ಐಟಿ ಕ್ಷೇತ್ರದಲ್ಲೀಗ ಡೇಟಾ ಅನಾಲಿಸ್ಟ್‍ಗಳಿಗೆ ಸಖತ್ ಡಿಮ್ಯಾಂಡ್. ಡೇಟಾ ವಿಶ್ಲೇಷಕರಾಗುವುದು ಹೇಗೆ? ಯಾವ ಸರ್ಟಿಫಿಕೇಷನ್ ಕೋರ್ಸ್ ಮಾಡಬೇಕು? ಯಾವೆಲ್ಲ ವಿಷಯದಲ್ಲಿ ಪರಿಣತಿ ಪಡೆಯಬೇಕು? ಇಲ್ಲಿದೆ ಮಾಹಿತಿ.
* ಪ್ರವೀಣ್ ಚಂದ್ರ ಪುತ್ತೂರು
ಈ ವರ್ಷ ಅತ್ಯಧಿಕ ಬೇಡಿಕೆ ಇರುವ ಉದ್ಯೋಗಗಳಲ್ಲಿ `ಡೇಟಾ ಅನಾಲಿಸ್ಟ್' ರೈಸಿಂಗ್ ಸ್ಟಾರ್ ಆಗಿ ಮಿಂಚುತ್ತಿದೆ. ಸಣ್ಣ ಕಂಪನಿಗಳಿಂದ ಇನ್ಫೋಸಿಸ್‍ನಂತಹ ಬೃಹತ್ ಕಂಪನಿಗಳು ಕೂಡ ಡೇಟಾ ಅನಾಲಿಸ್ಟ್ ನೇಮಕವನ್ನು ಹಲವು ಪಟ್ಟು ಹೆಚ್ಚಿಸಿಕೊಳ್ಳುವುದಾಗಿ ಹೇಳಿವೆ. ದೇಶದಲ್ಲಿ ಆನ್‍ಲೈನ್ ವಹಿವಾಟು, ಮೊಬೈಲ್ ಇಂಟರ್‍ನೆಟ್ ಬಳಕೆ ಇತ್ಯಾದಿಗಳು ಹೆಚ್ಚಾಗುತ್ತಿರುವುದು ಕೂಡ ಡೇಟಾ ವಿಜ್ಞಾನಿಗಳಿಗೆ ಬೇಡಿಕೆ ಹೆಚ್ಚಾಗಲು ಕಾರಣ. ಮ್ಯಾಥಮ್ಯಾಟಿಕಲ್ ಮತ್ತು ಅನಾಲಿಟಿಕಲ್ ಸ್ಕಿಲ್ ಇರುವವರು ಡೇಟಾ ಅನಾಲಿಸ್ಟ್ ಆಗಿ ಭವಿಷ್ಯ ರೂಪಿಸಿಕೊಳ್ಳಬಹುದು. ಡೇಟಾ ಅನಾಲಿಸ್ಟ್‍ನ ಕ್ಷೇತ್ರದಲ್ಲಿ ಆರಂಭಿಕ ಉದ್ಯೋಗಿಗಳು ವಾರ್ಷಿಕ 2-10 ಲಕ್ಷ ರೂ. ವೇತನ ಪಡೆಯಬಹುದು. ಹಿರಿಯ ಹುದ್ದೆಯಲ್ಲಿರುವವರಿಗೆ 70-1 ಕೋಟಿ ರೂ.ವರೆಗೆ ವಾರ್ಷಿಕ ವೇತನದ ಆಫರ್ ಇರಬಹುದು.
ಏನಿದು ಉದ್ಯೋಗ?
ಹಲವು ವರ್ಷಗಳ ಹಿಂದೆ ಡೇಟಾ ಅನಾಲಿಸ್ಟ್ ಹೆಚ್ಚು ಪ್ರಚಲಿತದಲ್ಲಿಲ್ಲದ ಹುದ್ದೆ. ಈಗ ಎಲ್ಲವೂ ವೆಬ್‍ಮಯವಾಗುತ್ತಿರುವುದರಿಂದ ಮಾಹಿತಿಗಳ ರಾಶಿ `ಬಿಗ್ ಡೇಟಾ'ವನ್ನು ಪ್ರತಿಯೊಂದು ಕಂಪನಿಗಳು ನಿರ್ವಹಿಸಬೇಕಾಗುತ್ತದೆ. ಸರಳವಾಗಿ ಹೇಳಬೇಕಾದರೆ ಇದು ಡೇಟಾಬೇಸ್ ನಿರ್ವಹಣೆ ಸಂಬಂಧಿಸಿದ ಉದ್ಯೋಗ. ಸ್ಟಟಿಸ್ಟಿಕಲ್, ಕಂಪ್ಯೂಟರ್ ಸೈನ್ಸ್, ವ್ಯವಹಾರ ಆಡಳಿತ ಇತ್ಯಾದಿಗಳಲ್ಲಿ ಪದವಿ ಪಡೆದವರಿಗೆ ಡೇಟಾ ಅನಾಲಿಸ್ಟ್ ಕೋರ್ಸ್ ಕಲಿಕೆ ಸುಲಭವಾಗಬಹುದು. ಡೇಟಾ ಅನಾಲಿಸ್ಟ್ ಆಗಲು ಬಯಸುವವರಿಗೆ ಅನಾಲಿಟಿಕಲ್(ಗಣಿತ/ಅಂಕಿಅಂಶ ಮತ್ತು ಪೆÇ್ರೀಗ್ರಾಮಿಂಗ್), ಸಂವಹನ( ಪ್ರಸಂಟೇಷನ್/ಡೇಟಾ ವಿಷುಯಲೈಜೇಷನ್) ಪರಿಣತಿ, ವೆಬ್ ಡೇಟಾ ಸಂಬಂಧಿ ಉಂಟಾಗುವ ತೊಂದರೆಗಳನ್ನು ವ್ಯವಸ್ಥಿತವಾಗಿ ಸರಿಪಡಿಸುವ ಛಾತಿ ಇರಬೇಕಾಗುತ್ತದೆ.
ಯಾವ ಸ್ಕಿಲ್ ಇರಬೇಕು?
ಡೇಟಾ ವಿಜ್ಞಾನಿ ಅಥವಾ ಡೇಟಾ ಅನಾಲಿಸ್ಟ್ ಆಗಬಯಸುವುದಾದರೆ ನಿಮ್ಮಲ್ಲಿ ಈ ಕೆಳಗಿನ ಸ್ಕಿಲ್‍ಗಳು ಇರಬೇಕು.
ಪೆÇ್ರೀಗ್ರಾಮಿಂಗ್: ಡೇಟಾ ಅನಾಲಿಸ್ಟ್‍ಗೆ ಪೆÇ್ರೀಗ್ರಾಮಿಂಗ್ ಸ್ಕಿಲ್‍ಗಳಿರುವುದು ಅತ್ಯಂತ ಅವಶ್ಯ. ಪೆÇ್ರೀಗ್ರಾಮೇತರ ಎಕ್ಸೆಲ್‍ನಂತಹ ಟೂಲ್ಸ್ ಮಾತ್ರವಲ್ಲದೆ ಪಾಂಡಾಸ್(PZ್ಞbZo), ನುಂಪಿ(ಘ್ಠೆಞmqs) ಮತ್ತು ಇತರೆ ಪೆÇ್ರೀಗ್ರಾಮಿಂಗ್‍ನ ಟೂಲ್‍ಗಳನ್ನು ಬಳಸುವುದನ್ನು ತಿಳಿದಿರಬೇಕಾಗುತ್ತದೆ. ಇಂತಹ ಟೂಲ್‍ಗಳಿಂದ ಹೆಚ್ಚು ಕ್ಷಮತೆಯಿಂದ ಡೇಟಾಗಳ ಆಳವಾದ ವಿಶ್ಲೇಷಣೆ ಮಾಡಲು ಸಾಧ್ಯವಾಗುತ್ತದೆ. ಪೈಥಾನ್(Pqsಠಿeಟ್ಞ) ಮತ್ತು ಆರ್‍ಗಳು ಈಗ ಹೆಚ್ಚು ಜನಪ್ರಿಯತೆ ಪಡೆದಿರುವ ಪೆÇ್ರೀಗ್ರಾಮಿಂಗ್ ಭಾಷೆಗಳಾಗಿವೆ.
ಸ್ಟಾಟಿಸ್ಟಿಕ್ಸ್: ಕಡಿಮೆಯೆಂದರೂ ನಿಮಗೆ ವಿವರಣಾತ್ಮಕ ಮತ್ತು ತಾರ್ಕಿಕ ಸಂಖ್ಯಾಶಾಸ್ತ್ರದ ಮೂಲಭೂತ ಅಂಶಗಳನ್ನು ಅರ್ಥಮಾಡಿಕೊಳ್ಳುವುದು ತಿಳಿದಿರಬೇಕಾಗುತ್ತದೆ. ವಿವಿಧ ಬಗೆಯ ವಿತರಣೆಗಳು, ಯಾವ ಸ್ಟಾಟಿಸ್ಟಿಕಲ್ ಟೆಸ್ಟ್ ಯಾವ ಕಾಂಟೆಸ್ಟ್‍ಗೆ ಅನ್ವಯವಾಗುತ್ತದೆ ಇತ್ಯಾದಿಗಳನ್ನು ತಿಳಿದುಕೊಳ್ಳಲು ಗೊತ್ತಿರಬೇಕಾಗುತ್ತದೆ.
ಮೆಷಿನ್ ಲರ್ನಿಂಗ್: ನಿಮ್ಮಲ್ಲಿ ಬೃಹತ್ ಪ್ರಮಾಣದ ಡೇಟಾಗಳಿದ್ದಾಗ ಮೆಷಿನ್ ಲರ್ನಿಂಗ್ ತಂತ್ರವು ಹೆಚ್ಚು ಪರಿಣಾಮಕಾರಿಯಾಗಿ ನೆರವಾಗುತ್ತದೆ. ಇದಕ್ಕೆ ಸಂಬಂಧಿಸಿದ ಕೆಲವು ಸಾಮಾನ್ಯ ಅಲ್ಗೊರಿದಂ(ಕ್ರಮಾವಳಿ)ಗಳನ್ನು ಅರ್ಥಮಾಡಿಕೊಳ್ಳಬೇಕು. ಯಾವಾಗ ಅಲ್ಗೊರಿದಂ ಅನ್ನು ಬಳಕೆ ಮಾಡಬೇಕು ಎಂಬ ಜ್ಞಾನವೂ ಅತ್ಯಂತ ಅಗತ್ಯ.
ಕಮ್ಯುನಿಕೇಷನ್ಸ್ ಮತ್ತು ಡೇಟಾ ವಿಷುಯಲೈಜೇಷನ್: ಡೇಟಾ ಅನಾಲಿಸ್ಟ್ ಕೆಲಸ ಕೇವಲ ಡೇಟಾಗಳ ಅರ್ಥವಿವರಣೆ ನೀಡುವುದು ಮಾತ್ರವಲ್ಲ. ನೀವು ಏನು ಕಂಡುಕೊಂಡಿದ್ದೀರೋ ಅದನ್ನು ಇತರ ಪಾಲುದಾರರ ಜೊತೆ ಪರಿಣಾಮಕಾರಿಯಾಗಿ ಸಂವಹನ ಮಾಡುವುದು ಸಹ ಅಗತ್ಯವಿದೆ. ಇದರಿಂದ ಡೇಟಾ ಮಾಹಿತಿ ಕುರಿತು ಸಮರ್ಪಕ ತೀರ್ಮಾಣ ಕೈಗೊಳ್ಳಲು ಸಾಧ್ಯವಾಗುತ್ತದೆ.
ಗೊತ್ತಿರಬೇಕಾದ ಟೂಲ್ಸ್
ಕೆಲವು ಜನಪ್ರಿಯ ಪೆÇ್ರೀಗ್ರಾಮಿಂಗ್ ಭಾಷೆ ಮತ್ತು ಟೂಲ್ಸ್‍ಗಳ ಮಾಹಿತಿ ಇಲ್ಲಿದೆ. ಎಲ್ಲಕ್ಕಿಂತ ಮುಖ್ಯವಾಗಿ ಪೈಥಾನ್ ಟೂಲ್ಸ್‍ನಲ್ಲಿ ಪಂಟರಾಗುವುದು ಅತ್ಯಂತ ಮುಖ್ಯ.
ಪೈಥಾನ್ ಅಥವಾ ಆರ್: `ಸಿ'ಗೆ ಹೋಲಿಸಿದರೆ ಇವೆರಡು ಪೆÇ್ರೀಗ್ರಾಮಿಂಗ್ ಭಾಷೆಗಳು ಕಲಿಯಲು ಸರಳವೆನ್ನುವುದು ಮಾತ್ರವಲ್ಲದೆ ಡೇಟಾ ಅನಾಲಿಸಿಸ್‍ನಿಂದ ಡೇಟಾ ವಿಷುಯಲೈಜೇಷನ್ ತನಕ ಹಲವು ಜನಪ್ರಿಯ ಡೇಟಾ ಸೈನ್ಸ್ ಲೈಬ್ರೆರಿಗಳನ್ನು ಈ ಎರಡು ಭಾಷೆಗಳ ನೆರವಿನಿಂದಲೇ ನಿರ್ಮಿಸಲಾಗಿದೆ.
ಪಾಂಡಾಸ್/ನುಂಪಿ/ಶಿಪಿ: ಪೈಥಾನ್ ಡೇಟಾ ಸೈನ್ಸ್ ಲೈಬ್ರೆರಿಯ ಈ ಮೂರು ಪೆÇ್ರೀಗ್ರಾಮ್‍ಗಳು ಜೊತೆಯಾಗಿ ಕಾರ್ಯನಿರ್ವಹಿಸಬೇಕಾಗುತ್ತದೆ. ಇದರಲ್ಲಿ ಸಂಖ್ಯಾತ್ಮಕ ರಚನೆ ಅಥವಾ ಸಮಯದ ಸರಣಿ ಡೇಟಾಗಳನ್ನು ವಿಶ್ಲೇಷಿಸಲು ಮತ್ತು ನಿರ್ವಹಿಸಲು ಪಾಂಡಾಸ್ ಬಳಕೆಯಾಗುತ್ತದೆ. ಸಾಮಾನ್ಯವಾಗಿ ಬಳಸುವ ಸೈಂಟಿಫಿಕ್ ಮತ್ತು ಮ್ಯಾಥಮೆಟಿಕಲ್ ಕಾರ್ಯಗತಗೊಳಿಸಲು ಘ್ಠೆಞmqs ಟೂಲ್ ನೆರವಾಗುತ್ತದೆ. ನುಂಪಿಯ ವಿಸ್ತರಿತ ಟೂಲ್ ಖ್ಚಜಿmqs ಆಗಿದ್ದು, ಇದರಲ್ಲಿ ಮ್ಯಾಥಮೆಟಿಕಲ್ ಅಪರೇಷನ್‍ಗೆ ಬೇಕಾದ ಸಂಪೂರ್ಣ ಫೀಚರ್‍ಗಳಿರುತ್ತದೆ.
ಖ್ಚಜಿhಜಿಠಿಔಛಿZ್ಟ್ಞ : ಮೆಷಿನ್ ಲರ್ನಿಂಗ್ ಅಲ್ಗರಿದಂ ಅನ್ನು ದಕ್ಷವಾಗಿ ಮತ್ತು ಸರಿಯಾಗಿ ಅನ್ವಯಗೊಳಿಸುವುದು ಕಠಿಣ. ಇದಕ್ಕಾಗಿ ಸೈಕಿಟ್ ಲರ್ನ್ ಟೂಲ್ ಬಳಸುವುದನ್ನು ಕಲಿತರೆ ತೊಂದರೆ ನಿವಾರಣೆಯಾಗುತ್ತದೆ. ಇವು ಮಾತ್ರವಲ್ಲದೆ IZಠಿಠಿm್ಝಟಠಿಜಿಚಿ, ಎಜm್ಝಟಠಿ2, ಈ3.್ಜo, ಏSIಔ, ಇಖಖ, ಒZqZಖ್ಚ್ಟಜಿmಠಿ ಇತ್ಯಾದಿಗಳ ಬಗ್ಗೆಯೂ ನಿಮಗೆ ತಿಳಿದಿರಬೇಕಾಗುತ್ತದೆ.
ಒಟ್ಟಾರೆ ಅತ್ಯಧಿಕ ಬೇಡಿಕೆಯಿರುವ ಡೇಟಾ ಅನಾಲಿಸ್ಟ್ ಕೋರ್ಸ್‍ಗಳಿಗೆ ಶಿಕ್ಷಣ ಸಂಸ್ಥೆಗಳೂ ಅತ್ಯಧಿಕ ಶುಲ್ಕ ಕೇಳಬಹುದು. ಕೆಲವೊಂದು ಶಿಕ್ಷಣ ಸಂಸ್ಥೆಗಳು ಅಲ್ಪಾವಧಿಯ ಆರಂಭಿಕ ಕೋರ್ಸ್‍ಗಳಿ ಹತ್ತು ಸಾವಿರ ರೂ. ಆಸುಪಾಸಿನ ಶುಲ್ಕ ಕೇಳುತ್ತವೆ. ಯಾವುದೇ ಶಿಕ್ಷಣ ಸಂಸ್ಥೆಗೆ ಜಾಯಿನ್ ಆಗುವ ಮೊದಲು ಅಲ್ಲಿರುವ ಪರಿಣತರು, ಕಲಿಕಾ ರೀತಿ ಇತ್ಯಾದಿಗಳನ್ನು ತಿಳಿದುಕೊಳ್ಳಿ. ಸಾಧ್ಯವಾದರೆ, ಈಗಾಗಲೇ ಈ ಕ್ಷೇತ್ರದಲ್ಲಿ ದುಡಿಯುತ್ತಿರುವ ನಿಮ್ಮ ಪರಿಚಿತರ ಅಭಿಪ್ರಾಯ ಕೇಳಿ ಮುಂದುವರೆಯಿರಿ.
ಬಾಕ್ಸ್
ಎಲ್ಲಿ ಕಲಿಯಬಹುದು?
ಕ್ಲಾಸ್ ರೂಂ ಕಲಿಕೆ
ಎನ್‍ಐ ಅನಾಲಿಟಿಕ್ಸ್: ಬೆಂಗಳೂರಿನಲ್ಲಿರುವ ಸೆಂಟರ್ ಫಾರ್ ಎಸ್‍ಎಎಸ್ ಟ್ರೈನಿಂಗ್‍ನಲ್ಲಿ ಡೇಟಾ ಅನಾಲಿಸ್ಟ್ ಸರ್ಟಿಫಿಕೇಷನ್ ನೀಡುತ್ತದೆ. ಇಲ್ಲಿ ಕ್ಲಾಸ್‍ರೂಂ ಅಧ್ಯಯನ ಮಾತ್ರವಲ್ಲದೆ, ಆನ್‍ಲೈನ್ ಮತ್ತು ದೂರಶಿಕ್ಷಣದ ಮೂಲಕವೂ ಕಲಿಯುವ ಅವಕಾಶವಿದೆ. ಆನ್‍ಲೈನ್ ಮತ್ತು ದೂರಶಿಕ್ಷಣದ ಮೂಲಕ ಕಲಿಯುವವರಿಗೆ ನೇರ ವಿಡಿಯೋ ಕಾನ್ಫರೆನ್ಸ್ ಮೂಲಕವೂ ಹೇಳಿಕೊಡಲಾಗುತ್ತದೆ. ಹೆಚ್ಚಿನ ಮಾಹಿತಿಗೆ: ಡಿಡಿಡಿ.್ಞಜಿZ್ಞZ್ಝqsಠಿಜ್ಚಿoಜ್ಞಿbಜಿZ.್ಚಟಞ
ಬೆಂಗಳೂರಿನ ಕೋರಮಂಗಲದಲ್ಲಿರುವ ಸ್ಟಡಿಅನಾಲಿಟಿಕ್ಸ್‍ನಲ್ಲೂ ಡೇಟಾ ಅನಾಲಿಸ್ಟ್ ಕೋರ್ಸ್ ಮಾಡಬಹುದು. ಹೆಚ್ಚಿನ ಮಾಹಿತಿಗೆ ವೆಬ್‍ವಿಳಾಸ: eಠಿಠಿm://oಠ್ಠಿbqsZ್ಞZ್ಝqsಠಿಜ್ಚಿo.ಜ್ಞಿ
ಕೊಯಿಂಗ್ ಇಂಡಿಯಾದಲ್ಲೂ ಕ್ಲಾಸ್‍ರೂಂ ಮತ್ತು ಆನ್‍ಲೈನ್ ಮೂಲಕ ಡೇಟಾ ಅನಾಲಿಟಿಕ್ಸ್ ಕೋರ್ಸ್ ಮಾಡಬಹುದು. ಹೆಚ್ಚಿನ ಮಾಹಿತಿಗೆ: eಠಿಠಿm://ಚಿಜಿಠಿ.್ಝqs/1Pಡಿಘೆಏ್ಕಘ
ಆನ್‍ಲೈನ್ ಕಲಿಕೆ
ಡೇಟಾ ಅನಾಲಿಸ್ಟ್ ಸರ್ಟಿಫಿಕೇಷನ್ ಅನ್ನು ಆನ್‍ಲೈನ್‍ನಲ್ಲೂ ಪಡೆಯಬಹುದು.
ಜಿಗ್‍ಸಾಅಕಾಡೆಮಿ: ಡಿಡಿಡಿ.್ಜಜಿಜoZಡಿZ್ಚZbಛಿಞqs.್ಚಟಞ ನಲ್ಲಿ ವಿವಿಧ ಬಗೆಯ ಡೇಟಾ ಅನಾಲಿಸ್ಟ್ ಕೋರ್ಸ್‍ಗಳು ಲಭ್ಯ ಇವೆ. ಆರಂಭಿಕ ಕೋರ್ಸಿಗೆ 7 ಸಾವಿರ ರೂ. ಇದೆ.
ಅನಾಲಿಟಿಕ್ಸ್ ಲ್ಯಾಬ್ಸ್: ಡಿಡಿಡಿ.Z್ಞZ್ಝqsಠಿಜ್ಡ್ಝಿZಚಿo.್ಚಟ.ಜ್ಞಿ ನಲ್ಲಿ ಡೇಟಾ ವಿಷುಯಲೈಜೇಷನ್ ಆ್ಯಂಡ್ ಅನಾಲಿಸ್ಟ್ ಕೋರ್ಸ್‍ಗೆ 20 ಸಾವಿರ ರೂ. ಶುಲ್ಕವಿದೆ.
ನೀವಿರುವ ನಗರ, ಊರಿಗೆ ಸಮೀಪವಿರುವ ಶೈಕ್ಷಣಿಕ ಸಂಸ್ಥೆಗಳಲ್ಲಿ ಡೇಟಾ ಅನಾಲಿಸಿಸ್, ಎಸ್‍ಎಎಸ್ ಕೋರ್ಸ್‍ಗಳಿವೆಯೇ ಎಂದು ವಿಚಾರಿಸಿ. ಗೂಗಲ್‍ನಲ್ಲಿಯೂ ನಿಮ್ಮ ಸಮೀಪದಲ್ಲಿರುವ ಶಿಕ್ಷಣ ಸಂಸ್ಥೆಗಳ ಮಾಹಿತಿ ಪಡೆಯಬಹುದು.
0 ಪ್ರತಿಕ್ರಿಯೆಗಳು: