ದೇಶದಲ್ಲಿ ಬಹುತೇಕರು ಚಾರ್ಟೆಡ್ ಅಕೌಂಟೆಂಟ್(ಸಿಎ) ಮಾಡುತ್ತಿದ್ದಾರೆ. ಭಾರತೀಯ ಸಿಎಗೆ ಪರ್ಯಾಯವಾಗಿ ಜಾಗತಿಕ ಮಟ್ಟದಲ್ಲಿ ಹೆಚ್ಚು ಮನ್ನಣೆ ಪಡೆದಿರುವ ಎಸಿಸಿಎಯನ್ನೂ ಮಾಡಿದರೆ ಇನ್ನಷ್ಟು ಉತ್ತಮ ಉದ್ಯೋಗಾವಕಾಶ ಪಡೆಯಬಹುದು ಎನ್ನುತ್ತಾರೆ ತಜ್ಞರು. ಎಸಿಸಿಎ ಕುರಿತು ಸಂಪೂರ್ಣ ಮಾಹಿತಿ ಇಲ್ಲಿದೆ.
* ಪ್ರವೀಣ್ ಚಂದ್ರ ಪುತ್ತೂರು
ಚಾರ್ಟೆಡ್ ಅಕೌಂಟೆಂಟ್, ಫೈನಾನ್ಶಿಯಲ್ ಅಕೌಂಟೆಂಟ್, ಅಡಿಟರ್, ಮ್ಯಾನೆಜ್‍ಮೆಂಟ್ ಕನ್ಸಲ್ಟೆಂಟ್ ಸೇರಿದಂತೆ ವಿವಿಧ ಹುದ್ದೆಗಳನ್ನು ಪಡೆಯಲು ಹೆಚ್ಚಿನವರು `ದಿ ಇನ್‍ಸ್ಟಿಟ್ಯೂಟ್ ಆಫ್ ಚಾರ್ಟೆಡ್ ಅಕೌಂಟೆಂಟ್ಸ್ ಆಫ್ ಇಂಡಿಯಾ' (ಡಿಡಿಡಿ.ಜ್ಚಿZಜಿ.ಟ್ಟಜ) ನೀಡುವ `ಸಿಎ' ಅಥವಾ `ಚಾರ್ಟೆಡ್ ಅಕೌಂಟೆಂಟ್' ಕೋರ್ಸ್ ಮಾಡುತ್ತಾರೆ. ಸಿಎಗೆ ಪರ್ಯಾಯವಾಗಿ ಯಾವ ಕೋರ್ಸ್ ಮಾಡಬಹುದು? ಎಂಬ ಪ್ರಶ್ನೆ ಎದುರಾದರೆ ನಮ್ಮ ಗಮನ ಸೆಳೆಯುವುದು `ದಿ ಅಸೋಸಿಯೇಷನ್ ಆಫ್ ಚಾರ್ಟೆಡ್ ಸರ್ಟಿಫೈಡ್ ಅಕೌಂಟೆಂಟ್ಸ್(ಎಸಿಸಿಎ)'. ಈ ಕುರಿತು ಒಂದು ವಿಶ್ಲೇಷಣೆ ಇಲ್ಲಿದೆ.
ಜಾಗತಿಕವಾಗಿ ಫೇಮಸ್ಸು
ಖಂಡಿತವಾಗಿಯೂ ಭಾರತದ ಸಿಎ ಜಾಗತಿಕ ಗುಣಮಟ್ಟ ಹೊಂದಲು ಪ್ರಯತ್ನಿಸುತ್ತಿದೆ. ಇತ್ತೀಚೆಗೆ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ತನ್ನ ಸಿಲೇಬಸ್ ಅನ್ನು ಬದಲಾಯಿಸುವ ಇಂಗಿತವನ್ನೂ ಭಾರತದ ಚಾರ್ಟೆಡ್ ಅಕೌಂಟೆಂಟ್ಸ್ ಸಂಸ್ಥೆಯು ವ್ಯಕ್ತಪಡಿಸಿದೆ. ಈಗಾಗಲೇ ಜಾಗತಿಕ ಗುಣಮಟ್ಟಕ್ಕೆ ತಕ್ಕಂತೆ ಅಪ್‍ಡೇಟ್ ಆಗಿರುವ ಎಸಿಸಿಎ ಹೆಚ್ಚು ಫೇಮಸ್ ಎನ್ನುವುದು ಕೆಲವು ಶಿಕ್ಷಣ ಪರಿಣತರ ಅಭಿಪ್ರಾಯ. ಎಸಿಸಿಎಯು ಜಗತ್ತಿನ 181 ದೇಶಗಳಲ್ಲಿ ಸುಮಾರು 1,88,000 ಸದಸ್ಯರನ್ನು ಮತ್ತು 4,80,000 ವಿದ್ಯಾರ್ಥಿಗಳನ್ನು ಹೊಂದಿದೆ. ಭಾರತ ಸೇರಿದಂತೆ ಜಗತ್ತಿನಾದ್ಯಂತ 91ಕ್ಕೂ ಹೆಚ್ಚು ಕೇಂದ್ರಗಳನ್ನು ಹೊಂದಿದೆ. ಎಸಿಸಿಎಯು ಇಂಗ್ಲೆಂಡ್‍ನ ಜಿಎಎಪಿ, ಲಾ, ಐಎಫ್‍ಆರ್‍ಎಸ್‍ನ ಹೆಚ್ಚುವರಿ ಮಾಹಿತಿಯನ್ನು ಒದಗಿಸುತ್ತದೆ. ಇದು ಬಹು ರಾಷ್ಟ್ರೀಯ ಕಂಪನಿಯಲ್ಲಿ ಕೆಲಸ ಮಾಡುವವರಿಗೆ ಹೆಚ್ಚುವರಿ ಜ್ಞಾನವನ್ನು ಒದಗಿಸಿದಂತಾಗುತ್ತದೆ.
ಯಾರು ಅರ್ಜಿ ಸಲ್ಲಿಸಬಹುದು?
* ಎಸಿಸಿಎಗೆ ಸೇರಲು ಯಾವುದೇ ಔಪಚಾರಿಕ ವಿದ್ಯಾರ್ಹತೆಯ ಅವಶ್ಯಕತೆ ಇರುವುದಿಲ್ಲ. ಆಸಕ್ತರು ನೇರವಾಗಿ ಫೌಂಡೇಷನ್ ಲೆವೆಲ್‍ಗೆ ಸೇರಬಹುದು.. ಅಕೌಂಟೆನ್ಸಿಗೆ ಹೊಸದಾಗಿ ಸೇರಬಯಸುವ ವಿದ್ಯಾರ್ಥಿಗಳು, ಯಾವುದೇ ಅಕೌಂಟೆನ್ಸಿ ವಿದ್ಯಾರ್ಹತೆ ಇಲ್ಲದೆ ಇದ್ದರೂ ಫೈನಾನ್ಸ್ ವಿಭಾಗದಲ್ಲಿ ಕೆಲಸ ಮಾಡುತ್ತಿರುವವರು, ಈಗಾಗಲೇ ಡಿಪೆÇ್ಲಮಾ ಅಥವಾ ಬೇರೆ ಸರ್ಟಿಫಿಕೇಟ್ ಕೋರ್ಸ್ ಪಡೆಯುತ್ತಿರುವಾಗಲೇ ಎಸಿಸಿಎ ಶಿಕ್ಷಣವನ್ನು ಪಡೆಯಬಹುದಾಗಿದೆ.
* ಪದವಿ/ಸ್ನಾತಕೋತ್ತರ ಪದವಿ ಅಥವಾ ಇತರ ಶೈಕ್ಷಣಿಕ ಅರ್ಹತೆ ಇರುವ ಅಭ್ಯರ್ಥಿಗಳು ಎಸಿಸಿಎ ಸದಸ್ಯರಾಗಬಹುದು. ಭಾರತೀಯ ಸಿಎಯಲ್ಲಿ ಕೆಲವು ಪೇಪರ್‍ಗಳನ್ನು ಬರೆದು ಪೂರ್ಣಗೊಳಿಸಿದವರಿಗೆ ಎಸಿಸಿಎಯಲ್ಲಿ ಕೆಲವು ಪೇಪರ್‍ಗಳನ್ನು ಬರೆಯುವುದರಿಂದ ವಿನಾಯಿತಿಯನ್ನೂ ನೀಡಲಾಗುತ್ತದೆ. ಅಂದರೆ, ಭಾರತೀಯ ಸಿಎಯಲ್ಲಿ ಕೆಲವು ಪೇಪರ್ ಪೂರ್ಣಗೊಳಿಸಿದವರು ನೇರವಾಗಿ ಎಸಿಸಿಎಯ ಪೆÇ್ರಫೆಷನಲ್ ಲೆವೆಲ್‍ಗೆ ಸೇರಬಹುದು. ಈ ಕುರಿತು ಪೂರ್ಣ ಮಾಹಿತಿಯನ್ನು ಎಸಿಸಿಎ ವೆಬ್‍ಸೈಟ್‍ನಿಂದ ಪಡೆದುಕೊಳ್ಳಬಹುದು.
ಯಾವಾಗ ಪರೀಕ್ಷೆ ನಡೆಯುತ್ತದೆ?
ಎಸಿಸಿಎ ಶಿಕ್ಷಣವು ಒಟ್ಟು 14 ಪೇಪರ್‍ಗಳನ್ನು ಹೊಂದಿದ್ದು, ವಿದ್ಯಾರ್ಥಿಗಳು ವರ್ಷಕ್ಕೆ ಎರಡು ಬಾರಿ ಪರೀಕ್ಷೆ ಬರೆಯಬಹುದು. ಪ್ರತಿ ಅವಧಿಯಲ್ಲಿಯೂ 4 ಎಗ್ಸಾಂವರೆಗೆ ಪರೀಕ್ಷೆ ತೆಗೆದುಕೊಳ್ಳುವ ಅವಕಾಶವಿದೆ. ಈ ರೀತಿ ಮಾಡಿದರೆ ಕನಿಷ್ಠ 2 ವರ್ಷದಲ್ಲಿಯೇ ಎಸಿಸಿಎ ಕೋರ್ಸ್ ಪೂರ್ಣಗೊಳಿಸಬಹುದು. ಭಾರತೀಯ ಸಿಎ ಮಾಡಿದವರಿಗೆ ಕೆಲವು ಪೇಪರ್‍ಗಳ ವಿನಾಯಿತಿಯೂ ಲಭ್ಯ ಇರುವುದರಿಂದ ಇದಕ್ಕಿಂತಲೂ ಕಡಿಮೆ ಅವಧಿಯಲ್ಲಿಯೂ ಕೋರ್ಸ್ ಪೂರ್ಣಗೊಳಿಸಬಹುದು. ಎಸಿಸಿಎ ಮೆಂಬರ್‍ಷಿಪ್ ಪಡೆಯಲು ವಿದ್ಯಾರ್ಥಿಗಳಿಗೆ 3 ವರ್ಷ ಅಥವಾ 36 ತಿಂಗಳ ಪ್ರಾಕ್ಟಿಕಲ್ ವರ್ಕ್ ಅನುಭವ ಇರಬೇಕು. ಈ ಕೆಲಸದ ಅನುಭವವನ್ನು ಎಸಿಸಿಎಗೆ ಸೇರುವ ಮುನ್ನ ಅಥವಾ ಎಸಿಸಿಎ ಅಧ್ಯಯನ ಸಮಯದಲ್ಲಿ ಅಥವಾ ಅಧ್ಯಯನ ಪೂರ್ಣಗೊಳಿಸಿದ ನಂತರವೂ ಪಡೆಯಬಹುದು.
ಪರೀಕ್ಷೆ ಯಾವಾಗ ನಡೆಯುತ್ತದೆ
ವರ್ಷಕ್ಕೆ ಎರಡು ಬಾರಿ ಎಸಿಸಿಎ ಪರೀಕ್ಷೆ ನಡೆಸಲಾಗುತ್ತದೆ. ಜೂನ್ ಮತ್ತು ಡಿಸೆಂಬರ್ ಅವಧಿಯ ಪರೀಕ್ಷೆಯನ್ನು `ಅರ್ಲಿ', `ಸ್ಟಾಂಡರ್ಡ್' ಮತ್ತು `ಲೇಟ್' ಎಂಬ ಮೂರು ಸಮಯಗಳಲ್ಲಿ ಬರೆಯಲು ಅವಕಾಶವಿದೆ. ಅರ್ಲಿ(ಬೇಗ) ಎಗ್ಸಾಂ ಮಾರ್ಚ್ 8 ಮತ್ತು ಸೆಪ್ಟೆಂಬರ್ 8ರಂದು ನಡೆಯುತ್ತದೆ. ಈ ಎಗ್ಸಾಂ ಅನ್ನು ಆನ್‍ಲೈನ್‍ನಲ್ಲಿ ಮಾತ್ರ ಬರೆಯಲು ಅವಕಾಶವಿದೆ. ಸ್ಟಾಂಡರ್ಡ್ ಎಗ್ಸಾಂ ಮಾರ್ಚ್ 9-ಏಪ್ರಿಲ್ 8ರಂದು ಮತ್ತು ಸೆಪ್ಟೆಂಬರ್ 9 -ಅಕ್ಟೋಬರ್ 8ರಂದು ನಡೆಯುತ್ತದೆ. ಈ ಎಗ್ಸಾಂ ಅನ್ನು ಆನ್‍ಲೈನ್ ಅಥವಾ ಪೇಪರ್ ಮೂಲಕ ಬರೆಯಲು ಅವಕಾಶ ನೀಡಲಾಗುತ್ತದೆ. ಲೇಟ್ ಎಗ್ಸಾಂ 9 ಏಪ್ರಿಲ್-ಮೇ 8ರಂದು ಮತ್ತು ಅಕ್ಟೋಬರ್ 9-ನವೆಂಬರ್ 8ರಂದು ಬರೆಯಲು ಅವಕಾಶವಿದೆ. ಈ ಪರೀಕ್ಷೆಯನ್ನು ಆನ್‍ಲೈನ್ ಮೂಲಕ ಮಾತ್ರ ನಡೆಸಲಾಗುತ್ತದೆ.
ಫೀಸ್ ಎಷ್ಟು?
ಎಸಿಸಿಎ ಪರೀಕ್ಷೆಗೆ ದಾಖಲಾತಿ ಮತ್ತು ಚಂದಾದಾರಿಕೆ (ಸಬ್‍ಸ್ಕ್ರಿಪ್ಷನ್) ಶುಲ್ಕ ಇಂತಿದೆ. ಆರಂಭಿಕ ದಾಖಲಾತಿಗೆ 79 ಪೌಂಡ್. ಅಂದರೆ, ಸುಮಾರು 6,690 ರೂಪಾಯಿ ಆಗಿದೆ. ಮರು ದಾಖಲಾತಿಗೂ ಇಷ್ಟೇ ಶುಲ್ಕ ವಿಧಿಸಲಾಗುತ್ತದೆ. ವಾರ್ಷಿಕ ಸಬ್‍ಸ್ಕ್ರಿಪ್ಷನ್‍ಗೆ 85 ಪೌಂಡ್ ಅಂದರೆ, ಸುಮಾರು 8 ಸಾವಿರ ರೂಪಾಯಿ. ವಿನಾಯಿತಿ(ಎಗ್ಸೆಂಪ್ಷನ್ ಫೀ) ಶುಲ್ಕ: ಜ್ಞಾನದ ಪರೀಕ್ಷೆಗೆ 72 ಪೌಂಡ್(6,097 ರೂ.) ಮತ್ತು ಕೌಶಲ ಪರೀಕ್ಷೆಗೆ 97 ಪೌಂಡ್(8,214) ರೂಪಾಯಿ. ಪರೀಕ್ಷಾ ಪ್ರವೇಶ ಶುಲ್ಕವನ್ನು ಪ್ರತಿವರ್ಷ ಪಾವತಿಸಬೇಕು. ಇಲ್ಲಿ ಒಂದು ಪೌಂಡ್‍ಗೆ 84.68 ರೂಪಾಯಿ ಎಂದು ಲೆಕ್ಕಹಾಕಲಾಗಿದೆ.

ಸಿಎ ಬೆಸ್ಟಾ? ಎಸಿಸಿಎ ಬೆಸ್ಟಾ?
ಈ ಪ್ರಶ್ನೆಗೆ ಇದಮಿತ್ತಂ ಉತ್ತರ ಕಷ್ಟ. ಈಗಾಗಲೇ ಹೇಳಿದಂತೆ ಭಾರತದ ಸಿಎ ಪೂರ್ಣಗೊಳಿಸಲು 5 ವರ್ಷ ಬೇಕು. ನಿಮಗೆ 6 ತಿಂಗಳಿಗೆ ನಾಲ್ಕು ಪೇಪರ್ ಬರೆಯುವ ಸಾಮಥ್ರ್ಯ ಇದ್ದರೆ ಎಸಿಸಿಎ ಪೂರ್ಣಗೊಳಿಸಲು 2 ವರ್ಷ ಸಾಕು. ಎಸಿಸಿಎ ಎಗ್ಸಾಂ ಜೂನ್ ಮತ್ತು ಡಿಸೆಂಬರ್‍ನಲ್ಲಿ ನಡೆಯುತ್ತದೆ. ಸಿಎ ಪರೀಕ್ಷೆಯು ಜನವರಿ, ಫೆಬ್ರವರಿ, ಏಪ್ರಿಲ್, ಮೇ, ಜುಲೈ, ಆಗಸ್ಟ್, ಅಕ್ಟೋಬರ್, ನವೆಂಬರ್‍ನಲ್ಲಿ ನಡೆಯುತ್ತದೆ.
ಭಾರತದ ಸಿಎ ಶಿಕ್ಷಣದಂತೆ ಇಂಗ್ಲೆಂಡ್‍ನ ಎಸಿಸಿಎ ಇದೆ. ಭಾರತದ ಸಿಎಗಿಂತ ಎಸಿಸಿಎ ಕಲಿಕೆಯು ಹೆಚ್ಚುವರಿಯಾಗಿ ಇಂಗ್ಲೆಂಡ್ ಜಿಎಎಪಿ(ಇಂಗ್ಲೆಂಡ್‍ನ ಅಕೌಂಟಿಂಗ್ ಪ್ರಾಕ್ಟೀಸ್ ಜ್ಞಾನ), ಕಾನೂನು ಮತ್ತು ಅಂತಾರಾಷ್ಟ್ರೀಯ ಹಣಕಾಸು ರಿಪೆÇೀರ್ಟಿಂಗ್ ಸ್ಟಾಂಡರ್ಡ್(ಐಎಫ್‍ಆರ್‍ಎಸ್) ಜ್ಞಾನವನ್ನು ನೀಡುತ್ತದೆ. ಇದರಿಂದ ನಿಮಗೆ ಬಹುರಾಷ್ಟ್ರೀಯ ಕಂಪನಿಗಳಲ್ಲಿ ಅಥವಾ ವಿದೇಶಗಳಲ್ಲಿ ಕಾರ್ಯ ನಿರ್ವಹಿಸುವ ಭಾರತೀಯ ಕಂಪನಿಗಳಲ್ಲಿ ಕಾರ್ಯನಿರ್ವಹಿಸಲು ಅನುಕೂಲವುಂಟು ಮಾಡುತ್ತದೆ. ಎಸಿಸಿಎ ಸರ್ಟಿಫಿಕೇಟ್ ಜೊತೆ ಎಂಬಿಎ ಪದವಿಯನ್ನು ಪಡೆದರೆ ಹೆಚ್ಚು ಉದ್ಯೋಗಾವಕಾಶ ದೊರಕುತ್ತದೆ.
ಎಸಿಸಿಎಯ ಶಿಕ್ಷಣ ಗುಣಮಟ್ಟವು ಜಗತ್ತಿನಾದ್ಯಂತ ಇರುವ ಉದ್ಯೋಗದಾತರ ಅವಶ್ಯಕತೆಗೆ ತಕ್ಕಂತೆ ಇದೆ. ಭಾರತದ ಸಿಎಯು ಶೀಘ್ರದಲ್ಲಿ ಅಂತಾರಾಷ್ಟ್ರೀಯ ಗುಣಮಟ್ಟಕ್ಕೆ ತಕ್ಕಂತೆ ತನ್ನ ಪಠ್ಯಕ್ರಮವನ್ನು ಬದಲಾಯಿಸಿಕೊಳ್ಳಲು ಉದ್ದೇಶಿಸಿದೆ.
ಭಾರತೀಯ ಸಿಎ ಮಾಡುತ್ತಿರುವಾಗ ಬೇರೆ ಕೋರ್ಸ್ ಮಾಡುವುದು ಬಹಳಷ್ಟು ಕಷ್ಟಕಾರಿ ಎನ್ನುತ್ತಾರೆ ಬಹುತೇಕ ಸಿಎ ವಿದ್ಯಾರ್ಥಿಗಳು. ಆದರೆ, ಬೇರೆ ಕೋರ್ಸ್ ಮಾಡುತ್ತಿರುವಾಗಲೇ ಎಸಿಸಿಎ ಕ್ವಾಲಿಫಿಕೇಷನ್ ಪಡೆಯಬಹುದಾಗಿದೆ. ಭಾರತೀಯ ಸಿಎಗಿಂತ ಹೆಚ್ಚಿನ ಪ್ರಮಾಣದಲ್ಲಿ ಎಸಿಸಿಎಗೆ ಸಂಬಂಧಪಟ್ಟ ಆನ್‍ಲೈನ್ ತರಬೇತಿಗಳು ಲಭ್ಯ ಇವೆ.
Good information
ReplyDelete