Thursday, 9 August 2018

ಕರ್ನಾಟಕ ಬೆಸ್ಟ್ ಈಗ ವೆಬ್ ತಾಣವಾಗಿದೆ. ಹೊಸ ಲೇಖನಗಳ ಪಟ್ಟಿ ಇಲ್ಲಿದೆ

SHARE


ಕನ್ನಡ ವೆಬ್ ಸೈಟ್ ಗಳಿಗೆ ಜಾಹೀರಾತು ಮೂಲಗಳು ಯಾವುದಿವೆ?

ಭಾರತದ ಕೆಲವು ಭಾಷೆಗಳಿಗೆ ಗೂಗಲ್ ಆ್ಯಡ್ ಸೆನ್ಸ್ ಇನ್ನೂ ಬೆಂಬಲ ನೀಡುತ್ತಿಲ್ಲ. ಗೂಗಲ್  ಆ್ಯಡ್ ಸೆನ್ಸ್ ನಲ್ಲಿ ಬೆಂಬಲಿತ ಭಾಷೆಗಳಲ್ಲಿ ಕನ್ನಡ ಭಾಷೆಯಿನ್ನೂ ಸೇರ್ಪಡೆಯಾಗಿಲ್ಲ (ಗೂಗಲ್ ನ್ಯೂಸ್ ನಲ್ಲಿಯೂ ಕನ್ನಡವಿನ್ನು ಬಂದಿಲ್ಲ). ಈ ವರ್ಷದ ಆರಂಭದಲ್ಲಿ ತಮಿಳು ಭಾಷೆಗೆ ಗೂಗಲ್ ಆ್ಯಡ್ ಸೆನ್ಸ್ ಬೆಂಬಲ ದೊರಕಿದೆ. ತಮಿಳು ವೆಬ್ ಸೈಟ್ ಗಳು, ಬ್ಲಾಗ್ ಗಳು ಆ್ಯಡ್ ಸೆನ್ಸ್ ಅಳವಡಿಸಿಕೊಂಡು ಹಣ ಸಂಪಾದಿಸಬಹುದು. ವಿಶೇಷವೆಂದರೆ ಕರ್ನಾಟಕದ ಇನ್ನೊಂದು ನೆರೆ ರಾಜ್ಯವಾದ ತೆಲುಗು ಭಾಷೆಗೂ ಈಗ ಆ್ಯಡ್ ಸೆನ್ಸ್ ಬೆಂಬಲ ದೊರಕುತ್ತದೆ. ಹಿಂದಿ ಭಾಷೆಗಂತೂ… Read More »

ಕಾರಿನ ಎಂಜಿನ್ ಕಾರ್ಯನಿರ್ವಹಣೆ ಕುರಿತು ತಿಳಿಯಿರಿ

Photo credit: wikipedia
image credit: wikipedia ಕಾರು ಎಂದರೆ ಎಲ್ಲರಿಗೂ ಅಚ್ಚುಮೆಚ್ಚು. ಹೊಸ ಅಥವಾ ಹಳೆಯ ಕಾರು ಖರೀದಿಸಿ ಓಡಿಸುವ ಮಜವೇ ಬೇರೆ. ಕಾರಿನ ಚಕ್ರಗಳು, ಸ್ಟಿಯರಿಂಗ್, ಬಿಡಿಭಾಗ ಇತ್ಯಾದಿಗಳ ಸಾಮಾನ್ಯ ಜ್ಞಾನವನ್ನು ಬಹುತೇಕರು ಹೊಂದಿರಬಹುದು. ಆದರೆ, ಕಾರಿನ ಹೃದಯಭಾಗವಾದ ಎಂಜಿನ್ ಹೇಗೆ ಕಾರ್ಯನಿರ್ವಹಿಸುತ್ತದೆ ಎಂಬ ಮಾಹಿತಿ ಬಹುತೇಕರಿಗೆ ಇರಲಿಕ್ಕಿಲ್ಲ. ಆಟೋಮೊಬೈಲ್ ಎಂಜಿನಿಯರಿಂಗ್ ಅಥವಾ ಅದಕ್ಕೆ ಸಂಬಂಧಪಟ್ಟ ಅಧ್ಯಯನಗಳನ್ನು ಮಾಡಿದವರಿಗೆ ಈ ಕುರಿತು ಮಾಹಿತಿ ಇರಬಹುದು. ಇಂಟರ್ನೆಟ್ ನಲ್ಲಿ ಹುಡುಕಿದರೆ ಇದಕ್ಕೆ ಪೂರಕವಾದ ಸಾಕಷ್ಟು ಮಾಹಿತಿಗಳು ಚಿತ್ರಸಮೇತ, ವಿಡಿಯೋ ಸಮೇತ ದೊರಕುತ್ತವೆ. ಆದರೆ, ಎಂಜಿನ್… Read More »

ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮ 6 ಮಾರ್ಗಗಳು

ಮರೆವು ವರವೂ ಹೌದು. ಶಾಪವೂ ಹೌದು. ತುಂಬಾ ದುಃಖದ ಸನ್ನಿವೇಶಗಳು, ಬದುಕಿನಲ್ಲಿ ನಡೆದ ಘಟನೆಗಳು ಬೇಕು ಎಂದರೂ ಮರೆಯುವುದಿಲ್ಲ. ಸದಾ ಬೆಂಬಿಡದೆ ಕಾಡುತ್ತಿರುತ್ತದೆ. ಆದರೆ, ಪರೀಕ್ಷೆ ಇತ್ಯಾದಿ ಸಂದರ್ಭದಲ್ಲಿ ಕೆಲವೊಂದು ವಿಷಯಗಳು ಎಷ್ಟು ಜ್ಞಾಪಿಸಿಕೊಂಡರೂ ನೆನಪಿಗೆ ಬರುವುದಿಲ್ಲ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಕರ್ನಾಟಕ ಬೆಸ್ಟ್ ಒಂದಿಷ್ಟು ಸಲಹೆಗಳನ್ನು ನೀಡುತ್ತಿದೆ. ಇದನ್ನು ಅನುಸರಿಸುವ ಮೂಲಕ ಅತ್ಯುತ್ತಮ ಮೆಮೊರಿ ಪವರ್ ಪಡೆಯಬಹುದು. ಈಗಿನ ಜೀವನಶೈಲಿಯೂ ನೆನಪಿನ ಶಕ್ತಿ ಕುಂಠಿತವಾಗಲು ಕಾರಣ ಎನ್ನುತ್ತಾರೆ ತಜ್ಞ ವ್ಯದ್ಯರುಗಳು. ಪರೀಕ್ಷೆಗೆ ಸಿದ್ಧತೆ ನಡೆಸುವವರು ನೋಟ್ಸ್ ಬರೆದಿಟ್ಟುಕೊಳ್ಳುವ ಮೂಲಕ,… Read More »

ವ್ಯಕ್ತಿತ್ವ ವಿಕಸನ: ಲೀಡರ್ ಆಗುವುದು ಹೇಗೆ?

Photo Credit: der-bank-blog
ನಾಯಕತ್ವದ ಕುರಿತು “Are Leaders Born or Made?’ ಎಂಬ ಪ್ರಶ್ನೆ ತುಂಬಾ ಫೇಮಸ್. ಕೆಲವರ ಪ್ರಕಾರ ನಾಯಕತ್ವವೆನ್ನುವುದು ಹುಟ್ಟುಗುಣ, ನಾಯಕರನ್ನು ನಿಸರ್ಗವೇ ಸೃಷ್ಟಿಸುತ್ತದೆ. ಇನ್ನು ಕೆಲವರ ಪ್ರಕಾರ, ನಾಯಕರು ಹುಟ್ಟುವುದಲ್ಲ, ಅವರು ನಾಯಕರಾಗಿ ಬೆಳೆದವರು’. ರಾಜರುಗಳ ಕಾಲಕ್ಕೆ “Leaders Born ‘ ಎನ್ನುವುದು ಸರಿಯಾದ ಮಾತು ಆಗಿದ್ದೀರಬಹುದು. ಆದರೆ, ಈ ಕಾರ್ಪೋರೆಟ್ ಜಗತ್ತಿನಲ್ಲಿ “Leaders Made’ ಎನ್ನುವುದೇ ಪರಮಸತ್ಯ. `ಹುಟ್ಟುತ್ತಲೇ ಯಾರು ನಾಯಕರಲ್ಲ. ಅವರು ಹುಟ್ಟಿದ ನಂತರ ನಾಯಕರಾದವರು. ಅವರು ಸರಳವಾಗಿ ನಾಯಕರಾದವರಲ್ಲ. ತಮ್ಮ ಕಠಿಣ ಪರಿಶ್ರಮದಿಂದ ಆ ಸ್ಥಾನಕ್ಕೆ… Read More »

400 ರೂ.ಗೆ ಸ್ವಂತ ವೆಬ್ಸೈಟ್ ನಿರ್ಮಿಸುವುದು ಹೇಗೆ?

ವೆಬ್ ಸೈಟ್ ನಿರ್ಮಾಣಕ್ಕೆ ಹಲವು ಸಾವಿರ ರೂಪಾಯಿ ವಿನಿಯೋಗಿಸಬೇಕು. ಆರಂಭದಲ್ಲಿ 3 ಸಾವಿರ ರೂ.ಗೆ ವೆಬ್ಸೈಟ್ ರೂಪಿಸಿಕೊಡುತ್ತೇವೆ ಎನ್ನುವ ವೆಬ್ ಡಿಸೈನರ್ ಗಳು ನಮ್ಮ ಕನಿಷ್ಠ ಬೇಡಿಕೆ ಈಡೇರಿಸಲೂ ಕೆಲವು ಸಾವಿರ ರೂ. ಹೆಚ್ಚಿಸುತ್ತ ಹೋಗುತ್ತಾರೆ. ಒಂದು ಸಾಧಾರಣ ವೆಬ್ ಸೈಟ್ ರೂಪುಗೊಳ್ಳಲು ಕನಿಷ್ಠ 10 ಸಾವಿರ ರೂ. ಪಡೆದೇ ಪಡೆಯುತ್ತಾರೆ. ವರ್ಷಗಳು ಕಳೆದಂತೆ ಆ ಹಣ ಹೆಚ್ಚಾಗುತ್ತ ಹೋಗುತ್ತದೆ. ಯಾವುದೋ ಕನಸಿಟ್ಟುಕೊಂಡು ವೆಬ್ಸೈಟ್ ಆರಂಭಿಸಿದವರಿಗೆ ದಿನಕಳೆದಂತೆ ಇದು ಹೊರೆಯಾಗಿ ಪರಿಣಮಿಸುತ್ತದೆ. ಇಂತಹ ಸಮಯದಲ್ಲಿ 400 ರೂಪಾಯಿಗೆ ವೆಬ್ಸೈಟ್ ನಿರ್ಮಿಸಬಹುದು ಎಂದು… Read More »

ಕಮಲಿ: ಧಾರವಾಹಿಯ ಹಳ್ಳಿಹುಡುಗಿ, ನಿಜ ಜೀವನದಲ್ಲಿ ಹೇಗಿದ್ದಾರೆ?

ಝೀವಾಹಿನಿಯಲ್ಲಿ ಇತ್ತೀಚೆಗೆ ಆರಂಭಗೊಂಡ ಕಮಲಿ ಸೀರಿಯಲ್ ಆರಂಭದಿಂದಲೂ ಇಂಟ್ರೆಸ್ಟಿಂಗ್. ಅದೇ ತಲೆಚಿಟ್ಟುಹಿಡಿಸುವ ಫ್ಯಾಮಿಲಿ ಸೀರಿಯಲ್ ನೋಡಿ ತಲೆಕೆಟ್ಟು ಹೋಗಿರುವವರಿಗೆ ಕಾಲೇಜು ಸ್ಟೋರಿ ಇರುವ ಕಮಲಿ ಇಷ್ಟವಾಗಿರುವುದು ಸುಳ್ಳಲ್ಲ. ಕೊರಿಯನ್ ಡ್ರಾಮಾ ನೆನಪಿಸುವಂತೆ ಇಲ್ಲೂ ಕಾಲೇಜಿನಲ್ಲಿ ನಡೆಯುವ ಘಟನೆಗಳು ಇಂಟ್ರೆಸ್ಟಿಂಗ್. ನಗರದಲ್ಲಿರುವ ಕಾಲೇಜಿಗೆ ಮುಗ್ಧಮುಖದ, ಮುದ್ದಾಗಿ ಮಾತನಾಡುವ ಕಮಲಿಯೆಂದರೆ ಎಲ್ಲರಿಗೂ ಅಚ್ಚುಮೆಚ್ಚು. ಆಕೆಯ ಹಳ್ಳಿ ಶೈಲಿಯ ಮಾತುಗಾರಿಕೆ, ಸಾಧಿಸಬೇಕೆಂಬ ಹಂಬಲ, ಒಳ‍್ಳೆಯತನ, ಮುಗ್ಧತೆ, ಸೌಂದರ್ಯದಲ್ಲಿ ಸ್ನಿಗ್ಧತೆ ಇವೆಲ್ಲದರಿಂದ ಕಮಲಿಯೀಗ ನಿಧಾನವಾಗಿ ಕನ್ನಡಿಗರ ಹೃದಯ ಹೊಕ್ಕಿದ್ದಾರೆ. ಕಮಲಿ ಎಂದರೆ ಹಳ್ಳಿಹುಡುಗಿ. ಎಷ್ಟು ಮುದ್ದುಮುದ್ದಾಗಿ ಹಳ‍್ಳಿ… Read More »

ವ್ಯಕ್ತಿತ್ವ ವಿಕಸನ: ಕೆಲಸದ ಕೊನೆಯ ಹತ್ತು ನಿಮಿಷ ಏನು ಮಾಡುವಿರಿ?

ಯಶಸ್ವಿ ಉದ್ಯೋಗಿಗಳು ತಮ್ಮ ಕೆಲಸದ ಅವಧಿಯ ಕೊನೆಯ ಹತ್ತು ನಿಮಿಷ ಹೇಗಿರುತ್ತಾರೆ? ಏನು ಮಾಡುತ್ತಾರೆ? ಈ ಕುರಿತು ಒಂದಿಷ್ಟು ಮಾಹಿತಿಗಳು ಇಂಟರ್‍ನೆಟ್‍ನಲ್ಲಿ ದೊರಕಿದವು. ಜೊತೆಗೆ ನಾನು ಭೇಟಿಯಾದ ಒಂದಿಷ್ಟು ವ್ಯಕ್ತಿಗಳಲ್ಲಿಯೂ ಇದಕ್ಕೆ ಸಂಬಂಧಪಟ್ಟ ಮಾಹಿತಿಯನ್ನು ಪಡೆದುಕೊಂಡೆ. ಫಲಿತಾಂಶವಾಗಿ ದೊರಕಿದ ಮಾಹಿತಿ ಇಲ್ಲಿ ಮುಂದೆ ನೀಡಲಾಗಿದೆ. ಈ ಲೇಖನ ವಿಜಯ ಕರ್ನಾಟಕ ಮಿನಿಯಲ್ಲಿ ಪ್ರಕಟಗೊಂಡಿದೆ. * ಪ್ರವೀಣ್ ಚಂದ್ರ ಪುತ್ತೂರು ಕರಿಯರ್‍ ನಲ್ಲಿ ಯಶಸ್ವಿಯಾದವರ ಪ್ರತಿ ನಡೆನುಡಿಯಲ್ಲಿಯೂ ಕಲಿಯಲು ಸಾಕಷ್ಟಿರುತ್ತದೆ. ಇಂತಹ ಉದ್ಯೋಗಿಗಳು ಕೆಲಸ ಹೇಗೆ ಆರಂಭಿಸುತ್ತಾರೆ? ಹೇಗೆ ಮುಗಿಸುತ್ತಾರೆ? ಟೀ ಬ್ರೇಕ್/ಊಟದ… Read More »

ಬ್ಲಾಗರ್ ಗೆ ವೆಬ್ ಸೈಟ್ ರೂಪ ನೀಡುವುದು ಹೇಗೆ?

ಆಕರ್ಷಕ ವಿನ್ಯಾಸವಿದ್ದರೆ ನಿಮ್ಮ ಬ್ಲಾಗ್ ಹೆಚ್ಚು ಜನರನ್ನು ಸೆಳೆಯುತ್ತದೆ. ಜೊತೆಗೆ ಬರೆದ ಲೇಖನಗಳು, ಚಿತ್ರಗಳನ್ನು ನೀಟಾಗಿ ಜೋಡಿಸಿದ್ದರೆ ಹೆಚ್ಚು ಕ್ಲಿಕ್ ಪಡೆಯಬಹುದು. ನಿಮ್ಮ ಬ್ಲಾಗ್ ನ್ಯೂಸ್ ವೆಬ್ ಸೈಟಿನಂತೆ ಇದ್ದರೆ ಒಂದೇ ಪುಟದಲ್ಲಿ ಸಾಕಷ್ಟು ಲೇಖನಗಳನ್ನು, ಚಿತ್ರಗಳನ್ನು ಜೋಡಿಸಿಡಲು ಸಾಧ್ಯ. ಹಿಂದಿನ ಸಂಚಿಕೆಯಲ್ಲಿ ಬ್ಲಾಗ್ ಸ್ಪಾಟ್ ನಲ್ಲಿ ಬ್ಲಾಗ್ ರಚಿಸುವುದು ಹೇಗೆ ಎಂಬ ವಿಷಯದ ಕುರಿತು ಸರಳವಾಗಿ ಮಾಹಿತಿ ನೀಡಲಾಗಿತ್ತು. ಅದರ ಮುಂದುವರೆದ ಭಾಗವಾಗಿ ಬ್ಲಾಗರ್ ಬ್ಲಾಗ್ ಗೆ ಕಸ್ಟಮ್ ಟೆಂಪ್ಲೆಟ್ ಗಳನ್ನು ಅಳವಡಿಸುವ ಕುರಿತು ಚರ್ಚಿಸೋಣ. ಹಿಂದಿನ ಸಂಚಿಕೆಯಲ್ಲಿ ನೀವು… Read More »

ಮೌಸ್ ಇಲ್ಲದೆ ಕಂಪ್ಯೂಟರ್ ಬಳಕೆ ಮಾಡುವುದು ಹೇಗೆ ಗೊತ್ತೆ?

ಕಂಪ್ಯೂಟರ್ ಅನ್ನು ಮೌಸ್ ಇಲ್ಲದೆಯೂ ಬಳಕೆ ಮಾಡಲು ಬಯಸುವವರಿಗೆ ಇಲ್ಲೊಂದಿಷ್ಟು ಟಿಪ್ಸ್‍ಗಳಿವೆ #1. ಮೊದಲಿಗೆ ಸ್ಟಾರ್ಟ್‍ಗೆ ಹೋಗಿ. ಕಂಟ್ರೋಲ್ ಪ್ಯಾನೆಲ್ ತೆರೆಯಿರಿ. ಅಲ್ಲಿ `ಈಸಿ ಆಫ್ ಆ್ಯಕ್ಸೆಸ್’ ಎಂಬ ಆಯ್ಕೆಯನ್ನು ಆ್ಯಕ್ಟಿವೇಟ್ ಮಾಡಿರಿ. #2, ಎಫ್1 ಅನ್ನು ಹೆಲ್ಪ್ ಗೆ ಬಳಸಿ. #3. ಸ್ಟಾರ್ಟ್ ಮೆನು ತೆರೆಯಲು ವಿಂಡೋ ಬಟನ್ ಬಳಸಿ. #4. ತೆರೆದಿರುವ ಪ್ರೋಗ್ರಾಂಗಳಲ್ಲಿ ನಿಮಗೆ ಬೇಕಾದ್ದನ್ನು ಆಯ್ಕೆ ಮಾಡಿಕೊಳ್ಳಲು ಆಲ್ಟ್ ಮತ್ತು ಟ್ಯಾಬ್‍ಗಳನ್ನು ಬಳಸಿ. #5. ಯಾವುದಾದರೂ ಪ್ರೋಗ್ರಾಂನಿಂದ ಹೊರಹೋಗಲು ಆಲ್ಟ್ ಮತ್ತು ಎಫ್4 ಬಳಕೆ ಮಾಡಿರಿ. #6. ಡಿಲೀಟ್… Read More »

ಬ್ಲಾಗರ್ ಗೈಡ್: ಉಚಿತ ಬ್ಲಾಗ್ ರಚಿಸುವುದು ಹೇಗೆ?

Blogging tips in Kannada
ಫೇಸ್ಬುಕ್ ಇತ್ಯಾದಿಗಳ ನಂತರ ಬ್ಲಾಗರ್ ಬಳಸುವವರು ಕಡಿಮೆಯಾಗಿದ್ದಾರೆ ಎಂದು ಹೇಳಲಾಗುತ್ತಿದೆ. ಆದರೆ, ಬ್ಲಾಗರ್ ಅನ್ನೇ ಸ್ವಂತ ವೆಬ್ ಸೈಟ್ ಆಗಿ ರೂಪಿಸಿ ಬಹುತೇಕರು ಕೈತುಂಬಾ ಹಣ ಸಂಪಾದಿಸುತ್ತಿದ್ದಾರೆ. ವೆಬ್ ಸೈಟ್ ನಿರ್ಮಾಣಕ್ಕೆ ಹಲವು ಹತ್ತು ಸಾವಿರಗಳನ್ನು ನೀಡಲು ಸಾಧ್ಯವಿಲ್ಲದೆ ಇರುವವರು ಸುಲಭವಾಗಿಯೇ ಬ್ಲಾಗ್ ಸ್ಪಾಟ್ ಗಳಲ್ಲಿಯೇ ಕಂಟೆಂಟ್ ನೀಡಿ ಆ್ಯಡ್ ಸೆನ್ಸ್, ಅಫಿಲಿಸಿಯೇಟ್ ಕಾರ್ಯಕ್ರಮಗಳನ್ನು ಅಳವಡಿಸಿ ಆದಾಯ ಪಡೆಯುತ್ತಿದ್ದಾರೆ. ಬ್ಲಾಗರ್ ಅನ್ನು ವೆಬ್ ಸೈಟ್ ಆಗಿ ಪರಿವರ್ತಿಸುವ ವೇದಿಕೆಯಾಗಿ ಮೊದಲು ಬ್ಲಾಗರ್ ನಲ್ಲಿ ಬ್ಲಾಗ್ ರಚಿಸಲು ಕಲಿಯೋಣ ಬನ್ನಿ. #1 ಮೊದಲಿಗೆ… Read More »
SHARE

Author: verified_user

0 ಪ್ರತಿಕ್ರಿಯೆಗಳು: