ಉದ್ಯೋಗ ಹುಡುಕುವವರು ಮತ್ತು ಈಗಾಗಲೇ ಉದ್ಯೋಗದಲ್ಲಿರುವವರು ಫೇಸ್‍ಬುಕ್‍ನಲ್ಲಿ ತಮ್ಮ ಘನತೆ, ಗೌರವಗಳನ್ನು ಕಾಪಾಡಿಕೊಳ್ಳಬೇಕು. ನಿಮ್ಮ ಸ್ಟೇಟಸ್ ಹೆಚ್ಚಿಸುವ ಮತ್ತು ಕಡಿಮೆಗೊಳಿಸುವ ಶಕ್ತಿ ಫೇಸ್‍ಬುಕ್ ಸ್ಟೇಟಸ್‍ಗೆ ಇದೆ.
* ಫೇಸ್‍ಬುಕ್ ಅನ್ನು ನಿಮ್ಮ ಕರಿಯರ್ ಪ್ರಗತಿಗೆ ಬಳಸಿ.
* ಫೇಸ್‍ಬುಕ್‍ನಲ್ಲಿ ನೀವು ಉದ್ಯೋಗ ಮಾಡುತ್ತಿರುವ ಕಂಪನಿಯ ಬಗ್ಗೆ ಕೆಟ್ಟದ್ದಾಗಿ ಬರೆಯಬೇಡಿ.
* ನಿಮ್ಮ ಪ್ರತಿಸ್ಪರ್ಧಿ ಕಂಪನಿಯ ಬಗ್ಗೆಯೂ ಕೆಟ್ಟದ್ದಾಗಿ ಬರೆಯಬೇಡಿ. ಯಾರಿಗೊತ್ತು ಆ ಕಂಪನಿಯಲ್ಲೂ ಭವಿಷ್ಯದಲ್ಲಿ ನೀವು ಕೆಲಸ ಮಾಡಬೇಕಾಗಬಹುದು.
* ನೀವಿನ್ನೂ ಉದ್ಯೋಗ ಹುಡುಕುವ ಹಂತದಲ್ಲಿದ್ದಾರೆ ನಿಮ್ಮ ಕ್ಷೇತ್ರಕ್ಕೆ ಸಂಬಂಧಿಸಿದ ಪ್ರಮುಖರನ್ನು ಫ್ರೆಂಡ್ ಮಾಡಿಕೊಳ್ಳಿ. ಅವರಲ್ಲಿ ಆಗಾಗ ಸಲಹೆ ಸೂಚನೆಗಳನ್ನು ಕೇಳುತ್ತ ಇರಿ.
* ನಿಮ್ಮ ಆಸಕ್ತಿಯ ಕ್ಷೇತ್ರಗಳಿಗೆ ಸಂಬಂಧಿಸಿದ ಇತರರ ಪೆÇೀಸ್ಟ್‍ಗಳಿಗೆ ಉತ್ತಮವಾಗಿ ಕಮೆಂಟ್ ಮಾಡಿ. ಒಳ್ಳೆಯ ಭಾಷೆಯಲ್ಲಿ ಕಮೆಂಟ್ ಬರೆಯಿರಿ. ಅಕ್ಷರ ತಪ್ಪು ಮಾಡಬೇಡಿ.
* ಧರ್ಮ, ರಾಜಕೀಯದ ವಿಷಯಗಳ ಕುರಿತು ಫೇಸ್‍ಬುಕ್‍ನಲ್ಲಿ ಕೆಸರೆರಚಾಟ ಬೇಡ.
* ಅಶ್ಲೀಲವೆನಿಸುವ ಪೆÇೀಸ್ಟ್‍ಗಳನ್ನು ಲೈಕ್ ಮಾಡಬೇಡಿ.
* ನಿಮ್ಮ ಈಗಿನ ಅಥವಾ ಭವಿಷ್ಯದ ಉದ್ಯೋಗದಾತರು ಫೇಸ್‍ಬುಕ್‍ನಲ್ಲಿ ನಿಮ್ಮನ್ನು ಗಮನಿಸುತ್ತಿದ್ದಾರೆ ಎಂದುಕೊಂಡು ಸ್ಟೇಟಸ್ ಬರೆಯಿರಿ.
* ಫೇಸ್‍ಬುಕ್ ನಿಮ್ಮ ಸ್ಟೇಟಸ್ ಹೆಚ್ಚಿಸಲಿ. ನಿಮ್ಮ ಸ್ಟೇಟಸ್‍ಗೆ ಕುಂದು ಉಂಟುಮಾಡದೆ ಇರಲಿ.
0 ಪ್ರತಿಕ್ರಿಯೆಗಳು: