Showing posts with label facebook. Show all posts
Showing posts with label facebook. Show all posts

Tuesday, 4 October 2016

ಸ್ವಚ್ಛವಾಗಿರಲಿ ಸೋಷಿಯಲ್ ಮೀಡಿಯಾ

ಸ್ವಚ್ಛವಾಗಿರಲಿ ಸೋಷಿಯಲ್ ಮೀಡಿಯಾ

ನಿಮ್ಮ ಫೇಸ್‍ಬುಕ್, ಲಿಂಕ್ಡ್‍ಇನ್, ಟ್ವಿಟ್ಟರ್ ಖಾತೆಗಳಿಗೆ ಉದ್ಯೋಗದಾತರು ಆಗಾಗ ಭೇಟಿ ನೀಡುತ್ತಿರುತ್ತಾರೆ. ಅದಕ್ಕಾಗಿ ಅವುಗಳನ್ನು ನೀಟಾಗಿಟ್ಟಿರಿ.

* ನಿಮ್ಮ ಪ್ರೊಫೈಲ್ ನಲ್ಲಿ ನಿಮ್ಮ ಆಸಕ್ತಿಯ ಕ್ಷೇತ್ರಕ್ಕೆ ಸಂಬಂಧಿಸಿದ ಮೌಲ್ಯಯುತವೆನಿಸುವ ಸ್ಟೇಟಸ್, ಅಪ್‍ಡೇಟ್‍ಗಳು ಮಾತ್ರ ಇರಲಿ.
* ಫೇಸ್‍ಬುಕ್‍ನಲ್ಲಿ ಸಿಕ್ಕಸಿಕ್ಕವುಗಳನ್ನೆಲ್ಲ ಶೇರ್ ಮಾಡಬೇಡಿ. ಶೇರ್ ಮಾಡಿದ್ದರೂ ಕೆಲವೇ ದಿನಗಳಲ್ಲಿ ಅವುಗಳನ್ನೆಲ್ಲ ಡಿಲೀಟ್ ಮಾಡಿಬಿಡಿ.
* ಅನವಶ್ಯಕವಾಗಿ ಯಾರಾದರೂ ಟ್ಯಾಗ್ ಮಾಡಿದ್ದರೆ ಅದನ್ನು ನಿಮ್ಮ ಟೈಮ್ ಲೈನ್‍ನಿಂದ ರಿಮೂವ್ ಮಾಡಿರಿ. ನೀವೂ ಇತರರಿಗೆ ಟ್ಯಾಗ್ ಮಾಡಬೇಡಿ.
* ಪ್ರೊಫೈಲ್ನಲ್ಲಿ ನೀವು ನೀಡುವ ಮಾಹಿತಿಗಳು ರೆಸ್ಯೂಂನಂತೆ ಇರಲಿ. ನಿಮ್ಮನ್ನು ನೀವು ಬ್ರಾಂಡ್ ಮಾಡಿಕೊಳ್ಳುವಂತೆ ಇರಲಿ.
* ಟ್ವಿಟ್ಟರ್‍ನಲ್ಲಿ ನಿಮ್ಮ ವೈಯಕ್ತಿಕ ಮಾಹಿತಿ ಬರೆಯಲು ಸೀಮಿತ ಸ್ಥಳಾವಕಾಶ ಇರುತ್ತದೆ. ಅಲ್ಲಿ ನಿಮ್ಮ ವೃತ್ತಿ, ಹವ್ಯಾಸ, ಆಸಕ್ತಿಗಳ ಬಗ್ಗೆ ನಾಲ್ಕು ಲೈನ್ ಬರೆಯಿರಿ. ನಿಮ್ಮ ಬ್ಲಾಗ್ ಇತ್ಯಾದಿಗಳ ಲಿಂಕ್ ನೀಡಿರಿ.
* ಟ್ವಿಟರ್, ಫೇಸ್‍ಬುಕ್, ಲಿಂಕ್ಡ್‍ಇನ್‍ಗಳಲ್ಲಿ ಪೆÇ್ರಫೆಷನಲ್ ಆಗಿ ಕಾಣಿಸುವಂತಹ ಫೋಟೋ ಹಾಕಿ.
* ಲಿಂಕ್ಡ್‍ಇನ್‍ನಲ್ಲಿ ಎಲ್ಲಾ ಮಾಹಿತಿಗಳನ್ನು ಬರೆಯಿರಿ. ಅಲ್ಲಿ ನಿಮ್ಮ ಪೆÇ್ರಫೈಲ್ ಹೇಗೆ ಕಾಣಿಸುತ್ತದೆ ಎಂದು ನೋಡಿ. ಪ್ರೊಫೈಲ್ ಅಂದಗೆಡಿಸುವ ಅಂಶಗಳನ್ನೆಲ್ಲ ಡಿಲೀಟ್ ಮಾಡಿ.
* ನಿಮ್ಮ ಸೋಷಿಯಲ್ ನೆಟ್‍ವರ್ಕಿಂಗ್ ತಾಣಕ್ಕೆ ಯಾರಾದರೂ ಭೇಟಿ ನೀಡಿದಾಗ ಅವರ ಮನಸಿಗೆ ಮುದ ನೀಡುವಂತೆ ನಿಮ್ಮ ಪ್ರೊಫೈಲ್ ಇರಲಿ.
ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸ್ಟೇಟಸ್ ಬೇಡ

ಸೋಷಿಯಲ್ ಮೀಡಿಯಾದಲ್ಲಿ ಇಂತಹ ಸ್ಟೇಟಸ್ ಬೇಡ

ಸೋಷಿಯಲ್ ಮೀಡಿಯಾದಲ್ಲಿ ನೀವಿರುವ ಕಂಪನಿಯ ಬಗ್ಗೆ ಅಥವಾ ಬಾಸ್ ಬಗ್ಗೆ ಈ ಕೆಳಗಿನಂತೆ ಸ್ಟೇಟಸ್‍ಗಳನ್ನು ಹಾಕಬೇಡಿ.

* ನನ್ನ ಬಾಸ್ ಇವತ್ತು ಬೆಳಗ್ಗೆ ಬೆಳಗ್ಗೆನೆ ನನ್ನ ಮೂಡ್ ಹಾಳ್ ಮಾಡಿಬಿಟ್ಟ-ಫೀಲಿಂಗ್ ಆ್ಯಂಗ್ರಿ
* ವಾರದ ರಜೆ ಮುಗೀತು. ಮತ್ತೆ ಸೋಮವಾರ ಬಂತು. ಫೀಲಿಂಗ್ ಬೋರ್.
* ಯಾರಿಗೆ ಬೇಕು ಪ್ರಾಜೆಕ್ಟ್. ಎಲ್ಲಾದರೂ ಹಾಳಾಗಿ ಹೋಗೋಣ ಅನಿಸುತ್ತೆ
* ಸರಿಯಾದ ಸಮಯಕ್ಕೆ ಸ್ಯಾಲರಿ ಕೊಡದ ಕಂಪನಿಯಲ್ಲಿ ಅನಿವಾರ್ಯವಾಗಿ ಕೆಲಸ ಮಾಡುವ ಕರ್ಮ ನನ್ನದು.
* ಸೋಷಿಯಲ್ ಮೀಡಿಯಾದಲ್ಲಿ ನೀವಿರುವ ಕಂಪನಿಯ ಬಗ್ಗೆ ಸಕಾರಾತ್ಮಕವಾಗಿ ಬರೆಯಿರಿ. ಯಾವಾಗಲೂ ನಕಾರಾತ್ಮಕವಾಗಿ ಬರೆಯಬೇಡಿ.
* ಯಾವುದೇ ವ್ಯಕ್ತಿಯನ್ನು ನಿಂದಿಸುವ ಬರಹಗಳು ಬೇಡ.
* ಇಂತಹ ಕಮೆಂಟ್‍ಗಳನ್ನು ಮಾಡುವುದರಿಂದ ನಿಮ್ಮ ವ್ಯಕ್ತಿತ್ವದ ಬಗ್ಗೆಯೇ ಇತರರು ತಪ್ಪಾಗಿ ತಿಳಿದುಕೊಳ್ಳುವ ಸಾಧ್ಯತೆ ಇದೆ.
* ಸೋಷಿಯಲ್ ಮೀಡಿಯಾದಲ್ಲಿ professional ಆಗಿ ವರ್ತಿಸಿ.
* ನಿಮ್ಮ ಕಮೆಂಟ್‍ಗಳನ್ನು ನಿಮ್ಮ ಕಂಪನಿಗೆ ಸಂಬಂಧಪಟ್ಟ ವ್ಯಕ್ತಿಗಳು ಅವಲೋಕಿಸುತ್ತಿರಬಹುದು. ಎಚ್ಚರಿಕೆಯಿಂದ ಇರಿ.
ಫೇಸ್‍ಬುಕ್‍ನಲ್ಲಿ ನಿಮ್ಮ ಸ್ಟೇಟಸ್ ಹೇಗಿದೆ?

ಫೇಸ್‍ಬುಕ್‍ನಲ್ಲಿ ನಿಮ್ಮ ಸ್ಟೇಟಸ್ ಹೇಗಿದೆ?

ಉದ್ಯೋಗ ಹುಡುಕುವವರು ಮತ್ತು ಈಗಾಗಲೇ ಉದ್ಯೋಗದಲ್ಲಿರುವವರು ಫೇಸ್‍ಬುಕ್‍ನಲ್ಲಿ ತಮ್ಮ ಘನತೆ, ಗೌರವಗಳನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಸ್ಟೇಟಸ್ ಹೆಚ್ಚಿಸುವ ಮತ್ತು ಕಡಿಮೆಗೊಳಿಸುವ ಶಕ್ತಿ ಫೇಸ್‍ಬುಕ್ ಸ್ಟೇಟಸ್‍ಗೆ ಇದೆ.

* ಫೇಸ್‍ಬುಕ್ ಅನ್ನು ನಿಮ್ಮ ಕರಿಯರ್ ಪ್ರಗತಿಗೆ ಬಳಸಿ.
* ಫೇಸ್‍ಬುಕ್‍ನಲ್ಲಿ ನೀವು ಉದ್ಯೋಗ ಮಾಡುತ್ತಿರುವ ಕಂಪನಿಯ ಬಗ್ಗೆ ಕೆಟ್ಟದ್ದಾಗಿ ಬರೆಯಬೇಡಿ.
* ನಿಮ್ಮ ಪ್ರತಿಸ್ಪರ್ಧಿ ಕಂಪನಿಯ ಬಗ್ಗೆಯೂ ಕೆಟ್ಟದ್ದಾಗಿ ಬರೆಯಬೇಡಿ. ಯಾರಿಗೊತ್ತು ಆ ಕಂಪನಿಯಲ್ಲೂ ಭವಿಷ್ಯದಲ್ಲಿ ನೀವು ಕೆಲಸ ಮಾಡಬೇಕಾಗಬಹುದು.
* ನೀವಿನ್ನೂ ಉದ್ಯೋಗ ಹುಡುಕುವ ಹಂತದಲ್ಲಿದ್ದಾರೆ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖರನ್ನು ಫ್ರೆಂಡ್ ಮಾಡಿಕೊಳ್ಳಿ. ಅವರಲ್ಲಿ ಆಗಾಗ ಸಲಹೆ ಸೂಚನೆಗಳನ್ನು ಕೇಳುತ್ತ ಇರಿ.
* ನಿಮ್ಮ ಆಸಕ್ತಿಯ ಕ್ಷೇತ್ರಗಳಿಗೆ ಸಂಬಂಧಿಸಿದ ಇತರರ ಪೆÇೀಸ್ಟ್‍ಗಳಿಗೆ ಉತ್ತಮವಾಗಿ ಕಮೆಂಟ್ ಮಾಡಿ. ಒಳ್ಳೆಯ ಭಾಷೆಯಲ್ಲಿ ಕಮೆಂಟ್ ಬರೆಯಿರಿ. ಅಕ್ಷರ ತಪ್ಪು ಮಾಡಬೇಡಿ.
* ಧರ್ಮ, ರಾಜಕೀಯದ ವಿಷಯಗಳ ಕುರಿತು ಫೇಸ್‍ಬುಕ್‍ನಲ್ಲಿ ಕೆಸರೆರಚಾಟ ಬೇಡ.
* ಅಶ್ಲೀಲವೆನಿಸುವ ಪೆÇೀಸ್ಟ್‍ಗಳನ್ನು ಲೈಕ್ ಮಾಡಬೇಡಿ.
* ನಿಮ್ಮ ಈಗಿನ ಅಥವಾ ಭವಿಷ್ಯದ ಉದ್ಯೋಗದಾತರು ಫೇಸ್‍ಬುಕ್‍ನಲ್ಲಿ ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದುಕೊಂಡು ಸ್ಟೇಟಸ್ ಬರೆಯಿರಿ.
* ಫೇಸ್‍ಬುಕ್ ನಿಮ್ಮ ಸ್ಟೇಟಸ್ ಹೆಚ್ಚಿಸಲಿ. ನಿಮ್ಮ ಸ್ಟೇಟಸ್‍ಗೆ ಕುಂದು ಉಂಟುಮಾಡದೆ ಇರಲಿ.

 
ಫೇಸ್‍ಬುಕ್‍ನಲ್ಲಿ ಏನು ಪೋಸ್ಟ್ ಮಾಡುವಿರಿ?

ಫೇಸ್‍ಬುಕ್‍ನಲ್ಲಿ ಏನು ಪೋಸ್ಟ್ ಮಾಡುವಿರಿ?

ನಾನು ತುಂಬಾ ಖುಷಿಯಾಗಿದ್ದೇನೆ ಇವತ್ತು',ಫೀಲಿಂಗ್ ಅಲೊನ್',ನಾನು ಯಾರನ್ನೂ ಕೇರ್ ಮಾಡೋಲ್ಲ',ಹಾಳಾಗಿ ಹೋಗು' ಇದೆಲ್ಲ ಇತ್ತೀಚೆಗೆ ಫೇಸ್‍ಬುಕ್‍ನಲ್ಲಿ ಕೆಲವರು ಹಾಕುವ ಸ್ಟೇಟಸ್‍ನ ಸ್ಯಾಂಪಲ್ ಅಷ್ಟೇ. ವೃತ್ತಿಪರ ಜೀವನಕ್ಕೆ ಪ್ರವೇಶಿಸುವವರು ಅಥವಾ ಈಗಾಗಲೇ ಜಾಬ್‍ನಲ್ಲಿರುವವರು ಫೇಸ್‍ಬುಕ್‍ನಲ್ಲಿ ಹೀಗೆಲ್ಲ ಹುಚ್ಚುಚ್ಚಾಗಿ ಸ್ಟೇಟ್‍ಮೆಂಟ್ ಕೊಡುತ್ತಿರಬಾರದು.

ನೀವು ಹಾಕುವ ಯಾವುದೇ ಸ್ಟೇಟ್‍ಮೆಂಟ್ ಅನ್ನು ನಿಮ್ಮ ಬಾಸ್ ಅಥವಾ ನಿಮ್ಮ ಕ್ಲಯೆಂಟ್ ಓದಿದರೆ ಹೇಗಿರುತ್ತೆ? ಅವರು ಓದಿದರೆ ನಿಮ್ಮ ಬಗ್ಗೆ ಕೆಟ್ಟದ್ದಾಗಿ ತಿಳಿದುಕೊಳ್ಳುವ ಸಾಧ್ಯತೆ ಇದೆಯೇ? ಇದರ ಬದಲು ಅವರಿಗೂ "ಇವನು ನನ್ನ ಉದ್ಯೋಗಿ' ಎಂದು ಹೆಮ್ಮೆ ಮೂಡಿಸುವಂತಹ ಸ್ಟೇಟಸ್‍ಗಳನ್ನು ಹಾಕಿ. ಸಾಧ್ಯವಾದರೆ ಕಂಪನಿಯ ಕುರಿತು ಸಕಾರಾತ್ಮಕ ವರದಿಗಳನ್ನು ಹಂಚಿಕೊಳ್ಳುತ್ತ ಇರಿ.
ಯಾವತ್ತೂ ಸೋಷಿಯಲ್ ಮೀಡಿಯದಲ್ಲಿ ಕೆಟ್ಟ ಭಾಷೆ ಬಳಸಿ ಬರೆಯಬೇಡಿ. ಅದು ನಿಮ್ಮ ಪ್ರತಿಷ್ಠೆಯನ್ನು ಮಣ್ಣು ಪಾಲು ಮಾಡಿಬಿಡಬಹುದು. ನೀವು ಹಾಕುವ ಸ್ಟೇಟಸ್ ಮತ್ತು ಮಾಡುವ ಕಮೆಂಟ್ ಅನ್ನು ಹಲವು ಬಾರಿ ಓದಿ ಸಹ್ಯವಾಗಿದೆ ಎಂದು ಖಾತ್ರಿ ಪಡಿಸಿಕೊಂಡು ಶೇರ್ ಮಾಡಿ. ಧರ್ಮ, ಜಾತಿ, ಮಹಿಳೆಯರು, ದೇಹದ ಬಣ್ಣ, ರಾಜಕೀಯ ಇತ್ಯಾದಿಗಳ ಕುರಿತು ಮಾಹಿತಿ ಹಂಚಿಕೊಳ್ಳುವಾಗ ವಿಶೇಷ ಎಚ್ಚರಿಕೆ ವಹಿಸಿ.

ಇಲ್ಲವಾದರೆ ನೀವು ಪೆÇಲೀಸ್ ಸ್ಟೇಷನ್ ಮುಖ ನೋಡಬೇಕಾಗಬಹುದು. ಕುಟುಂಬ ಅಥವಾ ಇನ್ನಿತರ ವಿಷಯಗಳಿಗೆ ಸಂಬಂಧಿಸಿದ ಹೆಚ್ಚು ಭಾವನಾತ್ಮಕ ವಿಷಯಗಳನ್ನು ಹಂಚಿಕೊಳ್ಳಬೇಡಿ. ಆಫೀಸ್‍ನಲ್ಲಿ ಕೆಲಸ ಮಾಡುವ ಸಮಯದಲ್ಲಿ ಯಾವುದೇ ಸ್ಟೇಟಸ್ ಹಂಚಿಕೊಳ್ಳಬೇಡಿ. ಈ ರೀತಿ ಮಾಡಿದರೆ ನೀವು ಆಫೀಸ್‍ನಲ್ಲಿ ಕಾಲಹರಣ ಮಾಡುತ್ತಿರುವಿರಿ ಎಂದು ಇತರರು ತಿಳಿದುಕೊಳ್ಳಬಹುದು.
ಸೋಷಿಯಲ್ ಮೀಡಿಯಾದ ಸದ್ಭಳಕೆ

ಸೋಷಿಯಲ್ ಮೀಡಿಯಾದ ಸದ್ಭಳಕೆ

ಒಂದಾನೊಂದು ಕಾಲದಲ್ಲಿ ಕೆಲಸ ಪಡೆಯಲು ನಿಮ್ಮ ರೆಸ್ಯೂಂ ಮತ್ತು ಸಂದರ್ಶನ ಸಾಕಿತ್ತು. ಆದರೆ, ಈಗಿನ ಫೇಸ್‍ಬುಕ್, ಟ್ವಿಟ್ಟರ್ ಮತ್ತು ಲಿಂಕ್ಡ್‍ಇನ್ ಕಾಲದಲ್ಲಿ ರೆಸ್ಯೂಂ ಮತ್ತು ಸಂದರ್ಶನ ಮಾತ್ರ ನಿಮಗೆ ಕೆಲಸ ಕೊಡಿಸುವುದಿಲ್ಲ. ಈಗ ಅಂದವಾಗಿ ಉಡುಗೆತೊಡುಗೆ ತೊಟ್ಟ ಉದ್ಯೋಗಿಯು ಸೋಷಿಯಲ್ ಮೀಡಿಯಾದಲ್ಲಿ ಹೇಗಿರುತ್ತಾನೆ, ಆತನ ನಿಜವಾದ ಬಣ್ಣವೇನು ಎಂದು ಕಂಪನಿಗಳು ತಿಳಿದುಕೊಳ್ಳುತ್ತವೆ. ನೀವು ಹಾಲು ಕುಡಿಯುವ ಹುಡುಗನಂತೆ ಇಂಟರ್‍ವ್ಯೂನಲ್ಲಿ ಪೆÇೀಸ್ ನೀಡಿರಬಹುದು. ಆದರೆ, ಫೇಸ್‍ಬುಕ್‍ನಲ್ಲಿ ಆಲ್ಕೊಹಾಲ್ ಕುಡಿದು ಪೆÇೀಸ್ ನೀಡಿರಬಹುದು. ಅದು ಉದ್ಯೋಗಾದಾತರ ಕಣ್ಣಿಗೆ ಬಿದ್ದರೆ ನಿಮಗೆ ಉದ್ಯೋಗ ಸಿಗುವುದು ಕಷ್ಟವಾಗಬಹುದು. ಅದು ನನ್ನ ಪರ್ಸನಲ್ ಲೈಫ್ ಎಂದುಕೊಂಡರೆ ನಿಮಗೇ ನಷ್ಟ.
ಇದರೊಂದಿಗೆ ನೀವು ಸೋಷಿಯಲ್ ಮೀಡಿಯಾಗಳಲ್ಲಿ ಯಾವ ರೀತಿ ವರ್ತಿಸುತ್ತೀರಿ, ನಿಮ್ಮ ಆಸಕ್ತಿಯ ಕ್ಷೇತ್ರಗಳೇನು? ಯಾವ ರೀತಿ ಕಾಮೆಂಟ್ ಮಾಡುವಿರಿ ಎಂದೆಲ್ಲ ತಿಳಿದುಕೊಳ್ಳುತ್ತಾರೆ. ಹೀಗಾಗಿ ಸೋಷಿಯಲ್ ಮೀಡಿಯಾದಲ್ಲಿ ಪೆÇ್ರಫೆಷನಲ್ ಆಗಿ ವರ್ತಿಸಿರಿ. ಅಲ್ಲಿ ನಿಮ್ಮನ್ನು ನೀವು ಬ್ರಾಂಡ್ ಮಾಡಿಕೊಳ್ಳಿ. ನಿಮ್ಮನ್ನು ಇಷ್ಟಪಡುವ ಗುಂಪನ್ನು ಸೃಷ್ಟಿಸಿಕೊಳ್ಳಿ. ಒಂದಿಷ್ಟು ಜನಪ್ರಿಯತೆ ಪಡೆಯಿರಿ. ಹಾಗಂತ, ಧರ್ಮ, ರಾಜಕೀಯ ಇತ್ಯಾದಿ ಗುಂಪುಗಳಲ್ಲಿ ಕಾಲ ಕಳೆಯಬೇಡಿ. ನಿಮ್ಮ ಬ್ಲಾಗ್, ಆಸಕ್ತಿಯ ಕ್ಷೇತ್ರಗಳ ಕುರಿತು ಮಾಹಿತಿ ಹಂಚಿಕೊಳ್ಳುತ್ತ ಆನ್‍ಲೈನ್‍ನಲ್ಲಿ ಒಳ್ಳೆಯ ಇಮೇಜ್ ಕ್ರಿಯೇಟ್ ಮಾಡಿರಿ.