Tuesday, 4 October 2016

ಇಮೇಲ್ ಅಟ್ಯಾಚ್‍ಮೆಂಟ್ ಮರೆಯದಿರಿ

SHARE
ವೃತ್ತಿಪರ ಜೀವನದಲ್ಲಿ ಇಮೇಲ್, ಸಾಮಾಜಿಕ ಮಾಧ್ಯಮ ಇತ್ಯಾದಿ ತಂತ್ರಜ್ಞಾನಗಳನ್ನು ಬಳಕೆ ಮಾಡುವಾಗ ನಾವು ಮಾಡುವ ಸಣ್ಣ ತಪ್ಪುಗಳು ದೊಡ್ಡ ಪರಿಣಾಮವನ್ನೇ ಉಂಟು ಮಾಡಬಲ್ಲದು.

ಪರಿಚಿತರೊಬ್ಬರ ರೆಫರೆನ್ಸ್ ಮೂಲಕ ನರೇಶ್ ಎಂಬ ಅಭ್ಯರ್ಥಿಗೆ ದೇಶದ ಪ್ರಮುಖ ಐಟಿ ಕಂಪನಿಯೊಂದರಿಂದ ಕೆಲಸದ ಕೆಲಸದ ಆಹ್ವಾನ ಬಂತು. ಕಂಪನಿ ಕಳುಹಿಸಿದ ಇಮೇಲ್‍ನಲ್ಲಿ ನಿಮ್ಮ ರೆಸ್ಯೂಂ ಕಳುಹಿಸಿ ಎಂದಿತ್ತು. ಕಷ್ಟಪಟ್ಟು ರೆಸ್ಯೂಂ ಸಿದ್ಧಪಡಿಸಿದ ನರೇಶ್ ಅದನ್ನು ಡೆಸ್ಕ್‍ಟಾಪ್‍ನಲ್ಲಿ ಸೇವ್ ಮಾಡಿಟ್ಟುಕೊಂಡ. ಇಮೇಲ್‍ನಲ್ಲಿ ತಾನು ಈಗ ಪಡೆಯುತ್ತಿರುವ ವೇತನ, ಬಯಸುವ ವೇತನ ಎಲ್ಲವನ್ನು ಬರೆದ. ಕೊನೆಗೆ `ಪ್ಲೀಸ್ ಫೈಂಡ್ ಅಟ್ಯಾಚ್ಡ್ ಫೈಲ್' ಎಂದು ಬರೆದು ಇಮೇಲ್ ಸೆಂಡ್ ಮಾಡಿದ. ಇಮೇಲ್ ಮಾಡಿ ದಿನಗಳು ಉರುಳಿದರೂ ಆತನಿಗೆ ಯಾವುದೇ ಕೆಲಸದ ಆಹ್ವಾನವೇ ಬರಲಿಲ್ಲ. ತನ್ನ ಪರಿಚಿತರನ್ನು ಈ ಕುರಿತು ಕೇಳಿದಾಗ `ವಿಚಾರಿಸಿ ಹೇಳುವೆ' ಎಂದರು. ಕೆಲವು ದಿನಗಳ ನಂತರ ಪರಿಚಿತ ವ್ಯಕ್ತಿ ಕರೆ ಮಾಡಿ ನಿನಗೆ ಆ ಜಾಬ್ ಮಿಸ್ಸಾಯಿತು ಎಂದರು. ಅದಕ್ಕೆ ಅವರು ನೀಡಿದ ಕಾರಣ `ಇಮೇಲ್‍ನಲ್ಲಿ ನೀನು ರೆಸ್ಯೂಂ ಅಟ್ಯಾಚ್‍ಮೆಂಟ್ ಮಾಡುವುದನ್ನೇ ಮರೆತ್ತಿದ್ದೆ. ಈ ರೀತಿ ಮಾಡುವ ಅಭ್ಯರ್ಥಿಗಳನ್ನು ಆ ಕಂಪನಿಯು ಇಷ್ಟಪಡುವುದಿಲ್ಲ'.
* ನರೇಶ್ ಮಾಡಿದ್ದು ಸಣ್ಣ ತಪ್ಪು. ಅದಕ್ಕೆ ಆತ ತೆತ್ತ ಬೆಲೆ ಪ್ರಮುಖ ಕಂಪನಿಯೊಂದರಲ್ಲಿ ಉತ್ತಮ ಉದ್ಯೋಗಾವಕಾಶ ಕಳೆದುಕೊಂಡ.
* ಈತನನ್ನು ಕ್ಷಮಿಸಿ ಇನ್ನೊಮ್ಮೆ ರೆಸ್ಯೂಂ ಕಳುಹಿಸುವಂತೆ ಕಂಪನಿ ಹೇಳಬಹುದಿತ್ತಲ್ಲವೇ ಎಂಬ ಪ್ರಶ್ನೆ ನಿಮ್ಮಲ್ಲಿರಬಹುದು. ಆತ ಕಂಪನಿಗೆ ಫಸ್ಟ್ ಇಂಪ್ರೆಷನ್ ಮೂಡುವಲ್ಲಿ ವಿಫಲನಾದ. ಆ ಕಂಪನಿಯು ಇಮೇಲ್ ಮೂಲಕವೇ ಸಾಕಷ್ಟು ವ್ಯವಹಾರ ನಡೆಸುತ್ತದೆ. ಮುಂದೆಯೂ ಈತ ಇಂತಹ ತಪ್ಪು ಮಾಡಬಹುದು ಎಂಬ ಭಾವನೆ ಕಂಪನಿಗೆ ಈತನ ಮೊದಲ ತಪ್ಪಲ್ಲೇ ಮೂಡಿತ್ತು.
* ನೀವು ಕೂಡ ಉದ್ಯೋಗ, ಶಿಕ್ಷಣ ಅಥವಾ ಇನ್ಯಾವುದೇ ಪ್ರಮುಖ ವಿಷಯಗಳಿಗೆ ಸಂಬಂಧಪಟ್ಟಂತೆ ಇಮೇಲ್ ಮಾಡುವಾಗ ಅವಶ್ಯಕತೆ ಇದ್ದಲ್ಲಿ ಅಟ್ಯಾಚ್‍ಮೆಂಟ್ ಕಳುಹಿಸಲು ಮರೆಯದಿರಿ.
SHARE

Author: verified_user

0 ಪ್ರತಿಕ್ರಿಯೆಗಳು: