Thursday 9 November 2017

ಸಾಫ್ಟ್ ಸ್ಕಿಲ್ ನಿಮ್ಮಲ್ಲಿದೆಯೇ?

SHARE
ಕಾಪೆರ್Çರೇಟ್ ರಂಗದಲ್ಲಿ ಉದ್ಯೋಗ ಪಡೆಯಲು ಬಯಸುವವರು ಮತ್ತು ಈಗಾಗಲೇ ಉದ್ಯೋಗದಲ್ಲಿರುವವರು ಸಾಫ್ಟ್ ಸ್ಕಿಲ್ ಅಥವಾ ಬಿಸಿನೆಸ್ ಸ್ಕಿಲ್ ಸರ್ಟಿಫಿಕೇಷನ್ ಪಡೆದರೆ ಕರಿಯರ್‍ನಲ್ಲಿ ಇನ್ನಷ್ಟು ಸಾಧನೆ ಮಾಡಬಹುದು.

*

ನೀವು ಕಾಲೇಜಿನಲ್ಲಿ ಸಾಕಷ್ಟು ಜ್ಞಾನ ಸಂಪಾದಿಸಿರಬಹುದು. ಸಾಕಷ್ಟು ವಿಷಯಗಳನ್ನು ತಿಳಿದುಕೊಂಡಿರಬಹುದು. ಸಾಕಷ್ಟು ಪ್ರತಿಭೆ ನಿಮ್ಮಲ್ಲಿರಬಹುದು. ಆದರೆ, ಉದ್ಯೋಗ ಸಂದರ್ಶಕರಿಗೆ ನಿಮ್ಮನ್ನು ನೋಡಿದಾಗ ಹಾಗೆ ಅನಿಸದೆ ಇರಬಹುದು. ನೀವು ಉದ್ಯೋಗದಲ್ಲಿ ಉತ್ತಮ ತಾಂತ್ರಿಕ ಜ್ಞಾನ ಹೊಂದಿರಬಹುದು. ಆದರೆ, ಪ್ರಸಂಟೇಷನ್ ಮಾಡುವ ಕಲೆ ಗೊತ್ತಿಲ್ಲದೆ ಇರಬಹುದು. ನೀವು ತಂಡದ ಲೀಡರ್ ಆಗಿರಬಹುದು. ಆದರೆ, ಸಹೋದ್ಯೋಗಿಗಳನ್ನು ಪ್ರೇರೇಪಿಸಲು ತಿಳಿಯದವರಾಗಿರಬಹುದು. ನಿಮ್ಮಲ್ಲಿ ಸಾಕಷ್ಟು ಪದಸಂಪತ್ತು ಇರಬಹುದು. ಆದರೆ, ಸಂವಹನ ಕೌಶಲ ಇಲ್ಲದೆ ಇರಬಹುದು. ಇಂದಿನ ಕಾಪೆರ್Çರೇಟ್ ಜಗತ್ತಿಗೆ ಇವೆಲ್ಲ ಅತ್ಯಂತ ಅವಶ್ಯವಾದ ಕೌಶಲಗಳು. ಈಗ ಕೆಲವು ಕಾಲೇಜುಗಳು ತಮ್ಮ ವಿದ್ಯಾರ್ಥಿಗಳಿಗೆ ಸಾಫ್ಟ್ ಸ್ಕಿಲ್ ಹೇಳಿಕೊಡುವ ಪ್ರಯತ್ನ ಮಾಡುತ್ತಿವೆ. ಇಂತಹ ಕೌಶಲಗಳನ್ನು ಕಲಿಸಿ ಸರ್ಟಿಫಿಕೇಷನ್ ನೀಡುವ ಸಾಕಷ್ಟು ಸಂಸ್ಥೆಗಳಿವೆ. ಇಂತಹ ತರಬೇತಿಯನ್ನು ಯಾರು, ಯಾವಾಗ ಬೇಕಾದರೂ ಪಡೆಯಬಹುದು. ಉದ್ಯೋಗ ಸಂದರ್ಶನದಲ್ಲಿ ಇಂತಹ ಸರ್ಟಿಫಿಕೇಷನ್ ನಿಮಗೆ ಪ್ಲಸ್ ಪಾಯಿಂಟ್ ಆಗಬಹುದು.

ಏನಿದು ಸಾಫ್ಟ್ ಸ್ಕಿಲ್?
ಕೆಲಸ ಮಾಡುವ ಸ್ಥಳದಲ್ಲಿ ಮತ್ತು ವ್ಯವಹಾರ ಸಂಬಂಧಿತ ಸಂವಹನದ ಸಂದರ್ಭದಲ್ಲಿ ಹೇಗೆ ವರ್ತಿಸಬೇಕೆಂದು ತಿಳಿಸಿ ಕೊಡುವುದೇ ಸಾಫ್ಟ್ ಸ್ಕಿಲ್. ಇದು ಸಂವಹನ ಕಲೆಯಾಗಿರಬಹುದು, ಯಾರಾದರೂ ಹೇಳುವುದನ್ನು ಗಮನವಿಟ್ಟು ಕೇಳುವ ಕಲೆಯಾಗಿರಬಹುದು, ವಿಷಯ ಮಂಡನೆ ಕಲೆಯಾಗಿರಬಹುದು, ಸಮಯ ನಿರ್ವಹಣೆ, ಆ್ಯಟಿಟ್ಯೂಡ್, ವರ್ತನಾ ವಿಧಾನ, ಸಮಸ್ಯೆ ಬಗೆಹರಿಸುವ ಕಲೆ, ತಂಡದ ಜೊತೆ ಸೇರಿ ಕೆಲಸ ಮಾಡುವುದು, ಗುರಿ ನಿಗದಿ ಪಡಿಸುವುದು ಇತ್ಯಾದಿಗಳ ತರಬೇತಿಯಾಗಿರಬಹುದು. ಕೆಲಸ ಮತ್ತು ಕೆಲಸ ಮಾಡುವ ಸ್ಥಳದಲ್ಲಿ ಒತ್ತಡ ಅಥವಾ ಭಾವನೆಯನ್ನು ನಿಯಂತ್ರಿಸುವುದು ಸಹ ಸಾಫ್ಟ್ ಸ್ಕಿಲ್ ಕಲಿಕೆಯಲ್ಲಿ ಸೇರಿದೆ. ಸಾಫ್ಟ್ ಸ್ಕಿಲ್‍ಗಳು ವೃತ್ತಿಪರ ಮತ್ತು ವ್ಯವಹಾರದ ಯಶಸ್ಸಿಗೆ ಅತ್ಯಂತ ಅವಶ್ಯಕ. ಇದಕ್ಕಾಗಿಯೇ ಈಗ ಬಹುತೇಕ ಕಂಪನಿಗಳು ತಮ್ಮ ಉದ್ಯೋಗಿಗಳಿಗೆ ಸಾಫ್ಟ್ ಸ್ಕಿಲ್ ತರಬೇತಿಗಳನ್ನು ನೀಡುತ್ತವೆ. ಸಾಫ್ಟ್ ಸ್ಕಿಲ್‍ನಲ್ಲಿ ಪರಿಣತಿ ಹೊಂದಿರದ ವ್ಯಕ್ತಿಯಿಂದ ಕಂಪನಿಯ ವ್ಯವಹಾರಕ್ಕೆ ಸಾಕಷ್ಟು ಹೊಡೆತ ಬೀಳಬಹುದು.

ಎಲ್ಲಿ ಕಲಿಯಬಹುದು ಸಾಫ್ಟ್‍ಸ್ಕಿಲ್?
ಸಾಫ್ಟ್ ಸ್ಕಿಲ್ ಕಲಿಸುವ ಸಂಪನ್ಮೂಲ ವ್ಯಕ್ತಿಗಳು ನಿಮ್ಮ ಆಸುಪಾಸಿನಲ್ಲೇ ಇರಬಹುದು. . ನೀವಿರುವ ಕಾಲೇಜಿಗೆ ಇಂತಹ ಸಂಪನ್ಮೂಲ ವ್ಯಕ್ತಿಗಳನ್ನು ಕರೆಸಿ ತರಬೇತಿ ನೀಡಬಹುದು. ಹಣ ಮಾಡುವುದೇ ಪ್ರಮುಖ ಉದ್ದೇಶವಾಗಿಟ್ಟುಕೊಂಡವರಿಂದ ದೂರವಿರುವುದು ಒಳ್ಳೆಯದು. ಆದರೆ, ಕೆಲವು ಸಂಸ್ಥೆಗಳು ಸಾಫ್ಟ್ ಸ್ಕಿಲ್ ತರಬೇತಿ ನೀಡುವಲ್ಲಿ ಜನಪ್ರಿಯತೆ ಪಡೆದಿರುತ್ತವೆ. ಸಾಫ್ಟ್ ಸ್ಕಿಲ್ ಪಡೆಯಲು ಅಂತಹ ಸಂಸ್ಥೆಗಳನ್ನು ಅವಲಂಬಿಸಿಕೊಳ್ಳಬಹುದು.
ಸಾಫ್ಟ್ ಸ್ಕಿಲ್ಸ್ ಅಥವಾ ಬಿಸಿನೆಸ್ ಸ್ಕಿಲ್ಸ್ ಕೆಲವು ವೆಬ್‍ಸೈಟ್ ಲಿಂಕ್‍ಗಳು:
*ಆರೆಂಜ್ ಅಕಾಡೆಮಿ 
* ಕಾರ್ಪೆಕ್ಸ್
ಬುಕ್‍ಮೈಟ್ರೈನಿಂಗ್ಸ್
* ಸ್ಕಿಲ್ ತರಬೇತಿದಾರರಾಗಲು ಲಿಂಕ್

* ಪ್ರಸಂಟೇಷನ್ ಸ್ಕಿಲ್ ತರಬೇತುದಾರರನ್ನು ಇಲ್ಲಿ ಹುಡುಕಬಹುದು

ಅಗತ್ಯ ಬಿಸಿನೆಸ್ ಕೌಶಲಗಳು
* ಪ್ರಸಂಟೇಷನ್ ಸ್ಕಿಲ್: ಕಂಪನಿಯಲ್ಲಿ ಉದ್ಯೋಗಿಗಳಿಗೆ ಪವರ್ ಪಾಯಿಂಟ್ ಪ್ರಸಂಟೇಷನ್ ಮೂಲಕ ವಿವರ ನೀಡುವ ಅವಕಾಶ ಇರುತ್ತದೆ. ಕೆಲವೊಮ್ಮೆ ಎಲ್ಲದರಲ್ಲಿಯೂ ಚತುರನಾಗಿರುವ ವ್ಯಕ್ತಿಯು ಪ್ರಸಂಟೇಷನ್‍ನಲ್ಲಿ ಹಿಂದೆ ಬೀಳುತ್ತಾನೆ. ಈ ಮೂಲಕ ಗಮನ ಸೆಳೆಯಲು ವಿಫಲನಾಗುತ್ತಾನೆ. ಪ್ರಸಂಟೇಷನ್‍ನಲ್ಲಿ ಪಕ್ಕಾ ಆಗಲು ನೀವು ಸಾಕಷ್ಟು ಪ್ರಾಕ್ಟೀಸ್ ಮಾಡಬೇಕು. ಪಿಪಿಟಿ ಪ್ರಸಂಟೇಷನ್ ಇರುವ ಕಾರ್ಯಕ್ರಮಗಳಲ್ಲಿ ಭಾಗವಹಿಸಿ. ನರ್ವಸ್ ಆಗಬೇಡಿ. ವೀಕ್ಷಕರ ಜೊತೆ ಮಾತುಕತೆಯಾಡುತ್ತ ಪ್ರಸಂಟೇಷನ್ ಮಾಡಿ. ಯೂಟ್ಯೂಬ್‍ನಲ್ಲಿರುವ ಪಿಪಿಟಿಗಳನ್ನು ನೋಡಿ. ನಿಮಗೆ ಪ್ರಸಂಟೇಷನ್ ಕುರಿತಾದ ಭಯ ಹೋಗಿಲ್ಲವೆಂದಾದರೆ ಪ್ರಸಂಟೇಷನ್ ಸ್ಕಿಲ್ ಕಲಿಸುವ ಸಂಪನ್ಮೂಲ ವ್ಯಕ್ತಿಗಳಿಂದ ತರಬೇತಿ ಪಡೆಯಿರಿ.
ಸಂವಹನ ಕೌಶಲ: ಈಗ ಸಂವಹನ ಕೌಶಲ ಕಲಿಸುವ ಸಾಕಷ್ಟು ಸಂಸ್ಥೆಗಳು ನೀವಿರುವ ಪ್ರದೇಶದಲ್ಲೇ ದೊರಕಬಹುದು. ಆದಷ್ಟು, ಇತರರ ಜೊತೆ ಮಾತನಾಡಿ. ಕನ್ನಡಿಯ ಮುಂದೆ ಮಾತನಾಡುತ್ತ, ನಿಮ್ಮ ಹಾವಭಾವ ಗಮನಿಸಿ. ಕಮ್ಯುನಿಕೇಷನ್ ಕೌಶಲ ಕಲಿಸುವ ಅಲ್ಪಾವಧಿ ಕೋರ್ಸ್‍ಗಳನ್ನು ಮಾಡಿ. ಆದಷ್ಟು, ಚರ್ಚೆ, ಗೋಷ್ಠಿಗಳಲ್ಲಿ ಭಾಗವಹಿಸಿ.
ಆಲಿಸುವ ಕಲೆ: ನೀವು ಉತ್ತಮ ಮಾತುಗಾರನಾಗುವ ಜೊತೆಗೆ ಉತ್ತಮ ಕೇಳುಗನಾಗಬೇಕು. ನಿಮ್ಮ ಎದುರಿನಲ್ಲಿರುವ ವ್ಯಕ್ತಿ ಮಾತನಾಡುತ್ತಿರುವಾಗ ಸಂಯಮದಿಂದ ಆಲಿಸಿ. ಅವರು ಮಾತು ಮುಗಿಸಿದ ನಂತರ ಮಾತನಾಡಿ.
* ಭಾವನೆಯ ನಿರ್ವಹಣೆ: ಎಂತಹ ಪರಿಸ್ಥಿತಿಯಲ್ಲೂ ಕುಗ್ಗದೆ ಭಾವನಾತ್ಮಕವಾಗಿ ಸಕಾರಾತ್ಮಕವಾಗಿರುವಂತಹ ವ್ಯಕ್ತಿತ್ವ ಸಹ ಬಿಸಿನೆಸ್ ಕೌಶಲದಲ್ಲಿ ಅಗತ್ಯವಾಗಿದೆ.
ತೊಂದರೆ ನಿವಾರಣೆ: ಕೆಲಸ ಮಾಡುವಾಗ ಬಿಸಿನೆಸ್‍ಗೆ ಸಂಬಂಧಪಟ್ಟ ಹಲವು ತೊಂದರೆಗಳು ಎದುರಾಗಬಹುದು. ಅಂತಹ ತೊಂದರೆಗಳನ್ನು ಕೌಶಲದಿಂದ ಬಗೆಹರಿಸಲು ತಿಳಿದಿರಬೇಕಾಗುತ್ತದೆ.

*ಕ್ರಿಯಾತ್ಮಕವಾಗಿರುವುದು ಮತ್ತು ಅನ್ವೇಷಣಾ ಮನೋಭಾವ.

* ಸಹೋದ್ಯೋಗಿಗಳಿಗೆ ತರಬೇತಿ ನೀಡುವ ಸಾಮಥ್ರ್ಯ.

* ಕೆಲಸವನ್ನು ಹೊಸ ರೀತಿಯಿಂದ ಸುಲಭವಾಗಿ ಮಾಡಲು ಪ್ರಯತ್ನಿಸುವುದು.

ತಂಡದ ಜೊತೆ ಕಾರ್ಯನಿರ್ವಹಿಸುವ ಸಾಮಥ್ರ್ಯ.

ಪ್ರಾಜೆಕ್ಟ್ ನಿರ್ವಹಣೆ ಸಾಮಥ್ರ್ಯ.
SHARE

Author: verified_user

0 ಪ್ರತಿಕ್ರಿಯೆಗಳು: