Tuesday, 4 October 2016

ಇಮೇಲ್‍ನಲ್ಲಿ ಇದೇನಿದು ಸಿಸಿ ಮತ್ತು ಬಿಸಿಸಿ

SHARE
ಬಹುತೇಕರು ಇಮೇಲ್ ಮಾಡುವಾಗ ಸಿಸಿ ಮತ್ತು ಬಿಸಿಸಿಯನ್ನು ಸಮರ್ಪಕವಾಗಿ ಬಳಕೆ ಮಾಡಲು ಮರೆಯುತ್ತಾರೆ. ಈ ರೀತಿ ಮಾಡುವುದರಿಂದ ಈತ `ವೃತ್ತಿಪರ ಅಲ್ಲ' ಅಥವಾ `ತಂತ್ರಜ್ಞಾನದಲ್ಲಿ ಅನಕ್ಷರಸ್ಥ' ಎಂಬ ಭಾವವನ್ನು ಮೇಲಾಧಿಕಾರಿಗಳಿಗೆ ಅಥವಾ ಸಹೋದ್ಯೋಗಿಗಳಿಗೆ ಮೂಡಿಸಬಹುದು.
ಇಮೇಲ್‍ನಲ್ಲಿ ಸಿಸಿರುವ ಸಿಸಿ ಮತ್ತು ಬಿಸಿಸಿ ಎಂದರೇನು ಎಂದು ಹೆಚ್ಚಿನವರು ತಲೆ ಕೆಡಿಸಿಕೊಳ್ಳುವುದಿಲ್ಲ. ಸಿಸಿ ಎಂದರೆ ಕಾರ್ಬನ್ ಕಾಪಿ. ಬಿಸಿಸಿ ಎಂದರೆ ಬ್ಲೈಂಡ್ ಕಾರ್ಬನ್ ಕಾಪಿ. ನೀವು ಯಾರಿಗೆ ಇಮೇಲ್ ಮಾಡುತ್ತೀರೋ ಅವರಿಗೆ ಮಾತ್ರವಲ್ಲದೆ ಇನ್ನೊಬ್ಬರಿಗೂ ಆ ಇಮೇಲ್ ಪ್ರತಿಯನ್ನು ಕಳುಹಿಸುವಾಗ ಬಳಸಬೇಕಾದದ್ದು ಸಿಸಿ. ನೀವು ಒಂದು ಇಮೇಲ್ ವಿಳಾಸದ ಗುಂಪಿಗೆ ಸಂದೇಶ ಕಳುಹಿಸುವಾಗ ಬಿಸಿಸಿ ಬಳಸಬೇಕು. ಬಿಸಿಸಿಯಲ್ಲಿ ಕಳುಹಿಸುವಾಗ ಗ್ರೂಪ್‍ನಲ್ಲಿರುವ ಉಳಿದವರ ಇಮೇಲ್ ವಿಳಾಸ ನೀವು ಕಳುಹಿಸಿದವರಿಗೆ ಕಾಣಿಸುವುದಿಲ್ಲ. ಸಿಸಿಯಲ್ಲಿ ಎಲ್ಲರಿಗೂ ಎಲ್ಲಾ ಇಮೇಲ್ ವಿಳಾಸ ಕಾಣಿಸುತ್ತದೆ. ಬಿಸಿಸಿಯಲ್ಲಿ ಇತರರಿಗೆ ಬೇರೆ ಇಮೇಲ್ ವಿಳಾಸ ಕಾಣಿಸುವುದಿಲ್ಲ. ಅಷ್ಟರ ಮಟ್ಟಿಗೆ ಇಮೇಲ್ ವಿಳಾಸ ಗುಪ್ತವಾಗಿರುತ್ತದೆ.
ಆಫೀಸ್‍ನಲ್ಲಿ ಕಚೇರಿಯಲ್ಲಿರುವ ಎಲ್ಲರಿಗೂ ನೀವು ಯಾವುದಾದರೂ ಸಂದೇಶ ಕಳುಹಿಸುವಾಗ ಬಿಸಿಸಿ ಬಳಸಿ. ನೀವು ರಜಾ ಅರ್ಜಿಯನ್ನು ಮೇಲಾಧಿಕಾರಿಗೆ ಕಳುಹಿಸುವಾಗ ನಿಮ್ಮ ಟೀಂನ ಇತರರಿಗೆ ಸಿಸಿ ಮಾಡಿ. ನೀವು ಹಂಚಿಕೊಳ್ಳುವ ವಿಷಯ ತುಂಬಾ ಗೌಪ್ಯವಾಗಿದ್ದರೆ ಸಿಸಿ, ಬಿಸಿಸಿ ಬಳಸದೆ ನೇರವಾಗಿ ಒಂದೇ ವ್ಯಕ್ತಿಗೆ ಇಮೇಲ್ ಮಾಡಿ. ಇಮೇಲ್‍ನಲ್ಲಿ `ಟು' ಎಂದಿರುವಲ್ಲಿ ನೀವು ಕೇವಲ ಒಂದೇ ವ್ಯಕ್ತಿಯ ಇಮೇಲ್ ವಿಳಾಸ ಬರೆಯುವುದು ಒಳ್ಳೆಯದು. ಉಳಿದವರ ಇಮೇಲ್ ಅನ್ನು ಸಿಸಿಯಲ್ಲಿ ಬರೆಯಿರಿ.
SHARE

Author: verified_user

0 ಪ್ರತಿಕ್ರಿಯೆಗಳು: