Thursday 9 November 2017

ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್

SHARE
ಎಲ್ಲವೂ ಇಂಟರ್‍ನೆಟ್‍ಮಯವಾಗುತ್ತಿರುವ ಈ ಯುಗದಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಬಲ್ಲವರಿಗೆ ಉತ್ತಮ ಬೇಡಿಕೆಯಿದೆ. ಸರ್ಚ್ ಎಂಜಿನ್ ಆಪ್ಟಿಮಿಜೇಷನ್, ಸೋಷಿಯಲ್ ಮೀಡಿಯಾ ಆಪ್ಟಿಮಿಜೇಷನ್ ಸೇರಿದಂತೆ ಡಿಜಿಟಲ್ ಮಾರ್ಕೆಟಿಂಗ್ ತಂತ್ರಗಳನ್ನು ಕಲಿಯಲು ಸೂಕ್ತವಾದ ಸರ್ಟಿಫಿಕೇಷನ್ ಕೋರ್ಸ್‍ಗಳು ಯಾವುವು? ಇಲ್ಲಿದೆ ಮಾಹಿತಿ.


* ಪ್ರವೀಣ್ ಚಂದ್ರ ಪುತ್ತೂರು

ಇದು ಇಂಟರ್‍ನೆಟ್ ಯುಗ. ಮಾರಾಟ ಮತ್ತು ಖರೀದಿಗೆ ಇ-ಕಾಮರ್ಸ್ ಪ್ರಮುಖ ವೇದಿಕೆ. ಯಾವುದೇ ಕಂಪನಿಗೂ ವಹಿವಾಟು ನಡೆಸಲು ಇಂಟರ್‍ನೆಟ್ ಬಳಸುವುದು ಅನಿವಾರ್ಯವಾಗಿಬಿಟ್ಟಿದೆ. ಇಂತಹ ಸಮಯದಲ್ಲಿ ಆನ್‍ಲೈನ್‍ನಲ್ಲಿ ಮಾರುಕಟ್ಟೆ ಮಾಡುವ ಪರಿಣತರಿಗೂ ಉತ್ತಮ ಬೇಡಿಕೆಯಿದೆ. ಇದಕ್ಕೆ ಹಲವು ಸರ್ಟಿಫಿಕೇಷನ್ ಕೋರ್ಸ್‍ಗಳು ಲಭ್ಯ ಇವೆ. ವಿಶೇಷವೆಂದರೆ ಆನ್‍ಲೈನ್‍ನಲ್ಲಿ ಹಲವು ಉಚಿತ ಕೋರ್ಸ್‍ಗಳು ಲಭ್ಯ. ಕೆಲವು ಸರ್ಟಿಫಿಕೇಷನ್ ಕೋರ್ಸ್‍ಗಳು 10ರಿಂದ 50 ಸಾವಿರ ರೂ. ತನಕ ದುಬಾರಿಯಾಗಿದೆ.

ಡಿಜಿಟಲ್ ಮಾರ್ಕೆಟಿಂಗ್ ಎಂದರೇನು?
ಸರಳವಾಗಿ ಹೇಳುವುದಾದರೆ ಯಾವುದಾದರೂ ಉತ್ಪನ್ನ ಅಥವಾ ಬ್ರಾಂಡ್ ಅನ್ನು ವಿವಿಧ ರೀತಿಯ ವಿದ್ಯುನ್ಮಾನ ಮಾಧ್ಯಮಗಳಲ್ಲಿ ಪ್ರಚಾರ ಪಡಿಸುವುದನ್ನು ಡಿಜಿಟಲ್ ಮಾರ್ಕೆಟಿಂಗ್ ಎನ್ನಬಹುದು. ಈಗ ಗೂಗಲ್, ಫೇಸ್‍ಬುಕ್, ಇಮೇಲ್, ಮೊಬೈಲ್, ಸ್ಮಾರ್ಟ್‍ಫೆÇೀನ್ ಇತ್ಯಾದಿ ಮಾಧ್ಯಮಗಳ ಮೂಲಕ ಮಾರುಕಟ್ಟೆ ವಿಸ್ತರಿಸಿಕೊಳ್ಳುವ ವಿಧಾನವನ್ನು ಅನುಸರಿಸುತ್ತದೆ. ಇಂತಹ ನವ ಮಾಧ್ಯಮದಲ್ಲಿ ಉತ್ಪನ್ನ ಅಥವಾ ಬ್ರಾಂಡ್ ಪ್ರಚಾರ ಪಡಿಸಲು ವಿಶೇಷ ಸ್ಕಿಲ್ ಬೇಕಾಗುತ್ತದೆ. ಇಂತಹ ಕೌಶಲಗಳನ್ನು ಡಿಜಿಟಲ್ ಮಾರ್ಕೆಟಿಂಗ್ ಸಂಬಂಧಿತ ಕೋರ್ಸ್‍ಗಳು ಕಲಿಸಿ ಕೊಡುತ್ತವೆ.
ಡಿಜಿಟಲ್ ಮಾರುಕಟ್ಟೆಯ ಬೇಸಿಕ್ಸ್, ಮೂಲಭೂತ ಅಂಶಗಳನ್ನು ತಿಳಿದುಕೊಳ್ಳುವುದು ಅತ್ಯಂತ ಅಗತ್ಯ. ಡಿಜಿಟಲ್ ಮಾರುಕಟ್ಟೆ ಕಾರ್ಯತಂತ್ರ ರೂಪಿಸುವುವುದು, ಮೊಬೈಲ್, ಸರ್ಚ್ ಮತ್ತು ಸೋಷಿಯಲ್ ನೆಟ್‍ವರ್ಕಿಂಗ್ ಇತ್ಯಾದಿ ನವಮಾಧ್ಯಮಗಳನ್ನು ಬಳಸಿ ಮಾರುಕಟ್ಟೆ ವಿಸ್ತರಿಸುವುದು, ಡಿಜಿಟಲ್ ಮಾರುಕಟ್ಟೆಗೆ ಸಂಬಂಧಪಟ್ಟ ಕಾನೂನುಗಳನ್ನು ತಿಳಿದುಕೊಳ್ಳುವುದು ಸಹ ಈ ಸರ್ಟಿಫಿಕೇಷನ್ ಕೋರ್ಸ್‍ಗಳಲ್ಲಿ ಒಳಗೊಂಡಿರುತ್ತದೆ.

ಉಚಿತವಾಗಿ ಕಲಿಯಿರಿ
ಇಂದು ಜಗತ್ತಿನ ವಿವಿಧ ಸಂಸ್ಥೆಗಳು ಆನ್‍ಲೈನ್‍ನಲ್ಲೇ ಉಚಿತವಾಗಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಲು ಅವಕಾಶ ಮಾಡಿಕೊಡುತ್ತಿವೆ. ಈ ಕೆಳಗೆ ನೀಡಿರುವ ಲಿಂಕ್‍ಗಳ ಮೂಲಕ ನೀವೂ ಉಚಿತವಾಗಿ ಕಲಿಯಬಹುದು.
* ಗೂಗಲ್‍ನ ಆನ್‍ಲೈನ್ ಮಾರ್ಕೆಟಿಂಗ್ ಚಾಲೆಂಜಿನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕಲಿಯಬಹುದು. ಇಲ್ಲಿ ವಿಡಿಯೋ ಟ್ಯುಟೋರಿಯಲ್ ಸಹ ಇದ್ದು, ಎಸ್‍ಇಎಂ, ಆ್ಯಡ್‍ವಡ್ರ್ಸ್, ಸೋಷಿಯಲ್ ನೆಟ್‍ವಕ್ರ್ಸ್, ಮೊಬೈಲ್ ಸ್ಟ್ರಾಟರ್ಜಿ ಸೇರಿದಂತೆ ಹಲವು ವಿಷಯಗಳನ್ನು ಕಲಿಯಬಹುದು. ಕೆಲವೊಂದು ವಿಷಯಗಳಲ್ಲಿ ಸರ್ಟಿಫಿಕೇಷನ್ ಸಹ ದೊರಕುತ್ತದೆ.
ಮಾಹಿತಿಗೆ ಲಿಂಕ್: 
* ವಲ್ರ್ಡ್‍ಸ್ಟ್ರೀಮ್ ಎಂಬ ವೆಬ್‍ಸೈಟ್‍ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಕುರಿತು ತುಂಬಾ ಬೇಸಿಕ್ಸ್‍ನಿಂದ ಹಿಡಿದು ಹಲವು ಹಂತಗಳ ಕೋರ್ಸ್‍ಗಳಿವೆ. ಹಂತಹಂತವಾಗಿ ಕಲಿಯುವುದು ಇಲ್ಲಿ ಸುಲಭ. ಲಿಂಕ್:
* ಕಾಪಿಬ್ಲಾಗರ್ ಎಂಬ ವೆಬ್‍ಸೈಟ್ ನಿಮಗೆ ಇಮೇಲ್ ಮೂಲಕ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್‍ಗಳನ್ನು ಕಳುಹಿಸಿಕೊಡುತ್ತದೆ. ಇದರಿಂದ ನೀವು ಕಂಟೆಂಟ್ ಮಾರ್ಕೆಟಿಂಗ್, ಕಾಪಿರೈಟಿಂಗ್, ಎಸ್‍ಇಒ, ಕೀವರ್ಡ್ ರಿಸರ್ಚ್ ಇತ್ಯಾದಿಗಳನ್ನು ಕಲಿಯಬಹುದು. ಲಿಂಕ್
* ಕೊರ್ಸ್‍ರಾ ಎಂಬ ವೆಬ್‍ಸೈಟ್‍ನಲ್ಲಿ ವಾರದಲ್ಲಿ ನಾಲ್ಕೈದು ಗಂಟೆಯಂತೆ 5 ವಾರದ ಡಿಜಿಟಲ್ ಮಾರ್ಕೆಟಿಂಗ್ ಕ್ಲಾಸ್ ಅನ್ನು ನಡೆಸಲಾಗುತ್ತದೆ. ಮುಂದಿನ ಕೋರ್ಸ್ ಫೆಬ್ರವರಿ 22ರಿಂದ ಏಪ್ರಿಲ್ 1ರ ತನಕ ಇದೆ. ಆದಷ್ಟು ಬೇಗ ಭೇಟಿ ನೀಡಿ. ಲಿಂಕ್
* ಹಬ್‍ಸ್ಪಾಟ್‍ನಲ್ಲಿ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಪಡೆಯಲು 18 ಉಚಿತ ತರಗತಿಗಳಿವೆ. ಉಚಿತವೆಂದಿರುವ ಕೋರ್ಸ್ ಅನ್ನು ಈ ಲಿಂಕ್‍ನಲ್ಲಿ ಹುಡುಕಿರಿ. ಲಿಂಕ್

ಇವು ಉಚಿತವಲ್ಲ
ಬೆಂಗಳೂರಿನಲ್ಲಿರುವ ನ್ಯಾಷನಲ್ ಇನ್‍ಸ್ಟಿಟ್ಯೂಟ್ ಆಫ್ ಡಿಜಿಟಲ್ ಮಾರ್ಕೆಟಿಂಗ್‍ನಲ್ಲಿ ಎಸ್‍ಇಒ, ಎಸ್‍ಇಎಂ, ಎಸ್‍ಎಂಒ, ಪಿಪಿಸಿ ಇತ್ಯಾದಿ ಸರ್ಟಿಫಿಕೇಷನ್‍ಗಳನ್ನು ಪಡೆಯಬಹುದು. ವಾರಾಂತ್ಯ ಕ್ಲಾಸ್‍ಗಳು ಮಾತ್ರವಲ್ಲದೆ ವಾರದ ಎಲ್ಲಾ ದಿನದ ಕ್ಲಾಸ್‍ಗಳೂ ಇವೆ. ಒಟ್ಟು 40 ದಿನಗಳ, 100 ಗಂಟೆಯ ಈ ಕೋರ್ಸ್‍ಗೆ 25ಸಾವಿರ ಶುಲ್ಕ ನೀಡಬೇಕು. ಆನ್‍ಲೈನ್ ಕೋರ್ಸ್‍ಗಳೂ ಲಭ್ಯ. ಹೆಚ್ಚಿನ ಮಾಹಿತಿಗೆ ಲಿಂಕ್
ಮನಿಪಾಲ್ ಗ್ಲೋಬಲ್ ಶಿಕ್ಷಣ ಸಂಸ್ಥೆಯ ಪೆÇ್ರಲರ್ನ್ ಆನ್‍ಲೈನ್ ಕಲಿಕಾ ತಾಣದಲ್ಲಿ ಕಲಿಯಬಹುದು. ಗೂಗಲ್ ಜೊತೆ ಸೇರಿ ನೀಡುವ ಈ ಡಿಜಿಟಲ್ ಕೋರ್ಸ್‍ನ ಅವಧಿ 90 ಗಂಟೆ. ಬೆಂಗಳೂರಿನಲ್ಲಿ ಮುಂದಿನ ಎನ್‍ರೋಲ್‍ಮೆಂಟ್ ಫೆಬ್ರವರಿ 14. ಮ್ಯಾನೇಜ್‍ಮೆಂಟ್ ಅಥವಾ ಎಂಜಿನಿಯರಿಂಗ್ ಹಿನ್ನೆಲೆ ಇರುವ ವಿದ್ಯಾರ್ಥಿಗಳು ಈ ಕೋರ್ಸ್‍ಗೆ ಸೇರಬಹುದು. ಮಾಹಿತಿಗೆ ಲಿಂಕ್
ಬೆಂಗಳೂರಿನ ಇನ್‍ವೆಂಟಾಟೆಕ್‍ನಲ್ಲಿಯೂ ಡಿಜಿಟಲ್ ಮಾರ್ಕೆಟಿಂಗ್ ಕುರಿತಾದ ಹಲವು ಕೋರ್ಸ್‍ಗಳು ಲಭ್ಯ ಇವೆ. ಲಿಂಕ್
ಎಎಂಪಿ ಡಿಜಿಟಲ್‍ನಲ್ಲಿ 14 ವಾರದ ಡಿಜಿಟಲ್ ಮಾರ್ಕೆಟಿಂಗ್ ಕೋರ್ಸ್ ಕೊಂಚ ದುಬಾರಿ ಎಂದೇ ಹೇಳಬೇಕು. ಇಲ್ಲಿ 48 ಸಾವಿರ ರೂ. ಶುಲ್ಕ ನೀಡಬೇಕು. ಇದು ಇಂಟರ್ನ್‍ಷಿಪ್ ಅವಕಾಶವನ್ನೂ ನೀಡುತ್ತದೆ. ಇದೇ ಸಂಸ್ಥೆಯು 14 ಸಾವಿರ ರೂ.ಗೆ ಸೋಷಿಯಲ್ ಮೀಡಿಯಾ ಕೋರ್ಸ್ ಸಹ ನೀಡುತ್ತಿದೆ.
ಬೆಂಗಳೂರಿನ ಬಿಟಿಎಂ ಬಡಾವಣೆಯಲ್ಲಿರುವ ಸ್ಕೈಡ್ರೀಮ್‍ಕನ್ಸಲ್ಟ್ ಸಂಸ್ಥೆಯು 100 ಗಂಟೆಗಳ ಡಿಜಿಟಲ್ ಮಾರ್ಕೆಟಿಂಗ್ ಸರ್ಟಿಫಿಕೇಷನ್ ಕೋರ್ಸ್ ನೀಡುತ್ತದೆ. ತೆರಿಗೆ ಸೇರಿ 25 ಸಾವಿರ ರೂ. ಶುಲ್ಕ ಇದೆ. ಮಾಹಿತಿಗೆ ಲಿಂಕ್

Copyright: Published On Vijaya Karnataka Mini
SHARE

Author: verified_user

5 comments:

  1. Nice post, thanks for sharing information.

    ReplyDelete
  2. Its help me to improve my knowledge and skills also.im really satisfied in this session.salesforce developer training in bangalore

    ReplyDelete
  3. Lovely blog ..! I really enjoyed reading this article. Thank you for sharing such a wonderful post
    aws Training in Bangalore
    python Training in Bangalore
    hadoop Training in Bangalore
    angular js Training in Bangalore
    bigdata analytics Training in Bangalore.SAP Training in Bangalore

    ReplyDelete