Thursday, 12 April 2018

ಕ್ರಾಫ್ಟ್ ಕಾರ್ನರ್: ವೇಸ್ಟ್ ಬಾಟಲ್ ಜಿಪ್ ಬಾಕ್ಸ್

SHARE
Image copyright: earth911.com


-ಶ್ರೀಲಕ್ಷ್ಮಿ ಹೊಸ್ಕೊಪ್ಪ

ಪೆಪ್ಸಿಕೋಕೋ ಕೋಲಾದಂತ ಸಾಫ್ಟ್ ಡ್ರಿಂಕ್ಸ್ಗಳನ್ನುಕೀನ್ಲಿಬಿಸ್ಲರಿಯಂತ ವಾಟರ್ ಬಾಟಲ್ಗಳು ಖಾಲಿಯಾದ ಮೇಲೆ ಎಲ್ಲರೂ ಅದನ್ನು ಕಸದಬುಟ್ಟಿಗೆ ಹಾಕುತ್ತಾರೆ. ಆದರೆ ಬಾಟಲಿಗಳನ್ನು ತೊಳೆದು,ಕ್ಲೀನ್ ಮಾಡಿಟ್ಟುಕೊಂಡರೆ ಅದರಲ್ಲಿ ಚೆಂದದ ಕ್ರಾಫ್ಟ್ಗಳನ್ನು ತಯಾರಿಸಬಹುದು.

ಬೇಕಾಗುವ ಸಾಮಗ್ರಿ
1.     ಒಂದೇ ಬಣ್ಣದ ಎರಡು ಬಾಟಲ್ಗಳು
2.      ಜಿಪ್
3.     ಗ್ಲೂ ಗನ್
4.     ಕತ್ತರಿ.

ಮಾಡುವ ವಿಧಾನ

  • ಮೊದಲಿಗೆ ಬಾಟಲಿಯ ತಳಭಾಗವನ್ನು ಕತ್ತರಿಸಿ. ಎರಡೂ ಬಾಟಲಿಯೂ ಒಂದೇ ಅಳತೆಯಲ್ಲಿರಲಿ.
  • ಕತ್ತರಿಸಿದ ಬಾಟಲಿಯ ಒಳಭಾಗದಿಂದ ಗಮ್ ಹಾಕಿ ಅದಕ್ಕೆ ಜಿಪ್ ಅಂಟಿಸಿ.
  • ಅದೇ ರೀತಿ ಇನ್ನೊಂದು ಬಾಟಲಿಯ ಕತ್ತರಿಸಿದ ಭಾಗವನ್ನು ಮೇಲಿನಿಂದ ಇಟ್ಟು ಒಳಭಾಗಕ್ಕೆ ಗಮ್ ಹಾಕಿ ಜಿಪ್ ಅಂಟಿಸಿ.
  • ಜಿಪ್ ಉದ್ದವಾಗಿದ್ದರೆ ಅದನ್ನು ಬಾಟಲಿಯ ಸುತ್ತಳತೆಗೆ ಸರಿಯಾಗಿ ಅಂಟಿಸಿ ಉಳಿದ ಭಾಗವನ್ನು ಕತ್ತರಿಸಿ.
  • ಅದನ್ನು ಒಣಗಲು ಬಿಡಿ.
Image Copyright: StylEnrichDIY

ಈಗ ಬಾಟಲಿಯ ಜಿಪ್ ಬಾಕ್ಸ್ ತಯಾರಾಗುತ್ತದೆಅದರಲ್ಲಿ ಚಾಕಲೇಟ್ಕಿವಿಯೋಲೆಯಂತಹ ಚಿಕ್ಕ ಚಿಕ್ಕ ವಸ್ತುಗಳನ್ನು ಹಾಕಿಟ್ಟುಕೊಳ್ಳಿ.
ಹೀಗೆ ನಾಲ್ಕಾರು ಬಾಕ್ಸ್ಗಳನ್ನು ತಯಾರಿಸಿಕೊಂಡರೆನಿಮಗೆ ಬೇಕಾದ ವಸ್ತುಗಳನ್ನು ಹಾಕಿ ನೀಟಾಗಿ ಜೋಡಿಸಿಕೊಟ್ಟುಕೊಳ್ಳಬಹುದು. ಬೇರೆ ಬೇರೆ ಬಣ್ಣದ ಬಾಕ್ಸ್ಗಳಿದ್ದರೆ ಅಲಂಕಾರಿಕ ವಸ್ತುವಾಗಿಯೂ ಬಳಸಬಹುದು. ಸ್ನೇಹಿತರಿಗೆ ಗಿಫ್ಟ್ ಕೊಡಬಹುದು.


SHARE

Author: verified_user

0 ಪ್ರತಿಕ್ರಿಯೆಗಳು: