Thursday 9 November 2017

ಟ್ಯಾಕ್ಸೇಷನ್ ಕೋರ್ಸ್ ಕಲಿತವರಿಗೆ ಬೇಡಿಕೆ ಹೆಚ್ಚು

SHARE
ಕಾಮರ್ಸ್ ಪದವಿ ಪಡೆದ ನಂತರ ಟ್ಯಾಕ್ಸ್ ಸಂಬಂಧಿತ ವಿಭಾಗಗಳಲ್ಲಿ ಕೆಲಸ ಮಾಡಬಯಸುವವರು `ಟ್ಯಾಕ್ಸೇಷನ್'ಗೆ ಸಂಬಂಧಿಸಿದ ಶಾರ್ಟ್‍ಟರ್ಮ್ ಸರ್ಟಿಫಿಕೇಷನ್ ಕೋರ್ಸ್‍ಗಳನ್ನು ಮಾಡಬಹುದು. ಈ ಕುರಿತು ಹೆಚ್ಚಿನ ಮಾಹಿತಿ ಇಲ್ಲಿದೆ.


  • ಪ್ರವೀಣ್ ಚಂದ್ರ ಪುತ್ತೂರು

ಕಾಮರ್ಸ್ ಓದಿದವರಿಗೆ ಸಖತ್ ಡಿಮ್ಯಾಂಡ್ ಇದೆ ಎಂದು ಬಿ.ಕಾಂ., ಎಂ.ಕಾಂ. ಓದುವವರು ಹೆಚ್ಚಾಗಿದ್ದಾರೆ. ವಾಣಿಜ್ಯ ಪದವೀಧರರು ಹೆಚ್ಚಾಗುತ್ತಿರುವುದರಿಂದ ಉದ್ಯೋಗ ಮಾರುಕಟ್ಟೆಯಲ್ಲಿ ಪೈಪೆÇೀಟಿ ಸಹಜ. ಕೆಲವೊಮ್ಮೆ ಕೆಲಸ ಪಡೆಯಲು ಕಾಲೇಜಿನಲ್ಲಿ ದೊರಕುವ ಸರ್ಟಿಫಿಕೇಟ್ ಮಾತ್ರ ಸಾಕಾಗದು. ಬಿ.ಕಾಂ., ಎಂ.ಕಾಂ., ಇತ್ಯಾದಿ ಪದವಿ ಪಡೆದವರು ತೆರಿಗೆ ಸಂಬಂಧಿತ ಕ್ಷೇತ್ರದಲ್ಲಿ ಭವಿಷ್ಯ ರೂಪಿಸಲು ಇಷ್ಟಪಟ್ಟರೆ ಅಲ್ಪಾವಧಿಯ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ಮಾಡಬಹುದು. ಇದರಿಂದ ನಿಮ್ಮ ರೆಸ್ಯೂಂನ ತೂಕ ಹೆಚ್ಚಾಗುತ್ತದೆ. ಕೆಲಸ ದೊರಕುವ ಸಾಧ್ಯತೆ ಹೆಚ್ಚಾಗುತ್ತದೆ.

ತೆರಿಗೆ ತಜ್ಞರಿಗೆ ಉತ್ತಮ ಬೇಡಿಕೆ ಇರುವುದರಿಂದ ಟ್ಯಾಕ್ಸೇಷನ್‍ಗೆ ಸಂಬಂಧಿಸಿದ ಅಲ್ಪಾವಧಿ ಕೋರ್ಸ್ ನಡೆಸುವ ಶಿಕ್ಷಣ ಸಂಸ್ಥೆಗಳು ದೇಶದಲ್ಲಿ ಸಾಕಷ್ಟಿವೆ. ಆದರೆ, ರಾಜ್ಯದಲ್ಲಿ ಇಂತಹ ಸಂಸ್ಥೆಗಳು ಕಡಿಮೆ ಇವೆ. ದೂರಶಿಕ್ಷಣ ಅಥವಾ ಆನ್‍ಲೈನ್‍ನಿಂದಲೂ ಇಂತಹ ಸರ್ಟಿಫಿಕೇಷನ್ ಪಡೆಯಬಹುದು.

ಏನಿದು ಟ್ಯಾಕ್ಸೇಷನ್ ಕೋರ್ಸ್?
ತೆರಿಗೆ ನಿರ್ವಹಣೆ, ಮೌಲ್ಯಮಾಪನ, ವರದಿ, ಲೆಕ್ಕಪರಿಶೋಧನೆ, ಪರಿಶೀಲನೆ ಮತ್ತು ಅಂತಾರಾಷ್ಟ್ರೀಯ ತೆರಿಗೆ ಇತ್ಯಾದಿಗಳನ್ನು ಗಮನದಲ್ಲಿಟ್ಟುಕೊಂಡು ಇಂತಹ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ರೂಪಿಸಲಾಗಿರುತ್ತದೆ. ವಾಣಿಜ್ಯ ಪದವಿ, ಸಿಎ, ಮ್ಯಾನೇಜ್‍ಮೆಂಟ್ ವಿಷಯಗಳನ್ನು ಓದಿದವರು ಇಂತಹ ಕೋರ್ಸ್ ಮಾಡಿ ಸರ್ಟಿಫಿಕೇಟ್ ಪಡೆಯಬಹುದು. ಟ್ಯಾಕ್ಸೇಷನ್ ಸಂಬಂಧಿಸಿದ ಡಿಪೆÇ್ಲಮಾ ಮಾತ್ರವಲ್ಲದೆ ಅಲ್ಪಾವಧಿಯ ಕೋರ್ಸ್‍ಗಳೂ ಇರುತ್ತವೆ.

ಐಸಿಎಐನಿಂದ ಸರ್ಟಿಫಿಕೇಟ್
ಚಾರ್ಟೆಡ್ ಅಕೌಂಟೆಂಟ್ ಆ್ಯಕ್ಟ್, 1949ರ ಅನ್ವಯ ದೆಹಲಿಯಲ್ಲಿ ಸ್ಥಾಪನೆಗೊಂಡ `ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ(ಐಸಿಎಐ)'ದಲ್ಲಿ ವಾಣಿಜ್ಯ ವಿಷಯಕ್ಕೆ ಸಂಬಂಧಿಸಿದ ಹಲವು ಕೋರ್ಸ್‍ಗಳಿವೆ. ಈ ಸಂಸ್ಥೆಯು ಸುಮಾರು 100 ಗಂಟೆಗಳ(16 ದಿನಗಳ) ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್ ಕೋರ್ಸ್ ನಡೆಸುತ್ತದೆ. ಸುಮಾರು ಶೇಕಡ 90ರಷ್ಟು ಪಾಠ ಪೂರ್ಣಗೊಂಡ ನಂತರ ಪರೀಕ್ಷೆ ನಡೆಸಲಾಗುತ್ತದೆ. ಈ ಪರೀಕ್ಷೆ ಪಾಸಾದವರಿಗೆ ಸರ್ಟಿಫಿಕೇಟ್ ದೊರೆಯುತ್ತದೆ. ಐಸಿಎಐನ ಸದಸ್ಯರು ಅಥವಾ ಸಿಎ ಅಂತಿಮ ಪರೀಕ್ಷೆ ಮುಗಿಸಿ ಐಸಿಎಐನ ಸದಸ್ಯತ್ವ ಸಂಖ್ಯೆ ಪಡೆದವರು ಈ ಸರ್ಟಿಫಿಕೇಷನ್ ಕೋರ್ಸ್‍ಗೆ ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ. ಈ 16 ದಿನಗಳ ಕೋರ್ಸ್‍ಗೆ 25 ಸಾವಿರ ರೂ. ಶುಲ್ಕ ಇರುತ್ತದೆ. ಈ ಕೋರ್ಸ್‍ನ ಕುರಿತು ಹೆಚ್ಚಿನ ಮಾಹಿತಿ ಪಡೆಯಲು ಈ ವೆಬ್‍ಸೈಟ್ ಲಿಂಕ್ ಪ್ರವೇಶಿಸಬಹುದು.

ರಾಜ್ಯದಲ್ಲಿ ಟ್ಯಾಕ್ಸೇಷನ್
ಕರ್ನಾಟಕದಲ್ಲಿ ಟ್ಯಾಕ್ಸೇಷನ್ ವಿಷಯದಲ್ಲಿ ಅಲ್ಪಾವಧಿ ಕೋರ್ಸ್‍ಗಳನ್ನು ನೀಡುವ ವಿದ್ಯಾಸಂಸ್ಥೆಗಳು ಅತ್ಯಲ್ಪ. ಟ್ಯಾಕ್ಸ್ ಆ್ಯಂಡ್ ರೆಗ್ಯುಲೇಟರಿ ಮ್ಯಾನೇಜ್‍ಮೆಂಟ್ ವಿಷಯದಲ್ಲಿ ಬೆಂಗಳೂರಿನ ವೆಲ್ಲಿಂಗಕರ್ ಎಜುಕೇಷನ್ ಸಂಸ್ಥೆಯು 6 ತಿಂಗಳ ಅವಧಿಯ ಡಿಪೆÇ್ಲಮಾ ಕೋರ್ಸ್ ನೀಡುತ್ತಿದೆ. ಹೆಚ್ಚಿನ ಮಾಹಿತಿಯನ್ನು ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು. ಈ ಸಂಸ್ಥೆಯು ಆರು ತಿಂಗಳ ಕೋರ್ಸ್‍ಗೆ 50 ಸಾವಿರ ರೂ.(ವ್ಯಾಟ್ ಸೇರದೆ) ಶುಲ್ಕ ನಿಗದಿಪಡಿಸಿದೆ. ಕೆಲವು ಖಾಸಗಿ ಸಂಸ್ಥೆಗಳು ಸಹ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ನೀಡುತ್ತವೆ. ಬೆಂಗಳೂರಿನ ವಿಜಯನಗರದಲ್ಲಿರುವ ಐಜಿಎಸ್‍ಎಸ್‍ನಲ್ಲಿ 6 ತಿಂಗಳ ಟ್ಯಾಕ್ಸೇಷನ್ ಕೋರ್ಸ್ ಇದೆ. ಬಿಕಾಂ, ಬಿಬಿಎಂ, ಎಂಬಿಎ, ಎಂಕಾಂ ಇತ್ಯಾದಿ ಶಿಕ್ಷಣ ಪೂರೈಸಿದವರು ಈ ಕೋರ್ಸ್ ಮಾಡಬಹುದು. ರಾಜ್ಯದಲ್ಲಿ ಬೆರಳೆಣಿಕೆಯ ಖಾಸಗಿ ಸಂಸ್ಥೆಗಳು ಅಲ್ಪಾವಧಿ ಕೋರ್ಸ್‍ಗಳನ್ನು ನಡೆಸುತ್ತಿವೆ. ನಿಮ್ಮ ಊರಿಗೆ ಸಮೀಪದಲ್ಲಿ ಯಾವುದಾದರೂ ಸಂಸ್ಥೆಯು ಇಂತಹ ಕೋರ್ಸ್‍ಗಳನ್ನು ನಡೆಸುತ್ತಿದೆಯೇ ಎಂದು ತಿಳಿದುಕೊಳ್ಳಿ.

ಆನ್‍ಲೈನ್ ಕೋರ್ಸ್‍ಗಳು
* ಇನ್‍ಸ್ಟಿಟ್ಯೂಟ್ ಆಫ್ ಇಂಟರ್‍ನ್ಯಾಷನಲ್ ಟ್ರೇಡ್ ಆ್ಯಂಡ್ ಟ್ಯಾಕ್ಸ್ ಸ್ಟಡೀಸ್‍ನಲ್ಲಿ `ಕಸ್ಟಮ್ಸ್ ಆ್ಯಂಡ್ ಫಾರಿನ್ ಟ್ರೇಡ್ ಪಾಲಿಸಿ' ವಿಷಯದ ಕುರಿತು ಆನ್‍ಲೈನ್ ಕೋರ್ಸ್ ಮಾಡಬಹುದಾಗಿದೆ. 90 ದಿನಗಳ ಈ ಕೋರ್ಸ್‍ಗೆ 10 ಸಾವಿರ ರೂ. ನೀಡಬೇಕು. ಹೆಚ್ಚಿನ ಮಾಹಿತಿಗೆ ಲಿಂಕ್
* ಇಂಡಿಯನ್ ಸ್ಕೂಲ್ ಆಫ್ ಬಿಸಿನೆಸ್ ಮ್ಯಾನೇಜ್‍ಮೆಂಟ್ ಆ್ಯಂಡ್ ಅಡ್ಮಿನಿಸ್ಟ್ರೇಷನ್ ಸಂಸ್ಥೆಯೂ ಆನ್‍ಲೈನ್‍ನಲ್ಲಿ ಡೈರೆಕ್ಟ್ ಮತ್ತು ಇಂಡೈರೆಕ್ಟ್ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ನಡೆಸುತ್ತದೆ. ವೆಬ್‍ಲಿಂಕ್


ದೂರಶಿಕ್ಷಣದಿಂದ ಸರ್ಟಿಫಿಕೇಟ್
ಟ್ಯಾಕ್ಸೇಷನ್ ಡಿಪೆÇ್ಲಮಾ ಕೋರ್ಸ್‍ಗಳು ರಾಜ್ಯದಲ್ಲಿ ಕಡಿಮೆ ಇರಬಹುದು. ಇಂತಹ ಸಂದರ್ಭದಲ್ಲಿ ಡಿಸ್ಟೇನ್ಸ್ ಎಜುಕೇಷನ್ ಮೂಲಕ ತೆರಿಗೆ ಕಾನೂನು ಕಲಿಯಬಹುದು. ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ಫೈನಾನ್ಸ್‍ನಲ್ಲಿ ಟ್ಯಾಕ್ಸೇಷನ್ ಸಂಬಂಧಿಸಿದಂತೆ ಡಿಸ್ಟೆನ್ಸ್ ಎಜುಕೇಷನ್ ಮಾಡಬಹುದು.

ಚೆನ್ನೈನಲ್ಲಿರುವ ಯೂನಿವರ್ಸಿಟಿ ಆಫ್ ಮದ್ರಾಸ್ ಇನ್‍ಸ್ಟಿಟ್ಯೂಟ್ ಆಫ್ ಡಿಸ್ಟೆನ್ಸ್ ಎಜುಕೇಷನ್ನಲ್ಲಿ ಅಥವಾ ಅಣ್ಣಾಮಲೈ ಯೂನಿವರ್ಸಿಟಿಯಲ್ಲಿ ಟ್ಯಾಕ್ಸೇಷನ್ ಡಿಪೆÇ್ಲಮಾ ಓದಬಹುದು.
ಡಿಸ್ಟೆನ್ಸ್ ಕೋರ್ಸ್ ಮಾಡುವವರಿಗೆ ಮುಂಬೈನಲ್ಲಿರುವ ಟಿವಿಸಿ ಇನ್‍ಸ್ಟಿಟ್ಯೂಟ್ ಆಫ್ ಮ್ಯಾನೇಜ್‍ಮೆಂಟ್‍ನಲ್ಲಿ ಟ್ಯಾಕ್ಸೇಷನ್ ಕುರಿತಾದ ಹಲವು ಕೋರ್ಸ್‍ಗಳಿವೆ. ಡಿಪೆÇ್ಲಮಾ ಇನ್ ಇನ್‍ಡೈರೆಕ್ಟ್ ಟ್ಯಾಕ್ಸೇಷನ್, ಡಿಪೆÇ್ಲಮಾ ಇನ್ ಡೈರೆಕ್ಟ್ ಟ್ಯಾಕ್ಸೇಷನ್ ಇತ್ಯಾದಿ ಕೋರ್ಸ್‍ಗಳಿವೆ. ಇವು ತಲಾ ನಾಲ್ಕು ತಿಂಗಳ ಕೋರ್ಸ್. ಹೆಚ್ಚಿನ ಮಾಹಿತಿge. ಮುಂಬೈನಲ್ಲಿರುವ ಇಂಡೋ ಜರ್ಮನ್ ಟೂಲ್ ರೂಂ ಎಂಬ ಸಂಸ್ಥೆಯೂ ಭಾರತೀಯ ದೂರ ಶಿಕ್ಷಣ ನಿರ್ದೇಶನಾಲಯದಡಿಯಲ್ಲಿ ಕಾರ್ಯನಿರ್ವಹಿಸುತ್ತದೆ. ಇದರಲ್ಲಿ 6 ತಿಂಗಳ ಡಿಪೆÇ್ಲಮಾ ಇನ್ ಟ್ಯಾಕ್ಸ್ ಮ್ಯಾನೇಜ್‍ಮೆಂಟ್' ಕೋರ್ಸ್ ಇದೆ.
<strong>ಯಾರು ಮಾಡಬಹುದು?</strong>
ವಾಣಿಜ್ಯ ವಿಷಯದಲ್ಲಿ ಪದವಿ ಪಡೆದವರು ಅಥವಾ ಈಗಾಗಲೇ ಅಕೌಂಟೆಂಟ್/ಟ್ಯಾಕ್ಸ್ ಪ್ರಿಪರೇಷನ್ ವಿಭಾಗಗಳಲ್ಲಿ ಉದ್ಯೋಗದಲ್ಲಿರುವವರು ಕಂದಾಯಕ್ಕೆ ಸಂಬಂಧಿಸಿದ
ಟ್ಯಾಕ್ಸೇಷನ್' ಅಥವಾ `ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್' ಕೋರ್ಸ್‍ಗಳನ್ನು ಮಾಡಬಹುದು. ಅಂದರೆ, ಬಿಕಾಂ, ಎಂಕಾಂ, ಸಿಎ ಮಾತ್ರವಲ್ಲದೆ ಮ್ಯಾನೇಜ್‍ಮೆಂಟ್ ವಿಷಯಗಳನ್ನೂ ಓದಿದದವರೂ ಟ್ಯಾಕ್ಸೇಷನ್ ಕೋರ್ಸ್‍ಗಳನ್ನು ಮಾಡಬಹುದು. ದೆಹಲಿಯ ಐಸಿಎಐನಲ್ಲಿ ಇಂಟರ್‍ನ್ಯಾಷನಲ್ ಟ್ಯಾಕ್ಸೇಷನ್ ಕೋರ್ಸ್ ಮಾಡಲು ಐಸಿಎಐ ಸದಸ್ಯತ್ವ ಅಥವಾ ಸದಸ್ಯತ್ವ ಸಂಖ್ಯೆ ಪಡೆಯಬೇಕಿರುವುದು ಕಡ್ಡಾಯ.

ಎಲ್ಲೆಲ್ಲಿ ಅವಕಾಶ ದೊರಕುತ್ತದೆ?
ಇಂತಹ ಸರ್ಟಿಫಿಕೇಷನ್ ಪಡೆದವರಿಗೆ ಕಾಪೆರ್Çರೇಟ್ ಆಫೀಸ್‍ಗಳಲ್ಲಿ, ಸರಕಾರಿ ಏಜೆನ್ಸಿಗಳಲ್ಲಿ, ಸಣ್ಣ ಉದ್ಯಮಗಳಲ್ಲಿ, ರಿಟೀಲ್ ಅಥವಾ ಸರ್ವೀಸ್ ಉದ್ಯಮಗಳಲ್ಲಿ ಸುಲಭವಾಗಿ ಕೆಲಸ ದೊರಕುತ್ತದೆ. ಟ್ಯಾಕ್ಸ್ ಪ್ಲಾನಿಂಗ್, ಪ್ರಾಪರ್ಟಿ ಟ್ಯಾಕ್ಸೇಷನ್, ತೆರಿಗೆ ಕಾನೂನು ಮತ್ತು ಕಾಪೆರ್Çರೇಟ್ ತೆರಿಗೆ ಇತ್ಯಾದಿ ವಿಷಯಗಳಲ್ಲಿ ತಜ್ಞರಾಗಬಹುದು.

ಕಾಲೇಜಿನಲ್ಲಿ ಬಿಕಾಂ ಇತ್ಯಾದಿ ಪದವಿ ಪಡೆzವರಿಗೆ ಪ್ರಾಕ್ಟಿಕಲ್ ಅನುಭವ ಇರುವುದಿಲ್ಲ. ಟ್ಯಾಕ್ಸೇಷನ್ ಸಂಬಂಧಿಸಿದ ಶಾರ್ಟ್ ಟರ್ಮ್ ಕೋರ್ಸ್ ಮಾಡಿದರೆ ಅವರಿಗೆ ಸ್ಪೆಸಿಫಿಕ್ ಆದ ನಾಲೆಡ್ಜ್ ದೊರಕುತ್ತದೆ. ಇಂತಹ ಕೋರ್ಸ್ ಮಾಡಿದ್ದರೆ ಫ್ರೆಷರ್ಸ್‍ಗಳಿಗೆ ಉದ್ಯೋಗಾವಕಾಶವೂ ಉತ್ತಮವಾಗಿರುತ್ತದೆ.
ಗಂಗಾಧರ್ ಹೆಗಡೆ | ಅಡಿಟರ್, ಬೆಂಗಳೂರು



ಕರ್ನಾಟಕದಲ್ಲಿ ಟ್ಯಾಕ್ಸೇಷನ್ ಸಂಬಂಧಪಟ್ಟಂತೆ ಹೆಚ್ಚು ಶಾರ್ಟ್‍ಟರ್ಮ್ ಕೋರ್ಸ್‍ಗಳಿಲ್ಲ. ಆದರೆ, ಬೇರೆ ರಾಜ್ಯಗಳಲ್ಲಿರುವ ಇನ್‍ಸ್ಟಿಟ್ಯೂಷನ್‍ಗಳಿಂದ ದೂರಶಿಕ್ಷಣ, ಆನ್‍ಲೈನ್ ಕೋರ್ಸ್ ಮಾಡಬಹುದು. ಇಂತಹ ಸರ್ಟಿಫಿಕೇಷನ್ ರೆಸ್ಯೂಂನ ವ್ಯಾಲ್ಯೂ ಹೆಚ್ಚಿಸಿ ಉದ್ಯೋಗ ದೊರಕಿಸಲು ನೆರವಾಗಬಹುದು.
ನರೇಂದ್ರ ಹಿರೆಕೈ | ಟ್ಯಾಕ್ಸ್ ಕನ್ಸಲ್ಟೆಂಟ್, ಬೆಂಗಳೂರು


Copyright: Published On Vijaya Karnataka Mini 
SHARE

Author: verified_user

0 ಪ್ರತಿಕ್ರಿಯೆಗಳು: