ನನ್ನ ಸಿವಿಯನ್ನು ಉದ್ಯೋಗದಾತರು ಓದದೆ ಇದ್ದರೆ?
ಬಹುತೇಕ ಕಂಪನಿಗಳು ನಿಮ್ಮ ಸಿವಿಯನ್ನು ಮೊದಲು ಓದುವುದಿಲ್ಲ. ಕಣ್ಣೋಟದಲ್ಲಿಯೇ ಜಸ್ಟ್ ಸ್ಕ್ಯಾನ್ ಮಾಡುತ್ತಾರೆ. ಇದಕ್ಕಾಗಿ ನೀವು ಸಣ್ಣ ಸಣ್ಣ ವಾಕ್ಯಗಳಲ್ಲಿ ಬರೆದಿರಬೇಕು. ಅನಗತ್ಯ ಮಾಹಿತಿ ಬರೆದಿರಬಾರದು. ಕೀವಡ್ರ್ಸ್ ಬರೆಯಲು ಮರೆತಿರಬಾರದು. ಮಾಹಿತಿಗಳನ್ನು ನೀಟಾಗಿ ಜೋಡಿಸಿರಬೇಕು. ನಿಮ್ಮ ಸ್ಕಿಲ್‍ಗಳ ಮಾಹಿತಿ ಹುಡುಕಲು ಕಂಪನಿಯ ವ್ಯಕ್ತಿ ಹೆಚ್ಚು ತ್ರಾಸ ಪಡುವಂತೆ ಇರಬಾರದು. ಕಣ್ಣಿಗೆ ಹಿತವಾಗಿರುವಂತಹ ಫಾಂಟ್ ಮತ್ತು ಟೆಕ್ಸ್ಟ್‍ಗಳನ್ನು ಬಳಸಿರಿ. ಸಕಾರಾತ್ಮಕ ಭಾಷೆಯಲ್ಲಿ ಬರೆಯಿರಿ. ಅನಗತ್ಯ ಮಾಹಿತಿಗಳಿಗೆಲ್ಲ ಕತ್ತರಿ ಹಾಕಿ. ಅಗತ್ಯವಾದ ವಿಷಯಗಳನ್ನು ಮಾತ್ರ ಸಿವಿ ಅಥವಾ ರೆಸ್ಯೂಂನಲ್ಲಿ ಬರೆಯಿರಿ.
0 ಪ್ರತಿಕ್ರಿಯೆಗಳು: