ನನಗೊಂದು ಕನಸಿತ್ತು. ನನ್ನ ವೈಯಕ್ತಿಕ ಹೆಸರಿನಲ್ಲೊಂದು ವೆಬ್ ಸೈಟ್ ಇರಬೇಕು. ಕೆಲವು ವರ್ಷಗಳ ಹಿಂದೆ ಪ್ರವೀಣ್ ಚಂದ್ರ ಡಾಟ್ ಕಾಮ್ ಎಂದು ಡೊಮೈನ್ ಖರೀದಿಸಿದ್ದೆ. ವೆಬ್ ಬಿಲ್ಡರ್ ಅನ್ನೂ ಖರೀದಿಸಿದ್ದೆ. ತಾತ್ಕಾಲಿಕ ಅವಧಿಯ ಹೋಸ್ಟಿಂಗ್ ಅನ್ನೂ ಖರೀದಿಸಿದ್ದೆ. ಅಲ್ಲಿ ಬ್ಲಾಗಿಂಗ್ ರೀತಿಯ ವೆಬ್ ಸೈಟ್ ರೂಪಿಸಲು ಪ್ರಯತ್ನಿಸದರೆ ನನ್ನಿಂದ ಸಾಧ್ಯವಾಗಲೇ ಇಲ್ಲ. ಸರಕಾರಿ ವೆಬ್ ಸೈಟ್ ಗಳಂತೆ ಮುಖ ಪುಟ ರಚಿಸಿ ಲಿಂಕ್ ನೀಡುವುದು ಮಾತ್ರ ನನ್ನಿಂದ ಸಾಧ್ಯವಾಯಿತು.
ಒಂದೆರಡು ತಿಂಗಳು ಕಷ್ಟಪಟ್ಟು ಆ ಆಸೆಯನ್ನು ಅಲ್ಲಿಗೇ ಕೈ ಬಿಟ್ಟೆ. ಖರ್ಚಾದ ಕೆಲವು ಸಾವಿರ ನನ್ನನ್ನು ಅಣಕಿಸುತ್ತಿತ್ತು.
ಆದರೂ ವರ್ಷಕ್ಕೆ ಒಂದೆರಡು ಸಾವಿರ ವಿನಿಯೋಗಿಸಿ ವೆಬ್ ನಿರ್ಮಿಸಬಹುದೆಂಬ ಇತ್ತೀಚಿನ ಸಾಧ್ಯತೆ ನನ್ನನ್ನು ಸುಮ್ಮನಿರಲು ಬಿಡಲಿಲ್ಲ. ಏನಾದರೂ ಆಗಲಿ, ಸ್ವಂತ ವೆಬ್ ಸೈಟ್ ನಿರ್ಮಿಸಬೇಕೆಂದು ಎಚ್ಟಿಎಂಎಲ್, ಸಿಎಸ್ಎಸ್ ಇತ್ಯಾದಿ ಪುಸ್ತಕಗಳನ್ನು ಓದಿದೆ. ಆನ್ ಲೈನ್ ನಲ್ಲಿ ಪಿಡಿಎಫ್ಗಳನ್ನು ಡೌನ್ ಲೋಡ್ ಮಾಡಿಕೊಂಡೆ. ಜಿಯೊ ಬಂದ ಮೇಲೆ ವಿಡಿಯೋ ಟ್ಯಟೋರಿಯಲ್ ಗಳಿಗೂ ಸೇರಿದೆ. ಕೋಡಿಂಗ್ ಆರಂಭ ಅಂತ್ಯ ನೀಡುವುದನ್ನು ಕಂಡುಕೊಂಡೆ. ಆದರೂ, ಕೆಲಸದ ಒತ್ತಡಗಳಿಂದ ಪೂರ್ಣವಾಗಿ ಕಲಿಯಲು ಸಾಧ್ಯವಾಗಲಿಲ್ಲ. ಕೋಡಿಂಗ್ ಬರೆಯುವಾಗ ತಾಳ್ಮೆಯೂ ಕೈಕೊಡುತ್ತಿತ್ತು.
ಆದರೂ, ನನ್ನಲ್ಲೊಂದು ಸ್ವಂತ ವೆಬ್ ಸೈಟ್ ಇರಬೇಕಿತ್ತು ಹೀಗೊಂದು ಕನಸು ನನಗಿತ್ತು. ಆದರೆ, ವೆಬ್ ಸೈಟ್ ನಿರ್ಮಿಸುವವರಿಗೆ ಹತ್ತು ಸಾವಿರವಾದರೂ ಕೊಡುವ ಆಸಕ್ತಿ ನನ್ನಲ್ಲಿರಲಿಲ್ಲ. ಆ ವಿಷಯದಲ್ಲಿ ನನ್ನಲೊಬ್ಬ ಕಂಜೂಸ್ ಇದ್ದ. :-)
ರೆಸ್ಪಾನ್ಸಿವ್ ವೆಬ್ ಸೈಟ್ ನಿರ್ಮಿಸುವ ವಿಷಯದಲ್ಲಿ ಈಗ ನೆಟ್ ಜಗತ್ತಿನಲ್ಲಿ ಕ್ರಾಂತಿಯೇ ನಡೆಯುತ್ತಿದೆ ಎಂದುಕೊಂಡಿದ್ದೇನೆ. ಈಗ ಕೋಡಿಂಗ್ ಜ್ಞಾನ ಇಲ್ಲದವರೂ ತಮ್ಮದೊಂದು ಸ್ವಂತ ವೆಬ್ ತಾಣ ರೂಪಿಸಿಕೊಳ್ಳಬಹುದಾಗಿದೆ. ಅದರ ಪ್ರತಿಫಲವೇ http://praveenputtur.com
ವರ್ಡ್ ಪ್ರೆಸ್ ಮೂಲಕ ವೆಬ್ ಸೈಟ್ ರೂಪಿಸುವವರಿಗೆ ಸಾಕಷ್ಟು ಥೀಮ್ಸ್ ಮತ್ತು ಪ್ಲಗಿನ್ ಗಳು ಉಚಿತವಾಗಿ ದೊರಕುತ್ತವೆ.
ವರ್ಡ್ ಪ್ರೆಸ್ ನಲ್ಲಿ ಬ್ಲಾಗ್ ಹೊಂದಿದ್ದರೆ ಸ್ವಂತ ವೆಬ್ ಸೈಟ್ ರೂಪಿಸಿಕೊಳ್ಳುವುದು ಇನ್ನೂ ಸುಲಭ.
ನಿಮ್ಮ ಈಗಿರುವ ಬ್ಲಾಗ್ ಅನ್ನೇ ಅಪ್ ಗ್ರೇಡ್ ಮಾಡಿದರಾಯ್ತು. ಇದಕ್ಕೆ ವರ್ಡ್ ಪ್ರೆಸ್ ಕೆಲವು ಡಾಲರ್ ಕೇಳುತ್ತದೆ. ಇದನ್ನು ಖರೀದಿಸಲು ನಿಮ್ಮಲ್ಲಿ ಅಂತಾರಾಷ್ಟ್ರೀಯವಾಗಿ ವರ್ಕ್ ಆಗುವ ಡೆಬಿಟ್ ಕಾರ್ಡ್ ಇರಬೇಕು. ನನ್ನ ಕಾರ್ಡ್ ದೇಶಕ್ಕೆ ಸೀಮಿತವಾಗಿರುವ ಕಾರಣ ನನ್ನ ಆ ಪ್ರಯತ್ನ ವಿಫಲವಾಗಿತ್ತು. ಆದರೆ, ಈ ರೀತಿ ಅಪ್ ಗ್ರೇಡ್ ಮಾಡಿ ಬೇಸಿಕ್ ಪ್ಲಾನ್ ಖರೀದಿಸಿದರೆ ಸೌಲಭ್ಯಗಳು ಸೀಮಿತವಾಗಿರುತ್ತವೆ. ನಿಮಗೆ ಬೇಕಾದಂತೆ ವಿನ್ಯಾಸ ಮಾಡಿಕೊಳ್ಳುವುದು ಕಷ್ಟ. ಹೈ ಎಂಡ್ ಪ್ಲಾನ್ ಗೆ ಹೆಚ್ಚು ಡಾಲರ್ ಪಾವತಿಸಬೇಕು. ಹೀಗಾಗಿ ಈ ರೀತಿ ಅಪ್ ಗ್ರೇಡ್ ಮಾಡುವುದಕ್ಕೆ ನನ್ನ ಬೆಂಬಲವಿಲ್ಲ. ಸೀಮಿತ ಸೌಲಭ್ಯ ಸಾಕೆನಿಸಿದರೆ ಅಪ್ ಗ್ರೇಡ್ ಮಾಡಿಕೊಳ್ಳಿ J
ಸ್ವಂತವಾಗಿ ರೂಪಿಸಿ: ನಾನು ಮಾಡಿದಿಷ್ಟು. ಮೊದಲು ಡಿಜಿಕ್ಸ್ ಆನ್ ಲೈನ್ ಎಂಬ ತಾಣದಲ್ಲಿ ಡೊಮೈನ್ ಖರೀದಿಸಿದೆ. ಒಂದು ವರ್ಷದ ಹೋಸ್ಟಿಂಗ್ ಖರೀದಿಸಿದೆ. ಇವೆರಡಕ್ಕೆ ನನಗೆ ಖರ್ಚಾಗಿದ್ದು ಸುಮಾರು ಎರಡು ಮುಕ್ಕಾಲು ಸಾವಿರ. ಒನ್ ಕ್ಲಿಕ್ ವರ್ಡ್ ಪ್ರೆಸ್ ಇನ್ ಸ್ಟಾಲ್ ಸೌಲಭ್ಯ ಇರುವ ತಾಣದಿಂದಲೇ ಹೋಸ್ಟಿಂಗ್ ಖರೀದಿಸಿ. ಡಿಜಿಕ್ಸ್ ಆನ್ ಲೈನ್ ನಲ್ಲಿ ಖರೀದಿಸಿದ್ದರಿಂದ ನನಗೆ ಒಂದು ವಿಶೇಷ ಲಾಭವಾಯಿತು.
ಈ ತಾಣದ ಹನೀಫ್ ಪುತ್ತೂರು ಎಂಬ ಎಂಬವರ ಪರಿಚಯ. ಇವರು ಅಬುದಾಬಿಯ ಖಲೀಫಾ ವಿವಿಯ ಮಾಹಿತಿ ತಂತ್ರಜ್ಞಾನ ವಿಭಾಗದಲ್ಲಿ ಪ್ರೋಗ್ರಾಮರ್ ಅನಾಲಿಸ್ಟ್. ವೆಬ್ ಜಗತ್ತಿಗೆ ತನ್ನದೇ ಆದ ಹಲವು ಕೊಡುಗೆಗಳನ್ನು ನೀಡಿದ್ದಾರೆ. ಅವರಿಂದ ಸಾಕಷ್ಟು ಮಾಹಿತಿಗಳನ್ನು ಪಡೆದುಕೊಂಡು ವೆಬ್ ಸೈಟ್ ನಿರ್ಮಿಸಿದೆ. ವೆಬ್ ಸೈಟ್ ನಿರ್ಮಿಸುವವರಿಗೆ ಇಂಟರ್ನೆಟ್ ಇಲ್ಲದೆಯೇ ವರ್ಡ್ ಪ್ರೆಸ್ ಕಲಿಸುವ ಟೂಲ್ ಒಂದನ್ನು ಇವರು ನಿರ್ಮಿಸಿದ್ದಾರೆ. ಇದರ ಬಗ್ಗೆ ಮುಂದೆ ಹೇಳುತ್ತೇನೆ.
ಹೋಸ್ಟಿಂಗ್, ಡೊಮೈನ್ ಖರೀದಿಸಿ ಒನ್ ಕ್ಲಿಕ್ ವರ್ಡ್ ಪ್ರೆಸ್ ಇನ್ ಸ್ಟಾಲ್ ಮಾಡಿದ ಬಳಿಕ ನಿಮಗೆ ವರ್ಡ್ ಪ್ರೆಸ್ ಬ್ಲಾಗ್ ತರಹದ್ದೇ ಲಾಗಿನ್ ವ್ಯವಸ್ಥೆ ದೊರಕುತ್ತದೆ. ಅಲ್ಲಿ ಯೂಸರ್ ನೇಮ್ ಮತ್ತು ಪಾಸ್ ವರ್ಡ್ ಕೊಟ್ಟು ಲಾಗಿನ್ ಆದರೆ ಆಯ್ತು.
ಅಲ್ಲಿ ನಿಮಗೆ ಇಷ್ಟವಾದ ಥೀಮ್ ಮತ್ತು ಪ್ಲಗಿನ್ ಜೋಡಿಸಿಕೊಂಡು ಸ್ವಂತ ವೆಬ್ ಸೈಟ್ ರಚಿಸಿಕೊಳ್ಳಬಹುದು.
ವರ್ಡ್ ಪ್ರೆಸ್ ನಲ್ಲಿ ವೆಬ್ ಸೈಟ್ ರಚನೆ
ಈ ಎಚ್ಚರಿಕೆಗಳನ್ನು ಗಮನಿಸಿ
ಡೊಮೈನ್ ಅಥವಾ ಹೋಸ್ಟಿಂಗ್ ಖರೀದಿಸದೆ ಲೋಕಲ್ ಹೋಸ್ಟ್ ನಲ್ಲಿ ವೆಬ್ ಸೈಟ್ ನಿರ್ಮಾಣ ಕಲಿಯುವುದು ಹೇಗೆ?
ಸ್ನೇಹಿತರಾದ ಹನೀಫ್ ಪುತ್ತೂರು ಅವರು ಗಿತ್ ಹಬ್ ತಾಣದಲ್ಲಿ ಇದಕ್ಕೊಂದು ಉಚಿತ ಟೂಲ್ ನೀಡಿದ್ದಾರೆ. ಅದರ ಹೆಸರು ಪೋರ್ಟೆಬಲ್ ವರ್ಡ್ ಪ್ರೆಸ್. ಇದನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಇದನ್ನು ನೀವು ಪೆನ್ ಡ್ರೈವ್ ನಲ್ಲಿಯೂ ಇಟ್ಟುಕೊಳ್ಳಬಹುದು. ಇಂಟರ್ ನೆಟ್ ಇಲ್ಲದೆ ಬಳಕೆ ಮಾಡಬಹುದು. ಇದರಲ್ಲಿ ನೀವು ಸಾಕಷ್ಟು ಪ್ರಯೋಗ ಮಾಡಿ, ಸುಂದರವಾದ ವೆಬ್ ಸೈಟ್ ನಿರ್ಮಿಸಿದ ಬಳಿಕ ಹೋಸ್ಟಿಂಗ್ ಖರೀದಿಸಬಹುದು. ಹೋಸ್ಟಿಂಗ್ ಡೊಮೈನ್ ಖರೀದಿಸಿದ ಬಳಿಕ ನಿಮ್ಮ ವರ್ಡ್ ಪ್ರೆಸ್ ವೆಬ್ ಸೈಟ್ ಗೆ ಇದನ್ನು ಅಪ್ ಲೋಡ್ ಮಾಡಬಹುದು. ಹೀಗೆ ಮಾಡುವುದರಿಂದ ಹೋಸ್ಟಿಂಗ್ ಸರ್ವರ್ನಲ್ಲಿ ಪ್ರಯೋಗ ಮಾಡುತ್ತ ಎರರ್, ಕ್ರ್ಯಾಷ್ ಇತ್ಯಾದಿ ತೊಂದರೆಗೆ ಒಳಗಾಗುವ ಅಪಾಯ ಕಡಿಮೆ. ಪೋರ್ಟೆಬಲ್ ವರ್ಡ್ ಪ್ರೆಸ್ ಅನ್ನು ಉಚಿತವಾಗಿ ಬಳಸಬಹುದು. ಅದನ್ನು ಈ ಲಿಂಕ್ ನಿಂದ ಡೌನ್ ಲೋಡ್ ಮಾಡಿಕೊಳ್ಳಿ. ಈ ಲಿಂಕ್ ನಲ್ಲಿಯೇ ಅದನ್ನು ಬಳಕೆ ಮಾಡಬಹುದಾದ ಮಾರ್ಗದರ್ಶನಗಳು ಇವೆ.
ನಿಮಗೆ ಕೋಡಿಂಗ್ ಬಗ್ಗೆ ಉಚಿತವಾಗಿ ಕಲಿಯಬೇಕೆಂದದಿದ್ದರೆ ಆನ್ ಲೈನ್ ನಲ್ಲಿ ಹಲವು ತಾಣಗಳಿವೆ. ಅವುಗಳಲ್ಲಿ ಡಬ್ಲ್ಯು3 ಸ್ಕೂಲ್ ನನ್ನ ಫೇವರಿಟ್. ಅದರ ಲಿಂಕ್ ಇಲ್ಲಿದೆ.
ನಿಮ್ಮ ಸಲಹೆ ಸೂಚನೆ ಅಥವಾ ಪ್ರಶ್ನೆಗಳಿಗೆ ಸ್ವಾಗತ. ನನ್ನ ವೆಬ್ ಸೈಟ್ ಪ್ರಾಯೋಗಿಕ ಹಂತದಲ್ಲಿ ಇರುವುದರಿಂದ ಕೊಂಚ ಸ್ಲೋ ಅನಿಸಬಹುದು. ಸಹಿಸಿಕೊಳ್ಳಿ.
ನಿಮ್ಮ ವೆಬ್ ಸೈಟ್ ಸ್ಪೀಡ್ ಅನ್ನು ಗೂಗಲ್ ಡೆವಲಪರ್ ಇನ್ ಸೈಟ್ ನಲ್ಲಿ ಪರೀಕ್ಷಿಸಿಕೊಳ್ಳಿ.
ಪ್ರವೀಣ್ ಪುತ್ತೂರು.ಕಾಂ ಮುಖಪುಟಕ್ಕೆ ಹೋಗಲು ಇಲ್ಲಿ ಕ್ಲಿಕ್ಕಿಸಿ.

- ಆದಷ್ಟು ಹೆಚ್ಚು ಸ್ಟಾರ್ ರೇಟಿಂಗ್ ಇರುವ ಪ್ಲಗಿನ್ ಮತ್ತು ಥೀಮ್ ಪಡೆದುಕೊಳ್ಳಿ.
- ಅವಶ್ಯಕತೆ ಇರುವಷ್ಟು ಪ್ಲಗಿನ್ ಅಥವಾ ಥೀಮ್ ಡೌನ್ ಲೋಡ್ ಮಾಡಿಕೊಳ್ಳಿ.
- ಅನಾವಶ್ಯಕ ಪ್ಲಗಿನ್ ಅಥವಾ ಥೀಮ್ ಗಳನ್ನು ಡಿಲೀಟ್ ಮಾಡಿ.
- ಇಲ್ಲವಾದರೆ ನಿಮ್ಮವೆಬ್ ಸೈಟ್ ಸ್ಪೀಡ್ ಕಡಿಮೆಯಾಗುತ್ತದೆ.
ವರ್ಡ್ ಪ್ರೆಸ್ ನಲ್ಲಿ ವೆಬ್ ಸೈಟ್ ರಚನೆ
- ವರ್ಡ್ ಪ್ರೆಸ್ ಗೆ ಲಾಗಿನ್ ಆಗಿ
- ಡ್ಯಾಷ್ ಬೋರ್ಡ್ ನಲ್ಲಿರುವ ಫೀಚರ್ ಗಳನ್ನೆಲ್ಲ ಅವಲೋಕಿಸಿ
- ಥೀಮ್ ವಿಭಾಗಕ್ಕೆ ಹೋಗಿ. ನಿಮಗೆ ಇಷ್ಟವಾದ ಒಂದು ಥೀಮ್ ಆಯ್ಕೆ ಮಾಡಿಕೊಂಡು ಇನ್ ಸ್ಟಾಲ್ ಮಾಡಿ ಆ್ಯಕ್ಟಿವೇಟ್ ಮಾಡಿ.
- ಪೇಜಸ್ ವಿಭಾಗಕ್ಕೆ ಹೋಗಿ ಪುಟಗಳನ್ನು ರಚಿಸಿ. ಅಂದರೆ, ಮುಖಪುಟ, ಸಂಪರ್ಕಿಸಿ, ಬ್ಲಾಗ್ ಇತ್ಯಾದಿ.
- ಮೆನು ವಿಭಾಗಕ್ಕೆ ಹೋಗಿ ಮೆನುಗಳನ್ನು ರಚಿಸಿ. ಪುಟಗಳನ್ನು ಮೆನುಗಳಿಗೆ ಜೋಡಿಸಿ.
- ಆ್ಯಡ್ ಪೋಸ್ಟ್ ವಿಭಾಗಕ್ಕೆ ಹೋಗಿ ಹೊಸ ಬರಹಗಳನ್ನು ಪೋಸ್ಟ್ ಮಾಡಬಹುದು.
- ಮೊದಲಿಗೆ ನಿಮ್ಮ ವೆಬ್ ಸೈಟಿಗೆ ಹೆಸರು ಮತ್ತು ಟ್ಯಾಗ್ ಲೈನ್ ನೀಡಿ. ಇದಕ್ಕಾಗಿ ಜನರಲ್ ಸೆಟ್ಟಿಂಗ್ ವಿಭಾಗಕ್ಕೆ ಹೋಗಿ.
- ಹೀಗೆ ಅಲ್ಲಿರುವ ವಿವಿಧ ವಿಭಾಗಗಳಲ್ಲಿ ನಿಮಗೆ ಬೇಕಾದಂತೆ ಮಾರ್ಪಾಡು ಮಾಡಿ. ಗೊತ್ತಾಗದೆ ಇದ್ದರೆ ನನ್ನಲ್ಲಿ ಕೇಳಿ J
- ಬ್ಲಾಗ್ ಮಾಡಬಲ್ಲವರಿಗೆ ಇಲ್ಲಿ ಮಾಡಬೇಕಾದ ಪ್ರತಿಯೊಂದನ್ನು ಹೇಳಿಕೊಡಬೇಕಾದ ಅವಶ್ಯಕತೆ ಇಲ್ಲ. ಡ್ಯಾಷ್ ಬೋರ್ಡ್ ಪ್ರವೇಶಿಸಿ ಸೂಕ್ಷ್ಮವಾಗಿ ಅವಲೋಕಿಸಿ ಎಲ್ಲವನ್ನೂ ಕಲಿತುಕೊಳ್ಳಬಹುದು.
ಟಿಪ್ಪಣಿ
ಆರಂಭಿಕರಿಗೆ ಶೇರಿಂಗ್ ಹೋಸ್ಟಿಂಗ್ ಉತ್ತಮ. ಒಂದು ಸರ್ವರ್ ನಲ್ಲಿ ಹಲವು ವೆಬ್ ಸೈಟ್ ಗಳನ್ನು ಪಾರ್ಕ್ ಮಾಡಲಾಗಿರುತ್ತದೆ. ಇದರ ವೇಗ ಕೊಂಚ ಕಡಿಮೆ ಇರುತ್ತದೆ.
ಈ ಎಚ್ಚರಿಕೆಗಳನ್ನು ಗಮನಿಸಿ
- ಕೆಲವೊಂದು ಎರರ್ ಗಳು ಉಂಟಾದರೆ ಅದನ್ನು ಸರಿಪಡಿಸಲು ವೆಬ್ ಸೈಟ್ ತಂತ್ರಜ್ಞರೇ ಬೇಕು. ಇದಕ್ಕಾಗಿ ಪ್ರಯೋಗಗಳನ್ನು ಮಾಡುವಾಗ ಎಚ್ಚರವಿರಲಿ. ಹಲವು ಬಾರಿ ವೆಬ್ ಸೈಟ್ ಕ್ರಾಷ್ ಆಗಬಹುದು. ಇದನ್ನು ಸರಿಪಡಿಸಲು ಪರಿಣತರೇ ಬೇಕು.
- ಒಂದು ಲಾಗಿನ್ ಆದಾಗ ಒಂದು ಟ್ಯಾಬ್ ಮೂಲಕ ಮಾತ್ರ ಬಳಕೆ ಮಾಡುವುದು ಉತ್ತಮ. ಹಲವು ಟ್ಯಾಬ್ ಗಳಲ್ಲಿ ವೆಬ್ ಸೈಟ್ ಡ್ಯಾಷ್ ಬೋರ್ಡ್ ತೆರೆದಿಡುವುದು ಉತ್ತಮವಲ್ಲ.
ಡೊಮೈನ್ ಅಥವಾ ಹೋಸ್ಟಿಂಗ್ ಖರೀದಿಸದೆ ಲೋಕಲ್ ಹೋಸ್ಟ್ ನಲ್ಲಿ ವೆಬ್ ಸೈಟ್ ನಿರ್ಮಾಣ ಕಲಿಯುವುದು ಹೇಗೆ?
ಈ ರೀತಿ ಖರೀದಿಸಿ ಆಮೇಲೆ ಕಲಿಯುವುದಕ್ಕಿಂತ ಮೊದಲೇ ಕಲಿತು ಆಮೇಲೆ ಹೋಸ್ಟಿಂಗ್ ಡೊಮೈನ್ ಖರೀದಿಸುವುದು ಉತ್ತಮ.