* ಅರ್ಧ ಗಂಟೆಯಿಂದ ಸ್ನೇಹಿತೆ ಕಳುಹಿಸಿದ ಖಾಲಿ ಎಸ್ಎಂಎಸ್ ಓದುತ್ತಿದ್ದ.
* ಇಂಟರ್ನೆಟ್ನಲ್ಲಿ ಎಲ್ಲವೂ ಸಿಗುತ್ತೆ ಎಂದು ಹೇಳಿದ ಮಗನ ಮಾತು ನೆನಪಿಗೆ ಬಂದು ಮಗನ ಹುಡುಕಿದಳು.
* ಪಕ್ಕದ ಮನೆಯಲ್ಲಿ ಮಗು ಅಳುವುದನ್ನು ಕೇಳಿ ಇವಳು ಅತ್ತಳು.
* ಕೆಲವು ಹಕ್ಕಿಗಳು ಗೂಡು ಕಟ್ಟದೆ, ಮನೆಯ ಮಾಡಿನಲ್ಲಿ ಒಂದೆರಡು ದಿನ ಕುಳಿತು ಹಾರಿ ಹೋಗುತ್ತವೆ.
* ಅವಳು ಆನ್ ಲೈನ್ ಗೆ ಬರೋದನ್ನೇ ಕಾಯುತ್ತಿದ್ದ ಅವನಿಗೆ ಅವಳು ಆಫ್ ಲೈನಲ್ಲಿ ಚಾಟ್ ಮಾಡುತ್ತಿದ್ದ ಸಂಗತಿ ಗೊತ್ತಾಗಲೇ ಇಲ್ಲ.
* ದಯಾಮರಣ ಕಾನೂನು ಸಮ್ಮತವಾಗಿದ್ದರೆ ಇವರನ್ನು ಮುಗಿಸಿಬಿಡಬಹುದಿತ್ತು ಎಂಬ ಗುಸುಗುಸು ಕೇಳಿಸಿಕೊಂಡ ಅಜ್ಜ ಆಸ್ತಿಯನ್ನೆಲ್ಲ ಅನಾಥಶ್ರಮಕ್ಕೆ ಬರೆದುಬಿಟ್ಟ.
ನಿನ್ನ ನೆನಪು
ಸೂಜಿಮೊನೆ
ಎದೆಯಲ್ಲಿ ಚುಚ್ಚಿದ ಹಾಗೆ
ಯಾತನೆ
ಹೆಜ್ಜೆ
ಅವಳ ಹೆಜ್ಜೆ ಸದ್ದಾಗುವುದಿಲ್ಲ
ಆದರೆ
ಅವಳ ಕಾಲ್ಗೆಜ್ಜೆ
ಸುಮ್ಮನಿರುವುದಿಲ್ಲ
ತಾಳ
ಅಂದಿನ
ಹುಡುಗಿಯರ ಹೆಜ್ಜೆಗೆ
ಗೆಜ್ಜೆಯ ಸದ್ದಾಗಿತ್ತು ತಾಳ
ಇಂದಿನ
ಹುಡುಗಿಯರ ಹೆಜ್ಜೆಗೆ
ಹೈಹೀಲ್ಡ್‌ನ ಸದ್ದೇ
ಬ್ಯಾಂಡುಮೇಳ
0 ಪ್ರತಿಕ್ರಿಯೆಗಳು: