ಫಾರಿನ್ ಎಂಬ ಮೂರಕ್ಷರದ ಸೆಳೆದ ಅಗಾಧವಾದದ್ದು. ವಿದೇಶಕ್ಕೆ ತೆರಳಿ ಅಲ್ಲಿ ಕೈತುಂಬಾ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎನ್ನುವುದು ಬಹುತೇಕರ ಕನಸು. ಫಾರಿನ್‍ಗೆ ಹೋಗಿ ಬಂದವರನ್ನು ಕಂಡಾಗ ನಮ್ಮಲ್ಲಿನ ಯುವಕರಿಗೂ ಆಸೆ ಚಿಗುರುತ್ತದೆ. ನಾವೂ ಅವರಂತಾಗಬೇಕು ಎಂದು ಸಾಲಗೀಲ ಮಾಡಿ ವೀಸಾ, ಪಾಸ್‍ಪೆÇೀರ್ಟ್ ರೆಡಿ ಮಾಡುತ್ತಾರೆ. ಕಾಣದ ಕಡಲಿಗೆ ಹಂಬಲಿಸಿದ ಮನದಂತೆ ಗೊತ್ತಿಲ್ಲದ ಊರಿಗೆ ಪ್ರಯಾಣ ಬೆಳೆಸುತ್ತಾರೆ.
ನಿಮಗೆ ಗೊತ್ತಿರಬಹುದು. ದುಬೈನಲ್ಲೀಗ ಮಹಾ ಬಿಕ್ಕಟ್ಟು. ತೈಲವನ್ನು ಮೊಗೆಮೊಗೆದು ಹಣ ಸಂಪಾದಿಸಿ ಶ್ರೀಮಂತವಾದ ಕೊಲ್ಲಿ ರಾಷ್ಟ್ರದಲ್ಲೀಗ ವಿದೇಶಿಗರು ಹಸಿವಿನಿಂದ ಕಂಗೆಟ್ಟಿದ್ದಾರೆ. ಲಕ್ಷ ಲಕ್ಷ ಭಾರತೀಯರು ಭಾರತಕ್ಕೆ ವಾಪಸ್ಸಾಗಲೂ ಆಗದೆ, ಅಲ್ಲಿರಲು ಆಗದೆ ತತ್ತರಿಸಿದ್ದಾರೆ. ಕಣ್ಣುಮುಚ್ಚಿ ವಿದೇಶಕ್ಕೆ ಉದ್ಯೋಗದ ಆಸೆಯಿಂದ ಹೋಗುವವರಿಗೆ ಇದು ಎಚ್ಚರಿಕೆಯ ಗಂಟೆಯಾಗಬಲ್ಲದು. ವಿದೇಶಿ ಉದ್ಯೋಗದ ಕನಸಿನಲ್ಲಿರುವವರಿಗೆ ಒಂದಿಷ್ಟು ಟಿಪ್ಟ್‍ಗಳು ಇಲ್ಲಿವೆ.
* ಪ್ರವೀಣ್ ಚಂದ್ರ ಪುತ್ತೂರು
ಮಧ್ಯವರ್ತಿಗಳಿಂದ ಮೋಸ: ವಿದೇಶದಲ್ಲಿ ಕೆಲಸ ಮಾಡಲು ಬಯಸುವ ಭಾರತೀಯರನ್ನು ವಂಚಿಸಲೆಂದೇ ಸಾಕಷ್ಟು ವಂಚಕರು ಬಕಪಕ್ಷಿಗಳಂತೆ ಕಾದುಕುಳಿತಿದ್ದಾರೆ. ಫಾರಿನ್‍ನಲ್ಲಿ ಜಾಬ್ ನೀಡುತ್ತೇವೆ ಎಂದು ಭರವಸೆ ನೀಡಿ ವೀಸಾ, ಪಾಸ್‍ಪೆÇೀರ್ಟ್ ಇತ್ಯಾದಿ ಶುಲ್ಕವೆಂದು ಹೇಳಿ ಲಕ್ಷಲಕ್ಷ ಪೀಕಿ ಪರವೂರಿನಲ್ಲಿ ನರಕದರ್ಶನ ಮಾಡಿಸಲೆಂದೇ ಹಲವು ಏಜೆನ್ಸಿಗಳು, ಮಧ್ಯವರ್ತಿಗಳು ಇರುತ್ತಾರೆ. ವಿದೇಶಿ ಜಾಬ್ ಆಫರ್ ನೀಡುವ ಅಪರಿಚಿತ ಮಧ್ಯವರ್ತಿಗಳನ್ನು ಯಾವತ್ತೂ ನಂಬಲೇಬೇಡಿ. ಹೀಗಾಗಿ ನಂಬಿಕಸ್ಥ ಏಜೆನ್ಸಿಗಳ ಮುಖಾಂತರ ಮಾತ್ರ ಹೋಗಿ. ನೀವು ಆಯ್ಕೆ ಮಾಡಿಕೊಳ್ಳುವ ಏಜೆನ್ಸಿಗಳ ಕುರಿತು ಏನಾದರೂ ದೂರುಗಳಿವೆಯೇ ಎಂದು ಆನ್‍ಲೈನ್ ಫಾರಮ್‍ಗಳಲ್ಲಿ ಹುಡುಕಾಡಿ.
ವೀಸಾದ ವಿಷಯ: ನಿಮಗೆ ಉದ್ಯೋಗದ ಆಫರ್ ಜೊತೆ ನೀಡಿರುವ ವೀಸಾವನ್ನು ಸರಿಯಾಗಿ ಓದಿಕೊಳ್ಳಿ. ಕೆಲವರು ವಿಸಿಟಿಂಗ್ ವೀಸಾ ಕೊಟ್ಟು ನಿಮ್ಮನ್ನು ಕೆಲಸಕ್ಕೆ ಕಳುಹಿಸುತ್ತಾರೆ. ಆಮೇಲೆ ನೀವು ಆ ದೇಶದಲ್ಲಿ ಕದ್ದು ಮುಚ್ಚಿ (ಕೆಲವೊಮ್ಮೆ ಸಂಪೂರ್ಣವಾಗಿ ಗ್ರಹಬಂಧನದಲ್ಲಿ) ಬದುಕಬೇಕಾಗುತ್ತದೆ. ಹೀಗಿದ್ದರೆ, ಅಲ್ಲಿಂದ ವಾಪಸ್ ಬರಲು ಸಹ ಕಳ್ಳತನದ ಹಾದಿಯನ್ನೇ ಹಿಡಿಯಬೇಕಾಗುತ್ತದೆ. ಸಿಕ್ಕಿಬಿದ್ದರೆ ಕಠಿಣ ಶಿಕ್ಷೆಗೂ ಒಳಗಾಗಬೇಕಾಗುತ್ತದೆ. ವೀಸಾದ ಅವಧಿ ಎಷ್ಟಿದೆ ಎಂದು ಖಚಿತಪಡಿಸಿಕೊಳ್ಳಿ. ಅತ್ಯಂತ ಕಡಿಮೆ ಅವಧಿಯದ್ದಾಗಿದ್ದರೆ ವಾಪಸ್ ಬರಲು ವ್ಯವಸ್ಥೆಯೇನಿದೆ? ನೀವು ಅಷ್ಟು ದಿನ ದುಡಿದ ಹಣ ವಿಮಾನ ಟಿಕೇಟ್‍ಗೆ ಸಾಕಾಗಬಲ್ಲದೇ? ತಿಳಿದುಕೊಳ್ಳಿ.
ಯಾವ ಕಂಪನಿ?: ನಿಮಗೆ ಯಾವ ಕಂಪನಿಯಿಂದ ಜಾಬ್ ಆಫರ್ ಬಂದಿದೆ ಎಂದು ತಿಳಿದುಕೊಳ್ಳಿ. ಅಂತಹ ಕಂಪನಿ ಅಸ್ತಿತ್ವದಲ್ಲಿದೆಯೇ ತಿಳಿದುಕೊಳ್ಳಿ. ನಿಮಗೆ ಉದ್ಯೋಗದ ಆಫರ್ ನೀಡಿದ ಕಂಪನಿಯ ಅಸಲಿಯತ್ತನ್ನು ವೆಬ್‍ಸೈಟ್‍ನಲ್ಲಿಯೂ ಪರಿಶೀಲಿಸಬಹುದು. ಇದು ಬೆಂಗಳೂರಿನ ರಿಜೋರ್ಸ್ ರಿಸೋರ್ಸ್ ಫೌಂಡೇಷನ್ ಆಗಿದ್ದು, ಅಸಲಿ ಮತ್ತು ನಕಲಿ ಕಂಪನಿಗಳನ್ನು ಖಚಿತಪಡಿಸಲಾಗುತ್ತದೆ.
ಭಾವನಾತ್ಮಕ ಸಂಗತಿ: ಮೊದಲಿಗೆ ನೀವು ಪರವೂರಿನಲ್ಲಿ ಕೆಲಸ ಮಾಡುವಷ್ಟು ಮಾನಸಿಕ ಸಾಮಥ್ರ್ಯ ಹೊಂದಿದ್ದೀರೋ ತಿಳಿದುಕೊಳ್ಳಿ. ಅಲ್ಲಿ ಅತ್ಯಂತ ಕಷ್ಟವನ್ನೂ ಎದುರಿಸಬೇಕಾದೀತು. ಮನೆಯವರ ನೆನಪು ಕಾಡಬಹುದು. ಇವೆಲ್ಲವನ್ನು ಮನಸ್ಸಿನಲ್ಲಿಟ್ಟುಕೊಂಡು ಫಾರಿನ್‍ಗೆ ಹೋಗುವ ಕುರಿತು ನಿರ್ಧಾರ ಮಾಡಿ.
ಎಲ್ಲಿಗೆ ಹೋಗುವಿರಿ?: ತೈಲ ದರ ಇಳಿಕೆಯಿಂದ ಬಿಕ್ಕಟ್ಟು ಅನುಭವಿಸುತ್ತಿರುವ ದುಬೈಗೋ, ಐಸಿಸ್ ಹಾವಳಿ ಅತಿಯಾಗಿರುವ ಇನ್ನೊಂದು ದೇಶಕ್ಕೋ, ಬಂಡುಕೋರರು ಇರುವ ಆ ದೇಶಕ್ಕೋ, ರಾಜಕೀಯ ಸಿತ್ಯಾಂತರದಲ್ಲಿ ಗಲಭೆಯೇಳುತ್ತಿರುವ ದೇಶಕ್ಕೋ, ವಿದೇಶಿಗರ ಮೇಲೆ ಸದಾ ಹಲ್ಲೆ ನಡೆಸುತ್ತಿರುವ ಅಸುರಕ್ಷಿತ ದೇಶಕ್ಕೋ... ಯಾವ ದೇಶಕ್ಕೆ ನೀವು ಹೋಗುವಿರಿ? ಅಲ್ಲಿನ ಬೆಳವಣಿಗೆಗಳೇನು? ಇತ್ಯಾದಿಗಳನ್ನು ತಿಳಿದುಕೊಂಡೇ ಮುಂದುವರೆಯಿರಿ.
ಎಷ್ಟು ವೇತನ ಸಿಗುತ್ತದೆ?: ಕೆಲವು ಉದ್ಯೋಗದ ಆಫರ್‍ಗಳು ಭಾರತದ ಹಣದ ಲೆಕ್ಕದಲ್ಲಿ ಆಫರ್ ನೀಡುತ್ತವೆ. ಆದರೆ, ವಿದೇಶದಲ್ಲಿ ಅಲ್ಲಿನ ಖರ್ಚುವೆಚ್ಚುಗಳು ಹೆಚ್ಚಿರುವುದರಿಂದ ಹಣ ಉಳಿಸುವುದು ಕಷ್ಟವಾಗುತ್ತದೆ. ನಿಮ್ಮ ವೇತನದಲ್ಲಿಯೇ ವಸತಿ ಇತ್ಯಾದಿಗಳೂ ಕಟ್ ಆದರೆ ನಿಮಗೆ ಏನೂ ಉಳಿಯದು. ಅದಕ್ಕಾಗಿ ಅತ್ಯಧಿಕ ಮೊತ್ತದ ಆಫರ್ ಸಿಕ್ಕಿದೆಯೇ, ಸಾಧಾರಣ ವೇತನದ ಆಫರ್ ದೊರಕಿರುವುದೇ ತಿಳಿದು ಮುಂದುವರೆಯಿರಿ. ವಸತಿ ಸೌಲಭ್ಯ ಇಲ್ಲದಿದ್ದರೆ ಗೊತ್ತಿಲ್ಲದ ಊರಿನಲ್ಲಿ ಎಲ್ಲಿ ಉಳಿದುಕೊಳ್ಳುವಿರಿ. ಅದಕ್ಕೆ ಬೇಕಾದಷ್ಟು ಹಣ ಎಲ್ಲಿಂದ ಹೊಂದಿಸುವಿರಿ.
ಕೌಶಲವಿದೆಯೇ?: ಫಾರಿನ್ ಜಾಬ್ ಆಫರ್ ಮಾಡುವಾಗ ನಿಮ್ಮಲ್ಲಿ ಯಾವುದಾದರೂ ಕೌಶಲವನ್ನು ಬಯಸಲಾಗುತ್ತದೆ. ಅಲ್ಲಿ ಹೋದ ಮೇಲೆ ನಿಮ್ಮಲ್ಲಿ ಆ ಕಂಪನಿಗೆ ಬೇಕಾದಷ್ಟು ಕೌಶಲವಿಲ್ಲವೆಂದು ಕೆಲಸದಿಂದ ತೆಗೆದು ಹಾಕಬಹುದು. ಆಗ ನಿಮ್ಮಲ್ಲಿ ಅಭದ್ರತೆ ಉಂಟಾಗಬಹುದು. ಸಿಕ್ಕ ಸಿಕ್ಕ ಕೆಲಸಕ್ಕೆ ಸೇರುವ ಅನಿವಾರ್ಯತೆ ಉಂಟಾಗಬಹುದು. ಹೋದ ಮೇಲೆ ಹೇಗೋ ಮ್ಯಾನೇಜ್ ಮಾಡಬಹುದೆಂದು ಅರೆಬರೆ ಕೌಶಲದೊಂದಿಗೆ ವಿಮಾನ ಹತ್ತಬೇಡಿ. ಆಮೇಲೆ ಕಷ್ಟಪಡಬೇಕಾದೀತು. ಸಂಬಂಧಿತ ಕೌಶಲವನ್ನು ಸರಿಯಾಗಿ ಪಡೆದುಕೊಂಡೇ ಫಾರಿನ್‍ಗೆ ಹೋಗಿ.
ಜಾಬ್ ಲೀಗಲ್ ಆಗಿರುವುದೇ?: ವಿದೇಶದಲ್ಲಿ ಜಾಬ್ ಕೊಡಿಸುತ್ತೇವೆ ಎಂದು ಯಾರೋ ಕರೆದರೂ ಎಂದು ಹೋಗಬೇಡಿ. ಅಲ್ಲಿ ನಿಮಗೇನು ಕೆಲಸವೆಂದು ಖಚಿತಪಡಿಸಿಕೊಳ್ಳಿ. ಕೆಲವೊಮ್ಮೆ ಕಾನೂನು ಬಾಹಿರ ಚಟುವಟಿಕೆಗಳನ್ನು ನಡೆಸುವವರು ವಿದೇಶಿಗರನ್ನು ಬಳಸಬಹುದು. ವಿದೇಶಿ ನೆಲದಲ್ಲಿ ಇಲ್ಲಿಗಲ್ ಚಟುವಟಿಕೆ ನಡೆಸಿ ಸಿಕ್ಕಿ ಬಿದ್ದರೆ ಮತ್ತೆ ಭಾರತಕ್ಕೆ ವಾಪಸ್ ಆಗುವುದು ಕಷ್ಟವಾದೀತು.
ವಿದೇಶದಲ್ಲಿ ಕೆಲಸ ಮಾಡಿ ಕೈತುಂಬಾ ಸಂಪಾದನೆ ಮಾಡಿ ಶ್ರೀಮಂತರಾಗಬೇಕು ಎಂಬ ಕನಸು ಕಾಣುವುದು ತಪ್ಲಲ್ಲ. ಒಳ್ಳೆಯ ಅವಕಾಶ ಸಿಕ್ಕಾಗ ಖಂಡಿತವಾಗಿಯೂ ಹೋಗಬಹುದು. ದೇಶದ ಆರ್ಥಿಕತೆಗೆ ವಿದೇಶದಲ್ಲಿರುವ ಭಾರತೀಯರ ಕೊಡುಗೆ ಸಾಕಷ್ಟಿದೆ. ಆದರೆ, ಫಾರಿನ್ ಜಾಬ್ ಆಫರ್ ಬಂದಾಕ್ಷಣ ಹಿಂದೆಮುಂದೆ ನೋಡದೆ ಹೊರಡುವ ಮೊದಲು ಎಲ್ಲರೂ ಎಚ್ಚರಿಕೆ ವಹಿಸಬೇಕೆನ್ನುವುದೇ ನಮ್ಮ ಕಳಕಳಿ.

ಇತ್ತ ಗಮನಿಸಿ
* ಭಾಷೆ ಗೊತ್ತೆ?: ಉದಾಹರಣೆಗೆ ದುಬೈಗೆ ಹೋದರೆ ಅಲ್ಲಿ ಅರೇಬಿಕ್ ಪ್ರಮುಖ ಭಾಷೆ. ನೀವು ಹೋಗುವ ದೇಶದ ಭಾಷೆ ನಿಮಗೆ ಗೊತ್ತಿದ್ದರೆ ಎಂತಹ ಪರಿಸ್ಥಿತಿಯಿಂದಲೂ ಪಾರಾಗಬಹುದು. ಇಂಗ್ಲಿಷ್‍ನಂತಹ ಭಾಷೆಯಾದರೂ ಗೊತ್ತಿರಲಿ. ನಿಮ್ಮ ಸಂಬಂಧಿಕರು, ಸ್ನೇಹಿತರು ಅಲ್ಲಿದ್ದರೆ ಅವರನ್ನು ಸಂಪರ್ಕಿಸಿ ಸಂಪೂರ್ಣ ಮಾಹಿತಿಗಳನ್ನು ಪಡೆದುಕೊಳ್ಳಿ.
* ಅಲ್ಲಿ ನಿಮಗೆ ಉದ್ಯೋಗ ಗ್ಯಾರಂಟಿ ಇದೆಯೇ ತಿಳಿದುಕೊಳ್ಳಿ. ಕೆಲವು ಏಜೆನ್ಸಿಗಳು ಯಾವುದೋ ಐಟಿ ಉದ್ಯೋಗದ ಆಫರ್ ನೀಡಬಹುದು. ಅಲ್ಲಿ ಹೋದಮೇಲೆ ನೀವು ಮನೆಕೆಲಸ ಅಥವಾ ಒಂಟೆ ತೊಳೆಯುವ ಕೆಲಸ ಮಾಡಬೇಕಾದೀತು.
* ಕಾನೂನು ಅರಿವು ಇರಲಿ: ಆಯಾ ದೇಶದ ವೀಸಾದಲ್ಲಿ ಏನು ಮಾಡಬಹುದು ಮತ್ತು ಏನು ಮಾಡಬಾರದು ಎನ್ನುವುದನ್ನು ಸ್ಪಷ್ಟವಾಗಿ ಉಲ್ಲೇಖಿಸಲಾಗಿರುತ್ತದೆ. ಅದನ್ನು ಸರಿಯಾಗಿ ಓದಿ ಅರ್ಥ ಮಾಡಿಕೊಳ್ಳಿ.
ಆನ್‍ಲೈನ್ ವಂಚಕರಿದ್ದಾರೆ ಎಚ್ಚರಿಕೆ!
ಹೆಸರು ಹರ್ಷ. ಸಾಫ್ಟ್‍ವೇರ್ ಎಂಜಿನಿಯರ್. ಬೆಂಗಳೂರಿನ ವಿದ್ಯಾರಣ್ಯಪುರ ನಿವಾಸಿ (40). ಇವರ ಇಮೇಲ್‍ಗೆ ಒಂದು ಸಂದೇಶ ಬಂದಿತ್ತು. ಲಂಡನ್‍ನ ಬಿ.ಎಚ್. ಸಾಲಿಸಿಟರ್ ಸಾಫ್ಟ್‍ವೇರ್ ಕಂಪನಿಯಲ್ಲಿ ಉದ್ಯೋಗಾವಕಾಶವಿದೆ. ಮಾಸಿಕ 8 ಲಕ್ಷಕ್ಕೂ ಹೆಚ್ಚು ವೇತನ ಮತ್ತು ಇತರ ಸೌಲಭ್ಯವಿದೆ ಎಂದು ಇಮೇಲ್‍ನಲ್ಲಿ ಬರೆಯಲಾಗಿತ್ತು. ಹರ್ಷ ಅವರು ಇಮೇಲ್ ಮೂಲಕವೇ ಉದ್ಯೋಗಕ್ಕೆ ಸೇರಲು ಸಮ್ಮತಿಸಿದರು. ಫಾರಿನ್‍ಗೆ ಹೋಗಲು ವಿವಿಧ ಹಂತಗಳಲ್ಲಿ ಆ ಕಡೆಯಿಂದ ದುಡ್ಡು ಕೇಳಲಾಗಿದೆ. ಏಪ್ರಿಲ್‍ನಿಂದ ಆಕ್ಟೋಬರ್‍ವರೆಗೆ ವಿವಿಧ ಕಂತುಗಳಲ್ಲಿ ಹರ್ಷ 26.50 ಲಕ್ಷ ಪಾವತಿಸಿದ್ದಾರೆ. ನಂತರ ಆ ಕಡೆಯಿಂದ ಇಮೇಲ್ ಬರುವುದು ಸ್ಥಗಿತವಾಗಿದೆ. ಕಳೆದ ವರ್ಷ ಡಿ. 2ರಂದು ಈ ಕುರಿತು ಬೆಂಗಳೂರು ಸೈಬರ್ ಕ್ರೈಂ ಪೆÇಲೀಸ್ ಠಾಣೆಯಲ್ಲಿ ದೂರು ದಾಖಲಾಗಿದೆ. ಇಂತಹ ಹಲವು ಪ್ರಕರಣಗಳು ಪ್ರತಿನಿತ್ಯ ವರದಿಯಾಗುತ್ತಲೇ ಇವೆ. ಮೊಬೈಲ್, ಇಮೇಲ್ ಖಾತೆಗೆ ಉದ್ಯೋಗದ ಆಫರ್ ನೀಡುವ ಅನಾಮಿಕ ಸಂದೇಶಗಳ ಕುರಿತು ಎಚ್ಚರಿಕೆಯಿಂದ ಇರಬೇಕೆಂದು ಸೈಬರ್ ಕ್ರೈಂ ಪೆÇಲೀಸರು ಪದೇ ಪದೇ ಎಚ್ಚರಿಸುತ್ತಲೇ ಇದ್ದಾರೆ.
0 ಪ್ರತಿಕ್ರಿಯೆಗಳು: