾರಿಸುವಂತೆ ಯಂತ್ರವನ್ನು ಕಂಪ್ಯೂಟರ್ ಮೂಲಕ ನಿರ್ದೇಶಿಸುದಕ್ಕೆ ಕ್ಯಾಮ್ ಬೇಕು. ಆರ್ಕಿಟೆಕ್ಚರ್, ಎಂಜಿನಿಯರ್ಸ್, ಡ್ರಾಫ್ಟರ್ಸ್, ಮತ್ತು ಕಲಾವಿದರು ಟೆಕ್ನಿಕಲ್ ಇಲ್ಯುಸ್ಟ್ರೇಷನ್ ಮಾಡುವ ಸಂದರ್ಭದಲ್ಲಿ ಕ್ಯಾಡ್ ತಂತ್ರಜ್ಞಾನ ಬಳಸುತ್ತಾರೆ. ಇದಕ್ಕಾಗಿ 2ಡಿ ಅಥವಾ 3ಡಿ ಗ್ರಾಫಿಕ್ಸ್ ಸಾಫ್ಟ್‍ವೇರ್ ಬೇಕಾಗುತ್ತದೆ. ಇದರ ಮೂಲಕ ಉತ್ಪನ್ನದ ಚಿತ್ರ ಬಿಡಿಸಲಾಗುತ್ತದೆ. ಕ್ಯಾಮ್ ಸಹ ಸಾಫ್ಟ್‍ವೇರ್ ಆಗಿದೆ. ಸ್ವಯಂಚಾಲಿತ ಯಂತ್ರಗಳು ಕಂಪ್ಯೂಟರ್ ಮೂಲಕ ನಿಯಂತ್ರಣಗೊಂಡು ಉತ್ಪನ್ನಗಳನ್ನು ತಯಾರು ಮಾಡುವಲ್ಲಿ ಕ್ಯಾಮ್ ಅನ್ನು ಬಳಸಲಾಗುತ್ತದೆ.

ಉದ್ಯೋಗಾವಕಾಶ

ಈಗ ಪ್ರತಿಯೊಂದು ಉದ್ಯಮದಲ್ಲೂ ಕ್ಯಾಡ್/ಕ್ಯಾಮ್ ಬಳಸಲಾಗುತ್ತಿದೆ. ನೀವು ವೃತ್ತಿಪರವಾಗಿ ಇವೆರಡನ್ನು ಕಲಿತಿದ್ದರೆ ವೈಮಾನಿಕ ಎಂಜಿನಿಯರಿಂಗ್ ಕ್ಷೇತ್ರದಲ್ಲಿ ವೈಮಾನಿಕ ತಂತ್ರಜ್ಞರಾಗಬಹುದು. ಆಟೋಮೋಟಿವ್ ಎಂಜಿನಿಯರ್ , ಆಟೋಮೋಟಿವ್ ಟೆಕ್ನಿಷಿಯನ್ ಆಗಬಹುದು. ಕ್ಯಾಡ್/ಕ್ಯಾಮ್ ಮ್ಯಾನೇಜರ್, ಕ್ಯಾಡ್/ಕ್ಯಾಮ್ ಅಪರೇಟರ್, ಮೆಷಿನ್ ಟೂಲ್ ಅಪರೇಟರ್, ಟೂಲ್ ಆ್ಯಂಡ್ ಡೈ ಮೇಕರ್ , ಮೆಟಲ್ ಆ್ಯಂಡ್ ಪ್ಲಾಸ್ಟಿಕ್ ಮೆಕಾನಿಸ್ಟ್ ಆಗಿ ಕಾರ್ಯನಿರ್ವಹಿಸಬಹುದು. ಅಸೆಂಬಲರ್ ಮತ್ತು ಫ್ಯಾಬ್ರಿಕೇಟರ್, ಅನಿಮೇಷನ್, ಕ್ಯಾಡ್/ಕ್ಯಾಮ್ ಸಾಫ್ಟ್‍ವೇರ್ ಡೆವಲಪ್‍ಮೆಂಟ್, ಕ್ಯಾಡ್/ಕ್ಯಾಮ್ ಹಾರ್ಡ್‍ವೇರ್ ಡೆವಲಪ್‍ಮೆಂಟ್, ಕ್ಯಾಡ್/ಕ್ಯಾಮ್ ಸಾಫ್ಟ್‍ವೇರ್ ಮೇಂಟೆನ್ಸ್ ಮತ್ತು ಟ್ರಬಲ್ ಶೂಟಿಂಗ್, ಕ್ಯಾಡ್ ಕ್ಯಾಮ್ ಕನ್ಸಲ್ಟಿಂಗ್ ಸರ್ವೀಸಸ್, ಕ್ಯಾಡ್/ಕ್ಯಾಮ್ ಇನ್‍ಸ್ಟ್ರಕ್ಷನ್ ಸರ್ವೀಸಸ್ ವಿಭಾಗದಲ್ಲಿ ಭವಿಷ್ಯ ರೂಪಿಸಿಕೊಳ್ಳಬಹುದು. ಕ್ಯಾಡ್/ಕ್ಯಾಮ್ ಮಾರ್ಕೆಟಿಂಗ್ ಆ್ಯಂಡ್ ಸೇಲ್ಸ್, ಮ್ಯಾನ್‍ಫ್ಯಾಕ್ಚರಿಂಗ್ ಅಸಿಸ್ಟೆಂಟ್, ಪೆÇ್ರಡಕ್ಷನ್ ಎಂಜಿನಿಯರ್, ಸಿಮ್ಯುಲೇಷನ್ ಟೆಕ್ನಾಲಜಿ, ರೊಬೊಟಿಕ್ಸ್, ಡಿಜಿಟಲ್ ಆಟ್ರ್ಸ್ ಮತ್ತು ಜಾಹೀರಾತು, ಇಂಟರ್‍ನೆಟ್ ಡೆವಲಪ್‍ಮೆಂಟ್ ಆ್ಯಂಡ್ ಕನ್ಸಲ್ಟಿಂಗ್, ಕಟ್ಟಿಂಗ್ ಟೂಲ್ ಡಿಸೈನರ್, ಆರ್ಕಿಟೆಕ್ಚರಲ್ ಡಿಸೈನರ್, ರೆಹಾಬಿಲಿಟಿಷನ್ ಟೆಕ್ನಾಲಜಿ, ಮೆಡಿಕಲ್ ಇಮೇಜಿಂಗ್ ಸಿಸ್ಟಮ್ಸ್, ಡಿಜಿಟಲ್ ಗೇಮಿಂಗ್ ಆ್ಯಂಡ್ ಅಮ್ಯುಸ್‍ಮೆಂಟ್ ಸಿಸ್ಟಮ್ಸ್ ಸೇರಿದಂತೆ ಹಲವು ಕ್ಷೇತಗಳಲ್ಲಿ ಉದ್ಯೋಗಾವಕಾಶ ಪಡೆಯಬಹುದು.

ಅಲ್ಪಾವಧಿ ಕೋರ್ಸ್‍ಗಳು

ಕ್ಯಾಡ್‍ಸೆಂಟರ್ (ಡಿಡಿಡಿ.್ಚZbb್ಚಛ್ಞಿಠ್ಟಿಛಿ.್ಚಟಞ) ಎಂಬ ತಾಣಕ್ಕೆ ಹೋದರೆ ನಿಮಗೆ ಹೆಚ್ಚಿನ ಅಲ್ಪಾವಧಿ ಮತ್ತು ದೀರ್ಘಾವಧಿ ಕೋರ್ಸ್‍ಗಳ ವಿವರ ದೊರಕುತ್ತದೆ. ಕ್ಯಾಡ್ ಸೆಂಟರ್ ಮಾತ್ರವಲ್ಲದೆ ಎಕ್ಸ್‍ಪೆÇ್ಲೀರಾ ಡಿಸೈನ್ ಸ್ಕೂಲ್, ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಅಡ್ವಾನ್ಸಡ್ ಕಂಪ್ಯೂಟರ್ ಸ್ಟಡೀಸ್ ಮುಂತಾದ ಕಡೆ ಇಂತಹ ಕೋರ್ಸ್ ಮಾಡಬಹುದಾಗಿದೆ.

ಕ್ಯಾಡ್/ಕ್ಯಾಮ್ ಇತ್ಯಾದಿಗಳನ್ನು ಕಲಿಸಲು ಹಲವು ಅಲ್ಪಾವಧಿ ಕೋರ್ಸ್‍ಗಳಿವೆ. ಇಂತಹ ಕೋರ್ಸ್‍ಗಳಿಗೆ ಇರುವ ಡಿಮ್ಯಾಂಡ್‍ಗೆ ತಕ್ಕಂತೆ ಪ್ರತಿ ಪಟ್ಟಣ, ನಗರಗಳಲ್ಲಿಯೂ ಬಹಳಷ್ಟು ಕ್ಯಾಡ್ ಸರ್ಟಿಫಿಕೇಷನ್ ಸಂಸ್ಥೆಗಳು, ಬ್ರಾಂಚ್‍ಗಳಿವೆ. ಇದು ಪ್ರಾಕ್ಟಿಕಲ್ ಕ್ಲಾಸ್ ಬಯಸುವ ಕೋರ್ಸ್ ಆಗಿದ್ದು, ಆನ್‍ಲೈನ್‍ನಲ್ಲಿ ಕಲಿಯಲು ಹೋಗಬೇಡಿ. ಕೆಲವು ಸಂಸ್ಥೆಗಳು 1 ತಿಂಗಳ, ಆರು ತಿಂಗಳ ಅಥವಾ ಒಂದು ವರ್ಷದ ಕ್ಯಾಡ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ನಡೆಸುತ್ತವೆ. ತುಂಬಾ ದುಬಾರಿ ಹಣ ಕೇಳುವ ಸಂಸ್ಥೆಗಳಿಂದ ದೂರವಿರಿ. ಸಾಧ್ಯವಿದ್ದರೆ ನಿಮಗೆ ಅನುಕೂಲವೆನಿಸುವ ಊರು, ಪಟ್ಟಣ, ನಗರದಲ್ಲಿರುವ ಕ್ಯಾಡ್ ಶಿಕ್ಷಣ ಕೇಂದ್ರಗಳಿಗೆಲ್ಲ ಭೇಟಿ ನೀಡಿ. ಅಲ್ಲಿ ಕೇಳುವ ಪೀಸ್, ಅಲ್ಲಿನ ಸೌಕರ್ಯಗಳನ್ನು ಹೋಲಿಸಿ ನೋಡಿ. ಈಗಾಗಲೇ ಇಂತಹ ಕೋರ್ಸ್ ಮಾಡಿರುವ ನಿಮ್ಮ ಸ್ನೇಹಿತರು, ಬಂಧುಗಳಿಂದಲೂ ಅಭಿಪ್ರಾಯ ಸಂಗ್ರಹಿಸಬಹುದು.

 

 

**

ಆಟೋಕ್ಯಾಡ್ ಕಲಿಕೆ ಉತ್ತಮ

ಯಾರ್ಯಾರು 2ಡಿ, 3ಡಿ ತಂತ್ರಜ್ಞಾನದ ಮೂಲಕ ತಮ್ಮ ಭವಿಷ್ಯ ರೂಪಿಸಲು ಬಯಸುತ್ತಾರೋ ಅವರು ಅ್ಠಠಿಟ ಇಅಈ ಸರ್ಟೀಫಿಕೇಷನ್ ಪಡೆಯುವುದು ಉತ್ತಮ. ಈ ಸರ್ಟಿಫಿಕೇಷನ್ ಇದ್ದರೆ ರೆಸ್ಯೂಂನ ವ್ಯಾಲ್ಯೂ ಹೆಚ್ಚಾಗುತ್ತದೆ. ಕೆಲಸ ಪಡೆಯುವುದು ಸುಲಭವಾಗುತ್ತದೆ. ತಾಂತ್ರಿಕ ಪದವಿ ಅಥವಾ ಡಿಪೆÇ್ಲಮಾ ಮಾಡಿದವರಿಗೆ ಈ ಕೋರ್ಸ್ ಸೂಕ್ತ. ಸಿವಿಲ್, ಎಲೆಕ್ಟ್ರಿಕಲ್, ಎಲೆಕ್ಟ್ರಾನಿಕ್ಸ್, ಆರ್ಕಿಟೆಕ್ಚರ್, ಏರೋನಾಟಿಕಲ್ ಸೇರಿದಂತೆ ಹಲವು ವಿಭಾಗಗಳಲ್ಲಿ ಉದ್ಯೋಗ ಪಡೆಯಲು ಆಟೋಕ್ಯಾಡ್ ಸರ್ಟಿಫಿಕೇಷನ್ ನೆರವಾಗುತ್ತದೆ.

ನಾಗರಾಜ್ ಹೆಗಡೆ | ಖಾಸಗಿ ಕಂಪನಿಯ ಉದ್ಯೋಗಿ, ಬೆಂಗಳೂರು

***

 

ಕ್ಯಾಡ್/ಕ್ಯಾಮ್‍ಗೆ ಭವಿಷ್ಯವಿದೆ

ಕಂಪ್ಯೂಟರ್ ಏಯ್ಡೆಡ್ ಎಂಜಿನಿಯರಿಂಗ್(ಸಿಎಇ) ಸಂಬಂಧಿಸಿದ ಅಲ್ಪಾವಧಿ ಕೋರ್ಸ್‍ಗಳಿವೆ. ಈ ವಿಭಾಗದಲ್ಲಿ ವಿದ್ಯಾರ್ಥಿಗಳು ಅವರಿಗೆ ಇಷ್ಟವಿರುವ ಕ್ಷೇತ್ರ, ಭವಿಷ್ಯದಲ್ಲಿ ಉದ್ಯೋಗ ಮಾಡಲಿಚ್ಚಿಸುವ ಕ್ಷೇತ್ರಕ್ಕೆ ಸಂಬಂಧಿಸಿದ ವಿನ್ಯಾಸ ಕಲಿಯಬಹುದು. ವಿಮಾನದ ಬಿಡಿಭಾಗ ವಿನ್ಯಾಸವನ್ನೂ ಇಲ್ಲಿ ಕಲಿಯಬಹುದು. ಬೇಕಿದ್ದರೆ ಗ್ಯಾಸ್ ಸಿಲಿಂಡರ್ ಬರ್ನರ್ ವಿನ್ಯಾಸವನ್ನೂ ಕಲಿಯಬಹುದು. ನಮ್ಮಲ್ಲಿ ಇಂತಹ ಕೋರ್ಸ್‍ಗಳು ದುಬಾರಿಯೇನಲ್ಲ. 20 ಸಾವಿರ ರೂ. ಆಸುಪಾಸಿನಲ್ಲಿ 3 ತಿಂಗಳ ಕೋರ್ಸ್ ಮಾಡಬಹುದು. ಕ್ಯಾಡ್/ಕ್ಯಾಮ್ ಕಲಿತವರಿಗೆ ಹಿಂದೆಯೂ ಸ್ಕೋಪ್ ಇತ್ತು. ಈಗಲೂ ಇದೆ. ಮುಂದೆಯೂ ಇರುತ್ತದೆ. ಇದು ಅತ್ಯುತ್ತಮ ಭವಿಷ್ಯವಿರುವ ಕೋರ್ಸ್.

ಡಾ. ಎಸ್.ಆರ್ ಶಂಕ್‍ಪಾಲ್ | ಅಧ್ಯಕ್ಷರು, ಎಂಎಸ್ ರಾಮಯ್ಯ ಸ್ಕೂಲ್ ಆಫ್ ಅಡ್ವಾನ್ಸಡ್ ಸ್ಟಡೀಸ್, ಬೆಂಗಳೂರು

***

Sunday, 18 September 2016

ಫಿಸಿಯೊಥೆರಪಿ ಸರ್ಟಿಫಿಕೇಷನ್ ಕೋರ್ಸ್‍ಗಳ ವಿವರ

ಫಿಸಿಯೊಥೆರಪಿ ಸರ್ಟಿಫಿಕೇಷನ್ ಕೋರ್ಸ್‍ಗಳ ವಿವರ

ಈಗ ಫಿಸಿಯೊಥೆರಪಿಸ್ಟ್‍ಗಳಿಗೆ ಉತ್ತಮ ಬೇಡಿಕೆಯಿದೆ. ಈ ಕ್ಷೇತ್ರದಲ್ಲಿ ಸೇವೆ ಸಲ್ಲಿಸುವವರು ಸಾಮಾನ್ಯ ಫಿಸಿಯೊಥೆರಪಿ ಪದವಿ ಜೊತೆಗೆ ಸರ್ಟಿಫಿಕೇಷನ್ ಕೋರ್ಸ್‍ಗಳನ್ನೂ ಮಾಡಬಹುದು. ಅಂತಹ ಕೋರ್ಸ್‍ಗಳ ವಿವರ ಇಲ್ಲಿದೆ.


ದೇಹಕ್ಕೆ ಭೌತವಿಧಾನದ ಮೂಲಕ ಚಿಕಿತ್ಸೆ ನೀಡುವ ಫಿಸಿಯೊಥೆರಪಿಗೆ ಹೆಲ್ತ್ ಕೇರ್ ವಿಭಾಗದಲ್ಲಿ ಉತ್ತಮ ಬೇಡಿಕೆಯಿದೆ. ಇದಕ್ಕೆ ಸಂಬಂಧಿತ ಶಿಕ್ಷಣ ಪಡೆದವರು ಕರಿಯರ್‍ನಲ್ಲಿ ಇನ್ನಷ್ಟು ಉತ್ತಮ ಅವಕಾಶಗಳನ್ನು ಪಡೆಯುವ ಆನ್‍ಲೈನ್ ಸಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು.


 

ಐಎಸಿಪಿ ಸರ್ಟಿಫಿಕೇಷನ್
ಫಿಸಿಯೊಥೆರಪಿಸ್ಟ್, ಫಿಸಿಕಲ್ ಥೆರಪಿಸ್ಟ್, ರೀಹಬಿಲಿಟೇಷನ್ ಥೆರಪಿಸ್ಟ್, ರೀಹಬಿಲಿಟೇಷನ್ ಪೆÇ್ರಫೆಷನಲ್, ಫಿಸಿಕಲ್ ಥೆರಪಿ ಅಸಿಸ್ಟೆಂಟ್, ಫಿಸಿಯೊಥೆರಪಿ ಅಸಿಸ್ಟೆಂಟ್ ಶೈಕ್ಷಣಿಕ ಅರ್ಹತೆ ಪಡೆದವರು ಇಂಡಿಯನ್ ಅಸೋಸಿಯೇಷನ್ ಆಫ್ ಚಾರ್ಟೆಡ್ ಫಿಸಿಯೊಥೆರಪಿಸ್ಟ್ (ಐ.ಎ.ಸಿ.ಪಿ) ನಡೆಸುವ ಫಿಸಿಕಲ್ ಥೆರಪಿಯ ವಿವಿಧ ವಿಭಾಗದ ಆನ್‍ಲೈನ್ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಬಹುದು. ನೀವು ಈಗಾಗಲೇ ಫಿಸಿಯೊಥೆರಪಿ ವಿಭಾಗದಲ್ಲಿ ಪಡೆದ ಶಿಕ್ಷಣದ ಮುಂದುವರೆದ ಕಲಿಕೆ ಇದಾಗಿದೆ.

ಕೋರ್ಸ್‍ಗಳು ಮತ್ತು ಶುಲ್ಕ
* ಸರ್ಟಿಫಿಕೇಟ್ ಇನ್ ಫಿಸಿಕಲ್ ಥೆರಪಿ: ಶುಲ್ಕ -25 ಸಾವಿರ ರೂ.
ಸ್ನಾತಕೋತ್ತರ ಡಿಪೆÇ್ಲಮಾ ಫಿಸಿಕಲ್ ಥೆರಪಿ ಕೋರ್ಸ್‍ಗಳು:
* ಸೆರೆಬ್ರಲ್ ಪಾಲ್ಸಿ- 12,500 ರೂ.
* ನ್ಯೂರೊ ಫಿಸಿಕಲ್ ಥೆರಪಿ- 14, 500 ರೂ.
* ಪಾಲ್ಮೊನರಿ ಎಕ್ಸರ್‍ಸೈಸಸ್- 14,500 ರೂ.
* ಲೊಕೊಮೊಟರ್ ಡಿಸಾರ್ಡರ್- 14, 500 ರೂ.

ಯಾರು ಅರ್ಜಿ ಸಲ್ಲಿಸಬಹುದು?
ಸರ್ಟಿಫಿಕೇಟ್ ಕೋರ್ಸ್‍ಗೆ ಬಯಾಲಜಿಯಲ್ಲಿ 12ನೇ ತರಗತಿಯಲ್ಲಿ ಪಾಸಾದವರು ಮತ್ತು ಆರ್ಥೊಪೆಡಿಕ್ ಸರ್ಜನ್ ಅಥವಾ ನ್ಯೂರೊಲಾಜಿಸ್ಟ್ ಅಥವಾ ನ್ಯೂರೊಸರ್ಜನ್ ಜೊತೆ ಕನಿಷ್ಠ 5 ವರ್ಷವಾದರೂ ಕೆಲಸ ಮಾಡಿ ಅನುಭವ ಇರುವವರು ಅಥವಾ ಫಿಸಿಯೊಥೆರಪಿ/ಫಿಸಿಕಲ್ ಥೆರಪಿ/ ರೀಹಬಿಲಿಟೇಷನ್ /ಬಿಪಿಟಿ ಇತ್ಯಾದಿಗಳಲ್ಲಿ ಕನಿಷ್ಠವೆಂದರೂ ಡಿಪೆÇ್ಲಮಾ ಪಡೆದವರು ಅರ್ಜಿ ಸಲ್ಲಿಸಬಹುದು.
ಫಿಸಿಯೊಥೆರಪಿ/ಫಿಸಿಕಲ್ ಥೆರಪಿ/ರೀಹಬಿಲಿಟೇಷನ್ ನಲ್ಲಿ ಪದವಿ ಮತ್ತು ಕ್ಲಿನಿಕಲ್ ಅನುಭವ ಇರುವವರು ಸ್ನಾತಕೋತ್ತರ ಡಿಪೆÇ್ಲಮಾ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಬಹುದು. ಈ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಪಡೆದು, 6 ವರ್ಷದ ಕ್ಲಿನಿಕಲ್ ಅನುಭವ ಇರುವವರು ಪಿಎಚ್.ಡಿಗೆ ಅರ್ಜಿ ಸಲ್ಲಿಸಬಹುದು.
ಈ ಅರ್ಹತೆ ಇರುವ ಯಾವುದೇ ದೇಶದ ವ್ಯಕ್ತಿ ಈ ಕೋರ್ಸ್‍ಗಳಿಗೆ ಅರ್ಜಿ ಸಲ್ಲಿಸಲು ಅರ್ಹರು. ಐಎಸಿಪಿಯ ಸದಸ್ಯರು ಅಥವಾ ಸದಸ್ಯರಲ್ಲದವರು ಅರ್ಜಿ ಸಲ್ಲಿಸಬಹುದು. ಐಎಸಿಪಿಯಿಂದ ಲೈಫ್ ಮೆಂಬರ್ ಅಥವಾ ಪೆÇ್ರಫೆಷನಲ್ ಮೆಂಬರ್ ಆಗಿದ್ದವರಿಗೆ ಶುಲ್ಕದಲ್ಲಿ 25 ರೂಪಾಯಿ ವಿನಾಯಿತಿ ಇದೆ. ಅರ್ಜಿ ಶುಲ್ಕವನ್ನು ಡಿಡಿ ರೂಪದಲ್ಲಿ ಮಾತ್ರ ಸಲ್ಲಿಸಲು ಅವಕಾಶವಿದೆ.
ಅರ್ಜಿ ಫಾರ್ಮ್ ಡೌನ್‍ಲೋಡ್ ಮಾಡಿಕೊಳ್ಳಲು ಮತ್ತು ಹೆಚ್ಚಿನ ಮಾಹಿತಿ ಪಡೆಯಲು ವೆಬ್‍ಸೈಟ್‍ಗೆ ಭೇಟಿ ನೀಡಬಹುದು. npcindialko@yahoo.co.in   ಇಮೇಲ್ ವಿಳಾಸಕ್ಕೆ ರೆದು ಅರ್ಜಿ ಫಾರ್ಮ್ ಕಳುಹಿಸಲು ವಿನಂತಿಸಿಕೊಳ್ಳಬಹುದು.

 

ಪದವಿ ಮತ್ತು ಪಿಜಿ ಕೋರ್ಸ್
ಫಿಸಿಯೊಥೆರಪಿಸ್ಟ್ ಆಗಲು ಬಯಸುವವರಿಗೆ ಮಾಹಿತಿ ನೀಡುವ ಉದ್ದೇಶದಿಂದ ರಾಜ್ಯದಲ್ಲಿ ಫಿಸಿಯೊಥೆರಪಿಯಲ್ಲಿ ಪದವಿ ಮತ್ತು ಸ್ನಾತಕೋತ್ತರ ಪದವಿ ನೀಡುವ ವಿವಿಧ ಶಿಕ್ಷಣ ಸಂಸ್ಥೆಗಳ ವಿವರ ಇಲ್ಲಿದೆ. ಪ್ರಿಮೆಡಿಕಲ್/ಇಂಟರ್‍ಮೀಡಿಯೇಟ್ ಫಿಸಿಯೊಥೆರಪಿ ಬ್ಯಾಚುಲರ್ ಕೋರ್ಸ್ ಮಾಡಲು ಫಿಸಿಕ್ಸ್, ಕೆಮೆಸ್ಟ್ರಿ, ಬಯಾಲಜಿ ಮತ್ತು ಇಂಗ್ಲಿಷ್‍ನೊಂದಿಗೆ 12ನೇ ತರಗತಿ ಪಾಸಾಗಿರಬೇಕು. ಪ್ರವೇಶ ಪರೀಕ್ಷೆಯಲ್ಲಿ ಅಭ್ಯರ್ಥಿಯು ತೋರಿದ ಕಾರ್ಯಕ್ಷಮತೆಯನ್ನು ಅವಲಂಬಿಸಿ ನೇಮಕ ಮಾಡಲಾಗುತ್ತದೆ. ಇಂಡಿಯನ್ ಅಸೋಸಿಯೇಷನ್ ಆಫ್ ಫಿಸಿಯೊಥೆರಪಿಸ್ಟ್ ಅಡಿಯಲ್ಲಿ ರಾಜ್ಯದಲ್ಲಿ 35ಕ್ಕೂ ಹೆಚ್ಚು ಕಾಲೇಜುಗಳು ಪದವಿ ಮತ್ತು ಸ್ನಾತಕೋತ್ತರ ಪದವಿಗಳನ್ನು ನೀಡುತ್ತಿವೆ. ಹೆಚ್ಚಿನ ಮಾಹಿತಿಗೆ ವೆಬ್‍ಸೈಟ್ ಲಿಂಕ್: ಡಿಡಿಡಿ.meqsoಜಿಟಠಿeಛ್ಟಿZmqsಜ್ಞಿbಜಿZ.ಟ್ಟಜ.ಜ್ಞಿ

ಸರಕಾರಿ ಕಾಲೇಜು
* ಡಿಪಾರ್ಟ್‍ಮೆಂಟ್ ಆಫ್ ಫಿಸಿಯೋ ಥೆರಪಿ, ಬೆಂಗಳೂರು ಮೆಡಿಕಲ್ ಕಾಲೇಜು, ಬೆಂಗಳೂರು
ಖಾಸಗಿ ಕಾಲೇಜುಗಳು
* ಬೆಂಗಳೂರಿನಲ್ಲಿ ಆಳ್ವಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ, ಎಂಎಸ್ ರಾಮಯ್ಯ ಮೆಡಿಕಲ್ ಕಾಲೇಜು, ಆಚಾರ್ಯ ಕಾಲೇಜು, ಫೆÇ್ಲೀರೆನ್ಸ್, ಗಾರ್ಡನ್ ಸಿಟಿ ಕಾಲೇಜ್, ಗೌತಮ್ ಕಾಲೇಜು, ಹೊಸಮಠ ಕಾಲೇಜು, ಇನ್‍ಫಾಂಟ್ ಜೀಸಸ್, ಕೃಪಾನಿಧಿ, ಕೆಂಪೆಗೌಡ ಇನ್‍ಸ್ಟಿಟ್ಯೂಟ್, ಆಕ್ಸ್‍ಫರ್ಡ್, ಪದ್ಮಶ್ರಿ ಇನ್‍ಸ್ಟಿಟ್ಯೂಟ್, ನರಗುಂದ ಕಾಲೇಜು, ಕೆಟಿಜಿ, ದಯಾನಂದ ಸಾಗರ್, ಸಿಟಿ ಕಾಲೇಜುಗಳಲ್ಲಿ ಫಿಸಿಯೊಥೆರಪಿ ಕಲಿಸಲಾಗುತ್ತದೆ.
ಮಂಗಳೂರಿನಲ್ಲಿ ಸಿಟಿ ಕಾಲೇಜ್, ಯೂನಿವರ್ಸಿಟಿ ಮೆಡಿಕಲ್ ಕಾಲೇಜು, ಎಂವಿ ಶೆಟ್ಟಿ ಕಾಲೇಜು, ಕರ್ನಾಟಕ ಕಾಲೇಜ್ ಆಫ್ ಫಿಸಿಯೊಥೆರಪಿ, ಲಕ್ಷ್ಮಿ ಮೆಮೊರಿಯಲ್ ಕಾಲೇಜ್, ಎನ್‍ಐಟಿಟಿಇ, ಕೆ. ಪಾಂಡುರಾಜ ಬಲ್ಲಾಲ್, ಶ್ರೀನಿವಾಸನ್ ಕಾಲೇಜು, ಶ್ರೀದೇವಿ ಕಾಲೇಜ್, ವಿಕಾಸ್ ಕಾಲೇಜ್, ಯನೊಪಯ, ವಿಜಯಲಕ್ಷ್ಮಿ ಇನ್‍ಸ್ಟಿಟ್ಯೂಟ್, ಫಾದರ್ ಮುಲ್ಲರ್ ಮೆಡಿಕಲ್ ಕಾಲೇಜು.
* ಮಣಿಪಾಲ- ಕೆಎಂಸಿಯ ಮಣಿಪಾಲ್ ಕಾಲೇಜ್ ಆಫ್ ಅಲೈಡ್ ಹೆಲ್ತ್ ಸೈನ್ಸ್,
* ಬೆಳಗಾವಿ-ಕೆಎಲ್‍ಇ ಇನ್‍ಸ್ಟಿಟ್ಯೂಟ್ ಆಫ್ ಫಿಸಿಯೊಥೆರಪಿ.
* ರಾಯಚೂರು- ನವೋದಯ ಕಾಲೇಜ್ ಆಫ್ ಫಿಸಿಯೊಥೆರಪಿ.
* ಧಾರವಾಡ-ಎಸ್‍ಡಿಎಂ ಕಾಲೇಜ್
* ತುಮಕೂರು- ಶ್ರೀದೇವಿ ಕಾಲೇಜ್ ಆಫ್ ಫಿಸಿಯೊಥೆರಪಿ.
* ಹುಬ್ಬಳ್ಳಿ- ಕೆಎಲ್‍ಇ ಕಾಲೇಜ್
* ಮೈಸೂರು- ಜೆಎಸ್‍ಎಸ್ ಕಾಲೇಜು.
ಎಕ್ಸೆಲ್ ಅಡ್ವಾನ್ಸಡ್ ಕೋರ್ಸ್ ಕಲಿಯಿರಿ

ಎಕ್ಸೆಲ್ ಅಡ್ವಾನ್ಸಡ್ ಕೋರ್ಸ್ ಕಲಿಯಿರಿ

ಈಗ ಬಹುತೇಕ ಉದ್ಯೋಗಕ್ಕೆ ಮೈಕ್ರೊಸಾಫ್ಟ್ ಎಕ್ಸೆಲ್ ಸ್ಕಿಲ್ ಬೇಕು. ನೀವು ಯಾವುದಾದರೂ ಕಂಪ್ಯೂಟರ್ ತರಬೇತಿ ಕೇಂದ್ರಗಳಲ್ಲಿ ಕಲಿತಿರುವ ಬೇಸಿಕ್ ಎಕ್ಸೆಲ್ ಕೆಲವೊಮ್ಮೆ ಸಾಕಾಗದು. ಅಲ್ಲಿ ತಿಳಿಸಿಕೊಡುವ ಸೂತ್ರಗಳು, ಫಾರ್ಮುಲಾಗಳು ಹೆಚ್ಚು ಪ್ರಯೋಜನಕಾರಿಯಾಗುತ್ತದೆ ಎಂದು ಹೇಳಲಾಗದು. ಎಕ್ಸೆಲ್‍ನಲ್ಲಿ ಅಡ್ವಾನ್ಸಡ್ ಆಗಿರುವ ಕೋರ್ಸ್‍ಗಳನ್ನು ಮಾಡಿದರೆ ನಿಮಗೆ ಸಿಗುವ ಉದ್ಯೋಗಾವಕಾಶ ಹೆಚ್ಚಬಹುದು. ಇದಕ್ಕೆ ಸಂಬಂಧಿಸಿದ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ನೀವು ಮಾಡಬಹುದು. ಇಂತಹ ಕೋರ್ಸ್‍ಗಳನ್ನು ಮಾಡುವಂತೆ ನಿಮ್ಮ ಮಕ್ಕಳಿಗೆ ಅಥವಾ ಪರಿಚಯಸ್ಥರಿಗೂ ಸೂಚಿಸಬಹುದು.

ಎಕ್ಸೆಲ್ ಫಾರ್ಮುಲಾಗಳು

ಎಕ್ಸೆಲ್ ಅನ್ನು ಸ್ಮಾರ್ಟ್ ಆಗಿ ಬಳಕೆ ಮಾಡಲು ಫಾರ್ಮುಲಾಗಳು ಬೇಕು. ಅದಿಲ್ಲದಿದ್ದರೆ ಎಕ್ಸೆಲ್ ಎನ್ನುವುದು ಕೇವಲ ಮಾಹಿತಿ ಸಂಗ್ರಹಗಾರವಾಗಿ ಬಿಡುತ್ತದೆ. ಫಾರ್ಮುಲಾಗಳನ್ನು ಬಳಸುವ ಮೂಲಕ ಮಾಹಿತಿಗಳನ್ನು ವಿಶ್ಲೇಷಿಸಬಹುದು. ಕಠಿಣ ಪ್ರಶ್ನೆಗಳಿಗೆ ಉತ್ತರಗಳನ್ನು ಕಂಡುಕೊಳ್ಳಲು ಸಾಧ್ಯವಿದೆ. ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ಎಕ್ಸೆಲ್ ಫಾರ್ಮುಲಾಗಳನ್ನು ಎಕ್ಸೆಲೆಂಟ್ ಆಗಿ ಕಲಿಯಲು ಸಹಕರಿಸುತ್ತವೆ. ಇಲ್ಲಿ ನೀವು ಖಖಿIಐಊಖ, ಖಖಿIP್ಕuಈಖಿಇS, ್ಖಔuuಓಖಿP, ಐಘೆಈಉಗಿ + IಅSಇಏ, ಫಾರ್ಮುಲಾ ಎರರ್‍ಗಳ ನಿರ್ವಹಣೆ, ಅರ್ರೆ ಫಾರ್ಮುಲಾ, ಸಕ್ಯುಲರ್ ರೆಫರೆನ್ಸ್, ಫಾರ್ಮುಲಾ ಅಡಿಟಿಂಗ್ ಇತ್ಯಾದಿಗಳ ಫಾರ್ಮುಲಾಗಳನ್ನು ಕಲಿಯಬಹುದು.

ಟೇಬಲ್ ಮತ್ತು ಫಾರ್ಮೆಟಿಂಗ್

ಎಕ್ಸೆಲ್‍ನ ಇನ್ನೊಂದು ಆಕರ್ಷಣೆ ಟೇಬಲ್‍ಗಳು ಮತ್ತು ಫಾರ್ಮೆಟಿಂಗ್. ಅಲ್ಲಿ ನೀಡುವ ಮಾಹಿತಿಯನ್ನು ಆಕರ್ಷಕವಾಗಿ ಪ್ರಸ್ತುತ ಪಡಿಸಲು ಈ ಟೂಲ್‍ಗಳು ನೆರವು ನೀಡುತ್ತವೆ. ಟೇಬಲ್‍ಗಳು, ಸೆಲ್ ಸ್ಟೈಲ್‍ಗಳು, ಫಾರ್ಮೆಟಿಂಗ್ ಆಯ್ಕೆಗಳನ್ನು ಅಡ್ವಾನ್ಸಡ್ ಎಕ್ಸೆಲ್ ಕೋರ್ಸ್‍ಗಳಲ್ಲಿ ಕಲಿಯಬಹುದು. ಟೇಬಲ್ ರಚಿಸಲು ಟಿಪ್ಸ್‍ಗಳು, ಫಾರ್ಮುಲಾಗಳನ್ನು ಕಲಿಯಲು ಎಕ್ಸೆಲ್ ಸರ್ಟಿಫಿಕೇಷನ್ ಕೋರ್ಸ್‍ಗಳು ಉತ್ತಮ ವೇದಿಕೆ.

ಕಂಡಿಷನಲ್ ಫಾರ್ಮೆಟಿಂಗ್

ಇದಕ್ಕೆ ಶಾರ್ಟ್ ಮತ್ತು ಸ್ವೀಟಾಗಿ ಸಿಎಫ್ ಎನ್ನುತ್ತಾರೆ. ಇದು ಎಕ್ಸೆಲ್‍ನ ಪವರ್‍ಫುಲ್ ಫೀಚರ್. ನಿರ್ಬಂಧಿತ ಫಾರ್ಮೆಟಿಂಗ್‍ನಲ್ಲಿ ನೀವು ನೀಡಿರುವ ಮಾಹಿತಿಯಲ್ಲಿ ಯಾವ ಭಾಗವು ಹೈಲೈಟ್ ಆಗಬೇಕೆಂದು ಸೂಚಿಸಲು ಸಾಧ್ಯವಿದೆ. ಅಂದರೆ ಟಾಪ್ 10 ಗ್ರಾಹಕರು, ಟಾಪ್ 10 ಶಾಲೆಗಳು, ಉನ್ನತ್ತ ಅಧಿಕಾರಿಗಳು, ಕೆಳ ಅಧಿಕಾರಿಗಳು, ಉತ್ತಮ ಕಾರ್ಯಕ್ಷಮತೆ ತೋರುವವರು, ಕಳಪೆ ಕಾರ್ಯಕ್ಷಮತೆಯ ಉದ್ಯೋಗಿಗಳು ಹೀಗೆ ಯಾವುದನ್ನು ಮಾತ್ರ ಹೈಲೈಟ್ ಮಾಡಬೇಕೋ ಅದನ್ನು ಮಾತ್ರವೇ ಹೈಲೈಟ್ ಮಾಡಲು ಸಾಧ್ಯವಿದೆ. ಸರಳವಾಗಿರುವ ಕಂಡಿಷನಲ್ ಫಾರ್ಮೆಟಿಂಗ್ ರೂಲ್ಸ್‍ನಲ್ಲಿ ಯಾರೂ ಬೇಕಾದರು ಸುಲಭವಾಗಿ ಸೆಟಪ್ ಮಾಡಬಹುದು.

ಅಡ್ವಾನ್ಸಡ್ ಚಾರ್ಟಿಂಗ್

ಸ್ಪ್ರೆಡ್‍ಶೀಟ್‍ನಲ್ಲಿ ಎಲ್ಲಾ ವಿಶ್ಲೇಷಣೆಗಳನ್ನು ಗುಡ್ಡೆ ಹಾಕಿ ಏನೂ ಪ್ರಯೋಜನವಿಲ್ಲ. ಚಾರ್ಟ್‍ಗಳನ್ನು ಬಳಕೆ ಮಾಡುವುದನ್ನು ಕಲಿತರೆ ಎಕ್ಸೆಲ್‍ನಲ್ಲಿ ಇನ್ನೂ ಅಂದವಾಗಿ ಮಾಹಿತಿಗಳನ್ನು ಪ್ರಸ್ತುತಪಡಿಸಬಹುದಾಗಿದೆ. ಇದಕ್ಕಾಗಿ ಸಂದರ್ಭಕ್ಕೆ ಸೂಕ್ತವಾಗುವ ಚಾರ್ಟ್‍ಗಳನ್ನು ಬಳಸಲು ತಿಳಿದಿರಬೇಕಾಗುತ್ತದೆ. ವಿವಿಧ ಚಾರ್ಟ್‍ಗಳನ್ನು ಒಂದಾಗಿಸುವ ಕಲೆ ಕಲಿತಿರಬೇಕಾಗುತ್ತದೆ. ಇನ್-ಸೆಲ್ ಚಾಟ್ರ್ಸ್, ಕಂಡಿಷನಲ್ ಫಾರ್ಮೆಟಿಂಗ್ ಚಾಟ್ರ್ಸ್ ಇತ್ಯಾದಿ ಫೀಚರ್‍ಗಳನ್ನು ಬಳಕೆ ಮಾಡಲು ಗೊತ್ತಿರಬೇಕಾಗುತ್ತದೆ. ಕ್ರಿಯಾತ್ಮಕ ಮತ್ತು ಹೊಂದಾಣಿಕೆಯ ಚಾರ್ಟ್‍ಗಳನ್ನೂ ಅಡ್ವಾನ್ಸಡ್ ಚಾರ್ಟಿಂಗ್ ಕಲಿತರೆ ಮಾಡಬಹುದು.

ಪಿವೊಟ್ ಟೇಬಲ್‍ಗಳು ಮತ್ತು ರಿಪೆÇೀರ್ಟಿಂಗ್

ಬೃಹತ್ ಗಾತ್ರದ ಮಾಹಿತಿಗಳನ್ನು ವಿಶ್ಲೇಷಿಸಲು ಮತ್ತು ಪ್ರಶ್ನೆಗಳಿಗೆ ಕೆಲವೇ ಕ್ಲಿಕ್‍ಗಳ ಮೂಲಕ ಉತ್ತರ ಕಂಡುಕೊಳ್ಳಲು ಪಿವೊಟ್ ಟೇಬಲ್‍ಗಳು ಮತ್ತು ಪಿವೊಟ್ ರಿಪೆÇೀರ್ಟಿಂಗ್ ಫೀಚರ್ ಸಹಕಾರಿ. ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ಇಂತಹ ವಿಷಯಗಳನ್ನು ಹೇಳಿಕೊಡಲಾಗುತ್ತದೆ. ಇದರ ಮೂಲಕ ಗ್ರೂಪಿಂಗ್, ಸ್ಲೈಸರ್ಸ್, ಕ್ಯಾಲ್ಕುಲೇಷನ್ಸ್, ಸಮ್ಮರಿ ಇತ್ಯಾದಿಗಳನ್ನು ಮಾಡಬಹುದು.

ಎಕ್ಸೆಲ್ ಭಾಷೆ

ಎಕ್ಸೆಲ್‍ಗೆ ತನ್ನದೇ ಆದ ಭಾಷೆಯಿದೆ. ಅದರ ಹೆಸರು ವಿಬಿಎ. ನಾವು ನೀಡಿದ ಸೂಚನೆಗಳಿಗೆ ತಕ್ಕಂತೆ ಎಕ್ಸೆಲ್ ಕಾರ್ಯನಿರ್ವಹಿಸಲು ವಿಬಿಎ ನೆರವಾಗುತ್ತದೆ. ಇದು ಸರಳ ಮತ್ತು ಶಕ್ತಿಶಾಲಿ ಟೂಲ್. ನಿಮಗೆ ವಿಬಿಎ ಬಗ್ಗೆ ಹೆಚ್ಚು ಜ್ಞಾನವಿದ್ದರೆ ಹಲವು ಗಂಟೆಗಳಲ್ಲಿ ಮಾಡುವ ಕೆಲಸವನ್ನು ಕೆಲವೇ ಕೆಲವು ಗಂಟೆಗಳಲ್ಲಿ ಮಾಡಿ ಮುಗಿಸಬಹುದು. ಇದರಿಂದ ಹಣ ಮತ್ತು ಶ್ರಮದ ಉಳಿತಾಯವೂ ಆಗುತ್ತದೆ.

ಎಕ್ಸೆಲ್ ಕೌಶಲಗಳು

ಎಂಎಸ್ ಎಕ್ಸೆಲ್‍ನಲ್ಲಿರುವ ಫೀಚರ್‍ಗಳನ್ನು ಕಲಿತರೆ ಸಾಲದು. ಅದನ್ನು ಸರಳವಾಗಿ ಬಳಸುವ ವಿಧಾನವನ್ನು ಕಲಿಯಬೇಕು. ಕೀಬೋರ್ಡ್ ಶಾರ್ಟ್‍ಕಟ್‍ಗಳು, ಮೌಸ್ ಶಾರ್ಟ್‍ಕಟ್ ಇತ್ಯಾದಿಗಳನ್ನು ಕಲಿಯಬೇಕು. ಆಗ ಕೆಲಸ ಸುಲಲಿತವಾಗುತ್ತದೆ. ಸರ್ಟಿಫಿಕೇಷನ್ ಕೋರ್ಸ್‍ಗಳಿಂದ ಇವನ್ನೆಲ್ಲ ಕಲಿಯಬಹುದಾಗಿದೆ. ಇದರೊಂದಿಗೆ ಡೇಟಾ ಟೇಬಲ್‍ಗಳು, ಸಿಮ್ಯುಲೇಷನ್ಸ್, ಸಾಲ್ವರ್ ಇತ್ಯಾದಿ ಫೀಚರ್‍ಗಳನ್ನು ಬಳಸಲು ಕಲಿಯಬೇಕಾಗುತ್ತದೆ. ಎಕ್ಸೆಲ್ ಜೊತೆಗೆ ಕಾರ್ಯನಿರ್ವಹಿಸುವ ಎಂಎಸ್ ಆ್ಯಕ್ಸೆಸ್, ಔಟ್‍ಲುಕ್ ಅಥವಾ ಪವರ್‍ಪಾಯಿಂಟ್‍ಗಳನ್ನು ಸಮರ್ಥವಾಗಿ ಬಳಸಲು ಅಡ್ವಾನ್ಸಡ್ ಎಕ್ಸೆಲ್ ಕೋರ್ಸ್ ಕಲಿತವರಿಗೆ ಸಾಧ್ಯವಾಗುತ್ತದೆ.

ಎಲ್ಲೆಲ್ಲಿ ಕೋರ್ಸ್ ಮಾಡಬಹುದು?

  • ಮೈಕ್ರೊಸಾಫ್ಟ್‍ನಿಂದ ಸರ್ಟಿಫಿಕೇಷನ್: ಮೈಕ್ರೋಸಾಫ್ಟ್ ಸಂಸ್ಥೆಯು ಎಂಎಸ್ ಎಕ್ಸೆಲ್ ಸಂಬಂಧಿಸಿದಂತೆ ಪರೀಕ್ಷೆ ನಡೆಸಿ ಸರ್ಟಿಫಿಕೇಟ್ ನೀಡುತ್ತದೆ. ಗೂಗಲ್‍ಗೆ ಹೋಗಿ ಮೈಕ್ರೊಸಾಫ್ಟ್ ಎಕ್ಸೆಲ್ ಸರ್ಟಿಫಿಕೇಷನ್ ಎಂದು ಸರ್ಚ್ ಮಾಡಿ.

  • ಮಣಿಪಾಲ್ ಪೆÇ್ರಲರ್ನ್ ಸರ್ಟಿಫಿಕೇಷನ್: ಇಲ್ಲಿ ಎಂಎಸ್ ಎಕ್ಸೆಲ್‍ಗೆ ಸಂಬಂಧಿಸಿದ ಅಡ್ವಾನ್ಸಡ್ ಕೋರ್ಸ್ ಅನ್ನು ಆನ್‍ಲೈನ್ ಮೂಲಕ ನೀಡಲಾಗುತ್ತದೆ. ಈ ಕೋರ್ಸ್ ಕಲಿಯಲು 5,725 ರೂ. ಶುಲ್ಕ ನಿಗದಿಪಡಿಸಲಾಗಿದೆ.

  • ಸಿಂಪ್ಲಿಲರ್ನ್‍ಡಾಟ್‍ಕಂನಲ್ಲೂ ಮೈಕ್ರೊಸಾಫ್ಟ್ ಎಕ್ಸೆಲ್ 2013 ಅಡ್ವಾನ್ಸಡ್ ಟ್ರೈನಿಂಗ್ ದೊರಕುತ್ತದೆ. ಈ ಆನ್‍ಲೈನ್ ಕೋರ್ಸಿಗೆ ಸುಮಾರು 3 ಸಾವಿರ ರೂ. ಶುಲ್ಕ ವಿಧಿಸಲಾಗುತ್ತಿದೆ.

  • ವಿ.ಸೂ: ಎಂಎಸ್ ಎಕ್ಸೆಲ್‍ನಲ್ಲಿ ಅಡ್ವಾನ್ಸಡ್ ಕೋರ್ಸ್ ನೀಡುವ ಹತ್ತು ಹಲವು ಸಂಸ್ಥೆಗಳು ನಿಮ್ಮ ಮನೆಯ ಸಮೀಪದಲ್ಲಿರಬಹುದು. ಅವುಗಳಿಗೆ ಜಾಯಿನ್ ಆಗಬಹುದು. ಅಲ್ಲಿ ನೀಡುವ ತರಬೇತಿ, ಸಂಪನ್ಮೂಲ ವ್ಯಕ್ತಿಗಳ ಬಗ್ಗೆ ಮಾಹಿತಿ ಪಡೆದ ನಂತರ ಜಾಯ್ನ್ ಆಗಿ. ಎಕ್ಸೆಲ್ ಅಷ್ಟೇನೂ ದುಬಾರಿ ಕೋರ್ಸ್ ಅಲ್ಲ. ಹೆಚ್ಚು ದುಡ್ಡು ಪೀಕುವ ಸಂಸ್ಥೆಗಳಿಂದ ದೂರವಿರಿ.


(published in vk mini)