Showing posts with label automobile. Show all posts
Showing posts with label automobile. Show all posts

Friday, 30 September 2016

ಕಾರು ಮಾಡಿಫಿಕೇಷನ್ ಮಾಡಿಸಿಕೊಳ್ಳುವಿರಾ?

ಕಾರು ಮಾಡಿಫಿಕೇಷನ್ ಮಾಡಿಸಿಕೊಳ್ಳುವಿರಾ?

ವಾಹನ ಕಂಪನಿಗಳು ಒಂದು ಕಾರು ಮಾಡೆಲಿನ ವಿವಿಧ ಆವೃತ್ತಿಗಳನ್ನು ಮಾರುಕಟ್ಟೆಗೆ ಬಿಡುತ್ತವೆ. ಆ ಆವೃತ್ತಿಗಳಲ್ಲಿ ಎಂಟ್ರಿ ಲೆವೆಲ್ ಮತ್ತು ಹೈಎಂಡ್ ವರ್ಷನ್‍ಗಳಿರುತ್ತವೆ. ಹೈಎಂಡ್ ಆವೃತ್ತಿಯಲ್ಲಿರುವ ವಿವಿಧ ಫೀಚರುಗಳು ಎಂಟ್ರಿ ಲೆವೆಲ್ ಕಾರಿನಲ್ಲಿ ಇರುವುದೇ ಇಲ್ಲ. ಉದಾಹರಣೆಗೆ
ಸ್ವಿಫ್ಟ್ ವಿಡಿಐನಲ್ಲಿ ಸೆಂಟ್ರಲ್ ಲಾಕಿಂಗ್ ಇದೆ. ಆದರೆ ಎಲ್‍ಎಕ್ಸ್‍ಐ ಮತ್ತು ಎಲ್‍ಡಿಐ ಆವೃತ್ತಿಗಳಲ್ಲಿ ಈ ಫೀಚರ್ ಇಲ್ಲ. ಆಲ್ಟೊ 800 ಎಲ್‍ಎಕ್ಸ್ ಕಾರಿನಲ್ಲಿ ಪವರ್ ಸ್ಟಿಯರಿಂಗ್, ಲೊ ಲೆವೆಲ್ ಫ್ಯೂಯೆಲ್ ವಾರ್ನಿಂಗ್, ಏರ್‍ಬ್ಯಾಗ್ ಇಲ್ಲ. ಆದರೆ ಈ ಫೀಚರುಗಳು ಆಲ್ಟೊ 800 ಎಲ್‍ಎಕ್ಸ್‍ಐನಲ್ಲಿವೆ. ಟಾಟಾ ಸಫಾರಿ ಇಎಕ್ಸ್ ಡಿಕೊರ್‍ನಲ್ಲಿ ಇಂಟಿಗ್ರೇಟೆಡ್ ಮ್ಯೂಸಿಕ್ ಸಿಸ್ಟಮ್ ಇದೆ. ಆದರೆ ಎಲ್‍ಎಕ್ಸ್ ಡಿಕೊರ್‍ನಲ್ಲಿ ಈ ಫೀಚರ್ ಇಲ್ಲ. ಇಂಡಿಕಾ ವಿಸ್ಟಾ ಡಿ90 ವಿಎಕ್ಸ್ ಕಾರಿನಲ್ಲಿ ಟಚ್‍ಸ್ಕ್ರೀನ್ ಡಿಸ್‍ಪ್ಲೇ ಮತ್ತು ಜಿಪಿಎಸ್ ನ್ಯಾವಿಗೇಷನ್ ಇಲ್ಲ. ಆದರೆ ಈ ಫೀಚರುಗಳು ವಿಸ್ಟಾ ಡಿ90 ಝಡ್‍ಎಕ್ಸ್ ಪ್ಲಸ್ ಆವೃತ್ತಿಯಲ್ಲಿ ಇವೆ. ನಿಸ್ಸಾನ್ ಸನ್ನಿ ಎಕ್ಸ್‍ಇ ಆವೃತ್ತಿಯಲ್ಲಿ ಚೈಲ್ಡ್ ಸೇಫ್ಟಿ ಲಾಕ್, ರಿಯರ್ ಡಿಫಾಗರ್ ಇತ್ಯಾದಿ ಫೀಚರುಗಳು ಇಲ್ಲ. ಸನ್ನಿ ಎಕ್ಸ್‍ಎಲ್ ಡೀಸೆಲ್ ಆವೃತ್ತಿಯಲ್ಲಿ ಈ ಎಲ್ಲಾ ಫೀಚರುಗಳಿವೆ.

ಹೀಗೆ ಎಂಟ್ರಿ ಲೆವೆಲ್ ಮತ್ತು ಹೈಎಂಡ್ ಆವೃತ್ತಿಗಳ ಫೀಚರುಗಳು, ವಿಶೇಷತೆಗಳ ನಡುವೆ ಹಲವು ವ್ಯತ್ಯಾಸಗಳು ಇರುತ್ತವೆ. ಕಾರು ಖರೀದಿಸುವಾಗ ಹಣಕಾಸಿನ ಅಭಾವವೋ.. ಅಥವಾ ಇನ್ನಿತರ ಕಾರಣಗಳಿಂದ ಕಡಿಮೆ ಫೀಚರ್‍ಗಳಿರುವ ಕಾರನ್ನು ನೀವು ಖರೀದಿಸಿರಬಹುದು. ಆದರೆ ದಿನಕಳೆದಂತೆ ಬೇಕೆನಿಸಿದರೆ ಹೈಎಂಡ್ ಆವೃತ್ತಿಗಳಲ್ಲಿರುವ ಸೆನ್ಸಾರ್, ಜಿಪಿಎಸ್, ಅಲಾಯ್ ಇತ್ಯಾದಿ ಫೀಚರುಗಳನ್ನು ಅಳವಡಿಸಿಕೊಳ್ಳಬಹುದು.

ಅಲಾಯ್ ವೀಲ್
ಚಕ್ರಗಳಿಗೆ ಅಲಾಯ್ ವೀಲ್ ಅಳವಡಿಸಿದರೆ ಕಾರಿನ ಅಂದ ಹೆಚ್ಚಾಗುತ್ತದೆ. ಇವು ಹಗುರವಾಗಿರುವುದರಿಂದ ಕಾರಿನ ಹ್ಯಾಂಡ್ಲಿಂಗ್, ಪರ್ಫಾಮೆನ್ಸ್ ಸಹ ಹೆಚ್ಚಾಗುತ್ತದೆ. ರಿಮ್ ಬಾಳಿಕೆ ಹೆಚ್ಚಿಸುತ್ತದೆ ಮತ್ತು ರಿಮ್ ಬೆಂಡ್ ಆಗುವ ಸಾಧ್ಯತೆಯನ್ನು ಕಡಿಮೆ ಮಾಡುತ್ತದೆ. ಒಂದು ಸೆಟ್ ಅಲಾಯ್ ವೀಲ್‍ಗೆ ಸುಮಾರು 15-20 ಸಾವಿರ ರೂಪಾಯಿ ವಿನಿಯೋಗಿಸಬೇಕಾಗಬಹುದು. ಇದಕ್ಕಿಂತ ದುಬಾರಿ ಅಲಾಯ್‍ಗಳೂ ದೊರಕುತ್ತವೆ.

ರಿವರ್ಸ್ ಪಾರ್ಕಿಂಗ್ ಸೆನ್ಸಾರ್
ಕಾರ್ ಪಾರ್ಕಿಂಗ್ ಮಾಡುವಾಗ ಕಾರಿನ ಹಿಂಬದಿಯ ಪ್ರದೇಶಗಳು ಸ್ಪಷ್ಟವಾಗಿ ಗೋಚರಿಸುವುದಿಲ್ಲ. ದೊಡ್ಡ ಕಾರುಗಳಲ್ಲಿ ಈ ಸಮಸ್ಯೆ ಹೆಚ್ಚು. ಪಾರ್ಕಿಂಗ್ ಮಾಡುವಾಗ ಹಿಂಬದಿಯ ಗೋಡೆಗೆ, ಬೇರಾವುದೋ ವಾಹನಕ್ಕೆ ಗಾಡಿ ತಾಗಿಸಿದಾಗ `ಛೇ ಕಾರಿನಲ್ಲಿ ಪಾರ್ಕಿಂಗ್ ಸೆನ್ಸಾರ್ ಇದ್ದಿದ್ದರೆ' ಎಂದೆನಿಸಬಹುದು. ಆಫ್ಟರ್ ಮಾರ್ಕೇಟ್ಟಿನಲ್ಲಿ ಇಂತಹ ಪ್ಲಗ್ ಇನ್ ಪಾರ್ಕಿಂಗ್ ಸೆನ್ಸಾರ್‍ಗಳು ಸಿಗುತ್ತವೆ. ಇವನ್ನು ನಿಮ್ಮ ಕಾರಿನ ರಿವರ್ಸ್ ಲ್ಯಾಂಪಿನ ಹತ್ತಿರ ಜೋಡಿಸಿ ನಿರಾಳವಾಗಿ ಕಾರನ್ನು ಪಾರ್ಕಿಂಗ್ ಮಾಡಬಹುದು. ಇದನ್ನು ಅಳವಡಿಸಲು ನೀವು 3 ಸಾವಿರ ರೂಪಾಯಿಯಿಂದ 10 ಸಾವಿರ ರೂಪಾಯಿ ಆಸುಪಾಸಿನಲ್ಲಿ ಖರ್ಚು ಮಾಡಬೇಕಾಗಬಹುದು.

ರಿಮೋಟ್ ಲಾಕಿಂಗ್
ಇಮೊಬಿಲೈಝರ್ ರಿಮೋಟ್ ಲಾಕಿಂಗ್  ವ್ಯವಸ್ಥೆ ಕಾರಿನಲ್ಲಿದ್ದರೆ ಉತ್ತಮ. ಇದನ್ನು ಕಾರಿಗೆ ಅಳವಡಿಸಲು ಹೆಚ್ಚು ಕಷ್ಟಪಡಬೇಕಿಲ್ಲ. ಇದರ ದರ 4ರಿಂದ 12 ಸಾವಿರ ರೂಪಾಯಿವರೆಗಿದೆ. ಆಟೊಕಾಪ್, ಮೈಕ್ರೊವಿಬಿಬಿ, ಪಿಯೊನಿಕ್ಸ್, ಸಿಲಿಕಾನ್, ನಿಪ್ಪಾನ್ ಇತ್ಯಾದಿ ಕಂಪನಿಗಳ ರಿಮೋಟ್ ಲಾಕಿಂಗ್ ಸಾಧನವನ್ನು ಅಳವಡಿಸಿಕೊಳ್ಳಬಹುದು.

ಲೆದರ್ ಅಪ್‍ಹೊಲೆಸ್ಟ್ರೆ

ಕಾರಿನ ಸೀಟು ಮತ್ತು ಇತರ ಪ್ರಮುಖ ಭಾಗಗಳಲ್ಲಿ ಮೆತ್ತನೆಯ ಚರ್ಮದ ಹೊದಿಕೆ ಇದ್ದರೆ ಚೆನ್ನಾಗಿತ್ತು ಎಂದು ನೀವು ಅಂದುಕೊಂಡಿರಬಹುದು. ಸಂಪೂರ್ಣ ಅಸಲಿ ಲೆದರ್ ಅಪ್‍ಹೊಲೆಸ್ಟ್ರೆ ಅಳವಡಿಸಿಕೊಳ್ಳುವುದು ದುಬಾರಿ. ಯಾಕೆಂದರೆ ಇವುಗಳ ವೆಚ್ಚ ಒಂದು ಲಕ್ಷ ರೂಪಾಯಿಗಿಂತ ಹೆಚ್ಚಿರುತ್ತವೆ. ಆದರೆ ಫಾಕ್ಸ್ ಲೆದರ್ ಹೊದಿಕೆಗಳು ಸುಮಾರು 15 ಸಾವಿರ ರೂಪಾಯಿಗೆ ದೊರಕುತ್ತವೆ. ವಿವಿಧ ಬಣ್ಣದ ಲೆದರ್ ಅಪ್‍ಹೊಲೆಸ್ಟ್ರೆ ಹಾಕಿಕೊಳ್ಳುವ ಮೂಲಕ ನಿಮ್ಮ ಕಾರಿನ ಅಂದ ಹೆಚ್ಚಿಸಿಕೊಳ್ಳಬಹುದು. ಸೆಖೆಗಾಲದಲ್ಲಿ ಇವು ಕೊಂಚ ಹೀಟ್ ಅನಿಸಬಹುದು.

ರಿಯರ್ ವ್ಯೂ ಕ್ಯಾಮರಾ
ನಿಮ್ಮ ಕಾರಿನಲ್ಲಿ ಡಿವಿಡಿ ಡಿಸ್‍ಪ್ಲೇ ಇದ್ದರೆ, ನೇರವಾಗಿ ಅದಕ್ಕ ರಿವರ್ಸ್ ಕ್ಯಾಮರಾವನ್ನು ಕನೆಕ್ಟ್ ಮಾಡಬಹುದು. ಆಕ್ಸೆಸರಿ ಮಾರುಕಟ್ಟೆಯಲ್ಲಿ ಡಿಸ್‍ಪ್ಲೇ ಜೊತೆಗೆ ರಿಯರ್ ವ್ಯೂ ಕ್ಯಾಮರಾಗಳ ಪೂರ್ತಿ ಸೆಟ್ ದೊರಕುತ್ತದೆ. ಕೆಲವೊಂದು ಕಂಪನಿಗಳು ಇಂತಹ ಕಿಟ್‍ನಲ್ಲಿ ಪಾರ್ಕಿಂಗ್ ಸೆನ್ಸಾರ್ ಸಹ ನೀಡುತ್ತವೆ. ಕ್ಯಾಮರಾ ಡಿಸ್‍ಪ್ಲೇಯನ್ನು ಕಾರಿನ ಡ್ಯಾಷ್‍ಬೋರ್ಡಿಗೆ ಜೋಡಿಸಬಹುದು. ಇದಕ್ಕೆ ಸುಮಾರು 3 ಸಾವಿರ ರೂಪಾಯಿಯಿಂದ 12 ಸಾವಿರ ರೂಪಾಯಿ ಖರ್ಚಾಗಬಹುದು.

ಬ್ಲೂಟೂಥ್ ಸಾಧನ
ಕಾರ್ ಡ್ರೈವ್ ಮಾಡುತ್ತ ಮೊಬೈಲ್ ಫೆÇೀನ್ ಬಳಕೆ ಮಾಡುವುದು ತಪ್ಪು. ಆದರೆ ಈಗಿನ ಹೈಎಂಡ್ ಕಾರುಗಳಲ್ಲಿರುವ ಬ್ಲೂಟೂಥ್ ಸಾಧನಗಳು ಆಟೋಮ್ಯಾಟಿಕ್ ಆಗಿ ಕರೆ ಸ್ವೀಕರಿಸಿ ಮಾತನಾಡಲು ಅನುವು ಮಾಡಿಕೊಡುತ್ತವೆ. ಜಾಬ್ರಾ, ಪ್ಲಾಂಟ್ರೊನ್ಕಿಸ್, ಮೊಟೊರೊಲಾ, ನೊಕಿಯಾ ಮುಂತಾದ ಕಂಪನಿಗಳ ಬ್ಲೂಟೂಥ್ ಸಾಧನ ಖರೀದಿಸಿ ಅದನ್ನು ಕಾರಿನ ಸನ್ ವಿಷರ್‍ಗೆ ಕ್ಲಿಪ್ ಮಾಡಿ ನಿಮ್ಮ ಮೊಬೈಲ್ ಫೆÇೀನಿಗೆ ಪೇರ್ ಮಾಡಬಹುದು. ಕೆಲವು ಮ್ಯೂಸಿಕ್ ಪ್ಲೇಯರ್‍ಗಳಲ್ಲಿ ಇಂತಹ ಬ್ಲೂಟೂಥ್ ಸಾಧನ ಇರುತ್ತದೆ.

ಪವರ್ ವಿಂಡೋಸ್
ನಿಮ್ಮ ಕಾರಿನಲ್ಲಿ ಪವರ್ ವಿಂಡೋ ಇಲ್ಲವೆಂದು ಚಿಂತೆ ಮಾಡುವ ಅಗತ್ಯವಿಲ್ಲ. ಕಾರ್ ಆಫ್ಟರ್ ಮಾರ್ಕೇಟ್‍ಗಳಲ್ಲಿ ಪವರ್ ವಿಂಡೋಸ್ ಸಿಸ್ಟಮ್ ಸಹ ದೊರಕುತ್ತವೆ. ಸುಮಾರು 3ರಿಂದ 8 ಸಾವಿರ ರೂಪಾಯಿಗೆ ನಿಮ್ಮ ಕಾರಿಗೆ ಪವರ್ ವಿಂಡೋಸ್‍ಗಳನ್ನು ಅಳವಡಿಸಿಕೊಳ್ಳಬಹುದು.

ಜಿಪಿಎಸ್ಅಪರಿಚಿತ ರಸ್ತೆಗಳಲ್ಲಿ ದಾರಿ ತೋರಿಸುವ ಜಿಪಿಎಸ್ ಸಾಧನಗಳನ್ನು ಸಹ ನಿಮ್ಮ ಕಾರಿಗೆ ಅಳವಡಿಸಿಕೊಳ್ಳಬಹುದು. ಈಗ ಹೆಚ್ಚಿನ ಸ್ಮಾರ್ಟ್‍ಫೆÇೀನ್‍ಗಳಲ್ಲೂ ಜಿಪಿಎಸ್ ಸಾಧನವಿದೆ. ಇವಿಷ್ಟು ಮಾತ್ರವಲ್ಲದೇ ನಿಮ್ಮ ಕಾರಿಗೆ ಫಾಗ್ ಲ್ಯಾಂಪ್, ಸನ್‍ರೂಫ್‍ಗಳನ್ನು ಅಳವಡಿಸಿಕೊಳ್ಳಬಹುದು. 4-8 ಸಾವಿರ ರೂಪಾಯಿ ವಿನಿಯೋಗಿಸಿದರೆ ಕಾರಿನ ಸ್ಟಿಯರಿಂಗ್ ವೀಲ್‍ಗೆ `ಸ್ಟಿಯರಿಂಗ್ ಆಡಿಯೋ ರಿಮೋಟ್' ಅಳವಡಿಸಿಕೊಳ್ಳಬಹುದು.

ಕಾರ್ ಮಾಡಿಫೈ ಅಂದರೆ ಇಷ್ಟೇ ಅಲ್ಲ. ನಿಮ್ಮಲ್ಲಿ ವೆಚ್ಚ ಮಾಡಲು ಸಾಕಷ್ಟು ಹಣವಿದ್ದರೆ ಟೈರ್, ಎಗ್ಸಾಸ್ಟ್, ಏರ್‍ಫಿಲ್ಟರ್, ಸ್ಪಾರ್ಕ್ ಪ್ಲಗ್ಸ್, ಎಂಜಿನ್ ಸೇರಿದಂತೆ ಕಾರಿನ ಪರ್ಫಾಮೆನ್ಸ್ ವಿಷಯಗಳನ್ನು ಸಹ ಅಪ್‍ಗ್ರೇಡ್ ಮಾಡಿಕೊಳ್ಳಬಹುದು.
ವಾಹನ ಸಾಲ ಪಡೆಯುವುದು ಹೇಗೆ?

ವಾಹನ ಸಾಲ ಪಡೆಯುವುದು ಹೇಗೆ?

ಣವಿದ್ದರೆ ಕಾರು ಖರೀದಿ ಸುಲಭ. ಪೂರ್ತಿ ಕ್ಯಾಷ್ ಕೊಟ್ಟು ಕಾರು ಖರೀದಿಸುವುದು ಒಂದು ವಿಧ. ಆದರೆ ಹೆಚ್ಚಿನವರು ಬ್ಯಾಂಕ್ ಸಾಲ ಪಡೆದು ಕಾರು ಖರೀದಿಸಲು ಇಚ್ಚಿಸುತ್ತಾರೆ. ಕಣ್ಣು ಮುಚ್ಚಿ ಬ್ಯಾಂಕ್‍ನಿಂದ ಸಾಲ ಪಡೆದರೆ ಕಿಸೆಗೆ ಕತ್ತರಿ ಗ್ಯಾರಂಟಿ. ಕಾರು ಸಂಬಂಧಿ ಖರ್ಚುವೆಚ್ಚಗಳನ್ನು ಕಡಿಮೆ ಮಾಡುವಲ್ಲಿ ಅತ್ಯುತ್ತಮ ಬಡ್ಡಿದರದಲ್ಲಿ ದೊರಕಿದ ವಾಹನ ಸಾಲವೂ ನೆರವಾಗುತ್ತದೆ. ಹೀಗಾಗಿ ಸಾಲ ಪಡೆಯುವಾಗ ಉತ್ತಮ ಆಫರನ್ನು ಆಯ್ಕೆ ಮಾಡಿಕೊಳ್ಳುವ ಅವಶ್ಯಕತೆ ಇರುತ್ತದೆ.


ಸ್ಕೀಮ್‍ಗಳು: ವಿವಿಧ ಬ್ಯಾಂಕ್‍ಗಳು ನೀಡುವ ಆಫರುಗಳನ್ನು ಹೋಲಿಕೆ ಮಾಡಿ ನೋಡಿ. ಸಾಲದ ಮೇಲೆ ವಿಸುವ ಬಡ್ಡಿದರವು ಒಂದು ಬ್ಯಾಂಕ್‍ನಿಂದ ಮತ್ತೊಂದು ಬ್ಯಾಂಕ್‍ಗೆ ವ್ಯತ್ಯಾಸವಿರುತ್ತದೆ. ಸಾಲದ ಆಫರುಗಳನ್ನು ತುಲನೆ ಮಾಡಿ ಉತ್ತಮವಾಗಿರುವುದನ್ನು ಆಯ್ಕೆ ಮಾಡಿಕೊಳ್ಳಿ.
ಹೆಚ್ಚುವರಿ ಶುಲ್ಕ: ಕೆಲವೊಂದು ಬ್ಯಾಂಕ್‍ಗಳು ಕಡಿಮೆ ಬಡ್ಡಿದರ ನೀಡಿದರೂ ಹೆಚ್ಚುವರಿ ಶುಲ್ಕಗಳನ್ನು ವಿಸಿರಬಹುದು. ಅಂದ್ರೆ ಶೀಘ್ರ ಮರುಪಾವತಿ ಶುಲ್ಕ, ಸಿಬ್ಬಂದಿ ಶುಲ್ಕ, ಸಂಸ್ಥೆಯ ಖರ್ಚು ಇತ್ಯಾದಿಗಳನ್ನೆಲ್ಲ ವಿಸಿರಬಹುದು. ಎಲ್ಲವನ್ನೂ ತಿಳಿದುಕೊಂಡು ಸಾಲ ಪಡೆಯಿರಿ.

ಡೌನ್‍ಪೇಮೆಂಟ್ ಹೆಚ್ಚಿರಲಿ: ಕಡಿಮೆ ಡೌನ್‍ಪೇಮೆಂಟ್ ನೀಡಿ ಕಾರು ಖರೀದಿಸುವುದು ಅಷ್ಟೇನೂ ಉತ್ತಮವಲ್ಲ. ಹೆಚ್ಚು ಡೌನ್‍ಪೇಮೆಂಟ್ ಮಾಡಿದರೆ ಮುಂದಿನ ಕಂತುಗಳಲ್ಲಿ ಪಾವತಿಸಬೇಕಾದ ಇಎಂಐ ಕಡಿಮೆ ಇರುತ್ತದೆ.
ವಿಮೆ: ಸಾಲ ಪಡೆಯುವುದರ ಜೊತೆಗೆ ಕಾರಿಗೊಂದು ಸೂಕ್ತ ವಿಮಾ ಸೌಲಭ್ಯ ಕಲ್ಪಿಸಿ. ಇದರಿಂದ ಅನಿರೀಕ್ಷಿತ ಅವಘಡ ಸಂ`ವಿಸಿದರೆ ಆರ್ಥಿಕ `ದ್ರತೆ ದೊರಕುತ್ತದೆ.

ಎಲ್ಲಿಂದ ಸಾಲ?
ವಾಹನ ಸಾಲಕ್ಕೆ ಬ್ಯಾಂಕ್‍ಗಳು ಪ್ರಮುಖ ಮೂಲ. ಈಗ ಬ್ಯಾಂಕ್‍ಗಳು ಪೈಪೋಟಿಗೆ ಬಿದ್ದು ಸಾಲ ನೀಡುತ್ತಿವೆ. ಬ್ಯಾಂಕ್‍ಗಳು ಮಾತ್ರವಲ್ಲದೇ ವಾಹನ ಡೀಲರುಗಳು ಮತ್ತು ಕಾರು ಕಂಪನಿಗಳ ನೆರವಿನಿಂದ ನಡೆಯುವ ಹಣಕಾಸು ಸಂಸ್ಥೆಗಳು ಸಹ ಸಾಲ ನೀಡುತ್ತವೆ. ಬ್ಯಾಂಕ್‍ಗಳಿಗೆ ಹೋಲಿಸಿದರೆ ಇವುಗಳು ತ್ವರಿತವಾಗಿ ಸಾಲ ನೀಡುತ್ತವೆ. ಝೀರೋ ಪರ್ಸೆಂಟ್ ಫೈನಾನ್ಸ್‍ನಿಂದ ಹಿಡಿದು ಬಡ್ಡಿರಹಿತ ಸಾಲದವರೆಗೆ ವಿವಿ` ವಾಹನ ಸಾಲಗಳು ಲ`್ಯವಿರುತ್ತವೆ. ಆದರೆ ಕೆಲವು ಸಾಲಗಳಲ್ಲಿ ಡೀಲರ್ ಡಿಸ್ಕೌಂಟ್ಸ್ ಇರುವುದಿಲ್ಲ. ಬ್ಯಾಂಕ್ ಸಾಲಕ್ಕೆ ಹೋಲಿಸಿದರೆ ಸಾಲ ಪಾವತಿಸಬೇಕಾದ ಕಾಲಾವಧಿಯೂ ಕಡಿಮೆ ಇರುತ್ತದೆ.

ಸಾಮಾನ್ಯ ಅರ್ಹತೆಗಳು
* ಕನಿಷ್ಠ ವಯಸ್ಸು: 18 ವರ್ಷ(ವೇತನ ಪಡೆಯುವರಿಗೆ) ಮತ್ತು 21 ವರ್ಷಗಳು(ಸ್ವಉದ್ಯೋಗಿಗಳಿಗೆ).
* ವೇತನ ಪಡೆಯುವವರು: ಪ್ರಸಕ್ತ ಕಂಪನಿಯಲ್ಲಿ ಕನಿಷ್ಠ ಒಂದು ವರ್ಷವಾದರೂ ಕೆಲಸ ಮಾಡಿರಬೇಕು.
* ಸ್ವಉದ್ಯೋಗಿಗಳು: ಕನಿಷ್ಠ 2 ವರ್ಷವಾದರೂ ಬಿಸಿನೆಸ್‍ನಲ್ಲಿ ತೊಡಗಿರಬೇಕು.
* ಸಾಲದ ಮೊತ್ತ: ಕಾರು ಸಾಲದ ಕನಿಷ್ಠ ಮೊತ್ತ ಸುಮಾರು ಒಂದು ಲಕ್ಷ ರೂಪಾಯಿ ಇರುತ್ತದೆ.

ದಾಖಲೆಗಳು
ಸಾಮಾನ್ಯವಾಗಿ ಕಾರು ಸಾಲಕ್ಕಾಗಿ ಈ ಕೆಳಗಿನ ದಾಖಲೆ ಪತ್ರಗಳನ್ನು ನೀಡಬೇಕಾಗುತ್ತದೆ.
ವೇತನ ಪಡೆಯುವವರು
ವಿಳಾಸ ಪ್ರಮಾಣ ಪತ್ರ : (ಈ ಮುಂದಿನವುಗಳಲ್ಲಿ ಯಾವುದಾದರೂ) ಮನೆ `Éೂೀಗ್ಯಪತ್ರ/ವಾಸ ಮತ್ತು ಪರವಾನಿಗೆ ಪತ್ರ, ಪಡಿತರ ಚೀಟೆ, ಮನೆ ತೆರಿಗೆ ರಸೀದಿ, ಹೌಸಿಂಗ್ ಸೊಸೈಟಿ ಬಿಲ್, ಮತದಾರರ ಗುರುತಿನ ಚೀಟಿ, ಪಾಸ್ ಪೆÇೀರ್ಟ್, ಟೆಲಿಫೆÇೀನ್ ಬಿಲ್,  ಕರೆಂಟ್ ಬಿಲ್, ನೀರಿನ ತೆರಿಗೆ ರಸೀದಿ, ವಯರ್‍ಲೆಸ್ ಲ್ಯಾಂಡ್‍ಲೈನ್ ರಸೀದಿ ಇತ್ಯಾದಿಗಳನ್ನು ವಿಳಾಸ ದೃಢೀಕರಣಕ್ಕಾಗಿ ನೀಡಬಹುದು. ಇತ್ತೀಚಿನ ಒಂದು ರಸೀದಿ ಮತ್ತು ಆರು ತಿಂಗಳ ಹಿಂದಿನ ಒಂದು ರಸೀದಿ ನೀಡಬೇಕಾಗುತ್ತದೆ.
ಗುರುತಿನ ಚೀಟಿ: (ಈ ಮುಂದಿನವುಗಳಲ್ಲಿ ಯಾವುದೇ ದಾಖಲೆ)  ಪಾಸ್ ಪೆÇೀರ್ಟ್, ಪಾನ್ ಕಾರ್ಡ್, ಮತದಾರರ ಗುರುತಿನ ಚೀಟಿ, ವಾಹನ ಚಾಲನಾ ಪರವಾನಿಗೆ, ಲಿಮಿಟೆಡ ಕಂಪನಿ ಅಥವಾ `Áರತ ಸರಕಾರದಿಂದ ಪಡೆದಿರುವ ಉದ್ಯೋಗದ ಗುರುತಿನ ಚೀಟಿ, ಸ್ಥಳೀಯ ಪಂಚಾಯಿತಿಯಿಂದ ಪಡೆದ ಗುರುತಿನ ಚೀಟಿ, ಫೆÇೀಟೊ ಜೊತೆ ನೋಟರಿ ದೃಢೀಕರಣ. ಇತ್ತೀಚಿನ ಸ್ಯಾಲರಿ ಸ್ಪಿಪ್ ಜೊತೆ ಫಾರಮ್ 16 ದಾಖಲೆ ಪತ್ರ.

ಸ್ವ ಉದ್ಯೋಗಿಗಳು
ವಿಳಾಸ ದಾಖಲೆ: ಈಗಿನ ಬಿಸಿನೆಸ್ ವಿಳಾಸವಿರುವ ದಾಖಲೆ ಪತ್ರ.
ಐಡೆಂಟೆಟಿ ಪ್ರೂಫ್: (ಇವುಗಳಲ್ಲಿ ಯಾವುದಾದರೂ) ಪಾಸ್ ಪೆÇೀರ್ಟ್, ಪಾನ್ ಕಾರ್ಡ್, ಮತದಾನದ ಗುರುತಿನ ಚೀಟಿ, ಚಾಲನಾ ಪರವಾನಿಗೆ ಪತ್ರ, ಇತ್ತೀಚಿನ ಮಾರಾಟ ತೆರಿಗೆ ಪಾವತಿ ಆದೇಶ ಪತ್ರ , ಸೇಲ್ ಟ್ಯಾಕ್ಸ್ ರಿಜಿಸ್ಟ್ರೇಷನ್ ಸರ್ಟಿಫಿಕೆಟ್ ಇತ್ಯಾದಿ.
ಆದಾಯ ದಾಖಲೆ: ಇತ್ತೀಚಿನ ಇನ್‍ಕಂ ಟ್ಯಾಕ್ಸ್ ರಿಟರ್ನ್

ಪಾಲುದಾರ ಕಂಪನಿಯಾಗಿದ್ದರೆ:
ವಿಳಾಸ ದಾಖಲೆ: ಈಗಿನ ಕಂಪನಿ ಅಥವಾ ವಹಿವಾಟಿನ ವಿಳಾಸವಿರುವ ದಾಖಲೆ ಪತ್ರ.
ಗುರುತಿನ ಚೀಟಿ: (ಇವುಗಳಲ್ಲಿ ಯಾವುದಾದರೂ) ಪಾಟ್ನರ್‍ಷಿಪ್ ಪತ್ರ, ಶಾಪ್ ಆ್ಯಂಡ್ ಎಸ್ಟಾಬ್ಲಿಷ್‍ಮೆಂಟ್ ಆ್ಯಕ್ಟ್ ಸರ್ಟಿಫಿಕೆಟ್, ಇತ್ತೀಚಿನ ತೆರಿಗೆ ಪಾವತಿ ಆದೇಶ ಪತ್ರ, ಮಾರಾಟ ತೆರಿಗೆ ದಾಖಲೆ ಪತ್ರ.
ಆದಾಯ ದಾಖಲೆ: ಅಡಿಟೆಡ್ ಬ್ಯಾಲೆನ್ಸ್ ಷೀಟ್, ಲಾ` ಮತ್ತು ನಷ್ಟದ ದಾಖಲೆ(ಇತ್ತೀಚಿನ ಎರಡು ವರ್ಷ) ಮತ್ತು ಕಂಪನಿಯ ಇತ್ತೀಚಿನ ಎರಡು ವರ್ಷದ ಐಟಿ ರಿಟರ್ನ್.

ಪ್ರೈವೇಟ್ ಲಿಮಿಟೆಡ್ ಕಂಪನಿಯಾಗಿದ್ದರೆ:
ವಿಳಾಸ ದಾಖಲೆ: ಈಗಿನ ಕಂಪನಿ ಅಥವಾ ವಹಿವಾಟಿನ ವಿಳಾಸವಿರುವ ದಾಖಲೆ ಪತ್ರ.
ಗುರುತಿನ ಚೀಟಿ: ಮೆಮೊರಡಮ್ ಮತ್ತು ಆರ್ಟಿಕಲ್ ಆಫ್ ಅಸೋಸಿಯೇಷನ್(ರಿಜಿಸ್ಟ್ರೇಷನ್ ಸರ್ಟಿಫಿಕೇಟ್‍ನೊಂದಿಗೆ).
ಆದಾಯ ದಾಖಲೆ: ಅಡಿಟೆಡ್ ಬ್ಯಾಲೆನ್ಸ್ ಷೀಟ್, ಲಾ` ನಷ್ಟ ದಾಖಲೆ(ಇತ್ತೀಚಿನ ಎರಡು ವರ್ಷಗಳದ್ದು ಮತ್ತು ಕಂಪನಿಯ ಇತ್ತೀಚಿನ ಐಟಿ ರಿಟರ್ನ್.

- Praveen Chandra Puttur

Thursday, 29 September 2016

ಮಳೆಗಾಲದಲ್ಲಿ ಕಾರಿನ ಕಾಳಜಿ ಹೇಗಿರಬೇಕು?

ಮಳೆಗಾಲದಲ್ಲಿ ಕಾರಿನ ಕಾಳಜಿ ಹೇಗಿರಬೇಕು?

ಮಳೆಗಾಲದಲ್ಲಿ ಕಾರಿನ ಕಾಳಜಿ ಹೇಗಿರಬೇಕು? ಡ್ರೈವಿಂಗ್ ಮಾಡುವಾಗ ಅನುಸರಿಸಬೇಕಾದ ಮುನ್ನೇಚರಿಕೆ ಕ್ರಮಗಳೇನು? ಮಾನ್ಸೂನ್‍ನಲ್ಲಿ ಡ್ರೈವಿಂಗ್ ಮಾಡುವ ಸಮಸ್ತ ವಾಹನ ಚಾಲಕರಿಗೆ ಅನುಕೂಲವಾಗುವಂತಹ ಸಲಹೆಗಳು ಇಲ್ಲಿವೆ.




ಮಾರ್ಗಶಿರ, ಪುಷ್ಯ, ಮಾಘ, ಪಾಲ್ಗುಣ, ಚೈತ್ರ, ವೈಶಾಖ, ಜೇಷ್ಠ.... ಹೀಗೆ ಒಂದೊಂದೇ ಮಾಸಗಳು ಮುಗಿದು ಮಳೆ ಶುರುವಾಗುತ್ತಿದೆ. ವರ್ಷ ಋತುವಿನಲ್ಲಿ ಹ್ಯಾಪಿಯಾಗಿ ಉಲ್ಲಾಸ, ಉತ್ಸಾಹದಿಂದ ಡ್ರೈವಿಂಗ್ ಮಾಡುವುದು ನಿಮಗೆ ಇಷ್ಟವಾಗಿರಬಹುದು. ಅಥವಾ ಮಳೆಯಲ್ಲಿ ಕಾರಿನ ಸಹವಾಸವೇ ಬೇಡವೆಂದು ತೀರ್ಮಾನಿಸಿರಬಹುದು. ಮಳೆಗಾಲದಲ್ಲಿ ವಾಹನಗಳ ಕುರಿತು ಹೆಚ್ಚುವರಿ ಕಾಳಜಿ ತೆಗೆದುಕೊಳ್ಳಬೇಕು. ಈ ಸಮಯದಲ್ಲಿ ನಿಮ್ಮಂತೆ ನಿಮ್ಮ ಕಾರಿಗೂ ಥಂಡಿಯಾಗಬಹುದು.

ಕಾರು ಏರುವ ಮುನ್ನ
- ಮೊದಲನೆಯದಾಗಿ ನಿಮ್ಮ ಕಾರಿನ ಕಂಡಿಷನ್ ಹೇಗಿದೆ ಎಂದು ಪರಿಶೀಲಿಸಿ. ಅಂದರೆ ಟೈರ್, ಬ್ರೇಕ್, ವೈಪರ್ ಇವೆಲ್ಲ ಸಮರ್ಪಕವಾಗಿ ಕೆಲಸ ಮಾಡುವುದೇ ಚೆಕ್ ಮಾಡಿ. ಸರಿಯಾಗಿ ಕೆಲಸ ಮಾಡುತ್ತಿಲ್ಲವೆಂದಾದರೆ ಬದಲಾಯಿಸಿ ಅಥವಾ ಸರಿಪಡಿಸಿ.
- ಟೈರ್ ಗುಣಮಟ್ಟ ಹೇಗಿದೆಯೆಂದು ತಿಳಿದುಕೊಳ್ಳಿ. ಟೈರ್ ಟ್ರೀಡ್ ಸವೆದಿರುವುದೇ? ಚಿಕ್ಕ ಮುಳ್ಳು ಚುಚ್ಚಿದರೂ ಠುಸ್ಸೆನ್ನಬಹುದೇ? ಪರಿಶೀಲಿಸಿ. ಮಳೆಗಾಲದಲ್ಲಿ ಟೈರ್ ಗುಣಮಟ್ಟ ಪರಿಶೀಲಿಸಿಯೇ ಕಾರು ಏರಿ.

- ಮಳೆಗಾಲದಲ್ಲಿ ಕಾರಿನ ಬೆಳಕಿನ ವ್ಯವಸ್ಥೆ ಹೆಚ್ಚು ಸಮರ್ಪಕವಾಗಿರಬೇಕು. ಹೆಡ್‍ಲೈಟ್ ಬೀಮ್‍ಗಳು ಸರಿಯಾಗಿ ಫೆÇೀಕಸ್ ಆಗುವುದೇ ಗಮನಿಸಿ. ಪಾರ್ಕಿಂಗ್ ಲೈಟ್, ಫಾಗ್ ಲ್ಯಾಂಪ್‍ಗಳನ್ನೂ ಪರಿಶೀಲಿಸಿ. ಉರಿಯದ ಬಲ್ಬ್‍ಗಳನ್ನು ಬದಲಾಯಿಸಿ.
- ಬ್ರೇಕ್, ಆಕ್ಸಿಲರೇಟರ್, ಕ್ಲಚ್ ಪೆಡಲ್‍ಗಳನ್ನು ಗಮನಿಸಿ. ಅವುಗಳ ಮೇಲಿರುವ ರಬ್ಬರ್ ಸವೆದಿದ್ದರೆ ಬದಲಾಯಿಸಿ. ಮಳೆಗಾಲದಲ್ಲಿ ಬ್ರೇಕ್ ಸರಿಯಾಗಿ ಹಿಡಿಯಲು ಪೆಡಲ್‍ಗಳು ಉತ್ತಮ ಕಂಡಿಷನ್‍ನಲ್ಲಿರುವುದು ಅಗತ್ಯ.
- ಕಾರಿನೊಳಗೆ ನೀರು ನುಗ್ಗುವ ಸಾ`್ಯತೆಗಳನ್ನು ಕಡಿಮೆ ಮಾಡಿ. ಡ್ರೈನ್ ಹೋಲ್ ಪ್ಲಗ್, ಕಾರಿನ ಕಿಟಕಿ ಮತ್ತು ಬಾಗಿಲಿನ ರಬ್ಬರ್ ಬೀಡಿಂಗ್‍ಗಳನ್ನು ಪರಿಶೀಲಿಸಿ. ಇವುಗಳನ್ನು ಸರಿಪಡಿಸುವುದರಿಂದ ಕೇವಲ ನೀರು ಒಳಬರುವುದನ್ನು ತಡೆಯುವುದು ಮಾತ್ರವಲ್ಲದೇ ಶಾರ್ಟ್‍ಸಕ್ರ್ಯೂಟ್ ಅಪಾಯಗಳು ಕಡಿಮೆಯಾಗುತ್ತವೆ.
- ಕಾರಿನ ವೈಪರ್ ಸಮರ್ಪಕವಾಗಿ ಕೆಲಸ ಮಾಡುವುದೇ ಪರಿಶೀಲಿಸಿರಿ, ಮುಂ`Áಗದ ವೈಂಡ್ ಶೀಲ್ಡ್ ಗಾಜು ಶು`್ರವಾಗಿರಲಿ.
- ಸುರಕ್ಷತೆಯ ಕಿಟ್‍ಗಳು: ಕಾರಿನೊಳಗೆ ಫಸ್ಟ್ ಏಯ್ಡ್ ಬಾಕ್ಸ್, ಟಾರ್ಚ್, ಕೊಡೆ ಇತ್ಯಾದಿಗಳಿರಲಿ.

ಕಾರು ಏರಿದ ನಂತರ
ಈಗಿನ ಹೆಚ್ಚಿನ ವಾಹನಗಳಿಗೆ, ಅವುಗಳ ಎಂಜಿನ್‍ಗಳಿಗೆ ನೀರು ಅಪಾಯಕಾರಿಯಲ್ಲ. ಆದರೆ ಮಳೆಗಾಲದಲ್ಲಿ ಕಲುಷಿತ ನೀರು ಎಂಜಿನ್ ಇತ್ಯಾದಿಗಳಿಗೆ ಹಾನಿ ಮಾಡಬಹುದು. ಜೊತೆಗೆ ಮಳೆಗಾಲದಲ್ಲಿ ಡ್ರೈವಿಂಗ್ ಮಾಡುವಾಗ ಹೆಚ್ಚಿನ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಾದ ಅವಶ್ಯಕತೆಯೂ ಇದೆ.
-ಅನಿವಾರ್ಯತೆ ಇಲ್ಲದಿದ್ದರೆ ಜಲಾವೃತ ರಸ್ತೆಗಳಲ್ಲಿ ಸಂಚರಿಸಬೇಡಿ. ಪ್ರಯಾಣಿಸುವುದು ಅನಿವಾರ್ಯವೆಂದಾದರೆ ಆದಷ್ಟು ಎತ್ತರದ `Áಗಗಳಲ್ಲಿ ಚಲಾಯಿಸಿ. ನೀರು ಎಷ್ಟು ಆಳವಿದೆ ಎಂದು ಖಚಿತವಾಗಿ ತಿಳಿಯದಿದ್ದರೆ, ಆ ರಸ್ತೆಯ ಪರಿಚಯ ನಿಮಗಿಲ್ಲದಿದ್ದರೆ ನೀರು ಕಡಿಮೆಯಾಗುವರೆಗೆ ಕಾಯುವುದು ಶ್ರೇಯಸ್ಸು.
- ಎಂಜಿನ್ ಜಾಮ್ ಆಗುವುದನ್ನು ತಪ್ಪಿಸಲು ನಿ`Áನವಾಗಿ ಕಾರು ಚಲಾಯಿಸಿ. ಪ್ರವಾಹದ ವಿರುದ್ಧ ದಿಕ್ಕಿಗೆ ಡ್ರೈವಿಂಗ್ ಮಾಡಬೇಡಿ. ವೇಗದ ಪ್ರಯಾಣ ಬೇಡ. ಜಲಾವೃತ ರಸ್ತೆಯಲ್ಲಿ ಟಾಪ್‍ಗಿಯರ್‍ಗಳ ಬಳಕೆ ಬೇಡ. ಲೋ ಗಿಯರ್‍ನಲ್ಲಿ ಚಲಾಯಿಸಿ.
- ರೇಡಿಯೇಟರ್ ಫ್ಯಾನ್ ಕಾರ್ಯಕ್ಷಮತೆ ಪರೀಕ್ಷಿಸಿಕೊಳ್ಳಿ. ನೀರು ಒಳಹೋದರೆ ಎಂಜಿನ್ ಸ್ಥಗಿತಗೊಳ್ಳುವ ಅಪಾಯವಿದೆ.
- ನಡುನೀರಿನಲ್ಲಿ ಕಾರು ಮೂವ್ ಆಗದಿದ್ದರೆ ಒಂದೇ ಸಮನೆ ಆಕ್ಸಿಲರೇಟರ್ ತುಳಿಯಬೇಡಿ. ಕಾರಿನಿಂದ ಇಳಿದು ಕಾರನ್ನು ತಳ್ಳಿಕೊಂಡು ಬದಿಯಲ್ಲಿ ನಿಲ್ಲಿಸಿ. ಮೆಕಾನಿಕ್ ನೆರವು ಪಡೆಯಿರಿ.
- ಜಲಾವೃತ ರಸ್ತೆಯಲ್ಲಿ ಚಾಲನೆ ಮಾಡುತ್ತಿರುವಾಗ ಏರ್ ಕಂಡಿಷನ್ ಆನ್ ಮಾಡದಿರಿ. ಕಾರಿನ ಸೆಂಟ್ರಲ್ ಲಾಕಿಂಗ್ ಆನ್ ಮಾಡಬೇಡಿ. ಎಲ್ಲಾದರೂ ಶಾರ್ಟ್ ಸಕ್ರ್ಯೂಟ್ ಆದರೆ ಲಾಕಿಂಗ್ ಸಿಸ್ಟಮ್ ಕೆಲಸ ಮಾಡದೆ ನೀವು ಕಾರಿನೊಳಗೆ ಬಂಯಾಗುವ ಅಪಾಯವಿದೆ. ಕಾರಿನೊಳಗೆ ಹ್ಯಾಮರ್ ಅಥವಾ ಗಟ್ಟಿಯಾದ ವಸ್ತುಗಳಿರಲಿ. ಕಾರಿನೊಳಗೆ ಬಂಯಾದ ಸ್ಥಿತಿಯಲ್ಲಿ ಕಿಟಕಿ ಗಾಜು ಹೊಡೆಯಲು ಇದು ನೆರವಾಗಬಹುದು.
- ಕಾರಿನೊಳಗೆ ನೀರು ನುಗ್ಗಿದರೆ ಇಗ್ನಿಷನ್ ಆನ್ ಮಾಡಬೇಡಿ. ಶಾರ್ಟ್ ಸಕ್ರ್ಯೂಟ್ ಆಗುವ ಅಪಾಯವಿದೆ.  ಮಳೆಗಾಲದಲ್ಲಿ ನೀರಿಗೆ ಸಿಲುಕಿ ಕಾರಿಗೆ ಹಾನಿಯಾದರೆ ಮೆಕಾನಿಕ್‍ಗಳ ನೆರವು ಪಡೆದು ರಿಪೇರಿ ಮಾಡಿ.
ಹೊಸ ಕಾರುಗಳು ಮಳೆಗಾಲದಲ್ಲಿ ಹೆಚ್ಚು ಕಿರಿಕ್ ನೀಡುವುದಿಲ್ಲ. ಆದರೆ ಹಳೆಕಾರುಗಳ ಆರೋಗ್ಯ ಮಳೆಗಾಲದಲ್ಲಿ ಬೇಗ ಕೆಡುತ್ತದೆ.  ಕಾರಿನ ಬಾಡಿಯಲ್ಲಿ ಗೀರುಗಳಾಗಿದ್ದರೆ, ಪೇಂಟ್ ಹೋಗಿದ್ದರೆ ಪೇಂಟ್ ನೀಡಿ. ಮಳೆಗಾಲದಲ್ಲಿ ನೀರು ತಾಗಿ ಇವು ಇನ್ನಷ್ಟು ಅಂದಗೆಡಿಸುತ್ತದೆ. ಇದು ನಿಮ್ಮ ಕಾರಿನ ಮರುಮಾರಾಟ ಮೌಲ್ಯ ಕಡಿಮೆ ಮಾಡುತ್ತದೆ. ಕಾರಿನೊಳಗೆ ರಬ್ಬರ್ ಮ್ಯಾಟ್‍ಗಳನ್ನು ಬಳಸಿ. ಕಾರಿನೊಳಗೆ ಹೆಚ್ಚು ಒದ್ದೆಯಾಗಲು ಅವಕಾಶ ನೀಡಬೇಡಿ. ಹ್ಯಾಪಿ ಜರ್ನಿ.

- Praveen Chandra Puttur


ಡ್ರೈವಿಂಗ್ ಲೈಸನ್ಸ್ ಪಡೆಯುವುದು ಹೇಗೆ?

ಡ್ರೈವಿಂಗ್ ಲೈಸನ್ಸ್ ಪಡೆಯುವುದು ಹೇಗೆ?

ಹೆಚ್ಚಿನ ಜನರು ಡ್ರೈವಿಂಗ್ ಸ್ಕೂಲ್ ಅಥವಾ ಮಧ್ಯವರ್ತಿಗಳ ನೆರವಿನಿಂದಲೇ ವಾಹನ ಚಾಲನಾ ಪರವಾನಿಗೆ ಮಾಡಿಸಿಕೊಳ್ಳುತ್ತಿದ್ದಾರೆ. ಇವರ ನೆರವಿಲ್ಲದೆಯೇ ಎಲ್‍ಎಲ್, ಡಿಎಲ್, ಐಡಿಪಿ ಪಡೆಯುವುದು ಹೇಗೆ?

ವಾಹನ ಚಾಲನಾ ಪರವಾನಿಗೆ  ಹೇಗೆ ಪಡೆದಿರಿ? ಎಂಬ ಪ್ರಶ್ನೆಗೆ ಹೆಚ್ಚಿನ ಜನರು `ಡ್ರೈವಿಂಗ್ ಸ್ಕೂಲ್ ಮೂಲಕ' ಎಂದು ಉತ್ತರಿಸುತ್ತಾರೆ. ಅಪರೂಪಕ್ಕೆ ಕೆಲವರು ಮಾತ್ರ ಯಾವುದೇ ಮಧ್ಯವರ್ತಿಗಳಿಗೆ ಹಲವು ಪಟ್ಟು ದುಡ್ಡು ನೀಡಲು ಇಚ್ಚಿಸದೇ ಸ್ವತಃ ತಾವೇ ಡಿಎಲ್ ಮಾಡಿಸಿಕೊಳ್ಳುತ್ತಾರೆ.

`ಡಿಎಲ್ ಕುರಿತು ಮೊದಲು ಡ್ರೈವಿಂಗ್ ಸ್ಕೂಲ್‍ನವರಲ್ಲಿ ವಿಚಾರಿಸಿದ್ದೆ. ಹೇಗೂ ಫ್ರೆಂಡ್ಸ್ ಕಾರು ಡ್ರೈವಿಂಗ್ ಮಾಡಿದ ಅನುಭವವಿತ್ತು. ಸ್ಕೂಲ್‍ನವರು ವಿದೌಟ್ ಕ್ಲಾಸ್ 2,500 ರೂಪಾಯಿ ಕೇಳಿದ್ರು. ನಂತ್ರ ಆರ್‍ಟಿಒ ಕಚೇರಿಗೆ ಹೋಗಿ ಡಿಎಲ್ ಮಾಡಿಸ್ಕೊಂಡೆ. ಕೆಲವು ನೂರು ರುಪಾಯಿ ಖರ್ಚಾಯಿತು ಅಷ್ಟೇ!' ಎಂದವರು ಬೆಂಗಳೂರಿನ ರಿಚ್‍ಮಂಡ್ ನಿವಾಸಿ ಸುದರ್ಶನ್ ಎಂ.
ವಾಹನ ಚಾಲನೆ ತಿಳಿದಿದ್ದರೂ ಎಲ್‍ಎಲ್, ಡಿಎಲ್ ಪಡೆಯಲು ಮಧ್ಯವರ್ತಿಗಳ ನೆರವು ಪಡೆಯುವರು ಹೆಚ್ಚಿದ್ದಾರೆ. ಸ್ಕೂಲ್ ಮೂಲಕ ಹೋದರೆ ಸುಲಭವಾಗಿ ಪಾಸ್ ಆಗಬಹುದು, ಅರ್ಜಿ, ದಾಖಲೆ ಪತ್ರ ವ್ಯವಹಾರಗಳನ್ನು ಅವರೇ ನಿರ್ವಹಿಸುತ್ತಾರೆ. ಒಂದೆರಡು ಸಾವಿರ ರೂಪಾಯಿ ವ್ಯರ್ಥವಾದರೂ ಪರವಾಗಿಲ್ಲ ಎಂಬ ಮನೋಭಾವ ಹೆಚ್ಚಿನವರದ್ದು. ವಾಹನ ಚಾಲನೆ(ರಿವರ್ಸ್ ಚಾಲನೆ ಸೇರಿದಂತೆ), ಸಂಚಾರ ನೀತಿ ನಿಯಮಗಳ ಸಾಮಾನ್ಯ ಜ್ಞಾನ ಇದ್ದರೆ ಸಾಕು. ಯಾವುದೇ ಕಷ್ಟವಿಲ್ಲದೇ ಲೈಸನ್ಸ್ ಪಡೆಯಬಹುದು.

ಕಲಿಕೆಗೆ ಪರ್ಮಿಟ್(ಎಲ್‍ಎಲ್)
ಡ್ರೈವಿಂಗ್ ಕಲಿಕೆಗೂ ಪರವಾನಿಗೆ ಪಡೆದುಕೊಳ್ಳಬೇಕು. ನೇರ ಆರ್‍ಟಿಒ ಕಚೇರಿಗೆ ಹೋಗಿ ಸಿಎಂವಿ2 ಫಾರ್ಮ್ ಪಡೆಯಿರಿ. ಇದನ್ನು ಆರ್‍ಟಿಒ ವೆಬ್‍ಸೈಟ್‍ನಿಂದಲೂ ಡೌನ್‍ಲೋಡ್ ಮಾಡಿಕೊಳ್ಳಬಹುದು. ಪಾಸ್‍ಪೆÇೀರ್ಟ್ ಗಾತ್ರದ ಮೂರು ಭಾವಚಿತ್ರ, ವಿಳಾಸ ದಾಖಲೆ, ವಯಸ್ಸು ಪ್ರಮಾಣ ಪತ್ರ(ಎಸ್‍ಎಸ್‍ಎಲ್‍ಸಿ ಮಾರ್ಕ್‍ಕಾರ್ಡ್ ಇತ್ಯಾದಿ) ಮತ್ತು 30 ರುಪಾಯಿ ಶುಲ್ಕ ಪಾವತಿಸಿದರೆ ಸಾಕು. ಟೆಸ್ಟ್‍ಗೆ ಯಾವಾಗ ಹಾಜರಾಗಬೇಕು ಎಂದು ಕೇಳಿತಿಳಿದುಕೊಳ್ಳಿ.
ಪರೀಕ್ಷೆ ಎಂದರೆ ಭಯಬೀಳದಿರಿ. ಟ್ರಾಫಿಕ್ ಚಿನ್ಹೆಗಳು, ಸಂಚಾರ ನೀತಿನಿಯಮಗಳ ಬಗ್ಗೆ  ಪ್ರಶ್ನೆಗಳಿರುತ್ತವೆ. ಇದನ್ನು ಇಂಟರ್‍ನೆಟ್‍ನಲ್ಲಿ ಹುಡುಕಿ ಕಲಿಯಬಹುದು ಅಥವಾ ಆರ್‍ಟಿಒ ಕಚೇರಿಗಳ ಗೋಡೆಗಳಲ್ಲಿಯೇ ಈ ಮಾಹಿತಿಗಳು ಇರುತ್ತವೆ. ಎಲ್‍ಎಲ್ ಪಡೆಯಲು ಲಿಖಿತ ಅಥವಾ ಮೌಖಿಕ ಪರೀಕ್ಷೆ ನಡೆಸಲಾಗುತ್ತದೆ. ಲಿಖಿತವಾದರೆ ಆಬ್ಜೆಕ್ಟಿವ್ ಮಾದರಿಯ ಪ್ರಶ್ನೆಗಳಿರುತ್ತವೆ. ಮೌಖಿಕ ಪರೀಕ್ಷೆಯಲ್ಲಿ ಟ್ರಾಫಿಕ್ ಇನ್‍ಸ್ಪೆಕ್ಟರ್ ಕೆಲವು ಪ್ರಶ್ನೆಗಳನ್ನು ಕೇಳುತ್ತಾರೆ. ಹೆಚ್ಚಾಗಿ, ಕೆಲವು ಟ್ರಾಫಿಕ್ ಚಿನ್ಹೆಗಳನ್ನು ತೋರಿಸಿ, ಇದೇನು.. ಇದೇನು ಎಂದು ಪ್ರಶ್ನಿಸುತ್ತಾರೆ. ತಡವರಿಸದೆ ಸರಿಯಾಗಿ ಉತ್ತರಿಸಿದರೆ ಪಾಸ್! ಆಮೇಲೆ ದೃಷ್ಟಿ ದೋಷವಿದೆಯೇ ಎಂದು ಪರಿಶೀಲಿಸಲು ಒಂದು ಕಣ್ಣು ಮುಚ್ಚಲು ಹೇಳಿ ಏನಾದರೂ ಅಕ್ಷರಗಳನ್ನು ಓದಿಸುತ್ತಾರೆ. ಪಾಸ್ ಆದರೆ ಒಂದು ದಿನದಲ್ಲಿ ಎಲ್‍ಎಲ್ ನಿಮಗೆ ದೊರಕುತ್ತದೆ.
ಕೆಲವೊಮ್ಮೆ ಎಲ್‍ಎಲ್ ಕಳೆದುಹೋಗಬಹುದು. ಕಳೆದು ಹೋಗಿರುವುದಕ್ಕೆ ದಾಖಲೆ (ಪೆÇಲೀಸ್ ಕಂಪ್ಲೇಟ್ ಪ್ರತಿ) ಇರಲಿ. ಆರ್‍ಟಿಒಗೆ ಹೋಗಿ ಕೆಎಂವಿ-1ಎ ಫಾರ್ಮ್ ಪಡೆಯಿರಿ. 2 ಪಾಸ್‍ಪೆÇೀರ್ಟ್ ಗಾತ್ರದ ಭಾವಚಿತ್ರ ನೀಡಬೇಕು. ಆರ್‍ಟಿಒ ಕ್ಯಾಷ್ ಕೌಂಟರ್‍ನಲ್ಲಿ 15 ರುಪಾಯಿ ಶುಲ್ಕ ಪಾವತಿಸಿ. ಒಂದು ದಿನದಲ್ಲಿ ಡುಬ್ಲಿಕೇಟ್ ಲರ್ನಿಂಗ್ ಲೈಸನ್ಸ್ ನಿಮ್ಮ ಕೈ ಸೇರಬಹುದು.

ಡ್ರೈವಿಂಗ್ ಲೈಸನ್ಸ್
ವಾಹನ ಚಾಲನೆ ತಿಳಿದಿದ್ದರೆ ಡ್ರೈವಿಂಗ್ ಸ್ಕೂಲ್ ಅವಲಂಬನೆ ಇಲ್ಲದೆಯೇ ಆರ್‍ಟಿಒ ಬಳಿ ಡಿಎಲ್ ಮಾಡಿಸಿಕೊಳ್ಳಬಹುದು. ಎಲ್‍ಎಲ್ ಪಡೆದ 30 ದಿನಗಳ ನಂತರ ಡಿಎಲ್ ಪರೀಕ್ಷೆ ಇರುತ್ತದೆ. ಆರ್‍ಟಿಒ ಕಚೇರಿಯಿಂದ ಸಿಎಂವಿ 4 ಫಾರ್ಮ್ ಪಡೆದು ತುಂಬಬೇಕು. ಪಾಸ್‍ಪೆÇೀರ್ಟ್ ಗಾತ್ರದ ಮೂರು ಭಾವಚಿತ್ರ, ಡಿಎಲ್ ಕಾರ್ಡ್ ದರ 215 ರು ಮತ್ತು ಡ್ರೈವಿಂಗ್ ಟೆಸ್ಟ್ ಶುಲ್ಕ 50 ರು ಪಾವತಿಸಬೇಕು. ವ್ಯಾಲಿಡಿಟಿ ಮುಗಿಯದ ಎಲ್‍ಎಲ್ ಜೊತೆಗಿರಲಿ.
ಡ್ರೈವಿಂಗ್ ಟೆಸ್ಟ್ ಎಂದರೆ ಕೆಲವರಿಗೆ ಭಯ. ಡ್ರೈವಿಂಗ್ ಗೊತ್ತಿದ್ದವರು ಸಹ ಕೆಲವೊಮ್ಮೆ ಭಯಪಟ್ಟು ಫೇಲಾಗುವುದುಂಟು. ಡ್ರೈವಿಂಗ್ ಇನ್‍ಸ್ಪೆಕ್ಟರ್ ಸಾಮಾನ್ಯವಾಗಿ ಫಾರ್ವಡ್ ಅಥವಾ ರಿವರ್ಸ್ ಡ್ರೈವಿಂಗ್ ಟೆಸ್ಟ್ ಮಾಡುವಂತೆ ಹೇಳುತ್ತಾರೆ. ನಿಮ್ಮ ವಾಹನ ಚಾಲನೆ ಇನ್‍ಸ್ಪೆಕ್ಟರ್‍ಗೆ ತೃಪ್ತಿದಾಯಕವೆನಿಸಿದರೆ ಪಾಸ್. ಶೀಘ್ರದಲ್ಲಿ ಡಿಎಲ್ ನಿಮಗೆ ಸಿಗುತ್ತದೆ. ನಪಾಸಾದರೆ  7 ದಿನದ ನಂತರ 50 ರು. ಶುಲ್ಕ ಪಾವತಿಸಿ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಬೇಕು.
ಕೆಲವೊಮ್ಮೆ ಡಿಎಲ್ ಕಳೆದುಹೋಗಬಹುದು. ಡುಬ್ಲಿಕೇಟ್ ಡಿಎಲ್ ಪಡೆಯುವುದು ಕಷ್ಟವಲ್ಲ. ರೋಟರಿಯಿಂದ ಅಫಿಡವಿಟ್ ಮಾಡಿಸಿ. ಆರ್‍ಟಿಒ ಕಚೇರಿಗೆ ಹೋಗಿ ಕೆಎಂವಿ 1 ಅರ್ಜಿ ಪಡೆದು ತುಂಬಿಸಬೇಕು. ಸಂಬಂಧಿತ ದಾಖಲೆಗಳನ್ನು ನೀಡಬೇಕು. ಡಿಎಲ್ ಕಾರ್ಡ್ ಶುಲ್ಕ 215 ರುಪಾಯಿ ನೀಡಬೇಕು.

ಅಂತಾರಾಷ್ಟ್ರೀಯ ಪರ್ಮಿಟ್
ನೀವು ಕೆಲವು ಸಮಯ ವಿದೇಶಕ್ಕೆ ಹೋಗುತ್ತೀರಿ ಎಂದಿರಲಿ. ಅಲ್ಲಿ ವಾಹನ ಚಲಾಯಿಸುವಾಗ ಟ್ರಾಫಿಕ್ ಪೆÇಲೀಸರು ಅಡ್ಡಗಟ್ಟಿದರೆ ಭಾರತದ ಡಿಎಲ್ ತೋರಿಸಿದರೆ ಆಗದು. ಅಂತಾರಾಷ್ಟ್ರೀಯ ಡ್ರೈವಿಂಗ್ ಪರ್ಮಿಟ್(ಇಡಿಪಿ) ನಿಮ್ಮಲ್ಲಿರಬೇಕು.
ಇಡಿಪಿ ಪಡೆಯವುದುದು ಕಷ್ಟವಲ್ಲ. ಆರ್‍ಟಿಒ ಕಚೇರಿಯಿಂದ ಸಿಎಂವಿ 4ಎ ಅಪ್ಲಿಕೇಷನ್ ಪಡೆಯಬೇಕು. 500 ರು. ಶುಲ್ಕ ಪಾವತಿಸಬೇಕು. ಒರಿಜಿನಲ್ ಡಿಎಲ್, ಪಾಸ್‍ಪೋರ್ಟ್, ವೀಸಾ, ವಿಮಾನ ಟಿಕೇಟ್ ಇತ್ಯಾದಿಗಳ ಒಂದು ಪ್ರತಿ ನೀಡಬೇಕು. ಸಿಎಂವಿ1 ಮತ್ತು ಸಿಎಂವಿ1ಎ ಫಾರ್ಮ್‍ನಲ್ಲಿ ಮೆಡಿಕಲ್ ಸರ್ಟಿಫಿಕೇಟ್ ನೀಡಬೇಕು. ಪಾಸ್‍ಪೋರ್ಟ್ ಗಾತ್ರದ ಮೂರು ಭಾವಚಿತ್ರ ನೀಡಬೇಕು. ಖುದ್ದಾಗಿ ಆರ್‍ಟಿಒ ಕಚೇರಿಯಲ್ಲಿ ನೀವೇ ಹಾಜರಾಗಬೇಕು. ಹೊಸ ಡಿಎಲ್ ಪಡೆದು ಮೂರು ತಿಂಗಳು ಕಳೆದಿದ್ದರೆ ಮತ್ತೊಮ್ಮೆ ಡ್ರೈವಿಂಗ್ ಟೆಸ್ಟ್ ಮಾಡಿಸಿಕೊಳ್ಳಬೇಕು. ಡಿಎಲ್ ಮಾಡಿಸಿದ ವ್ಯಾಪ್ತಿಯ ಆರ್‍ಟಿಒ ಕಚೇರಿಯಲ್ಲಿಯೇ ಅಂತಾರಾಷ್ಟ್ರೀಯ ವಾಹನ ಚಾಲನೆ ಪರವಾನಿಗೆಗೆ ಅರ್ಜಿ ಸಲ್ಲಿಸಬೇಕು. ಐಡಿಪಿ ವ್ಯಾಲಿಡಿಟಿ ಒಂದು ವರ್ಷ.

ಎಲ್ಲಾದರೂ ಡಿಎಲ್, ಎಲ್‍ಎಲ್‍ಗೆ ನೀಡಿದ ವಿಳಾಸವನ್ನು ಬದಲಾಯಿಸುವ ಅನಿವಾರ್ಯತೆ ಇದ್ದರೆ ನೀವು ಆರ್‍ಟಿಒ ಕಚೇರಿಗೆ ಭೇಟಿ ನೀಡಿ ಹೊಸ ವಿಳಾಸದ ದಾಖಲೆ ಪತ್ರ ನೀಡಬೇಕು. ವಾಹನ ಚಾಲನೆ ಎಬಿಸಿಡಿ ಗೊತ್ತಿಲ್ಲದವರು ಡ್ರೈವಿಂಗ್ ಸ್ಕೂಲ್ ಮೂಲಕವೇ ಎಲ್‍ಎಲ್, ಡಿಎಲ್ ಮಾಡಿಸಿಕೊಳ್ಳುವುದು ಒಳಿತು. ವಾಹನದ ಲಭ್ಯತೆ ಇದ್ದೂ, ಡ್ರೈವಿಂಗ್ ಗೊತ್ತಿದ್ದೂ ಮಧ್ಯವರ್ತಿಗಳನ್ನು ಅವಲಂಬಿಸಿದರೆ ನಷ್ಟ ನಿಮಗೆ!

ಕರ್ನಾಟಕ ಆರ್ ಟಿಒ ವಿಳಾಸ

* ಪ್ರವೀಣ ಚಂದ್ರ
ಕಾರಿನ ಎಂಜಿನ್ ಹೇಗೆ ಕೆಲಸ ಮಾಡುತ್ತದೆ?

ಕಾರಿನ ಎಂಜಿನ್ ಹೇಗೆ ಕೆಲಸ ಮಾಡುತ್ತದೆ?

ಕಾರಿನ ಎಂಜಿನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಕುತೂಹಲವೊಂದು ನಿಮ್ಮ ಮನದ ಮೂಲೆಯಲ್ಲಿ ಇರಬಹುದು. ಇಂಧನವನ್ನು ಚಲನೆಯಾಗಿ ಪರಿವರ್ತಿಸುವುದು ಎಂಜಿನ್ ಕೆಲಸ. ಅದಕ್ಕಾಗಿ ಎಂಜಿನ್ ಒಳಗೆ ಇಂಧನ ಉರಿಯುವ ಇಂಟರ್ನಲ್ ಕಂಬಶ್ಟನ್ ಸಿಸ್ಟಮ್ ಬಳಸಲಾಗುತ್ತದೆ.ಈ ಎಂಜಿನ್‍ಗಳಿಗೆ ಕಡಿಮೆ ಇಂಧನ ಸಾಕು.  ಹಳೆಕಾಲದ ಉಗಿರೈಲುಗಳಲ್ಲಿ ಎಂಜಿನ್ ಹೊರಗಡೆ ಕಲ್ಲಿದ್ದಲ್ಲಿನಂತಹ ಇಂಧನ ಉರಿಸಲಾಗುತ್ತಿತ್ತು.
ಎಂಜಿನ್ ಒಳಗೆ ಬೆಂಕಿ!
ಇಂಟರ್ನಲ್ ಕಂಬಶ್ಟನ್ ಎಂಜಿನ್‍ನ ಒಳಭಾಗದ ಅತ್ಯಂತ ಕಡಿಮೆ ಸ್ಥಳಾವಕಾಶದಲ್ಲಿ ಅತಿಕಡಿಮೆ ಪ್ರಮಾಣದಲ್ಲಿ ಪೆಟ್ರೋಲ್‍ನಂತಹ ಇಂಧನದ ಹನಿ ಹಾಕಿ ಬೆಂಕಿಯ ಕಿಡಿ ಹಚ್ಚಿದರೆ ನಂಬಲು ಅಸಾಧ್ಯವಾದಷ್ಟು ಪ್ರಮಾಣದಲ್ಲಿ ಶಕ್ತಿಯು ಬಿಡುಗಡೆಯಾಗುತ್ತದೆ. ಕಾರಿನ ಚಕ್ರಗಳು ತಿರುಗಲು ಇವೇ ಅಶ್ವಶಕ್ತಿ. ಹೆಚ್ಚಿನ ಕಾರುಗಳಲ್ಲಿ ನಾಲ್ಕು ಸ್ಟ್ರೋಕ್(ಕಿಡಿ)ನ ಕಂಬಶ್ಟನ್ ಸೈಕಲ್ ಸಿಸ್ಟಮ್ ಬಳಸಲಾಗುತ್ತದೆ. ಇದಕ್ಕೆ ಒಟ್ಟೊ ಸೈಕಲ್ ಎಂಬ ಹೆಸರು ಸಹ ಇದೆ. 1967ರಲ್ಲಿ ನಿಕೊಲಾಸ್ ಒಟ್ಟೊ ಈ ಟೆಕ್ನಾಲಜಿ ಕಂಡುಹಿಡಿದಿದ್ದರು.

ಎಂಜಿನ್ ಒಳಗೆ ಏನಿದೆ?
ಇಂಟೆಕ್(ಇಂಧನ ಒಳಬರುವುದು), ಕಂಪ್ರೆಷನ್ (ಸಂಕೋಚನ), ಕಂಬಸ್ಟನ್(ದಹನ) ಮತ್ತು ಎಗ್ಸಾಸ್ಟ್ ಸ್ಟ್ರೋಕ್(ಹೊಗೆ ಹೊರಕ್ಕೆ) ಎಂಬ ನಾಲ್ಕು ಸ್ಟ್ರೋಕ್‍ಗಳು ಎಂಜಿನ್ ಒಳಗೆ ಕಾರ್ಯನಿರ್ವಹಿಸುತ್ತವೆ. ಎಂಜಿನ್ ಒಳಗೆ ನೂರಾರು ಬಿಡಿಭಾಗಗಳಿವೆ. ಕ್ಯಾಮ್‍ಶಾಫ್ಟ್, ವಾಲ್ವ್ ಕವರ್, ಇಂಟೆಕ್ ವಾಲ್ವ್, ಇಂಟೆಕ್ ಪೆÇೀರ್ಟ್, ಹೆಡ್, ಕೂಲೆಂಟ್, ಎಂಜಿನ್ ಬ್ಲಾಕ್, ಆಯಿಲ್ ಪಾನ್, ಆಯಿಲ್ ಸುಂಪ್, ಸ್ಪಾರ್ಕ್ ಪ್ಲಗ್, ಎಗ್ಸಾಟ್ ವಾಲ್ವ್, ಎಗ್ಸಾಟ್ ಪೆÇೀರ್ಟ್, ಪಿಸ್ಟನ್, ಕನೆಕ್ಟಿಂಗ್ ರಾಡ್ಸ್, ಕ್ರಾಂಕ್‍ಶಾಫ್ಟ್ ಇತ್ಯಾದಿಗಳಿವೆ.

ಹೇಗೆ ಕೆಲಸ ಮಾಡುತ್ತದೆ?
ಎಂಜಿನ್‍ನಲ್ಲಿರುವ ಪಿಸ್ಟನನ್ನು ಕನೆಕ್ಟಿಂಗ್ ರಾಡ್ ಮೂಲಕ ಕ್ರಾಂಕ್‍ಶಾಫ್ಟ್‍ಗೆ ಸಂಪರ್ಕ ಮಾಡಲಾಗಿರುತ್ತದೆ. ಕ್ರಾಂಕ್‍ಶಾಫ್ಟ್ ಸುತ್ತುತ್ತಿರುವಾಗ ಕ್ಯಾನನ್ ಮರುಹೊಂದಿಕೊಳ್ಳುತ್ತದೆ. ಎಂಜಿನ್ ಸಿಲಿಂಡರ್ ಒಳಗಿರುವ ಪಿಸ್ಟನ್ ಮೇಲಿನಿಂದ ಕೆಳಗೆ ಬರಲು ಆರಂಭವಾದಗ ಇಂಟೆಕ್ ಕವಾಟ ತೆರೆದುಕೊಳ್ಳುತ್ತದೆ. ಅದರಿಂದ ಅಲ್ಪ ಪ್ರಮಾಣದ ಇಂಧನ ಮತ್ತು ಗಾಳಿಯ ಮಿಶ್ರಣ ಸಿಲಿಂಡರ್ ಒಳಗೆ ಬಂದಾಗ ಪಿಸ್ಟನ್ ಕೆಳಗೆ ಬರುತ್ತದೆ. ಮತ್ತೆ ಪಿಸ್ಟನ್ ಮೇಲೆ ಬಂದಾಗ ಸ್ಪಾರ್ಕ್ ಪ್ಲಗ್ ಉಂಟು ಮಾಡಿದ ಕಿಡಿಯು ಇಂಧನ/ಗಾಳಿ ಮಿಶ್ರಣವನ್ನು ಸ್ಪೋಟಿಸಿದಾಗ ಬಿಡುಗಡೆಯಾಗುವ ಶಕ್ತಿಗೆ ಪಿಸ್ಟನ್ ಕೆಳಗೆ ಬರುತ್ತದೆ. ಮತ್ತೆ ಪಿಸ್ಟನ್ ಮೇಲಕ್ಕೆ ಹೋದಾಗ ಇಂಟೆಂಕ್ ಕವಾಟದ ಮೂಲಕ ಹೊಗೆ ಹೊರಕ್ಕೆ ಹೋಗುತ್ತದೆ. ಕ್ಯಾಮ್‍ಶಾಫ್ಟ್ ಸಮರ್ಪಕವಾಗಿ ತಿರುಗಿದಾಗ ಇಂಟೆಕ್ ಮತ್ತು ಎಗ್ಸಾಸ್ಟ್ ಕವಾಟಗಳು ತೆರೆಯುವುದು ಮತ್ತು ಮುಚ್ಚುವುದು ನಡೆಯುತ್ತಿರುತ್ತವೆ. ಪಿಸ್ಟನ್ ಮೇಲೆ ಕೆಳಗೆ ಬರುತ್ತಿರುವಾಗ ಅದಕ್ಕೆ ಕನೆಕ್ಟ್ ಮಾಡಿದ ಕ್ರಾಂಕ್‍ಶಾಫ್ಟ್ ತಿರುಗುತ್ತದೆ(ಸೈಕಲ್ ತುಳಿದಾಗ ಆಗುವಂತೆ).
ನಾವೀಗ ಕೇವಲ ಒಂದು ಪಿಸ್ಟನ್ ಸಿಲಿಂಡರ್ ತಿರುಗುವ ಬಗ್ಗೆ ತಿಳಿದುಕೊಂಡೆವು. ಆದರೆ ಹೆಚ್ಚಿನ ಕಾರುಗಳು ಒಂದಕ್ಕಿಂತ ಹೆಚ್ಚು ಸಿಲಿಂಡರ್ ಹೊಂದಿರುತ್ತವೆ. ನಾಲ್ಕು, ಆರು, ಎಂಟು ಸಿಲಿಂಡರ್‍ನ ಎಂಜಿನ್‍ಗಳು ಇರುತ್ತವೆ. ಹೀಗೆ ಹಲವು ಸಿಲಿಂಡರ್‍ಗಳು ಇರುವಾಗ ಸಿಲಿಂಡರ್‍ಗಳನ್ನು ಹೆಚ್ಚಾಗಿ ಮೂರು ರೀತಿಯಾಗಿ(ಇನ್‍ಲೈನ್, ವಿ ಅಥವಾ ಫ್ಲಾಟ್) ಜೋಡಿಸಲಾಗಿರುತ್ತದೆ.

ಯಾವುದಕ್ಕೆ ಏನು ಕೆಲಸ?
ಸ್ಪಾರ್ಕ್ ಪ್ಲಗ್: ಇಂಧನ/ಗಾಳಿ ಮಿಶ್ರಣಕ್ಕೆ ಬೆಂಕಿ ಹಾಕುವುದು ಸ್ಪಾರ್ಕ್ ಪ್ಲಗ್ ಕಾರ್ಯ. ಸರಿಯಾದ ಸಮಯಕ್ಕೆ ಸಮರ್ಪಕವಾಗಿ ಸ್ಪಾರ್ಕ್ ಆದರೆ ಮಾತ್ರ ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸುತ್ತದೆ.
ವಾಲ್ವ್: ಇಂಟೆಕ್ ಮತ್ತು ಎಗ್ಸಾಟ್ ವಾಲ್ವ್(ಕವಾಟ)ಗಳು ಸರಿಯಾದ ಸಮಯಕ್ಕೆ ತೆರೆದುಕೊಂಡರೆ ಮಾತ್ರ ಸರಿಯಾದ ಸಮಯಕ್ಕೆ ಗಾಳಿ ಮತ್ತು ಇಂಧನ ಮಿಶ್ರಣ ಒಳಬರುತ್ತದೆ. ಸಂಕೋಚನ ಮತ್ತು ದಹನ ಸಮಯದಲ್ಲಿ ಎರಡೂ ಕವಾಟಗಳು ಮುಚ್ಚಿರುತ್ತವೆ.
ಪಿಸ್ಟನ್: ಸಿಲಿಂಡರ್ ಒಳಭಾಗದಲ್ಲಿ ಮೇಲೆ ಕೆಳಗೆ ಹೋಗುವ ಸಿಲಿಂಡರ್ ತುಂಡು.
ಪಿಸ್ಟನ್ ರಿಂಗ್‍ಗಳು: ಸಿಲಿಂಡರ್ ಒಳಭಾಗದಿಂದ ಯಾವುದೇ ಲೀಕ್ ಆಗದಂತೆ, ದಕ್ಷತೆಯಿಂದ ಇಂಧನ/ಗಾಳಿ ದಹನವಾಗುವಂತೆ ನೋಡಿಕೊಳ್ಳುತ್ತದೆ.
ಕನೆಕ್ಟಿಂಗ್ ರಾಡ್: ಪಿಸ್ಟನನ್ನು ಕ್ರಾಂಕ್‍ಶಾಫ್ಟ್‍ಗೆ ಕನೆಕ್ಟ್ ಮಾಡೋ ಕೆಲಸವನ್ನು ಕನೆಕ್ಟಿಂಗ್ ರಾಡ್ ಮಾಡುತ್ತದೆ. ಕ್ರಾಂಕ್‍ಶಾಫ್ಟ್: ಪಿಸ್ಟನ್ ಮೇಲೆ ಕೆಳಗೆ ಚಲಿಸಿದಾಗ ಕ್ರಾಂಕ್‍ಶಾಫ್ಟ್ ತಿರುಗುತ್ತದೆ.
ಎಂಜಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸಲು ಅಗತ್ಯವಿರುವ ಇತರೆ ಅಂಶಗಳು.
ವಾಲ್ವ್ ಟ್ರೈನ್: ಕವಾಟಗಳು ಮತ್ತು ಇತರ ಮೆಕಾನಿಸಂ ಇರುವ ವಾಲ್ವ್ ಟ್ರೈನ್‍ಗಳು ಕಾಮ್‍ಶಾಫ್ಟ್‍ನ್ನು ತೆರಯಲು ಮತ್ತು ಮುಚ್ಚಲು ನೆರವಾಗುತ್ತದೆ. ಹೆಚ್ಚಿನ ಆಧುನಿಕ ಎಂಜಿನ್‍ಗಳು ಓವರ್‍ಹೆಡ್ ಕ್ಯಾಮ್‍ಗಳನ್ನು ಹೊಂದಿರುತ್ತವೆ.
ರಾಡ್: ಎಂಜಿನ್ ಸರಿಯಾಗಿ ಕಾರ್ಯನಿರ್ವಹಿಸಲು ಕ್ಯಾಮ್‍ನ ಕೆಳಗೆ ಇರುವ ರಾಡ್‍ಗಳು ಸಹ ಸಮರ್ಪಕವಾಗಿ ಕೆಲಸ ಮಾಡಬೇಕು.
ಟೈಮಿಂಗ್ ಬೆಲ್ಟ್: ಟೈಮಿಂಗ್ ಚೈನ್ ಲಿಂಕ್ ಸಹ ಎಂಜಿನ್‍ನಲ್ಲಿ ಅತ್ಯಂತ ಅಗತ್ಯದ ಭಾಗ. ಈ ಚೈನ್ ಕ್ರಾಂಕ್‍ಶಾಫ್ಟ್‍ನಿಂದ ಕ್ಯಾಮ್‍ಶಾಫ್ಟ್‍ಗೆ ಲಿಂಕ್ ಮಾಡುತ್ತದೆ.
ಕ್ಯಾಮ್‍ಶಾಫ್ಟ್: ಹೆಚ್ಚಿನ ಆಧುನಿಕ ಎಂಜಿನ್‍ಗಳು ಪ್ರತಿಸಿಲಿಂಡರ್‍ಗೆ ನಾಲ್ಕು ವಾಲ್ವ್‍ಗಳನ್ನು ಹೊಂದಿರುತ್ತವೆ. ಅವುಗಳಲ್ಲಿ ಎರಡು ಇಂಟೆಕ್‍ಗೆ ಮತ್ತು ಎರಡು ಎಗ್ಸಾಸ್ಟ್‍ಗೆ ಇರುತ್ತದೆ. ಇದರಿಂದಾಗಿ ಒಂದು ಸಿಲಿಂಡರ್‍ಗೆ ಎರಡು ಕ್ಯಾಮ್‍ಶಾಫ್ಟ್‍ಗಳು ಬೇಕಿರುತ್ತದೆ. ಇದಕ್ಕಾಗಿ ಡ್ಯೂಯಲ್ ಓವರ್‍ಹೆಡ್ ಕ್ಯಾಮ್ಸ್ ಬಳಕೆ ಮಾಡಲಾಗುತ್ತದೆ.

ಅಯ್ಯೋ ಎಂಜಿನ್ ಸ್ಟಾರ್ಟ್ ಆಗ್ತಿಲ್ಲ!
ಮುಂಜಾನೆ ಇಗ್ನಿಷನ್ ಕೀಲಿಕೈ ತಿರುಗಿಸಿದಾಗ ಕಾರು ಸ್ಟಾರ್ಟ್ ಆಗದ ಅನುಭವ ನಿಮಗೆ ಆಗಿರಬಹುದು. ಎಂಜಿನ್ ಸ್ಟಾರ್ಟ್ ಆಗದಿರಲು ನೂರಾರು ಕಾರಣಗಳು ಇರಬಹುದು. ಆದರೆ ಮುಖ್ಯವಾಗಿ ಮೂರು ಕಾರಣಗಳಿವೆ.
ಅಸಮರ್ಪಕ ಇಂಧನ ಮಿಶ್ರಣ: ಇಂಧನ ಖಾಲಿಯಾದಗ ಎಂಜಿನ್‍ನೊಳಗೆ ಗಾಳಿ ಮಾತ್ರ ಪ್ರವೇಶಿಸುತ್ತದೆ. ಇಂಧನ ಪ್ರವೇಶಿಸುವುದಿಲ್ಲ. ಕೆಲವೊಮ್ಮೆ ಏರ್ ಇಂಟೆಕ್ ಮುಚ್ಚಿದ್ದರೆ ಇಂಧನ ಪೂರೈಕೆ ಆಗುತ್ತದೆ, ಗಾಳಿ ಪೂರೈಕೆ ಆಗುವುದಿಲ್ಲ. ಒಮ್ಮೊಮ್ಮೆ ಹೆಚ್ಚು ಇಂಧನ, ಕಡಿಮೆ ಗಾಳಿ ಪೂರೈಕೆಯಾಗಬಹುದು. ಇಂಧನ ಟ್ಯಾಂಕ್‍ನಲ್ಲಿ ನೀರು ಪ್ರವೇಶಿಸಿದರೂ ಇಂಧನದ ಗುಣಮಟ್ಟ ಹಾಳಾಗಿ ಸ್ಟಾರ್ಟಿಂಗ್ ಟ್ರಬಲ್ ನೀಡಬಹುದು.
ಕಂಪ್ರೆಷನ್ ಪ್ರಾಬ್ಲಂ: ಗಾಳಿ ಮತ್ತು ಇಂಧನ ಸಮರ್ಪಕವಾಗಿ ಸಂಕೋಚನ ಆಗದೆ ಇದ್ದರೆ ಕಂಬಶ್ಟನ್ ಅಥವಾ ದಹನ ಪ್ರಕ್ರಿಯೆ ಸಮರ್ಪಕವಾಗಿ ನಡೆಯದು. ಕಂಪ್ರೆಷನ್‍ನಲ್ಲಿ ತೊಂದರೆ ಉಂಟಾಗಲು ಪಿಸ್ಟನ್ ರಿಂಗ್ ಸವೆದಿರುವುದೂ ಕಾರಣವಾಗಿರಬಹುದು. ಇಂಟೆಕ್ ಅಥವಾ ಎಗ್ಸಾಸ್ಟ್ ಕವಾಟಗಳು ಸರಿಯಾಗಿ ಸೀಲ್ ಆಗದಿದ್ದರೆ ಕಂಪ್ರೆಷನ್ ಸಮಯದಲ್ಲಿ ಲೀಕ್ ಉಂಟಾಗುತ್ತದೆ.
ಸ್ಪಾರ್ಕ್ ಆಗದಿರುವುದು: ಸ್ಪಾರ್ಕ್ ಪ್ಲಗ್‍ನ ವೈರ್‍ನಲ್ಲಿ ಉಂಟಾಗುವ ತೊಂದರೆಯಿಂದ ಕಿಡಿ ಹತ್ತಿಕೊಳ್ಳದಿದ್ದರೆ ಎಂಜಿನ್ ಸ್ಟಾರ್ಟ್ ಆಗದು. ಕೆಲವೊಮ್ಮೆ ಕಿಡಿ ಬೇಗ ಅಥವಾ ಲೇಟಾಗಿ ಹತ್ತಿಕೊಂಡರೂ ಎಂಜಿನ್ ಸಮರ್ಪಕವಾಗಿ ಕಾರ್ಯ ನಿರ್ವಹಿಸದು.
ಇನ್ನಿತರ ಕಾರಣಗಳು: ಎಂಜಿನ್ ಸ್ಟಾರ್ಟ್ ಆಗದಿರಲು ಬ್ಯಾಟರಿ ಹಾಳಾಗಿರುವುದು, ಎಂಜಿನ್ ಕವಾಟಗಳು ಸರಿಯಾದ ಸಮಯಕ್ಕೆ ತೆರೆಯದೆ ಅಥವಾ ಮುಚ್ಚದೆ ಇರುವುದು ಇತ್ಯಾದಿ ಕಾರಣಗಳು ಇವೆ. ಆಯಿಲ್ ಇಲ್ಲದೆ ಪಿಸ್ಟನ್‍ಗೆ ಸರಾಗವಾಗಿ ಮೂವ್ ಆಗಲು ಸಾಧ್ಯವಾಗದೆ ಇದ್ದರೆ ಎಂಜಿನ್ ಸೀಝ್ ಆಗಬಹುದು.

ಕೂಲಾಗಿರಲಿ ಎಂಜಿನ್
ಎಂಜಿನ್ ಕೂಲಿಂಗ್: ಹೆಚ್ಚಿನ ಕಾರುಗಳಲ್ಲಿ ರೇಡಿಯೇಟರ್ ಮತ್ತು ವಾಟರ್ ಪಂಪ್ ಒಳಗೊಂಡಿರುವ ಕೂಲಿಂಗ್ ಸಿಸ್ಟಮ್ ಇರುತ್ತದೆ. ಸಿಲಿಂಡರ್ ಸುತ್ತಮುತ್ತ ನಾಳಗಳಲ್ಲಿ ನೀರು ಹರಿಯುತ್ತದೆ ಮತ್ತು ಮತ್ತೆ ರೇಡಿಯೇಟರ್ ಪ್ರವೇಶಿಸಿ ನಾಳಗಳಲ್ಲಿ ಹೊರಬರುತ್ತದೆ. ಏರ್‍ಕೂಲಿಂಗ್‍ನಿಂದ ಎಂಜಿನ್‍ಗೆ ತಂಪಾಗಿ ಹಾಯೆನಿಸುತ್ತದೆ. ಆದರೆ ಇದು ಎಂಜಿನ್ ಬಾಳ್ವಿಕೆ ಮತ್ತು ಒಟ್ಟಾರೆ ಕಾರ್ಯಕ್ಷಮತೆಯನ್ನು ತಗ್ಗಿಸುತ್ತದೆ.

ಏರ್ ಇಂಟೆಕ್: ಹೆಚ್ಚಿನ ಕಾರುಗಳಲ್ಲಿ ಏರ್ ಫಿಲ್ಟರ್‍ನಿಂದ ನೇರವಾಗಿ ಸಿಲಿಂಡರ್‍ಗೆ ಗಾಳಿಯನ್ನು ಕಳುಹಿಸಿಕೊಡಲಾಗುತ್ತದೆ. ಟರ್ಬೊ ಜಾರ್ಜ್‍ಡ್ ಅಥವಾ ಸೂಪರ್ ಚಾರ್ಜ್‍ಡ್ ಎಂಜಿನ್‍ಗಳಲ್ಲಿ ಎಂಜಿನ್‍ಗೆ ಮೊದಲು ಏರ್ ಬರುತ್ತದೆ. ಇದರಿಂದ ಕಾರ್ಯಕ್ಷಮತೆ ಹೆಚ್ಚಿರುತ್ತದೆ.



ಎಂಜಿನ್ ಲ್ಯುಬ್ರಿಕೇಷನ್: ಎಂಜಿನ್‍ನಲ್ಲಿ ಆಯಿಲ್ ಸಹ ಪ್ರಮುಖ ಪಾತ್ರ ವಹಿಸುತ್ತದೆ. ಲುಬ್ರಿಕೇಷನ್ ವ್ಯವಸ್ಥೆಯು ಎಂಜಿನ್‍ನ ಎಲ್ಲಾ ಚಲಿಸುವ ಬಿಡಿಭಾಗಗಳಿಗೆ ಸಮರ್ಪಕವಾಗಿ ಆಯಿಲ್ ದೊರಕುವಂತೆ ಮಾಡುತ್ತದೆ. ಇದರಿಂದ ಎಂಜಿನ್‍ನ ಬಿಡಿಭಾಗಗಳು ಸಮರ್ಪಕವಾಗಿ ಚಲಿಸುತ್ತವೆ.- Praveen Chandra Puttur

(ಪೂರಕ ಮಾಹಿತಿ: ಹೌಸ್ಟಫ್ಸ್‍ವಕ್ರ್ಸ್‍ಡಾಟ್‍ಕಾಂ).



More information in web





How A Car Engine Works (animated infographic) - Jacob O'Neal





Wikipedia:

Internal combustion engine - Wikipedia, the free encyclopedia